2007ನೇ ಇಸವಿಗಾಗಿ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶೆಡ್ಯೂಲ್
ಸೂಚನೆಗಳು
ಇಸವಿ 2007ರಲ್ಲಿ, ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯನ್ನು ನಡಿಸುವಾಗ ಈ ಕೆಳಗಿನ ಏರ್ಪಾಡುಗಳನ್ನು ಅನುಸರಿಸಲಾಗುವುದು.
ಮಾಹಿತಿಯ ಮೂಲಗಳು: ಸತ್ಯವೇದವು [BSI], ಕಾವಲಿನಬುರುಜು [w-KA], ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ [be-KA], “ಶಾಸ್ತ್ರವೆಲ್ಲವೂ” ವಿಶ್ವಾಸಾರ್ಹ ಮತ್ತು ಪ್ರಯೋಜನಕರ [bsi07-KA], ಚರ್ಚೆಗಾಗಿ ಬೈಬಲ್ ವಿಷಯಗಳು [td-KA].
ಶಾಲೆಯನ್ನು ಗೀತೆ, ಪ್ರಾರ್ಥನೆ, ಮತ್ತು ಚುಟುಕಾದ ಸ್ವಾಗತದ ಹೇಳಿಕೆಯೊಂದಿಗೆ ಸರಿಯಾದ ಸಮಯಕ್ಕೆ ಆರಂಭಿಸಿದ ಬಳಿಕ ಕೆಳಗೆ ಸೂಚಿಸಲ್ಪಟ್ಟಿರುವಂತೆ ಮುಂದುವರಿಯಿರಿ. ಪ್ರತಿಯೊಂದು ಭಾಗದ ನಂತರ ಶಾಲಾ ಮೇಲ್ವಿಚಾರಕನು ಮುಂದಿನ ಭಾಗವನ್ನು ಪರಿಚಯಿಸುವನು.
ಭಾಷಣ ಗುಣ: 5 ನಿಮಿಷಗಳು. ಶಾಲಾ ಮೇಲ್ವಿಚಾರಕನು, ಸಹಾಯಕ ಸಲಹೆಗಾರನು, ಅಥವಾ ಇನ್ನೊಬ್ಬ ಅರ್ಹ ಹಿರಿಯನು, ಶುಶ್ರೂಷಾ ಶಾಲೆ ಪಠ್ಯಪುಸ್ತಕದ ಮೇಲಾಧಾರಿತವಾದ ಒಂದು ಭಾಷಣ ಗುಣದ ಕುರಿತು ಚರ್ಚಿಸುವನು. (ಮಿತವಾದ ಸಂಖ್ಯೆಯ ಹಿರಿಯರಿರುವ ಸಭೆಗಳಲ್ಲಿ, ಅರ್ಹರಾದ ಶುಶ್ರೂಷಾ ಸೇವಕರನ್ನು ಉಪಯೋಗಿಸಬಹುದು.)
ನೇಮಕ ನಂಬರ್ 1: 10 ನಿಮಿಷಗಳು. ಇದನ್ನು ಒಬ್ಬ ಅರ್ಹ ಹಿರಿಯನು ಅಥವಾ ಶುಶ್ರೂಷಾ ಸೇವಕನು ನಿರ್ವಹಿಸಬೇಕು. ಮತ್ತು ಇದು ಕಾವಲಿನಬುರುಜು ಪತ್ರಿಕೆ, ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ ಅಥವಾ “ಶಾಸ್ತ್ರವೆಲ್ಲವೂ” ವಿಶ್ವಾಸಾರ್ಹ ಮತ್ತು ಪ್ರಯೋಜನಕರ ಎಂಬ ಪ್ರಕಾಶನಗಳ ಮೇಲೆ ಆಧಾರಿಸಿರುವುದು. ಇದನ್ನು ಹತ್ತು ನಿಮಿಷದ ಉಪದೇಶ ಭಾಷಣವಾಗಿ ನೀಡಬೇಕಾಗಿದ್ದು, ಯಾವುದೇ ಮೌಖಿಕ ಪುನರ್ವಿಮರ್ಶೆಯಿರುವುದಿಲ್ಲ. ಇದರ ಉದ್ದೇಶವು ಕೇವಲ ವಿಷಯಭಾಗವನ್ನು ಆವರಿಸುವುದಲ್ಲ, ಬದಲಾಗಿ ಚರ್ಚಿಸಲ್ಪಡುತ್ತಿರುವ ಮಾಹಿತಿಯ ಪ್ರಾಯೋಗಿಕ ಮೌಲ್ಯದ ಮೇಲೆ ಗಮನವನ್ನು ಕೇಂದ್ರೀಕರಿಸಿ, ಸಭೆಗೆ ಅತ್ಯಂತ ಸಹಾಯಕಾರಿಯಾಗಿರುವ ವಿಷಯವನ್ನು ಎತ್ತಿಹೇಳುವುದೇ ಆಗಿರಬೇಕು. ಕೊಡಲ್ಪಟ್ಟಿರುವ ಮುಖ್ಯ ವಿಷಯವನ್ನೇ ಉಪಯೋಗಿಸತಕ್ಕದ್ದು. ಈ ಭಾಷಣಕ್ಕೆ ನೇಮಿತರಾದ ಸಹೋದರರು, ಕೊಡಲ್ಪಟ್ಟಿರುವ ಸಮಯದ ಪರಿಮಿತಿಯೊಳಗೆ ಅದನ್ನು ಮುಗಿಸಲು ಜಾಗ್ರತೆವಹಿಸುವಂತೆ ನಿರೀಕ್ಷಿಸಲಾಗುತ್ತದೆ. ಖಾಸಗಿ ಸಲಹೆಯು ಅಗತ್ಯಕ್ಕನುಸಾರ ನೀಡಲ್ಪಡಬಹುದು.
ಬೈಬಲ್ ವಾಚನದಿಂದ ಮುಖ್ಯಾಂಶಗಳು: 10 ನಿಮಿಷಗಳು. ಮೊದಲ ಐದು ನಿಮಿಷಗಳ ವರೆಗೆ, ಒಬ್ಬ ಅರ್ಹ ಹಿರಿಯನು ಅಥವಾ ಶುಶ್ರೂಷಾ ಸೇವಕನು ವಿಷಯಭಾಗವನ್ನು ಸ್ಥಳಿಕ ಆವಶ್ಯಕತೆಗಳಿಗೆ ಅನ್ವಯಿಸತಕ್ಕದ್ದು. ಆ ವಾರಕ್ಕಾಗಿರುವ ನೇಮಿತ ಬೈಬಲ್ ವಾಚನದ ಯಾವುದೇ ಭಾಗದ ಕುರಿತು ಅವನು ಹೇಳಿಕೆ ನೀಡಬಹುದು. ಇದು ನೇಮಿತ ವಾಚನದ ಬರೀ ಸಾರಾಂಶವಾಗಿರಬಾರದು. ಈ ಮಾಹಿತಿಯು ಏಕೆ ಮತ್ತು ಹೇಗೆ ಅಮೂಲ್ಯವಾದದ್ದಾಗಿದೆ ಎಂಬುದನ್ನು ಸಭಿಕರು ಗಣ್ಯಮಾಡುವಂತೆ ಸಹಾಯಮಾಡುವುದೇ ಇದರ ಮುಖ್ಯ ಉದ್ದೇಶವಾಗಿದೆ. ಆರಂಭದ ಭಾಗಕ್ಕಾಗಿ ಐದು ನಿಮಿಷಗಳಿಗಿಂತ ಹೆಚ್ಚು ಸಮಯವನ್ನು ವ್ಯಯಿಸಬಾರದು ಎಂಬ ವಿಷಯದಲ್ಲಿ ಭಾಷಣಕರ್ತನು ಜಾಗರೂಕನಾಗಿರಬೇಕು. ಐದು ನಿಮಿಷಗಳು ಸಭಿಕರ ಭಾಗವಹಿಸುವಿಕೆಗಾಗಿ ಬದಿಗಿರಿಸಲ್ಪಡುವಂತೆ ಅವನು ಖಚಿತಪಡಿಸಿಕೊಳ್ಳಬೇಕು. ಬೈಬಲ್ ಓದುವಿಕೆಯಲ್ಲಿ ಯಾವ ಅಂಶಗಳನ್ನು ಅವರು ಆಸಕ್ತಿದಾಯಕವಾಗಿ ಕಂಡುಕೊಂಡರು ಮತ್ತು ಅದರ ಪ್ರಯೋಜನಗಳೇನು ಎಂಬುದರ ಕುರಿತು ಚುಟುಕಾಗಿ (30 ಸೆಕೆಂಡುಗಳು ಅಥವಾ ಅದಕ್ಕಿಂತ ಕಡಿಮೆ ಸಮಯದಲ್ಲಿ) ಹೇಳಿಕೆ ನೀಡುವಂತೆ ಸಭಿಕರು ಆಮಂತ್ರಿಸಲ್ಪಡಬೇಕು. ಅನಂತರ ಶಾಲಾ ಮೇಲ್ವಿಚಾರಕನು ಇತರ ಕ್ಲಾಸ್ರೂಮ್ಗಳಿಗೆ ನೇಮಿಸಲ್ಪಟ್ಟಿರುವ ವಿದ್ಯಾರ್ಥಿಗಳನ್ನು ಕಳುಹಿಸುವನು.
ನೇಮಕ ನಂಬರ್ 2: 4 ನಿಮಿಷಗಳು ಅಥವಾ ಅದಕ್ಕಿಂತಲೂ ಕಡಿಮೆ. ಇದು ವಾಚನ ನೇಮಕವಾಗಿದ್ದು, ಒಬ್ಬ ಸಹೋದರನಿಂದ ಕೊಡಲ್ಪಡಬೇಕು. ವಿದ್ಯಾರ್ಥಿಯು ನೇಮಿತ ವಿಷಯಭಾಗವನ್ನು ಒಂದು ಪೀಠಿಕೆ ಅಥವಾ ಸಮಾಪ್ತಿಯನ್ನು ಕೊಡದೆ ಓದಬೇಕು. ಅರ್ಥಮಾಡಿಕೊಳ್ಳುವಂಥ ರೀತಿಯಲ್ಲಿ, ನಿರರ್ಗಳವಾಗಿ, ಸರಿಯಾದ ಅರ್ಥಒತ್ತಿನಿಂದ, ಧ್ವನಿಯ ಏರಿಳಿತದೊಂದಿಗೆ, ಸೂಕ್ತವಾದಲ್ಲಿ ನಿಲ್ಲಿಸಿ, ಸ್ವಾಭಾವಿಕತೆಯಿಂದ ಓದುವಂತೆ ವಿದ್ಯಾರ್ಥಿಗಳಿಗೆ ಸಹಾಯಮಾಡುವುದರಲ್ಲಿ ಶಾಲಾ ಮೇಲ್ವಿಚಾರಕನು ವಿಶೇಷವಾಗಿ ಆಸಕ್ತನಾಗಿರುವನು.
ನೇಮಕ ನಂಬರ್ 3: 5 ನಿಮಿಷಗಳು. ಇದು ಒಬ್ಬ ಸಹೋದರಿಗೆ ನೇಮಿಸಲ್ಪಡುವುದು. ಈ ನೇಮಕವನ್ನು ಪಡೆದುಕೊಳ್ಳುವ ವಿದ್ಯಾರ್ಥಿನಿಯರಿಗೆ ಶುಶ್ರೂಷಾ ಶಾಲೆ ಪಠ್ಯಪುಸ್ತಕದ 82ನೆಯ ಪುಟದಲ್ಲಿ ಕಂಡುಬರುವ ಪಟ್ಟಿಯಿಂದ ಒಂದು ಸನ್ನಿವೇಶವು ನೇಮಿಸಲ್ಪಡುವುದು ಅಥವಾ ಅವರು ಸ್ವತಃ ಒಂದು ಸನ್ನಿವೇಶವನ್ನು ಆರಿಸಿಕೊಳ್ಳುವರು. ವಿದ್ಯಾರ್ಥಿನಿಯು ನೇಮಿತ ಮುಖ್ಯ ವಿಷಯವನ್ನೇ ಉಪಯೋಗಿಸಬೇಕು ಮತ್ತು ಅದನ್ನು ಸ್ಥಳಿಕ ಟೆರಿಟೊರಿಗಾಗಿ ವಾಸ್ತವಿಕವೂ ಪ್ರಾಯೋಗಿಕವೂ ಆಗಿರುವ ಒಂದು ಕ್ಷೇತ್ರ ಸೇವಾ ಅಂಶಕ್ಕೆ ಅನ್ವಯಿಸಬೇಕು. ಮಾಹಿತಿಯ ಮೂಲಕ್ಕಾಗಿ ಯಾವುದೇ ರೆಫರೆನ್ಸ್ಗಳು ಕೊಡಲ್ಪಡದಿರುವಾಗ, ನಮ್ಮ ಪ್ರಕಾಶನಗಳಲ್ಲಿ ಸಂಶೋಧನೆ ನಡೆಸುವ ಮೂಲಕ, ಈ ಭಾಗಕ್ಕಾಗಿರುವ ವಿಷಯಭಾಗವನ್ನು ವಿದ್ಯಾರ್ಥಿನಿಯೇ ಸಂಗ್ರಹಿಸುವ ಅಗತ್ಯವಿರುವುದು. ಹೊಸ ವಿದ್ಯಾರ್ಥಿಗಳಿಗೆ, ರೆಫರೆನ್ಸ್ಗಳು ಕೊಡಲ್ಪಟ್ಟಿರುವಂಥ ಭಾಷಣಗಳನ್ನು ನೇಮಿಸತಕ್ಕದ್ದು. ವಿದ್ಯಾರ್ಥಿನಿಯು ವಿಷಯಭಾಗವನ್ನು ಹೇಗೆ ವಿಕಸಿಸುತ್ತಾಳೆ ಮತ್ತು ಮನೆಯವರು ಶಾಸ್ತ್ರವಚನಗಳ ಕುರಿತು ವಿವೇಚಿಸುವಂತೆ ಹಾಗೂ ಆ ಭಾಷಣದ ಪ್ರಮುಖ ಅಂಶಗಳನ್ನು ಅರ್ಥಮಾಡಿಕೊಳ್ಳುವಂತೆ ಹೇಗೆ ಸಹಾಯಮಾಡುತ್ತಾಳೆ ಎಂಬ ವಿಷಯದಲ್ಲಿ ಶಾಲಾ ಮೇಲ್ವಿಚಾರಕನು ವಿಶೇಷವಾಗಿ ಆಸಕ್ತಿಯುಳ್ಳವನಾಗಿರುವನು. ಶಾಲಾ ಮೇಲ್ವಿಚಾರಕನು ಒಬ್ಬ ಸಹಾಯಕಿಯನ್ನು ನೇಮಿಸುವನು.
ನೇಮಕ ನಂಬರ್ 4: 5 ನಿಮಿಷಗಳು. ವಿದ್ಯಾರ್ಥಿಯು ನೇಮಿತ ಮುಖ್ಯ ವಿಷಯವನ್ನು ವಿಕಸಿಸಬೇಕು. ಮಾಹಿತಿಯ ಮೂಲಕ್ಕಾಗಿ ಯಾವುದೇ ರೆಫರೆನ್ಸ್ಗಳು ಕೊಡಲ್ಪಡದಿರುವಾಗ, ನಮ್ಮ ಪ್ರಕಾಶನಗಳಲ್ಲಿ ಸಂಶೋಧನೆ ನಡೆಸುವ ಮೂಲಕ, ಈ ಭಾಗಕ್ಕಾಗಿರುವ ವಿಷಯಭಾಗವನ್ನು ವಿದ್ಯಾರ್ಥಿಯೇ ಸಂಗ್ರಹಿಸುವ ಅಗತ್ಯವಿರುವುದು. ಇದು ಒಬ್ಬ ಸಹೋದರನಿಗೆ ನೇಮಿಸಲ್ಪಡುವಾಗ, ರಾಜ್ಯ ಸಭಾಗೃಹದಲ್ಲಿರುವ ಸಭಿಕರನ್ನು ಮನಸ್ಸಿನಲ್ಲಿಟ್ಟುಕೊಂಡವನಾಗಿ ಈ ನೇಮಕವನ್ನು ಒಂದು ಭಾಷಣವಾಗಿ ಕೊಡತಕ್ಕದ್ದು. ಒಬ್ಬ ಸಹೋದರಿಗೆ ಈ ಭಾಗವು ಕೊಡಲ್ಪಡುವಾಗ, ಅದನ್ನು ಯಾವಾಗಲೂ ನೇಮಕ ನಂಬರ್ 3ಕ್ಕಾಗಿ ಕೊಡಲ್ಪಟ್ಟಿರುವ ಸೂಚನೆಗಳಿಗೆ ತಕ್ಕಂತೆ ನೀಡಬೇಕಾಗಿದೆ. ಶಾಲಾ ಮೇಲ್ವಿಚಾರಕನು ಸೂಕ್ತವಾಗಿರುವಾಗೆಲ್ಲಾ ಒಬ್ಬ ಸಹೋದರನಿಗೆ ನೇಮಕ ನಂಬರ್ 4ನ್ನು ನೇಮಿಸುವನು. ನಕ್ಷತ್ರ ಚಿಹ್ನೆ ಇರುವಂಥ ಮುಖ್ಯ ವಿಷಯಗಳು ಭಾಷಣಗಳೋಪಾದಿ ನೀಡಲಿಕ್ಕಾಗಿ ಸಹೋದರರಿಗೆ ಮಾತ್ರ ನೇಮಿಸಲ್ಪಡಬೇಕು ಎಂಬುದನ್ನು ದಯವಿಟ್ಟು ಗಮನಿಸಿರಿ.
ಸಲಹೆ: 1 ನಿಮಿಷ. ಶಾಲಾ ಮೇಲ್ವಿಚಾರಕನು ವಿದ್ಯಾರ್ಥಿಯು ಕೆಲಸಮಾಡುತ್ತಿರುವ ಭಾಷಣ ಗುಣವನ್ನು ಮೊದಲೇ ತಿಳಿಸಬಾರದು. ಅವನು ನೇಮಕ ನಂಬರ್ 2, 3, 4ರ ನಂತರ ಭಾಷಣದ ಒಂದು ಪ್ರಶಂಸಾರ್ಹ ಅಂಶದ ಕುರಿತು ಕೆಲವು ಸಕಾರಾತ್ಮಕ ಹೇಳಿಕೆಗಳನ್ನು ನೀಡುವನು. “ಚೆನ್ನಾಗಿ ಮಾಡಿದಿರಿ” ಎಂದಷ್ಟೇ ಹೇಳುವುದು ಅವನ ಗುರಿಯಾಗಿರುವುದಿಲ್ಲ, ಬದಲಾಗಿ ಭಾಷಣದ ಆ ಅಂಶವು ಏಕೆ ಪರಿಣಾಮಕಾರಿಯಾಗಿತ್ತು ಎಂಬುದಕ್ಕಿರುವ ನಿರ್ದಿಷ್ಟ ಕಾರಣಗಳ ಕಡೆಗೆ ಗಮನವನ್ನು ಸೆಳೆಯುವುದೇ ಆಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯ ಆವಶ್ಯಕತೆಗನುಸಾರ, ಕೂಟದ ನಂತರ ಅಥವಾ ಬೇರೊಂದು ಸಮಯದಲ್ಲಿ ಹೆಚ್ಚಿನ ಸಹಾಯಕರ ಸಲಹೆಯನ್ನು ಖಾಸಗಿಯಾಗಿ ನೀಡಬಹುದು.
ಸಮಯಪಾಲನೆ: ಯಾವುದೇ ಭಾಷಣವಾಗಲಿ ಸಲಹೆಗಾರನ ಹೇಳಿಕೆಗಳಾಗಲಿ ನಿಗದಿತ ಸಮಯವನ್ನು ಮೀರಿ ಹೋಗಬಾರದು. ನೇಮಕ ನಂಬರ್ 2ರಿಂದ 4ರ ವರೆಗಿನ ಭಾಗಗಳಿಗೆ ನಿಗದಿತವಾದ ಸಮಯವು ಮುಗಿಯಲಿರುವಾಗ, ಆ ಭಾಷಣಗಳನ್ನು ಜಾಣ್ಮೆಯಿಂದ ನಿಲ್ಲಿಸತಕ್ಕದ್ದು. ಭಾಷಣ ಗುಣದ ಕುರಿತಾದ ಆರಂಭದ ಭಾಷಣವನ್ನು, ನೇಮಕ ನಂಬರ್ 1ನ್ನು, ಅಥವಾ ಬೈಬಲ್ ವಾಚನದಿಂದ ಮುಖ್ಯಾಂಶಗಳನ್ನು ನಿರ್ವಹಿಸುತ್ತಿರುವ ಸಹೋದರರು ಸಮಯವನ್ನು ಮೀರಿಹೋಗುವಲ್ಲಿ, ಅವರಿಗೆ ಖಾಸಗಿ ಸಲಹೆಯನ್ನು ಕೊಡಬೇಕು. ಎಲ್ಲರೂ ತಮ್ಮ ಸಮಯವನ್ನು ಜಾಗರೂಕತೆಯಿಂದ ಗಮನಿಸತಕ್ಕದ್ದು. ಇಡೀ ಕಾರ್ಯಕ್ರಮವು—ಗೀತೆ ಮತ್ತು ಪ್ರಾರ್ಥನೆಯನ್ನು ಬಿಟ್ಟು—45 ನಿಮಿಷಗಳದ್ದಾಗಿರಬೇಕು.
ಸಲಹಾ ಪಟ್ಟಿ: ಪಠ್ಯಪುಸ್ತಕದಲ್ಲಿದೆ.
ಸಹಾಯಕ ಸಲಹೆಗಾರ: ಶಾಲಾ ಮೇಲ್ವಿಚಾರಕನ ಜೊತೆಗೆ, ಒಬ್ಬ ಸಹಾಯಕ ಸಲಹೆಗಾರನೋಪಾದಿ ನೇಮಕವನ್ನು ನಿರ್ವಹಿಸಲಿಕ್ಕಾಗಿ, ಹಿರಿಯರ ಮಂಡಲಿಯು ಒಬ್ಬ ಸಮರ್ಥ ಹಿರಿಯನನ್ನು—ಲಭ್ಯವಿರುವಲ್ಲಿ—ಆಯ್ಕೆಮಾಡಬಹುದು. ಸಭೆಯಲ್ಲಿ ಅನೇಕ ಮಂದಿ ಹಿರಿಯರು ಇರುವುದಾದರೆ, ಪ್ರತಿ ವರ್ಷ ಒಬ್ಬೊಬ್ಬ ಸಮರ್ಥ ಹಿರಿಯನಿಗೆ ಈ ನೇಮಕವನ್ನು ಒಪ್ಪಿಸಬಹುದು. ಸಹಾಯಕ ಸಲಹೆಗಾರನ ಜವಾಬ್ದಾರಿಯು, ನೇಮಕ ನಂಬರ್ 1 ಮತ್ತು ಬೈಬಲ್ ಮುಖ್ಯಾಂಶಗಳನ್ನು ನೀಡುವ ಸಹೋದರರಿಗೆ, ಅಗತ್ಯವಿರುವಲ್ಲಿ ಖಾಸಗಿ ಸಲಹೆಯನ್ನು ಕೊಡುವುದಾಗಿದೆ. ಜೊತೆ ಹಿರಿಯರು ಅಥವಾ ಶುಶ್ರೂಷಾ ಸೇವಕರು ಪ್ರತಿ ಬಾರಿ ಅಂಥ ಭಾಷಣಗಳನ್ನು ಕೊಟ್ಟ ಬಳಿಕ ಅವನು ಸಲಹೆಯನ್ನು ಕೊಡಲೇಬೇಕೆಂದಿಲ್ಲ.
ಮೌಖಿಕ ಪುನರ್ವಿಮರ್ಶೆ: 30 ನಿಮಿಷಗಳು. ಪ್ರತಿ ಎರಡು ತಿಂಗಳಿಗೊಮ್ಮೆ ಶಾಲಾ ಮೇಲ್ವಿಚಾರಕನು ಒಂದು ಮೌಖಿಕ ಪುನರ್ವಿಮರ್ಶೆಯನ್ನು ನಡೆಸುವನು. ಇದಕ್ಕೆ ಮುಂಚೆ, ಮೇಲೆ ವಿವರಿಸಲ್ಪಟ್ಟಿರುವಂಥ ರೀತಿಯಲ್ಲೇ ಭಾಷಣ ಗುಣ ಹಾಗೂ ಬೈಬಲ್ ವಾಚನದ ಮುಖ್ಯಾಂಶಗಳ ಪರಿಗಣನೆ ಇರುವುದು. ಸದ್ಯದ ವಾರವನ್ನೂ ಸೇರಿಸಿ ಹಿಂದಿನ ಎರಡು ತಿಂಗಳುಗಳಲ್ಲಿ ಶಾಲೆಯಲ್ಲಿ ಪರಿಗಣಿಸಲ್ಪಟ್ಟ ವಿಷಯಭಾಗದ ಮೇಲೆ ಮೌಖಿಕ ಪುನರ್ವಿಮರ್ಶೆಯು ಆಧಾರಿತವಾಗಿರುವುದು. ಮೌಖಿಕ ಪುನರ್ವಿಮರ್ಶೆಯು ನಡೆಸಲ್ಪಡಲಿರುವ ವಾರದಲ್ಲಿ ನಿಮ್ಮ ಸಭೆ ಸರ್ಕಿಟ್ ಸಮ್ಮೇಳನಕ್ಕೆ ಹಾಜರಾಗಲಿರುವುದಾದರೆ, ಪುನರ್ವಿಮರ್ಶೆಯನ್ನು (ಹಾಗೂ ಈ ವಾರಕ್ಕೆ ಶೆಡ್ಯೂಲ್ ಮಾಡಲ್ಪಟ್ಟಿರುವ ಎಲ್ಲ ಭಾಗಗಳನ್ನು) ಒಂದು ವಾರ ಮುಂದಕ್ಕೆ ಹಾಕಬೇಕು ಮತ್ತು ಮುಂದಿನ ವಾರಕ್ಕೆ ಶೆಡ್ಯೂಲ್ ಮಾಡಲ್ಪಟ್ಟಿರುವ ಭಾಗಗಳನ್ನು ಈ ವಾರದಲ್ಲಿ ನಿರ್ವಹಿಸಬೇಕು. ಅಥವಾ ಮೌಖಿಕ ಪುನರ್ವಿಮರ್ಶೆಯು ನಡೆಸಲ್ಪಡಲಿರುವ ವಾರದಲ್ಲಿ ಸರ್ಕಿಟ್ ಮೇಲ್ವಿಚಾರಕನು ನಿಮ್ಮ ಸಭೆಯನ್ನು ಸಂದರ್ಶಿಸಲಿಕ್ಕಿರುವುದಾದರೆ, ಆಗ ಗೀತೆ, ಭಾಷಣ ಗುಣ ಮತ್ತು ಬೈಬಲ್ ಮುಖ್ಯಾಂಶಗಳನ್ನು ಶೆಡ್ಯೂಲ್ ಮಾಡಲ್ಪಟ್ಟಿರುವ ರೀತಿಯಲ್ಲೇ ಪ್ರಸ್ತುತಪಡಿಸಬೇಕು. (ಭಾಷಣ ಗುಣದ ನಂತರ ನೀಡಲ್ಪಡುವ) ಉಪದೇಶ ಭಾಷಣವನ್ನು ಮುಂದಿನ ವಾರದ ಶೆಡ್ಯೂಲ್ನಿಂದ ತೆಗೆಯಬೇಕು. ಮುಂದಿನ ವಾರದ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯು, ಶೆಡ್ಯೂಲ್ ಮಾಡಲ್ಪಟ್ಟಿರುವಂತೆ ಭಾಷಣ ಗುಣ ಮತ್ತು ಬೈಬಲ್ ಮುಖ್ಯಾಂಶಗಳೊಂದಿಗೆ ಆರಂಭವಾಗುವುದು ಮತ್ತು ಅದರ ತರುವಾಯ ಮೌಖಿಕ ಪುನರ್ವಿಮರ್ಶೆ ಇರುವುದು.
ಶೆಡ್ಯೂಲ್
ಜನ. 1 ಬೈಬಲ್ ವಾಚನ: ಯೆಶಾಯ 24-28 ಗೀತೆ 33
ಭಾಷಣ ಗುಣ: ವಿಷಯವಸ್ತುವಿನ ಪ್ರಾಯೋಗಿಕ ಅನ್ವಯ (be-KA ಪು. 158 ¶2-4)
ನಂ. 1: ಶಾಲೆಗಾಗಿ ವಿದ್ಯಾರ್ಥಿ ಭಾಷಣಗಳನ್ನು ತಯಾರಿಸುವುದು (be-KA ಪು. 43 ¶1–ಪು. 44 ¶3)
ನಂ. 2: ಯೆಶಾಯ 26:1-18
ನಂ. 3: td-KA 20ಎ ಮಾನವನು ಪೂರ್ವನಿರ್ಧರಿಸಲ್ಪಟ್ಟಿಲ್ಲ
ನಂ. 4: ನಾವು ಹೇಗೆ ‘ಕರ್ತನಾದ ಯೇಸು ಕ್ರಿಸ್ತನನ್ನು ಧರಿಸಿಕೊಳ್ಳ’ಸಾಧ್ಯವಿದೆ? (ರೋಮಾ. 13:14)
ಜನ. 8 ಬೈಬಲ್ ವಾಚನ: ಯೆಶಾಯ 29-33 ಗೀತೆ 42
ಭಾಷಣ ಗುಣ: ಪ್ರಾಯೋಗಿಕ ಮೌಲ್ಯವನ್ನು ಅರ್ಥಮಾಡಿಕೊಳ್ಳುವಂತೆ ಇತರರಿಗೆ ಸಹಾಯಮಾಡುವುದು (be-KA ಪು. 159 ¶1-4)
ನಂ. 1: ವಿಷಯವಸ್ತು ಮತ್ತು ಸನ್ನಿವೇಶ (ಸೆಟಿಂಗ್)ದ ಕುರಿತು ಯೋಚಿಸಿ ತಯಾರಿಸುವುದು (be-KA ಪು. 44 ¶4–ಪು. 46 ¶3)
ನಂ. 2: ಯೆಶಾಯ 30:1-14
ನಂ. 3: td-KA 21ಎ ದೇವರು ಕೇಳುವಂತಹ ಪ್ರಾರ್ಥನೆಗಳು
ನಂ. 4: ಯೆಹೋವ ದೇವರು ಮಕ್ಕಳನ್ನು ಪ್ರೀತಿಸುತ್ತಾನೆಂದು ನಮಗೆ ಹೇಗೆ ತಿಳಿದಿದೆ?
ಜನ. 15 ಬೈಬಲ್ ವಾಚನ: ಯೆಶಾಯ 34-37 ಗೀತೆ 222
ಭಾಷಣ ಗುಣ: ಪದಗಳ ಆಯ್ಕೆ (be-KA ಪು. 160 ¶1-3)
ನಂ. 1: ಒಳ್ಳೇದು ಮತ್ತು ಕೆಟ್ಟದ್ದರ ಕುರಿತು ಯೇಸುವಿಗಿರುವ ನೋಟವನ್ನು ಬೆಳಸಿಕೊಳ್ಳುವ ವಿಧ (w05-KA 1/1 ಪು. 9-10 ¶11-15)
ನಂ. 2: ಯೆಶಾಯ 34:1-15
ನಂ. 3: ನಿಜ ಪ್ರೀತಿಯನ್ನು ಬೆಳೆಸಿಕೊಳ್ಳುವ ವಿಧ
ನಂ. 4: td-KA 21ಬಿ ವ್ಯರ್ಥ ಪುನರುಚ್ಚರಣೆ, ಮರಿಯಳಿಗೆ ಅಥವಾ “ಸಂತರಿಗೆ” ಮಾಡಲ್ಪಡುವ ಪ್ರಾರ್ಥನೆಗಳು ಸಮ್ಮತವಾದದ್ದಲ್ಲ
ಜನ. 22 ಬೈಬಲ್ ವಾಚನ: ಯೆಶಾಯ 38-42 ಗೀತೆ 61
ಭಾಷಣ ಗುಣ: ಸುಲಭವಾಗಿ ಅರ್ಥಮಾಡಿಕೊಳ್ಳಲಾಗುವಂತಹ ಭಾಷೆ (be-KA ಪು. 161 ¶1-4)
ನಂ. 1: ವಿರೋಧದಿಂದ ವಿಚಲಿತನಾಗಲಿಲ್ಲ (w05-KA 1/1 ಪು. 15 ¶16-18)
ನಂ. 2: ಯೆಶಾಯ 38:9-22
ನಂ. 3: td-KA 22ಎ ಪ್ರೇತಾರಾಧನೆಯು ದೆವ್ವಗಳ ಕೆಲಸವೆಂದು ತಿಳಿದು, ಅದರಿಂದ ದೂರವಿರಬೇಕು
ನಂ. 4: ಇತರರ ಉದ್ದೇಶಗಳ ಕುರಿತು ತಪ್ಪಾಗಿ ಮಾತನಾಡುವುದರಿಂದ ದೂರವಿರಬೇಕು ಏಕೆ?
ಜನ. 29 ಬೈಬಲ್ ವಾಚನ: ಯೆಶಾಯ 43-46 ಗೀತೆ 113
ಭಾಷಣ ಗುಣ: ಮಾತುಗಳಲ್ಲಿ ವೈವಿಧ್ಯ ಮತ್ತು ನಿಷ್ಕೃಷ್ಟತೆ (be-KA ಪು. 161 ¶5–ಪು. 162 ¶4)
ನಂ. 1: ನಾವು ಯೆಹೋವನ ನ್ಯಾಯತೀರ್ಪುಗಳನ್ನು ಏಕೆ ಅಂಗೀಕರಿಸಬೇಕು? (w05-KA 2/1 ಪು. 23-4 ¶4-9)
ನಂ. 2: ಯೆಶಾಯ 45:1-14
ನಂ. 3: td-KA 23ಎ ದೇವರ ವಾಕ್ಯವು ದೈವಪ್ರೇರಿತವಾಗಿದೆ
ನಂ. 4: a ಕ್ರೈಸ್ತರು ಸ್ಪರ್ಧಾತ್ಮಕವಾಗಿ ಹೋಲಿಸುವುದನ್ನು ಏಕೆ ತೊರೆಯಬೇಕು?
ಫೆಬ್ರ. 5 ಬೈಬಲ್ ವಾಚನ: ಯೆಶಾಯ 47-51 ಗೀತೆ 79
ಭಾಷಣ ಗುಣ: ಉತ್ಸಾಹ, ಭಾವನೆ, ಕಣ್ಣಿಗೆ ಕಟ್ಟುವಂಥ ರೀತಿಯ ವರ್ಣನೆಯನ್ನು ತಿಳಿಯಪಡಿಸುವ ಪದಗಳು (be-KA ಪು. 163 ¶1–ಪು. 164 ಪ್ಯಾರ 2)
ನಂ. 1: ಯೆಹೋವನ ವಾಕ್ಯವು ನಮ್ಮನ್ನು ಶುದ್ಧರನ್ನಾಗಿ ಇರಿಸುತ್ತದೆ ಮತ್ತು ನಮ್ಮ ನಂಬಿಗಸ್ತಿಕೆಗೆ ಸಹಾಯಕವಾಗಿದೆ (w05-KA 4/15 ಪು. 11-12 ¶5-11)
ನಂ. 2: ಯೆಶಾಯ 50:1-11
ನಂ. 3: td-KA 23ಬಿ ಬೈಬಲ್ ನಮ್ಮ ದಿನಕ್ಕೆ ಒಂದು ಪ್ರಾಯೋಗಿಕ ಮಾರ್ಗದರ್ಶಕವಾಗಿದೆ
ನಂ. 4: ಉಡುಗೊರೆಗಳನ್ನು ಕೊಡುವುದನ್ನು ಬೈಬಲ್ ನಿರುತ್ತೇಜಿಸುತ್ತದೊ?
ಫೆಬ್ರ. 12 ಬೈಬಲ್ ವಾಚನ: ಯೆಶಾಯ 52-57 ಗೀತೆ 139
ಭಾಷಣ ಗುಣ: ವ್ಯಾಕರಣ ನಿಯಮಗಳಿಗೆ ಹೊಂದಿಕೊಳ್ಳುವ ಮಾತು (be-KA ಪು. 164 ¶3–ಪು. 165 ¶1)
ನಂ. 1: ಯೆಹೋವನ ವಾಕ್ಯವು ಧೈರ್ಯ ತುಂಬಿಸುತ್ತದೆ (w05-KA 4/15 ಪು. 13 ¶12-14)
ನಂ. 2: ಯೆಶಾಯ 55:1-13
ನಂ. 3: ಸ್ವತ್ಯಾಗದ ಜೀವನವು ಪ್ರಯೋಜನಕರ
ನಂ. 4: td-KA 23ಬಿ ಬೈಬಲ್ ಸಕಲ ರಾಷ್ಟ್ರ ಮತ್ತು ಕುಲಗಳ ಜನರಿಗಾಗಿ ಬರೆಯಲ್ಪಟ್ಟಿದೆ
ಫೆಬ್ರ. 19 ಬೈಬಲ್ ವಾಚನ: ಯೆಶಾಯ 58-62 ಗೀತೆ 189
ಭಾಷಣ ಗುಣ: ಹೊರಮೇರೆಯ ಉಪಯೋಗ (be-KA ಪು. 166 ¶1–ಪು. 167 ¶2)
ನಂ. 1: ಯೆಶಾಯ—ಪ್ರಯೋಜನಕರವೇಕೆ? (bsi06-KA ಪು. 31-32 ಪ್ಯಾರ. 34-9)
ನಂ. 2: ಯೆಶಾಯ 60:1-14
ನಂ. 3: ದೇವರಿಗೆ ದಾಸರಾಗಿರುವುದು ಹಿತಕರವಾದದ್ದೇಕೆ?
ನಂ. 4: td-KA 24ಎ ಭೂಮಿಗಾಗಿ ದೇವರ ಉದ್ದೇಶ
ಫೆಬ್ರ. 26 ಬೈಬಲ್ ವಾಚನ: ಯೆಶಾಯ 63-66 ಗೀತೆ 141
ಭಾಷಣ ಗುಣ: ನಿಮ್ಮ ಆಲೋಚನೆಗಳನ್ನು ಸಂಘಟಿಸಿರಿ (be-KA ಪು. 167 ¶3–ಪು. 168 ¶2)
ಮೌಖಿಕ ಪುನರ್ವಿಮರ್ಶೆ
ಮಾರ್ಚ್ 5 ಬೈಬಲ್ ವಾಚನ: ಯೆರೆಮೀಯ 1-4 ಗೀತೆ 70
ಭಾಷಣ ಗುಣ: ನಿಮ್ಮ ಭಾಷಣದ ಹೊರಮೇರೆಯನ್ನು ಸರಳವಾಗಿಡಿರಿ (be-KA ಪು. 168 ¶3–ಪು. 169 ¶5)
ನಂ. 1: ಯೆರೆಮೀಯ ಪುಸ್ತಕ ಪರಿಚಯ (bsi07-KA ಪು. 3 ¶1-5)
ನಂ. 2: ಯೆರೆಮೀಯ 3:1-13
ನಂ. 3: ನಿಜ ಸಂತೋಷವು ಯಾವುದರ ಮೇಲೆ ಆಧಾರಿತವಾಗಿದೆ?
ನಂ. 4: td-KA 24ಬಿ ಭೂಮಿ ಎಂದಿಗೂ ನಾಶಗೊಳಿಸಲ್ಪಡುವುದಿಲ್ಲ ಇಲ್ಲವೆ ನಿರ್ಜನಗೊಳಿಸಲ್ಪಡುವುದಿಲ್ಲ
ಮಾರ್ಚ್ 12 ಬೈಬಲ್ ವಾಚನ: ಯೆರೆಮೀಯ 5-7 ಗೀತೆ 159
ಭಾಷಣ ಗುಣ: ಭಾಷಣದ ವಿಷಯಭಾಗವನ್ನು ತರ್ಕಬದ್ಧವಾಗಿ ವಿಕಸಿಸುವುದು (be-KA ಪು. 170 ¶1–ಪು. 171 ¶3)
ನಂ. 1: ಸಭೆಗಾಗಿ ಭಾಷಣಗಳನ್ನು ತಯಾರಿಸುವುದು (be-KA ಪು. 47 ¶1–ಪು. 49 ¶2)
ನಂ. 2: ಯೆರೆಮೀಯ 5:1-14
ನಂ. 3: td-KA 25ಎ ಮರಣದ ಕಾರಣ
ನಂ. 4: ನಮ್ಮ ಸಮಯದಲ್ಲಿ ವಿಮೋಚನಕಾಂಡ 14:11ರ ಪಾಠವನ್ನು ಅನ್ವಯಿಸಿಕೊಳ್ಳುವುದು
ಮಾರ್ಚ್ 19 ಬೈಬಲ್ ವಾಚನ: ಯೆರೆಮೀಯ 8-11 ಗೀತೆ 182
ಭಾಷಣ ಗುಣ: ಮಾಹಿತಿಯನ್ನು ತರ್ಕಬದ್ಧವಾಗಿ ನೀಡುವ ವಿಧ (be-KA ಪು. 171 ¶4–ಪು. 172 ¶6)
ನಂ. 1: ಸೇವಾ ಕೂಟದ ಭಾಗಗಳು ಮತ್ತು ಇತರ ಭಾಷಣಗಳನ್ನು ತಯಾರಿಸುವುದು (be-KA ಪು. 49 ¶3–ಪು. 51 ¶3)
ನಂ. 2: ಯೆರೆಮೀಯ 10:1-16
ನಂ. 3: ಅಬ್ರಹಾಮ, ಯೋಬ ಮತ್ತು ದಾನಿಯೇಲರಿಗೆ ಪುನರುತ್ಥಾನದಲ್ಲಿ ನಂಬಿಕೆಯಿತ್ತೆಂದು ನಮಗೆ ಹೇಗೆ ತಿಳಿದಿದೆ?
ನಂ. 4: td-KA 25ಬಿ ಸತ್ತವರ ಸ್ಥಿತಿ
ಮಾರ್ಚ್ 26 ಬೈಬಲ್ ವಾಚನ: ಯೆರೆಮೀಯ 12-16 ಗೀತೆ 205
ಭಾಷಣ ಗುಣ: ಸಂಬಂಧಪಟ್ಟ ವಿಷಯಗಳನ್ನು ಮಾತ್ರ ಉಪಯೋಗಿಸುವುದು (be-KA ಪು. 173 ¶1-4)
ನಂ. 1: ವಿಮೋಚನಾ ಮೌಲ್ಯವು ದೇವರ ನೀತಿಯನ್ನು ಎತ್ತಿಹಿಡಿಯುತ್ತದೆ (w05-KA 11/1 ಪು. 13-14)
ನಂ. 2: ಯೆರೆಮೀಯ 12:1-13
ನಂ. 3: td-KA 25ಸಿ ಸತ್ತವರೊಂದಿಗೆ ಮಾತಾಡುವುದು ಅಸಾಧ್ಯ
ನಂ. 4: ಯಾವ ವಿಧದಲ್ಲಿ ಒಬ್ಬ ಕ್ರೈಸ್ತನು ಹೆಮ್ಮೆಪಡಬೇಕು?
ಏಪ್ರಿ. 2 ಬೈಬಲ್ ವಾಚನ: ಯೆರೆಮೀಯ 17-21 ಗೀತೆ 30
ಭಾಷಣ ಗುಣ: ಆಶುಭಾಷಣ ಮಾಡುವುದು (be-KA ಪು. 174 ¶1–ಪು. 175 ¶5)
ನಂ. 1: ಸಾರ್ವಜನಿಕರಿಗಾಗಿ ಕೊಡುವ ಭಾಷಣಗಳನ್ನು ತಯಾರಿಸುವುದು (be-KA ಪು. 52 ¶1–ಪು. 54 ¶1)
ನಂ. 2: ಯೆರೆಮೀಯ 20:1-13
ನಂ. 3: td-KA 26ಎ ಮರಿಯಳು ಯೇಸುವಿನ ತಾಯಿ, “ದೇವರ ತಾಯಿ” ಅಲ್ಲ
ನಂ. 4:: b ಸಲಹೆಗಳನ್ನು ನಾವು ಹೇಗೆ ವೀಕ್ಷಿಸಬೇಕು?
ಏಪ್ರಿ. 9 ಬೈಬಲ್ ವಾಚನ: ಯೆರೆಮೀಯ 22-24 ಗೀತೆ 184
ಭಾಷಣ ಗುಣ: ಆಶುಭಾಷಣ ಮಾಡುವಾಗ ಎದುರಾಗುವಂಥ ಅಪಾಯಗಳಿಂದ ತಪ್ಪಿಸಿಕೊಳ್ಳಿರಿ (be-KA ಪು. 176 ¶1–ಪು. 177 ¶2)
ನಂ. 1: ಭಾಷಣಕಾರನ ನಿರ್ಣಯಗಳು (be-KA ಪು. 54 ¶2-4; ಪು. 55, ಚೌಕ)
ನಂ. 2: ಯೆರೆಮೀಯ 23:1-14
ನಂ. 3: ಕ್ರೈಸ್ತ ಶುಶ್ರೂಷೆಯಲ್ಲಿ ಭಾಗವಹಿಸುವುದು ನಮಗೆ ಸಂತೋಷವನ್ನು ತರುತ್ತದೇಕೆ?
ನಂ. 4: td-KA 26ಬಿ ಮರಿಯಳು “ಯಾವಾಗಲೂ ಕನ್ಯೆ”ಯಾಗಿಯೇ ಇರಲಿಲ್ಲ
ಏಪ್ರಿ. 16 ಬೈಬಲ್ ವಾಚನ: ಯೆರೆಮೀಯ 25-28 ಗೀತೆ 27
ಭಾಷಣ ಗುಣ: ಇತರರು ವಿವರಣೆಯನ್ನು ಕೊಡುವಂತೆ ಒತ್ತಾಯಿಸುವಾಗ (be-KA ಪು. 177 ¶3–ಪು. 178 ¶3)
ನಂ. 1: ಬೋಧಕರಾಗುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಿರಿ (be-KA ಪು. 56 ¶1–ಪು. 57 ¶2)
ನಂ. 2: ಯೆರೆಮೀಯ 26:1-15
ನಂ. 3: td-KA 27ಎ ಇತರ ಧರ್ಮಗಳೊಂದಿಗೆ ಸೇರುವುದು ದೇವರ ಮಾರ್ಗವಲ್ಲ
ನಂ. 4: ಯಾವ ವಿಧದಲ್ಲಿ ಭೂಮಿಗೆ ಶಾಪಬಂತು? (ಆದಿ. 3:17)
ಏಪ್ರಿ. 23 ಬೈಬಲ್ ವಾಚನ: ಯೆರೆಮೀಯ 29-31 ಗೀತೆ 148
ಭಾಷಣ ಗುಣ: ಸಂಭಾಷಣಾ ರೀತಿ (be-KA ಪು. 179-80)
ನಂ. 1: ‘ವಿವೇಚಿಸುವುದು’ (be-KA ಪು. 57 ¶3–ಪು. 58 ¶2)
ನಂ. 2: ಯೆರೆಮೀಯ 31:1-14
ನಂ. 3: ಯೆಹೋವನ ಮಹತ್ತು ಅಪಾರವಾದದ್ದು ಏಕೆ?
ನಂ. 4: td-KA 27ಬಿ “ಎಲ್ಲಾ ಧರ್ಮಗಳಲ್ಲಿ ಒಳ್ಳೇದಿದೆ” ಎಂಬುದು ನಿಜವಲ್ಲ
ಏಪ್ರಿಲ್ 30 ಬೈಬಲ್ ವಾಚನ: ಯೆರೆಮೀಯ 32-34 ಗೀತೆ 100
ಭಾಷಣ ಗುಣ: ಸ್ವರದ ಗುಣಮಟ್ಟ (be-KA ಪು. 181 ¶1-4)
ಮೌಖಿಕ ಪುನರ್ವಿಮರ್ಶೆ
ಮೇ 7 ಬೈಬಲ್ ವಾಚನ: ಯೆರೆಮೀಯ 35-38 ಗೀತೆ 165
ಭಾಷಣ ಗುಣ: ನಿಮ್ಮ ಉಸಿರಾಟವನ್ನು ಸರಿಯಾಗಿ ನಿಯಂತ್ರಿಸಿರಿ (be-KA ಪು. 181 ¶5–ಪು. 184 ¶1; ಪು. 182, ಚೌಕ)
ನಂ. 1: ಕಿವಿಗೊಡುವವರು ಯೋಚಿಸುವಂತೆ ಪ್ರೋತ್ಸಾಹಿಸಿ (be-KA ಪು. 58 ¶3–ಪು. 59 ¶3)
ನಂ. 2: ಯೆರೆಮೀಯ 36:1-13
ನಂ. 3: td-KA 28ಎ ದೇವರ ಹೆಸರು
ನಂ. 4: ಕ್ರೈಸ್ತರು ಅನಿಶ್ಚಿತತೆಯನ್ನು ಹೇಗೆ ನಿಭಾಯಿಸಬಲ್ಲರು?
ಮೇ 14 ಬೈಬಲ್ ವಾಚನ: ಯೆರೆಮೀಯ 39-43 ಗೀತೆ 56
ಭಾಷಣ ಗುಣ: ಬಿಗಿಯಾಗಿರುವ ಸ್ನಾಯುಗಳನ್ನು ಸಡಿಲಿಸುವುದು (be-KA ಪು. 184 ¶2–ಪು. 185 ¶3; ಪು. 184, ಚೌಕ)
ನಂ. 1: ಅನ್ವಯವನ್ನು ಒದಗಿಸಿರಿ ಮತ್ತು ಒಳ್ಳೆಯ ಮಾದರಿಯನ್ನಿಡಿ (be-KA ಪು. 60 ¶1–ಪು. 61 ¶2)
ನಂ. 2: ಯೆರೆಮೀಯ 39:1-14
ನಂ. 3: td-KA 28ಬಿ ದೇವರ ಅಸ್ತಿತ್ವ
ನಂ. 4: c ನಿಜ ಕ್ರೈಸ್ತರು ಪ್ರೇಮಯಾಚನೆ ಮಾಡುವಾಗ ನೈತಿಕವಾಗಿ ಪರಿಶುದ್ಧರಾಗಿರಬೇಕು ಏಕೆ?
ಮೇ 21 ಬೈಬಲ್ ವಾಚನ: ಯೆರೆಮೀಯ 44-48 ಗೀತೆ 122
ಭಾಷಣ ಗುಣ: ಇತರರಲ್ಲಿ ಆಸಕ್ತಿಯನ್ನು ತೋರಿಸುವುದು (be-KA ಪು. 186 ¶1-4)
ನಂ. 1: ಸಂಭಾಷಣಾ ಕೌಶಲಗಳನ್ನು ಉತ್ತಮಗೊಳಿಸುವ ವಿಧ (be-KA ಪು. 62 ¶1–ಪು. 64 ¶1)
ನಂ. 2: ಯೆರೆಮೀಯ 46:1-17
ನಂ. 3: ಆತ್ಮವಂಚನೆ ಎಂದರೇನು ಮತ್ತು ಅದರಿಂದ ನಮ್ಮನ್ನು ಹೇಗೆ ಕಾಪಾಡಿಕೊಳ್ಳಸಾಧ್ಯವಿದೆ?
ನಂ. 4: ಪ್ರಕಟನೆ ಪುಸ್ತಕದಲ್ಲಿರುವ ಬಾಬೆಲ್ ಅನ್ನು ಗುರುತಿಸುವುದು
ಮೇ 28 ಬೈಬಲ್ ವಾಚನ: ಯೆರೆಮೀಯ 49-50 ಗೀತೆ 95
ಭಾಷಣ ಗುಣ: ಗಮನಕೊಟ್ಟು ಆಲಿಸಿರಿ (be-KA ಪು. 186 ¶1-ಪು.187 ¶4)
ನಂ. 1: ಸಂಭಾಷಣೆಯನ್ನು ಮುಂದುವರಿಸುವ ವಿಧ (be-KA ಪು. 64 ¶2–ಪು. 65 ¶4)
ನಂ. 2: ಯೆರೆಮೀಯ 49:14-27
ನಂ. 3: td-KA 28ಸಿ ದೇವರ ಗುಣಲಕ್ಷಣಗಳು
ನಂ. 4: ಹೆತ್ತವರು ಮಕ್ಕಳಿಗೆ ಓದಿ ಹೇಳಬೇಕು ಏಕೆ?
ಜೂನ್ 4 ಬೈಬಲ್ ವಾಚನ: ಯೆರೆಮೀಯ 51-52 ಗೀತೆ 166
ಭಾಷಣ ಗುಣ: ಪ್ರಗತಿಯನ್ನು ಮಾಡಲು ಇತರರಿಗೆ ಸಹಾಯಮಾಡಿರಿ (be-KA ಪು. 187 ¶5–ಪು. 188 ¶3)
ನಂ. 1: ಯೆರೆಮೀಯ—ಪ್ರಯೋಜನಕರವೇಕೆ? (bsi07-KA ಪು. 3-4 ¶36-9)
ನಂ. 2: ಯೆರೆಮೀಯ 52:1-16
ನಂ. 3: ದೇವರಿಂದ ಸ್ವತಂತ್ರರಾಗ ಬಯಸುವುದು ಬುದ್ಧಿಹೀನತೆಯಾಗಿದೆ
ನಂ. 4: td-KA 28ಡಿ ಎಲ್ಲರೂ ಯೆಹೋವನನ್ನೇ ಆರಾಧಿಸುತ್ತಿಲ್ಲ
ಜೂನ್ 11 ಬೈಬಲ್ ವಾಚನ: ಪ್ರಲಾಪಗಳು 1-2 ಗೀತೆ 129
ಭಾಷಣ ಗುಣ: ಪ್ರಾಯೋಗಿಕ ಸಹಾಯವನ್ನು ನೀಡಿರಿ (be-KA ಪು. 188 ¶4–ಪು. 189 ¶4)
ನಂ. 1: ಪ್ರಲಾಪಗಳು ಪುಸ್ತಕ ಪರಿಚಯ (bsi07-KA ಪು. 4-5 ¶1-7)
ನಂ. 2: ಪ್ರಲಾಪಗಳು 2:1-10
ನಂ. 3: td-KA 29ಎ ಯೆಹೋವನ ಸಾಕ್ಷಿಗಳ ಆರಂಭ
ನಂ. 4: ಪ್ರಾಮಾಣಿಕ ದಯೆಯು ಬಲಹೀನತೆಯಲ್ಲವೇಕೆ?
ಜೂನ್ 18 ಬೈಬಲ್ ವಾಚನ: ಪ್ರಲಾಪಗಳು 3-5 ಗೀತೆ 140
ಭಾಷಣ ಗುಣ: ಇತರರಿಗೆ ತೋರಿಸಲ್ಪಡುವ ಗೌರವ (be-KA ಪು. 190 ¶1-ಪು. 191 ¶1)
ನಂ. 1: ಪ್ರಲಾಪಗಳು—ಪ್ರಯೋಜನಕರವೇಕೆ? (bsi07-KA ಪು. 5-6 ¶13-15)
ನಂ. 2: ಪ್ರಲಾಪಗಳು 4:1-13
ನಂ. 3: td-KA 30ಎ ಯೇಸು ದೇವರ ಮಗನೂ ನೇಮಿತ ಅರಸನೂ ಆಗಿದ್ದಾನೆ
ನಂ. 4: d ನಿಜ ಕ್ರೈಸ್ತರು ರಾಜಕೀಯದಲ್ಲಿ ಭಾಗವಹಿಸದಿರುವುದಕ್ಕೆ ಕಾರಣ
ಜೂನ್ 25 ಬೈಬಲ್ ವಾಚನ: ಯೆಹೆಜ್ಕೇಲ 1-5 ಗೀತೆ 1
ಭಾಷಣ ಗುಣ: ಗೌರವಯುತವಾದ ಮನ್ನಣೆ (be-KA ಪು. 191 ¶2–ಪು. 192 ¶1)
ಮೌಖಿಕ ಪುನರ್ವಿಮರ್ಶೆ
ಜುಲೈ 2 ಬೈಬಲ್ ವಾಚನ: ಯೆಹೆಜ್ಕೇಲ 6-10 ಗೀತೆ 26
ಭಾಷಣ ಗುಣ: ಗೌರವಯುತವಾದ ಭಾಷಣ ನೀಡುವಿಕೆ (be-KA ಪು. 192 ¶2–ಪು. 193 ¶2)
ನಂ. 1: ಯೆಹೆಜ್ಕೇಲ ಪುಸ್ತಕ ಪರಿಚಯ (bsi07-KA ಪು. 6-7 ¶1-6)
ನಂ. 2: ಯೆಹೆಜ್ಕೇಲ 7:1-13
ನಂ. 3: ಯೆಹೋವನ ಸಮೀಪಕ್ಕೆ ಬರಲು ಆವಶ್ಯಕವಾದ ಹೆಜ್ಜೆಗಳು (ಯಾಕೋ. 4:8)
ನಂ. 4: td-KA 30ಬಿ ರಕ್ಷಣೆಗಾಗಿ ಯೇಸುವಿನಲ್ಲಿ ನಂಬಿಕೆಯನ್ನಿಡುವುದು ಆವಶ್ಯಕ
ಜುಲೈ 9 ಬೈಬಲ್ ವಾಚನ: ಯೆಹೆಜ್ಕೇಲ 11-14 ಗೀತೆ 112
ಭಾಷಣ ಗುಣ: ನಿಶ್ಚಿತಾಭಿಪ್ರಾಯದಿಂದ ಮಾತಾಡುವುದು (be-KA ಪು. 194 ¶1–ಪು. 195 ¶2)
ನಂ. 1: ಒಳ್ಳೇದನ್ನು ಮಾಡುವದರಲ್ಲಿ ಬೇಸರಗೊಳ್ಳದೆ ಇರಿ (w05-KA 6/1 ಪು. 29-30)
ನಂ. 2: ಯೆಹೆಜ್ಕೇಲ 11:1-13
ನಂ. 3: td-KA 30ಸಿ ಯೇಸುವಿನಲ್ಲಿ ನಂಬಿಕೆಯಿಡುವುದಕ್ಕಿಂತಲೂ ಹೆಚ್ಚಿನದರ ಅಗತ್ಯವಿದೆ
ನಂ. 4: ಪ್ರಕಟನೆ 17:9-11ನ್ನು ನಾವು ಹೇಗೆ ಅರ್ಥಮಾಡಿಕೊಂಡಿದ್ದೇವೆ?
ಜುಲೈ 16 ಬೈಬಲ್ ವಾಚನ: ಯೆಹೆಜ್ಕೇಲ 15-17 ಗೀತೆ 29
ಭಾಷಣ ಗುಣ: ನಿಶ್ಚಿತಾಭಿಪ್ರಾಯವು ತೋರಿಬರುವ ವಿಧ (be-KA ಪು. 195 ¶3–ಪು. 196 ¶4)
ನಂ. 1: ತಪ್ಪು ಆಲೋಚನೆಗಳನ್ನು ಪ್ರತಿರೋಧಿಸಿರಿ! (w05-KA 9/15 ಪು. 26-8)
ನಂ. 2: ಯೆಹೆಜ್ಕೇಲ 16:1-13
ನಂ. 3: ಜಾಣನಾಗಿರುವುದು ಅಂದರೇನು? (ಜ್ಞಾನೋ. 13:16)
ನಂ. 4: td-KA 31ಎ ರಕ್ತಪೂರಣಗಳು ರಕ್ತದ ಪಾವಿತ್ರ್ಯತೆಯನ್ನು ಉಲ್ಲಂಘಿಸುತ್ತವೆ
ಜುಲೈ 23 ಬೈಬಲ್ ವಾಚನ: ಯೆಹೆಜ್ಕೇಲ 18-20 ಗೀತೆ 193
ಭಾಷಣ ಗುಣ: ಸಮಯೋಚಿತ ಜಾಣ್ಮೆ ಮತ್ತು ದೃಢತೆ (be-KA ಪು. 197 ¶1-3)
ನಂ. 1: ಪ್ರಶ್ನಿಸುವವನ ದೃಷ್ಟಿಕೋನವನ್ನು ವಿವೇಚಿಸಿ (be-KA ಪು. 66 ¶1–ಪು. 68 ¶1)
ನಂ. 2: ಯೆಹೆಜ್ಕೇಲ 18:19-29
ನಂ. 3: td-KA 31ಬಿ ಜೀವವನ್ನು ಉಳಿಸಲಿಕ್ಕಾಗಿ ದೇವರ ನಿಯಮವನ್ನು ಮುರಿಯುವುದು ನ್ಯಾಯವಾದದ್ದಲ್ಲ
ನಂ. 4: ದೇವರ ರಾಜ್ಯವು ನೈಜವಾಗಿದೆ ಎಂಬುದಕ್ಕೆ ರುಜುವಾತು
ಜುಲೈ 30 ಬೈಬಲ್ ವಾಚನ: ಯೆಹೆಜ್ಕೇಲ 21-23 ಗೀತೆ 35
ಭಾಷಣ ಗುಣ: ಸಾಕ್ಷಿ ನೀಡುತ್ತಿರುವಾಗ ಸಮಯೋಚಿತ ಜಾಣ್ಮೆ (be-KA ಪು. 197 ¶4–ಪು. 199 ¶1)
ನಂ. 1: ನೀವು ಉತ್ತರ ಕೊಡಬೇಕಾದ ರೀತಿಯನ್ನು ತಿಳಿದುಕೊಳ್ಳಿರಿ (be-KA ಪು. 68 ¶2–ಪು. 70 ¶3)
ನಂ. 2: ಯೆಹೆಜ್ಕೇಲ 23:1-17
ನಂ. 3: td-KA 32ಎ ಯೇಸುವಿನ ವಿಮೋಚನ ಯಜ್ಞದ ಮೂಲಕ ದೇವರಿಂದ ರಕ್ಷಣೆ
ನಂ. 4: ದೊಡ್ಡತನದ ಕುರಿತಾದ ಯೋಗ್ಯ ನೋಟವೇನು?
ಆಗ. 6 ಬೈಬಲ್ ವಾಚನ: ಯೆಹೆಜ್ಕೇಲ 24-27 ಗೀತೆ 37
ಭಾಷಣ ಗುಣ: ಸಮಯೋಚಿತ ಮಾತು (be-KA ಪು. 199 ¶2-ಪು. 200 ¶1)
ನಂ. 1: ಪತ್ರಗಳ ಮೂಲಕ ಸಂವಾದಿಸುವುದು (be-KA ಪು. 71-3)
ನಂ. 2: ಯೆಹೆಜ್ಕೇಲ 24:1-14
ನಂ. 3: ಮೋಶೆ ಯಾವ ರೀತಿಯಲ್ಲಿ ಕ್ರೈಸ್ತರಿಗೆ ಅತ್ಯುತ್ತಮ ಮಾದರಿಯಾಗಿದ್ದಾನೆ?
ನಂ. 4: td-KA 32ಬಿ “ಒಮ್ಮೆ ರಕ್ಷಿಸಲ್ಪಟ್ಟೆವೆಂದರೆ, ಯಾವಾಗಲೂ ರಕ್ಷಿಸಲ್ಪಟ್ಟಿದ್ದೇವೆ” ಎಂಬುದು ಶಾಸ್ತ್ರೀಯವಲ್ಲ
ಆಗ. 13 ಬೈಬಲ್ ವಾಚನ: ಯೆಹೆಜ್ಕೇಲ 28-31 ಗೀತೆ 123
ಭಾಷಣ ಗುಣ: ಕುಟುಂಬದಲ್ಲಿ ಮತ್ತು ಇತರರೊಂದಿಗೆ ಸಮಯೋಚಿತ ಜಾಣ್ಮೆಯನ್ನು ತೋರಿಸುವುದು (be-KA ಪು. 200 ¶2-ಪು. 201 ¶1)
ನಂ. 1: ಪ್ರಗತಿಪರರಾಗಿರಿ—ಅಭಿವೃದ್ಧಿಮಾಡಿರಿ (be-KA ಪು. 74 ¶1–ಪು. 75 ¶3)
ನಂ. 2: ಯೆಹೆಜ್ಕೇಲ 28:1-16
ನಂ. 3: td-KA 32ಸಿ “ಸಾರ್ವತ್ರಿಕ ರಕ್ಷಣೆಯು” ಅಶಾಸ್ತ್ರೀಯವಾಗಿದೆ
ನಂ. 4: ಶಾಸ್ತ್ರವಚನಗಳಲ್ಲಿ ತಿಳಿಸಲ್ಪಟ್ಟಿರುವ “ದ್ವೇಷ”ದ ಅರ್ಥವೇನು?
ಆಗ. 20 ಬೈಬಲ್ ವಾಚನ: ಯೆಹೆಜ್ಕೇಲ 32-34 ಗೀತೆ 215
ಭಾಷಣ ಗುಣ: ಆತ್ಮೋನ್ನತಿ ಮಾಡುವುದು ಮತ್ತು ಸಕಾರಾತ್ಮಕವಾಗಿ ಮಾತಾಡುವುದು (be-KA ಪು. 202 ¶1–ಪು. 203 ¶2)
ನಂ. 1: ನಿಮ್ಮಲ್ಲಿರುವ ವರದಾನವನ್ನು ಉಪಯೋಗಿಸಿರಿ (be-KA ಪು. 75 ¶4–ಪು. 77 ¶3)
ನಂ. 2: ಯೆಹೆಜ್ಕೇಲ 34:1-14
ನಂ. 3: ದೇವರಾತ್ಮವು ನಮಗೆ ಹೇಗೆ ಸಹಾಯಮಾಡುತ್ತದೆ?
ನಂ. 4: td-KA 33ಎ ಜನ್ಮದಿನಗಳನ್ನು, ಕ್ರಿಸ್ಮಸನ್ನು ಆದಿಕ್ರೈಸ್ತರು ಆಚರಿಸಲಿಲ್ಲ
ಆಗ. 27 ಬೈಬಲ್ ವಾಚನ: ಯೆಹೆಜ್ಕೇಲ 35-38 ಗೀತೆ 94
ಭಾಷಣ ಗುಣ: ನಿಮ್ಮ ವಾಕ್ಶೈಲಿಯನ್ನು ಸಕಾರಾತ್ಮಕವಾಗಿಡಿರಿ (be-KA ಪು. 203 ¶3–ಪು. 204 ¶1)
ಮೌಖಿಕ ಪುನರ್ವಿಮರ್ಶೆ
ಸೆಪ್ಟೆಂ. 3 ಬೈಬಲ್ ವಾಚನ: ಯೆಹೆಜ್ಕೇಲ 39-41 ಗೀತೆ 194
ಭಾಷಣ ಗುಣ: ಜೊತೆವಿಶ್ವಾಸಿಗಳೊಂದಿಗೆ ಸಂಭಾಷಿಸುವಾಗ (be-KA ಪು. 204 ¶2–ಪು. 205 ¶4)
ನಂ. 1: ದೇವರ ವಾಕ್ಯದಲ್ಲಿ ಆನಂದಿಸಬೇಕು ಏಕೆ? (w05-KA 4/15 ಪು. 15-16 ¶3-6)
ನಂ. 2: ಯೆಹೆಜ್ಕೇಲ 40:1-15
ನಂ. 3: ಮಾನವರು ನಿಜವಾಗಿಯೂ ದೇವರನ್ನು ಸಂತೋಷಪಡಿಸಬಲ್ಲರೊ?
ನಂ. 4: td-KA 34ಎ ದೇವರ ರಾಜ್ಯವು ಮಾನವಕುಲಕ್ಕೆ ಯಾವ ಪ್ರಯೋಜನಗಳನ್ನು ತರಲಿದೆ?
ಸೆಪ್ಟೆಂ. 10 ಬೈಬಲ್ ವಾಚನ: ಯೆಹೆಜ್ಕೇಲ 42-45 ಗೀತೆ 77
ಭಾಷಣ ಗುಣ: ಒತ್ತಿಹೇಳಲಿಕ್ಕಾಗಿ ಪುನರಾವರ್ತಿಸುವುದು (be-KA ಪು. 206 ¶1-4)
ನಂ. 1: ವೃದ್ಧಾಪ್ಯವು “ಸುಂದರ ಕಿರೀಟ”ವಾಗಿ ಪರಿಣಮಿಸುವಾಗ (w05-KA 1/15 ಪು. 8-9)
ನಂ. 2: ಯೆಹೆಜ್ಕೇಲ 43:1-12
ನಂ. 3: td-KA ಕ್ರಿಸ್ತನ ವೈರಿಗಳು ಇನ್ನೂ ಕ್ರಿಯಾಶೀಲವಾಗಿರುವಾಗಲೇ ದೇವರ ರಾಜ್ಯದ ಕಾರ್ಯಾಚರಣೆಯು ಆರಂಭವಾಗುತ್ತದೆ
ನಂ. 4: e “ಅನ್ಯರ ಸ್ವರವನ್ನು” ನಾವು ಹೇಗೆ ಗುರುತಿಸಸಾಧ್ಯವಿದೆ? (ಯೋಹಾ. 10:5)
ಸೆಪ್ಟೆಂ. 17 ಬೈಬಲ್ ವಾಚನ: ಯೆಹೆಜ್ಕೇಲ 46-48 ಗೀತೆ 164
ಭಾಷಣ ಗುಣ: ಕ್ಷೇತ್ರ ಶುಶ್ರೂಷೆಯಲ್ಲಿ ಮತ್ತು ಭಾಷಣಗಳನ್ನು ಕೊಡುವಾಗ ಪುನರಾವರ್ತಿಸುವುದು (be-KA ಪು. 207 ¶1–ಪು. 208 ¶3)
ನಂ. 1: ಯೆಹೆಜ್ಕೇಲ—ಪ್ರಯೋಜನಕರವೇಕೆ? (bsi07-KA ಪು. 7-8 ¶29-33)
ನಂ. 2: ಯೆಹೆಜ್ಕೇಲ 47:1-14
ನಂ. 3: td-KA 34ಸಿ ದೇವರ ರಾಜ್ಯವು ‘ಹೃದಯದಲ್ಲಿ’ ಇಲ್ಲ ಮತ್ತು ಮಾನವರ ಪ್ರಯತ್ನಗಳಿಂದ ಬರುವುದಿಲ್ಲ
ನಂ. 4:: f ಸಮೃದ್ಧ ಆಧ್ಯಾತ್ಮಿಕ ಪರಂಪರೆಯೇ ಹೆತ್ತವರು ತಮ್ಮ ಮಕ್ಕಳಿಗೆ ಕೊಡಸಾಧ್ಯವಿರುವ ಅತ್ಯುತ್ತಮ ಉಡುಗೊರೆಯಾಗಿದೆ ಏಕೆ?
ಸೆಪ್ಟೆಂ. 24 ಬೈಬಲ್ ವಾಚನ: ದಾನಿಯೇಲ 1-3 ಗೀತೆ 179
ಭಾಷಣ ಗುಣ: ಮುಖ್ಯ ವಿಷಯವನ್ನು ವಿಕಸಿಸುವುದು (be-KA ಪು. 209 ¶1-3)
ನಂ. 1: ದಾನಿಯೇಲ ಪುಸ್ತಕ ಪರಿಚಯ (bsi07-KA ಪು. 8-9 ¶1-6)
ನಂ. 2: ದಾನಿಯೇಲ 2:1-16
ನಂ. 3: ನಾವು 1,44,000 ಸಂಖ್ಯೆಯನ್ನು ಅಕ್ಷರಶಃವಾಗಿ ತೆಗೆದುಕೊಳ್ಳುವುದೇಕೆ? (ಪ್ರಕ. 7:4)
ನಂ. 4: td-KA 35ಎ ಆಧ್ಯಾತ್ಮಿಕ ವಾಸಿಮಾಡುವಿಕೆಯಲ್ಲಿ ಶಾಶ್ವತ ಪ್ರಯೋಜನಗಳಿವೆ
ಅಕ್ಟೋ. 1 ಬೈಬಲ್ ವಾಚನ: ದಾನಿಯೇಲ 4-6 ಗೀತೆ 14
ಭಾಷಣ ಗುಣ: ಸೂಕ್ತವಾದ ಮುಖ್ಯ ವಿಷಯವನ್ನು ಉಪಯೋಗಿಸುವುದು (be-KA ಪು. 210 ¶1–ಪು. 211 ¶1; ಪು. 211, ಚೌಕ)
ನಂ. 1: ಕೋಪಗೊಳ್ಳಲು ಸಾಧಾರವಿರುವುದು ಯಾವಾಗ? (w05-KA 8/1 ಪು. 13-15)
ನಂ. 2: ದಾನಿಯೇಲ 4:1-17
ನಂ. 3: ಮೆಫೀಬೋಶೆತನ ಉತ್ತಮ ಗುಣಗಳನ್ನು ನಾವು ಹೇಗೆ ಅನುಕರಿಸಬಲ್ಲೆವು?
ನಂ. 4: td-KA 35ಬಿ ದೇವರ ರಾಜ್ಯವು ಶಾರೀರಿಕ ರೋಗಗಳನ್ನು ಶಾಶ್ವತವಾಗಿ ಗುಣಪಡಿಸುವುದು
ಅಕ್ಟೋ. 8 ಬೈಬಲ್ ವಾಚನ: ದಾನಿಯೇಲ 7-9 ಗೀತೆ 34
ಭಾಷಣ ಗುಣ: ಮುಖ್ಯಾಂಶಗಳನ್ನು ಎದ್ದುಕಾಣುವಂತೆ ಮಾಡುವುದು (be-KA ಪು. 212 ¶1–ಪು. 213 ¶1)
ನಂ. 1: ಯೆಹೋವನ “ವಚನವು” ನಿಮ್ಮನ್ನು ಕಾಯಲಿ (w05-KA 9/1 ಪು. 28-31)
ನಂ. 2: ದಾನಿಯೇಲ 7:1-12
ನಂ. 3: td-KA 35ಸಿ ಆಧುನಿಕ ದಿನದ ನಂಬಿಕೆಯ ವಾಸಿಮಾಡುವಿಕೆಯಲ್ಲಿ ದೈವಿಕ ಅನುಗ್ರಹವಿರುವುದಿಲ್ಲ
ನಂ. 4: ಕ್ಷೇತ್ರ ಶುಶ್ರೂಷೆಯಲ್ಲಿ ಕ್ರಮವಾಗಿ ಭಾಗವಹಿಸುವುದರಿಂದ ದೊರೆಯುವ ವಿಶೇಷ ಆನಂದಗಳು ಯಾವುವು?
ಅಕ್ಟೋ. 15 ಬೈಬಲ್ ವಾಚನ: ದಾನಿಯೇಲ 10-12 ಗೀತೆ 210
ಭಾಷಣ ಗುಣ: ತೀರ ಹೆಚ್ಚು ಮುಖ್ಯಾಂಶಗಳನ್ನು ಉಪಯೋಗಿಸಬೇಡಿ (be-KA ಪು. 213 ¶2–ಪು. 214 ¶5)
ನಂ. 1: ದಾನಿಯೇಲ—ಪ್ರಯೋಜನಕರವೇಕೆ? (bsi07-KA ಪು. 9-10 ¶19-23)
ನಂ. 2: ದಾನಿಯೇಲ 11:1-14
ನಂ. 3: ತಪ್ಪಭಿಪ್ರಾಯಗಳನ್ನು ಜಯಿಸಲು ದೀನಭಾವವು ನಮಗೆ ಹೇಗೆ ಸಹಾಯಮಾಡಬಲ್ಲದು?
ನಂ. 4: td-KA 35ಡಿ ವಿವಿಧ ಭಾಷೆಗಳಲ್ಲಿ ಮಾತಾಡುವುದು ಕೇವಲ ಒಂದು ತಾತ್ಕಾಲಿಕ ಒದಗಿಸುವಿಕೆ
ಅಕ್ಟೋ. 22 ಬೈಬಲ್ ವಾಚನ: ಹೋಶೇಯ 1-7 ಗೀತೆ 66
ಭಾಷಣ ಗುಣ: ಆಸಕ್ತಿಯನ್ನು ಕೆರಳಿಸುವಂಥ ಪೀಠಿಕೆ (be-KA ಪು. 215 ¶1–ಪು. 216 ¶5)
ನಂ. 1: ಹೋಶೇಯ ಪುಸ್ತಕ ಪರಿಚಯ ಮತ್ತು ಪ್ರಯೋಜನಕರವೇಕೆ? (bsi07-KA ಪು. 11-12 ¶1-8, 14-17)
ನಂ. 2: ಹೋಶೇಯ 5:1-15
ನಂ. 3: td-KA 36ಎ ಆರಾಧನೆಯಲ್ಲಿ ವಿಗ್ರಹಗಳ, ಮೂರ್ತಿಗಳ ಉಪಯೋಗವು ದೇವರಿಗೆ ನಿಂದೆಯನ್ನು ತರುತ್ತದೆ
ನಂ. 4: ಸತ್ಯ ಕ್ರೈಸ್ತರು ತಾಳ್ಮೆಯನ್ನು ತೋರಿಸುವ ವಿಧಗಳು
ಅಕ್ಟೋ. 29 ಬೈಬಲ್ ವಾಚನ: ಹೋಶೇಯ 8-14 ಗೀತೆ 59
ಭಾಷಣ ಗುಣ: ಕ್ಷೇತ್ರಸೇವೆಯಲ್ಲಿ ಜನರ ಗಮನ ಸೆಳೆಯುವುದು (be-KA ಪು. 217 ¶1-4)
ಮೌಖಿಕ ಪುನರ್ವಿಮರ್ಶೆ
ನವೆಂ. 5 ಬೈಬಲ್ ವಾಚನ: ಯೋವೇಲ 1-3 ಗೀತೆ 166
ಭಾಷಣ ಗುಣ: ಪೀಠಿಕೆಯಲ್ಲಿ ನಿಮ್ಮ ವಿಷಯವಸ್ತುವನ್ನು ಸ್ಪಷ್ಟವಾಗಿ ತಿಳಿಸಿರಿ (be-KA ಪು. 217 ¶5–ಪು. 219 ¶4)
ನಂ. 1: ಯೋವೇಲ ಪುಸ್ತಕ ಪರಿಚಯ ಮತ್ತು ಪ್ರಯೋಜನಕರವೇಕೆ? (bsi07-KA ಪು. 13-14 ¶1-5, 12-14)
ನಂ. 2: ಯೋವೇಲ 2:1-14
ನಂ. 3: ‘ಪೂರ್ಣಪ್ರೀತಿಯನ್ನು’ ಹೊಂದಿರುವುದರ ಅರ್ಥ (1 ಯೋಹಾ. 4:18)
ನಂ. 4: td-KA 36ಬಿ ವಿಗ್ರಹಾರಾಧನೆಯು ಇಸ್ರಾಯೇಲ್ ಜನಾಂಗಕ್ಕೆ ವಿನಾಶವನ್ನು ತಂದಿತು
ನವೆಂ. 12 ಬೈಬಲ್ ವಾಚನ: ಆಮೋಸ 1-9 ಗೀತೆ 211
ಭಾಷಣ ಗುಣ: ಪರಿಣಾಮಕಾರಿಯಾದ ಸಮಾಪ್ತಿ (be-KA ಪು. 220 ¶1-3)
ನಂ. 1: ಆಮೋಸ ಪುಸ್ತಕ ಪರಿಚಯ ಮತ್ತು ಪ್ರಯೋಜನಕರವೇಕೆ? (bsi07-KA ಪು. 14-16 ¶1-6, 13-17)
ನಂ. 2: ಆಮೋಸ 2:1-16
ನಂ. 3: ಅನುಭವವೇ ಅತ್ಯುತ್ತಮ ಶಿಕ್ಷಕವಲ್ಲವೇಕೆ?
ನಂ. 4: td-KA 36ಸಿ “ಸಂಬಂಧಿತ” ಆರಾಧನೆಯು ಅನಧಿಕೃತವಾದದ್ದು
ನವೆಂ. 19 ಬೈಬಲ್ ವಾಚನ: ಓಬದ್ಯ 1–ಯೋನ 4 ಗೀತೆ 220
ಭಾಷಣ ಗುಣ: ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕಾದ ಅಂಶಗಳು (be-KA ಪು. 220 ¶4–ಪು. 221 ¶4)
ನಂ. 1: ಓಬದ್ಯ ಹಾಗೂ ಯೋನ ಪುಸ್ತಕಗಳ ಪರಿಚಯ ಮತ್ತು ಪ್ರಯೋಜನಕರವೇಕೆ? (bsi07-KA ಪು. 16-17 ¶1-5, 10-14; ಪು. 17-19 ¶1-4, 9-12)
ನಂ. 2: ಯೋನ 1:1-17
ನಂ. 3: ಭೂಪರದೈಸ್ನ ಮುಂಚೆ ಆಧ್ಯಾತ್ಮಿಕ ಪರದೈಸ್ನ ಸ್ಥಾಪನೆಯಾಗುವುದು ಅವಶ್ಯವೇಕೆ?
ನಂ. 4: td-KA 37ಎ ಕ್ರೈಸ್ತರ ಮೇಲೆ ಬರುವ ವಿರೋಧಕ್ಕೆ ಕಾರಣ
ನವೆಂ. 26 ಬೈಬಲ್ ವಾಚನ: ಮೀಕ 1-7 ಗೀತೆ 18
ಭಾಷಣ ಗುಣ: ಕ್ಷೇತ್ರ ಶುಶ್ರೂಷೆಯಲ್ಲಿ (be-KA ಪು. 221 ¶5–ಪು. 222 ¶6)
ನಂ. 1: ಮೀಕ ಪುಸ್ತಕ ಪರಿಚಯ ಮತ್ತು ಪ್ರಯೋಜನಕರವೇಕೆ? (bsi07-KA ಪು. 19-21 ¶1-8, 16-19)
ನಂ. 2: ಮೀಕ 2:1-13
ನಂ. 3: td-KA 37ಬಿ ದೇವರಿಂದ ತನ್ನನ್ನು ಪ್ರತ್ಯೇಕಿಸುವಂತೆ ಹೆಂಡತಿಯು ಗಂಡನಿಗೆ ಅನುಮತಿಸಬಾರದು
ನಂ. 4: ಮೃದುಸ್ವಭಾವದವರಾಗಿರುವುದರ ಅರ್ಥ
ಡಿಸೆಂ. 3 ಬೈಬಲ್ ವಾಚನ: ನಹೂಮ 1–ಹಬಕ್ಕೂಕ 3 ಗೀತೆ 137
ಭಾಷಣ ಗುಣ: ಹೇಳಿಕೆಯ ನಿಷ್ಕೃಷ್ಟತೆ (be-KA ಪು. 223 ¶1-5)
ನಂ. 1: ನಹೂಮ ಹಾಗೂ ಹಬಕ್ಕೂಕ ಪುಸ್ತಕಗಳ ಪರಿಚಯ ಮತ್ತು ಪ್ರಯೋಜನಕರವೇಕೆ? (bsi07-KA ಪು. 21-23 ¶1-7, 11-12; ಪು. 23-24 ¶1-5, 12-14)
ನಂ. 2: ಹಬಕ್ಕೂಕ 1:1-17
ನಂ. 3: ನಿತ್ಯಜೀವವು ಬೇಸರವನ್ನುಂಟುಮಾಡದಿರುವುದು ಏಕೆ?
ನಂ. 4: g td-KA 37ಸಿ ದೇವರಿಗೆ ಸೇವೆಸಲ್ಲಿಸುವುದರಿಂದ ತನ್ನನ್ನು ತಡೆಯುವಂತೆ ಗಂಡನು ಹೆಂಡತಿಗೆ ಅನುಮತಿನೀಡಬಾರದು
ಡಿಸೆಂ. 10 ಬೈಬಲ್ ವಾಚನ: ಚೆಫನ್ಯ 1–ಹಗ್ಗಾಯ 2 ಗೀತೆ 78
ಭಾಷಣ ಗುಣ: “ನಂಬತಕ್ಕ ವಾಕ್ಯವನ್ನು ದೃಢವಾಗಿ” ಹಿಡಿದುಕೊಳ್ಳುವುದು (be-KA ಪು. 224 ¶1-4)
ನಂ. 1: ಚೆಫನ್ಯ ಹಾಗೂ ಹಗ್ಗಾಯ ಪುಸ್ತಕಗಳ ಪರಿಚಯ ಮತ್ತು ಪ್ರಯೋಜನಕರವೇಕೆ? (bsi07-KA ಪು. 25-26 ¶1-6, 10-12; ಪು. 27-28 ¶1-7, 13-16)
ನಂ. 2: ಚೆಫನ್ಯ 3:1-17
ನಂ. 3: td-KA 38ಎ ವಿವಾಹ ಬಂಧವು ಗೌರವಾರ್ಹವಾಗಿರಬೇಕು
ನಂ. 4:: h ಆಧ್ಯಾತ್ಮಿಕತೆಯು ವಿವಾಹವನ್ನು ಹೇಗೆ ಪ್ರಭಾವಿಸುತ್ತದೆ?
ಡಿಸೆಂ. 17 ಬೈಬಲ್ ವಾಚನ: ಜೆಕರ್ಯ 1-8 ಗೀತೆ 209
ಭಾಷಣ ಗುಣ: ಮಾಹಿತಿಯ ನಿಷ್ಕೃಷ್ಟತೆಯನ್ನು ಪರೀಕ್ಷಿಸಿ ನೋಡುವುದು (be-KA ಪು. 225 ¶1-3)
ನಂ. 1: ಜೆಕರ್ಯ ಪುಸ್ತಕ ಪರಿಚಯ (bsi07-KA ಪು. 28-29 ¶1-7)
ನಂ. 2: ಜೆಕರ್ಯ 7:1-14
ನಂ. 3: ರೂಪಾಂತರ ದರ್ಶನವು ಹೇಗೆ ನೆರವೇರಿದೆ?
ನಂ. 4: td-KA 38ಬಿ ತಲೆತನದ ನಿಯಮವನ್ನು ಕ್ರೈಸ್ತರು ಗೌರವಿಸಬೇಕು
ಡಿಸೆಂ. 24 ಬೈಬಲ್ ವಾಚನ: ಜೆಕರ್ಯ 9-14 ಗೀತೆ 202
ಭಾಷಣ ಗುಣ: ಇತರರಿಗೆ ಅರ್ಥವತ್ತಾದದ್ದು (be-KA ಪು. 226 ¶1–ಪು. 227 ¶2)
ನಂ. 1: ಜೆಕರ್ಯ—ಪ್ರಯೋಜನಕರವೇಕೆ? ಹಾಗೂ ಮಲಾಕಿಯ ಪುಸ್ತಕ ಪರಿಚಯ ಮತ್ತು ಪ್ರಯೋಜನಕರವೇಕೆ? (bsi07-KA ಪು. 29-30 ¶23-7; ಪು. 31-32 ¶1-6, 13-17)
ನಂ. 2: ಜೆಕರ್ಯ 10:1-12
ನಂ. 3: td-KA 38ಸಿ ಮಕ್ಕಳ ಕಡೆಗೆ ಕ್ರೈಸ್ತ ಹೆತ್ತವರಿಗಿರುವ ಜವಾಬ್ದಾರಿ
ನಂ. 4: ಹಿಂಸೆಯನ್ನು ಎದುರಿಸಲು ನಾವು ಹೇಗೆ ಸನ್ನದ್ಧರಾಗಸಾಧ್ಯವಿದೆ?
ಡಿಸೆಂ. 31 ಬೈಬಲ್ ವಾಚನ: ಮಲಾಕಿಯ 1-4 ಗೀತೆ 118
ಭಾಷಣ ಗುಣ: ಅಪರಿಚಿತ ಪದಗಳನ್ನು ವಿವರಿಸಿ ಹೇಳಿರಿ (be-KA ಪು. 227 ¶3–ಪು. 228 ¶1)
ಮೌಖಿಕ ಪುನರ್ವಿಮರ್ಶೆ
[Footnote]
a ಸಹೋದರರಿಗೆ ಮಾತ್ರ ನೇಮಿಸಿರಿ.
b ಸಹೋದರರಿಗೆ ಮಾತ್ರ ನೇಮಿಸಿರಿ.
c ಸಹೋದರರಿಗೆ ಮಾತ್ರ ನೇಮಿಸಿರಿ.
d ಸಹೋದರರಿಗೆ ಮಾತ್ರ ನೇಮಿಸಿರಿ.
e ಸಹೋದರರಿಗೆ ಮಾತ್ರ ನೇಮಿಸಿರಿ.
f ಸಹೋದರರಿಗೆ ಮಾತ್ರ ನೇಮಿಸಿರಿ.
g ಸಹೋದರರಿಗೆ ಮಾತ್ರ ನೇಮಿಸಿರಿ.
h ಸಹೋದರರಿಗೆ ಮಾತ್ರ ನೇಮಿಸಿರಿ.