ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರ್ವಿಮರ್ಶೆ
ಇಸವಿ 2004ರ ಅಕ್ಟೋಬರ್ 25ರಿಂದ ಆರಂಭವಾಗುವ ವಾರದಲ್ಲಿನ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಈ ಪ್ರಶ್ನೆಗಳನ್ನು ಮೌಖಿಕವಾಗಿ ಪರಿಗಣಿಸಲಾಗುವುದು. ಇಸವಿ 2004ರ ಸೆಪ್ಟೆಂಬರ್ 6ರಿಂದ ಅಕ್ಟೋಬರ್ 25ರ ತನಕದ ವಾರಗಳಿಗಾಗಿರುವ ನೇಮಕಗಳಲ್ಲಿ ಆವರಿಸಲ್ಪಟ್ಟ ವಿಷಯಭಾಗದ ಮೇಲಾಧಾರಿತವಾದ 30 ನಿಮಿಷಗಳ ಪುನರ್ವಿಮರ್ಶೆಯನ್ನು ಶಾಲಾ ಮೇಲ್ವಿಚಾರಕನು ನಡೆಸುವನು. [ಸೂಚನೆ: ಪ್ರಶ್ನೆಗಳ ಬಳಿಕ ಉಲ್ಲೇಖಗಳು ಇಲ್ಲದಿರುವಲ್ಲಿ, ಉತ್ತರಗಳನ್ನು ಕಂಡುಕೊಳ್ಳಲಿಕ್ಕಾಗಿ ನೀವು ನಿಮ್ಮ ಸ್ವಂತ ಸಂಶೋಧನೆಯನ್ನು ಮಾಡುವ ಆವಶ್ಯಕತೆಯಿರುವುದು.—ಶೂಶ್ರೂಷಾ ಶಾಲೆ, ಪುಟ 36-7ನ್ನು ನೋಡಿರಿ.]
ಭಾಷಣ ಗುಣಗಳು
1. ನಮ್ಮ ಕ್ರೈಸ್ತ ಚಟುವಟಿಕೆಯ ಯಾವುದೋ ಒಂದು ಅಂಶದ ಕುರಿತು ಭಾಷಣ ನೀಡುವಾಗ ನಮ್ಮ ವಾಕ್ಶೈಲಿಯನ್ನು ಸಕಾರಾತ್ಮಕವಾಗಿ ನಾವು ಹೇಗೆ ಇಡಬಲ್ಲೆವು? [be-KA ಪು. 203 ಪ್ಯಾರ. 3-4]
2. ಪುನರಾವರ್ತನೆ ಎಂದರೇನು, ಮತ್ತು ಇದು ಪ್ರಾಮುಖ್ಯವೇಕೆ? [be-KA ಪು. 206 ಪ್ಯಾರ. 1-4]
3. ನಮ್ಮ ಭಾಷಣದ ಮುಖ್ಯ ವಿಷಯವನ್ನು ನಾವು ಹೇಗೆ ಒತ್ತಿಹೇಳಬಲ್ಲೆವು? [be-KA ಪು. 210 ಪ್ಯಾರ. 1-5, ಚೌಕ]
4. ನಮಗೆ ನೇಮಕವಾಗಿರುವ ಭಾಷಣದ ಮುಖ್ಯಾಂಶಗಳು ಯಾವುವೆಂದು ನಾವು ಹೇಗೆ ನಿರ್ಧರಿಸಬಲ್ಲೆವು? [be-KA ಪು. 212 ಪ್ಯಾರ. 1-4]
5. ತೀರ ಹೆಚ್ಚು ಮುಖ್ಯಾಂಶಗಳನ್ನು ಉಪಯೋಗಿಸದಂತೆ ನಾವೇಕೆ ಜಾಗ್ರತೆವಹಿಸಬೇಕು? [be-KA ಪು. 213 ಪ್ಯಾರ. 2-4]
ನೇಮಕ ನಂ. 1
6. ಜಲಪ್ರಳಯಕ್ಕೆ ಮುಂಚಿನ ಯಾವ ಅಭಿವೃದ್ಧಿಯು ತಮ್ಮ ಸುತ್ತಲಿರುವಂಥದ್ದೆಲ್ಲವೂ ಅಂತ್ಯಗೊಳ್ಳುವುದೆಂಬ ಸಂಗತಿಯನ್ನು ನಂಬಲು ಜನರಿಗೆ ಕಷ್ಟಕರವನ್ನಾಗಿ ಮಾಡಿತ್ತು? [w-KA02 3/1 ಪು. 5-6]
7. ಯೇಸುವಿನ ಸಮಕಾಲೀನರು ಅವನನ್ನು “ವಾಸಿಮಾಡುವವನು” ಎಂದು ಕರೆಯಲಿಲ್ಲ, ಬದಲಾಗಿ ‘ಬೋಧಕನು’ ಎಂದು ಕರೆದರು ಎಂಬುದು ಗಮನಾರ್ಹವಾದ ಅಂಶವಾಗಿದೆ ಏಕೆ? (ಲೂಕ 3:12; 7:40) [w-KA02 5/1 ಪು. 4 ಪ್ಯಾರ. 3; ಪು. 6 ಪ್ಯಾರ. 6]
8. ಕ್ಷೇತ್ರ ಶುಶ್ರೂಷೆಯಲ್ಲಿ ಸಂಪೂರ್ಣ ಪಾಲನ್ನು ತೆಗೆದುಕೊಳ್ಳುವ ಪ್ರಮುಖತೆಯನ್ನು ಜ್ಞಾನೋಕ್ತಿ 11:24, 25 ಹೇಗೆ ಎತ್ತಿತೋರಿಸುತ್ತದೆ? [w-KA02 7/15 ಪು. 30 ಪ್ಯಾರ. 2-4]
9. ಏದೆನಿನಲ್ಲಿನ ದಂಗೆಯಿಂದ ಯಾವ ನೈತಿಕ ವಿವಾದಾಂಶವು ಎಬ್ಬಿಸಲ್ಪಟ್ಟಿತು, ಮತ್ತು ಆ ದಂಗೆಯ ಪರಿಣಾಮಗಳೇನು? (ಆದಿ. 3:1-6) [w-KA02 10/1 ಪು. 6 ಪ್ಯಾರ. 1-3]
10. ಯೆರೂಸಲೇಮಿನಲ್ಲಿ ಸತ್ಯಾರಾಧನೆಯ ಪುನಸ್ಥಾಪನೆಯ ತಾರೀಖನ್ನು ಹೇಗೆ ನಿರ್ಧರಿಸಲಾಯಿತು? [si ಪು. 285 ಪ್ಯಾರ. 5]
ಸಾಪ್ತಾಹಿಕ ಬೈಬಲ್ ವಾಚನ
11. ಬಾಲಾಕನ ಜನರೊಂದಿಗೆ ಹೋಗುವಂತೆ ಯೆಹೋವನೇ ಬಿಳಾಮನಿಗೆ ಹೇಳಿ, ಅನಂತರ ಬಿಳಾಮನು ಅವರೊಂದಿಗೆ ಹೋದಾಗ ಆತನೇಕೆ ಕೋಪಿಸಿಕೊಂಡನು? (ಅರ. 22:20-22)
12. ಕ್ರೈಸ್ತ ಸ್ತ್ರೀಯ ಗಂಡನು ಆಕೆಯ ಹರಕೆಯನ್ನು ತಳ್ಳಿಬಿಡಸಾಧ್ಯವಿದೆಯೊ? (ಅರ. 30:6-8)
13. ಇಂದು ‘ಆಶ್ರಯನಗರಗಳು’ ಯಾವುದನ್ನು ಸೂಚಿಸುತ್ತವೆ? (ಅರ. 35:6) [w-KA95 11/15 ಪು. 17 ಪ್ಯಾರ. 8]
14. ‘ಧರ್ಮಶಾಸ್ತ್ರಗಳನ್ನು ಜ್ಞಾಪಕಾರ್ಥವಾಗಿ ಕೈಗೆ ಕಟ್ಟಿಕೊಳ್ಳಬೇಕು; ಅವು ಹಣೆಗೆ ಕಟ್ಟಿಕೊಳ್ಳುವ ಜ್ಞಾಪಕದ ಪಟ್ಟಿಯಂತೆ ಇರಬೇಕು’ ಎನ್ನುವ ಧರ್ಮೋಪದೇಶಕಾಂಡ 6:6-9ರಲ್ಲಿ ಕೊಡಲ್ಪಟ್ಟಿರುವ ಆಜ್ಞೆಯನ್ನು ನಾವು ಅಕ್ಷರಾರ್ಥಕವಾಗಿ ತೆಗೆದುಕೊಳ್ಳಬೇಕೋ?
15. “ನಿಮ್ಮ ಮೈಮೇಲಿದ್ದ ಉಡುಪು ಜೀರ್ಣವಾಗಲಿಲ್ಲ” ಎಂಬುದಾಗಿ ಹೇಳುವಾಗ, ಆಗಿಂದಾಗ್ಗೆ ಅವರಿಗೆ ಬೇರೆ ಉಡುಪುಗಳು ನೀಡಲ್ಪಟ್ಟವು ಎಂಬುದನ್ನು ಮಾತ್ರ ಸೂಚಿಸುತ್ತದೊ? (ಧರ್ಮೋ. 8:4)