ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 7/07 ಪು. 2
  • ಸೇವಾ ಕೂಟದ ಶೆಡ್ಯೂಲ್‌

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೇವಾ ಕೂಟದ ಶೆಡ್ಯೂಲ್‌
  • 2007 ನಮ್ಮ ರಾಜ್ಯದ ಸೇವೆ
  • ಉಪಶೀರ್ಷಿಕೆಗಳು
  • ಜುಲೈ 9ರಿಂದ ಆರಂಭವಾಗುವ ವಾರ
  • ಜುಲೈ 16ರಿಂದ ಆರಂಭವಾಗುವ ವಾರ
  • ಜುಲೈ 23ರಿಂದ ಆರಂಭವಾಗುವ ವಾರ
  • ಜುಲೈ 30ರಿಂದ ಆರಂಭವಾಗುವ ವಾರ
  • ಆಗಸ್ಟ್‌ 6ರಿಂದ ಆರಂಭವಾಗುವ ವಾರ
2007 ನಮ್ಮ ರಾಜ್ಯದ ಸೇವೆ
km 7/07 ಪು. 2

ಸೇವಾ ಕೂಟದ ಶೆಡ್ಯೂಲ್‌

ಜುಲೈ 9ರಿಂದ ಆರಂಭವಾಗುವ ವಾರ

ಗೀತೆ 4

10 ನಿ: ಸ್ಥಳಿಕ ಪ್ರಕಟನೆಗಳು. ಪುಟ 4ರಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು ಅಥವಾ ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವ ಇತರ ನಿರೂಪಣೆಗಳನ್ನು ಉಪಯೋಗಿಸುತ್ತಾ ಜುಲೈ-ಸೆಪ್ಟೆಂಬರ್‌ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೊದಲನೆಯದ್ದು) ಮತ್ತು ಜುಲೈ 1ರ ಕಾವಲಿನಬುರುಜು ಪತ್ರಿಕೆಗಳನ್ನು ಹೇಗೆ ನೀಡಬಹುದೆಂಬುದನ್ನು ಪ್ರತ್ಯಕ್ಷಾಭಿನಯಿಸಿರಿ.

15 ನಿ: ಯಾವುದು ನಿಜ ಸಂತೋಷವನ್ನು ತರುತ್ತದೆ? 2006, ಮೇ 15ರ ಕಾವಲಿನಬುರುಜು ಪುಟ. 28-9, ಪ್ಯಾರ. 11-12ರ ಮೇಲೆ ಆಧಾರಿತವಾದ ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ. ಸುಖಭೋಗದ ಜೀವನ ಅಥವಾ ಐಹಿಕ ಉದ್ಯೋಗವನ್ನು ಬೆನ್ನಟ್ಟುವ ಬದಲಾಗಿ ತನ್ನ ಜೀವನವನ್ನು ಶುಶ್ರೂಷೆಯ ಮೇಲೆ ಕೇಂದ್ರೀಕರಿಸಿರುವ ಪ್ರಚಾರಕನನ್ನು/ಳನ್ನು ಸಂಕ್ಷಿಪ್ತವಾಗಿ ಇಂಟರ್‌ವ್ಯೂ ಮಾಡಿರಿ. ಅವನು/ಳು ಆಧ್ಯಾತ್ಮಿಕ ಗುರಿಗಳನ್ನು ಬೆನ್ನಟ್ಟಲು ಕಾರಣವೇನು? ಇದು ಹೇಗೆ ಸಂತೋಷವನ್ನು ತಂದಿದೆ?

20 ನಿ: ಪ್ರಶ್ನಾ ಚೌಕ. ಒಬ್ಬ ಹಿರಿಯನಿಂದ ನಿರ್ವಹಿಸಲ್ಪಡತಕ್ಕದ್ದು. ಇಡೀ ಲೇಖನವನ್ನು ಓದಿ ಚರ್ಚಿಸಿರಿ.

ಗೀತೆ 91 ಮತ್ತು ಸಮಾಪ್ತಿಯ ಪ್ರಾರ್ಥನೆ.

ಜುಲೈ 16ರಿಂದ ಆರಂಭವಾಗುವ ವಾರ

ಗೀತೆ 16

10 ನಿ: ಸ್ಥಳಿಕ ಪ್ರಕಟನೆಗಳು.

20 ನಿ: ಸಭೆಯ ಶಾಂತಿ ಮತ್ತು ಶುದ್ಧತೆಯನ್ನು ಕಾಪಾಡುವುದು. ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ. ಯೆಹೋವನ ಚಿತ್ತವನ್ನು ಮಾಡಲು ಸಂಘಟಿತರು ಪುಸ್ತಕದ ಪುಟ. 144 ರಿಂದ 150ರಲ್ಲಿನ ಉಪಶೀರ್ಷಿಕೆಯ ವರೆಗಿರುವ ಮಾಹಿತಿಯ ಮೇಲೆ ಆಧಾರಿತ.

15 ನಿ: “ಎಲ್ಲ ಮನುಷ್ಯರು ರಕ್ಷಿಸಲ್ಪಡುವರು.”a ವಿಷಯವನ್ನು ಸ್ಥಳಿಕ ಟೆರಿಟೊರಿಗೆ ಪ್ರಾಯೋಗಿಕವಾಗಿ ಅನ್ವಯಿಸಿರಿ.

ಗೀತೆ 112 ಮತ್ತು ಸಮಾಪ್ತಿಯ ಪ್ರಾರ್ಥನೆ.

ಜುಲೈ 23ರಿಂದ ಆರಂಭವಾಗುವ ವಾರ

ಗೀತೆ 133

10 ನಿ: ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್‌ ವರದಿ ಮತ್ತು ದಾನಗಳ ಅಂಗೀಕಾರ ಪತ್ರಗಳನ್ನು ಓದಿರಿ. ಪುಟ 4ರಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು ಅಥವಾ ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವ ಇತರ ನಿರೂಪಣೆಗಳನ್ನು ಉಪಯೋಗಿಸುತ್ತಾ ಜುಲೈ-ಸೆಪ್ಟೆಂಬರ್‌ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೂರನೆಯದ್ದು) ಮತ್ತು ಆಗಸ್ಟ್‌ 1ರ ಕಾವಲಿನಬುರುಜು ಪತ್ರಿಕೆಗಳನ್ನು ಹೇಗೆ ನೀಡಬಹುದೆಂಬುದನ್ನು ಪ್ರತ್ಯಕ್ಷಾಭಿನಯಿಸಿರಿ.

20 ನಿ: ಒಬ್ಬರಿಗೊಬ್ಬರು ಅತಿಥಿ ಸತ್ಕಾರಮಾಡಿರಿ. 2005, ಜನವರಿ 15ರ ಕಾವಲಿನಬುರುಜುವಿನ ಪುಟ. 21-3ರ ಮೇಲೆ ಆಧಾರಿತವಾದ ಭಾಷಣ. ಅತಿಥಿ ಸತ್ಕಾರಕ್ಕೆ ಖ್ಯಾತರಾಗಿರುವ ಒಬ್ಬಿಬ್ಬರು ಪ್ರಚಾರಕರ ಸಂಕ್ಷಿಪ್ತ ಇಂಟರ್‌ವ್ಯೂ ಅನ್ನು ಒಳಗೂಡಿಸಿರಿ. ಅತಿಥಿ ಸತ್ಕಾರ ತೋರಿಸಲಿಕ್ಕಾಗಿ ಅವರು ಹೇಗೆ ಪ್ರಯತ್ನಿಸಿದ್ದಾರೆ? ಇದರಿಂದ ಅವರು ಮತ್ತು ಅವರ ಕುಟುಂಬದವರು ಯಾವ ಆಶೀರ್ವಾದಗಳನ್ನು ಪಡೆದುಕೊಂಡಿದ್ದಾರೆ? ನಗರಗಳಲ್ಲಿ, ಇತರ ಭಾಷೆಯ ಸಭೆಗಳೊಂದಿಗೆ ಟೆರಿಟೊರಿಯನ್ನು ಹಂಚಿಕೊಳ್ಳುವ ಸಭೆಗಳು ಮೇಲೆ ತಿಳಿಸಲ್ಪಟ್ಟ ಅತಿಥಿ ಸತ್ಕಾರದ ಕುರಿತಾದ ಕಾವಲಿನಬುರುಜು ಲೇಖನಕ್ಕೆ ಬದಲಾಗಿ SB:SSB ಏಪ್ರಿಲ್‌ 16, 2007ರ ಪತ್ರವನ್ನು ಚರ್ಚಿಸತಕ್ಕದ್ದು. ಇದು ಸೇವಾ ಮೇಲ್ವಿಚಾರಕನಿಂದ ನಿರ್ವಹಿಸಲ್ಪಡತಕ್ಕದ್ದು. ಕ್ರಮದ ಪತ್ರಿಕಾ ವಿನಂತಿಗಳನ್ನು ಪರಿಶೀಲಿಸಿ ಹೊಂದಿಸಿಕೊಳ್ಳತಕ್ಕದ್ದು. ಪುಸ್ತಕ ಅಧ್ಯಯನ ಮೇಲ್ವಿಚಾರಕರು, ಆ ಪತ್ರದಲ್ಲಿ ಸಲಹೆ ನೀಡಲ್ಪಟ್ಟಂತೆ ಇತರ ಭಾಷೆಯ ಬೈಬಲ್‌ ಅಧ್ಯಯನಗಳನ್ನು ಹಸ್ತಾಂತರಿಸುವಂತೆ ಪ್ರೋತ್ಸಾಹಿಸತಕ್ಕದ್ದು.

15 ನಿ: ಸ್ವತ್ಯಾಗವು ಯೆಹೋವನ ಆಶೀರ್ವಾದವನ್ನು ತರುತ್ತದೆ. 2005, ನವೆಂಬರ್‌ 15ರ ಕಾವಲಿನಬುರುಜು ಪುಟ. 8-9ರ ಮೇಲೆ ಆಧಾರಿತವಾದ ಭಾಷಣ.

ಗೀತೆ 204 ಮತ್ತು ಸಮಾಪ್ತಿಯ ಪ್ರಾರ್ಥನೆ.

ಜುಲೈ 30ರಿಂದ ಆರಂಭವಾಗುವ ವಾರ

ಗೀತೆ 200

10 ನಿ: ಸ್ಥಳಿಕ ಪ್ರಕಟನೆಗಳು. ಜುಲೈ ತಿಂಗಳ ಕ್ಷೇತ್ರಸೇವಾ ವರದಿಯನ್ನು ನೀಡುವಂತೆ ಪ್ರಚಾರಕರಿಗೆ ನೆನಪುಹುಟ್ಟಿಸಿರಿ.

15 ನಿ: ನಮ್ಮ ಕೆಲಸವನ್ನು ಅಪಾರ್ಥ ಮಾಡಿಕೊಂಡಾಗ. ಒಬ್ಬ ಅರ್ಹ ಹಿರಿಯನಿಂದ ನಿರ್ವಹಿಸಲ್ಪಡತಕ್ಕದ್ದು. SA:LLC ಏಪ್ರಿಲ್‌ 28, 2003ರ ಪತ್ರದೊಂದಿಗೆ ಕಳುಹಿಸಲ್ಪಟ್ಟ ಹೊರಮೇರೆಯನ್ನು ಚರ್ಚಿಸಿರಿ. ಸ್ಥಳಿಕ ಪರಿಸ್ಥಿತಿಗಳಿಗೆ ವಿಷಯವನ್ನು ಅನ್ವಯಿಸಿರಿ. ಪ್ರಚಾರಕರು ಸಾಮಾನ್ಯವಾಗಿ ಉಪಯೋಗಿಸುವ ಯಾವ ಹೇಳಿಕೆಗಳು ಬೇರೆ ಧರ್ಮದ ಜನರಿಗೆ ಮನನೋಯಿಸಬಲ್ಲದು? ಎಚ್ಚರಿಕೆ ವಹಿಸುವ ಅಗತ್ಯ ಹಾಗೂ ಟೆರಿಟೊರಿಯಲ್ಲಿ ದೊಡ್ಡ ಗುಂಪುಗಳಾಗಿ ಅತ್ತಿತ್ತ ತಿರುಗಬಾರದೆಂಬುದನ್ನು ಒತ್ತಿಹೇಳಿರಿ.

20 ನಿ: “ಕಷ್ಟವನ್ನು ಸಹಿಸಿಕೊಳ್ಳುವವನು ಧನ್ಯನು.”b 3ನೇ ಪ್ಯಾರವನ್ನು ಪರಿಗಣಿಸುವಾಗ, ಅನಿರೀಕ್ಷಿತವಾಗಿ ಒಂದು ಕಷ್ಟವೆದ್ದ ಸಂದರ್ಭದಲ್ಲಿ ಬಲವಾದ ನಂಬಿಕೆಯು ಹೇಗೆ ಸಹಾಯಮಾಡಿತು ಎಂಬುದರ ಬಗ್ಗೆ ತಿಳಿಸುವಂತೆ ಸಭಿಕರನ್ನು ಕೇಳಿಕೊಳ್ಳಿ. ಒಂದೆರಡು ಹೇಳಿಕೆಗಳನ್ನು ಮುಂಚಿತವಾಗಿಯೇ ಏರ್ಪಡಿಸಬಹುದು.

ಗೀತೆ 13 ಮತ್ತು ಸಮಾಪ್ತಿಯ ಪ್ರಾರ್ಥನೆ.

ಆಗಸ್ಟ್‌ 6ರಿಂದ ಆರಂಭವಾಗುವ ವಾರ

ಗೀತೆ 106

10 ನಿ: ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು.

15 ನಿ: ಸ್ಥಳಿಕ ಅಗತ್ಯಗಳು.

20 ನಿ: “ನಾವೇಕೆ ಪದೇ ಪದೇ ಹೋಗುತ್ತೇವೆ?”c 5ನೇ ಪ್ಯಾರವನ್ನು ಪರಿಗಣಿಸುವಾಗ, ಈ ಹಿಂದೆ ಸತ್ಯವನ್ನು ವಿರೋಧಿಸುತ್ತಿದ್ದಾಗ ಅಥವಾ ಅದರಲ್ಲಿ ಆಸಕ್ತಿ ಇಲ್ಲದಿದ್ದಾಗ ಯಾವುದು ಅವರಿಗೆ ಸತ್ಯದಲ್ಲಿ ಆಸಕ್ತಿಯನ್ನು ತೋರಿಸುವಂತೆ ಮಾಡಿತು ಎಂಬುದರ ಕುರಿತು ತಿಳಿಸುವಂತೆ ಸಭಿಕರನ್ನು ಕೇಳಿಕೊಳ್ಳಿ.

ಗೀತೆ 211 ಮತ್ತು ಸಮಾಪ್ತಿಯ ಪ್ರಾರ್ಥನೆ.

[ಪಾದಟಿಪ್ಪಣಿಗಳು]

a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

c ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ