ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರ್ವಿಮರ್ಶೆ
ಇಸವಿ 2007ರ ಆಗಸ್ಟ್ 27ರಿಂದ ಆರಂಭವಾಗುವ ವಾರದಲ್ಲಿನ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಈ ಕೆಳಗಿನ ಪ್ರಶ್ನೆಗಳನ್ನು ಪರಿಗಣಿಸಲಾಗುವುದು. 2007ರ ಜುಲೈ 2ರಿಂದ ಆಗಸ್ಟ್ 27ರ ತನಕದ ವಾರಗಳಿಗಾಗಿರುವ ನೇಮಕಗಳಲ್ಲಿ ಆವರಿಸಲ್ಪಟ್ಟ ವಿಷಯಭಾಗದ ಮೇಲಾಧಾರಿತವಾದ 30 ನಿಮಿಷಗಳ ಪುನರ್ವಿಮರ್ಶೆಯನ್ನು ಶಾಲಾ ಮೇಲ್ವಿಚಾರಕನು ನಡೆಸುವನು.
ಭಾಷಣ ಗುಣಗಳು
1. ನಮ್ಮ ಶುಶ್ರೂಷೆಯಲ್ಲಿ ಮತ್ತು ಸಭೆಯಲ್ಲಿ ನಾವು ಇತರರಿಗೆ ಹೇಗೆ ಗೌರವತೋರಿಸಸಾಧ್ಯವಿದೆ? [be-KA ಪು. 192 ಪ್ಯಾರ. 2-4]
2. ನಾವು ಮಾತಾಡುವಾಗ ನಮ್ಮ ನಿಶ್ಚಿತಾಭಿಪ್ರಾಯ ವ್ಯಕ್ತವಾಗಬೇಕಾದರೆ ಯಾವುದರ ಅಗತ್ಯವಿದೆ? [be-KA ಪು. 196 ಪ್ಯಾರ. 1-3]
3. ಸಾಕ್ಷಿನೀಡುವಾಗ ಸಮಯೋಚಿತ ಜಾಣ್ಮೆ ತೋರಿಸಲು ನಮಗೆ ಸಹಾಯಕವಾಗಿರುವ ಕೆಲವು ಸಲಹೆಗಳು ಯಾವುವು? [be-KA ಪು. 198 ಪ್ಯಾರ. 1-ಪು. 199 ಪ್ಯಾರ. 1]
4. ಸಮಯೋಚಿತ ಜಾಣ್ಮೆಯಲ್ಲಿ, ಇತರರಿಗೆ ಸಾಕ್ಷಿನೀಡಲು ಸೂಕ್ತ ಸಮಯವನ್ನು ನಿರ್ಧರಿಸುವುದು ಹೇಗೆ ಒಳಗೂಡಿದೆ? (ಜ್ಞಾನೋ. 25:11) [be-KA ಪು. 199 ಪ್ಯಾರ. 2-4]
5. ನಮ್ಮ ಭಾಷಣದ ವಾಕ್ಶೈಲಿಯನ್ನು ನಾವು ಹೇಗೆ ಸಕಾರಾತ್ಮಕವಾಗಿಡಬಲ್ಲೆವು? [be-KA ಪು. 203 ಪ್ಯಾರ. 3-ಪು. 204 ಪ್ಯಾರ. 1]
ನೇಮಕ ನಂ. 1
6. ಯೆಹೆಜ್ಕೇಲನ ಪುಸ್ತಕವನ್ನು ಯಾರು ಬರೆದರು ಮತ್ತು ಅದರ ಅಧಿಕೃತತೆ ಹಾಗೂ ವಿಶ್ವಾಸಾರ್ಹತೆಯ ಕುರಿತು ಏನು ಹೇಳಸಾಧ್ಯವಿದೆ? [bsi07-KA ಪು. 6 ಪ್ಯಾರ. 3]
7. ಅನ್ಯಾಯವನ್ನು ಸಹಿಸಿಕೊಳ್ಳಲು ಯಾವ ಗುಣ ಅತ್ಯಗತ್ಯ? [w05-KA 6/1 ಪು. 29 ಪ್ಯಾರ. 4]
8. ಸದ್ದುಕಾಯರು ಪುನರುತ್ಥಾನದ ಕುರಿತು ಕೇಳಿದ ಪ್ರಶ್ನೆಗೆ ಯೇಸು ಕೊಟ್ಟ ಉತ್ತರದಿಂದ ನಾವೇನು ಕಲಿಯುತ್ತೇವೆ? (ಲೂಕ 20:37, 38) [be-KA ಪು. 66 ಪ್ಯಾರ. 4]
9. ಒಂದು ನಿರ್ದಿಷ್ಟ ಪರಿಸ್ಥಿತಿಯಲ್ಲಿ ತಾನು ಏನು ಮಾಡಬೇಕೆಂದು ಒಬ್ಬ ಬೈಬಲ್ ವಿದ್ಯಾರ್ಥಿಯೊ ಒಬ್ಬ ಜೊತೆವಿಶ್ವಾಸಿಯೊ ಕೇಳುವಲ್ಲಿ ನೀವು ಹೇಗೆ ಉತ್ತರ ಕೊಡಬೇಕು? [be-KA ಪು. 69 ಪ್ಯಾರ. 4-5]
10. “ಮನಸ್ಸನ್ನು ಪ್ರಚೋದಿಸುವ ಶಕ್ತಿಯಲ್ಲಿ ಹೊಸಬರಾಗುವುದರಲ್ಲಿ” ಏನು ಸೇರಿದೆ? (ಎಫೆ. 4:23, NW) [be-KA ಪು. 74 ಪ್ಯಾರ. 4]
ವಾರದ ಬೈಬಲ್ ವಾಚನ
11. ಯೆಹೆಜ್ಕೇಲ 9:2-4ರಲ್ಲಿ, ನಾರಿನ ಬಟ್ಟೆಯನ್ನು ಹೊದ್ದುಕೊಂಡಿದ್ದ ಪುರುಷನು ಯಾರನ್ನು ಪ್ರತಿನಿಧಿಸುತ್ತಾನೆ, ಮತ್ತು “ಹಣೆಯ ಮೇಲೆ ಗುರುತು” ಏನನ್ನು ಸೂಚಿಸುತ್ತದೆ? [w88-KA 11/1 ಪು. 11 ಪ್ಯಾರ. 18]
12. ಕ್ರೈಸ್ತಪ್ರಪಂಚದ ಧಾರ್ಮಿಕ ಮುಖಂಡರು ಯೆಹೆಜ್ಕೇಲ 13:3ರಲ್ಲಿ ವರ್ಣಿಸಲ್ಪಟ್ಟ “ಸ್ವಬುದ್ಧಿಯನ್ನೇ ಅನುಸರಿಸುವ ಮೂರ್ಖ ಪ್ರವಾದಿಗಳ” ಹಾಗೆ ಇರುವುದು ಹೇಗೆ? [w99-KA 10/1 ಪು. 13]
13. ಯೆಹೆಜ್ಕೇಲ 18:2ರಲ್ಲಿ ದಾಖಲಿಸಲ್ಪಟ್ಟ “ಗಾದೆಯನ್ನು” ನುಡಿಯುವುದರ ಮೂಲಕ ಇಸ್ರಾಯೇಲ್ಯರು ಏನನ್ನು ಮಾಡಲು ಪ್ರಯತ್ನಿಸುತ್ತಿದ್ದರು, ಮತ್ತು ಲೆಕ್ಕಕೊಡುವುದರ ಬಗ್ಗೆ ಯಾವ ಪ್ರಮುಖ ಪಾಠವನ್ನು ಒತ್ತಿಹೇಳಲಾಗಿದೆ? [w88-KA 11/1 ಪು. 14 ಪ್ಯಾರ. 10]
14. ಯೆರೂಸಲೇಮಿನ ಮುತ್ತಿಗೆ ಹಾಗೂ ನಾಶನದ ಸಮಯದಲ್ಲಿ ಯೆಹೆಜ್ಕೇಲನು ‘ಮೂಕನಾದದ್ದು’ ಯಾವ ಅರ್ಥದಲ್ಲಿ? (ಯೆಹೆ. 24:27; 33:22) [w03-KA 12/1 ಪು. 29]
15. ‘ಮಾಗೋಗ್ ದೇಶದ ಗೋಗನು’ ಯಾರು, ಮತ್ತು ಯೆಹೋವನ ಜನರನ್ನು ನಾಶಮಾಡಲು ಅವನು ಯಾವಾಗ ಹೊರಡುತ್ತಾನೆ? (ಯೆಹೆ. 38:2, 16) [w97-KA 3/1 ಪು. 14 ಪ್ಯಾರ. 1-ಪು. 15 ಪ್ಯಾರ. 3]