ಪ್ರಕಟನೆಗಳು
◼ ಸಾಹಿತ್ಯ ನೀಡುವಿಕೆ—ಅಕ್ಟೋಬರ್: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಬಿಡಿ ಪ್ರತಿಗಳನ್ನು ನೀಡಿರಿ. ಆಸಕ್ತಿಯು ಕಂಡುಬಂದಲ್ಲಿ, ಅಪೇಕ್ಷಿಸು ಬ್ರೋಷರನ್ನು ದಯವಿಟ್ಟು ಪರಿಚಯಿಸಿರಿ, ಮತ್ತು ಮನೆ ಬೈಬಲ್ ಅಧ್ಯಯನಗಳನ್ನು ಆರಂಭಿಸುವ ಗುರಿಯೊಂದಿಗೆ ಆಸಕ್ತಿಯನ್ನು ಬೆಳೆಸಲು ಪ್ರಯತ್ನಿಸಿರಿ. ನವೆಂಬರ್: ಸಂತೃಪ್ತಿಕರವಾದ ಜೀವನ ಬ್ರೋಷರ್. ಈ ಬ್ರೋಷರ್ ನಿಮ್ಮ ಭಾಷೆಯಲ್ಲಿ ಲಭ್ಯವಿಲ್ಲದಿರುವಲ್ಲಿ, ಬೈಬಲ್ ಕಥೆಗಳ ನನ್ನ ಪುಸ್ತಕ ಇಲ್ಲವೆ ಮಹಾನ್ ಪುರುಷ ಪುಸ್ತಕವನ್ನು ನೀಡಿರಿ. ಡಿಸೆಂಬರ್: ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ ಪುಸ್ತಕವನ್ನು ನೀಡಿರಿ. ಅಥವಾ ಬದಲಿ ನೀಡುವಿಕೆಯಾಗಿ ಬೈಬಲ್ ಕಥೆಗಳ ನನ್ನ ಪುಸ್ತಕ ಮತ್ತು ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಪುಸ್ತಕಗಳನ್ನು ಸೇರಿಸಿ ಯಾವುದೇ ಇತರ ಪುಸ್ತಕವನ್ನು ನೀಡಿರಿ. ಜನವರಿ: ಹಳದಿ ಬಣ್ಣಕ್ಕೆ ತಿರುಗುವ ಇಲ್ಲವೆ ಬಣ್ಣವನ್ನು ಕಳೆದುಕೊಳ್ಳುವಂಥ ಕಾಗದದ ಮೇಲೆ ಮುದ್ರಿಸಲ್ಪಟ್ಟಿರುವ 192 ಪುಟದ ಯಾವುದೇ ಪುಸ್ತಕವನ್ನು ಅಥವಾ 1990ಕ್ಕೆ ಮುಂಚೆ ಪ್ರಕಾಶಿಸಲ್ಪಟ್ಟ ಯಾವುದೇ ಪುಸ್ತಕವನ್ನು ನೀಡಬಹುದು. ಇಂತಹ ಯಾವುದೇ ಪುಸ್ತಕಗಳನ್ನು ಹೊಂದಿರದ ಸಭೆಗಳು ದೇವರಿಗಾಗಿ ಮಾನವಕುಲದ ಅನ್ವೇಷಣೆ (ಇಂಗ್ಲಿಷ್) ಅಥವಾ ಕುಟುಂಬ ಸಂತೋಷದ ರಹಸ್ಯ ಪುಸ್ತಕಗಳನ್ನು ನೀಡಬಹುದು.
◼ ನಮ್ಮ ರಾಜ್ಯದ ಸೇವೆಯ ಈ ಸಂಚಿಕೆಯ ಪುರವಣಿಯಲ್ಲಿ “2005ನೇ ಇಸವಿಗಾಗಿ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲಾ ಶೆಡ್ಯೂಲ್” ಇದೆ. ಇದನ್ನು 2005ನೇ ಇಸವಿಯಾದ್ಯಂತ ಉಪಯೋಗಿಸಲಿಕ್ಕಾಗಿ ಜೋಪಾನವಾಗಿ ಇಟ್ಟುಕೊಳ್ಳತಕ್ಕದ್ದು.
◼ ಸಾಹಿತ್ಯಕ್ಕಾಗಿರುವ ಪ್ರಚಾರಕರ ವೈಯಕ್ತಿಕ ವಿನಂತಿಗಳನ್ನು ಬ್ರಾಂಚ್ ಆಫೀಸು ಸ್ವೀಕರಿಸುವುದಿಲ್ಲ. ಸಾಹಿತ್ಯಕ್ಕಾಗಿ ಸಭೆಯ ಮಾಸಿಕ ವಿನಂತಿಯನ್ನು ಸೊಸೈಟಿಗೆ ಕಳುಹಿಸುವ ಮುಂಚೆ, ಪ್ರತಿ ತಿಂಗಳು ಒಂದು ಪ್ರಕಟನೆಯನ್ನು ಮಾಡುವಂತೆ ಅಧ್ಯಕ್ಷ ಮೇಲ್ವಿಚಾರಕನು ಏರ್ಪಡಿಸಬೇಕು. ಇದು, ವೈಯಕ್ತಿಕ ಸಾಹಿತ್ಯ ಐಟಮ್‌ಗಳನ್ನು ಪಡೆದುಕೊಳ್ಳಲು ಆಸಕ್ತರಿರುವವರೆಲ್ಲರೂ ಸಾಹಿತ್ಯವನ್ನು ನಿರ್ವಹಿಸುವ ಸಹೋದರನಿಗೆ ತಿಳಿಸುವಂತೆ ಮಾಡುವುದು. ಯಾವ ಪ್ರಕಾಶನಗಳು ವಿಶೇಷ ವಿನಂತಿಯ ಐಟಮ್‌ಗಳಾಗಿವೆ ಎಂಬುದನ್ನು ದಯವಿಟ್ಟು ಮನಸ್ಸಿನಲ್ಲಿಡಿರಿ.
◼ ಲಭ್ಯವಿರುವ ಹೊಸ ಪ್ರಾಕಾಶನಗಳು:
ಯೆಹೋವನಿಗೆ ಸ್ತುತಿಗಳನ್ನು ಹಾಡಿರಿ—ಭಾವಗೀತೆ ಮಾತ್ರ —ಮಲೆಯಾಳಂ
ಭಾವಗೀತೆ ಮಾತ್ರ (Ssbly) ಗೀತೆಪುಸ್ತಕವು ಸಣ್ಣ ಗಾತ್ರದ ಆವೃತ್ತಿಯಾಗಿದ್ದು, ಸ್ವರಚಿಹ್ನೆಗಳನ್ನು ಹೊಂದಿರುವುದಿಲ್ಲ. ಈ ಹೊಸ ಐಟಮ್ ಲಭ್ಯಗೊಳಿಸಲ್ಪಟ್ಟಿರುವುದರಿಂದ, ಮಲೆಯಾಳಂ ಗೀತೆಪುಸ್ತಕಕ್ಕಾಗಿ ಕಳುಹಿಸಲ್ಪಟ್ಟ ಎಲ್ಲಾ ವಿನಂತಿಗಳನ್ನು ರದ್ದುಪಡಿಸಲಾಗಿದೆ. ಸಭೆಗಳು ತಮ್ಮ ಹೊಸ ವಿನಂತಿಗಳನ್ನು ಕಳುಹಿಸಿಕೊಡುವಂತೆ ಕೇಳಿಕೊಳ್ಳಲಾಗಿದೆ.
◼ಪುನಃ ಲಭ್ಯವಿರುವ ಪ್ರಕಾಶನಗಳು:
ನಿತ್ಯಜೀವಕ್ಕೆ ನಡೆಸುವ ಜ್ಞಾನ —ತೆಲುಗು, ಮಲೆಯಾಳಂ, ಹಿಂದಿ
ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? —ಇಂಗ್ಲಿಷ್, ಗುಜರಾಥಿ, ತಮಿಳು, ತೆಲುಗು, ನೇಪಾಲಿ, ಬಂಗಾಲಿ, ಮರಾಠಿ, ಮಲೆಯಾಳಂ, ಮೀಸೊ, ಹಿಂದಿ