ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 8/07 ಪು. 7
  • ಪ್ರಕಟಣೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟಣೆಗಳು
  • 2007 ನಮ್ಮ ರಾಜ್ಯದ ಸೇವೆ
2007 ನಮ್ಮ ರಾಜ್ಯದ ಸೇವೆ
km 8/07 ಪು. 7

ಪ್ರಕಟಣೆಗಳು

◼ ಸಾಹಿತ್ಯ ನೀಡುವಿಕೆ​—⁠ಆಗಸ್ಟ್‌: ಮುಂದೆ ಪಟ್ಟಿಮಾಡಿರುವ 32 ಪುಟಗಳ ಯಾವುದೇ ಬ್ರೋಷರ್‌ಗಳನ್ನು ಉಪಯೋಗಿಸಬಹುದು: ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?, ಎಚ್ಚರಿಕೆಯಿಂದಿರಿ!, ನೀವು ತ್ರಯೈಕ್ಯವನ್ನು ನಂಬ ಬೇಕೋ?, ಪರದೈಸನ್ನು ತರಲಿರುವ ಸರಕಾರ (ಇಂಗ್ಲಿಷ್‌), ನಾವು ಮೃತರಾದಾಗ ನಮಗೆ ಏನು ಸಂಭವಿಸುತ್ತದೆ? (ಇಂಗ್ಲಿಷ್‌), ಜೀವಿತದ ಉದ್ದೇಶವೇನು​—⁠ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ? ಮತ್ತು ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ. ಸೆಪ್ಟೆಂಬರ್‌: ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪ್ರಥಮ ಭೇಟಿಯಲ್ಲೇ ಬೈಬಲ್‌ ಅಧ್ಯಯನವನ್ನು ಆರಂಭಿಸಲು ಹೆಚ್ಚಿನ ಪ್ರಯತ್ನವನ್ನು ಮಾಡಿರಿ. ಮನೆಯವರ ಬಳಿ ಈ ಪುಸ್ತಕವು ಈಗಾಗಲೇ ಇರುವುದಾದರೆ, ಅದರಿಂದ ಅವರು ಹೇಗೆ ಪ್ರಯೋಜನ ಹೊಂದಬಲ್ಲರೆಂದು ತೋರಿಸಲು ಬೈಬಲ್‌ ಅಧ್ಯಯನವನ್ನು ಸಂಕ್ಷಿಪ್ತವಾಗಿ ಪ್ರತ್ಯಕ್ಷಾಭಿನಯಿಸಿ ತೋರಿಸಿರಿ. ಅಕ್ಟೋಬರ್‌: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು. ಆಸಕ್ತಿಯು ತೋರಿಸಲ್ಪಟ್ಟಲ್ಲಿ, ಒಂದು ಬೈಬಲ್‌ ಅಧ್ಯಯನವನ್ನು ಆರಂಭಿಸುವ ಗುರಿಯೊಂದಿಗೆ ಬೈಬಲಿನ ಕುರಿತು ಹೆಚ್ಚನ್ನು ತಿಳಿದುಕೊಳ್ಳಲು ನೀವು ಬಯಸುವಿರೋ? ಎಂಬ ಟ್ರ್ಯಾಕ್ಟ್‌ ಕೊಟ್ಟು ಅದನ್ನು ಚರ್ಚಿಸಿರಿ. ನವೆಂಬರ್‌: ಮಹಾ ಬೋಧಕನಿಂದ ಕಲಿಯಿರಿ. (ಇಂಗ್ಲಿಷ್‌) ಮನೆಯವರು ತಮಗೆ ಮಕ್ಕಳಿಲ್ಲವೆಂದು ಹೇಳುವಲ್ಲಿ ಎಚ್ಚರಿಕೆಯಿಂದಿರಿ! ಬ್ರೋಷರನ್ನು ನೀಡಿರಿ.

◼ ಸೆಪ್ಟೆಂಬರ್‌ ತಿಂಗಳಿನಲ್ಲಿ ಐದು ವಾರಾಂತ್ಯಗಳಿರುವುದರಿಂದ, ಆಕ್ಸಿಲಿಯರಿ ಪಯನೀಯರ್‌ ಸೇವೆಯನ್ನು ಮಾಡಲು ಇದೊಂದು ಅತ್ಯುತ್ತಮ ತಿಂಗಳಾಗಿರುವುದು.

◼ ಸಭೆಯಲ್ಲಿ ಪುನಸ್ಥಾಪಿಸಲ್ಪಡಲು ಇಚ್ಛಿಸುವ ಯಾವುದೇ ಬಹಿಷ್ಕೃತರು ಅಥವಾ ಬೇರ್ಪಡಿಸಿಕೊಂಡ ವ್ಯಕ್ತಿಗಳ ಕುರಿತಾಗಿ 1992, ಫೆಬ್ರವರಿ 1ರ ಕಾವಲಿನಬುರುಜುವಿನ 19-21ನೆಯ ಪುಟಗಳಲ್ಲಿ ಕೊಡಲ್ಪಟ್ಟಿರುವ ಸಲಹೆಸೂಚನೆಗಳನ್ನು ಅನುಸರಿಸುವಂತೆ ಹಿರಿಯರಿಗೆ ಜ್ಞಾಪಿಸಲಾಗುತ್ತದೆ.

◼ ಲಭ್ಯವಿರುವ ಹೊಸ ಪ್ರಕಾಶನಗಳು:

ವಾಚ್‌ ಟವರ್‌ ಪಬ್ಲಿಕೇಷನ್‌ ಇಂಡೆಕ್ಸ್‌ 1992-2005 ​—⁠ಅಮೆರಿಕನ್‌ ಸನ್ನೆ ಭಾಷೆ (ಈ ಪುಸ್ತಿಕೆಯು ಅಮೆರಿಕನ್‌ ಸನ್ನೆ ಭಾಷೆಯ ಮುದ್ರಿತ ಪ್ರಕಾಶನಗಳ ಇಂಡೆಕ್ಸ್‌ ಆಗಿದೆ.)

ಶಿಷ್ಯರನ್ನಾಗಿ ಮಾಡಿರಿ ​—⁠ನೇಪಾಲಿ

◼ ಪುನಃ ಲಭ್ಯವಿರುವ ಪ್ರಕಾಶನಗಳು:

ಮಹಾ ಬೋಧಕನಿಂದ ಕಲಿಯಿರಿ ​—⁠ಇಂಗ್ಲಿಷ್‌

ಯೆಹೋವನ ಚಿತ್ತವನ್ನು ಮಾಡಲು ಸಂಘಟಿತರು ​—⁠ಇಂಗ್ಲಿಷ್‌, ಕನ್ನಡ, ತಮಿಳು, ತೆಲುಗು, ಮಲೆಯಾಳಂ, ಹಿಂದಿ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ