ಬೈಬಲ್ ಅಧ್ಯಯನಗಳನ್ನು ನಡೆಸಲು ದೇವರನ್ನು ಆರಾಧಿಸಿರಿ ಪುಸ್ತಕವನ್ನು ಉಪಯೋಗಿಸಿರಿ
ಹೊಸಬರು ಸತ್ಯದಲ್ಲಿ ಪ್ರಗತಿಯನ್ನು ಮಾಡಲು ಮತ್ತು ಯೆಹೋವನಿಗಾಗಿ ಹಾಗೂ ಆತನ ಸಂಸ್ಥೆಗಾಗಿರುವ ಅವರ ಗಣ್ಯತೆಯನ್ನು ಗಾಢಗೊಳಿಸಲು ಸಹಾಯಮಾಡಲಿಕ್ಕಾಗಿ ಒಬ್ಬನೇ ಸತ್ಯ ದೇವರನ್ನು ಆರಾಧಿಸಿರಿa ಎಂಬ ಪುಸ್ತಕವು ವಿನ್ಯಾಸಿಸಲ್ಪಟ್ಟಿದೆ. ಇದನ್ನು ಬೈಬಲ್ ವಿದ್ಯಾರ್ಥಿಗಳೊಂದಿಗೆ ಎರಡನೆಯ ಅಧ್ಯಯನ ಪುಸ್ತಕವಾಗಿ ಉಪಯೋಗಿಸಬಹುದು. 2000ದ ಜೂನ್ ತಿಂಗಳ ನಮ್ಮ ರಾಜ್ಯದ ಸೇವೆಯು ಪುಟ 4ರಲ್ಲಿ ವಿವರಿಸಿದ್ದು: “ಒಬ್ಬ ವ್ಯಕ್ತಿಯು ನಿಧಾನವಾಗಿ ಪ್ರಗತಿಯನ್ನು ಮಾಡುತ್ತಿದ್ದಾನೆ ಮತ್ತು ತಾನು ಕಲಿಯುತ್ತಿರುವ ವಿಷಯದ ಬಗ್ಗೆ ಗಣ್ಯತೆಯನ್ನು ಬೆಳೆಸಿಕೊಳ್ಳುತ್ತಿದ್ದಾನೆ ಎಂಬುದು ನಿಮಗೆ ಸ್ಪಷ್ಟವಾಗಿ ಕಂಡುಬರುತ್ತದೆ ಎಂದಿಟ್ಟುಕೊಳ್ಳಿ. ಆಗ ನೀವು ಅಪೇಕ್ಷಿಸು ಬ್ರೋಷರ್ ಮತ್ತು ಜ್ಞಾನ ಪುಸ್ತಕವನ್ನು ಅಭ್ಯಾಸಿಸಿದ ಬಳಿಕ ಇನ್ನೊಂದು ಪುಸ್ತಕವನ್ನು ಉಪಯೋಗಿಸಿ ಅಭ್ಯಾಸವನ್ನು ಮುಂದುವರಿಸಿರಿ. . . . ಆದರೆ ಇದಕ್ಕೆ ಮೊದಲು ಅಪೇಕ್ಷಿಸು ಬ್ರೋಷರನ್ನು ಮತ್ತು ಜ್ಞಾನ ಪುಸ್ತಕವನ್ನು ಅಭ್ಯಾಸಿಸಬೇಕು. ಈಗ ನೀವು ಬೈಬಲ್ ವಿದ್ಯಾರ್ಥಿಯೊಂದಿಗೆ ಎರಡನೆಯ ಪುಸ್ತಕವನ್ನು ಅಭ್ಯಾಸಿಸುತ್ತಿದ್ದೀರಿ ಎಂದಿಟ್ಟುಕೊಳ್ಳಿ. ಈ ಮಧ್ಯೆ ಎರಡನೆಯ ಪುಸ್ತಕವನ್ನು ಪೂರ್ಣಗೊಳಿಸುವ ಮುಂಚೆಯೇ ಆ ವ್ಯಕ್ತಿಯು ದೀಕ್ಷಾಸ್ನಾನ ಪಡೆದುಕೊಂಡರೂ, ಆಗಲೂ ಬೈಬಲ್ ಅಭ್ಯಾಸ, ಪುನರ್ಭೇಟಿಗಳು, ಮತ್ತು ಅಭ್ಯಾಸವನ್ನು ಮುಂದುವರಿಸಲಿಕ್ಕಾಗಿ ವ್ಯಯಿಸಲ್ಪಟ್ಟ ಸಮಯವನ್ನು ಲೆಕ್ಕಹಾಕಿ, ಅದನ್ನು ವರದಿಸಬೇಕು.”
ಬೇರೆ ಯಾರು ದೇವರನ್ನು ಆರಾಧಿಸಿರಿ ಪುಸ್ತಕದ ಅಧ್ಯಯನದಿಂದ ಪ್ರಯೋಜನ ಪಡೆದುಕೊಳ್ಳಬಲ್ಲರು? ಅದೇ ಲೇಖನವು ಮುಂದುವರಿಸುವುದು: “ಈ ಮುಂಚೆ [ಅಪೇಕ್ಷಿಸು ಬ್ರೋಷರ್ ಮತ್ತು] ಜ್ಞಾನ ಪುಸ್ತಕವನ್ನು ಅಭ್ಯಾಸಿಸಿರುವುದಾದರೂ, ಸಮರ್ಪಣೆ ಮತ್ತು ದೀಕ್ಷಾಸ್ನಾನ ಹಂತದ ವರೆಗೆ ಪ್ರಗತಿಯನ್ನು ಮಾಡದಿರುವಂತಹ ವ್ಯಕ್ತಿಗಳು ನಿಮಗೆ ಗೊತ್ತಿರಬಹುದು. ಈಗ, ಅವರು ಪುನಃ ತಮ್ಮ ಬೈಬಲ್ ಅಭ್ಯಾಸವನ್ನು ಮುಂದುವರಿಸಲು ಇಷ್ಟಪಡುತ್ತಾರೋ ಇಲ್ಲವೋ ಎಂಬುದು ತಿಳಿದುಕೊಳ್ಳಲು ನೀವೇ ಅವರ ಬಳಿಗೆ ಹೋಗಿ ಕೇಳಬಹುದು.” ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳಲ್ಲಿ ಇಂತಹವರೊಂದಿಗೆ ದೇವರನ್ನು ಆರಾಧಿಸಿರಿ ಪುಸ್ತಕದಿಂದ ಅಧ್ಯಯನಗಳನ್ನು ಆರಂಭಿಸಲು ಒಂದು ವಿಶೇಷ ಪ್ರಯತ್ನವನ್ನು ಮಾಡೋಣ.
[ಪಾದಟಿಪ್ಪಣಿ]
a ಕನ್ನಡದಲ್ಲಿ ಲಭ್ಯವಿಲ್ಲ.