ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 8/05 ಪು. 7
  • ಪ್ರಕಟನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟನೆಗಳು
  • 2005 ನಮ್ಮ ರಾಜ್ಯದ ಸೇವೆ
2005 ನಮ್ಮ ರಾಜ್ಯದ ಸೇವೆ
km 8/05 ಪು. 7

ಪ್ರಕಟನೆಗಳು

◼ ಸಾಹಿತ್ಯ ನೀಡುವಿಕೆ​—⁠ಆಗಸ್ಟ್‌: ಈ ಮುಂದೆ ತಿಳಿಸಲ್ಪಟ್ಟಿರುವ ಯಾವುದೇ 32 ಪುಟಗಳ ಬ್ರೋಷರ್‌ಗಳನ್ನು ಉಪಯೋಗಿಸಬಹುದು: ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?, ಭೂಮಿಯಲ್ಲಿ ಸದಾಜೀವನವನ್ನು ಆನಂದಿಸಿರಿ!, “ಇಗೋ! ಎಲ್ಲವನ್ನು ಹೊಸದು ಮಾಡುತ್ತೇನೆ,” ನೀವು ತ್ರಯೈಕ್ಯವನ್ನು ನಂಬ ಬೇಕೋ?, ಪರದೈಸನ್ನು ತರಲಿರುವ ಸರಕಾರ,a ನಾವು ಮೃತರಾದಾಗ ನಮಗೆ ಏನು ಸಂಭವಿಸುತ್ತದೆ?,b ಜೀವಿತದ ಉದ್ದೇಶವೇನು?​—⁠ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?, ಮತ್ತು ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ. ಸೆಪ್ಟೆಂಬರ್‌: ನಿಮ್ಮ ಕುರಿತು ಕಾಳಜಿ ವಹಿಸುವ ಒಬ್ಬ ಸೃಷ್ಟಿಕರ್ತನಿದ್ದಾನೊ? ಪುಸ್ತಕ,c ಬದಲಿ ನೀಡುವಿಕೆಯಾಗಿ ಜೀವ​—⁠ಅದು ಇಲ್ಲಿಗೆ ಹೇಗೆ ಬಂತು? ವಿಕಾಸದಿಂದಲೋ ಸೃಷ್ಟಿಯಿಂದಲೋ?d ಎಂಬ ಪುಸ್ತಕ ಅಥವಾ ಯಾವುದೇ 192 ಪುಟಗಳ ಹಳೆಯ ಪುಸ್ತಕಗಳನ್ನು ನೀಡಬಹುದು. ಮನೆಯವರು ಪುಸ್ತಕವನ್ನು ಸ್ವೀಕರಿಸದಿದ್ದರೆ, ಎಚ್ಚರಿಕೆಯಿಂದಿರಿ! ಬ್ರೋಷರನ್ನು ನೀಡಿರಿ. ಅಕ್ಟೋಬರ್‌: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಬಿಡಿ ಪ್ರತಿಗಳನ್ನು ನೀಡಿರಿ. ಆಸಕ್ತಿಯು ತೋರಿಸಲ್ಪಟ್ಟಲ್ಲಿ ಅಪೇಕ್ಷಿಸು ಬ್ರೋಷರನ್ನು ದಯವಿಟ್ಟು ಪರಿಚಯಪಡಿಸಿರಿ. ನವೆಂಬರ್‌: ಮಹಾ ಬೋಧಕನಿಂದ ಕಲಿಯಿರಿe ಪುಸ್ತಕವನ್ನು ನೀಡಿರಿ. ಮನೆಯವರಿಗೆ ಮಕ್ಕಳಿಲ್ಲ ಎಂದು ತಿಳಿದುಬಂದಲ್ಲಿ, ಜ್ಞಾನ ಪುಸ್ತಕ ಇಲ್ಲವೆ ಬೈಬಲಿನ ಕುರಿತು ಹೆಚ್ಚನ್ನು ತಿಳಿದುಕೊಳ್ಳಲು ನೀವು ಬಯಸುವಿರೋ? ಎಂಬ ಟ್ರ್ಯಾಕ್ಟ್‌ ಅನ್ನು ನೀಡಿರಿ.

◼ ಅಕ್ಟೋಬರ್‌ ತಿಂಗಳಿನಲ್ಲಿ ಐದು ವಾರಾಂತ್ಯಗಳಿರುವ ಕಾರಣ ಆಕ್ಸಿಲಿಯರಿ ಪಯನೀಯರ್‌ ಸೇವೆಯನ್ನು ಮಾಡಲು ಅದು ಅತ್ಯುತ್ತಮ ತಿಂಗಳಾಗಿದೆ.

◼ ಇಸವಿ 2006ಕ್ಕಾಗಿನ ಸರ್ಕಿಟ್‌ ಸಮ್ಮೇಳನ ಮತ್ತು ವಿಶೇಷ ಸಮ್ಮೇಳನ ದಿನ ಕಾರ್ಯಕ್ರಮಕ್ಕೆ ಸಂಬಂಧಿಸಿದ ವಿಷಯಗಳ ಚರ್ಚೆಗಾಗಿ ನಮ್ಮ ರಾಜ್ಯದ ಸೇವೆಯ ಈ ಸಂಚಿಕೆಯ ಪುಟ 5 ಮತ್ತು 6ನ್ನು ಜೋಪಾನವಾಗಿಡಿರಿ.

◼ ಅಧ್ಯಕ್ಷ ಮೇಲ್ವಿಚಾರಕನು ಅಥವಾ ಅವನಿಂದ ನೇಮಿಸಲ್ಪಟ್ಟವರು ಸಭೆಯ ಅಕೌಂಟ್ಸ್‌ ಅನ್ನು ಸೆಪ್ಟೆಂಬರ್‌ 1ರಂದು ಅಥವಾ ಅದರ ನಂತರ ಆದಷ್ಟು ಬೇಗನೆ ಆಡಿಟ್‌ ಮಾಡಬೇಕು. ಮೈಂಟೇನನ್ಸ್‌ ಅಥವಾ ನಿರ್ಮಾಣಕಾರ್ಯಕ್ಕಾಗಿ ಒಂದು ಭಿನ್ನ ಅಕೌಂಟನ್ನು ಹೊಂದಿರುವುದಾದರೆ, ಆ ಅಕೌಂಟನ್ನು ಸಹ ಆಡಿಟ್‌ ಮಾಡಲು ಏರ್ಪಾಡುಗಳು ಮಾಡಲ್ಪಡಬೇಕು. ಆಡಿಟ್‌(ಗಳು) ಮುಗಿದ ಅನಂತರ, ಮುಂದಿನ ಅಕೌಂಟ್ಸ್‌ ವರದಿಯೊಂದಿಗೆ ಇದರ ಕುರಿತು ಸಭೆಗೆ ಪ್ರಕಟನೆಯೊಂದನ್ನು ಮಾಡಬೇಕು.

◼ ದಯವಿಟ್ಟು ನೆನಪಿನಲ್ಲಿಡಿ, ಯಾವುದೇ ವೈಯಕ್ತಿಕ ಪತ್ರಗಳಲ್ಲಿ, ಕಳುಹಿಸಿದವರ ವಿಳಾಸದ ಸ್ಥಳದಲ್ಲಿ ಬ್ರಾಂಚ್‌ ಆಫೀಸಿನ ವಿಳಾಸವನ್ನು ಎಂದಿಗೂ ಉಪಯೋಗಿಸಬಾರದು. ಆಸಕ್ತ ಜನರಿಗೆ, ಮನೆಯಲ್ಲಿ ಸಿಗದವರಿಗೆ ಅಥವಾ ತಲಪಲು ಕಷ್ಟಕರವಾದ ಸ್ಥಳದಲ್ಲಿ ವಾಸಿಸುವವರಿಗೆ ಸಾಕ್ಷಿನೀಡುವ ಉದ್ದೇಶದಿಂದ ಪತ್ರವನ್ನು ಬರೆದು ಕಳುಹಿಸುವಾಗ ಅಥವಾ ಸಾಹಿತ್ಯವನ್ನು ಕಳುಹಿಸುವಾಗಲೂ ಇದು ಅನ್ವಯವಾಗುತ್ತದೆ. ಪ್ರಚಾರಕನು, ಕಳುಹಿಸಿದವರ ವಿಳಾಸದ ಸ್ಥಳದಲ್ಲಿ ತನ್ನ ವೈಯಕ್ತಿಕ ವಿಳಾಸವನ್ನು ನೀಡಬಹುದು, ಏಕೆಂದರೆ ಅವನ ಶುಶ್ರೂಷೆಯು ದೇವರಿಗೆ ಅವನು ಸಲ್ಲಿಸುವ ವೈಯಕ್ತಿಕ ಸೇವೆಯಾಗಿದೆ. (ಮತ್ತಾ. 28:​19, 20; ರೋಮಾ. 10:​14, 15) ಆದರೆ ಒಂದುವೇಳೆ ತನ್ನ ವೈಯಕ್ತಿಕ ವಿಳಾಸವನ್ನು ನೀಡುವುದು ವಿವೇಕಯುತವಲ್ಲವೆಂದು ಅವನಿಗನಿಸುವಲ್ಲಿ, ಅವನು ತನ್ನ ಹೆಸರನ್ನು ಮತ್ತು ರಾಜ್ಯ ಸಭಾಗೃಹದ ವಿಳಾಸವನ್ನು ನೀಡಬಹುದು.​—⁠2002ರ ಮೇ ತಿಂಗಳಿನ ನಮ್ಮ ರಾಜ್ಯದ ಸೇವೆಯ ಪ್ರಶ್ನಾ ಚೌಕವನ್ನು ನೋಡಿರಿ.

◼ ಸಭೆಯಲ್ಲಿರುವ ಪ್ರತಿಯೊಬ್ಬ ರೆಗ್ಯುಲರ್‌ ಪಯನೀಯರರಿಗೆ ಒಂದು ಪಯನೀಯರ್‌ ನೇಮಕ ಪತ್ರ (S-202) ಇದೆ ಎಂಬುದನ್ನು ಸಭೆಯ ಸೆಕ್ರಿಟರಿ ಖಾತ್ರಿಪಡಿಸಿಕೊಳ್ಳಬೇಕು. ಒಂದುವೇಳೆ ಇಲ್ಲದಿದ್ದರೆ, ದಯಮಾಡಿ ಬ್ರಾಂಚ್‌ ಆಫೀಸಿಗೆ ಬರೆಯಿರಿ. (ಎಲ್ಲಾ ಹಿರಿಯರ ಮಂಡಲಿಗಳಿಗೆ ಕಳುಹಿಸಲಾದ 1999, ಜುಲೈ 5ರ ಪತ್ರವನ್ನು ದಯಮಾಡಿ ನೋಡಿ.)

◼ ಸ್ಟಾಕ್‌ನಲ್ಲಿರುವ ಎಲ್ಲ ಸಾಹಿತ್ಯ ಹಾಗೂ ಪತ್ರಿಕೆಗಳ ವಾರ್ಷಿಕ ಇನ್ವೆಂಟರಿಯನ್ನು, 2005ರ ಆಗಸ್ಟ್‌ 31ರಂದು ಅಥವಾ ಅದಕ್ಕೆ ಸಾಧ್ಯವಿರುವಷ್ಟು ಹತ್ತಿರದ ತಾರೀಖಿನಂದು ತಯಾರಿಸತಕ್ಕದ್ದು. ಈ ಇನ್ವೆಂಟರಿಯು ಸಾಹಿತ್ಯ ಸಂಯೋಜಕನಿಂದ ಮಾಸಿಕವಾಗಿ ಮಾಡಲ್ಪಡುವ ಲೆಕ್ಕದಂತೆಯೇ ಇರುವುದು, ಮತ್ತು ಒಟ್ಟು ಮೊತ್ತಗಳನ್ನು ಲಿಟ್‌ರೇಚರ್‌ ಇನ್ವೆಂಟರಿ (S-18) ಫಾರ್ಮ್‌ನಲ್ಲಿ ಭರ್ತಿಮಾಡಬೇಕು. ಸದ್ಯಕ್ಕೆ ಸ್ಟಾಕ್‌ನಲ್ಲಿ ಎಷ್ಟು ಪತ್ರಿಕೆಗಳಿವೆ ಎಂಬುದನ್ನು ಪತ್ರಿಕಾ ಸೇವಕನಿಂದ(ರಿಂದ) ಕೇಳಿ ತಿಳಿದುಕೊಳ್ಳಬೇಕು. ಸಹಯೋಜಕ ಸಭೆಯ ಸೆಕ್ರಿಟರಿಯು ಇನ್ವೆಂಟರಿಯ ಕೆಲಸದ ಮೇಲ್ವಿಚಾರಣೆಯನ್ನು ಮಾಡಬೇಕು. ಅವನು ಮತ್ತು ಸಹಯೋಜಕ ಸಭೆಯ ಅಧ್ಯಕ್ಷ ಮೇಲ್ವಿಚಾರಕನು ಫಾರ್ಮ್‌ಗೆ ಸಹಿಹಾಕುವರು. ಪ್ರತಿಯೊಂದು ಸಹಯೋಜಕ ಸಭೆಯು ಮೂರು ಲಿಟ್‌ರೇಚರ್‌ ಇನ್ವೆಂಟರಿ (S-18) ಫಾರ್ಮ್‌ಗಳನ್ನು ಪಡೆದುಕೊಳ್ಳುವುದು. ದಯವಿಟ್ಟು ಮೂಲ ಪ್ರತಿಯನ್ನು ಸೆಪ್ಟೆಂಬರ್‌ 6ನೆಯ ತಾರೀಖಿನೊಳಗೆ ಬ್ರಾಂಚ್‌ ಆಫೀಸಿಗೆ ಅಂಚೆಯ ಮೂಲಕ ಕಳುಹಿಸಿಕೊಡಿ. ಒಂದು ಪ್ರತಿಯನ್ನು ನಿಮ್ಮ ಫೈಲ್‌ಗಳಿಗಾಗಿ ಇಟ್ಟುಕೊಳ್ಳಿ. ಮೂರನೆಯ ಪ್ರತಿಯನ್ನು ಒಂದು ವರ್ಕ್‌ ಷೀಟ್‌ ಆಗಿ ಉಪಯೋಗಿಸಬಹುದು.

◼ ಲಭ್ಯವಿರುವ ಹೊಸ ಪ್ರಕಾಶನಗಳು:

ಯೆಹೋವನಿಗೆ ಸ್ತುತಿಗಳನ್ನು ಹಾಡಿರಿ​—⁠ಪದಗಳುಗೀತೆಗಳು ಮಾತ್ರ ​—⁠ಇಂಗ್ಲಿಷ್‌

ಪದಗಳು ಮಾತ್ರ (Ssbly) ಇರುವ ಗೀತೆಪುಸ್ತಕವು, ಸ್ವರಚಿಹ್ನೆಗಳಿಲ್ಲದ ಚಿಕ್ಕ ಗಾತ್ರದ ಪುಸ್ತಕವಾಗಿದೆ.

◼ ಪುನಃ ಲಭ್ಯವಿರುವ ಪ್ರಕಾಶನಗಳು:

ನಾವು ಮೃತರಾದಾಗ ನಮಗೆ ಏನು ಸಂಭವಿಸುತ್ತದೆ? ​—⁠ಉರ್ದು

[ಪಾದಟಿಪ್ಪಣಿಗಳು]

a ಕನ್ನಡದಲ್ಲಿ ಲಭ್ಯವಿಲ್ಲ.

b ಕನ್ನಡದಲ್ಲಿ ಲಭ್ಯವಿಲ್ಲ.

c ಕನ್ನಡದಲ್ಲಿ ಲಭ್ಯವಿಲ್ಲ.

d ಕನ್ನಡದಲ್ಲಿ ಲಭ್ಯವಿಲ್ಲ.

e ಕನ್ನಡದಲ್ಲಿ ಲಭ್ಯವಿಲ್ಲ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ