ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 3/04 ಪು. 2
  • ಸೇವಾ ಕೂಟದ ಶೆಡ್ಯೂಲ್‌

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೇವಾ ಕೂಟದ ಶೆಡ್ಯೂಲ್‌
  • 2004 ನಮ್ಮ ರಾಜ್ಯದ ಸೇವೆ
  • ಉಪಶೀರ್ಷಿಕೆಗಳು
  • ಮಾರ್ಚ್‌ 8ರಿಂದ ಆರಂಭವಾಗುವ ವಾರ
  • ಮಾರ್ಚ್‌ 15ರಿಂದ ಆರಂಭವಾಗುವ ವಾರ
  • ಮಾರ್ಚ್‌ 22ರಿಂದ ಆರಂಭವಾಗುವ ವಾರ
  • ಮಾರ್ಚ್‌ 29ರಿಂದ ಆರಂಭವಾಗುವ ವಾರ
  • ಏಪ್ರಿಲ್‌ 5ರಿಂದ ಆರಂಭವಾಗುವ ವಾರ
2004 ನಮ್ಮ ರಾಜ್ಯದ ಸೇವೆ
km 3/04 ಪು. 2

ಸೇವಾ ಕೂಟದ ಶೆಡ್ಯೂಲ್‌

ಮಾರ್ಚ್‌ 8ರಿಂದ ಆರಂಭವಾಗುವ ವಾರ

ಗೀತೆ 37

10 ನಿ: ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. ಮುಂದಿನ ವಾರದ ಸೇವಾ ಕೂಟಕ್ಕಾಗಿ ‘ಒಳ್ಳೆಯ ದೇಶವನ್ನು ನೋಡಿ’ ಹೊಸ ಬ್ರೋಷರನ್ನು ತರುವಂತೆ ಎಲ್ಲರಿಗೂ ಜ್ಞಾಪಿಸಿರಿ. ಪುಟ 4ರಲ್ಲಿರುವ ಸಲಹೆಗಳನ್ನು ಉಪಯೋಗಿಸುತ್ತಾ, ಜನವರಿ-ಮಾರ್ಚ್‌ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೊದಲನೆಯದ್ದು) ಮತ್ತು ಮಾರ್ಚ್‌ 15ರ ಕಾವಲಿನಬುರುಜು ಪತ್ರಿಕೆಗಳನ್ನು ಹೇಗೆ ನೀಡಬಹುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಿರಿ.

15 ನಿ: ಸಂಭಾಷಣೆಗಳನ್ನು ಪ್ರಾರಂಭಿಸಲಿಕ್ಕಾಗಿ ಟ್ರ್ಯಾಕ್ಟ್‌ಗಳನ್ನು ಉಪಯೋಗಿಸುವುದು. ಸಭಿಕರೊಂದಿಗಿನ ಚರ್ಚೆ. ಒಂದು ಸಾಕ್ಷಿಯನ್ನು ನೀಡುವುದರಲ್ಲಿ ಅತಿ ಕಷ್ಟಕರವಾದ ಭಾಗವು ಸಂಭಾಷಣೆಯನ್ನು ಪ್ರಾರಂಭಿಸುವುದೇ ಆಗಿದೆ. ಮನೆಯಿಂದ ಮನೆಯ ಸಾಕ್ಷಿಕಾರ್ಯದಲ್ಲಿ, ವ್ಯಾಪಾರ ಕ್ಷೇತ್ರದಲ್ಲಿ, ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಈ ಅಡಚಣೆಯನ್ನು ಪಾರಾಗಲಿಕ್ಕಾಗಿ ಟ್ರ್ಯಾಕ್ಟ್‌ಗಳನ್ನು ಉಪಯೋಗಿಸಬಹುದು. ಸ್ಥಳಿಕ ಟೆರಿಟೊರಿಯಲ್ಲಿ ಜನರ ಮನಸ್ಸನ್ನು ಸೆಳೆಯಬಲ್ಲ ಎರಡು ಅಥವಾ ಮೂರು ಟ್ರ್ಯಾಕ್ಟ್‌ಗಳನ್ನು ಸಂಕ್ಷಿಪ್ತವಾಗಿ ಪರಿಶೀಲಿಸಿರಿ. ಈ ಟ್ರ್ಯಾಕ್ಟ್‌ಗಳನ್ನು ನೀಡುವಾಗ ಯಾವ ಪೀಠಿಕಾ ಹೇಳಿಕೆಗಳನ್ನು ಉಪಯೋಗಿಸಬಹುದು? ಚಿತ್ರಗಳನ್ನು ಹೇಗೆ ಸದುಪಯೋಗಿಸಬಹುದು? ಯಾವ ಪ್ರಶ್ನೆಗಳನ್ನು ಜಾಣ್ಮೆಯಿಂದ ಉಪಯೋಗಿಸಬಹುದು? ಮನೆಯವನು ಆಸಕ್ತಿಯನ್ನು ತೋರಿಸುವುದಾದರೆ, ಪ್ರತಿಯೊಂದು ಟ್ರ್ಯಾಕ್ಟ್‌ನಿಂದಲೂ ಪರಿಶೀಲಿಸಬಹುದಾದ ಒಂದು ಪ್ಯಾರಗ್ರಾಫನ್ನು ಎತ್ತಿತೋರಿಸಿರಿ. ಒಂದು ಟ್ರ್ಯಾಕ್ಟನ್ನು ಉಪಯೋಗಿಸುತ್ತಾ ಹೇಗೆ ಒಂದು ಸಂಭಾಷಣೆಯನ್ನು ಪ್ರಾರಂಭಿಸಬಹುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಿರಿ. ಪ್ರಚಾರಕನು ಟ್ರ್ಯಾಕ್ಟ್‌ನಿಂದ ಒಂದು ಪ್ಯಾರಗ್ರಾಫನ್ನು ಸಂಕ್ಷಿಪ್ತವಾಗಿ ಪರಿಶೀಲಿಸುವಂತೆ ಮತ್ತು ಜ್ಞಾನ ಪುಸ್ತಕವನ್ನು ನೀಡುವುದರ ಮೂಲಕ ಕೊನೆಗೊಳಿಸುವಂತೆ ಮಾಡಿ.

20 ನಿ: “ಭಕ್ತರೇ, ನೀವೆಲ್ಲರೂ ಯೆಹೋವನನ್ನು ಪ್ರೀತಿಸಿರಿ.”a ಪ್ಯಾರಗ್ರಾಫ್‌ 3ನ್ನು ಚರ್ಚಿಸುವಾಗ, ಸಭಿಕರು ಜನರನ್ನು ಜ್ಞಾಪಕಾಚರಣೆಗೆ ಹೇಗೆ ಆಮಂತ್ರಿಸಿದ್ದಾರೆ ಎಂಬುದರ ಕುರಿತು ಹೇಳಿಕೆ ನೀಡುವಂತೆ ಕೇಳಿಕೊಳ್ಳಿ.

ಗೀತೆ 131 ಮತ್ತು ಸಮಾಪ್ತಿಯ ಪ್ರಾರ್ಥನೆ.

ಮಾರ್ಚ್‌ 15ರಿಂದ ಆರಂಭವಾಗುವ ವಾರ

ಗೀತೆ 121

10 ನಿ: ಸ್ಥಳಿಕ ಪ್ರಕಟನೆಗಳು. “ಜ್ಞಾಪಕಾಚರಣೆಯ ಮರುಜ್ಞಾಪನಗಳು” ಭಾಗದಿಂದ ಮುಖ್ಯ ಅಂಶಗಳನ್ನು ಪುನರ್ವಿಮರ್ಶಿಸಿರಿ. ಜ್ಞಾಪಕಾಚರಣೆಯ ವಾರದ ಕಾವಲಿನಬುರುಜು ಅಧ್ಯಯನವು ಯಾವಾಗ ನಡೆಸಲ್ಪಡುವುದು ಎಂಬುದನ್ನು ತಿಳಿಸಿರಿ.

15 ನಿ: ಜ್ಞಾಪಕಾಚರಣೆಯ ಸಮಯಾವಧಿಯ ವಿಶೇಷ ಚಟುವಟಿಕೆಯ ಸದ್ಯೋಚಿತ ಏರ್ಪಾಡುಗಳು. ಸೇವಾ ಮೇಲ್ವಿಚಾರಕನಿಂದ ನಿರ್ವಹಿಸಲ್ಪಡಬೇಕಾದ ಸಭಿಕರೊಂದಿಗಿನ ಚರ್ಚೆ. ಮಾಡಲ್ಪಟ್ಟಿರುವ ವಿಶೇಷ ಏರ್ಪಾಡುಗಳ ಕುರಿತು ತಿಳಿಸಿರಿ. ಪ್ರೋತ್ಸಾಹನೀಯವಾದ ಕೆಲವು ಅನುಭವಗಳನ್ನು ತಿಳಿಸಿರಿ. ಸಾಧ್ಯವಿರುವವರು ಏಪ್ರಿಲ್‌ ಮತ್ತು ಮೇ ತಿಂಗಳುಗಳಲ್ಲಿ ಆಕ್ಸಿಲಿಯರಿ ಪಯನೀಯರರಾಗಿ ಸೇವೆ ಮಾಡುವಂತೆ ಉತ್ತೇಜಿಸಿರಿ. ಫೆಬ್ರವರಿ ತಿಂಗಳಿನ ನಮ್ಮ ರಾಜ್ಯದ ಸೇವೆಯ ಪುರವಣಿಯಿಂದ ಕೆಲವು ಅಂಶಗಳನ್ನು ಸಂಕ್ಷಿಪ್ತವಾಗಿ ಪುನರ್ವಿಮರ್ಶಿಸಿರಿ.

20 ನಿ: ‘ಒಳ್ಳೆಯ ದೇಶವನ್ನು ನೋಡಿ’ ಬ್ರೋಷರಿನಿಂದ ಪ್ರಯೋಜನ ಪಡೆಯಿರಿ. ಈ ಹೊಸ ಬ್ರೋಷರು ದೇವರ ವಾಕ್ಯದ ನಮ್ಮ ಓದುವಿಕೆ ಮತ್ತು ಅಧ್ಯಯನವನ್ನು ಹೆಚ್ಚು ಅರ್ಥಗರ್ಭಿತವಾಗಿ ಮಾಡಬಲ್ಲದು. ಇದರ ಒಂದು ಕೀಲಿ ಕೈ ಅದರ ವಿಷಯಸೂಚಿಯನ್ನು ಉಪಯೋಗಿಸುವುದಾಗಿದೆ. ಯೆಹೋವನು ಬೊಚ್ರದಿಂದ ಬರುತ್ತಿರುವುದಾಗಿ ವರ್ಣಿಸುವ ಯೆಶಾಯ 63:1ನ್ನು ಓದಿ. “ಒಳ್ಳೆಯ ದೇಶ” ವಿಷಯಸೂಚಿಯಲ್ಲಿ ಬೊಚ್ರ ಎಂಬ ಹೆಸರನ್ನು ಕಂಡುಹಿಡಿಯುವಂತೆ ಎಲ್ಲರನ್ನೂ ಪ್ರೋತ್ಸಾಹಿಸಿರಿ. ಪುಟ 34ರಲ್ಲಿರುವ ಚೌಕವನ್ನು ಉಪಯೋಗಿಸುತ್ತಾ, “ಬೊಚ್ರ 11 G11” ಏನನ್ನು ಅರ್ಥೈಸುತ್ತದೆ ಎಂಬುದನ್ನು ವಿವರಿಸಿ, ಮತ್ತು ಸೂಚಿತ ಭೂಪಟದಲ್ಲಿ ಬೊಚ್ರ ಹಾಗೂ ಎದೋಮ್‌ ಅನ್ನು ಕಂಡುಹಿಡಿಯಿರಿ. ವಿಷಯಸೂಚಿಯನ್ನು ಉಪಯೋಗಿಸುತ್ತಾ, ಯೆರೂಸಲೇಮಿನಿಂದ ಸುಖರಿಗೆ ಯೇಸು ಮಾಡಿದ ಪ್ರಯಾಣಮಾರ್ಗವನ್ನು ಕಂಡುಹಿಡಿಯಿರಿ. (ಯೋಹಾ. 4:2-5) ಬೇತ್ಸಥಾ ಕೊಳವನ್ನು ಕಂಡುಹಿಡಿಯಲಿಕ್ಕಾಗಿ ಇದೇ ಸೂತ್ರವನ್ನು ಉಪಯೋಗಿಸಿರಿ. (ಯೋಹಾ. 5:1-3) ಇದರೊಂದಿಗೆ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಗಾಗಿರುವ ವಾರದ ಬೈಬಲ್‌ ವಾಚನದಿಂದ ಒಂದು ಅಥವಾ ಎರಡು ಉದಾಹರಣೆಗಳನ್ನು ಆರಿಸಿಕೊಳ್ಳಿ. ಆ ಸ್ಥಳಗಳನ್ನು ಬ್ರೋಷರಿನಲ್ಲಿ ಎಲ್ಲಿ ಕಂಡುಕೊಳ್ಳಬಹುದು ಮತ್ತು ಭೂಪಟಗಳನ್ನು ನೋಡುವ ಮೂಲಕ ನಾವು ಹೇಗೆ ಪ್ರಯೋಜನ ಹೊಂದುತ್ತೇವೆ ಎಂಬುದರ ಕುರಿತು ಹೇಳಿಕೆ ನೀಡುವಂತೆ ಸಭಿಕರನ್ನು ಆಮಂತ್ರಿಸಿರಿ. ಬ್ರೋಷರಿನಲ್ಲಿರುವ ಕೆಲವು ಭೂಪಟಗಳನ್ನು, ಅವು ಆವರಿಸುವ ಸಮಯಾವಧಿಯನ್ನು ಗಮನಿಸುತ್ತಾ ಸಂಕ್ಷಿಪ್ತವಾಗಿ ಎತ್ತಿತೋರಿಸಿರಿ. 18-19ನೇ ಪುಟಗಳಲ್ಲಿರುವ ಭೂಪಟವು ಅತಿ ಹೆಚ್ಚಿನ ಬೈಬಲ್‌ ನಿವೇಶನಗಳನ್ನು ಪ್ರಸ್ತುತಪಡಿಸುತ್ತದೆ. ‘ಒಳ್ಳೆಯ ದೇಶವನ್ನು ನೋಡಿ’ ಬ್ರೋಷರನ್ನು ಉತ್ತಮ ಉಪಯೋಗಕ್ಕೆ ಹಾಕುವಂತೆ ಎಲ್ಲರನ್ನೂ ಪ್ರೋತ್ಸಾಹಿಸಿರಿ.

ಗೀತೆ 63 ಮತ್ತು ಸಮಾಪ್ತಿಯ ಪ್ರಾರ್ಥನೆ.

ಮಾರ್ಚ್‌ 22ರಿಂದ ಆರಂಭವಾಗುವ ವಾರ

ಗೀತೆ 191

10 ನಿ: ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್‌ ವರದಿ. ಪ್ರತಿನಿತ್ಯ ಶಾಸ್ತ್ರಗಳನ್ನು ಪರೀಕ್ಷಿಸುವುದು​—⁠2004 ಮತ್ತು 2004 ಕ್ಯಾಲಂಡರ್‌ನಲ್ಲಿ ಸೂಚಿಸಲ್ಪಟ್ಟಿರುವ ಹಾಗೆ, ಮಾರ್ಚ್‌ 30-ಏಪ್ರಿಲ್‌ 4ರ ಅವಧಿಗಾಗಿ ಶೆಡ್ಯೂಲ್‌ ಮಾಡಲ್ಪಟ್ಟಿರುವ ಜ್ಞಾಪಕದ ಬೈಬಲ್‌ ವಾಚನವನ್ನು ಮಾಡುವಂತೆ ಎಲ್ಲರಿಗೂ ಮರುಜ್ಞಾಪಿಸಿರಿ.

15 ನಿ: “ದೈವಿಕ ವಿವೇಕದ ಉತ್ಕೃಷ್ಟ ಮೌಲ್ಯ.”b ಸಮಯವು ಅನುಮತಿಸಿದಂತೆ, ಉದ್ಧೃತ ಶಾಸ್ತ್ರವಚನಗಳ ಮೇಲೆ ಹೇಳಿಕೆ ನೀಡುವಂತೆ ಸಭಿಕರನ್ನು ಕೇಳಿಕೊಳ್ಳಿ.

20 ನಿ: “ನಿಮ್ಮನ್ನು ಒಳಗೊಂಡಿರುವ ಕುದುರೇ ದಂಡಿನ ಆಕ್ರಮಣ.”c ಸಮಯವು ಅನುಮತಿಸಿದಂತೆ ಉದ್ಧೃತ ಶಾಸ್ತ್ರವಚನಗಳನ್ನು ಓದಿರಿ ಮತ್ತು ಚರ್ಚಿಸಿರಿ.

ಗೀತೆ 181 ಮತ್ತು ಸಮಾಪ್ತಿಯ ಪ್ರಾರ್ಥನೆ.

ಮಾರ್ಚ್‌ 29ರಿಂದ ಆರಂಭವಾಗುವ ವಾರ

ಗೀತೆ 129

10 ನಿ: ಸ್ಥಳಿಕ ಪ್ರಕಟನೆಗಳು. ಮಾರ್ಚ್‌ ತಿಂಗಳಿನ ಕ್ಷೇತ್ರ ಸೇವಾ ವರದಿಗಳನ್ನು ಹಾಕುವಂತೆ ಪ್ರಚಾರಕರಿಗೆ ಜ್ಞಾಪಕಹುಟ್ಟಿಸಿರಿ. ಏಪ್ರಿಲ್‌ ತಿಂಗಳಿಗಾಗಿರುವ ಸಾಹಿತ್ಯ ನೀಡುವಿಕೆಯ ಕುರಿತು ತಿಳಿಸಿರಿ. ಪುಟ 4ರಲ್ಲಿರುವ ಸಲಹೆಗಳನ್ನು ಉಪಯೋಗಿಸುತ್ತಾ, ಜನವರಿ-ಮಾರ್ಚ್‌ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೂರನೆಯದ್ದು) ಮತ್ತು ಏಪ್ರಿಲ್‌ 1ರ ಕಾವಲಿನಬುರುಜು ಪತ್ರಿಕೆಗಳನ್ನು ಹೇಗೆ ನೀಡಬಹುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಿರಿ.

15 ನಿ: ಇಸವಿ 2004 ವರ್ಷಪುಸ್ತಕವನ್ನು ಸದುಪಯೋಗಿಸಿರಿ. ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ. “ಆಡಳಿತ ಮಂಡಲಿಯಿಂದ ಒಂದು ಪತ್ರ,” ಲೋಕವ್ಯಾಪಕ ವರದಿಯಿಂದ ಎದ್ದುಕಾಣುವ ಅಂಕಿಅಂಶಗಳು, ಮತ್ತು ಕೆಲವು ನಂಬಿಕೆವರ್ಧಕ ಅನುಭವಗಳ ಮುಖ್ಯಾಂಶಗಳನ್ನು ತಿಳಿಸಿರಿ. ವರ್ಷವಿಡೀ ಪುಸ್ತಕವನ್ನು ಸಂಪೂರ್ಣವಾಗಿ ಓದಿ ಮುಗಿಸುವಂತೆ ಎಲ್ಲರನ್ನೂ ಪ್ರೋತ್ಸಾಹಿಸಿರಿ.

20 ನಿ: ಸತ್ಯವು ಕುಟುಂಬಗಳನ್ನು ಐಕ್ಯಗೊಳಿಸುತ್ತದೆ. ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ. ಕುಟುಂಬದ ಸದಸ್ಯರಿಂದ ಬರುವ ವಿರೋಧದ ಕಾರಣ ಆಸಕ್ತ ವ್ಯಕ್ತಿಗಳು ಕೆಲವೊಮ್ಮೆ ಯೆಹೋವನನ್ನು ಸೇವಿಸುವುದರಿಂದ ಹಿಮ್ಮೆಟ್ಟುತ್ತಾರೆ. ಈ ಮುಂದಿನ ಕೆಲವು ಅನುಭವಗಳನ್ನು ತಿಳಿಸುವಂತೆ ಏರ್ಪಡಿಸಿರಿ: ಜನವರಿ 1, 2002, ಕಾವಲಿನಬುರುಜು, ಪುಟಗಳು 14-15; ಡಿಸೆಂಬರ್‌ 1, 2000, ಕಾವಲಿನಬುರುಜು, ಪುಟ 8; ಸೆಪ್ಟೆಂಬರ್‌ 1, 1999, ಕಾವಲಿನಬುರುಜು, ಪುಟ 32; ಜನವರಿ 1, 1999, ಕಾವಲಿನಬುರುಜು, ಪುಟ 4; ಮತ್ತು ಮಾರ್ಚ್‌ 8, 1998, ಎಚ್ಚರ!, ಪುಟ 31. ಮನೆವಾರ್ತೆಯ ಕೇವಲ ಒಬ್ಬ ಸದಸ್ಯನು/ಳು ಬೈಬಲ್‌ ಮೂಲತತ್ತ್ವಗಳನ್ನು ಅನ್ವಯಿಸುವಾಗಲೂ ಕುಟುಂಬ ಜೀವನವು ಅನೇಕವೇಳೆ ಉತ್ತಮಗೊಳ್ಳುತ್ತದೆ ಎಂಬುದನ್ನು ಎತ್ತಿತೋರಿಸಿ.

ಗೀತೆ 130 ಮತ್ತು ಸಮಾಪ್ತಿಯ ಪ್ರಾರ್ಥನೆ.

ಏಪ್ರಿಲ್‌ 5ರಿಂದ ಆರಂಭವಾಗುವ ವಾರ

ಗೀತೆ 126

10 ನಿ: ಸ್ಥಳಿಕ ಪ್ರಕಟನೆಗಳು.

20 ನಿ: ಶಾರೀರಿಕ ಶುದ್ಧತೆ ನಮ್ಮನ್ನು ಅರ್ಹರಾಗಿಸುತ್ತದೆ. ಜೂನ್‌ 1, 2002ರ ಕಾವಲಿನಬುರುಜುವಿನ ಪುಟಗಳು 19-21ರ ಮೇಲಾಧಾರಿತವಾದ ಭಾಷಣ. ಅಪೇಕ್ಷಿಸು ಬ್ರೋಷರಿನ ಪಾಠ 9ರ 5ನೆಯ ಪ್ಯಾರಗ್ರಾಫನ್ನು ಉಪಯೋಗಿಸುತ್ತಾ ಬೈಬಲ್‌ ವಿದ್ಯಾರ್ಥಿಯೊಬ್ಬನು ತನ್ನ ಮನೆ ಮತ್ತು ಅಂಗಳವನ್ನು ಶುದ್ಧವಾಗಿಟ್ಟುಕೊಳ್ಳುವುದರ ಪ್ರಮುಖತೆಯನ್ನು ಮನಗಾಣುವಂತೆ ಅವನಿಗೆ ಜಾಣ್ಮೆಯಿಂದ ಹೇಗೆ ಸಹಾಯಮಾಡಬಹುದು ಎಂಬುದನ್ನು ಒಬ್ಬ ಹಿರಿಯನು ಒಬ್ಬ ಪಯನೀಯರನಿಗೆ ತೋರಿಸುತ್ತಿರುವ ಪ್ರತ್ಯಕ್ಷಾಭಿನಯವನ್ನು ಸೇರಿಸಿಕೊಳ್ಳಿ.

15 ನಿ: ಜ್ಞಾಪಕಾಚರಣೆ ಮತ್ತು ಮಾರ್ಚ್‌ ತಿಂಗಳಿನಲ್ಲಿ ಹೆಚ್ಚಿನ ಸೇವಾ ಚಟುವಟಿಕೆಯಿಂದಾಗಿ ಆನಂದಿಸಿದ ಅನುಭವಗಳನ್ನು ತಿಳಿಸಿರಿ.

ಗೀತೆ 25 ಮತ್ತು ಸಮಾಪ್ತಿಯ ಪ್ರಾರ್ಥನೆ.

[ಪಾದಟಿಪ್ಪಣಿಗಳು]

a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

c ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ