ಪ್ರಕಟನೆಗಳು
◼ ಸಾಹಿತ್ಯ ನೀಡುವಿಕೆ—ಅಕ್ಟೋಬರ್: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಬಿಡಿ ಪ್ರತಿಗಳನ್ನು ನೀಡಿರಿ. ಆಸಕ್ತಿಯು ಕಂಡುಬಂದಲ್ಲಿ, ಎಚ್ಚರಿಕೆಯಿಂದಿರಿ! ಬ್ರೋಷರನ್ನು ಪರಿಚಯಪಡಿಸುವ ಮೂಲಕ ಬೈಬಲಿನಲ್ಲಿ ಅವರ ಆಸಕ್ತಿಯನ್ನು ಇನ್ನೂ ಹೆಚ್ಚಿಸಿರಿ. ನವೆಂಬರ್: ಮಹಾ ಬೋಧಕನಿಂದ ಕಲಿಯಿರಿ ಪುಸ್ತಕವನ್ನು ನೀಡಲಾಗುವುದು. ಮನೆಯವನ ಭಾಷೆಯಲ್ಲಿ ಈ ಪುಸ್ತಕವು ಲಭ್ಯವಿರದಿದ್ದಲ್ಲಿ, ಮಹಾನ್ ಪುರುಷ ಪುಸ್ತಕ ಅಥವಾ ಬೈಬಲ್ ಕಥೆಗಳ ನನ್ನ ಪುಸ್ತಕವನ್ನು ನೀಡಿರಿ. ಇದರೊಂದಿಗೆ ಬೈಬಲಿನ ಕುರಿತು ಹೆಚ್ಚನ್ನು ತಿಳಿದುಕೊಳ್ಳಲು ನೀವು ಬಯಸುವಿರೋ? ಎಂಬ ಟ್ರ್ಯಾಕ್ಟ್ ಅನ್ನು ಸಹ ನೀಡಿರಿ. ಡಿಸೆಂಬರ್: ಜೀವಿಸುವವರಲ್ಲಿ ಅತ್ಯಂತ ಮಹಾನ್ ಪುರುಷ ಪುಸ್ತವನ್ನು ನೀಡಿರಿ. ಅಥವಾ ಬೈಬಲ್ ಕಥೆಗಳ ನನ್ನ ಪುಸ್ತಕ ಮತ್ತು ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕಗಳು ಸಭೆಯಲ್ಲಿ ಸ್ಟಾಕ್‌ನಲ್ಲಿರುವುದಾದರೆ ಅವನ್ನು ಬದಲಿ ನೀಡುವಿಕೆಯಾಗಿ ಉಪಯೋಗಿಸಬಹುದು. ಜನವರಿ: ಹಳದಿ ಬಣ್ಣಕ್ಕೆ ತಿರುಗುವ ಇಲ್ಲವೆ ಬಣ್ಣವನ್ನು ಕಳೆದುಕೊಳ್ಳುವಂಥ ಕಾಗದದ ಮೇಲೆ ಮುದ್ರಿಸಲ್ಪಟ್ಟಿರುವ 192 ಪುಟದ ಯಾವುದೇ ಪುಸ್ತಕವನ್ನು ಅಥವಾ 1991ಕ್ಕೆ ಮುಂಚೆ ಪ್ರಕಟಿಸಲ್ಪಟ್ಟ ಯಾವುದೇ ಪುಸ್ತಕವನ್ನು ನೀಡಬಹುದು. ಸಭೆಯಲ್ಲಿ ಇಂಥ ಹಳೇ ಪುಸ್ತಕಗಳು ಸ್ಟಾಕ್‌ನಲ್ಲಿಲ್ಲದಿದ್ದಲ್ಲಿ, ಜ್ಞಾನ ಪುಸ್ತಕ ಅಥವಾ ಎಚ್ಚರಿಕೆಯಿಂದಿರಿ! ಬ್ರೋಷರನ್ನು ನೀಡಬಹುದು.
◼ ಡಿಸೆಂಬರ್ ತಿಂಗಳಿನಲ್ಲಿ ಐದು ವಾರಾಂತ್ಯಗಳಿರುವುದರಿಂದ, ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡಲು ಇದೊಂದು ಅತ್ಯುತ್ತಮ ತಿಂಗಳಾಗಿರುವುದು.
◼ ನಮ್ಮ ರಾಜ್ಯದ ಸೇವೆಯ ಈ ಸಂಚಿಕೆಯ ಪುರವಣಿಯಲ್ಲಿ “2007ನೇ ಇಸವಿಗಾಗಿ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶೆಡ್ಯೂಲ್” ಇದೆ. ಇದನ್ನು 2007ನೇ ಇಸವಿಯಾದ್ಯಂತ ಉಪಯೋಗಿಸಲಿಕ್ಕಾಗಿ ಜೋಪಾನವಾಗಿ ಇಟ್ಟುಕೊಳ್ಳತಕ್ಕದ್ದು.
◼ ರಕ್ತರಹಿತ ಚಿಕಿತ್ಸೆ—ವೈದ್ಯಶಾಸ್ತ್ರ ಈ ಪಂಥಾಹ್ವಾನವನ್ನು ನಿಭಾಯಿಸುತ್ತದೆ (ಇಂಗ್ಲಿಷ್) ಎಂಬ ವಿಡಿಯೋವನ್ನು ಜನವರಿ ತಿಂಗಳಿನ ಒಂದು ಸೇವಾಕೂಟದಲ್ಲಿ ಪರಿಗಣಿಸಲಿದ್ದೇವೆ. ಆದುದರಿಂದ, ಈ CD ಅಗತ್ಯವಿರುವಲ್ಲಿ ಸಭೆಯ ಮೂಲಕ ಸಾಧ್ಯವಾದಷ್ಟು ಬೇಗನೆ ವಿನಂತಿಸತಕ್ಕದ್ದು.
◼ ಇಸವಿ 2007ರ ಜ್ಞಾಪಕಾಚರಣೆ ಸಮಯದ ವಿಶೇಷ ಬಹಿರಂಗ ಭಾಷಣವನ್ನು 2007, ಏಪ್ರಿಲ್ 15ರಂದು ನೀಡಲಾಗುತ್ತದೆ. ಭಾಷಣದ ಶೀರ್ಷಿಕೆಯನ್ನು ಮುಂದೆ ತಿಳಿಸಲಾಗುವುದು. ಆ ವಾರಾಂತ್ಯದಲ್ಲಿ ಸರ್ಕಿಟ್ ಮೇಲ್ವಿಚಾರಕರ ಸಂದರ್ಶನ ಅಥವಾ ಸಮ್ಮೇಳನವನ್ನು ಹೊಂದಿರುವಂಥ ಸಭೆಗಳಲ್ಲಿ, ಅದರ ಮುಂದಿನ ವಾರದಲ್ಲಿ ಈ ವಿಶೇಷ ಭಾಷಣವನ್ನು ನೀಡಲಾಗುವುದು. ಯಾವ ಸಭೆಯಲ್ಲಿಯೂ 2007, ಏಪ್ರಿಲ್ 15ಕ್ಕೆ ಮುಂಚಿತವಾಗಿ ವಿಶೇಷ ಭಾಷಣವು ನೀಡಲ್ಪಡಬಾರದು.