ಸೇವಾ ಕೂಟದ ಶೆಡ್ಯೂಲ್
ಆಗಸ್ಟ್ 11ರಿಂದ ಆರಂಭವಾಗುವ ವಾರ
ಗೀತೆ 28 (224)
10 ನಿ: ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. 8ನೇ ಪುಟದಲ್ಲಿರುವ ಸಲಹೆಗಳನ್ನು ಉಪಯೋಗಿಸುತ್ತಾ, ಜುಲೈ-ಸೆಪ್ಟೆಂಬರ್ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೊದಲನೆಯದ್ದು) ಮತ್ತು ಆಗಸ್ಟ್ 15ರ ಕಾವಲಿನಬುರುಜು ಪತ್ರಿಕೆಗಳನ್ನು ಹೇಗೆ ನೀಡುವುದು ಎಂಬುದರ ಕುರಿತಾದ ಎರಡು ಪ್ರತ್ಯೇಕವಾದ ಪ್ರತ್ಯಕ್ಷಾಭಿನಯಗಳಿರಲಿ. ಪ್ರತಿಯೊಂದು ಪ್ರತ್ಯಕ್ಷಾಭಿನಯದಲ್ಲಿಯೂ ಒಂದೇ ಪತ್ರಿಕೆಯ ಕುರಿತು ಮಾತಾಡಲ್ಪಡುತ್ತದಾದರೂ ಜೋಡಿಯಾಗಿ ಎರಡು ಪತ್ರಿಕೆಗಳು ನೀಡಲ್ಪಡಬೇಕು. ಒಂದು ನಿರೂಪಣೆಯಲ್ಲಿ, “ನಾನು ಕಾರ್ಯಮಗ್ನನು” ಎಂಬ ಸಂಭವನೀಯ ಸಂಭಾಷಣಾ ತಡೆಗಟ್ಟನ್ನು ಹೇಗೆ ನಿಭಾಯಿಸುವುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಿರಿ.—ಬೈಬಲ್ ಚರ್ಚೆಗಳನ್ನು ಆರಂಭಿಸುವ ಮತ್ತು ಮುಂದುವರಿಸುವ ವಿಧ ಪುಸ್ತಿಕೆಯ ಪುಟ 11-12ನ್ನು ನೋಡಿರಿ.
15 ನಿ: “ಯೆಹೋವನ ಒಳ್ಳೇತನವನ್ನು ಅನುಕರಿಸಿರಿ.”a ದಯಾಪರ ಕೃತ್ಯಗಳು ಯಾವ ರೀತಿಯಲ್ಲಿ ಸಾಕ್ಷಿನೀಡಲು ಮಾರ್ಗವನ್ನು ತೆರೆದವು ಎಂಬುದನ್ನು ತೋರಿಸುವ ಸಂಕ್ಷಿಪ್ತ ಅನುಭವಗಳನ್ನು ತಿಳಿಸುವಂತೆ ಸಭಿಕರನ್ನು ಆಮಂತ್ರಿಸಿರಿ. ಜೊತೆ ವಿಶ್ವಾಸಿಗಳಿಗೆ ನೆರವು ನೀಡಲು ಮಾಡಲ್ಪಟ್ಟಿರುವ ಪ್ರಯತ್ನಗಳಿಗಾಗಿ ಸಭೆಯನ್ನು ಶ್ಲಾಘಿಸಿರಿ.
20 ನಿ: “ಪಯನೀಯರ್ ಶುಶ್ರೂಷೆಯ ಆಶೀರ್ವಾದಗಳು.”b ಒದಗಿಸಲ್ಪಟ್ಟಿರುವ ಪ್ರಶ್ನೆಗಳನ್ನು ಉಪಯೋಗಿಸಿರಿ. ಪಯನೀಯರ್ ಸೇವೆಯಿಂದ ಸಿಕ್ಕಿರುವ ಆಶೀರ್ವಾದಗಳನ್ನು ತಿಳಿಸುವಂತೆ ಒಬ್ಬರು ಅಥವಾ ಇಬ್ಬರು ಪಯನೀಯರರನ್ನು ಆಮಂತ್ರಿಸಿರಿ. ಪಯನೀಯರ್ ಸೇವೆಯನ್ನು ಮಾಡಲು ಆಸಕ್ತರಾಗಿರುವವರು ಸಭೆಯ ಸೆಕ್ರಿಟರಿಯಿಂದ ಅರ್ಜಿಯನ್ನು ಪಡೆದುಕೊಳ್ಳಸಾಧ್ಯವಿದೆ ಎಂಬುದನ್ನು ತಿಳಿಸಿರಿ.
ಗೀತೆ 22 (130) ಮತ್ತು ಸಮಾಪ್ತಿಯ ಪ್ರಾರ್ಥನೆ.
ಆಗಸ್ಟ್ 18ರಿಂದ ಆರಂಭವಾಗುವ ವಾರ
ಗೀತೆ 10 (82)
10 ನಿ: ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್ ವರದಿ. “ಸಂತೃಪ್ತಿಕರವಾದ ಜೀವನ—ಲಭ್ಯವಾಗುವ ವಿಧ ಎಂಬ ಬ್ರೋಷರ್‌ಗಾಗಿ ಸೂಚಿತ ನಿರೂಪಣೆಗಳು” ಎಂಬ ಚೌಕವನ್ನು ಚರ್ಚಿಸಿರಿ, ಮತ್ತು ನೀಡಲ್ಪಟ್ಟ ನಿರೂಪಣೆಗಳಲ್ಲಿ ಒಂದನ್ನು ಒಬ್ಬ ಸಮರ್ಥ ಪ್ರಚಾರಕನು ಪ್ರತ್ಯಕ್ಷಾಭಿನಯಿಸುವಂತೆ ಏರ್ಪಡಿಸಿರಿ.
17 ನಿ: “ಚೈತನ್ಯದಾಯಕವಾದ ಕೆಲಸ.”c ಕ್ರೈಸ್ತ ಶುಶ್ರೂಷೆಯು ತಮಗೆ ಹೇಗೆ ಚೈತನ್ಯದಾಯಕವಾಗಿದೆ ಎಂಬುದನ್ನು ತಿಳಿಸುವಂತೆ ಇಬ್ಬರು ಅಥವಾ ಮೂವರನ್ನು ಮುಂಚಿತವಾಗಿಯೇ ಏರ್ಪಡಿಸಿರಿ.
18 ನಿ: “ನಾವು ನಮ್ಮ ಆರಾಧನಾ ಸ್ಥಳವನ್ನು ಸುಸ್ಥಿತಿಯಲ್ಲಿಡೋಣ.”d (ಪ್ಯಾರಗ್ರಾಫ್ 1-5) ಒದಗಿಸಲ್ಪಟ್ಟಿರುವ ಪ್ರಶ್ನೆಗಳನ್ನು ಉಪಯೋಗಿಸಿರಿ. ಪ್ಯಾರಗ್ರಾಫ್ 3 ಮತ್ತು 4ನ್ನು ಚರ್ಚಿಸುವಾಗ, ರಾಜ್ಯ ಸಭಾಗೃಹವನ್ನು ಶುಚಿಮಾಡಲು ಸ್ಥಳಿಕವಾಗಿ ಯಾವ ಏರ್ಪಾಡುಗಳನ್ನು ಮಾಡಲಾಗಿದೆ ಎಂಬುದನ್ನು ಪುನರ್ವಿಮರ್ಶಿಸಿರಿ. ಗಮನದ ಅಗತ್ಯವಿರುವ ಯಾವುದೇ ವಿಷಯಗಳ ಕಡೆಗೆ ಸಭಿಕರ ಗಮನವನ್ನು ಸೆಳೆಯಿರಿ. ಸತ್ಯ ಆರಾಧನೆಗಾಗಿ ಸೂಕ್ತವಾದ ಸ್ಥಳವನ್ನು ಸುಸ್ಥಿಯಲ್ಲಿಡಲು ಮಾಡಿದ ಪ್ರಯತ್ನಗಳಿಗಾಗಿ ಸಭೆಯನ್ನು ಶ್ಲಾಘಿಸಿರಿ.
ಗೀತೆ 23 (200) ಮತ್ತು ಸಮಾಪ್ತಿಯ ಪ್ರಾರ್ಥನೆ.
ಆಗಸ್ಟ್ 25ರಿಂದ ಆರಂಭವಾಗುವ ವಾರ
ಗೀತೆ 5 (46)
10 ನಿ: ಸ್ಥಳಿಕ ಪ್ರಕಟನೆಗಳು. 8ನೇ ಪುಟದಲ್ಲಿರುವ ಸಲಹೆಗಳನ್ನು ಉಪಯೋಗಿಸುತ್ತಾ, ಜುಲೈ-ಸೆಪ್ಟೆಂಬರ್ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೂರನೆಯದ್ದು) ಮತ್ತು ಸೆಪ್ಟೆಂಬರ್ 1ರ ಕಾವಲಿನಬುರುಜು ಪತ್ರಿಕೆಯನ್ನು ಹೇಗೆ ನೀಡುವುದು ಎಂಬುದರ ಕುರಿತಾದ ಎರಡು ಪ್ರತ್ಯೇಕವಾದ ಪ್ರತ್ಯಕ್ಷಾಭಿನಯಗಳಿರಲಿ. ಪ್ರತಿಯೊಂದು ಪ್ರತ್ಯಕ್ಷಾಭಿನಯದಲ್ಲಿಯೂ ಒಂದೇ ಪತ್ರಿಕೆಯ ಕುರಿತು ಮಾತಾಡಲ್ಪಡುವುದಾದರೂ ಜೋಡಿಯಾಗಿ ಎರಡು ಪತ್ರಿಕೆಗಳು ನೀಡಲ್ಪಡಬೇಕು. ಪ್ರತಿಯೊಂದು ಪ್ರತ್ಯಕ್ಷಾಭಿನಯದಲ್ಲಿ, ಒಬ್ಬ ಹೆತ್ತವರು ಮತ್ತು ಹದಿವಯಸ್ಕ ಮಗ ಅಥವಾ ಮಗಳು, ಪತ್ರಿಕಾ ಸೇವೆಗಾಗಿ ಒಂದು ಪ್ರ್ಯಾಕ್ಟಿಸ್ ಸೆಶನ್ ಅನ್ನು ಮಾಡುವುದನ್ನು ತೋರಿಸಿರಿ. ನೀಡಲ್ಪಟ್ಟಿರುವ ಪ್ರತಿಯೊಂದು ನಿರೂಪಣೆಯನ್ನು ಅವರು ಮೊದಲು ಸಂಕ್ಷಿಪ್ತವಾಗಿ ಪುನರ್ವಿಮರ್ಶಿಸಿ, ನಂತರ ಅದನ್ನು ಪ್ರತ್ಯಕ್ಷಾಭಿನಯಿಸುತ್ತಾರೆ.
15 ನಿ: ಮಕ್ಕಳು ಯೆಹೋವನನ್ನು ಸ್ತುತಿಸುತ್ತಾರೆ! ಭಾಷಣ ಮತ್ತು ಸಭಿಕರೊಂದಿಗೆ ಚರ್ಚೆ ಹಾಗೂ ಇಂಟರ್‌ವ್ಯೂಗಳು. ಮಕ್ಕಳು ಕೂಟಗಳಲ್ಲಿ ಉತ್ತಮವಾಗಿ ತಯಾರಿಸಿದ ಉತ್ತರಗಳನ್ನು ನೀಡುವಾಗ, ಅದನ್ನು ಕೇಳಿಸಿಕೊಳ್ಳಲು ನಾವು ಆನಂದಿಸುತ್ತೇವೆ. ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿನ ಅವರ ಶ್ರದ್ಧೆ ಮತ್ತು ಪ್ರಗತಿಯು ಸಂತೋಷವನ್ನು ಉಂಟುಮಾಡುತ್ತದೆ. ಶುಶ್ರೂಷೆಯಲ್ಲಿ ಉತ್ತಮ ಸಾಕ್ಷಿಯನ್ನು ನೀಡುವಾಗ ಅವರು ತಮ್ಮ ನಿಜವಾದ ನಂಬಿಕೆಯನ್ನು ವ್ಯಕ್ತಪಡಿಸುತ್ತಾರೆ. ಅವರ ದೈವಿಕ ನಡತೆಯು ಯೆಹೋವನಿಗೆ ಗೌರವವನ್ನು ತರುತ್ತದೆ. (yb88 ಪು. 53-4) ಅವರ ಆತ್ಮಿಕ ಪ್ರಗತಿಯು, ಮುಂದೆ ಅವರು ಪಡೆಯಬಹುದಾದ ಸುಯೋಗಗಳಿಗೆ ಒಂದು ಬುನಾದಿಯಾಗಿದೆ. ಸಭೆಯ ಚಟುವಟಿಕೆಗಳಲ್ಲಿ ಕ್ರಮವಾಗಿ ಭಾಗವಹಿಸುವುದರಿಂದ ಆನಂದವನ್ನು ಪಡೆಯುತ್ತಿರುವ ಇಬ್ಬರು ಅಥವಾ ಮೂವರು ಕ್ರೈಸ್ತ ಯುವ ವ್ಯಕ್ತಿಗಳನ್ನು ಇಂಟರ್‌ವ್ಯೂ ಮಾಡಿರಿ. ಯೆಹೋವನನ್ನು ಸ್ತುತಿಸುವುದರಲ್ಲಿ ಸಭೆಯಲ್ಲಿರುವ ಮಕ್ಕಳು ಮಾಡುವ ಉತ್ತಮ ಪ್ರಯತ್ನಕ್ಕಾಗಿ ಅವರನ್ನು ಯಥಾರ್ಥವಾಗಿ ಶ್ಲಾಘಿಸಿರಿ.
20 ನಿ: ಸಾರಲಿಕ್ಕಾಗಿ ಧೈರ್ಯವನ್ನು ತೆಗೆದುಕೊಳ್ಳಿರಿ. (1 ಥೆಸ. 2:2) ಭಾಷಣ ಮತ್ತು ಸಭಿಕರೊಂದಿಗೆ ಚರ್ಚೆ. ರಾಜ್ಯ ಸಂದೇಶದೊಂದಿಗೆ ಇತರರನ್ನು ಸಂಪರ್ಕಿಸಲು ಏಕೆ ಅನೇಕರು ಭಯಪಡುತ್ತಾರೆಂಬುದನ್ನು ವಿವರಿಸಿರಿ. ಅನೇಕ ವರುಷಗಳಿಂದ ಕ್ರಿಯಾಶೀಲರಾಗಿರುವವರ ವಿಷಯದಲ್ಲಿಯೂ ಇದು ಸತ್ಯವಾಗಿದೆ. 1999, ಡಿಸೆಂಬರ್ 1ರ ಕಾವಲಿನಬುರುಜುವಿನ ಪುಟ 25; 1999, ಡಿಸೆಂಬರ್ 15ರ ಕಾವಲಿನಬುರುಜುವಿನ ಪುಟ 25; ಮತ್ತು 1996, ಏಪ್ರಿಲ್ 1ರ ಕಾವಲಿನಬುರುಜುವಿನ ಪುಟ 31ರಲ್ಲಿ ಕಂಡುಬರುವ ಕೆಲವು ಅನುಭವಗಳನ್ನು ತಿಳಿಸಿರಿ. ಭಯವನ್ನು ಉಂಟುಮಾಡಿದಂಥ ಸಂದರ್ಭಗಳಲ್ಲಿಯೂ ಸುವಾರ್ತೆಯನ್ನು ಹಂಚಿಕೊಳ್ಳುವಂತೆ ಧೈರ್ಯವನ್ನು ತಂದುಕೊಳ್ಳಲು ಅವರಿಗೆ ಯಾವುದು ಸಾಧ್ಯವನ್ನಾಗಿ ಮಾಡಿತು ಎಂಬುದರ ಬಗ್ಗೆ ತಿಳಿಸುವಂತೆ ಸಭಿಕರನ್ನು ಆಮಂತ್ರಿಸಿರಿ. 1999, ಡಿಸೆಂಬರ್ 15ರ ಕಾವಲಿನಬುರುಜುವಿನ ಪುಟ 23-4ರ ಆಧಾರದ ಮೇಲೆ, ಯೆಹೋವನಿಂದ ಬಲವನ್ನು ಪಡೆದುಕೊಳ್ಳುವಂತೆ ಉತ್ತೇಜಿಸುತ್ತಾ ಸಮಾಪ್ತಿಗೊಳಿಸಿರಿ.
ಗೀತೆ 9 (37) ಮತ್ತು ಸಮಾಪ್ತಿಯ ಪ್ರಾರ್ಥನೆ.
ಸೆಪ್ಟೆಂಬರ್ 1ರಿಂದ ಆರಂಭವಾಗುವ ವಾರ
ಗೀತೆ 6 (45)
10 ನಿ: ಸ್ಥಳಿಕ ಪ್ರಕಟನೆಗಳು. ಆಗಸ್ಟ್ ತಿಂಗಳ ಸೇವಾ ವರದಿಗಳನ್ನು ಹಾಕುವಂತೆ ಸಭಿಕರಿಗೆ ಜ್ಞಾಪಕ ಹುಟ್ಟಿಸಿರಿ. ಸೆಪ್ಟೆಂಬರ್ ತಿಂಗಳಿಗಾಗಿರುವ ಸಾಹಿತ್ಯ ನೀಡುವಿಕೆಯನ್ನು ತಿಳಿಸಿರಿ. ಬೇಸಿಗೆ ಕಾಲದಲ್ಲಿ ಸಮ್ಮೇಳನಕ್ಕಾಗಿ ಪ್ರಯಾಣಿಸುವಾಗ, ರಜೆಯಲ್ಲಿ ಅಥವಾ ಇತರ ಯಾವುದೇ ಸಂದರ್ಭಗಳಿಗಾಗಿ ಪ್ರಯಾಣಿಸುವಾಗ ಅನೌಪಚಾರಿಕ ಸಾಕ್ಷಿಯನ್ನು ನೀಡುವ ಮೂಲಕ ಸಿಕ್ಕಿದ ಪ್ರೋತ್ಸಾಹದಾಯಕ ಅನುಭವಗಳನ್ನು ತಿಳಿಸುವಂತೆ ಒಬ್ಬರನ್ನು ಅಥವಾ ಇಬ್ಬರನ್ನು ಮುಂಚಿತವಾಗಿಯೇ ಏರ್ಪಡಿಸಿರಿ.
15 ನಿ: ನೀವು ಹಿಂದಿರುಗಿ ಬರುವಿರೆಂದು ಮಾತುಕೊಟ್ಟ ಮೇಲೆ ಅದನ್ನು ಪಾಲಿಸುತ್ತೀರೋ? 1999, ಸೆಪ್ಟೆಂಬರ್ 15ರ ಕಾವಲಿನಬುರುಜುವಿನ 10-11ನೆಯ ಪುಟಗಳಲ್ಲಿರುವ “ನಾವು ಕೊಟ್ಟ ಮಾತುಗಳನ್ನು ಪಾಲಿಸುವ ಇತರ ವಿಧಗಳು” ಎಂಬ ಉಪಶೀರ್ಷಿಕೆಯ ಕೆಳಗೆ ಅಡಕವಾಗಿರುವ ವಿಷಯಗಳ ಮೇಲೆ ಆಧರಿತವಾದ ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ. ಆಸಕ್ತಿಯನ್ನು ತೋರಿಸುವಂಥ ಜನರನ್ನು ನಾವು ನಮ್ಮ ಶುಶ್ರೂಷೆಯಲ್ಲಿ ಕಂಡುಕೊಂಡಾಗ, ಸಾಮಾನ್ಯವಾಗಿ ಇನ್ನೊಂದು ದಿನ ಚರ್ಚೆಯನ್ನು ಮುಂದುವರಿಸುವ ಏರ್ಪಾಡನ್ನು ನಾವು ಮಾಡುತ್ತೇವೆ. ಆದರೆ, ಮಾತುಕೊಟ್ಟಂತೆ ನಂಬಿಗಸ್ತರಾಗಿ ಹಿಂದಿರುಗುತ್ತೇವೋ? ನಾವು ಕೊಟ್ಟ ಮಾತನ್ನು ಪಾಲಿಸುವಂತೆ ನಮ್ಮನ್ನು ಪ್ರಚೋದಿಸಬೇಕಾದ ಬೈಬಲ್ ಮೂಲತತ್ತ್ವಗಳನ್ನು ಪುನರ್ವಿಮರ್ಶಿಸಿರಿ. ತಪ್ಪದೆ ಹಿಂದಿರುಗಿದ್ದರ ಪರಿಣಾಮವಾಗಿ ಸಿಕ್ಕಿರುವ ಆಶೀರ್ವಾದವನ್ನು ತೋರಿಸುವ ಅನುಭವಗಳನ್ನು ತಿಳಿಸುವಂತೆ ಸಭಿಕರನ್ನು ಆಮಂತ್ರಿಸಿರಿ.
20 ನಿ: “ನಾವು ನಮ್ಮ ಆರಾಧನಾ ಸ್ಥಳವನ್ನು ಸುಸ್ಥಿತಿಯಲ್ಲಿಡೋಣ.”e (ಪ್ಯಾರಗ್ರಾಫ್ 6-11) ಕೊಡಲ್ಪಟ್ಟಿರುವ ಪ್ರಶ್ನೆಗಳನ್ನು ಉಪಯೋಗಿಸಿರಿ. ಪುಟ 5ರಲ್ಲಿರುವ ಚೌಕವನ್ನು ಎತ್ತಿತೋರಿಸುತ್ತಾ, ರಾಜ್ಯ ಸಭಾಗೃಹವನ್ನು ಸುಸ್ಥಿತಿಯಲ್ಲಿಡುವುದರ ಪ್ರಾಮುಖ್ಯತೆಯನ್ನು ಒತ್ತಿಹೇಳಿರಿ. ನಿಮ್ಮ ರಾಜ್ಯ ಸಭಾಗೃಹದ ಸ್ಥಿತಿಯ ಕುರಿತು ಸಂಕ್ಷಿಪ್ತ ವರದಿಯನ್ನು ಸೇರಿಸಿ, ಯಾವುದೇ ದುರಸ್ತಿ ಅಥವಾ ಸುಧಾರಣಾ ಯೋಜನೆಗಳು ಇರುವುದಾದರೆ ತಿಳಿಸಿರಿ.
ಗೀತೆ 20 (93) ಮತ್ತು ಸಮಾಪ್ತಿಯ ಪ್ರಾರ್ಥನೆ.
[ಅಧ್ಯಯನ ಪ್ರಶ್ನೆಗಳು]
a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
c ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
d ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
e ಕನ್ನಡದಲ್ಲಿ ಲಭ್ಯವಿಲ್ಲ.