ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 10/06 ಪು. 2
  • ಸೇವಾ ಕೂಟದ ಶೆಡ್ಯೂಲ್‌

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೇವಾ ಕೂಟದ ಶೆಡ್ಯೂಲ್‌
  • 2006 ನಮ್ಮ ರಾಜ್ಯದ ಸೇವೆ
  • ಉಪಶೀರ್ಷಿಕೆಗಳು
  • ಅಕ್ಟೋಬರ್‌ 9ರಿಂದ ಆರಂಭವಾಗುವ ವಾರ
  • ಅಕ್ಟೋಬರ್‌ 16ರಿಂದ ಆರಂಭವಾಗುವ ವಾರ
  • ಅಕ್ಟೋಬರ್‌ 23ರಿಂದ ಆರಂಭವಾಗುವ ವಾರ
  • ಅಕ್ಟೋಬರ್‌ 30ರಿಂದ ಆರಂಭವಾಗುವ ವಾರ
  • ನವೆಂಬರ್‌ 6ರಿಂದ ಆರಂಭವಾಗುವ ವಾರ
2006 ನಮ್ಮ ರಾಜ್ಯದ ಸೇವೆ
km 10/06 ಪು. 2

ಸೇವಾ ಕೂಟದ ಶೆಡ್ಯೂಲ್‌

ಅಕ್ಟೋಬರ್‌ 9ರಿಂದ ಆರಂಭವಾಗುವ ವಾರ

ಗೀತೆ 25

10 ನಿ: ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. ಪುಟ 8ರಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು ಅಥವಾ ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವ ಬೇರೆ ಯಾವುದೇ ನಿರೂಪಣೆಗಳನ್ನು ಉಪಯೋಗಿಸುತ್ತಾ, ಅಕ್ಟೋಬರ್‌-ಡಿಸೆಂಬರ್‌ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೊದಲನೆಯದ್ದು) ಮತ್ತು ಅಕ್ಟೋಬರ್‌ 1ರ ಕಾವಲಿನಬುರುಜು ಪತ್ರಿಕೆಗಳನ್ನು ರಾಜ್ಯ ವಾರ್ತೆ ನಂ. 37ರೊಂದಿಗೆ ಹೇಗೆ ನೀಡಬಹುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಿರಿ.

15 ನಿ: “ದೇವರ ಸ್ನೇಹಿತರಾಗಲು ಇತರರಿಗೆ ಸಹಾಯಮಾಡಿರಿ.”a ಇತರರ ಮಾದರಿ ಮತ್ತು ಹೃತ್ಪೂರ್ವಕ ಪ್ರಾರ್ಥನೆಯು ದೀಕ್ಷಾಸ್ನಾನದ ಹಂತದ ವರೆಗೆ ಪ್ರಗತಿಮಾಡುವಂತೆ ತಮಗೆ ಹೇಗೆ ಸಹಾಯಮಾಡಿತೆಂಬುದರ ಬಗ್ಗೆ ಹೇಳಿಕೆ ನೀಡುವಂತೆ ಸಭಿಕರನ್ನು ಆಮಂತ್ರಿಸಿರಿ.

20 ನಿ: ರಾಜ್ಯ ವಾರ್ತೆ ನಂ. 37ನ್ನು ವಿತರಿಸಲು ತಯಾರಿಮಾಡಿರಿ. ಭಾಷಣ ಮತ್ತು ಸಭಿಕರೊಂದಿಗೆ ಚರ್ಚೆ. ಸೆಪ್ಟೆಂಬರ್‌ ತಿಂಗಳ ನಮ್ಮ ರಾಜ್ಯದ ಸೇವೆಯಲ್ಲಿ ಚರ್ಚಿಸಲ್ಪಟ್ಟಂತೆ ವಿಶೇಷ ಕಾರ್ಯಾಚರಣೆಗಾಗಿ ಮಾಡಲಾಗಿರುವ ಏರ್ಪಾಡುಗಳನ್ನು ಪುನರ್ವಿಮರ್ಶಿಸಿರಿ. ಈ ಕಾರ್ಯಾಚರಣೆಯಲ್ಲಿ ಸಂಪೂರ್ಣವಾಗಿ ಪಾಲ್ಗೋಳ್ಳುವಂತೆ ಎಲ್ಲರನ್ನೂ ಪ್ರೋತ್ಸಾಹಿಸಿರಿ. ಪ್ರಗತಿಪರ ಬೈಬಲ್‌ ಅಧ್ಯಯನಗಳನ್ನು ಹೊಂದಿರುವವರನ್ನು, ಅವರು ತಮ್ಮ ವಿದ್ಯಾರ್ಥಿಗಳು ಅಸ್ನಾತ ಪ್ರಚಾರಕರಾಗಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಲು ಅರ್ಹರಾಗಿರುವರೋ ಎಂಬುದನ್ನು ಪರಿಗಣಿಸುವಂತೆ ಉತ್ತೇಜಿಸಿರಿ. ಹೆತ್ತವರು ಸಹ ತಮ್ಮ ಮಕ್ಕಳು ಇದಕ್ಕೆ ಅರ್ಹರಾಗಿದ್ದಾರೋ ಎಂಬುದನ್ನು ಪರಿಗಣಿಸಬಹುದು. ಅಸ್ನಾತ ಪ್ರಚಾರಕರಾಗಲು ತಲಪಬೇಕಾದ ಅರ್ಹತೆಗಳ ಬಗ್ಗೆ ಯೆಹೋವನ ಚಿತ್ತವನ್ನು ಮಾಡಲು ಸಂಘಟಿತರು ಪುಸ್ತಕದ 79-81ನೇ ಪುಟಗಳಲ್ಲಿರುವ ಮಾಹಿತಿಯನ್ನು ಸಂಕ್ಷಿಪ್ತವಾಗಿ ಪರಿಗಣಿಸಿರಿ.

ಗೀತೆ 221 ಮತ್ತು ಸಮಾಪ್ತಿಯ ಪ್ರಾರ್ಥನೆ.

ಅಕ್ಟೋಬರ್‌ 16ರಿಂದ ಆರಂಭವಾಗುವ ವಾರ

ಗೀತೆ 84

10 ನಿ: ಸ್ಥಳಿಕ ಪ್ರಕಟನೆಗಳು.

20 ನಿ: ಸಭಾ ಪುಸ್ತಕ ಅಧ್ಯಯನದಿಂದ ಪ್ರಯೋಜನ ಪಡೆಯುವುದು. ಯೆಹೋವನ ಚಿತ್ತವನ್ನು ಮಾಡಲು ಸಂಘಟಿತರು ಪುಸ್ತಕದ ಪುಟ 69ರಲ್ಲಿರುವ ಉಪಶೀರ್ಷಿಕೆಯಿಂದ ಪುಟ 72ರಲ್ಲಿರುವ ಉಪಶೀರ್ಷಿಕೆಯ ವರೆಗಿರುವ ಮಾಹಿತಿಯ ಮೇಲಾಧಾರಿತವಾದ ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ.

15 ನಿ: “ನೀವು ಯಾವುದಕ್ಕೆ ಪ್ರಥಮ ಸ್ಥಾನ ನೀಡುತ್ತೀರಿ?”b ರಾಜ್ಯದ ಅಭಿರುಚಿಗಳನ್ನು ಪ್ರಥಮವಾಗಿಡಲು ತಮ್ಮ ಶೆಡ್ಯೂಲನ್ನು ಹೇಗೆ ಹೊಂದಿಸಿಕೊಂಡಿದ್ದಾರೆ ಮತ್ತು ಅದರಿಂದ ಯಾವ ಆಶೀರ್ವಾದಗಳನ್ನು ಪಡೆದುಕೊಂಡಿದ್ದಾರೆ ಎಂಬುದರ ಬಗ್ಗೆ ತಿಳಿಸುವಂತೆ ಮುಂಚಿತವಾಗಿಯೇ ಆಯ್ಕೆಮಾಡಿರುವ ಪ್ರಚಾರಕರನ್ನು ಆಮಂತ್ರಿಸಿರಿ.

ಗೀತೆ 172 ಮತ್ತು ಸಮಾಪ್ತಿಯ ಪ್ರಾರ್ಥನೆ.

ಅಕ್ಟೋಬರ್‌ 23ರಿಂದ ಆರಂಭವಾಗುವ ವಾರ

ಗೀತೆ 58

10 ನಿ: ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್‌ ವರದಿ ಮತ್ತು ದಾನಗಳ ಅಂಗೀಕಾರ ಪತ್ರಗಳನ್ನು ಓದಿರಿ. ಪುಟ 8ರಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು ಅಥವಾ ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವ ಬೇರೆ ಯಾವುದೇ ನಿರೂಪಣೆಗಳನ್ನು ಉಪಯೋಗಿಸುತ್ತಾ, ಅಕ್ಟೋಬರ್‌-ಡಿಸೆಂಬರ್‌ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೂರನೆಯದ್ದು) ಅಥವಾ ನವೆಂಬರ್‌ 1ರ ಕಾವಲಿನಬುರುಜು ಪತ್ರಿಕೆಯನ್ನು ಹೇಗೆ ನೀಡಬಹುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಿರಿ. ಒಂದು ಪ್ರತ್ಯಕ್ಷಾಭಿನಯದಲ್ಲಿ, “ನೀವು ಅಷ್ಟೊಂದು ಸಲ ಸಂದರ್ಶಿಸುವುದೇಕೆ?” ಎಂಬ ಸಭಾಷಣಾ ತಡೆಗಟ್ಟನ್ನು ಹೇಗೆ ನಿಭಾಯಿಸುವುದೆಂಬುದನ್ನು ತೋರಿಸಿರಿ.​—⁠ಬೈಬಲ್‌ ಚರ್ಚೆಗಳನ್ನು ಆರಂಭಿಸುವ ಮತ್ತು ಮುಂದುವರಿಸುವ ವಿಧ ಪುಸ್ತಿಕೆಯ ಪುಟ 12ನ್ನು ನೋಡಿ.

15 ನಿ: ಸ್ಥಳಿಕ ಅಗತ್ಯಗಳು.

20 ನಿ: “ಕ್ಷೇತ್ರ ಸೇವೆಗಾಗಿರುವ ಕೂಟಗಳಿಂದ ಪೂರ್ಣ ಪ್ರಯೋಜನ ಪಡೆಯಿರಿ.”c ಪ್ಯಾರಗ್ರಾಫ್‌ 3ನ್ನು ಚರ್ಚಿಸುವಾಗ, ಕ್ಷೇತ್ರ ಸೇವೆಗಾಗಿರುವ ಕೂಟವನ್ನು ನಡೆಸಲು ಅರ್ಹ ಸಹೋದರರು ಹಾಜರಿರದಿದ್ದ ಸಂದರ್ಭವನ್ನು ಹೇಗೆ ನಿಭಾಯಿಸಬೇಕೆಂಬುದರ ಕುರಿತು, ಸೆಪ್ಟೆಂಬರ್‌ 2001ರ ನಮ್ಮ ರಾಜ್ಯದ ಸೇವೆಯ ಪ್ರಶ್ನಾ ಚೌಕದ ಪ್ಯಾರ 4ರಲ್ಲಿರುವ ಹೇಳಿಕೆಗಳನ್ನೂ ಒಳಗೂಡಿಸಿರಿ.

ಗೀತೆ 143 ಮತ್ತು ಸಮಾಪ್ತಿಯ ಪ್ರಾರ್ಥನೆ.

ಅಕ್ಟೋಬರ್‌ 30ರಿಂದ ಆರಂಭವಾಗುವ ವಾರ

ಗೀತೆ 207

10 ನಿ: ಸ್ಥಳಿಕ ಪ್ರಕಟನೆಗಳು. ಕ್ಷೇತ್ರ ಸೇವಾ ವರದಿಗಳನ್ನು ನೀಡುವಂತೆ ಮತ್ತು ಅದರ ಹಿಂದೆ ತಾವು ನೀಡಿರುವ ರಾಜ್ಯ ವಾರ್ತೆ ನಂ. 37ರ ಒಟ್ಟು ಸಂಖ್ಯೆಯನ್ನು ಬರೆಯುವಂತೆ ಎಲ್ಲರಿಗೆ ನೆನಪುಹುಟ್ಟಿಸಿರಿ.

15 ನಿ: ನಾನು ನನ್ನ ಸಹಪಾಠಿಗಳಿಗೆ ಹೇಗೆ ಸಾಕ್ಷಿನೀಡಬಲ್ಲೆ? ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ. ಸಹಪಾಠಿಗಳಿಗೆ ಸಾಕ್ಷಿ ನೀಡುವುದರಿಂದ ಸಿಕ್ಕಿರುವ ಆಸಕ್ತಿಕರ ಅನುಭವಗಳನ್ನು ತಿಳಿಸುವಂತೆ ಸಭಿಕರನ್ನು ಕೇಳಿಕೊಳ್ಳಿರಿ.

20 ನಿ: ರಾಜ್ಯ ವಾರ್ತೆ ನಂ. 37ರ ವಿತರಣೆಯ ಅನುಭವಗಳು. ರಾಜ್ಯ ವಾರ್ತೆ ನಂ. 37ನ್ನು ವಿತರಿಸುವಾಗ ತಾವು ಪಡೆದುಕೊಂಡ ಉತ್ತೇಜನದಾಯಕ ಫಲಿತಾಂಶಗಳನ್ನು ತಿಳಿಸುವಂತೆ ಪ್ರಚಾರಕರನ್ನು ಕೇಳಿಕೊಳ್ಳಿರಿ. ಎಲ್ಲಿಯ ವರೆಗೆ ಟೆರಿಟೊರಿಯನ್ನು ಆವರಿಸಲಾಗಿದೆ ಮತ್ತು ನವೆಂಬರ್‌ 12ರೊಳಗಾಗಿ ಟೆರಿಟೊರಿಯನ್ನು ಪೂರ್ಣವಾಗಿ ಆವರಿಸಲು ಏನು ಮಾಡುವುದು ಅಗತ್ಯ ಎಂಬುದನ್ನು ತಿಳಿಸಿರಿ. ಬೈಬಲ್‌ ಬೋಧಿಸುತ್ತದೆ ಪುಸ್ತಕವನ್ನು ಉಪಯೋಗಿಸುತ್ತಾ ಪುನಃರ್ಭೇಟಿಮಾಡುವುದನ್ನು ಪ್ರತ್ಯಕ್ಷಾಭಿನಯಿಸಿರಿ. ಈ ವಿಶೇಷ ಕಾರ್ಯಾಚರಣೆಯು ಮುಗಿಯುವಷ್ಟರಲ್ಲಿ ತಮ್ಮಿಂದ ವಿತರಿಸಲು ಸಾಧ್ಯವಾಗದ ರಾಜ್ಯ ವಾರ್ತೆ ಪ್ರತಿಗಳನ್ನು ಹಿಂದಿರುಗಿಸುವಂತೆ ಪ್ರಚಾರಕರಿಗೆ ಜ್ಞಾಪಕಹುಟ್ಟಿಸಿರಿ. ಅವುಗಳನ್ನು ಇತರರು ಉಪಯೋಗಿಸಬಹುದು.

ಗೀತೆ 136 ಮತ್ತು ಸಮಾಪ್ತಿಯ ಪ್ರಾರ್ಥನೆ.

ನವೆಂಬರ್‌ 6ರಿಂದ ಆರಂಭವಾಗುವ ವಾರ

ಗೀತೆ 146

10 ನಿ: ಸ್ಥಳಿಕ ಪ್ರಕಟನೆಗಳು. 2005, ಜನವರಿ ತಿಂಗಳ ನಮ್ಮ ರಾಜ್ಯದ ಸೇವೆ ಪುಟ 3-4ರಲ್ಲಿರುವ ಸಲಹೆಗಳನ್ನು ಅಥವಾ ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವ ಇತರ ನಿರೂಪಣೆಗಳನ್ನು ಉಪಯೋಗಿಸಿ ನವೆಂಬರ್‌ 16-30ರವರೆಗಿನ ಸಮಯಗಳಲ್ಲಿ ಮಹಾ ಪುರುಷ ಅಥವಾ ಬೈಬಲ್‌ ಕಥೆಗಳ ನನ್ನ ಪುಸ್ತಕವನ್ನು ಹೇಗೆ ನೀಡಬಹುದೆಂಬುದನ್ನು ಪ್ರತ್ಯಕ್ಷಾಭಿನಯಿಸಿರಿ. ಸಮಯವಿರುವಲ್ಲಿ, ನಮ್ಮ ಪ್ರಕಾಶನಗಳನ್ನು ಕ್ಷೇತ್ರಸೇವೆಯಲ್ಲಿ ಅಥವಾ ತಮ್ಮ ಕುಟುಂಬದವರೊಂದಿಗೆ ಉಪಯೋಗಿಸುವುದರಿಂದ ಕಂಡುಕೊಂಡ ಉತ್ತಮ ಫಲಿತಾಂಶಗಳ ಕುರಿತು ತಿಳಿಸುವಂತೆ ಸಭಿಕರನ್ನು ಆಮಂತ್ರಿಸಿ.

15 ನಿ: ನಿಮ್ಮ ವಿವಾಹದಿನದ ಹರ್ಷ ಮತ್ತು ಘನತೆಯನ್ನು ಹೆಚ್ಚಿಸಿರಿ. ನವೆಂಬರ್‌ 1, 2006ರ ಕಾವಲಿನಬುರುಜು ಪುಟ 20-23ರ ಮೇಲಾಧಾರಿತವಾಗಿ ಹಿರಿಯನಿಂದ ನೀಡಲ್ಪಡುವ ಭಾಷಣ.

20 ನಿ: ವಾಕ್ಯವನ್ನು ಸಾರುವುದು ಚೈತನ್ಯವನ್ನು ತರುತ್ತದೆ. 2002, ಜನವರಿ 15ರ ಕಾವಲಿನಬುರುಜು ಪುಟ 8-9ರ ಮೇಲಾಧಾರಿತ ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ. ಶುಶ್ರೂಷೆಯು ತಮಗೆ ಹೇಗೆ ಚೈತನ್ಯವನ್ನು ತರುತ್ತದೆ ಎಂಬುದರ ಬಗ್ಗೆ ಹೇಳಿಕೆ ನೀಡುವಂತೆ ಸಭಿಕರನ್ನು ಆಮಂತ್ರಿಸಿರಿ. ಒಂದು ಅಥವಾ ಎರಡು ಹೇಳಿಕೆಗಳನ್ನು ಮುಂಚಿತವಾಗಿಯೇ ಏರ್ಪಡಿಸಿರಿ.

ಗೀತೆ 8 ಮತ್ತು ಸಮಾಪ್ತಿಯ ಪ್ರಾರ್ಥನೆ.

[ಪಾದಟಿಪ್ಪಣಿಗಳು]

a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

c ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ