ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 4/04 ಪು. 2
  • ಸೇವಾ ಕೂಟದ ಶೆಡ್ಯೂಲ್‌

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೇವಾ ಕೂಟದ ಶೆಡ್ಯೂಲ್‌
  • 2004 ನಮ್ಮ ರಾಜ್ಯದ ಸೇವೆ
  • ಉಪಶೀರ್ಷಿಕೆಗಳು
  • ಏಪ್ರಿಲ್‌ 12ರಿಂದ ಆರಂಭವಾಗುವ ವಾರ
  • ಏಪ್ರಿಲ್‌ 19ರಿಂದ ಆರಂಭವಾಗುವ ವಾರ
  • ಏಪ್ರಿಲ್‌ 26ರಿಂದ ಆರಂಭವಾಗುವ ವಾರ
  • ಮೇ 3ರಿಂದ ಆರಂಭವಾಗುವ ವಾರ
2004 ನಮ್ಮ ರಾಜ್ಯದ ಸೇವೆ
km 4/04 ಪು. 2

ಸೇವಾ ಕೂಟದ ಶೆಡ್ಯೂಲ್‌

ಏಪ್ರಿಲ್‌ 12ರಿಂದ ಆರಂಭವಾಗುವ ವಾರ

ಗೀತೆ 93

10 ನಿ: ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. ಪುಟ 8ರಲ್ಲಿರುವ ಸಲಹೆಗಳನ್ನು ಉಪಯೋಗಿಸುತ್ತಾ, ಏಪ್ರಿಲ್‌-ಜೂನ್‌ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೊದಲನೆಯದ್ದು) ಮತ್ತು ಏಪ್ರಿಲ್‌ 15ರ ಕಾವಲಿನಬುರುಜು ಪತ್ರಿಕೆಗಳನ್ನು ಹೇಗೆ ನೀಡಬಹುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಿರಿ. ಪ್ರತಿಯೊಂದು ಪ್ರತ್ಯಕ್ಷಾಭಿನಯದಲ್ಲೂ, ಒಂದು ಪತ್ರಿಕೆಯ ಕುರಿತು ಮಾತ್ರ ಮಾತಾಡಲ್ಪಡುವುದಾದರೂ, ಜೊತೆಯಾಗಿ ಎರಡೂ ಪತ್ರಿಕೆಗಳನ್ನು ನೀಡಬೇಕು. ಪ್ರತಿಯೊಂದು ಪ್ರತ್ಯಕ್ಷಾಭಿನಯದಲ್ಲೂ, “ನಾನು ಕಾರ್ಯಮಗ್ನನು” ಎಂಬ ಸಂಭಾಷಣಾ ತಡೆಗಟ್ಟನ್ನು ವಿಭಿನ್ನವಾದ ರೀತಿಯಲ್ಲಿ ಹೇಗೆ ನಿರ್ವಹಿಸುವುದು ಎಂಬುದನ್ನು ತೋರಿಸಿರಿ.​—⁠ಬೈಬಲ್‌ ಚರ್ಚೆಗಳನ್ನು ಆರಂಭಿಸುವ ಮತ್ತು ಮುಂದುವರಿಸುವ ವಿಧ, ಪುಟಗಳು 11-12.

15 ನಿ: “ನಮ್ಮಲ್ಲಿರುವ ಅತ್ಯುತ್ತಮವಾದದ್ದನ್ನು ಯೆಹೋವನಿಗೆ ಅರ್ಪಿಸುವುದು.”a ಪ್ಯಾರಗ್ರಾಫ್‌ 4ನ್ನು ಚರ್ಚಿಸುತ್ತಿರುವಾಗ, ನಾವು ನಮ್ಮ ಶುಶ್ರೂಷೆಯಲ್ಲಿ ತೊಡಗಿರುವಾಗ ಜನರಿಗೆ ನಮ್ಮ ಪ್ರೀತಿಯನ್ನು ತೋರಿಸಬಲ್ಲ ನಿರ್ದಿಷ್ಟ ವಿಧಗಳ ಕುರಿತು ಹೇಳಿಕೆ ನೀಡುವಂತೆ ಸಭಿಕರನ್ನು ಆಮಂತ್ರಿಸಿರಿ.

20 ನಿ: “‘ದೇವರೊಂದಿಗೆ ನಡೆಯಿರಿ’​—⁠2004ನೇ ಇಸವಿಯ ಯೆಹೋವನ ಸಾಕ್ಷಿಗಳ ಜಿಲ್ಲಾ ಅಧಿವೇಶನ.” ಸಭಾ ಸೆಕ್ರಿಟರಿಯಿಂದ ನಿರ್ವಹಿಸಲ್ಪಡತಕ್ಕದ್ದು. ಪ್ಯಾರಗ್ರಾಫ್‌ 5ನ್ನು ಚರ್ಚಿಸುತ್ತಿರುವಾಗ, ಪುಟ 4ರ ಚೌಕದಲ್ಲಿರುವ ಎಲ್ಲಾ ಅಂಶಗಳನ್ನು ಸಭಿಕರಲ್ಲಿ ಯಾರು ಓದಲು ಬಯಸುತ್ತಾರೋ ಅವರಿಂದ ಓದಿಸಿರಿ. ಪ್ಯಾರಗ್ರಾಫ್‌ಗಳು 5-8ನ್ನು ಆವರಿಸುವಾಗ, ಸಭೆಗೆ ಅಧಿವೇಶನ ಸಂಯೋಜಕನೋಪಾದಿ ಕಾರ್ಯವೆಸಗುವ ಸೆಕ್ರಿಟರಿಯ ಪಾತ್ರವನ್ನು ಎತ್ತಿತೋರಿಸಿರಿ. ಎಲ್ಲರೂ ತಮ್ಮ ಅಧಿವೇಶನ ಏರ್ಪಾಡುಗಳನ್ನು ಸಾಧ್ಯವಾದಷ್ಟು ಬೇಗನೇ ಮಾಡುವಂತೆ ಪ್ರೋತ್ಸಾಹಿಸಿರಿ.

ಗೀತೆ 91 ಮತ್ತು ಸಮಾಪ್ತಿಯ ಪ್ರಾರ್ಥನೆ.

ಏಪ್ರಿಲ್‌ 19ರಿಂದ ಆರಂಭವಾಗುವ ವಾರ

ಗೀತೆ 55

8 ನಿ: ಸ್ಥಳಿಕ ಪ್ರಕಟನೆಗಳು.

17 ನಿ: “ಯೇಸುವಿನ ಮನೋಭಾವವನ್ನು ಅನುಕರಿಸಿರಿ.”b ಒದಗಿಸಲ್ಪಟ್ಟಿರುವ ಪ್ರಶ್ನೆಗಳನ್ನು ಉಪಯೋಗಿಸಿರಿ. ಪ್ಯಾರಗ್ರಾಫ್‌ 4ನ್ನು ಚರ್ಚಿಸುತ್ತಿರುವಾಗ, ಆಕ್ಸಿಲಿಯರಿ ಪಯನೀಯರ್‌ ಸೇವೆ ಮಾಡುತ್ತಿರುವವರು ಈ ಸೇವೆಯ ಮುಖಾಂತರ ಪಡೆದುಕೊಂಡಿರುವ ಆಶೀರ್ವಾದಗಳ ಕುರಿತು ತಿಳಿಸುವಂತೆ ಆಮಂತ್ರಿಸಿರಿ.

20 ನಿ: “ರಾಜ್ಯ ಸಭಾಗೃಹ ನಿರ್ಮಾಣ ಕಾರ್ಯಕ್ರಮವು ಮುಂದೆ ಸಾಗುತ್ತದೆ.” ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ.

ಗೀತೆ 80 ಮತ್ತು ಸಮಾಪ್ತಿಯ ಪ್ರಾರ್ಥನೆ.

ಏಪ್ರಿಲ್‌ 26ರಿಂದ ಆರಂಭವಾಗುವ ವಾರ

ಗೀತೆ 46

12 ನಿ: ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್‌ ವರದಿ. ಏಪ್ರಿಲ್‌ ತಿಂಗಳಿಗಾಗಿರುವ ಕ್ಷೇತ್ರ ಸೇವಾ ವರದಿಗಳನ್ನು ಹಾಕುವಂತೆ ಪ್ರಚಾರಕರಿಗೆ ಜ್ಞಾಪಕಹುಟ್ಟಿಸಿರಿ. ಮೇ ತಿಂಗಳಿಗಾಗಿರುವ ಸಾಹಿತ್ಯ ನೀಡುವಿಕೆಯ ಕುರಿತು ತಿಳಿಸಿರಿ. ಪುಟ 8ರಲ್ಲಿರುವ ಸಲಹೆಗಳನ್ನು ಉಪಯೋಗಿಸುತ್ತಾ, ಏಪ್ರಿಲ್‌-ಜೂನ್‌ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೂರನೆಯದ್ದು) ಮತ್ತು ಮೇ 1ರ ಕಾವಲಿನಬುರುಜು ಪತ್ರಿಕೆಗಳನ್ನು ಹೇಗೆ ನೀಡಬಹುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಿರಿ. ಪ್ರತಿಯೊಂದು ಪ್ರತ್ಯಕ್ಷಾಭಿನಯದಲ್ಲೂ, ಒಂದು ಪತ್ರಿಕೆಯ ಕುರಿತು ಮಾತ್ರ ಮಾತಾಡಲ್ಪಡುವುದಾದರೂ, ಜೊತೆಯಾಗಿ ಎರಡೂ ಪತ್ರಿಕೆಗಳನ್ನು ನೀಡಬೇಕು. ಒಂದು ಪ್ರಸ್ತುತಪಡಿಸುವಿಕೆಯಲ್ಲಿ, ಒಬ್ಬ ಸಹೋದ್ಯೋಗಿಗೆ ಅಥವಾ ಸಹಪಾಠಿಗೆ ಸಾಕ್ಷಿಕೊಡಲಾಗುತ್ತಿರುವುದನ್ನು ಪ್ರತ್ಯಕ್ಷಾಭಿನಯಿಸಿರಿ.

15 ನಿ: ಸ್ಥಳಿಕ ಅಗತ್ಯಗಳು.

18 ನಿ: “ಸಾಕ್ಷಿಯಾಗಿರದ ಸಂಗಾತಿಗಳಿಗೆ ನಾವು ಹೇಗೆ ಸಹಾಯಮಾಡಬಲ್ಲೆವು?”c ಸತ್ಯವನ್ನು ಸ್ವೀಕರಿಸಿದ್ದ ತಮ್ಮ ಸಂಗಾತಿಗಳ ಉತ್ತಮ ಮಾದರಿಯಿಂದಾಗಿ ಯೆಹೋವನ ಸೇವಕರಾಗಿರುವ ಒಬ್ಬರು ಅಥವಾ ಇಬ್ಬರು ವ್ಯಕ್ತಿಗಳನ್ನು ಇಂಟರ್‌ವ್ಯೂ ಮಾಡಿರಿ.

ಗೀತೆ 38 ಮತ್ತು ಸಮಾಪ್ತಿಯ ಪ್ರಾರ್ಥನೆ.

ಮೇ 3ರಿಂದ ಆರಂಭವಾಗುವ ವಾರ

ಗೀತೆ 48

10 ನಿ: ಸ್ಥಳಿಕ ಪ್ರಕಟನೆಗಳು. ಸಾಮಾನ್ಯವಾಗಿ ಬೇಸಗೆ ಕಾಲಕ್ಕಾಗಿ ಯೋಜಿಸಲ್ಪಡುವ ಚಟುವಟಿಕೆಗಳ ಕುರಿತು ಚುಟುಕಾಗಿ ಹೇಳಿಕೆ ನೀಡಿರಿ: ಆಕ್ಸಿಲಿಯರಿ ಪಯನೀಯರ್‌ ಸೇವೆ, ಮನೆಯನ್ನು ದುರಸ್ತುಗೊಳಿಸುವ ಕೆಲಸ, ಮತ್ತು ಪ್ರಾಯಶಃ ಸ್ವಲ್ಪ ಮನೋರಂಜನೆಯಲ್ಲಿ ಆನಂದಿಸುವುದು. ಸಭೆಯ ಟೆರಿಟೊರಿಯಲ್ಲಿ ವಿರಳವಾಗಿ ಆವರಿಸಲ್ಪಡುವ ಟೆರಿಟೊರಿಯು ಇರುವುದಾದರೆ, ಅವನ್ನು ಕೂಲಂಕಷವಾಗಿ ಆವರಿಸಲಿಕ್ಕಾಗಿ ಯಾವ ಏರ್ಪಾಡುಗಳು ಮಾಡಲ್ಪಟ್ಟಿವೆ ಎಂಬುದನ್ನು ಪ್ರಕಟಿಸಿರಿ. ಒಂದುವೇಳೆ ಪ್ರಯಾಣವೋ ಅಥವಾ ಇತರ ಬೇಸಗೆಯ ಚಟುವಟಿಕೆಗಳೋ ನಮ್ಮ ನಿಯತಕ್ರಮದ ಕಾರ್ಯಕಲಾಪಗಳನ್ನು ಬಾಧಿಸುವಂತಿದ್ದರೆ, ಅವು ನಮ್ಮ ಕುಟುಂಬ ಅಧ್ಯಯನ, ಸಭಾ ಕೂಟಗಳು, ಮತ್ತು ಕ್ಷೇತ್ರ ಸೇವೆಯನ್ನು ನಿರ್ಲಕ್ಷಿಸುವಂತೆ ಮಾಡುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿ ಶ್ರದ್ಧಾತ್ಮಕ ಯೋಜನೆಯು ಅಗತ್ಯವಾಗಿರುವುದು. (ಜ್ಞಾನೋ. 21:​5, NW) ಮನೆಯಲ್ಲಿರಲಿ ಅಥವಾ ಬೇರೆಲ್ಲಿಯೇ ಹೋಗಿರಲಿ, ತಮ್ಮ ಕ್ಷೇತ್ರ ಸೇವಾ ವರದಿಗಳನ್ನು ಹಾಕುವಂತೆ ಎಲ್ಲರಿಗೂ ಜ್ಞಾಪಕಹುಟ್ಟಿಸಿರಿ.

20 ನಿ: “ಯುವಜನರೇ​—⁠ದೇವರ ವಾಕ್ಯವನ್ನು ಓದಿರಿ!”d ಒಬ್ಬರು ಅಥವಾ ಇಬ್ಬರು ಯುವಜನರು ತಮ್ಮ ಬೈಬಲ್‌ ವಾಚನ ಕಾರ್ಯಕ್ರಮದ ಕುರಿತು ಮತ್ತು ಅದರಿಂದ ಹೇಗೆ ಪ್ರಯೋಜನ ಪಡೆಯುತ್ತಿದ್ದಾರೆ ಎಂಬುದರ ಕುರಿತು ಹೇಳಿಕೆ ನೀಡುವಂತೆ ಮುಂಚಿತವಾಗಿಯೇ ಏರ್ಪಡಿಸಿರಿ. ಇಡೀ ಬೈಬಲನ್ನು ಓದುವ ಗುರಿ ಇಡುವಂತೆ ಯುವಜನರನ್ನು ಪ್ರೋತ್ಸಾಹಿಸಿರಿ. ಶುಶ್ರೂಷಾ ಶಾಲೆ ಪುಸ್ತಕದ ಪುಟ 10, ಪ್ಯಾರಗ್ರಾಫ್‌ 4ರ ಕುರಿತ ಹೇಳಿಕೆಗಳನ್ನು ಸೇರಿಸಿಕೊಳ್ಳಿ.

15 ನಿ: ಸ್ಥಳಿಕ ಅನುಭವಗಳು. ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳುಗಳಲ್ಲಿ ಸ್ವಲ್ಪ ವಿಶೇಷ ಪ್ರಯತ್ನವನ್ನು ಮಾಡಿದ್ದರಿಂದ ಈ ಕೆಳಗಿನ ವಿಷಯಗಳಲ್ಲಿ ಸಿಕ್ಕಿದ ಕೆಲವು ಪ್ರೋತ್ಸಾಹದಾಯಕ ಅನುಭವಗಳ ಕುರಿತು ತಿಳಿಸುವಂತೆ ಸಭಿಕರನ್ನು ಆಮಂತ್ರಿಸಿರಿ: (1) ಜ್ಞಾಪಕಾಚರಣೆಗೆ ಹಾಜರಾಗುವಂತೆ ಒಬ್ಬ ಆಸಕ್ತ ವ್ಯಕ್ತಿಗೆ ಸಹಾಯಮಾಡಿದ್ದು, (2) ಆಕ್ಸಿಲಿಯರಿ ಪಯನೀಯರರಾಗಿ ಸೇವೆ ಸಲ್ಲಿಸಿದ್ದು, (3) ಒಬ್ಬ ಅಕ್ರಿಯ ವ್ಯಕ್ತಿ ಸಭೆಯೊಂದಿಗೆ ತನ್ನ ಚಟುವಟಿಕೆಯನ್ನು ಪುನರಾರಂಭಿಸುವಂತೆ ಪ್ರೋತ್ಸಾಹಿಸಿದ್ದು, (4) ಒಬ್ಬ ಹೊಸ ವ್ಯಕ್ತಿಯು ಸಾರುವ ಕೆಲಸದಲ್ಲಿ ಪಾಲ್ಗೊಳ್ಳಲು ಆರಂಭಿಸುವಂತೆ ಸಹಾಯಮಾಡಿದ್ದು, (5) ಜ್ಞಾಪಕಾಚರಣೆಗೆ ಹಾಜರಿದ್ದವರ ಆಸಕ್ತಿಯನ್ನು ಬೆಳೆಸಿದ್ದು, ಅಥವಾ (6) ಬೇಸಗೆ ಕಾಲದಲ್ಲಿ ಈ ವರೆಗೆ ಇತರ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗಿದ್ದು. ಇಲ್ಲಿ ತಿಳಿಸಲ್ಪಟ್ಟಿರುವ ವಿಷಯಗಳ ಕುರಿತು ಹೇಳಿಕೆ ನೀಡುವಂತೆ ಮುಂಚಿತವಾಗಿ ಏರ್ಪಾಡು ಮಾಡಿರಿ. ಪ್ರಶಂಸೆಯ ಮಾತುಗಳನ್ನಾಡಿರಿ, ಮತ್ತು ಭವಿಷ್ಯದಲ್ಲಿಯೂ ಈ ಪ್ರಯತ್ನಗಳನ್ನು ಎಡೆಬಿಡದೆ ಮಾಡುವಂತೆ ಎಲ್ಲರನ್ನೂ ಹುರಿದುಂಬಿಸಿರಿ.

ಗೀತೆ 164 ಮತ್ತು ಸಮಾಪ್ತಿಯ ಪ್ರಾರ್ಥನೆ.

[ಪಾದಟಿಪ್ಪಣಿಗಳು]

a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

c ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

d ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ