ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 11/05 ಪು. 2
  • ಸೇವಾ ಕೂಟದ ಶೆಡ್ಯೂಲ್‌

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೇವಾ ಕೂಟದ ಶೆಡ್ಯೂಲ್‌
  • 2005 ನಮ್ಮ ರಾಜ್ಯದ ಸೇವೆ
  • ಉಪಶೀರ್ಷಿಕೆಗಳು
  • ನವೆಂಬರ್‌ 14ರಿಂದ ಆರಂಭವಾಗುವ ವಾರ
  • ನವೆಂಬರ್‌ 21ರಿಂದ ಆರಂಭವಾಗುವ ವಾರ
  • ನವೆಂಬರ್‌ 28ರಿಂದ ಆರಂಭವಾಗುವ ವಾರ
  • ಡಿಸೆಂಬರ್‌ 5ರಿಂದ ಆರಂಭವಾಗುವ ವಾರ
2005 ನಮ್ಮ ರಾಜ್ಯದ ಸೇವೆ
km 11/05 ಪು. 2

ಸೇವಾ ಕೂಟದ ಶೆಡ್ಯೂಲ್‌

ನವೆಂಬರ್‌ 14ರಿಂದ ಆರಂಭವಾಗುವ ವಾರ

ಗೀತೆ 220

10 ನಿ:  ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. ಅಕ್ಟೋಬರ್‌-ಡಿಸೆಂಬರ್‌ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೊದಲನೆಯದ್ದು) ಮತ್ತು ನವೆಂಬರ್‌ 15ರ ಕಾವಲಿನಬುರುಜು ಪತ್ರಿಕೆಗಳನ್ನು ಹೇಗೆ ನೀಡಬಹುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಲಿಕ್ಕಾಗಿ ಪುಟ 4ರಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು (ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವುದಾದರೆ) ಉಪಯೋಗಿಸಿರಿ. ಇತರ ಪ್ರಾಯೋಗಿಕ ನಿರೂಪಣೆಗಳು ಉಪಯೋಗಿಸಲ್ಪಡಬಹುದು. ಪ್ರತಿಯೊಂದು ಪ್ರತ್ಯಕ್ಷಾಭಿನಯದಲ್ಲಿ, “ಧರ್ಮದಲ್ಲಿ ನನಗೆ ಆಸಕ್ತಿಯಿಲ್ಲ” ಎಂಬ ಸಂಭವನೀಯ ಸಂಭಾಷಣಾ ತಡೆಗಟ್ಟನ್ನು ಹೇಗೆ ನಿಭಾಯಿಸಬಹುದು ಎಂಬುದನ್ನು ಬೇರೆ ಬೇರೆ ವಿಧಗಳಲ್ಲಿ ತೋರಿಸಿರಿ.​—⁠ಬೈಬಲ್‌ ಚರ್ಚೆಗಳನ್ನು ಆರಂಭಿಸುವ ಮತ್ತು ಮುಂದುವರಿಸುವ ವಿಧ ಪುಸ್ತಿಕೆಯ 9ನೆಯ ಪುಟವನ್ನು ನೋಡಿರಿ.

15 ನಿ:  ದೇವರ ಹೃದಯವನ್ನು ಸಂತೋಷಪಡಿಸುವ ಕಾಣಿಕೆಗಳು. 2005, ನವೆಂಬರ್‌ 1ರ ಕಾವಲಿನಬುರುಜುವಿನ ಪುಟ 26-30ರ ಮೇಲಾಧರಿತವಾದ ಒಬ್ಬ ಹಿರಿಯನಿಂದ ನೀಡಲ್ಪಡುವ ಭಾಷಣ.

20 ನಿ:  “ಯೆಹೋವನ ಘನತೆಯನ್ನು ಪ್ರಸಿದ್ಧಪಡಿಸಿರಿ.”a ಪ್ಯಾರಗ್ರಾಫ್‌ 4ನ್ನು ಚರ್ಚಿಸುವಾಗ, ಒಳ್ಳೆಯ ನಡತೆಯು ಸಾಕ್ಷಿನೀಡಲು ಹೇಗೆ ಮಾರ್ಗವನ್ನು ತೆರೆಯಬಲ್ಲದು ಎಂಬುದರ ಕುರಿತು ಸಂಕ್ಷಿಪ್ತ ಉದಾಹರಣೆಗಳನ್ನು ತಿಳಿಸುವಂತೆ ಸಭಿಕರನ್ನು ಆಮಂತ್ರಿಸಿರಿ.

ಗೀತೆ 24 ಮತ್ತು ಸಮಾಪ್ತಿಯ ಪ್ರಾರ್ಥನೆ.

ನವೆಂಬರ್‌ 21ರಿಂದ ಆರಂಭವಾಗುವ ವಾರ

ಗೀತೆ 40

10 ನಿ:  ಸ್ಥಳಿಕ ಪ್ರಕಟನೆಗಳು.

20 ನಿ:  ಯೆಹೋವನನ್ನು ನಿಮ್ಮ ದೇವರನ್ನಾಗಿ ಮಾಡುವುದು. ಏಪ್ರಿಲ್‌ 1, 2005ರ ಕಾವಲಿನಬುರುಜುವಿನ ಪುಟ 25-8ರ ಮೇಲಾಧರಿತವಾದ ಒಬ್ಬ ಹಿರಿಯನಿಂದ ನೀಡಲ್ಪಡುವ ಭಾಷಣ. ಅಬ್ರಹಾಮ, ದಾವೀದ ಮತ್ತು ಎಲೀಯನ ಉದಾಹರಣೆಗಳಿಂದ ನಾವು ಕಲಿಯಬಲ್ಲ ಪಾಠಗಳ ಪ್ರಾಯೋಗಿಕ ಅನ್ವಯವನ್ನು ಮಾಡಿರಿ.

15 ನಿ:  “ವೈಯಕ್ತಿಕ ಆಸಕ್ತಿಯನ್ನು ತೋರಿಸಿರಿ​—⁠ಗಮನಿಸುವವರಾಗಿರುವ ಮೂಲಕ.”b ಒಬ್ಬ ಪ್ರಚಾರಕನು ಮನೆಯವನ ಆಸಕ್ತಿಯನ್ನು ಹೊರಗೆಡಹುವ ಯಾವುದೊ ಒಂದು ವಿಷಯವನ್ನು ಗಮನಿಸಿ ಅನಂತರ ಅದಕ್ಕೆ ತಕ್ಕ ಹಾಗೆ ತನ್ನ ಹೇಳಿಕೆಗಳನ್ನು ಹೊಂದಿಸಿಕೊಳ್ಳುವ ಒಂದು ಪ್ರತ್ಯಕ್ಷಾಭಿನಯವನ್ನು ಸೇರಿಸಿಕೊಳ್ಳಿ.

ಗೀತೆ 67 ಮತ್ತು ಸಮಾಪ್ತಿಯ ಪ್ರಾರ್ಥನೆ.

ನವೆಂಬರ್‌ 28ರಿಂದ ಆರಂಭವಾಗುವ ವಾರ

ಗೀತೆ 7

12 ನಿ:  ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್‌ ವರದಿ ಮತ್ತು ದಾನಗಳ ಅಂಗೀಕಾರ ಪತ್ರಗಳನ್ನು ಓದಿರಿ. ನವೆಂಬರ್‌ ತಿಂಗಳಿಗಾಗಿರುವ ಕ್ಷೇತ್ರ ಸೇವಾ ವರದಿಗಳನ್ನು ಹಾಕುವಂತೆ ಪ್ರಚಾರಕರಿಗೆ ಜ್ಞಾಪಿಸಿರಿ. ಅಕ್ಟೋಬರ್‌-ಡಿಸೆಂಬರ್‌ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೂರನೆಯದ್ದು) ಮತ್ತು ಡಿಸೆಂಬರ್‌ 1ರ ಕಾವಲಿನಬುರುಜು ಪತ್ರಿಕೆಗಳನ್ನು ಹೇಗೆ ನೀಡುವುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಲಿಕ್ಕಾಗಿ ಪುಟ 4ರಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು (ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವುದಾದರೆ) ಉಪಯೋಗಿಸಿರಿ. ಇತರ ಪ್ರಾಯೋಗಿಕ ನಿರೂಪಣೆಗಳು ಉಪಯೋಗಿಸಲ್ಪಡಬಹುದು. ದಾನದ ಏರ್ಪಾಡಿನ ಕುರಿತು ತಿಳಿಸುವುದನ್ನು ಸೇರಿಸಿಕೊಳ್ಳಿ.

15 ನಿ:  “ನಾವು ಹೇಗೆ ಸಹಾಯಮಾಡಬಲ್ಲೆವು?” ಒಂದು ಭಾಷಣ. ಸಂಕಷ್ಟದಲ್ಲಿರುವ ಜೊತೆ ವಿಶ್ವಾಸಿಗಳಿಗೆ ಪರಿಹಾರವನ್ನು ಒದಗಿಸಲು ಯೆಹೋವನ ಸೇವಕರು ಮಾಡಿರುವ ಪ್ರಯತ್ನಗಳ ಕೆಲವು ಉದಾಹರಣೆಗಳನ್ನು ಕೊಡಿರಿ. (ಈ ಎಚ್ಚರ! [ಇಂಗ್ಲಿಷ್‌] ಸಂಚಿಕೆಗಳನ್ನು ನೋಡಿ: 2003, ಆಗಸ್ಟ್‌ 8, ಪು. 10-15; 2002, ನವೆಂಬರ್‌ 22, ಪು. 19-24; ಮತ್ತು 2001, ಅಕ್ಟೋಬರ್‌ 22, ಪು. 23-7. ಇತರ ರೆಫರೆನ್ಸ್‌ಗಳನ್ನು ಸಹ ಉಪಯೋಗಿಸಬಹುದು.) ಅನಂತರ ನಮ್ಮ ರಾಜ್ಯದ ಸೇವೆಯ ಪುಟ 3ರಲ್ಲಿರುವ ಲೇಖನದಿಂದ ಮುಖ್ಯ ಅಂಶಗಳನ್ನು ಚರ್ಚಿಸಿರಿ. ಮಾನವೀಯ ಹಾಗೂ ಪರಿಹಾರ ನೆರವಿಗಾಗಿ ದಾನವನ್ನು ನೀಡಲು ಯಾರಾದರೂ ಬಯಸುವಲ್ಲಿ, ಲೋಕವ್ಯಾಪಕ ಕೆಲಸಕ್ಕಾಗಿ ಕಾಣಿಕೆಗಳನ್ನು ಕೊಡುವ ಮೂಲಕ ಹಾಗೆ ಮಾಡಬಹುದೆಂದು ಒತ್ತಿಹೇಳಿರಿ.

18 ನಿ:  ಡಿಸೆಂಬರ್‌ ತಿಂಗಳಿನಲ್ಲಿ ಸುವಾರ್ತೆಯನ್ನು ಸಾರುವುದು. ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ. ಆರಂಭದ ಐದು ನಿಮಿಷಗಳ ಭಾಷಣದಲ್ಲಿ, ಜನವರಿ 2005ರ ನಮ್ಮ ರಾಜ್ಯದ ಸೇವೆಯ ಪುಟ 8ರಲ್ಲಿರುವ “ಮಾದರಿ ನಿರೂಪಣೆಗಳನ್ನು ಉಪಯೋಗಿಸುವ ವಿಧ” ಎಂಬ ಭಾಗದಿಂದ ಮುಂದಿನ ಅಂಶಗಳನ್ನು ಸಂಕ್ಷಿಪ್ತವಾಗಿ ಪರಿಶೀಲಿಸಿರಿ: (1) ನಾವು ಮಾದರಿ ನಿರೂಪಣೆಗಳನ್ನು ನಮ್ಮ ಸ್ವಂತ ಮಾತುಗಳಲ್ಲಿ ಪ್ರಸ್ತುತಪಡಿಸುವುದಾದರೆ ಅವು ಹೆಚ್ಚು ಪರಿಣಾಮಕಾರಿಯಾಗಿರುವವು. (2) ನಾವು ಒಳ್ಳೆಯ ತೀರ್ಮಾನಶಕ್ತಿಯನ್ನು ಉಪಯೋಗಿಸಬೇಕು ಮತ್ತು ಸ್ಥಳಿಕವಾಗಿ ಯಾವುದು ಸ್ವೀಕಾರಾರ್ಹವಾಗಿದೆಯೋ ಅದಕ್ಕೆ ತಕ್ಕ ಹಾಗೆ ನಮ್ಮ ನಿರೂಪಣೆಗಳನ್ನು ಹೊಂದಿಸಿಕೊಳ್ಳಬೇಕು. (3) ನಾವು ನಮ್ಮ ಟೆರಿಟೊರಿಯಲ್ಲಿರುವ ಜನರ ಹಿನ್ನೆಲೆ ಮತ್ತು ಯೋಚನಾಧಾಟಿಯನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕು. (4) ನಾವು ತೋರಿಸಲು ಯೋಜಿಸುವ ಅಧ್ಯಾಯವನ್ನು ಜಾಗರೂಕವಾಗಿ ಓದಬೇಕು ಮತ್ತು ಆಸಕ್ತಿಯನ್ನು ಕೆರಳಿಸಬಹುದಾದ ಅಂಶಗಳಿಗಾಗಿ ಹುಡುಕಬೇಕು. (5) ನಾವು ಕೊಡಲ್ಪಟ್ಟಿರುವ ಮಾದರಿ ನಿರೂಪಣೆಗಳನ್ನು ಮಾತ್ರ ಉಪಯೋಗಿಸಲು ನಿರ್ಬಂಧಿಸಲ್ಪಟ್ಟಿರುವುದಿಲ್ಲ. ಅನಂತರ ಈ ಅಂಶಗಳನ್ನು ಡಿಸೆಂಬರ್‌ ತಿಂಗಳಿಗಾಗಿನ ಸಾಹಿತ್ಯ ನೀಡುವಿಕೆಯಲ್ಲಿ ಹೇಗೆ ಅನ್ವಯಿಸಬಹುದು ಎಂಬುದರ ಕುರಿತು ಚರ್ಚಿಸಿರಿ. ನೀವು ಜನವರಿ 2005ರ ನಮ್ಮ ರಾಜ್ಯದ ಸೇವೆಯ ಪುರವಣಿಯಲ್ಲಿರುವ ಮಾದರಿ ನಿರೂಪಣೆಗಳನ್ನು ಅಥವಾ ಸ್ಥಳಿಕವಾಗಿ ಪರಿಣಾಮಕಾರಿಯಾಗಿರುವ ಇತರ ನಿರೂಪಣೆಗಳನ್ನು ಉಪಯೋಗಿಸಬಹುದು. ಒಂದು ಅಥವಾ ಎರಡು ನಿರೂಪಣೆಗಳನ್ನು ಪ್ರತ್ಯಕ್ಷಾಭಿನಯಿಸಿರಿ.

ಗೀತೆ 123 ಮತ್ತು ಸಮಾಪ್ತಿಯ ಪ್ರಾರ್ಥನೆ.

ಡಿಸೆಂಬರ್‌ 5ರಿಂದ ಆರಂಭವಾಗುವ ವಾರ

ಗೀತೆ 38

10 ನಿ:  ಸ್ಥಳಿಕ ಪ್ರಕಟನೆಗಳು.

15 ನಿ:  ಸ್ಥಳಿಕ ಅಗತ್ಯಗಳು.

20 ನಿ:  “ನಮ್ಮ ಶುಶ್ರೂಷೆಯು ಏನನ್ನು ಪೂರೈಸುತ್ತದೆ?”c ಪ್ಯಾರಗ್ರಾಫ್‌ 5ನ್ನು ಪರಿಗಣಿಸುವಾಗ 2004, ಫೆಬ್ರವರಿ 15ರ ಕಾವಲಿನಬುರುಜು ಪತ್ರಿಕೆಯ ಪುಟ 32ರ ಮೇಲೆ ಹೇಳಿಕೆಗಳನ್ನು ಸೇರಿಸಿಕೊಳ್ಳಿ.

ಗೀತೆ 26 ಮತ್ತು ಸಮಾಪ್ತಿಯ ಪ್ರಾರ್ಥನೆ.

[ಪಾದಟಿಪ್ಪಣಿಗಳು]

a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ಬಳಿಕ ಪ್ರಶ್ನೋತ್ತರಗಳ ಚರ್ಚೆಯಿರಲಿ.

b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ಬಳಿಕ ಪ್ರಶ್ನೋತ್ತರಗಳ ಚರ್ಚೆಯಿರಲಿ.

c ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ಬಳಿಕ ಪ್ರಶ್ನೋತ್ತರಗಳ ಚರ್ಚೆಯಿರಲಿ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ