ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 10/05 ಪು. 2
  • ಸೇವಾ ಕೂಟದ ಶೆಡ್ಯೂಲ್‌

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೇವಾ ಕೂಟದ ಶೆಡ್ಯೂಲ್‌
  • 2005 ನಮ್ಮ ರಾಜ್ಯದ ಸೇವೆ
  • ಉಪಶೀರ್ಷಿಕೆಗಳು
  • ಅಕ್ಟೋಬರ್‌ 10ರಿಂದ ಆರಂಭವಾಗುವ ವಾರ
  • ಅಕ್ಟೋಬರ್‌ 17ರಿಂದ ಆರಂಭವಾಗುವ ವಾರ
  • ಅಕ್ಟೋಬರ್‌ 24ರಿಂದ ಆರಂಭವಾಗುವ ವಾರ
  • ಅಕ್ಟೋಬರ್‌ 31ರಿಂದ ಆರಂಭವಾಗುವ ವಾರ
  • ನವೆಂಬರ್‌ 7ರಿಂದ ಆರಂಭವಾಗುವ ವಾರ
2005 ನಮ್ಮ ರಾಜ್ಯದ ಸೇವೆ
km 10/05 ಪು. 2

ಸೇವಾ ಕೂಟದ ಶೆಡ್ಯೂಲ್‌

ಅಕ್ಟೋಬರ್‌ 10ರಿಂದ ಆರಂಭವಾಗುವ ವಾರ

ಗೀತೆ 17

10 ನಿ:  ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. ಅಕ್ಟೋಬರ್‌-ಡಿಸೆಂಬರ್‌ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೊದಲನೆಯದ್ದು) ಮತ್ತು ಅಕ್ಟೋಬರ್‌ 15ರ ಕಾವಲಿನಬುರುಜು ಪತ್ರಿಕೆಗಳನ್ನು ಹೇಗೆ ನೀಡುವುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಲಿಕ್ಕಾಗಿ ಪುಟ 8ರಲ್ಲಿರುವ ಸಲಹೆಗಳನ್ನು (ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವುದಾದರೆ) ಉಪಯೋಗಿಸಿರಿ. ಪ್ರತಿಯೊಂದು ಪ್ರತ್ಯಕ್ಷಾಭಿನಯದ ನಂತರ, ನಿರೂಪಣೆಯ ಕೆಲವು ಒಳ್ಳೆಯ ಅಂಶಗಳನ್ನು ಎತ್ತಿತೋರಿಸಿರಿ. ಇದಕ್ಕೆ ಕೂಡಿಸಿ, ನಿಮ್ಮ ಸ್ಥಳಿಕ ಕ್ಷೇತ್ರದಲ್ಲಿರುವ ಜನರನ್ನು ಆಕರ್ಷಿಸುವ ಇತರ ಲೇಖನಗಳ ಕಡೆಗೆ ಗಮನ ಸೆಳೆಯಿರಿ.

15 ನಿ:  ನಿಮಗೆ ಒಳ್ಳೆಯ ಓದುವ ರೂಢಿಗಳಿವೆಯೋ? ಶುಶ್ರೂಷಾ ಶಾಲೆ ಪುಸ್ತಕದ 21-6ನೆಯ ಪುಟಗಳಿಂದ ಆಯ್ದ ಭಾಗಗಳ ಮೇಲಾಧಾರಿತವಾದ ಸಭಿಕರೊಂದಿಗಿನ ಚರ್ಚೆ. ನಮ್ಮ ವಾಚನ ಕಾರ್ಯಕ್ರಮದಲ್ಲಿ ಏನನ್ನು ಒಳಗೂಡಿಸಬಹುದು? (ಪು. 21, ಚೌಕ) ಒದಗಿಸಲ್ಪಡುವ ಸಾಹಿತ್ಯಗಳನ್ನು ಓದುವುದು ಏಕೆ ಪ್ರಾಮುಖ್ಯವಾಗಿದೆ? (ಪು. 23, ಪ್ಯಾರ. 2) ಒಳ್ಳೆಯ ವಾಚನ ಕಾರ್ಯಕ್ರಮವನ್ನು ಇಟ್ಟುಕೊಳ್ಳುವುದಕ್ಕೆ ಕೀಲಿಕೈ ಯಾವುದು? (ಪು. 26, ಪ್ಯಾ. 3-4) ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ಓದಲು ನೀವು ಹೇಗೆ ಸಮಯವನ್ನು ಬದಿಗಿರಿಸುತ್ತೀರಿ? ಇದು ನಿಮಗೆ ಹೇಗೆ ಪ್ರಯೋಜನವನ್ನು ತಂದಿದೆ?

20 ನಿ:  “ದೇವರ ವಾಕ್ಯವನ್ನು ಧೈರ್ಯದಿಂದ ಹೇಳುತ್ತಾ ಇರಿ.”a ಧೈರ್ಯದಿಂದ ಸಾಕ್ಷಿ ನೀಡಲು ಕಷ್ಟಕರವಾಗುವಂಥ ಸನ್ನಿವೇಶಗಳ ಕುರಿತು ಹೇಳಿಕೆಗಳನ್ನು ನೀಡುವಂತೆ ಸಭಿಕರನ್ನು ಆಮಂತ್ರಿಸಿರಿ. ಹೀಗೆ ಸಾಕ್ಷಿ ನೀಡಲು ಅವರಿಗೆ ಯಾವುದು ಸಹಾಯಮಾಡಿದೆ?

ಗೀತೆ 78 ಮತ್ತು ಸಮಾಪ್ತಿಯ ಪ್ರಾರ್ಥನೆ.

ಅಕ್ಟೋಬರ್‌ 17ರಿಂದ ಆರಂಭವಾಗುವ ವಾರ

ಗೀತೆ 36

10 ನಿ:  ಸ್ಥಳಿಕ ಪ್ರಕಟನೆಗಳು. ಸೆಪ್ಟೆಂಬರ್‌ 2005ರ ನಮ್ಮ ರಾಜ್ಯದ ಸೇವೆಯ ಪುರವಣಿಯ ಭಾಗ 3ನ್ನು ಉಪಯೋಗಿಸಿ, ಬೈಬಲ್‌ ಅಧ್ಯಯನಗಳನ್ನು ನಡೆಸುವಾಗ ಶಾಸ್ತ್ರವಚನಗಳನ್ನು ಹೇಗೆ ಪರಿಣಾಮಕಾರಿಯಾಗಿ ಉಪಯೋಗಿಸಸಾಧ್ಯವಿದೆ ಎಂಬುದರ ಕುರಿತು ಒಂದು ಅಥವಾ ಎರಡು ಅಂಶಗಳನ್ನು ಪುನರ್ವಿಮರ್ಶಿಸಿರಿ.

15 ನಿ:  ಇಂಟರ್‌ನೆಟ್‌ನ ಅಪಾಯಗಳಿಂದ ದೂರವಿರಿ. ನವೆಂಬರ್‌ 1999ರ ನಮ್ಮ ರಾಜ್ಯದ ಸೇವೆಯ ಪುಟ 3-6ರ ಮೇಲಾಧಾರಿತವಾದ ಹಿರಿಯನಿಂದ ಭಾಷಣ.

20 ನಿ:  “ವೈಯಕ್ತಿಕ ಆಸಕ್ತಿಯನ್ನು ತೋರಿಸಿರಿ​—⁠ದಯೆ ತೋರಿಸುವ ಮೂಲಕ.”b ಕ್ಷೇತ್ರ ಶುಶ್ರೂಷೆಯಲ್ಲಿ ಪಾಲ್ಗೊಳ್ಳುವಾಗ ಇತರರಿಗೆ ಹೇಗೆ ದಯೆ ತೋರಿಸಸಾಧ್ಯವಿದೆ ಎಂಬುದರ ಕುರಿತು ಸಭಿಕರು ಹೇಳಿಕೆ ನೀಡುವಂತೆ ಆಮಂತ್ರಿಸಿರಿ. ನಾವು ಯಾರಿಗೆ ಸಾರುತ್ತೇವೋ ಅವರಲ್ಲಿ ವೈಯಕ್ತಿಕ ಆಸಕ್ತಿಯನ್ನು ತೋರಿಸುವ ಇನ್ನಿತರ ಅಂಶಗಳನ್ನು ನಮ್ಮ ರಾಜ್ಯದ ಸೇವೆಯ ಮುಂದಿನ ಸಂಚಿಕೆಗಳಲ್ಲಿ ಪರಿಗಣಿಸಲಾಗುವುದು.

ಗೀತೆ 2 ಮತ್ತು ಸಮಾಪ್ತಿಯ ಪ್ರಾರ್ಥನೆ.

ಅಕ್ಟೋಬರ್‌ 24ರಿಂದ ಆರಂಭವಾಗುವ ವಾರ

ಗೀತೆ 68

10 ನಿ:  ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್‌ ವರದಿ ಮತ್ತು ದಾನಗಳ ಅಂಗೀಕಾರ ಪತ್ರಗಳನ್ನು ಓದಿರಿ. ಜನವರಿ 2005ರ ನಮ್ಮ ರಾಜ್ಯದ ಸೇವೆಯ ಪುರವಣಿಯಲ್ಲಿರುವ ಸೂಚಿತ ನಿರೂಪಣೆಗಳಲ್ಲೊಂದನ್ನು ಅಥವಾ ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವ ನಿರೂಪಣೆಯನ್ನು ಉಪಯೋಗಿಸಿ, ನವೆಂಬರ್‌ ತಿಂಗಳಿನ ಸಾಹಿತ್ಯ ನೀಡುವಿಕೆಯನ್ನು ಹೇಗೆ ನೀಡಸಾಧ್ಯವಿದೆ ಎಂಬುದನ್ನು ಪ್ರತ್ಯಕ್ಷಾಭಿನಯಿಸಿರಿ.​—⁠ಜನವರಿ 2005ರ ನಮ್ಮ ರಾಜ್ಯದ ಸೇವೆಯ ಪು. 8, ಪ್ಯಾರ. 5ನ್ನು ನೋಡಿರಿ.

15 ನಿ:  ಸ್ಥಳಿಕ ಅಗತ್ಯಗಳು.

20 ನಿ:  ಉಡುಪು ಮತ್ತು ಕೇಶಾಲಂಕಾರದ ವಿಷಯದಲ್ಲಿ ದೇವರ ಮಟ್ಟಗಳನ್ನು ಪ್ರತಿಬಿಂಬಿಸುವುದು. ಆಗಸ್ಟ್‌ 1, 2002ರ ಕಾವಲಿನಬುರುಜುವಿನ 17-19ನೇ ಪುಟಗಳ ಮೇಲಾಧಾರಿತವಾಗಿ, ಒಬ್ಬ ಹಿರಿಯನಿಂದ ನಿರ್ವಹಿಸಲ್ಪಡಬೇಕಾದ ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ. ಮರ್ಯಾದೆಯುಳ್ಳ ಮತ್ತು ನೀಟಾದ ಹೊರತೋರಿಕೆಯು ಹೇಗೆ ಸಾಕ್ಷಿ ನೀಡಲು ಅವಕಾಶವನ್ನು ಒದಗಿಸಿತು ಎಂಬುದರ ಕುರಿತು ಹೇಳಿಕೆ ನೀಡುವಂತೆ ಸಭಿಕರನ್ನು ಆಮಂತ್ರಿಸಿರಿ.

ಗೀತೆ 153 ಮತ್ತು ಸಮಾಪ್ತಿಯ ಪ್ರಾರ್ಥನೆ.

ಅಕ್ಟೋಬರ್‌ 31ರಿಂದ ಆರಂಭವಾಗುವ ವಾರ

ಗೀತೆ 209

10 ನಿ:  ಸ್ಥಳಿಕ ಪ್ರಕಟನೆಗಳು. ಅಕ್ಟೋಬರ್‌ ತಿಂಗಳಿನ ಕ್ಷೇತ್ರ ಸೇವಾ ವರದಿಗಳನ್ನು ಹಾಕುವಂತೆ ಪ್ರಚಾರಕರಿಗೆ ಜ್ಞಾಪಕಹುಟ್ಟಿಸಿರಿ. ಅಕ್ಟೋಬರ್‌-ಡಿಸೆಂಬರ್‌ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೂರನೆಯದ್ದು) ಮತ್ತು ನವೆಂಬರ್‌ 1ರ ಕಾವಲಿನಬುರುಜು ಪತ್ರಿಕೆಗಳನ್ನು ಹೇಗೆ ನೀಡುವುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಲಿಕ್ಕಾಗಿ ಪುಟ 8ರಲ್ಲಿರುವ ಸಲಹೆಗಳನ್ನು (ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವುದಾದರೆ) ಉಪಯೋಗಿಸಿರಿ. ಒಂದು ನಿರೂಪಣೆಯಲ್ಲಿ, “ನಮ್ಮ ಮುಂದಿನ ಸಂಚಿಕೆಯಲ್ಲಿ” ಎಂಬ ಚೌಕದ ಕಡೆಗೆ ಗಮನವನ್ನು ಸೆಳೆಯುವ ಮೂಲಕ ಮುಂದಿನ ಭೇಟಿಗಾಗಿ ತಳಪಾಯವನ್ನು ಹಾಕಿರಿ.​—⁠ಅಕ್ಟೋಬರ್‌ 1998ರ ನಮ್ಮ ರಾಜ್ಯದ ಸೇವೆಯ ಪು. 8, ಪ್ಯಾರ. 7-8ನ್ನು ನೋಡಿರಿ.

15 ನಿ:  ಆಸಕ್ತಿಯನ್ನು ಬೆಳೆಸಲಿಕ್ಕಾಗಿ ಪತ್ರಿಕಾ ಮಾರ್ಗವನ್ನು ಉಪಯೋಗಿಸಿರಿ. ಮೇ 2005ರ ನಮ್ಮ ರಾಜ್ಯದ ಸೇವೆಯ ಪುಟ 8ರ ಮೇಲಾಧಾರಿತವಾದ ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ. ಪತ್ರಿಕಾ ಮಾರ್ಗವನ್ನು ನಾವು ಹೇಗೆ ಆರಂಭಿಸಬಲ್ಲೆವು? (ಪ್ಯಾರ. 1) ಒಂದೇ ವಚನವನ್ನು ಒಳಗೊಂಡ ಚರ್ಚೆಗಳ ಶ್ರೇಣಿಯನ್ನು ನಾವು ಹೇಗೆ ತಯಾರಿಸಬಲ್ಲೆವು? (ಪ್ಯಾರ. 3) ಆರಿಸಿಕೊಂಡ ವಚನವನ್ನು ಓದುವುದಕ್ಕಿಂತ ಹೆಚ್ಚಿನದ್ದನ್ನು ಮಾಡುವ ಅಗತ್ಯ ಏಕಿದೆ? (ಪ್ಯಾರ. 4) ಪತ್ರಿಕಾ ಮಾರ್ಗದ ಭೇಟಿಯು ಒಂದು ಬೈಬಲ್‌ ಅಧ್ಯಯನವಾಗಿ ಹೇಗೆ ಬದಲಾಗಬಹುದು? (ಪ್ಯಾರ. 5) ಒಬ್ಬ ಪ್ರಚಾರಕನು ತನ್ನ ಪತ್ರಿಕಾ ಮಾರ್ಗದಲ್ಲಿನ ಒಬ್ಬ ವ್ಯಕ್ತಿಯೊಂದಿಗೆ ಒಂದೇ ವಚನವನ್ನು ಒಳಗೊಂಡ ಚರ್ಚೆಯನ್ನು ಹೇಗೆ ಮಾಡುತ್ತಾನೆ ಎಂಬುದನ್ನು ಪ್ರತ್ಯಕ್ಷಾಭಿನಯಿಸಿರಿ.

20 ನಿ:  ದೃಢಸಂಕಲ್ಪವುಳ್ಳವರು ಮತ್ತು ಅದೇ ಸಮಯದಲ್ಲಿ ಗೌರವಪೂರ್ವಕರಾಗಿರುವ ಯುವ ಜನರು. ಸೆಪ್ಟೆಂಬರ್‌ 15, 2002ರ ಕಾವಲಿನಬುರುಜುವಿನ 23-4ನೇ ಪುಟಗಳಲ್ಲಿರುವ “ಗೌರವಪೂರ್ವಕವಾಗಿ ದೂರವಿರಿ” ಎಂಬ ಉಪಶೀರ್ಷಿಕೆಯ ಮೇಲಾಧಾರಿತವಾದ ಹಿರಿಯನಿಂದ ಭಾಷಣ. ಶಾಲೆಯಲ್ಲಿ ತಾವು ಎದುರಿಸಿದ ಪಂಥಾಹ್ವಾನಗಳ ಕುರಿತು ಮತ್ತು ಅವುಗಳನ್ನು ನಿಭಾಯಿಸಲು ಅವರಿಗೆ ಯಾವುದು ಸಹಾಯಮಾಡಿತು ಎಂಬುದರ ಕುರಿತು ಒಬ್ಬರು ಅಥವಾ ಇಬ್ಬರು ಯುವ ಜನರು ಹೇಳಿಕೆ ನೀಡುವಂತೆ ಮುಂಚಿತವಾಗಿಯೇ ಏರ್ಪಾಡುಮಾಡಿರಿ.

ಗೀತೆ 222 ಮತ್ತು ಸಮಾಪ್ತಿಯ ಪ್ರಾರ್ಥನೆ.

ನವೆಂಬರ್‌ 7ರಿಂದ ಆರಂಭವಾಗುವ ವಾರ

ಗೀತೆ 39

5 ನಿ: ಸ್ಥಳಿಕ ಪ್ರಕಟನೆಗಳು.

20 ನಿ:  ಕೂಟಗಳಲ್ಲಿ ನಿಮ್ಮ ಏಕಾಗ್ರತೆಯನ್ನು ಹೆಚ್ಚಿಸಿರಿ. ಸೆಪ್ಟೆಂಬರ್‌ 15, 2002ರ ಕಾವಲಿನಬುರುಜುವಿನ ಪುಟ 12-14, ಪ್ಯಾರಗ್ರಾಫ್‌ 11-14ರ ಮೇಲಾಧಾರಿತವಾದ ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ. ಕೊಡಲ್ಪಟ್ಟ ಸಲಹೆಗಳನ್ನು ಪುನರ್ವಿಮರ್ಶಿಸಿರಿ ಮತ್ತು ಸಭಾ ಕೂಟಗಳಿಂದ ಅತ್ಯಂತ ಹೆಚ್ಚಿನ ಪ್ರಯೋಜನವನ್ನು ಪಡೆದುಕೊಳ್ಳಲು ತಮಗೆ ಯಾವುದು ಸಹಾಯಮಾಡಿತೆಂಬುದರ ಕುರಿತು ಹೇಳಿಕೆಗಳನ್ನು ನೀಡುವಂತೆ ಸಭಿಕರನ್ನು ಆಮಂತ್ರಿಸಿರಿ.

20 ನಿ:  “ಇತರರೊಂದಿಗೆ ತರ್ಕಬದ್ಧವಾಗಿ ಮಾತಾಡುವುದರಲ್ಲಿ ಕೌಶಲವನ್ನು ಬೆಳೆಸಿಕೊಳ್ಳಿ.”c ಸ್ಥಳಿಕ ಕ್ಷೇತ್ರದಲ್ಲಿರುವ ವಿಭಿನ್ನ ಹಿನ್ನೆಲೆಯ ಜನರೊಂದಿಗೆ ತರ್ಕಬದ್ಧವಾಗಿ ಮಾತಾಡಲು ಅವರು ಹೇಗೆ ಶಕ್ತರಾದರು ಎಂಬುದನ್ನು ತಿಳಿಸುವಂತೆ ಆಯ್ದ ಪ್ರಚಾರಕರನ್ನು ಆಮಂತ್ರಿಸಿರಿ.

ಗೀತೆ 50 ಮತ್ತು ಸಮಾಪ್ತಿಯ ಪ್ರಾರ್ಥನೆ.

[ಪಾದಟಿಪ್ಪಣಿಗಳು]

a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ಬಳಿಕ ಪ್ರಶ್ನೋತ್ತರಗಳ ಚರ್ಚೆಯಿರಲಿ.

b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ಬಳಿಕ ಪ್ರಶ್ನೋತ್ತರಗಳ ಚರ್ಚೆಯಿರಲಿ.

c ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ಬಳಿಕ ಪ್ರಶ್ನೋತ್ತರಗಳ ಚರ್ಚೆಯಿರಲಿ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ