ವಿಶೇಷ ಸಮ್ಮೇಳನ ದಿನದ ಪುನರ್ವಿಮರ್ಶೆ
ಈ ವಿಷಯಭಾಗವನ್ನು, 2006ರ ಸೇವಾ ವರ್ಷದ ವಿಶೇಷ ಸಮ್ಮೇಳನ ದಿನ ಕಾರ್ಯಕ್ರಮವನ್ನು ಸಭೆಯು ಹಾಜರಾಗುವುದಕ್ಕೆ ಸ್ವಲ್ಪ ಮುಂಚಿನ ಮತ್ತು ಅನಂತರದ ಸೇವಾ ಕೂಟದ ಕಾರ್ಯಕ್ರಮದಲ್ಲಿ ಉಪಯೋಗಿಸಲಾಗುವುದು. ಈ ಮುನ್ನೋಟ ಮತ್ತು ಪುನರ್ವಿಮರ್ಶೆಗಾಗಿ ಅಧ್ಯಕ್ಷ ಮೇಲ್ವಿಚಾರಕನು 2004ರ ಡಿಸೆಂಬರ್ ತಿಂಗಳಿನ ನಮ್ಮ ರಾಜ್ಯದ ಸೇವೆಯ 4ನೇ ಪುಟದಲ್ಲಿ ತಿಳಿಸಿರುವಂತೆ ಏರ್ಪಾಡನ್ನು ಮಾಡುತ್ತಾನೆ. ಪುನರ್ವಿಮರ್ಶೆಯ ಸಮಯದಲ್ಲಿ ಎಲ್ಲ ಪ್ರಶ್ನೆಗಳನ್ನು ಕೇಳಬೇಕು ಮತ್ತು ಪ್ರಸ್ತುತಪಡಿಸಲ್ಪಟ್ಟ ಮಾಹಿತಿಯನ್ನು ಹೇಗೆ ಅನ್ವಯಿಸಬಹುದು ಎಂಬುದರ ಮೇಲೆ ಗಮನವನ್ನು ಕೇಂದ್ರೀಕರಿಸಬೇಕು.
ಬೆಳಗ್ಗಿನ ಸೆಷನ್
1. ಕಣ್ಣನ್ನು ನೆಟ್ಟಗಿಡುವುದರ ಅರ್ಥವೇನು, ಮತ್ತು ಇಂದು ಇದೊಂದು ಪಂಥಾಹ್ವಾನವಾಗಿದೆ ಏಕೆ? (“ನಿಮ್ಮ ಕಣ್ಣನ್ನು ಏಕೆ ನೆಟ್ಟಗಿಟ್ಟುಕೊಳ್ಳಬೇಕು?”)
2. ಕಣ್ಣನ್ನು ನೆಟ್ಟಗಿಟ್ಟುಕೊಳ್ಳುವುದರಿಂದ ನಾವು ಹೇಗೆ ಪ್ರಯೋಜನವನ್ನು ಪಡೆದುಕೊಳ್ಳುತ್ತೇವೆ? (“ಕಣ್ಣನ್ನು ನೆಟ್ಟಗೆ ಇಟ್ಟುಕೊಂಡದ್ದಕ್ಕಾಗಿ ಆಶೀರ್ವಾದಗಳನ್ನು ಕೊಯ್ಯಿರಿ”)
3. ಸಾಮಾನ್ಯ ಚಟುವಟಿಕೆಗಳು ಎಂಬುದಾಗಿ ಹೇಳಲ್ಪಡುವ ಅನೇಕ ಚಟುವಟಿಕೆಗಳು ಯಾವ ಅಪಾಯವನ್ನು ತಂದೊಡ್ಡುತ್ತವೆ? (“ದುಷ್ಟ ಲೋಕದಲ್ಲಿ ಕಣ್ಣನ್ನು ನೆಟ್ಟಗೆ ಇಟ್ಟುಕೊಳ್ಳುವುದು”)
ಮಧ್ಯಾಹ್ನದ ಸೆಷನ್
4. ಯುವ ಜನರು ಆಧ್ಯಾತ್ಮಿಕ ಗುರಿಗಳನ್ನು ಬೆನ್ನಟ್ಟುವಂತೆ ಹೆತ್ತವರು ಮತ್ತು ಇತರರು ಹೇಗೆ ಉತ್ತೇಜಿಸಸಾಧ್ಯವಿದೆ? (“ತಮ್ಮ ಅಂಬುಗಳನ್ನು ಸರಿಯಾಗಿ ಗುರಿಯಿಡುವ ಹೆತ್ತವರು” ಮತ್ತು “ಆಧ್ಯಾತ್ಮಿಕ ಗುರಿಗಳನ್ನು ಎಟಕಿಸುವ ಯುವ ಜನರು”)
5. (ಎ) ವ್ಯಕ್ತಿಗತವಾಗಿ, (ಬಿ) ಕುಟುಂಬವಾಗಿ, ಮತ್ತು (ಸಿ) ಸಭೆಯಾಗಿ ನಾವು ಯೆಹೋವನ ಸಂಘಟನೆಯೊಂದಿಗೆ ಹೇಗೆ ಮುನ್ನಡೆಯಬಲ್ಲೆವು? (“ಯೆಹೋವನ ಸಂಘಟನೆಯೊಂದಿಗೆ ಮುನ್ನಡೆಯುವುದರ ಮೇಲೆ ದೃಷ್ಟಿಯನ್ನು ಕೇಂದ್ರೀಕರಿಸಿರಿ”)