ಪ್ರಕಟನೆಗಳು
◼ ಸಾಹಿತ್ಯ ನೀಡುವಿಕೆ ಮಾರ್ಚ್: ಜ್ಞಾನ ಪುಸ್ತಕವನ್ನು ನೀಡಿರಿ, ಮತ್ತು ಮನೆ ಬೈಬಲ್ ಅಧ್ಯಯನಗಳನ್ನು ಆರಂಭಿಸಲಿಕ್ಕಾಗಿ ವಿಶೇಷ ಪ್ರಯತ್ನವನ್ನು ಮಾಡಿರಿ. ಏಪ್ರಿಲ್: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಪ್ರತ್ಯೇಕ ಪ್ರತಿಗಳನ್ನು ನೀಡಿರಿ. ತಾವು ಬಯಸುವುದಾದರೆ ಲೋಕವ್ಯಾಪಕ ಕೆಲಸಕ್ಕಾಗಿ ಕಾಣಿಕೆಗಳನ್ನು ನೀಡಬಹುದು ಎಂದು ಪ್ರಚಾರಕರು ಮನೆಯವರಿಗೆ ಸೂಚಿಸಬೇಕು. ಆಸಕ್ತ ಜನರನ್ನು ಪುನಃ ಭೇಟಿಮಾಡುವಾಗ ಒಬ್ಬನೇ ಸತ್ಯ ದೇವರನ್ನು ಆರಾಧಿಸಿರಿa ಎಂಬ ಪುಸ್ತಕವನ್ನು ನೀಡುವುದರ ಮೇಲೆ ಗಮನವನ್ನು ಕೇಂದ್ರೀಕರಿಸಿರಿ. ವಿಶೇಷವಾಗಿ ಕೆಲವು ವ್ಯಕ್ತಿಗಳೊಂದಿಗೆ ಈಗಾಗಲೇ ಜ್ಞಾನ ಪುಸ್ತಕ ಮತ್ತು ಅಪೇಕ್ಷಿಸು ಬ್ರೋಷರಿನ ಅಧ್ಯಯನ ಮಾಡಿರುವಲ್ಲಿ, ಒಂದು ಬೈಬಲ್ ಅಧ್ಯಯನವನ್ನು ಆರಂಭಿಸಲಿಕ್ಕಾಗಿ ಪ್ರತಿಯೊಂದು ಪ್ರಯತ್ನವನ್ನೂ ಮಾಡತಕ್ಕದ್ದು. ಮೇ: ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ. ಒಂದು ಬದಲಿ ನೀಡುವಿಕೆಯೋಪಾದಿ ನೀವು ಬೈಬಲ್ ಕಥೆಗಳ ನನ್ನ ಪುಸ್ತಕ, ಬೈಬಲು ದೇವರ ವಾಕ್ಯವೋ ಅಥವಾ ಮಾನವನದ್ದೋ?b ಯುವ ಜನರ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು, ಅಥವಾ ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕಗಳನ್ನು ಉಪಯೋಗಿಸಬಹುದು. ಈ ಬದಲಿ ನೀಡುವಿಕೆಗಳಲ್ಲಿ ಯಾವುದರ ಸರಬರಾಯಿಯೂ ನಿಮ್ಮ ಸಭೆಯಲ್ಲಿ ಇಲ್ಲದಿರುವಲ್ಲಿ, ನೀವು ಉಪಯೋಗಿಸಸಾಧ್ಯವಿರುವ ಹೆಚ್ಚಿನ ಸರಬರಾಯಿ ಸಮೀಪದಲ್ಲಿರುವ ಯಾವುದೇ ಸಭೆಗಳಲ್ಲಿ ಇವೆಯೋ ಎಂಬುದನ್ನು ದಯವಿಟ್ಟು ವಿಚಾರಿಸಿರಿ. ಜೂನ್: ಜ್ಞಾನ ಪುಸ್ತಕ ಅಥವಾ ಅಪೇಕ್ಷಿಸು ಬ್ರೋಷರನ್ನು ನೀಡಿರಿ. ಮನೆಯವರ ಬಳಿ ಈಗಾಗಲೇ ಈ ಪ್ರಕಾಶನಗಳು ಇರುವುದಾದರೆ, ಸಭೆಯ ಸ್ಟಾಕ್‌ನಲ್ಲಿರುವ ಬೇರೆ ಒಂದು ಸೂಕ್ತ ಬ್ರೋಷರನ್ನು ಉಪಯೋಗಿಸಿರಿ.
◼ ಏಪ್ರಿಲ್‌ನಲ್ಲಿ ಆಕ್ಸಿಲಿಯರಿ ಪಯನೀಯರರೋಪಾದಿ ಸೇವೆ ಸಲ್ಲಿಸಲು ಬಯಸುವ ಪ್ರಚಾರಕರು ಈಗಲೇ ತಮ್ಮ ಯೋಜನೆಗಳನ್ನು ಮಾಡಿ, ತಮ್ಮ ಅರ್ಜಿಯನ್ನು ಬೇಗನೆ ಕೊಡಬೇಕು. ಇದು ಹಿರಿಯರಿಗೆ ಅಗತ್ಯವಿರುವ ಕ್ಷೇತ್ರ ಸೇವಾ ಏರ್ಪಾಡುಗಳನ್ನು ಮಾಡಲು ಮತ್ತು ಸಾಕಷ್ಟು ಪತ್ರಿಕೆಗಳು ಹಾಗೂ ಇತರ ಸಾಹಿತ್ಯವು ಲಭ್ಯವಿರುವಂತೆ ನೋಡಿಕೊಳ್ಳಲು ಸಹಾಯಮಾಡುವುದು. ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಲು ಸಮ್ಮತಿಪಡೆದಿರುವವರೆಲ್ಲರ ಹೆಸರುಗಳು ಪ್ರತಿ ತಿಂಗಳು ಸಭೆಗೆ ಪ್ರಕಟಿಸಲ್ಪಡಬೇಕು.
◼ ಸಾಹಿತ್ಯಕ್ಕಾಗಿರುವ ಪ್ರಚಾರಕರ ವೈಯಕ್ತಿಕ ವಿನಂತಿಗಳನ್ನು ಬ್ರಾಂಚ್ ಆಫೀಸು ಸ್ವೀಕರಿಸುವುದಿಲ್ಲ. ಸಾಹಿತ್ಯಕ್ಕಾಗಿ ಸಭೆಯ ಮಾಸಿಕ ವಿನಂತಿಯನ್ನು ಸೊಸೈಟಿಗೆ ಕಳುಹಿಸುವ ಮುಂಚೆ, ಪ್ರತಿ ತಿಂಗಳು ಒಂದು ಪ್ರಕಟನೆಯನ್ನು ಮಾಡುವಂತೆ ಅಧ್ಯಕ್ಷ ಮೇಲ್ವಿಚಾರಕನು ಏರ್ಪಡಿಸಬೇಕು. ಇದು, ವೈಯಕ್ತಿಕ ಸಾಹಿತ್ಯ ಐಟಮ್‌ಗಳನ್ನು ಪಡೆದುಕೊಳ್ಳಲು ಆಸಕ್ತರಿರುವವರೆಲ್ಲರೂ ಸಾಹಿತ್ಯವನ್ನು ನಿರ್ವಹಿಸುವ ಸಹೋದರನಿಗೆ ತಿಳಿಸುವಂತೆ ಸಾಧ್ಯಮಾಡುತ್ತದೆ. ಯಾವ ಪ್ರಕಾಶನಗಳು ವಿಶೇಷ ವಿನಂತಿಯ ಐಟಮ್‌ಗಳಾಗಿವೆ ಎಂಬುದನ್ನು ದಯವಿಟ್ಟು ಮನಸ್ಸಿನಲ್ಲಿಡಿರಿ.
◼ ಲಭ್ಯವಿರುವ ಹೊಸ ಪ್ರಕಾಶನಗಳು:
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ —ಇಂಗ್ಲಿಷ್, ಕನ್ನಡ, ತಮಿಳು, ತೆಲುಗು, ಮಲೆಯಾಳಂ, ಹಿಂದಿ
ಬೈಬಲ್ ಚರ್ಚೆಗಳನ್ನು ಆರಂಭಿಸುವ ಮತ್ತು ಮುಂದುವರಿಸುವ ವಿಧ —ಅಸ್ಸಾಮಿಸ್
[ಅಧ್ಯಯನ ಪ್ರಶ್ನೆಗಳು]
a ಕನ್ನಡದಲ್ಲಿ ಲಭ್ಯವಿಲ್ಲ.
b ಕನ್ನಡದಲ್ಲಿ ಲಭ್ಯವಿಲ್ಲ.