ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರ್ವಿಮರ್ಶೆ
ಇಸವಿ 2006ರ ಅಕ್ಟೋಬರ್ 30ರಿಂದ ಆರಂಭವಾಗುವ ವಾರದಲ್ಲಿನ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಈ ಪ್ರಶ್ನೆಗಳನ್ನು ಪರಿಗಣಿಸಲಾಗುವುದು. 2006ರ ಸೆಪ್ಟೆಂಬರ್ 4ರಿಂದ ಅಕ್ಟೋಬರ್ 30ರ ತನಕದ ವಾರಗಳಿಗಾಗಿರುವ ನೇಮಕಗಳಲ್ಲಿ ಆವರಿಸಲ್ಪಟ್ಟ ವಿಷಯಭಾಗದ ಮೇಲಾಧಾರಿತವಾದ 30 ನಿಮಿಷಗಳ ಪುನರ್ವಿಮರ್ಶೆಯನ್ನು ಶಾಲಾ ಮೇಲ್ವಿಚಾರಕನು ನಡೆಸುವನು. [ಸೂಚನೆ: ಪ್ರಶ್ನೆಗಳ ಬಳಿಕ ರೆಫರೆನ್ಸ್ಗಳು ಇಲ್ಲದಿರುವಲ್ಲಿ, ಉತ್ತರಗಳನ್ನು ಕಂಡುಕೊಳ್ಳಲಿಕ್ಕಾಗಿ ನೀವು ನಿಮ್ಮ ಸ್ವಂತ ಸಂಶೋಧನೆಯನ್ನು ಮಾಡುವ ಆವಶ್ಯಕತೆಯಿರುವುದು.—ಶೂಶ್ರೂಷಾ ಶಾಲೆ, ಪುಟ 36-7ನ್ನು ನೋಡಿರಿ.]
ಭಾಷಣ ಗುಣಗಳು
1. ನಾವು ಮಾತಾಡುವಾಗ ಸಮಚಿತ್ತತೆಯು ಏಕೆ ಪ್ರಾಮುಖ್ಯವಾಗಿದೆ, ಮತ್ತು ನಾವು ನಮ್ಮ ಕಳವಳವನ್ನು ಹೇಗೆ ಕುಗ್ಗಿಸಸಾಧ್ಯವಿದೆ? [be-KA ಪು. 135 ಪ್ಯಾರ. 5-ಪು. 137 ಪ್ಯಾರ. 2, ಚೌಕಗಳು]
2. ನಮ್ಮ ನಂಬಿಕೆಗಳ ವಿಷಯದಲ್ಲಿ ಪ್ರಶ್ನಿಸಲಾಗುವಾಗ, ಉತ್ತರ ಕೊಡಲಿಕ್ಕಾಗಿ ನಾವು ಬೈಬಲನ್ನು ಉಪಯೋಗಿಸಲು ಪ್ರಯತ್ನಮಾಡಬೇಕು ಏಕೆ? [be-KA ಪು. 143 ಪ್ಯಾರ. 1-3]
3. ಬೈಬಲನ್ನು ಉಪಯೋಗಿಸುವುದರಲ್ಲಿ ನಾವು ಹೇಗೆ ಹೆಚ್ಚು ಸಮರ್ಥರಾಗಸಾಧ್ಯವಿದೆ? [be-KA ಪು. 144, ಚೌಕ]
4. ನಾವು ಶುಶ್ರೂಷೆಯಲ್ಲಿ ಬೋಧಿಸುವಾಗ ಬೈಬಲನ್ನು ಧಾರಾಳವಾಗಿ ಉಪಯೋಗಿಸುವುದು ಪ್ರಾಮುಖ್ಯವೇಕೆ, ಮತ್ತು ಸಭಾ ಕೂಟಗಳಲ್ಲಿ ವಚನಗಳ ಉಪಯೋಗವನ್ನು ನಾವು ಹೇಗೆ ಪ್ರೋತ್ಸಾಹಿಸಸಾಧ್ಯವಿದೆ? [be-KA ಪು. 145-6, ಚೌಕಗಳು]
5. ಒಂದು ಶಾಸ್ತ್ರವಚನವನ್ನು ಪರಿಚಯಿಸುವಾಗ ನಮಗಿರಬೇಕಾದ ಎರಡು ಗುರಿಗಳು ಯಾವುವು? [be-KA ಪು. 147 ಪ್ಯಾರ. 2]
ನೇಮಕ ನಂ. 1
6. ಕೀರ್ತನೆಗಳಲ್ಲಿ ಯಾವ ಜೀವಂತ ಸಂದೇಶವಿದೆ? [bsi06-KA 17, ಪ್ಯಾರ. 23]
7. ಜ್ಞಾನೋಕ್ತಿಗಳು ಬರೆಯಲ್ಪಟ್ಟು ಸಂಗ್ರಹಿಸಲ್ಪಟ್ಟದ್ದು ಯಾವಾಗ? [bsi06-KA ಪು. 20 ಪ್ಯಾರ. 5]
8. ಜ್ಞಾನೋಕ್ತಿ ಎಂದರೇನು, ಮತ್ತು ಅದರ ಹೀಬ್ರು ಹೆಸರು ಸೂಕ್ತವಾಗಿದೆ ಏಕೆ? [bsi06-KA ಪು. 20 ಪ್ಯಾರ. 6]
9. ಜ್ಞಾನ, ತಿಳಿವಳಿಕೆ ಮತ್ತು ವಿವೇಚನೆಯನ್ನು “ಬೆಳ್ಳಿಯಂತೆಯೂ ನಿಕ್ಷೇಪದಂತೆಯೂ” ಹುಡುಕುತ್ತಾ ಇರಬೇಕೆಂದು ಜ್ಞಾನೋಕ್ತಿ 2:1-5ರಲ್ಲಿ ಕೊಡಲ್ಪಟ್ಟಿರುವ ಪ್ರೋತ್ಸಾಹವು ಏನನ್ನು ಸೂಚಿಸುತ್ತದೆ? [be-KA ಪು. 38 ಪ್ಯಾರ. 5]
10. ಜ್ಞಾನೋಕ್ತಿಗಳ ಪ್ರಯೋಜನಕರ ಉದ್ದೇಶವನ್ನು ಆ ಪುಸ್ತಕವೇ ಹೇಗೆ ತಿಳಿಸುತ್ತದೆ? [bsi06-KA ಪು. 21 ಪ್ಯಾರ. 19]
ವಾರದ ಬೈಬಲ್ ವಾಚನ
11. ದಾವೀದನು ತನ್ನ ‘ತಾಯಿಯ ಬಳಿಯಲ್ಲಿರುವ ಮೊಲೆಬಿಡಿಸಿದ ಕೂಸಿನಂತೆ ನೆಮ್ಮದಿಯಿಂದ’ ಮತ್ತು ‘ಸಮಾಧಾನದಿಂದ’ ಇದದ್ದು ಹೇಗೆ, ಮತ್ತು ನಾವು ಅವನನ್ನು ಹೇಗೆ ಅನುಕರಿಸಸಾಧ್ಯವಿದೆ? (ಕೀರ್ತ. 131:1-3)
12. ಕೀರ್ತನೆ 139:7-12ರ ಪ್ರೇರಿತ ಮಾತುಗಳಿಂದ ಯಾವ ಸ್ವಾಂತನ ಸಿಗುತ್ತದೆ?
13. ನಮ್ಮ ಪ್ರಾರ್ಥನೆಗಳಲ್ಲಿ ಮತ್ತು ಸಾರ್ವಜನಿಕ ಶುಶ್ರೂಷೆಯಲ್ಲಿ ನಾವು ಯೆಹೋವನನ್ನು ಸ್ತುತಿಸಸಾಧ್ಯವಿರುವ ಆತನ ಮಹತ್ತಿನ ಕುರಿತಾಗಿ ಕೀರ್ತನೆ 145ರಲ್ಲಿ ತಿಳಿಸಲ್ಪಟ್ಟಿರುವ ಕೆಲವು ಉದಾಹರಣೆಗಳು ಯಾವುವು? (ಕೀರ್ತ. 145:3)
14. ಯೆಹೋವನ ಭಯವು ಯಾವ ವಿಧದಲ್ಲಿ “ಜ್ಞಾನದ ಮೂಲ” ಮತ್ತು “ವಿವೇಕದ ಆರಂಭ” ಆಗಿದೆ? (ಜ್ಞಾನೋ. 1:7; 9:10, NW)
15. ಜ್ಞಾನೋಕ್ತಿ 7:1, 2ರಲ್ಲಿ ತಿಳಿಸಲ್ಪಟ್ಟಿರುವ ‘ನನ್ನ ಮಾತುಗಳು’ ಮತ್ತು ‘ನನ್ನ ಆಜ್ಞೆಗಳು’ ಎಂಬವುಗಳಲ್ಲಿ ಏನು ಒಳಗೂಡಿದೆ?