ಪ್ರಕಟನೆಗಳು
◼ ಸಾಹಿತ್ಯ ನೀಡುವಿಕೆ—ಏಪ್ರಿಲ್ ಮತ್ತು ಮೇ: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಯ ಬಿಡಿ ಪತ್ರಿಕೆಗಳನ್ನು ನೀಡಿರಿ. ನೀವು ಆಸಕ್ತ ವ್ಯಕ್ತಿಗಳಿಗೆ ಪುನರ್ಭೇಟಿ ಮಾಡುವಾಗ—ಇವರಲ್ಲಿ ಜ್ಞಾಪಕಾಚರಣೆಗೆ ಮತ್ತು/ಅಥವಾ ಇತರ ದೇವಪ್ರಭುತ್ವಾತ್ಮಕ ಕಾರ್ಯಕ್ರಮಗಳಿಗೆ ಹಾಜರಾಗುವುದಾದರೂ ಸಂಸ್ಥೆಯೊಂದಿಗೆ ಸಕ್ರಿಯವಾಗಿ ಭಾಗವಹಿಸದಿರುವವರೂ ಒಳಗೂಡಿರಬಹುದು—ದೇವರನ್ನು ಆರಾಧಿಸಿರಿ ಪುಸ್ತಕವನ್ನು ನೀಡುವುದರ ಮೇಲೆ ಗಮನವನ್ನು ಕೇಂದ್ರೀಕರಿಸಿರಿ. ಒಂದು ಮನೆ ಬೈಬಲ್ ಅಧ್ಯಯನವನ್ನು ಆರಂಭಿಸಲು ಸಕಲ ಪ್ರಯತ್ನವನ್ನೂ ಮಾಡತಕ್ಕದ್ದು, ವಿಶೇಷವಾಗಿ ಈಗಾಗಲೇ ಜ್ಞಾನ ಪುಸ್ತಕ ಮತ್ತು ಅಪೇಕ್ಷಿಸು ಬ್ರೋಷರನ್ನು ಅಧ್ಯಯನ ಮಾಡಿರುವವರಿಗೆ. ಜೂನ್: ಮಹಾ ಬೋಧಕನಿಂದ ಕಲಿತುಕೊಳ್ಳಿರಿ.a ವ್ಯಕ್ತಿಗಳು ತಮಗೆ ಮಕ್ಕಳಿಲ್ಲವೆಂದು ಹೇಳುವುದಾದರೆ, ಅವರಿಗೆ ಅಪೇಕ್ಷಿಸು ಬ್ರೋಷರನ್ನು ನೀಡಿರಿ. ಈ ಬ್ರೋಷರನ್ನು ಉಪಯೋಗಿಸುವಾಗ, ಮನೆ ಬೈಬಲ್ ಅಧ್ಯಯನಗಳನ್ನು ಆರಂಭಿಸುವುದರ ಮೇಲೆ ಗಮನವನ್ನು ಕೇಂದ್ರೀಕರಿಸಿ. ಜುಲೈ ಮತ್ತು ಆಗಸ್ಟ್: ನಮ್ಮ ರಾಜ್ಯದ ಸೇವೆಯಲ್ಲಿ ಪಟ್ಟಿಮಾಡಲ್ಪಟ್ಟಿರುವಂತೆ ಲಭ್ಯವಿರುವ ಬ್ರೋಷರ್‌ಗಳು.
◼ ಎಲ್ಲಾ ಅಧ್ಯಕ್ಷ ಮೇಲ್ವಿಚಾರಕರು ಮತ್ತು ಸೆಕ್ರಿಟರಿಗಳ ಸದ್ಯದ ಟೆಲಿಫೋನ್ ನಂಬರುಗಳು ಮತ್ತು ವಿಳಾಸಗಳ ದಾಖಲೆಯನ್ನು ಬ್ರಾಂಚ್ ಆಫೀಸು ಇಟ್ಟುಕೊಳ್ಳುವುದು ಬಹಳ ಅಗತ್ಯವಾಗಿದೆ. ಯಾವುದೇ ಸಮಯದಲ್ಲಿ ಇದರಲ್ಲಿ ಬದಲಾವಣೆಗಳಿರುವುದಾದರೆ, ಸಭೆಯ ಸರ್ವಿಸ್ ಕಮಿಟಿಯು ಅಧ್ಯಕ್ಷ ಮೇಲ್ವಿಚಾರಕ/ಸೆಕ್ರಿಟರಿಯ ವಿಳಾಸದ ಬದಲಾವಣೆ (ಪ್ರಿಸೈಡಿಂಗ್ ಓವರ್‌ಸೀಯರ್/ಸೆಕ್ರಿಟರಿ ಚೇಂಜ್ ಆಫ್ ಆ್ಯಡ್ರೆಸ್) (S-29) ಫಾರ್ಮ್ ಅನ್ನು ಭರ್ತಿಮಾಡಿ, ತಡಮಾಡದೆ ಬ್ರಾಂಚ್ ಆಫೀಸಿಗೆ ಕಳುಹಿಸತಕ್ಕದ್ದು. ಇದರಲ್ಲಿ ಎಸ್‌ಟಿಡಿ ಕೋಡ್‌ಗಳಲ್ಲಾಗುವ ಯಾವುದೇ ಬದಲಾವಣೆಗಳೂ ಒಳಗೂಡುತ್ತದೆ.
◼ ರೆಗ್ಯುಲರ್ ಪಯನೀಯರ್ ಸೇವೆಗಾಗಿರುವ ಅರ್ಜಿ (ಆ್ಯಪ್ಲಿಕೇಷನ್ ಫಾರ್ ರೆಗ್ಯುಲರ್ ಪಯನೀಯರ್ ಸರ್ವಿಸ್) (S-205) ಹಾಗೂ ಆಕ್ಸಿಲಿಯರಿ ಪಯನೀಯರ್ ಸೇವೆಗಾಗಿರುವ ಅರ್ಜಿ (ಆ್ಯಪ್ಲಿಕೇಷನ್ ಫಾರ್ ಆಕ್ಸಿಲಿಯರಿ ಪಯನೀಯರ್ ಸರ್ವಿಸ್) (S-205b) ಎಂಬ ಫಾರ್ಮ್‌ಗಳ ಸಾಕಷ್ಟು ಸರಬರಾಯಿಯನ್ನು ಹೊಂದಿರುವಂತೆ ಸಭೆಯ ಸೆಕ್ರಿಟರಿಗಳು ನೋಡಿಕೊಳ್ಳಬೇಕು. ಸಾಹಿತ್ಯ ವಿನಂತಿ ಫಾರ್ಮ್ (ಲಿಟ್‌ರೇಚರ್ ರಿಕ್ವೆಸ್ಟ್ ಫಾರ್ಮ್)ನಲ್ಲಿ (S-14) ಇವುಗಳಿಗಾಗಿ ಆರ್ಡರ್ ಮಾಡಸಾಧ್ಯವಿದೆ. ಕಡಿಮೆಪಕ್ಷ ಒಂದು ವರ್ಷಕ್ಕೆ ಬೇಕಾಗಿರುವಷ್ಟು ಅರ್ಜಿಗಳನ್ನು ಇಟ್ಟುಕೊಳ್ಳಿರಿ. ಎಲ್ಲಾ ರೆಗ್ಯುಲರ್ ಪಯನೀಯರ್ ಅರ್ಜಿಗಳು, ಅರ್ಜಿದಾರರ ದೀಕ್ಷಾಸ್ನಾನದ ದಿನಾಂಕವನ್ನು ಒಳಗೊಂಡು ಸಂಪೂರ್ಣವಾಗಿ ಭರ್ತಿಮಾಡಲ್ಪಟ್ಟಿವೆಯೋ ಎಂಬುದನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿ ಅವುಗಳನ್ನು ಪರಿಶೀಲಿಸಿರಿ.
◼ ಸಾಹಿತ್ಯ ವಿನಂತಿ ಫಾರ್ಮ್ (ಲಿಟ್ರಚರ್ ರಿಕ್ವೆಸ್ಟ್ ಫಾರ್ಮ್) (S-14)ನಲ್ಲಿ ಪಟ್ಟಿಮಾಡಲ್ಪಟ್ಟಿರುವ ಎಲ್ಲಾ ಫಾರ್ಮ್‌ಗಳ ವಾರ್ಷಿಕ ಸರಬರಾಯಿಗಾಗಿ ನಿಮ್ಮ ವಿನಂತಿಯನ್ನು ದಯವಿಟ್ಟು ಕಳುಹಿಸಿಕೊಡಿ. ಈ ಉದ್ದೇಶಕ್ಕಾಗಿ ದಯವಿಟ್ಟು ಒಂದು ಪ್ರತ್ಯೇಕ ಪತ್ರವನ್ನೋ ‘ಸಾಹಿತ್ಯ ವಿನಂತಿ ಫಾರ್ಮ್’ ಅನ್ನೋ ಕಳುಹಿಸಬೇಡಿ; ಬದಲಿಗೆ, ಏಪ್ರಿಲ್ ತಿಂಗಳಿಗಾಗಿರುವ ನಿಮ್ಮ ಸಾಹಿತ್ಯ ವಿನಂತಿಯೊಂದಿಗೆ ಇದನ್ನು ಸೇರಿಸಿ ಕಳುಹಿಸತಕ್ಕದ್ದು. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ವಾಚ್‌ಟವರ್ ಲಿಟ್ರಚರ್ ರಿಕ್ವೆಸ್ಟ್ ಗೈಡ್, ವಿಭಾಗ 4, ಪುಟ 1ರಲ್ಲಿರುವ “ಯಿಯರ್‌ಲಿ ಕ್ಯಾಲಂಡರ್ ಆಫ್ ಲಿಟ್ರಚರ್ ಐಟಮ್ಸ್” ಅನ್ನು ನೋಡಿರಿ.
◼ ಲಭ್ಯವಿರುವ ಹೊಸ ಪ್ರಕಾಶನಗಳು:
ಯೆಹೋವನಿಗೆ ಸ್ತುತಿಗಳನ್ನು ಹಾಡಿರಿ (ಚಿಕ್ಕ ಗೀತೆಪುಸ್ತಕ) —ತಮಿಳು
ದಾನಿಯೇಲನ ಪ್ರವಾದನೆಗೆ ಗಮನಕೊಡಿರಿ! —ಉರ್ದು
ಯೆಹೋವನ ಸಾಕ್ಷಿಗಳು—ಅವರು ಯಾರು? ಅವರು ಏನನ್ನು ನಂಬುತ್ತಾರೆ? (ಬ್ರೋಷರ್) —ಉರ್ದು
ಕಷ್ಟಾನುಭವವು ಎಂದಾದರೂ ಕೊನೆಗೊಳ್ಳುವುದೊ? (ಟ್ರ್ಯಾಕ್ಟ್ ನಂ. 75) —ಅಸ್ಸಾಮಿ, ಕನ್ನಡ, ತಮಿಳು, ತೆಲುಗು, ಮರಾಠಿ, ಮಲೆಯಾಳಂ, ಮೀಸೊ, ಮತ್ತು ಹಿಂದಿ
◼ ಪುನಃ ಲಭ್ಯವಿರುವ ಪ್ರಕಾಶನಗಳು:
ಶಾಸ್ತ್ರಗಳಿಂದ ತರ್ಕಿಸುವುದು —ತಮಿಳು
[ಪಾದಟಿಪ್ಪಣಿ]
a ಕನ್ನಡದಲ್ಲಿ ಲಭ್ಯವಿಲ್ಲ.