2005ನೇ ಇಸವಿಗಾಗಿ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶೆಡ್ಯೂಲ್
ಸೂಚನೆಗಳು
ಇಸವಿ 2005ರಲ್ಲಿ, ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯನ್ನು ನಡಿಸುವಾಗ ಈ ಕೆಳಗಿನ ಏರ್ಪಾಡುಗಳನ್ನು ಅನುಸರಿಸಲಾಗುವುದು.
ಮಾಹಿತಿಯ ಮೂಲಗಳು: ಸತ್ಯವೇದವು [BSI], ಕಾವಲಿನಬುರುಜು [w-KA], ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ [be-KA], ಒಬ್ಬನೇ ಸತ್ಯ ದೇವರನ್ನು ಆರಾಧಿಸಿರಿ [wt-KA], ಚರ್ಚೆಗಾಗಿ ಬೈಬಲ್ ವಿಷಯಗಳು [td-KA].
ಶಾಲೆಯನ್ನು ಗೀತೆ, ಪ್ರಾರ್ಥನೆ, ಮತ್ತು ಚುಟುಕಾದ ಸ್ವಾಗತದ ಹೇಳಿಕೆಯೊಂದಿಗೆ ಸರಿಯಾದ ಸಮಯಕ್ಕೆ ಆರಂಭಿಸಿದ ನಂತರ ಈ ಮುಂದಿನಂತೆ ಮುಂದುವರಿಯಿರಿ:
ಭಾಷಣ ಗುಣ: 5 ನಿಮಿಷಗಳು. ಶಾಲಾ ಮೇಲ್ವಿಚಾರಕನು, ಸಹಾಯಕ ಸಲಹೆಗಾರನು, ಅಥವಾ ಇನ್ನೊಬ್ಬ ಅರ್ಹ ಹಿರಿಯನು, ಶುಶ್ರೂಷಾ ಶಾಲೆ ಪಠ್ಯಪುಸ್ತಕದ ಮೇಲಾಧಾರಿತವಾದ ಒಂದು ಭಾಷಣ ಗುಣದ ಕುರಿತು ಚರ್ಚಿಸುವನು. (ಮಿತವಾದ ಸಂಖ್ಯೆಯ ಹಿರಿಯರಿರುವ ಸಭೆಗಳಲ್ಲಿ, ಒಬ್ಬ ಅರ್ಹ ಶುಶ್ರೂಷಾ ಸೇವಕನನ್ನು ಉಪಯೋಗಿಸಬಹುದು.) ಬೇರಾವುದೇ ಸೂಚನೆ ಕೊಡಲ್ಪಡದಿರುವಲ್ಲಿ, ನೇಮಿತ ಪುಟಗಳಲ್ಲಿ ಕಂಡುಬರುವ ಚೌಕಗಳು ಸಹ ಚರ್ಚೆಯಲ್ಲಿ ಒಳಗೂಡಿಸಲ್ಪಡಬೇಕು. ಅಭ್ಯಾಸಪಾಠಗಳನ್ನು ಬಿಟ್ಟುಬಿಡಬೇಕು. ಇವು ಮೂಲತಃ ವೈಯಕ್ತಿಕ ಉಪಯೋಗಕ್ಕಾಗಿವೆ ಮತ್ತು ಖಾಸಗಿ ಸಲಹೆಗಾಗಿವೆ.
ನೇಮಕ ನಂಬರ್ 1: 10 ನಿಮಿಷಗಳು. ಇದನ್ನು ಒಬ್ಬ ಅರ್ಹ ಹಿರಿಯನು ಅಥವಾ ಶುಶ್ರೂಷಾ ಸೇವಕನು ನಿರ್ವಹಿಸಬೇಕು. ಮತ್ತು ಇದು ಕಾವಲಿನಬುರುಜು ಪತ್ರಿಕೆ, ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ ಅಥವಾ ಒಬ್ಬನೇ ಸತ್ಯ ದೇವರನ್ನು ಆರಾಧಿಸಿರಿ ಎಂಬ ಪುಸ್ತಕಗಳ ಮೇಲೆ ಆಧಾರಿಸಿರುವುದು. ಇದನ್ನು ಹತ್ತು ನಿಮಿಷದ ಉಪದೇಶ ಭಾಷಣವಾಗಿ ನೀಡಬೇಕಾಗಿದ್ದು, ಯಾವುದೇ ಮೌಖಿಕ ಪುನರ್ವಿಮರ್ಶೆಯಿರುವುದಿಲ್ಲ. ಇದರ ಉದ್ದೇಶವು ಕೇವಲ ವಿಷಯಭಾಗವನ್ನು ಆವರಿಸುವುದಲ್ಲ, ಬದಲಾಗಿ ಚರ್ಚಿಸಲ್ಪಡುತ್ತಿರುವ ಮಾಹಿತಿಯ ಪ್ರಾಯೋಗಿಕ ಮೌಲ್ಯದ ಮೇಲೆ ಗಮನವನ್ನು ಕೇಂದ್ರೀಕರಿಸಿ, ಸಭೆಗೆ ಅತ್ಯಂತ ಸಹಾಯಕಾರಿಯಾಗಿರುವ ವಿಷಯವನ್ನು ಎತ್ತಿಹೇಳುವುದೇ ಆಗಿರಬೇಕು. ಕೊಡಲ್ಪಟ್ಟಿರುವ ಮುಖ್ಯ ವಿಷಯವನ್ನೇ ಉಪಯೋಗಿಸತಕ್ಕದ್ದು. ಈ ಭಾಷಣಕ್ಕೆ ನೇಮಿತರಾದ ಸಹೋದರರು, ಕೊಡಲ್ಪಟ್ಟಿರುವ ಸಮಯದ ಪರಿಮಿತಿಯೊಳಗೆ ಅದನ್ನು ಮುಗಿಸಲು ಜಾಗ್ರತೆ ವಹಿಸುವಂತೆ ನಿರೀಕ್ಷಿಸಲಾಗುತ್ತದೆ. ಖಾಸಗಿ ಸಲಹೆಯು ಅಗತ್ಯಕ್ಕನುಸಾರ ನೀಡಲ್ಪಡಬಹುದು.
ಬೈಬಲ್ ವಾಚನದಿಂದ ಮುಖ್ಯಾಂಶಗಳು: 10 ನಿಮಿಷಗಳು. ಮೊದಲ ಆರು ನಿಮಿಷಗಳ ವರೆಗೆ, ಒಬ್ಬ ಅರ್ಹ ಹಿರಿಯನು ಅಥವಾ ಶುಶ್ರೂಷಾ ಸೇವಕನು ವಿಷಯಭಾಗವನ್ನು ಸ್ಥಳಿಕ ಆವಶ್ಯಕತೆಗಳಿಗೆ ಅನ್ವಯಿಸತಕ್ಕದ್ದು. ಆ ವಾರಕ್ಕಾಗಿರುವ ನೇಮಿತ ಬೈಬಲ್ ವಾಚನದ ಯಾವುದೇ ಭಾಗದ ಕುರಿತು ಅವನು ಹೇಳಿಕೆ ನೀಡಬಹುದು. ಇದು ನೇಮಿತ ವಾಚನದ ಬರೀ ಸಾರಾಂಶವಾಗಿರಬಾರದು. ಈ ಮಾಹಿತಿಯು ಏಕೆ ಮತ್ತು ಹೇಗೆ ಅಮೂಲ್ಯವಾದದ್ದಾಗಿದೆ ಎಂಬುದನ್ನು ಸಭಿಕರು ಗಣ್ಯಮಾಡುವಂತೆ ಸಹಾಯಮಾಡುವುದೇ ಇದರ ಮುಖ್ಯ ಉದ್ದೇಶವಾಗಿದೆ. ಆರಂಭದ ಭಾಗಕ್ಕಾಗಿ ಆರು ನಿಮಿಷಗಳಿಗಿಂತ ಹೆಚ್ಚು ಸಮಯವನ್ನು ವ್ಯಯಿಸಬಾರದು ಎಂಬ ವಿಷಯದಲ್ಲಿ ಭಾಷಣಕರ್ತನು ಜಾಗರೂಕನಾಗಿರಬೇಕು. ನಾಲ್ಕು ನಿಮಿಷಗಳು ಸಭಿಕರ ಭಾಗವಹಿಸುವಿಕೆಗಾಗಿ ಬದಿಗಿರಿಸಲ್ಪಡುವಂತೆ ಅವನು ಖಚಿತಪಡಿಸಿಕೊಳ್ಳಬೇಕು. ಬೈಬಲ್ ಓದುವಿಕೆಯಲ್ಲಿ ಯಾವ ಅಂಶಗಳನ್ನು ಅವರು ಆಸಕ್ತಿದಾಯಕವಾಗಿ ಕಂಡುಕೊಂಡರು ಮತ್ತು ಅದರ ಪ್ರಯೋಜನಗಳೇನು ಎಂಬುದರ ಕುರಿತು ಚುಟುಕಾಗಿ (30 ಸೆಕೆಂಡುಗಳು ಅಥವಾ ಅದಕ್ಕಿಂತ ಕಡಿಮೆ ಸಮಯದಲ್ಲಿ) ಹೇಳಿಕೆ ನೀಡುವಂತೆ ಸಭಿಕರು ಆಮಂತ್ರಿಸಲ್ಪಡಬೇಕು. ಅನಂತರ ಶಾಲಾ ಮೇಲ್ವಿಚಾರಕನು ಇತರ ಕ್ಲಾಸ್ರೂಮ್ಗಳಿಗೆ ನೇಮಿಸಲ್ಪಟ್ಟಿರುವ ವಿದ್ಯಾರ್ಥಿಗಳನ್ನು ಕಳುಹಿಸುವನು.
ನೇಮಕ ನಂಬರ್ 2: 4 ನಿಮಿಷಗಳು. ಇದು ವಾಚನ ನೇಮಕವಾಗಿದ್ದು, ಒಬ್ಬ ಸಹೋದರನಿಂದ ಕೊಡಲ್ಪಡಬೇಕು. ಸಾಮಾನ್ಯವಾಗಿ ಈ ವಾಚನವನ್ನು ಬೈಬಲಿನಿಂದ ಮಾಡಲಾಗುತ್ತದೆ. ತಿಂಗಳಿಗೊಮ್ಮೆ ಈ ನೇಮಕವು ಕಾವಲಿನಬುರುಜು ಪತ್ರಿಕೆಯಿಂದ ತೆಗೆಯಲ್ಪಟ್ಟಿರುವ ವಿಷಯಭಾಗವನ್ನು ಆವರಿಸುವುದು. ವಿದ್ಯಾರ್ಥಿಯು ನೇಮಿತ ವಿಷಯಭಾಗವನ್ನು ಒಂದು ಪೀಠಿಕೆ ಅಥವಾ ಸಮಾಪ್ತಿಯನ್ನು ಕೊಡದೆ ಓದಬೇಕು. ಪ್ರತಿ ವಾರ, ಓದಲಿಕ್ಕಾಗಿ ಕೊಡಲ್ಪಡುವ ವಿಷಯಭಾಗದ ಪ್ರಮಾಣವು ಸ್ವಲ್ಪಮಟ್ಟಿಗೆ ಭಿನ್ನವಾಗಿರುತ್ತದೆ, ಆದರೆ ಇದಕ್ಕಾಗಿ ನಾಲ್ಕು ನಿಮಿಷಗಳು ಅಥವಾ ಅದಕ್ಕಿಂತಲೂ ಕಡಿಮೆ ಸಮಯ ಹಿಡಿಯಬಹುದು. ನೇಮಕಗಳನ್ನು ಮಾಡುವ ಮೊದಲು ಶಾಲಾ ಮೇಲ್ವಿಚಾರಕನು ವಿಷಯಭಾಗವನ್ನು ಪರೀಕ್ಷಿಸಿ ನೋಡಬೇಕು ಮತ್ತು ಅವುಗಳನ್ನು ವಿದ್ಯಾರ್ಥಿಗಳ ವಯಸ್ಸು ಹಾಗೂ ಸಾಮರ್ಥ್ಯಕ್ಕನುಸಾರ ನೇಮಿಸತಕ್ಕದ್ದು. ಅರ್ಥಮಾಡಿಕೊಳ್ಳುವಂಥ ರೀತಿಯಲ್ಲಿ, ನಿರರ್ಗಳವಾಗಿ, ಸರಿಯಾದ ಅರ್ಥಒತ್ತಿನಿಂದ, ಧ್ವನಿಯ ಏರಿಳಿತದೊಂದಿಗೆ, ಸೂಕ್ತವಾದಲ್ಲಿ ನಿಲ್ಲಿಸಿ ಮಾತಾಡುವ ಮೂಲಕ, ಮತ್ತು ಸ್ವಾಭಾವಿಕತೆಯಿಂದ ಓದುವಂತೆ ವಿದ್ಯಾರ್ಥಿಗಳಿಗೆ ಸಹಾಯಮಾಡುವುದರಲ್ಲಿ ಶಾಲಾ ಮೇಲ್ವಿಚಾರಕನು ವಿಶೇಷವಾಗಿ ಆಸಕ್ತನಾಗಿರುವನು.
ನೇಮಕ ನಂಬರ್ 3: 5 ನಿಮಿಷಗಳು. ಇದು ಒಬ್ಬ ಸಹೋದರಿಗೆ ನೇಮಿಸಲ್ಪಡುವುದು. ಈ ನೇಮಕವನ್ನು ಪಡೆದುಕೊಳ್ಳುವ ವಿದ್ಯಾರ್ಥಿನಿಯರಿಗೆ ಶುಶ್ರೂಷಾ ಶಾಲೆ ಪಠ್ಯಪುಸ್ತಕದ 82ನೆಯ ಪುಟದಲ್ಲಿ ಕಂಡುಬರುವ ಪಟ್ಟಿಯಿಂದ ಒಂದು ಸನ್ನಿವೇಶವು ನೇಮಿಸಲ್ಪಡುವುದು ಅಥವಾ ಸ್ವತಃ ಒಂದು ಸನ್ನಿವೇಶವನ್ನು ಅವರೇ ಆಯ್ಕೆಮಾಡಬಹುದು. ವಿದ್ಯಾರ್ಥಿನಿಯು ನೇಮಿತ ಮುಖ್ಯ ವಿಷಯವನ್ನೇ ಉಪಯೋಗಿಸಬೇಕು ಮತ್ತು ಅದನ್ನು ಸ್ಥಳಿಕ ಸಭೆಯ ಟೆರಿಟೊರಿಗಾಗಿ ವಾಸ್ತವಿಕವೂ ಪ್ರಾಯೋಗಿಕವೂ ಆಗಿರುವ ಒಂದು ಕ್ಷೇತ್ರ ಸೇವಾ ಅಂಶಕ್ಕೆ ಅನ್ವಯಿಸಬೇಕು. ಮಾಹಿತಿಯ ಮೂಲಕ್ಕಾಗಿ ಯಾವುದೇ ರೆಫರೆನ್ಸ್ಗಳು ಕೊಡಲ್ಪಡದಿರುವಾಗ, ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ವರ್ಗದಿಂದ ಒದಗಿಸಲ್ಪಟ್ಟ ಪ್ರಕಾಶನಗಳಲ್ಲಿ ಸಂಶೋಧನೆ ನಡೆಸುವ ಮೂಲಕ, ಈ ಭಾಗಕ್ಕಾಗಿರುವ ವಿಷಯಭಾಗವನ್ನು ವಿದ್ಯಾರ್ಥಿನಿಯೇ ಸಂಗ್ರಹಿಸುವ ಅಗತ್ಯವಿರುವುದು. ಹೊಸ ವಿದ್ಯಾರ್ಥಿಗಳಿಗೆ, ರೆಫರೆನ್ಸ್ಗಳು ಕೊಡಲ್ಪಟ್ಟಿರುವಂಥ ಭಾಷಣಗಳನ್ನು ನೇಮಿಸತಕ್ಕದ್ದು. ವಿದ್ಯಾರ್ಥಿನಿಯು ವಿಷಯಭಾಗವನ್ನು ಹೇಗೆ ವಿಕಸಿಸುತ್ತಾಳೆ ಮತ್ತು ಮನೆಯವರು ಶಾಸ್ತ್ರವಚನಗಳ ಕುರಿತು ವಿವೇಚಿಸುವಂತೆ ಹಾಗೂ ಆ ಭಾಷಣದ ಪ್ರಮುಖ ಅಂಶಗಳನ್ನು ಅರ್ಥಮಾಡಿಕೊಳ್ಳುವಂತೆ ಹೇಗೆ ಸಹಾಯಮಾಡುತ್ತಾಳೆ ಎಂಬ ವಿಷಯದಲ್ಲಿ ಶಾಲಾ ಮೇಲ್ವಿಚಾರಕನು ವಿಶೇಷವಾಗಿ ಆಸಕ್ತಿಯುಳ್ಳವನಾಗಿರುವನು. ಈ ನೇಮಕವನ್ನು ಪಡೆದುಕೊಳ್ಳುವ ವಿದ್ಯಾರ್ಥಿನಿಗೆ ಓದಲು ಗೊತ್ತಿರಬೇಕು. ಶಾಲಾ ಮೇಲ್ವಿಚಾರಕನು ಒಬ್ಬ ಸಹಾಯಕಿಯನ್ನು ನೇಮಿಸುವನು.
ನೇಮಕ ನಂಬರ್ 4: 5 ನಿಮಿಷಗಳು. ವಿದ್ಯಾರ್ಥಿಯು ನೇಮಿತ ಮುಖ್ಯ ವಿಷಯವನ್ನು ವಿಕಸಿಸಬೇಕು. ಮಾಹಿತಿಯ ಮೂಲಕ್ಕಾಗಿ ಯಾವುದೇ ರೆಫರೆನ್ಸ್ಗಳು ಕೊಡಲ್ಪಡದಿರುವಾಗ, ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ವರ್ಗದಿಂದ ಒದಗಿಸಲ್ಪಟ್ಟ ಪ್ರಕಾಶನಗಳಲ್ಲಿ ಸಂಶೋಧನೆ ನಡೆಸುವ ಮೂಲಕ, ಈ ಭಾಗಕ್ಕಾಗಿರುವ ವಿಷಯಭಾಗವನ್ನು ವಿದ್ಯಾರ್ಥಿಯೇ ಸಂಗ್ರಹಿಸುವ ಅಗತ್ಯವಿರುವುದು. ಇದು ಒಬ್ಬ ಸಹೋದರನಿಗೆ ನೇಮಿಸಲ್ಪಡುವಾಗ, ರಾಜ್ಯ ಸಭಾಗೃಹದ ಸಭಿಕರನ್ನು ಮನಸ್ಸಿನಲ್ಲಿಟ್ಟುಕೊಂಡವನಾಗಿ ಈ ನೇಮಕವನ್ನು ಒಂದು ಭಾಷಣದೋಪಾದಿ ಕೊಡತಕ್ಕದ್ದು. ಒಬ್ಬ ಸಹೋದರಿಗೆ ಈ ಭಾಗವು ಕೊಡಲ್ಪಡುವಾಗ, ಅದನ್ನು ಯಾವಾಗಲೂ ನೇಮಕ ನಂಬರ್ 3ಕ್ಕಾಗಿ ಕೊಡಲ್ಪಟ್ಟಿರುವ ಸೂಚನೆಗಳಿಗೆ ತಕ್ಕಂತೆ ನೀಡಬೇಕಾಗಿದೆ. ಶಾಲಾ ಮೇಲ್ವಿಚಾರಕನು ಯಾವಾಗೆಲ್ಲ ಸೂಕ್ತವಾಗಿರುವುದಾಗಿ ಕಂಡುಕೊಳ್ಳುತ್ತಾನೋ ಆಗೆಲ್ಲಾ ಒಬ್ಬ ಸಹೋದರನಿಗೆ ನೇಮಕ ನಂಬರ್ 4ನ್ನು ನೇಮಿಸುವನು. ನಕ್ಷತ್ರ ಚಿಹ್ನೆ ಇರುವಂಥ ಮುಖ್ಯ ವಿಷಯಗಳು ಭಾಷಣಗಳೋಪಾದಿ ನೀಡಲಿಕ್ಕಾಗಿ ಸಹೋದರರಿಗೆ ಮಾತ್ರ ನೇಮಿಸಲ್ಪಡಬೇಕು ಎಂಬುದನ್ನು ದಯವಿಟ್ಟು ಗಮನಿಸಿರಿ.
ಸಮಯಪಾಲನೆ: ಯಾವುದೇ ಭಾಷಣವಾಗಲಿ ಸಲಹೆಗಾರನ ಹೇಳಿಕೆಗಳಾಗಲಿ ನಿಗದಿತ ಸಮಯವನ್ನು ಮೀರಿ ಹೋಗಬಾರದು. ನೇಮಕ ನಂಬರ್ 2ರಿಂದ ನಂಬರ್ 4ರ ವರೆಗಿನ ಭಾಗಗಳಿಗೆ ನಿಗದಿತ ಸಮಯವು ಮುಗಿಯಲಿರುವಾಗ, ಆ ಭಾಷಣಗಳನ್ನು ಜಾಣ್ಮೆಯಿಂದ ನಿಲ್ಲಿಸತಕ್ಕದ್ದು. ಭಾಷಣ ಗುಣದ ಕುರಿತಾದ ಆರಂಭದ ಭಾಷಣವನ್ನು, ನೇಮಕ ನಂಬರ್ 1ನ್ನು, ಅಥವಾ ಬೈಬಲ್ ವಾಚನದಿಂದ ಮುಖ್ಯಾಂಶಗಳನ್ನು ನಿರ್ವಹಿಸುತ್ತಿರುವ ಸಹೋದರರು ಸಮಯವನ್ನು ಮೀರಿಹೋಗುವಲ್ಲಿ, ಅವರಿಗೆ ಖಾಸಗಿ ಸಲಹೆಯನ್ನು ಕೊಡಬೇಕು. ಎಲ್ಲರೂ ತಮ್ಮ ಸಮಯವನ್ನು ಜಾಗರೂಕತೆಯಿಂದ ಗಮನಿಸತಕ್ಕದ್ದು. ಇಡೀ ಕಾರ್ಯಕ್ರಮವು—ಗೀತೆ ಮತ್ತು ಪ್ರಾರ್ಥನೆಯನ್ನು ಬಿಟ್ಟು—45 ನಿಮಿಷಗಳದ್ದಾಗಿರಬೇಕು.
ಸಲಹೆ: 1 ನಿಮಿಷ. ಪ್ರತಿಯೊಂದು ವಿದ್ಯಾರ್ಥಿ ಭಾಷಣದ ಬಳಿಕ, ಭಾಷಣದ ಒಂದು ಪ್ರಶಂಸಾರ್ಹ ಅಂಶದ ಕುರಿತು ಕೆಲವು ಸಕಾರಾತ್ಮಕ ಹೇಳಿಕೆಗಳನ್ನು ನೀಡಲಿಕ್ಕಾಗಿ ಶಾಲಾ ಮೇಲ್ವಿಚಾರಕನು ಒಂದು ನಿಮಿಷಕ್ಕಿಂತ ಹೆಚ್ಚು ಸಮಯವನ್ನು ತೆಗೆದುಕೊಳ್ಳದಿರುವನು. “ಚೆನ್ನಾಗಿ ಮಾಡಿದಿರಿ” ಎಂದಷ್ಟೇ ಹೇಳುವುದು ಅವನ ಗುರಿಯಾಗಿರುವುದಿಲ್ಲ, ಬದಲಾಗಿ ಭಾಷಣದ ಆ ಅಂಶವು ಏಕೆ ಪರಿಣಾಮಕಾರಿಯಾಗಿತ್ತು ಎಂಬುದಕ್ಕಿರುವ ನಿರ್ದಿಷ್ಟ ಕಾರಣಗಳ ಕಡೆಗೆ ಗಮನವನ್ನು ಸೆಳೆಯುವುದೇ ಆಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯ ಆವಶ್ಯಕತೆಗನುಸಾರ, ಕೂಟದ ನಂತರ ಅಥವಾ ಬೇರೊಂದು ಸಮಯದಲ್ಲಿ ಹೆಚ್ಚಿನ ರಚನಾತ್ಮಕ ಸಲಹೆಯನ್ನು ಖಾಸಗಿಯಾಗಿ ನೀಡಬಹುದು.
ಸಹಾಯಕ ಸಲಹೆಗಾರ: ಶಾಲಾ ಮೇಲ್ವಿಚಾರಕನ ಜೊತೆಗೆ, ಒಬ್ಬ ಸಹಾಯಕ ಸಲಹೆಗಾರನೋಪಾದಿ ನೇಮಕವನ್ನು ನಿರ್ವಹಿಸಲಿಕ್ಕಾಗಿ, ಹಿರಿಯರ ಮಂಡಲಿಯು ಒಬ್ಬ ಸಮರ್ಥ ಹಿರಿಯನನ್ನು—ಲಭ್ಯವಿರುವಲ್ಲಿ—ಆಯ್ಕೆಮಾಡಬಹುದು. ಸಭೆಯಲ್ಲಿ ಅನೇಕ ಮಂದಿ ಹಿರಿಯರು ಇರುವುದಾದರೆ, ಪ್ರತಿ ವರ್ಷ ಒಬ್ಬೊಬ್ಬ ಸಮರ್ಥ ಹಿರಿಯನಿಗೆ ಈ ನೇಮಕವನ್ನು ಒಪ್ಪಿಸಬಹುದು. ಸಹಾಯಕ ಸಲಹೆಗಾರನ ಜವಾಬ್ದಾರಿಯು, ನೇಮಕ ನಂಬರ್ 1 ಮತ್ತು ಬೈಬಲ್ ಮುಖ್ಯಾಂಶಗಳನ್ನು ನೀಡುವ ಸಹೋದರರಿಗೆ, ಅಗತ್ಯವಿರುವಲ್ಲಿ ಖಾಸಗಿ ಸಲಹೆಯನ್ನು ಕೊಡುವುದಾಗಿದೆ. ಜೊತೆ ಹಿರಿಯರು ಅಥವಾ ಶುಶ್ರೂಷಾ ಸೇವಕರು ಪ್ರತಿ ಬಾರಿ ಅಂಥ ಭಾಷಣಗಳನ್ನು ಕೊಟ್ಟ ಬಳಿಕ ಅವನು ಸಲಹೆಯನ್ನು ಕೊಡಲೇಬೇಕೆಂದಿಲ್ಲ. ಈ ಏರ್ಪಾಡು 2005ರಲ್ಲಿ ಉಪಯೋಗದಲ್ಲಿರುವುದು ಮತ್ತು ತದನಂತರ ಸರಿಹೊಂದಿಸಲ್ಪಡಬಹುದು.
ಸಲಹಾ ಪಟ್ಟಿ: ಪಠ್ಯಪುಸ್ತಕದಲ್ಲಿದೆ.
ಮೌಖಿಕ ಪುನರ್ವಿಮರ್ಶೆ: 30 ನಿಮಿಷಗಳು. ಪ್ರತಿ ಎರಡು ತಿಂಗಳಿಗೊಮ್ಮೆ ಶಾಲಾ ಮೇಲ್ವಿಚಾರಕನು ಒಂದು ಮೌಖಿಕ ಪುನರ್ವಿಮರ್ಶೆಯನ್ನು ನಡೆಸುವನು. ಇದಕ್ಕೆ ಮುಂಚೆ, ಮೇಲೆ ವಿವರಿಸಲ್ಪಟ್ಟಿರುವಂಥ ರೀತಿಯಲ್ಲೇ ಭಾಷಣ ಗುಣ ಹಾಗೂ ಬೈಬಲ್ ವಾಚನದ ಮುಖ್ಯಾಂಶಗಳ ಪರಿಗಣನೆ ಇರುವುದು. ಸದ್ಯದ ವಾರವನ್ನೂ ಸೇರಿಸಿ ಹಿಂದಿನ ಎರಡು ತಿಂಗಳುಗಳಲ್ಲಿ ಶಾಲೆಯಲ್ಲಿ ಪರಿಗಣಿಸಲ್ಪಟ್ಟ ವಿಷಯಭಾಗದ ಮೇಲೆ ಮೌಖಿಕ ಪುನರ್ವಿಮರ್ಶೆಯು ಆಧಾರಿತವಾಗಿರುವುದು. ಮೌಖಿಕ ಪುನರ್ವಿಮರ್ಶೆಯು ನಡೆಸಲ್ಪಡಲಿರುವ ವಾರದಲ್ಲಿ ನಿಮ್ಮ ಸಭೆಗೆ ಸರ್ಕಿಟ್ ಸಮ್ಮೇಳನಕ್ಕೆ ಹಾಜರಾಗಲಿರುವುದಾದರೆ ಅಥವಾ ಸರ್ಕಿಟ್ ಮೇಲ್ವಿಚಾರಕರ ಸಂದರ್ಶನವಿರುವುದಾದರೆ, ಡಿಸೆಂಬರ್ 2003ರ ನಮ್ಮ ರಾಜ್ಯದ ಸೇವೆಯ ಪುಟ 4ರಲ್ಲಿರುವ ಶೆಡ್ಯೂಲ್ ಮಾಡುವುದರ ಕುರಿತಾದ ಸಲಹೆಸೂಚನೆಗಳನ್ನು ಹಿಂಬಾಲಿಸಿರಿ.
ಶೆಡ್ಯೂಲ್
ಜನ. 3 ಬೈಬಲ್ ವಾಚನ: ಯೆಹೋಶುವ 16-20 ಗೀತೆ 6
ಭಾಷಣ ಗುಣ: ಇತರರಿಗೆ ಅರ್ಥವತ್ತಾದದ್ದು (be-KA ಪು. 226 ¶1-ಪು. 227 ¶2)
ನಂ. 1: ದೇವರಿಗೆ ಭಯಪಡಿ (be-KA ಪು. 272 ¶1-4)
ನಂ. 2: ಯೆಹೋಶುವ 16:1-17:4
ನಂ. 3: td 22ಎ ಯೇಸು ಕ್ರಿಸ್ತ—ದೇವರ ಮಗ ಮತ್ತು ನೇಮಿತ ಅರಸ
ನಂ. 4: ಶ್ರೀಮಂತರಾಗಿರುವುದು ಅಥವಾ ಬಡವರಾಗಿರುವುದು ಇಂದು ನಿಜ ದೇವಭಕ್ತಿಯ ಸಂಕೇತವಾಗಿದೆಯೋ?
ಜನ. 10 ಬೈಬಲ್ ವಾಚನ: ಯೆಹೋಶುವ 21-24 ಗೀತೆ 100
ಭಾಷಣ ಗುಣ: ಅಪರಿಚಿತ ಪದಗಳನ್ನು ವಿವರಿಸಿ ಹೇಳುವುದು (be-KA ಪು. 227 ¶3-ಪು. 228 ¶1)
ನಂ. 1: ದೇವರ ನಾಮವನ್ನು ಪ್ರಸಿದ್ಧಪಡಿಸುವುದು (be-KA ಪು. 273 ¶1-6)
ನಂ. 2: ಯೆಹೋಶುವ 23:1-13
ನಂ. 3: td 22ಬಿ ರಕ್ಷಣೆಗಾಗಿ ಯೇಸುವಿನಲ್ಲಿ ನಂಬಿಕೆಯನ್ನಿಡುವುದು ಏಕೆ ಅವಶ್ಯ?
ನಂ. 4: ಯೇಸುವನ್ನು ಆರಾಧಿಸುವುದು ಸರಿಯೋ?
ಜನ. 17 ಬೈಬಲ್ ವಾಚನ: ನ್ಯಾಯಸ್ಥಾಪಕರು 1-4 ಗೀತೆ 97
ಭಾಷಣ ಗುಣ: ಅಗತ್ಯವಿರುವ ವಿವರಣೆಯನ್ನು ಒದಗಿಸುವುದು (be-KA ಪು. 228 ¶2-3)
ನಂ. 1: ಆ ಹೆಸರಿನಿಂದ ಗುರುತಿಸಲ್ಪಟ್ಟ ವ್ಯಕ್ತಿ (be-KA ಪು. 274 ¶1-4)
ನಂ. 2: ನ್ಯಾಯಸ್ಥಾಪಕರು 2:1-10
ನಂ. 3: td 22ಸಿ ರಕ್ಷಣೆ ಹೊಂದಲು ಯೇಸುವಿನಲ್ಲಿ ಕೇವಲ ನಂಬಿಕೆಯಿಟ್ಟರೆ ಮಾತ್ರ ಸಾಕೋ?
ನಂ. 4: ಹಾನಿಕರ ಸಂಗೀತ ವಿಡಿಯೋಗಳಿಂದ ನೀವು ನಿಮ್ಮನ್ನು ಹೇಗೆ ರಕ್ಷಿಸಿಕೊಳ್ಳಸಾಧ್ಯವಿದೆ?
ಜನ. 24 ಬೈಬಲ್ ವಾಚನ: ನ್ಯಾಯಸ್ಥಾಪಕರು 5-7 ಗೀತೆ 47
ಭಾಷಣ ಗುಣ: ಹೃದಯವು ಒಳಗೂಡಿರುವ ವಿಧ (be-KA ಪು. 228 ¶4-ಪು. 229 ¶1)
ನಂ. 1: ದೇವರ ಹೆಸರು—“ಬಲವಾದ ಬುರುಜು” (be-KA ಪು. 274 ¶5-ಪು. 275 ಉಪಶೀರ್ಷಿಕೆ)
ನಂ. 2: ನ್ಯಾಯಸ್ಥಾಪಕರು 6:25-35
ನಂ. 3: ಬೈಬಲು ನಮ್ಮ ಆಯ್ಕೆಯ ಸ್ವಾತಂತ್ರ್ಯವನ್ನು ಹೇಗೆ ಪ್ರಭಾವಿಸಬೇಕು?
ನಂ. 4: a td 23ಎ ದೇವರ ರಾಜ್ಯವು ತರಲಿರುವ ಆಶೀರ್ವಾದಗಳು
ಜನ. 31 ಬೈಬಲ್ ವಾಚನ: ನ್ಯಾಯಸ್ಥಾಪಕರು 8-10 ಗೀತೆ 174
ಭಾಷಣ ಗುಣ: ಸಭಿಕರಿಗೆ ಬೋಧಪ್ರದವಾದ ವಿಷಯ (be-KA ಪು. 230 ¶1-6)
ನಂ. 1: ಯೇಸುವಿನ ವಿಷಯವಾದ ಸಾಕ್ಷಿಯನ್ನು ಹೇಳುವುದು (be-KA ಪು. 275 ಉಪಶೀರ್ಷಿಕೆ-ಪು. 276 ¶1)
ನಂ. 2: w-KA03 1/15 ಪು. 19-20 ¶16-18
ನಂ. 3: td 23ಬಿ ಕ್ರಿಸ್ತನ ವೈರಿಗಳು ಇನ್ನೂ ಕ್ರಿಯಾಶೀಲರಾಗಿರುವಾಗಲೇ ರಾಜ್ಯ ಆಡಳಿತವು ಪ್ರಾರಂಭವಾಗುತ್ತದೆ
ನಂ. 4: ಪ್ರಾಪಂಚಿಕತೆಯು ಸಿರಿಸಂಪತ್ತನ್ನು ಸಂಪಾದಿಸುವುದಕ್ಕಿಂತಲೂ ಹೆಚ್ಚಿನದ್ದನ್ನು ಅರ್ಥೈಸುತ್ತದೆ
ಫೆಬ್ರ. 7 ಬೈಬಲ್ ವಾಚನ: ನ್ಯಾಯಸ್ಥಾಪಕರು 11-14 ಗೀತೆ 209
ಭಾಷಣ ಗುಣ: ಸಂಶೋಧನೆಯ ಮೂಲಕ ಒಂದು ಭಾಷಣವನ್ನು ಬೋಧಪ್ರದವಾಗಿ ಮಾಡುವುದು (be-KA ಪು. 231 ¶1-3)
ನಂ. 1: ವಿಮೋಚಕನಾಗಿರುವ ಕ್ರಿಸ್ತನ ಪಾತ್ರವನ್ನು ಒತ್ತಿಹೇಳುವುದು (be-KA ಪು. 276 ¶2-3)
ನಂ. 2: ನ್ಯಾಯಸ್ಥಾಪಕರು 12:1-15
ನಂ. 3: ಯೆಹೋವನ ಸಾಕ್ಷಿಗಳು ಏಕೆ ಐಕ್ಯರಾಗಿದ್ದಾರೆ?
ನಂ. 4: td 23ಸಿ ದೇವರ ರಾಜ್ಯವು ಮಾನವನ ಪ್ರಯತ್ನಗಳಿಂದ ಬರುವುದಿಲ್ಲ
ಫೆಬ್ರ. 14 ಬೈಬಲ್ ವಾಚನ: ನ್ಯಾಯಸ್ಥಾಪಕರು 15-18 ಗೀತೆ 105
ಭಾಷಣ ಗುಣ: ಶಾಸ್ತ್ರವಚನಗಳನ್ನು ವಿವರಿಸುವುದು (be-KA ಪು. 231 ¶4-5)
ನಂ. 1: ಮಹಾಯಾಜಕ ಮತ್ತು ಸಭೆಯ ಶಿರಸ್ಸಾಗಿ ಯೇಸುವಿನ ಪಾತ್ರಗಳನ್ನು ಒತ್ತಿಹೇಳುವುದು (be-KA ಪು. 277 ¶1-2)
ನಂ. 2: ನ್ಯಾಯಸ್ಥಾಪಕರು 15:9-20
ನಂ. 3: td 24ಎ ‘ಲೋಕದ ಅಂತ್ಯವು’ ಏನನ್ನು ಅರ್ಥೈಸುತ್ತದೆ?
ನಂ. 4: ಕ್ರೈಸ್ತರು ಏಕೆ ವಶೀಕರಣ ವಿದ್ಯೆ (ಹಿಪ್ನಟಿಸಮ್)ಯನ್ನು ಅಭ್ಯಾಸಿಸುವುದಿಲ್ಲ?
ಫೆಬ್ರ. 21 ಬೈಬಲ್ ವಾಚನ: ನ್ಯಾಯಸ್ಥಾಪಕರು 19-21 ಗೀತೆ 53
ಭಾಷಣ ಗುಣ: ಪದಗಳ ಅರ್ಥವನ್ನು ವಿವರಿಸುವುದು (be-KA ಪು. 232 ¶1)
ನಂ. 1: ಆಳುವ ರಾಜನಾಗಿ ಯೇಸುವಿನ ಪಾತ್ರವನ್ನು ಒತ್ತಿಹೇಳುವುದು (be-KA ಪು. 277 ¶3-4)
ನಂ. 2: w-KA03 2/1 ಪು. 17-18 ¶18-21
ನಂ. 3: ‘ದೇವರ ಅಗಾಧವಾದ ವಿಷಯಗಳಲ್ಲಿ’ ಕೆಲವು ಯಾವುವು? (1 ಕೊರಿಂ. 2:10)
ನಂ. 4: b td 24ಬಿ ಕಡೇ ದಿವಸಗಳ ಸಾಕ್ಷ್ಯಕ್ಕೆ ಆಧ್ಯಾತ್ಮಿಕವಾಗಿ ಎಚ್ಚರದಿಂದುಳಿಯುವುದು
ಫೆಬ್ರ. 28 ಬೈಬಲ್ ವಾಚನ: ರೂತಳು 1-4 ಗೀತೆ 120
ಭಾಷಣ ಗುಣ: ವಚನಗಳನ್ನು ತಾರ್ಕಿಕವಾಗಿ ವಿವರಿಸುವುದು (be-KA ಪು. 232 ¶2-4)
ಮೌಖಿಕ ಪುನರ್ವಿಮರ್ಶೆ
ಮಾರ್ಚ್ 7 ಬೈಬಲ್ ವಾಚನ: 1 ಸಮುವೇಲ 1-4 ಗೀತೆ 221
ಭಾಷಣ ಗುಣ: ನಿಮ್ಮ ಸಭಿಕರಿಗೆ ಬೋಧಪ್ರದವಾಗಿರುವ ವಿಷಯವನ್ನು ಆರಿಸುವುದು (be-KA ಪು. 233 ¶1-5)
ನಂ. 1: ಕ್ರಿಸ್ತನನ್ನು ಅಸ್ತಿವಾರವಾಗಿ ಹಾಕುವುದು (be-KA ಪು. 278 ¶1-4)
ನಂ. 2: 1 ಸಮುವೇಲ 2:1-11
ನಂ. 3: td 25ಎ ನಿತ್ಯಜೀವವು ಕೇವಲ ಒಂದು ಕನಸಲ್ಲ
ನಂ. 4: ಪ್ರಾಮಾಣಿಕ ಕ್ರೈಸ್ತರು ಜಾತಕಗಳನ್ನು ವಿಚಾರಿಸುವುದಿಲ್ಲವೇಕೆ?
ಮಾರ್ಚ್ 14 ಬೈಬಲ್ ವಾಚನ: 1 ಸಮುವೇಲ 5-9 ಗೀತೆ 151
ಭಾಷಣ ಗುಣ: ನೇಮಿತ ವಿಷಯಭಾಗದ ಉಪಯೋಗ (be-KA ಪು. 234 ¶1-ಪು. 235 ¶3)
ನಂ. 1: ರಾಜ್ಯದ ಈ ಸುವಾರ್ತೆ (be-KA ಪು. 279 ¶1-4)
ನಂ. 2: 1 ಸಮುವೇಲ 5:1-12
ನಂ. 3: td 25ಬಿ ಯಾರು ಸ್ವರ್ಗಕ್ಕೆ ಹೋಗುತ್ತಾರೆ?
ನಂ. 4: ಯೆಹೋವನೊಂದಿಗಿನ ನಮ್ಮ ಸ್ನೇಹವನ್ನು ಹೇಗೆ ಬಲಪಡಿಸಬಲ್ಲೆವು?
ಮಾರ್ಚ್ 21 ಬೈಬಲ್ ವಾಚನ: 1 ಸಮುವೇಲ 10-13 ಗೀತೆ 166
ಭಾಷಣ ಗುಣ: ಪ್ರಶ್ನೆಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸುವುದು (be-KA ಪು. 236 ¶1-5)
ನಂ. 1: ರಾಜ್ಯವು ಏನಾಗಿದೆ ಎಂಬುದರ ಬಗ್ಗೆ ವಿವರಿಸುವುದು (be-KA ಪು. 280 ¶1-5)
ನಂ. 2: 1 ಸಮುವೇಲ 10:1-12
ನಂ. 3: ಸಾಕ್ಷಿಗಳಲ್ಲದ ತಮ್ಮ ಪ್ರೀತಿಯ ವ್ಯಕ್ತಿಗಳನ್ನು ಕ್ರೈಸ್ತರು ಹೇಗೆ ಉಪಚರಿಸಬೇಕು?
ನಂ. 4: td 25ಸಿ ಭೂಮಿಯಲ್ಲಿ ನಿತ್ಯಜೀವವನ್ನು ಪಡೆದುಕೊಳ್ಳಲಿರುವ ಸಂಖ್ಯೆಯು ಅಸೀಮಿತ
ಮಾರ್ಚ್ 28 ಬೈಬಲ್ ವಾಚನ: 1 ಸಮುವೇಲ 14-15 ಗೀತೆ 172
ಭಾಷಣ ಗುಣ: ಪ್ರಮುಖ ವಿಚಾರಗಳನ್ನು ಪರಿಚಯಪಡಿಸಲಿಕ್ಕಾಗಿ ಪ್ರಶ್ನೆಗಳು (be-KA ಪು. 237 ¶1-2)
ನಂ. 1: ರಾಜ್ಯವು ನಮ್ಮನ್ನು ಹೇಗೆ ಪ್ರಭಾವಿಸುತ್ತದೆ ಎಂಬುದನ್ನು ವಿವರಿಸುವುದು (be-KA ಪು. 281 ¶1-4)
ನಂ. 2: w-KA03 3/15 ಪು. 19-20 ¶17-21
ನಂ. 3: ಕ್ರೈಸ್ತರು ಏಕೆ ತೆರಿಗೆಯನ್ನು ಸಲ್ಲಿಸುತ್ತಾರೆ?
ನಂ. 4: c td 26ಎ ವಿವಾಹ ಬಂಧವು ಗೌರವಾರ್ಹವಾಗಿರಬೇಕು
ಏಪ್ರಿ. 4 ಬೈಬಲ್ ವಾಚನ: 1 ಸಮುವೇಲ 16-18 ಗೀತೆ 27
ಭಾಷಣ ಗುಣ: ಒಂದು ವಿಷಯವಸ್ತುವಿನ ಕುರಿತು ತರ್ಕಿಸಲಿಕ್ಕಾಗಿ ಪ್ರಶ್ನೆಗಳು (be-KA ಪು. 237 ¶3-ಪು. 238 ¶3)
ನಂ. 1: ಶಿಕ್ಷಣವು ಕ್ರೈಸ್ತರಿಗೆ ಏಕೆ ಪ್ರಾಮುಖ್ಯವಾಗಿದೆ? (w-KA03 3/15 ಪು. 10 ¶1-ಪು. 11 ¶5)
ನಂ. 2: 1 ಸಮುವೇಲ 17:41-51
ನಂ. 3: td 26ಬಿ ತಲೆತನದ ನಿಯಮವನ್ನು ಕ್ರೈಸ್ತರು ಗೌರವಿಸಬೇಕು
ನಂ. 4: ಪರಿಣಾಮಗಳ ಮೇಲೆ ಮನನ ಮಾಡುವುದು ಒಳ್ಳೇದನ್ನು ಪ್ರೀತಿಸಲು ಮತ್ತು ಕೆಟ್ಟದ್ದನ್ನು ದ್ವೇಷಿಸಲು ನಮಗೆ ಸಹಾಯಮಾಡುತ್ತದೆ
ಏಪ್ರಿ. 11 ಬೈಬಲ್ ವಾಚನ: 1 ಸಮುವೇಲ 19-22 ಗೀತೆ 73
ಭಾಷಣ ಗುಣ: ಆಂತರಿಕ ಅನಿಸಿಕೆಗಳನ್ನು ಹೊರತರಲಿಕ್ಕಾಗಿ ಪ್ರಶ್ನೆಗಳು (be-KA ಪು. 238 ¶4-6)
ನಂ. 1: ಯುವ ಜನರು ಆಧ್ಯಾತ್ಮಿಕ ಪ್ರಗತಿಯನ್ನು ಹೇಗೆ ಮಾಡಬಲ್ಲರು? (w-KA03 4/1 ಪು. 8-10)
ನಂ. 2: 1 ಸಮುವೇಲ 20:24-34
ನಂ. 3: ನಿಜವಾದ ಮಿತವರ್ತನೆಯು ಏಕೆ ಒಂದು ಆಕರ್ಷಕ ಗುಣವಾಗಿದೆ?
ನಂ. 4: td 26ಸಿ ಮಕ್ಕಳ ಕಡೆಗೆ ಹೆತ್ತವರಿಗಿರುವ ಜವಾಬ್ದಾರಿ
ಏಪ್ರಿ. 18 ಬೈಬಲ್ ವಾಚನ: 1 ಸಮುವೇಲ 23-25 ಗೀತೆ 61
ಭಾಷಣ ಗುಣ: ಹೆಚ್ಚಿನ ಒತ್ತನ್ನು ನೀಡಲಿಕ್ಕಾಗಿ ಪ್ರಶ್ನೆಗಳು (be-KA ಪು. 239 ¶1-2)
ನಂ. 1: ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡಿ (w-KA03 11/1 ಪು. 4-7)
ನಂ. 2: w-KA03 5/1 ಪು. 17 ¶11-14
ನಂ. 3: td 26ಡಿ ಕ್ರೈಸ್ತರು ಕೇವಲ ಕ್ರೈಸ್ತರನ್ನೇ ವಿವಾಹವಾಗಬೇಕು
ನಂ. 4: ಅಬ್ರಹಾಮನೊಂದಿಗೆ ಒಂದು ಒಡಂಬಡಿಕೆಯು ಏಕೆ ಮಾಡಲ್ಪಟ್ಟಿತು?
ಏಪ್ರಿ. 25 ಬೈಬಲ್ ವಾಚನ: 1 ಸಮುವೇಲ 26-31 ಗೀತೆ 217
ಭಾಷಣ ಗುಣ: ತಪ್ಪು ಆಲೋಚನಾ ರೀತಿಯನ್ನು ಬಯಲುಪಡಿಸಲಿಕ್ಕಾಗಿ ಪ್ರಶ್ನೆಗಳು (be-KA ಪು. 239 ¶3-5)
ಮೌಖಿಕ ಪುನರ್ವಿಮರ್ಶೆ
ಮೇ 2 ಬೈಬಲ್ ವಾಚನ: 2 ಸಮುವೇಲ 1-3 ಗೀತೆ 91
ಭಾಷಣ ಗುಣ: ಬೋಧಿಸಲು ಸಹಾಯಕವಾಗಿರುವ ಉಪಮಾಲಂಕಾರಗಳು ಮತ್ತು ರೂಪಕಾಲಂಕಾರಗಳು (be-KA ಪು. 240 ¶1-ಪು. 241 ¶1)
ನಂ. 1: ಉದ್ಯೋಗವನ್ನು ಪಡೆದುಕೊಳ್ಳುವುದೇ ಶಿಕ್ಷಣದ ಏಕಮಾತ್ರ ಉದ್ದೇಶವಾಗಿರುವುದಿಲ್ಲ (w-KA03 3/15 ಪು. 11 ¶6-ಪು. 14 ¶6)
ನಂ. 2: 2 ಸಮುವೇಲ 2:1-11
ನಂ. 3: ಪ್ರಾಮಾಣಿಕರಾಗಿರುವುದರಿಂದ ಬರುವ ಪ್ರಯೋಜನಗಳು
ನಂ. 4: d td 26ಇ ಸತ್ಯ ಕ್ರೈಸ್ತರು ಬಹುಪತ್ನೀತ್ವವನ್ನು ಪಾಲಿಸುವುದಿಲ್ಲ
ಮೇ 9 ಬೈಬಲ್ ವಾಚನ: 2 ಸಮುವೇಲ 4-8 ಗೀತೆ 183
ಭಾಷಣ ಗುಣ: ಉದಾಹರಣೆಗಳನ್ನು ಉಪಯೋಗಿಸುವುದು (be-KA ಪು. 241 ¶2-4)
ನಂ. 1: ಯೆಹೋವನು ಯುವ ಜನರಲ್ಲಿ ನೈಜವಾದ ಆಸಕ್ತಿ ವಹಿಸುತ್ತಾನೆ (w-KA03 4/15 ಪು. 29 ¶4-ಪು. 31 ¶4)
ನಂ. 2: 2 ಸಮುವೇಲ 5:1-12
ನಂ. 3: ಧರ್ಮಶಾಸ್ತ್ರದ ಒಡಂಬಡಿಕೆಯು ಏನನ್ನು ನೆರವೇರಿಸಿತು?
ನಂ. 4: td 27ಎ ಮರಿಯಳು ಯೇಸುವಿನ ತಾಯಿಯಾಗಿದ್ದಳು, “ದೇವರ ತಾಯಿ” ಅಲ್ಲ
ಮೇ 16 ಬೈಬಲ್ ವಾಚನ: 2 ಸಮುವೇಲ 9-12 ಗೀತೆ 66
ಭಾಷಣ ಗುಣ: ಶಾಸ್ತ್ರವಚನಗಳಲ್ಲಿರುವ ಉದಾಹರಣೆಗಳು (be-KA ಪು. 242 ¶1-2)
ನಂ. 1: ನೀವು ಏನು ಮಾಡುತ್ತೀರೋ ಅದನ್ನು ಯೆಹೋವನು ಗಮನಿಸುತ್ತಾನೊ? (w-KA03 5/1 ಪು. 28-31)
ನಂ. 2: 2 ಸಮುವೇಲ 9:1-13
ನಂ. 3: td 27ಬಿ ಮರಿಯಳು “ಯಾವಾಗಲೂ ಕನ್ಯೆ”ಯಾಗಿಯೇ ಇರಲಿಲ್ಲ ಎಂಬುದನ್ನು ಬೈಬಲು ತೋರಿಸುತ್ತದೆ
ನಂ. 4: ಯಾವ ವಿಧಗಳಲ್ಲಿ ದೇವರ ವಾಕ್ಯವು ಸಜೀವವಾಗಿದೆ? (ಇಬ್ರಿ. 4:12)
ಮೇ 23 ಬೈಬಲ್ ವಾಚನ: 2 ಸಮುವೇಲ 13-15 ಗೀತೆ 103
ಭಾಷಣ ಗುಣ: ಅದರ ಅರ್ಥ ತಿಳಿದೀತೊ? (be-KA ಪು. 242 ¶3-ಪು. 243 ¶1)
ನಂ. 1: ನೋಹನ ದಿನಚರಿ ಪುಸ್ತಕ—ಇದರಲ್ಲಿ ನಮಗೆ ಮಹತ್ವಪೂರ್ಣವಾಗಿರುವ ವಿಷಯವಿದೆಯೆ? (w-KA03 5/15 ಪು. 4-7)
ನಂ. 2: 2 ಸಮುವೇಲ 13:10-22
ನಂ. 3: ಯೋಹಾನ 11:25, 26ನ್ನು ನಾವು ಹೇಗೆ ಅರ್ಥಮಾಡಿಕೊಳ್ಳಬೇಕು?
ನಂ. 4: td 28ಎ ಜ್ಞಾಪಕಾಚರಣೆಯ ಕುರಿತು ಬೈಬಲ್ ಏನು ಹೇಳುತ್ತದೆ?
ಮೇ 30 ಬೈಬಲ್ ವಾಚನ: 2 ಸಮುವೇಲ 16-18 ಗೀತೆ 132
ಭಾಷಣ ಗುಣ: ಚಿರಪರಿಚಿತ ಸನ್ನಿವೇಶಗಳ ಮೇಲಾಧಾರಿತ ದೃಷ್ಟಾಂತಗಳು (be-KA ಪು. 244 ¶1-2)
ನಂ. 1: ತರ್ಕಬದ್ಧವಾಗಿ ಆಲೋಚಿಸಿ ವಿವೇಕದಿಂದ ಕಾರ್ಯವೆಸಗಿರಿ (w-KA03 7/15 ಪು. 21-3)
ನಂ. 2: w-KA03 5/15 ಪು. 16-17 ¶8-11
ನಂ. 3: td 28ಬಿ ಮಾಸ್ ಅನ್ನು ಆಚರಿಸುವುದು ಅಶಾಸ್ತ್ರೀಯವಾಗಿದೆ
ನಂ. 4: ದೀನಭಾವವು ಏಕೆ ಒಂದು ದೌರ್ಬಲ್ಯವಾಗಿರುವುದಿಲ್ಲ?
ಜೂನ್ 6 ಬೈಬಲ್ ವಾಚನ: 2 ಸಮುವೇಲ 19-21 ಗೀತೆ 224
ಭಾಷಣ ಗುಣ: ನಿಮ್ಮ ಸಭಿಕರಿಗೆ ಸೂಕ್ತವಾಗಿರುವ ದೃಷ್ಟಾಂತಗಳು (be-KA ಪು. 244 ¶3-ಪು. 245 ¶4)
ನಂ. 1: ಶಿಸ್ತಿನ ಹಿಂದಿರುವ ಉದ್ದೇಶವನ್ನು ಅರ್ಥಮಾಡಿಕೊಳ್ಳುವುದು (w-KA03 10/1 ಪು. 20 ¶1-ಪು. 21 ¶6)
ನಂ. 2: 2 ಸಮುವೇಲ 19:1-10
ನಂ. 3: ಒಬ್ಬ ಕ್ರೈಸ್ತನು ದೇವರ ವಿಶ್ರಾಂತಿಯಲ್ಲಿ ಹೇಗೆ ಸೇರಬಲ್ಲನು?
ನಂ. 4: td 29ಎ ಕ್ರೈಸ್ತರೆಲ್ಲರೂ ಶುಶ್ರೂಷಕರಾಗಿರಬೇಕು
ಜೂನ್ 13 ಬೈಬಲ್ ವಾಚನ: 2 ಸಮುವೇಲ 22-24 ಗೀತೆ 74
ಭಾಷಣ ಗುಣ: ದೃಶ್ಯ ಸಾಧನಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸುವುದು (be-KA ಪು. 247 ¶1-2)
ನಂ. 1: ಕಲಿಯುವ ಮನಸ್ಸಿನವರಾಗಿರಿ ಮತ್ತು ನಿಮ್ಮ ನಾಲಗೆಯನ್ನು ಹತೋಟಿಯಲ್ಲಿಡಿ (w-KA03 9/15 ಪು. 21 ¶1-ಪು. 22 ¶3)
ನಂ. 2: 2 ಸಮುವೇಲ 24:10-17
ನಂ. 3: ಯಾವ ವಿಧಗಳಲ್ಲಿ ಒಬ್ಬ ಕ್ರೈಸ್ತನು ಲೋಕದಿಂದ ಪ್ರತ್ಯೇಕವಾಗಿರಬೇಕು?
ನಂ. 4: e td 29ಬಿ ಶುಶ್ರೂಷೆಗಾಗಿರುವ ಅರ್ಹತೆಗಳು
ಜೂನ್ 20 ಬೈಬಲ್ ವಾಚನ: 1 ಅರಸುಗಳು 1-2 ಗೀತೆ 2
ಭಾಷಣ ಗುಣ: ಯೇಸು ದೃಶ್ಯ ಸಾಧನಗಳನ್ನು ಉಪಯೋಗಿಸಿದ ವಿಧ (be-KA ಪು. 247 ¶3)
ನಂ. 1: ಸ್ವಸಂತುಷ್ಟಿಯ ಗುಟ್ಟನ್ನು ತಿಳಿದುಕೊಳ್ಳುವುದು (w-KA03 6/1 ಪು. 8-11)
ನಂ. 2: w-KA03 6/1 ಪು. 12-13 ¶1-4
ನಂ. 3: ದಶಾಜ್ಞೆಗಳಲ್ಲಿ ಹತ್ತನೆಯ ಆಜ್ಞೆಯು ಹೇಗೆ ವಿಶೇಷವಾಗಿ ಪ್ರಾಮುಖ್ಯವಾಗಿದೆ?
ನಂ. 4: td 30ಎ ಸತ್ಯ ಕ್ರೈಸ್ತರು ದ್ವೇಷಿಸಲ್ಪಡಲು ಕಾರಣ
ಜೂನ್ 27 ಬೈಬಲ್ ವಾಚನ: 1 ಅರಸುಗಳು 3-6 ಗೀತೆ 167
ಭಾಷಣ ಗುಣ: ದೃಶ್ಯ ಸಾಧನಗಳನ್ನು ಉಪಯೋಗಿಸಬಹುದಾದ ವಿಧಗಳು (be-KA ಪು. 248 ¶1-3)
ಮೌಖಿಕ ಪುನರ್ವಿಮರ್ಶೆ
ಜುಲೈ 4 ಬೈಬಲ್ ವಾಚನ: 1 ಅರಸುಗಳು 7-8 ಗೀತೆ 194
ಭಾಷಣ ಗುಣ: ನಕ್ಷೆಗಳು, ಮುದ್ರಿತ ಸಮ್ಮೇಳನ ಕಾರ್ಯಕ್ರಮಗಳು, ಮತ್ತು ವಿಡಿಯೋಗಳನ್ನು ಉಪಯೋಗಿಸುವುದು (be-KA ಪು. 248 ¶4-ಪು. 249 ¶2)
ನಂ. 1: ವೃದ್ಧ ಜೊತೆ ವಿಶ್ವಾಸಿಗಳನ್ನು ಅತ್ಯಮೂಲ್ಯರೆಂದೆಣಿಸಿ (w-KA03 9/1 ಪು. 30-1)
ನಂ. 2: 1 ಅರಸುಗಳು 8:1-13
ನಂ. 3: ಯೇಸು ಲೋಕವನ್ನು ಜಯಿಸಿದ್ದು ಹೇಗೆ?
ನಂ. 4: td 30ಬಿ ಗಂಡನು ತನ್ನನ್ನು ದೇವರಿಂದ ಪ್ರತ್ಯೇಕಿಸುವಂತೆ ಒಬ್ಬ ಹೆಂಡತಿ ಬಿಡಬಾರದು
ಜುಲೈ 11 ಬೈಬಲ್ ವಾಚನ: 1 ಅರಸುಗಳು 9-11 ಗೀತೆ 191
ಭಾಷಣ ಗುಣ: ದೊಡ್ಡ ಗುಂಪುಗಳಿಗಾಗಿ ದೃಶ್ಯ ಸಾಧನಗಳನ್ನು ಉಪಯೋಗಿಸುವುದು (be-KA ಪು. 249 ¶3-ಪು. 250 ¶1)
ನಂ. 1: ಯೇಸು ಕ್ರಿಸ್ತನು ಭೂಮಿಯಲ್ಲಿ ಜೀವಿಸಿದನೆಂಬುದಕ್ಕೆ ಸಾಕ್ಷ್ಯ (w-KA03 6/15 ಪು. 4-7)
ನಂ. 2: 1 ಅರಸುಗಳು 9:1-9
ನಂ. 3: ಬೈಬಲ್ ಮೂಲತತ್ತ್ವಗಳನ್ನು ಅನುಸರಿಸುವ ಮೂಲಕ ಅಮಲೌಷಧ ಚಟದಿಂದ ಬಿಡುಗಡೆಹೊಂದಸಾಧ್ಯವಿದೆ
ನಂ. 4: f td 30ಸಿ ದೇವರಿಗೆ ಸೇವೆಸಲ್ಲಿಸುವುದರಿಂದ ತನ್ನನ್ನು ತಡೆಯುವಂತೆ ಒಬ್ಬ ಗಂಡನು ತನ್ನ ಹೆಂಡತಿಗೆ ಬಿಡಬಾರದು
ಜುಲೈ 18 ಬೈಬಲ್ ವಾಚನ: 1 ಅರಸುಗಳು 12-14 ಗೀತೆ 162
ಭಾಷಣ ಗುಣ: ತರ್ಕಸಮ್ಮತವಾಗಿ ಮಾತಾಡುವ ರೀತಿ ಪ್ರಾಮುಖ್ಯವೇಕೆ? (be-KA ಪು. 251 ¶1-3)
ನಂ. 1: ಆಲೋಚನೆಗಳಿಂದ ಕ್ರಿಯೆಗಳಿಗೆ, ಕ್ರಿಯೆಗಳಿಂದ ಪರಿಣಾಮಗಳಿಗೆ (w-KA03 1/15 ಪು. 30 ¶1-3)
ನಂ. 2: 1 ಅರಸುಗಳು 12:1-11
ನಂ. 3: ಪರೀಕ್ಷೆಗಳನ್ನು ಯಶಸ್ವಿಕರವಾಗಿ ಎದುರಿಸುವಂತೆ ನಂಬಿಕೆಯು ನಮಗೆ ಹೇಗೆ ಸಹಾಯಮಾಡಬಲ್ಲದು?
ನಂ. 4: td 31ಎ ದೇವರು ಆಲಿಸುವಂತಹ ಪ್ರಾರ್ಥನೆಗಳು
ಜುಲೈ 25 ಬೈಬಲ್ ವಾಚನ: 1 ಅರಸುಗಳು 15-17 ಗೀತೆ 158
ಭಾಷಣ ಗುಣ: ಆರಂಭಿಸಲಿಕ್ಕಾಗಿರುವ ವಿಷಯ (be-KA ಪು. 251 ¶4-ಪು. 252 ¶3)
ನಂ. 1: ‘ಯೆಹೋವನ ಚಿತ್ತವೇನೆಂಬುದನ್ನು ಗ್ರಹಿಸುವುದು’ ಹೇಗೆ? (w-KA03 12/1 ಪು. 21 ¶3-ಪು. 23 ¶2)
ನಂ. 2: w-KA03 7/15 ಪು. 19 ¶15-17
ನಂ. 3: td 31ಬಿ ಕೆಲವು ಪ್ರಾರ್ಥನೆಗಳು ಏಕೆ ಸಮ್ಮತವಾಗಿರುವುದಿಲ್ಲ?
ನಂ. 4: ಪವಿತ್ರಾತ್ಮವು ಕ್ರೈಸ್ತರನ್ನು ಹೇಗೆ ಸಾಂತ್ವನಗೊಳಿಸುತ್ತದೆ?
ಆಗ. 1 ಬೈಬಲ್ ವಾಚನ: 1 ಅರಸುಗಳು 18-20 ಗೀತೆ 207
ಭಾಷಣ ಗುಣ: ಮಣಿಯಬೇಕಾಗಿರುವ ಸಮಯ (be-KA ಪು. 252 ¶4-ಪು. 253 ¶1)
ನಂ. 1: ಯುವ ಜನರೇ, ಯೆಹೋವನಿಗೆ ಯೋಗ್ಯರಾಗಿ ನಡೆಯಿರಿ (w-KA03 10/15 ಪು. 23 ¶1-ಪು. 24 ¶1)
ನಂ. 2: 1 ಅರಸುಗಳು 18:1-15
ನಂ. 3: ಕ್ರೈಸ್ತರೆಲ್ಲರೂ ಬಹಳ ಫಲವನ್ನು ಕೊಡಬಲ್ಲರು
ನಂ. 4: td 32ಎ ಮಾನವನು ಪೂರ್ವನಿರ್ಧರಿಸಲ್ಪಟ್ಟಿರುವ ಜೀವಿಯಲ್ಲ
ಆಗ. 8 ಬೈಬಲ್ ವಾಚನ: 1 ಅರಸುಗಳು 21-22 ಗೀತೆ 92
ಭಾಷಣ ಗುಣ: ಪ್ರಶ್ನೆಗಳನ್ನು ಕೇಳುವುದು ಮತ್ತು ಕಾರಣಗಳನ್ನು ಕೊಡುವುದು (be-KA ಪು. 253 ¶2-ಪು. 254 ¶2)
ನಂ. 1: ಬಡತನದ ಶಾಶ್ವತವಾದ ಪರಿಹಾರ (w-KA03 8/1 ಪು. 4-7)
ನಂ. 2: 1 ಅರಸುಗಳು 21:15-26
ನಂ. 3: td 33ಎ ಯೇಸುವಿನ ಮಾನವ ಜೀವವು ಎಲ್ಲರಿಗೂ ಈಡಾಗಿ ಕೊಡಲ್ಪಟ್ಟಿತು
ನಂ. 4: ನಮಗೆ ಧೈರ್ಯದ ಅಗತ್ಯವಿದೆ ಏಕೆ, ಮತ್ತು ನಾವು ಇದನ್ನು ಬೆಳೆಸಿಕೊಳ್ಳುವುದು ಹೇಗೆ?
ಆಗ. 15 ಬೈಬಲ್ ವಾಚನ: 2 ಅರಸುಗಳು 1-4 ಗೀತೆ 16
ಭಾಷಣ ಗುಣ: ದೇವರ ವಾಕ್ಯದ ಮೇಲೆ ಸ್ಥಿರವಾಗಿ ಆಧಾರಿತವಾದ ಬಲವಾದ ವಾದಸರಣಿಗಳು (be-KA ಪು. 255 ¶1-ಪು. 256 ¶3)
ನಂ. 1: ಉಚಿತವಾಗಿ ಹೊಂದಿದ್ದೀರಿ ಉಚಿತವಾಗಿ ಕೊಡಿರಿ (w-KA03 8/1 ಪು. 20-2)
ನಂ. 2: 2 ಅರಸುಗಳು 3:1-12
ನಂ. 3: ಜಲಪ್ರಳಯಕ್ಕೆ ಮುಂಚಿನ ಜನರು ಅಷ್ಟು ದೀರ್ಘಕಾಲ ಜೀವಿಸಿದ್ದೇಕೆ?
ನಂ. 4: td 33ಬಿ ಯೇಸುವಿಗೆ ಈಡು ಯಜ್ಞವನ್ನು ಕೊಡಲು ಸಾಧ್ಯವಾಯಿತು ಏಕೆ?
ಆಗ. 22 ಬೈಬಲ್ ವಾಚನ: 2 ಅರಸುಗಳು 5-8 ಗೀತೆ 193
ಭಾಷಣ ಗುಣ: ವಾದಸರಣಿಗಳನ್ನು ದೃಢೀಕರಿಸುವಂಥ ರುಜುವಾತಿನಿಂದ ಬೆಂಬಲಿಸಿರಿ (be-KA ಪು. 256 ¶4-6)
ನಂ. 1: ಸಮಯೋಚಿತ ನಯವನ್ನು ಉಪಯೋಗಿಸುವ ಕಲೆಯನ್ನು ಕಲಿಯುವುದು (w-KA03 8/1 ಪು. 29-31)
ನಂ. 2: w-KA03 8/1 ಪು. 19 ¶18-22
ನಂ. 3: td 34ಎ ಒಂದೇ ಒಂದು ಸತ್ಯ ಧರ್ಮವನ್ನು ಹೇಗೆ ಕಂಡುಕೊಳ್ಳುವುದು?
ನಂ. 4: ಯೋನನ ಯಾವ ಒಳ್ಳೆಯ ಗುಣಗಳನ್ನು ನಾವು ಅನುಕರಿಸಬೇಕು?
ಆಗ. 29 ಬೈಬಲ್ ವಾಚನ: 2 ಅರಸುಗಳು 9-11 ಗೀತೆ 129
ಭಾಷಣ ಗುಣ: ಸಾಕಷ್ಟು ಪುರಾವೆಯನ್ನು ನೀಡುವುದು (be-KA ಪು. 257 ¶1-4)
ಮೌಖಿಕ ಪುನರ್ವಿಮರ್ಶೆ
ಸೆಪ್ಟೆಂ. 5 ಬೈಬಲ್ ವಾಚನ: 2 ಅರಸುಗಳು 12-15 ಗೀತೆ 175
ಭಾಷಣ ಗುಣ: ಹೃದಯವನ್ನು ತಲಪಲು ಪ್ರಯತ್ನಿಸುವುದು (be-KA ಪು. 258 ¶1-5)
ನಂ. 1: ನೀವು ಯೆಹೋವನನ್ನು ಶ್ರದ್ಧಾಪೂರ್ವಕವಾಗಿ ಹುಡುಕುತ್ತಿದ್ದೀರೋ? (w-KA03 8/15 ಪು. 25-8)
ನಂ. 2: 2 ಅರಸುಗಳು 12:1-12
ನಂ. 3: ಸೌಮ್ಯಭಾವವನ್ನು ಏಕೆ ಬೆನ್ನಟ್ಟಬೇಕು?
ನಂ. 4: td 34ಬಿ ಸುಳ್ಳು ಬೋಧನೆಗಳನ್ನು ಖಂಡಿಸುವುದು ತಪ್ಪಾಗಿದೆಯೋ?
ಸೆಪ್ಟೆಂ. 12 ಬೈಬಲ್ ವಾಚನ: 2 ಅರಸುಗಳು 16-18 ಗೀತೆ 203
ಭಾಷಣ ಗುಣ: ಜನರ ಹೃದಯದಲ್ಲಿರುವುದನ್ನು ಹೊರತರುವುದು (be-KA ಪು. 259 ¶1-3)
ನಂ. 1: ಯೇಸುವಿನ ಕುರಿತು ಜನರು ಏನನ್ನು ಜ್ಞಾಪಿಸಿಕೊಂಡರು? (w-KA03 8/15 ಪು. 6 ¶6-ಪು. 8 ¶6)
ನಂ. 2: 2 ಅರಸುಗಳು 16:10-20
ನಂ. 3: td 34ಸಿ ಧರ್ಮವನ್ನು ಬದಲಾಯಿಸುವುದನ್ನು ದೇವರು ಯಾವಾಗ ಅಂಗೀಕರಿಸುತ್ತಾನೆ?
ನಂ. 4: ಕರ್ತನಿಗೆ ಯಾವುದು ಮೆಚ್ಚಿಗೆಯಾಗಿದೆ ಎಂಬುದನ್ನು ನಾವು ಹೇಗೆ ಪರಿಶೋಧಿಸಿ ತಿಳಿದುಕೊಳ್ಳಬಹುದು?
ಸೆಪ್ಟೆಂ. 19 ಬೈಬಲ್ ವಾಚನ: 2 ಅರಸುಗಳು 19-22 ಗೀತೆ 89
ಭಾಷಣ ಗುಣ: ಪ್ರಯೋಜನಕರವಾದ ಅನಿಸಿಕೆಗಳನ್ನು ಚುರುಕುಗೊಳಿಸುವುದು (be-KA ಪು. 259 ¶4-ಪು. 260 ¶1)
ನಂ. 1: “ಸ್ವಸ್ಥಬೋಧನಾವಾಕ್ಯಗಳನ್ನು ಮಾದರಿಮಾಡಿಕೊಂಡು ಅನುಸರಿಸು” (w-KA03 1/1 ಪು. 29 ¶3-ಪು. 30 ¶4)
ನಂ. 2: 2 ಅರಸುಗಳು 19:20-28
ನಂ. 3: td 34ಡಿ “ಎಲ್ಲಾ ಧರ್ಮಗಳಲ್ಲಿ ಒಳ್ಳೇದನ್ನು” ದೇವರು ನೋಡುತ್ತಾನೋ?
ನಂ. 4: ಪ್ರಾಚೀನ ಸ್ಮುರ್ನದಲ್ಲಿದ್ದ ನಮ್ಮ ಕ್ರೈಸ್ತ ಸಹೋದರರಿಂದ ನಾವೇನನ್ನು ಕಲಿಯಬಲ್ಲೆವು?
ಸೆಪ್ಟೆಂ. 26 ಬೈಬಲ್ ವಾಚನ: 2 ಅರಸುಗಳು 23-25 ಗೀತೆ 84
ಭಾಷಣ ಗುಣ: ದೇವಭಯವನ್ನು ಬೆಳೆಸಿಕೊಳ್ಳುವಂತೆ ಇತರರಿಗೆ ಸಹಾಯಮಾಡುವುದು (be-KA ಪು. 260 ¶2-3)
ನಂ. 1: ನಮ್ಮ ದಿನಗಳಲ್ಲಿ ಆರಾಧನೆಯಲ್ಲಿ ಐಕ್ಯತೆ—ಇದರ ಅರ್ಥವೇನು? (wt-KA ಪು. 5-9, 12, 13 ¶1-9, 12-14)
ನಂ. 2: w-KA03 8/15 ಪು. 20 ¶6-10
ನಂ. 3: td 35ಎ ಸತ್ತವರಿಂದ ಯಾರು ಎಬ್ಬಿಸಲ್ಪಡುವರು?
ನಂ. 4: ನಾವು ಭವಿಷ್ಯದ ಕುರಿತು ಆಶಾವಾದಿಗಳಾಗಿದ್ದೇವೆ
ಅಕ್ಟೋ. 3 ಬೈಬಲ್ ವಾಚನ: 1 ಪೂರ್ವಕಾಲವೃತ್ತಾಂತ 1-4 ಗೀತೆ 51
ಭಾಷಣ ಗುಣ: ನಮ್ಮ ನಡತೆಯು ಯೆಹೋವನಿಗೆ ಪ್ರಾಮುಖ್ಯವಾಗಿದೆ (be-KA ಪು. 260 ¶4-ಪು. 261 ¶1)
ನಂ. 1: ಐಕ್ಯವನ್ನು ಸಾಧಿಸಲು ನೆರವಾಗುವ ಸಂಗತಿಗಳಾವುವು? (wt-KA ಪು. 9-12 ¶10-11)
ನಂ. 2: 1 ಪೂರ್ವಕಾಲವೃತ್ತಾಂತ 4:24-43
ನಂ. 3: td 35ಬಿ ಮೃತರು ಎಲ್ಲಿ ಪುನರುತ್ಥಾನಗೊಳಿಸಲ್ಪಡುವರು?
ನಂ. 4: ಯೆಹೋವನು ವೈಯಕ್ತಿಕವಾಗಿ ನಮ್ಮನ್ನು ಪ್ರೀತಿಸುತ್ತಾನೆ
ಅಕ್ಟೋ. 10 ಬೈಬಲ್ ವಾಚನ: 1 ಪೂರ್ವಕಾಲವೃತ್ತಾಂತ 5-7 ಗೀತೆ 195
ಭಾಷಣ ಗುಣ: ಸ್ವತಃ ಪರೀಕ್ಷಿಸಿಕೊಳ್ಳುವಂತೆ ಇತರರಿಗೆ ಸಹಾಯಮಾಡುವುದು (be-KA ಪು. 261 ¶2-4)
ನಂ. 1: ಯೆಹೋವನನ್ನು ಒಬ್ಬನೇ ಸತ್ಯ ದೇವರಾಗಿ ಕೊಂಡಾಡಿರಿ (wt-KA ಪು. 15-19 ¶1-9)
ನಂ. 2: 1 ಪೂರ್ವಕಾಲವೃತ್ತಾಂತ 5:18-26
ನಂ. 3: “ಯೆಹೋವನ ದಿನ”ದ ಕುರಿತು ನಮಗೇನು ತಿಳಿದಿದೆ?
ನಂ. 4: td 36ಎ ಕ್ರಿಸ್ತನ ಹಿಂದಿರುಗುವಿಕೆ ಅದೃಶ್ಯವಾಗಿರುತ್ತದೆ
ಅಕ್ಟೋ. 17 ಬೈಬಲ್ ವಾಚನ: 1 ಪೂರ್ವಕಾಲವೃತ್ತಾಂತ 8-11 ಗೀತೆ 201
ಭಾಷಣ ಗುಣ: ಹೃತ್ಪೂರ್ವಕವಾದ ವಿಧೇಯತೆಯನ್ನು ಪ್ರವರ್ಧಿಸುವುದು (be-KA ಪು. 262 ¶1-4)
ನಂ. 1: ಯೆಹೋವನನ್ನು ಒಬ್ಬನೇ ಸತ್ಯ ದೇವರಾಗಿ ಕೊಂಡಾಡಿರಿ—ಭಾಗ 2 (wt-KA ಪು. 19-22 ¶10-16)
ನಂ. 2: 1 ಪೂರ್ವಕಾಲವೃತ್ತಾಂತ 10:1-14
ನಂ. 3: td 36ಬಿ ಯೇಸುವಿನ ಹಿಂದಿರುಗುವಿಕೆ ಪ್ರಾಕೃತಿಕ ವಾಸ್ತವಾಂಶಗಳಿಂದ ವಿವೇಚಿಸಲ್ಪಡುತ್ತದೆ
ನಂ. 4: ನಾವು ಯಾರೊಂದಿಗೆ ಸಮಯೋಚಿತ ನಯವನ್ನು ತೋರಿಸಬೇಕು?
ಅಕ್ಟೋ. 24 ಬೈಬಲ್ ವಾಚನ: 1 ಪೂರ್ವಕಾಲವೃತ್ತಾಂತ 12-15 ಗೀತೆ 80
ಭಾಷಣ ಗುಣ: ಜನರ ಹೃದಯಗಳನ್ನು ತಲಪುವುದರಲ್ಲಿ ಯೆಹೋವನೊಂದಿಗೆ ಸಹಕರಿಸುವುದು (be-KA ಪು. 262 ¶5)
ನಂ. 1: ದೇವರ ವಾಕ್ಯವನ್ನು ಬಿಗಿಯಾಗಿ ಹಿಡಿದುಕೊಳ್ಳಿರಿ (wt-KA ಪು. 23-27 ¶1-10)
ನಂ. 2: w-KA03 11/1 ಪು. 10-11 ¶10-13
ನಂ. 3: ಯೆಹೋವನ ಹೆಸರಿನಲ್ಲಿ ನಡೆಯುವುದು ವಾಸ್ತವದಲ್ಲಿ ಏನನ್ನು ಅರ್ಥೈಸುತ್ತದೆ?
ನಂ. 4: td 37ಎ ಸಬ್ಬತ್ ಅನ್ನು ಆಚರಿಸುವಂತೆ ಕ್ರೈಸ್ತರು ನಿರ್ಬಂಧಿಸಲ್ಪಟ್ಟಿಲ್ಲ
ಅಕ್ಟೋ. 31 ಬೈಬಲ್ ವಾಚನ: 1 ಪೂರ್ವಕಾಲವೃತ್ತಾಂತ 16-20 ಗೀತೆ 129
ಭಾಷಣ ಗುಣ: ಸಮಯ ಸಾಂಗತ್ಯಕ್ಕೆ ಅಂಟಿಕೊಳ್ಳುವ ವಿಧ (be-KA ಪು. 263 ¶1-ಪು. 264 ¶4)
ಮೌಖಿಕ ಪುನರ್ವಿಮರ್ಶೆ
ನವೆಂ. 7 ಬೈಬಲ್ ವಾಚನ: 1 ಪೂರ್ವಕಾಲವೃತ್ತಾಂತ 21-25 ಗೀತೆ 215
ಭಾಷಣ ಗುಣ: ಪರಿಣಾಮಕಾರಿಯಾದ ಹುರಿದುಂಬಿಸುವಿಕೆ (be-KA ಪು. 265 ¶1-ಪು. 266 ¶1)
ನಂ. 1: ದೇವರ ವಾಕ್ಯವನ್ನು ಬಿಗಿಯಾಗಿ ಹಿಡಿದುಕೊಳ್ಳಿರಿ—ನಮ್ಮ ಗುರಿ (wt-KA ಪು. 28-31 ¶11-13)
ನಂ. 2: 1 ಪೂರ್ವಕಾಲವೃತ್ತಾಂತ 22:1-10
ನಂ. 3: td 37ಬಿ ಸಬ್ಬತ್ ನಿಯಮವು ಕ್ರೈಸ್ತರಿಗೆ ಕೊಡಲ್ಪಡಲಿಲ್ಲ
ನಂ. 4: g ವಿವಾಹವನ್ನು ಹೇಗೆ ಬಲಗೊಳಿಸಬಹುದು?
ನವೆಂ. 14 ಬೈಬಲ್ ವಾಚನ: 1 ಪೂರ್ವಕಾಲವೃತ್ತಾಂತ 26-29 ಗೀತೆ 35
ಭಾಷಣ ಗುಣ: ಪ್ರೀತಿಯ ನಿಮಿತ್ತ ಹುರಿದುಂಬಿಸುವುದು (be-KA ಪು. 266 ¶2-5)
ನಂ. 1: ಪ್ರವಾದಿಗಳೆಲ್ಲರು ಯಾರ ಪರವಾಗಿ ಸಾಕ್ಷಿಹೇಳಿದರೊ ಆ ವ್ಯಕ್ತಿ (wt-KA ಪು. 32-37 ¶1-9)
ನಂ. 2: 1 ಪೂರ್ವಕಾಲವೃತ್ತಾಂತ 29:1-9
ನಂ. 3: ಯೆಹೋವನ ಸೇವಕರು ಏಕೆ ಹಿಂಸಿಸಲ್ಪಡುತ್ತಾರೆ?
ನಂ. 4: td 37ಸಿ ದೇವರ ಸಬ್ಬತ್ತಿನ ವಿಶ್ರಾಂತಿ ಯಾವಾಗ ಆರಂಭಗೊಂಡು ಮುಗಿಯುತ್ತದೆ?
ನವೆಂ. 21 ಬೈಬಲ್ ವಾಚನ: 2 ಪೂರ್ವಕಾಲವೃತ್ತಾಂತ 1-5 ಗೀತೆ 46
ಭಾಷಣ ಗುಣ: ಶಾಸ್ತ್ರವಚನಗಳಲ್ಲಿ ಬೇರೂರಿರುವ ಹುರಿದುಂಬಿಸುವಿಕೆ (be-KA ಪು. 267 ¶1-2)
ನಂ. 1: ಕ್ರಿಸ್ತನಲ್ಲಿ ನಂಬಿಕೆಯನ್ನು ತೋರಿಸಿರಿ (wt-KA ಪು. 37-40 ¶10-15)
ನಂ. 2: 2 ಪೂರ್ವಕಾಲವೃತ್ತಾಂತ 2:1-10
ನಂ. 3: ಶಿಸ್ತಿನ ಹಿಂದಿರುವ ಉದ್ದೇಶವನ್ನು ಅರ್ಥಮಾಡಿಕೊಳ್ಳಿರಿ
ನಂ. 4: td 38ಎ ದೇವರು ಕ್ರಿಸ್ತನ ಮೂಲಕ ಮಾತ್ರ ರಕ್ಷಣೆಯನ್ನು ಕೊಡುತ್ತಾನೆ
ನವೆಂ. 28 ಬೈಬಲ್ ವಾಚನ: 2 ಪೂರ್ವಕಾಲವೃತ್ತಾಂತ 6-9 ಗೀತೆ 106
ಭಾಷಣ ಗುಣ: “ವಾಕ್ಸರಳತೆ”ಯನ್ನು ಹೊಂದಿರುವುದು (be-KA ಪು. 267 ¶3-4)
ನಂ. 1: ಯೆಹೋವನ ಆರಾಧಕರು ಅನುಭವಿಸುವ ಸ್ವಾತಂತ್ರ್ಯ (wt-KA ಪು. 41-46 ¶1-9)
ನಂ. 2: w-KA03 12/1 ಪು. 15-16 ¶3-6
ನಂ. 3: ನಾವು ಯೆಹೋವನಲ್ಲಿ ಸಂತೋಷಿಸುತ್ತೇವೆ ಎಂಬುದನ್ನು ಹೇಗೆ ತೋರಿಸುತ್ತೇವೆ?
ನಂ. 4: td 38ಬಿ “ಒಮ್ಮೆ ರಕ್ಷಿಸಲ್ಪಟ್ಟೆವೆಂದರೆ, ಯಾವಾಗಲೂ ರಕ್ಷಿಸಲ್ಪಟ್ಟಿದ್ದೇವೆ” ಎಂಬುದು ಶಾಸ್ತ್ರೀಯವಲ್ಲ
ಡಿಸೆಂ. 5 ಬೈಬಲ್ ವಾಚನ: 2 ಪೂರ್ವಕಾಲವೃತ್ತಾಂತ 10-14 ಗೀತೆ 116
ಭಾಷಣ ಗುಣ: ಪ್ರೋತ್ಸಾಹಿಸುವವರಾಗಿರುವುದು ಪ್ರಾಮುಖ್ಯವೇಕೆ? (be-KA ಪು. 268 ¶1-3)
ನಂ. 1: ಲೋಕವು ಸ್ವಾತಂತ್ರ್ಯವೆಂದು ಪರಿಗಣಿಸುವ ವಿಷಯಗಳಿಂದ ಬರುವ ಶೋಚನೀಯ ಪರಿಣಾಮಗಳು (wt-KA ಪು. 46-49 ¶10-14)
ನಂ. 2: 2 ಪೂರ್ವಕಾಲವೃತ್ತಾಂತ 12:1-12
ನಂ. 3: ನಮಗೆ ದೇವರ ಅಪಾತ್ರ ದಯೆ ಏಕೆ ಅಗತ್ಯ?
ನಂ. 4: td 38ಸಿ “ಸಾರ್ವತ್ರಿಕ ರಕ್ಷಣೆಯು” ಶಾಸ್ತ್ರೀಯವಲ್ಲ
ಡಿಸೆಂ. 12 ಬೈಬಲ್ ವಾಚನ: 2 ಪೂರ್ವಕಾಲವೃತ್ತಾಂತ 15-19 ಗೀತೆ 182
ಭಾಷಣ ಗುಣ: ಯೆಹೋವನು ಏನು ಮಾಡಿದ್ದಾನೋ ಅದನ್ನು ಸಭಿಕರಿಗೆ ಜ್ಞಾಪಕ ಹುಟ್ಟಿಸುವುದು (be-KA ಪು. 268 ¶4-ಪು. 269 ¶2)
ನಂ. 1: ನಾವೆಲ್ಲರೂ ಎದುರಿಸಲೇಬೇಕಾದ ವಿವಾದಾಂಶ—ಭಾಗ 1 (wt-KA ಪು. 50-54 ¶1-8)
ನಂ. 2: 2 ಪೂರ್ವಕಾಲವೃತ್ತಾಂತ 19:1-11
ನಂ. 3: td 39ಎ ಪಾಪ ಅಂದರೇನು?
ನಂ. 4: ಯೇಸುವಿನ ಕುಟುಂಬದಿಂದ ನಾವೇನನ್ನು ಕಲಿಯಬಲ್ಲೆವು?
ಡಿಸೆಂ. 19 ಬೈಬಲ್ ವಾಚನ: 2 ಪೂರ್ವಕಾಲವೃತ್ತಾಂತ 20-24 ಗೀತೆ 186
ಭಾಷಣ ಗುಣ: ಯೆಹೋವನು ತನ್ನ ಜನರಿಗೆ ಹೇಗೆ ಸಹಾಯಮಾಡಿದ್ದಾನೆ ಎಂಬುದನ್ನು ತೋರಿಸುವುದು (be-KA ಪು. 269 ¶3-5)
ನಂ. 1: ನಾವೆಲ್ಲರೂ ಎದುರಿಸಲೇಬೇಕಾದ ವಿವಾದಾಂಶ—ಭಾಗ 2 (wt-KA ಪು. 54-59 ¶9-18)
ನಂ. 2: w-KA03 12/15 ಪು. 16-17 ¶13-15
ನಂ. 3: ಸ್ವಸಂತುಷ್ಟಿಯ ಗುಟ್ಟನ್ನು ತಿಳಿದುಕೊಳ್ಳುವುದರಿಂದ ಸಿಗುವ ಪ್ರಯೋಜನಗಳು
ನಂ. 4: td 39ಬಿ ಆದಾಮನ ಪಾಪದಿಂದ ಎಲ್ಲಾ ಮಾನವರೂ ಏಕೆ ಕಷ್ಟಾನುಭವಿಸಿದ್ದಾರೆ
ಡಿಸೆಂ. 26 ಬೈಬಲ್ ವಾಚನ: 2 ಪೂರ್ವಕಾಲವೃತ್ತಾಂತ 25-28 ಗೀತೆ 137
ಭಾಷಣ ಗುಣ: ದೇವರು ಈಗ ಏನನ್ನು ಮಾಡುತ್ತಿದ್ದಾನೊ ಅದರಲ್ಲಿ ಹರ್ಷವನ್ನು ತೋರಿಸುವುದು (be-KA ಪು. 270 ¶1-ಪು. 271 ¶2)
ಮೌಖಿಕ ಪುನರ್ವಿಮರ್ಶೆ
[ಪಾದಟಿಪ್ಪಣಿಗಳು]
a ಸಹೋದರರಿಗೆ ಮಾತ್ರ ನೇಮಿಸಿರಿ.
b ಸಹೋದರರಿಗೆ ಮಾತ್ರ ನೇಮಿಸಿರಿ.
c ಸಹೋದರರಿಗೆ ಮಾತ್ರ ನೇಮಿಸಿರಿ.
d ಸಹೋದರರಿಗೆ ಮಾತ್ರ ನೇಮಿಸಿರಿ.
e ಸಹೋದರರಿಗೆ ಮಾತ್ರ ನೇಮಿಸಿರಿ.
f ಸಹೋದರರಿಗೆ ಮಾತ್ರ ನೇಮಿಸಿರಿ.
g ಸಹೋದರರಿಗೆ ಮಾತ್ರ ನೇಮಿಸಿರಿ.