ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರ್ವಿಮರ್ಶೆ
ಇಸವಿ 2004ರ ಏಪ್ರಿಲ್ 26ರಿಂದ ಆರಂಭವಾಗುವ ವಾರದಲ್ಲಿನ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಈ ಪ್ರಶ್ನೆಗಳನ್ನು ಮೌಖಿಕವಾಗಿ ಪರಿಗಣಿಸಲಾಗುವುದು. 2004ರ ಮಾರ್ಚ್ 1ರಿಂದ ಏಪ್ರಿಲ್ 26ರ ತನಕದ ವಾರಗಳಿಗಾಗಿರುವ ನೇಮಕಗಳಲ್ಲಿ ಆವರಿಸಲ್ಪಟ್ಟ ವಿಷಯಭಾಗದ ಮೇಲಾಧಾರಿತವಾದ 30 ನಿಮಿಷಗಳ ಪುನರ್ವಿಮರ್ಶೆಯನ್ನು ಶಾಲಾ ಮೇಲ್ವಿಚಾರಕನು ನಡೆಸುವನು. [ಸೂಚನೆ: ಪ್ರಶ್ನೆಗಳ ಬಳಿಕ ರೆಫರೆನ್ಸ್ಗಳು ಇಲ್ಲದಿರುವಲ್ಲಿ, ಉತ್ತರಗಳನ್ನು ಕಂಡುಕೊಳ್ಳಲಿಕ್ಕಾಗಿ ನೀವು ನಿಮ್ಮ ಸ್ವಂತ ಸಂಶೋಧನೆಯನ್ನು ಮಾಡುವ ಆವಶ್ಯಕತೆಯಿರುವುದು.—ಶೂಶ್ರೂಷಾ ಶಾಲೆ, ಪುಟ 36-7ನ್ನು ನೋಡಿರಿ.]
ಭಾಷಣ ಗುಣಗಳು
1. ನಾವು ಒಂದು ಭಾಷಣವನ್ನು ನೀಡುತ್ತಿರುವಾಗ, ಒಂದು ಹಸ್ತಪ್ರತಿಯಿಂದ ಓದುವ ಬದಲು ಹೊರಮೇರೆಯನ್ನು ಉಪಯೋಗಿಸಿ ಮಾತನಾಡುವುದು ಏಕೆ ಉತ್ತಮವಾಗಿರುವುದು? [be-KA ಪು. 166 ಪ್ಯಾರ. 3]
2. ಕ್ಷೇತ್ರ ಸೇವೆಗಾಗಿ ತಯಾರಿಸುವಾಗ, ನಾವು ನಮ್ಮ ಯೋಚನೆಗಳನ್ನು ಒಂದು ಮಾನಸಿಕ ಹೊರಮೇರೆಯಾಗಿ ಹೇಗೆ ಸಂಘಟಿಸಬಲ್ಲೆವು? [be-KA ಪು. 167 ಪ್ಯಾರ. 3]
3. ಅಪೊಸ್ತಲರ ಕೃತ್ಯಗಳು 13:16-41 ಮತ್ತು ಅಪೊಸ್ತಲರ ಕೃತ್ಯಗಳು 17:2, 3ನ್ನು ಉಪಯೋಗಿಸುತ್ತಾ, ಪೌಲನು ‘ಯೇಸುವೇ ಕ್ರಿಸ್ತನೆಂದು ತರ್ಕಬದ್ಧವಾಗಿ ಸಿದ್ಧಾಂತಪಡಿಸಿದ್ದು’ ಹೇಗೆ ಎಂಬುದನ್ನು ವಿವರಿಸಿರಿ. (ಅ. ಕೃ. 9:22, NW) [be-KA ಪು. 170 ಪ್ಯಾರ. 2]
4. ಆಶುಭಾಷಣ ಮಾಡುವುದರ ಕೆಲವು ಪ್ರಯೋಜನಗಳಾವುವು? [be-KA ಪು. 175 ಪ್ಯಾರ. 2-5]
5. ಆಶುಭಾಷಣ ಮಾಡುವುದರೊಂದಿಗೆ ಯಾವ ಅಪಾಯಗಳು ಉಂಟಾಗುವ ಸಾಧ್ಯತೆಯೂ ಇದೆ, ಮತ್ತು ಅವನ್ನು ತಡೆಗಟ್ಟಲು ನಮಗೆ ಯಾವುದು ಸಹಾಯಮಾಡುವುದು? [be-KA ಪು. 176 ಪ್ಯಾರ. 1-4]
ನೇಮಕ ನಂಬರ್ 1
6. ಆದಿಕಾಂಡ 32:24-32ರಲ್ಲಿರುವ ವೃತ್ತಾಂತಕ್ಕನುಸಾರ, ಯೆಹೋವನ ಆಶೀರ್ವಾದವನ್ನು ಪಡೆದುಕೊಳ್ಳಲಿಕ್ಕಾಗಿ 97 ವರ್ಷ ಪ್ರಾಯದವನಾಗಿದ್ದ ಯಾಕೋಬನು ಏನು ಮಾಡಿದನು, ಮತ್ತು ಇದು ನಮಗೆ ಏನನ್ನು ಕಲಿಸುತ್ತದೆ? [w-KA02 8/1 ಪು. 29-31]
7. “ಆಲೋಚನಾ ಸಾಮರ್ಥ್ಯ” ಎಂದರೇನು, ಮತ್ತು ನಾವು ಸಮತೋಲನ ತಪ್ಪದಂತೆ ಹಾಗೂ ಅತಿಯಾಗಿ ನೊಂದವರಾಗದಂತೆ ಇದು ಹೇಗೆ ತಡೆಗಟ್ಟಬಲ್ಲದು? (ಜ್ಞಾನೋ. 1:4, NW) [w-KA02 8/15 ಪು. 21-2]
8. ಸಾರ್ವಜನಿಕ ಭಾಷಣಕರ್ತರು ಶಾಸ್ತ್ರವಚನಗಳನ್ನು ತಮ್ಮ ಭಾಷಣಗಳ ಆಧಾರವಾಗಿ ಹೇಗೆ ಮಾಡಿಕೊಳ್ಳಬಲ್ಲರು? [be-KA ಪು. 52 ಪ್ಯಾರ. 6-ಪು. 53 ಪ್ಯಾರ. 5]
9. ಒಂದು ಭಾಷಣದ ಹೊರಮೇರೆಯನ್ನು ಶಾಸ್ತ್ರವಚನದ ಸತ್ವ ತುಂಬಿರುವ ವಿವರಣೆಯಾಗಿ ಮಾರ್ಪಡಿಸುವುದರಲ್ಲಿ, ಒಬ್ಬ ಭಾಷಣಕರ್ತನು ಯಾವ ನಿರ್ಣಯಗಳನ್ನು ಮಾಡಬೇಕಾಗಿದೆ? [be-KA ಪು. 54 ಪ್ಯಾರ. 2-4]
10. ಯೆಹೋವನು ಇಸ್ರಾಯೇಲ್ಯರಿಗೆ ಅರಣ್ಯದಲ್ಲಿ ವಾರವಾರವೂ, ಪ್ರತಿ ತಿಂಗಳೂ ಮನ್ನವನ್ನು ಕೊಟ್ಟು ಪೋಷಿಸಿದ್ದೇಕೆ, ಮತ್ತು ಇದರಿಂದ ನಾವೇನನ್ನು ಕಲಿಯಬಲ್ಲೆವು? (ಧರ್ಮೋ. 8:15) [w-KA02 9/1 ಪು. 30 ಪ್ಯಾರ. 3-ಪು. 31 ಪ್ಯಾರ. 1]
ಸಾಪ್ತಾಹಿಕ ಬೈಬಲ್ ವಾಚನ
11. ಆದಿಕಾಂಡ 37:12-17ರಲ್ಲಿ ಪ್ರತಿಬಿಂಬಿಸಲ್ಪಟ್ಟಿರುವಂತೆ, ಯೋಸೇಫನ ಮತ್ತು ಯೇಸುವಿನ ಮಾರ್ಗಕ್ರಮದಲ್ಲಿ ನಾವು ಯಾವ ಸಾದೃಶ್ಯವನ್ನು ಕಂಡುಕೊಳ್ಳುತ್ತೇವೆ? [w-KA88 4/1 ಪು. 23 ಪ್ಯಾರ. 12]
12. ಆದಿಕಾಂಡ 42:25-35ರಲ್ಲಿರುವ ವೃತ್ತಾಂತದಲ್ಲಿ ಕಂಡುಕೊಳ್ಳಲು ಸಾಧ್ಯವಿರುವಂತೆ, ಯೋಸೇಫನು ಯೇಸು ತೋರಿಸುವ ಕನಿಕರಕ್ಕೆ ಹೋಲಿಕೆಯಾದ ಕನಿಕರವನ್ನು ಹೇಗೆ ತೋರಿಸಿದನು? [w-KA88 8/1 ಪು. 8 ಪ್ಯಾರ. 10; ಪುಟ. 10 ಪ್ಯಾರ. 17]
13. ಇಂದು ಆಳು ವರ್ಗದ ಮೂಲಕ ಮಾಡಲ್ಪಡುತ್ತಿರುವ ಒದಗಿಸುವಿಕೆಗಳು ಯೋಸೇಫನ ದಿನದ ಧಾನ್ಯಗಳ ವಿತರಿಸುವಿಕೆಯೊಂದಿಗೆ ಹೇಗೆ ಅನುರೂಪವಾಗಿವೆ? (ಆದಿ. 47:21-25)
14. “ನಾನು ಏನಾಗಿ ಪರಿಣಮಿಸಲು ಬಯಸುವೆನೋ, ಅಂತೆಯೇ ಪರಿಣಮಿಸುವೆನು” ಎಂದು ಹೇಳುವುದರಲ್ಲಿ, ತನ್ನ ನಾಮದ ವಿಷಯದಲ್ಲಿ ಯೆಹೋವನು ಏನನ್ನು ವ್ಯಕ್ತಪಡಿಸುತ್ತಿದ್ದನು? (ವಿಮೋ. 3:14, 15, NW)
15. ವಿಮೋಚನಕಾಂಡ 16:2, 3ರಲ್ಲಿ ಗುಣುಗುಟ್ಟುವ ವಿಷಯದಲ್ಲಿ ಯಾವ ಎರಡು ಸ್ವಾಭಾವಿಕ ಅಪಾಯಗಳನ್ನು ಗಮನಿಸಲಾಗಿದೆ? [w93 3/15 ಪು. 20-1]