ಸೇವಾ ಕೂಟದ ಶೆಡ್ಯೂಲ್
ಆಗಸ್ಟ್ 12ರಿಂದ ಆರಂಭವಾಗುವ ವಾರ
ಗೀತೆ 9 (37)
13 ನಿ: ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. 8ನೆಯ ಪುಟದಲ್ಲಿರುವ ಸಲಹೆಗಳನ್ನು ಉಪಯೋಗಿಸುತ್ತಾ, ಜುಲೈ-ಸೆಪ್ಟೆಂಬರ್ ಎಚ್ಚರ! ಪತ್ರಿಕೆಯನ್ನು (ಪತ್ರಿಕಾ ನಿರೂಪಣೆಯ ಕಾಲಮ್‌ನಲ್ಲಿ ಮೊದಲನೆಯದ್ದು.) ಮತ್ತು ಆಗಸ್ಟ್ 15ರ ಕಾವಲಿನಬುರುಜು ಪತ್ರಿಕೆಯನ್ನು ಹೇಗೆ ನೀಡಬೇಕು ಎಂಬುದರ ಎರಡು ಪ್ರತ್ಯೇಕ ಪ್ರತ್ಯಕ್ಷಾಭಿನಯಗಳಿರಲಿ. ಪ್ರತಿಯೊಂದರಲ್ಲಿಯೂ, “ನೀವು ಅಷ್ಟೊಂದು ಸಲ ಸಂದರ್ಶಿಸುವುದೇಕೆ?” ಎಂಬ ಸಂಭಾಷಣಾ ತಡೆಗಟ್ಟನ್ನು ನಿಭಾಯಿಸುವ ವಿಭಿನ್ನವಾದ ವಿಧಾನವನ್ನು ತೋರಿಸಿರಿ.—ಬೈಬಲ್ ಚರ್ಚೆಗಳನ್ನು ಆರಂಭಿಸುವ ಮತ್ತು ಮುಂದುವರಿಸುವ ವಿಧ ಎಂಬ ಪುಸ್ತಿಕೆಯ ಪುಟ 12ನ್ನು ನೋಡಿರಿ.
20 ನಿ: “ಆತ್ಮಿಕ ಗುರಿಗಳನ್ನಿಡಿರಿ.”a 5ನೆಯ ಪ್ಯಾರಗ್ರಾಫನ್ನು ಚರ್ಚಿಸುತ್ತಿರುವಾಗ, ನಮ್ಮ ಶುಶ್ರೂಷೆ ಪುಸ್ತಕದ 114, 116ನೆಯ ಪುಟಗಳಿಂದ ರೆಗ್ಯುಲರ್ ಪಯನೀಯರ್ ಸೇವೆ ಮತ್ತು ಬೆತೆಲ್ ಸೇವೆಯ ಕುರಿತು ಪ್ರಚೋದನಾತ್ಮಕ ಹೇಳಿಕೆಗಳನ್ನು ಸೇರಿಸಿರಿ.
12 ನಿ: ಸ್ಥಳಿಕ ಅನುಭವಗಳು. ಬೈಬಲಿನ ಕುರಿತು ಹೆಚ್ಚನ್ನು ತಿಳಿದುಕೊಳ್ಳಲು ನೀವು ಬಯಸುವಿರೋ? ಎಂಬ ಟ್ರ್ಯಾಕ್ಟನ್ನು ಉಪಯೋಗಿಸುವ ಮೂಲಕ ತಮಗಾದ ಅನುಭವಗಳ ಕುರಿತು ಹೇಳುವಂತೆ ಸಭಿಕರನ್ನು ಕೇಳಿಕೊಳ್ಳಿ. ಬೈಬಲ್ ಅಧ್ಯಯನಗಳು ಆರಂಭಿಸಲ್ಪಟ್ಟಿವೆಯೋ? ಆರಂಭಿಸಲ್ಪಟ್ಟಿರುವುದಾದರೆ, ಹೇಗೆ ಎಂಬುದನ್ನು ವಿವರಿಸಿ ಅಥವಾ ಒಂದೋ ಎರಡೋ ಅನುಭವಗಳನ್ನು ಪುನರಾಭಿನಯಿಸಿ. ನವೆಂಬರ್ 2001, ನಮ್ಮ ರಾಜ್ಯದ ಸೇವೆಯ 4ನೆಯ ಪುಟದಲ್ಲಿರುವ “ಟ್ರ್ಯಾಕ್ಟನ್ನು ವಿತರಿಸಬಹುದಾದ ಸಂದರ್ಭಗಳು” ಎಂಬ ರೇಖಾಚೌಕವನ್ನು ಪರಿಶೀಲಿಸಿ.
ಗೀತೆ 4 (43) ಮತ್ತು ಸಮಾಪ್ತಿಯ ಪ್ರಾರ್ಥನೆ.
ಆಗಸ್ಟ್ 19ರಿಂದ ಆರಂಭವಾಗುವ ವಾರ
ಗೀತೆ 24 (185)
10 ನಿ: ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್ ವರದಿ.
17 ನಿ: ಯಾವುದು ಅವರನ್ನು ಹಿಂಜರಿಯುವಂತೆ ಮಾಡುತ್ತದೆ? ಸಭಿಕರೊಂದಿಗೆ ಚರ್ಚೆ ಮತ್ತು ಪ್ರತ್ಯಕ್ಷಾಭಿನಯ. ನಮ್ಮ ಶುಶ್ರೂಷೆಯಲ್ಲಿ, ಸಾಮಾನ್ಯವಾಗಿ ತಮ್ಮ ನಂಬಿಕೆಗಳ ಕುರಿತು ಚರ್ಚಿಸಲು ಹಿಂಜರಿಯುವಂಥ ಜನರನ್ನು ನಾವು ಸಂಧಿಸುತ್ತೇವೆ. ಇದು ನಾವು ರಾಜ್ಯ ಸಂದೇಶವನ್ನು ಹಂಚುವುದರಿಂದ ನಮ್ಮನ್ನು ತಡೆಯಸಾಧ್ಯವಿರುವ ಅಡಚಣೆಯನ್ನು ಒಡ್ಡುತ್ತದೆ. ಒಬ್ಬ ವ್ಯಕ್ತಿಯು ಯಾವ ಕಾರಣಕ್ಕಾಗಿ ಹಿಂಜರಿಯುತ್ತಾನೆ ಎಂಬುದನ್ನು ನಾವು ಗ್ರಹಿಸುವಲ್ಲಿ, ಇದು ನಾವು ಆ ವ್ಯಕ್ತಿಯು ತನ್ನ ವಿಚಾರಗಳನ್ನು ವ್ಯಕ್ತಪಡಿಸುವಂತೆ ಪ್ರಚೋದಿಸುವಂಥ ಒಂದು ನಿರೂಪಣೆಯನ್ನು ತಯಾರಿಸುವಂತೆ ನಮಗೆ ಸಹಾಯಮಾಡುವುದು. ಈ ಕೆಳಗಿನ ರೀತಿಯ ಜನರನ್ನು ನಾವು ಎದುರುಗೊಳ್ಳುವಾಗ ನಾವು ಹೇಗೆ ನಮ್ಮ ನಿರೂಪಣೆಯನ್ನು ಅಳವಡಿಸಿಕೊಳ್ಳಬಹುದು ಎಂಬುದನ್ನು ಚರ್ಚಿಸಿರಿ: (1) ಧರ್ಮದ ಕುರಿತು, ಅದರಲ್ಲೂ ತಮ್ಮ ಸ್ವಂತ ಧರ್ಮದ ಕುರಿತು ಅನಾಸಕ್ತರಾಗಿರುವವರು. (2) ತಮ್ಮ ಕುಟುಂಬ ಮತ್ತು ಪೂರ್ವಜರು ಪಾಲಿಸಿದ ಧಾರ್ಮಿಕ ಆಚರಣೆಗಳನ್ನು ಭಾವನಾತ್ಮಕವಾಗಿ ಹಚ್ಚಿಕೊಂಡಿರುವವರು. (3) ತಮ್ಮ ನಂಬಿಕೆಗಳನ್ನು ಸಾದರಪಡಿಸಲು ಶಾಸ್ತ್ರಾಧಾರಿತ ಬೆಂಬಲವು ಇಲ್ಲದಿರುವ ಕಾರಣ ಅವುಗಳ ಕುರಿತು ಮಾತಾಡಲು ಮುಜುಗರಪಡುವವರು. (4) ವಿರೋಧಿಗಳಿಂದ ಮಾಡಲ್ಪಟ್ಟ ತಪ್ಪಾದ ಹೇಳಿಕೆಗಳ ಕಾರಣ ನಮ್ಮ ಬಗ್ಗೆ ಪೂರ್ವಾಭಿಪ್ರಾಯವುಳ್ಳವರು. ಸ್ಥಳಿಕ ಟೆರಿಟೊರಿಗೆ ಸರಿಹೋಗುವಂತೆ, ಸಾಮಾನ್ಯವಾಗಿ ಎದುರಾಗುವ ಪ್ರವೃತ್ತಿಗಳ ಮೇಲೆ ಕೇಂದ್ರೀಕರಿಸುತ್ತಾ ಪಟ್ಟಿಯನ್ನು ಹೊಂದಿಸಿಕೊಳ್ಳಿರಿ. ಒಬ್ಬ ವ್ಯಕ್ತಿಯ ಆಸಕ್ತಿಯನ್ನು ಶಾಸ್ತ್ರೀಯ ಸಂಭಾಷಣೆಯ ಕಡೆಗೆ ಹೇಗೆ ಮಾರ್ಗದರ್ಶಿಸುವುದು ಎಂಬುದನ್ನು ತೋರಿಸುವ ಒಂದು ಸಂಕ್ಷಿಪ್ತ ಪ್ರತ್ಯಕ್ಷಾಭಿನಯವನ್ನು ಸೇರಿಸಿರಿ.
18 ನಿ: “ಒಬ್ಬ ಸಂಬಂಧಿಕನು ಬಹಿಷ್ಕರಿಸಲ್ಪಟ್ಟಿರುವಾಗ ಕ್ರೈಸ್ತ ನಿಷ್ಠೆಯನ್ನು ತೋರಿಸಿರಿ.”b (1-8ನೆಯ ಪ್ಯಾರಗ್ರಾಫ್‌ಗಳು) ಒಳ್ಳೆಯ ಅರ್ಹತೆಯುಳ್ಳ ಒಬ್ಬ ಹಿರಿಯನು, ಒದಗಿಸಲ್ಪಟ್ಟಿರುವ ಪ್ರಶ್ನೆಗಳನ್ನು ಉಪಯೋಗಿಸುತ್ತಾ ಈ ಭಾಗವನ್ನು ನಿರ್ವಹಿಸಬೇಕು. ಸಮರ್ಥ ಓದುಗನಾಗಿರುವ ಒಬ್ಬ ಸಹೋದರನು ಪ್ರತಿಯೊಂದು ಪ್ಯಾರಗ್ರಾಫನ್ನು ಗಟ್ಟಿಯಾಗಿ ಓದಲಿ.
ಗೀತೆ 26 (212) ಮತ್ತು ಸಮಾಪ್ತಿಯ ಪ್ರಾರ್ಥನೆ.
ಆಗಸ್ಟ್ 26ರಿಂದ ಆರಂಭವಾಗುವ ವಾರ
ಗೀತೆ 12 (113)
10 ನಿ: ಸ್ಥಳಿಕ ಪ್ರಕಟನೆಗಳು. 8ನೆಯ ಪುಟದಲ್ಲಿರುವ ಸಲಹೆಗಳನ್ನು ಉಪಯೋಗಿಸುತ್ತಾ, ಒಬ್ಬ ಸಭಾ ಪ್ರಚಾರಕನು/ಳು, ಜುಲೈ-ಸೆಪ್ಟೆಂಬರ್ ಎಚ್ಚರ! ಪತ್ರಿಕೆಯನ್ನು (ಪತ್ರಿಕಾ ನಿರೂಪಣೆಯ ಕಾಲಮ್‌ನಲ್ಲಿ ಮೂರನೆಯದ್ದು.) ಹೇಗೆ ನೀಡಬಹುದು ಎಂಬುದನ್ನು ತೋರಿಸುವಂತೆ ಮತ್ತು ಒಬ್ಬ ರೆಗ್ಯುಲರ್ ಅಥವಾ ಆಕ್ಸಿಲಿಯರಿ ಪಯನೀಯರನು/ಳು ಸೆಪ್ಟೆಂಬರ್ 1ರ ಕಾವಲಿನಬುರುಜು ಪತ್ರಿಕೆಯನ್ನು ಹೇಗೆ ನೀಡಬಹುದು ಎಂಬುದನ್ನು ದೃಷ್ಟಾಂತಿಸುವಂತೆ ಕೇಳಿಕೊಳ್ಳಿ. ತಮ್ಮ ನಿರೂಪಣೆಯಲ್ಲಿ ಒಂದು ಶಾಸ್ತ್ರವಚನವನ್ನು ಒಳಗೂಡಿಸುವಂತೆ ಎಲ್ಲ ಪ್ರಚಾರಕರನ್ನೂ ಪ್ರೋತ್ಸಾಹಿಸಿರಿ.
17 ನಿ: “ಸಂವಾದಮಾಡುವವರಾಗಿರ್ರಿ!”c ಸಮಾಪ್ತಿಯಲ್ಲಿ, ಶಾಲೆ ಮಾರ್ಗದರ್ಶಕ ಪುಸ್ತಕದ (ಇಂಗ್ಲಿಷ್) 5-9 ಪುಟಗಳನ್ನು ಪರಿಶೀಲಿಸುವಂತೆ ಪ್ರಚಾರಕರನ್ನು ಪ್ರೋತ್ಸಾಹಿಸಿರಿ.
18 ನಿ: “ಒಬ್ಬ ಸಂಬಂಧಿಕನು ಬಹಿಷ್ಕರಿಸಲ್ಪಟ್ಟಿರುವಾಗ ಕ್ರೈಸ್ತ ನಿಷ್ಠೆಯನ್ನು ತೋರಿಸಿರಿ.”d (9-14ನೆಯ ಪ್ಯಾರಗ್ರಾಫ್‌ಗಳು) ಒಳ್ಳೆಯ ಅರ್ಹತೆಯುಳ್ಳ ಒಬ್ಬ ಹಿರಿಯನು, ಒದಗಿಸಲ್ಪಟ್ಟಿರುವ ಪ್ರಶ್ನೆಗಳನ್ನು ಉಪಯೋಗಿಸುತ್ತಾ ಈ ಭಾಗವನ್ನು ನಿರ್ವಹಿಸಬೇಕು. ಸಮರ್ಥ ಓದುಗನಾಗಿರುವ ಒಬ್ಬ ಸಹೋದರನು ಪ್ರತಿಯೊಂದು ಪ್ಯಾರಗ್ರಾಫನ್ನು ಗಟ್ಟಿಯಾಗಿ ಓದಲಿ.
ಗೀತೆ 9 (37) ಮತ್ತು ಸಮಾಪ್ತಿಯ ಪ್ರಾರ್ಥನೆ.
ಸೆಪ್ಟೆಂಬರ್ 2ರಿಂದ ಆರಂಭವಾಗುವ ವಾರ
ಗೀತೆ 6 (45)
10 ನಿ: ಸ್ಥಳಿಕ ಪ್ರಕಟನೆಗಳು. ಆಗಸ್ಟ್ ತಿಂಗಳಿಗಾಗಿ ಕ್ಷೇತ್ರ ಸೇವಾ ವರದಿಗಳನ್ನು ಹಾಕುವಂತೆ ಪ್ರಚಾರಕರಿಗೆ ಜ್ಞಾಪಿಸಿರಿ. ಮೇ 1, 1999ರ ಕಾವಲಿನಬುರುಜು ಪತ್ರಿಕೆಯ 25ನೇ ಪುಟದಲ್ಲಿರುವ “ನಿಮ್ಮ ಮಕ್ಕಳೊಂದಿಗೆ ಓದಿರಿ” ಎಂಬ ಲೇಖನವನ್ನು ಸಂಕ್ಷಿಪ್ತವಾಗಿ ಎತ್ತಿತೋರಿಸಿರಿ.
20 ನಿ: ಹೊರಡುವ ಮುನ್ನ ತಯಾರಿಸಿರಿ. ಚರ್ಚೆ ಮತ್ತು ಪ್ರತ್ಯಕ್ಷಾಭಿನಯ. ಒಳ್ಳೇ ಯೋಜನೆಯು ಶುಶ್ರೂಷೆಯಲ್ಲಿನ ನಮ್ಮ ಪರಿಣಾಮಕಾರಿತ್ವಕ್ಕೆ ಹೆಚ್ಚನ್ನು ಕೂಡಿಸುತ್ತದೆ. ಆದುದರಿಂದ, ಮುಂಚಿತವಾಗಿ (1) ನಿಮಗೆ ಬೇಕಾಗುವ ಸಾಹಿತ್ಯವನ್ನು ಪಡೆದುಕೊಳ್ಳಿ. (2) ಸಾಕಾಗುವಷ್ಟು ಹೌಸ್-ಟು-ಹೌಸ್ ರೆಕಾರ್ಡ್‌ಗಳು ಮತ್ತು ಒಂದು ಪೆನ್ ಅಥವಾ ಪೆನ್ಸಿಲ್ ಇರುವುದನ್ನು ಖಚಿತಪಡಿಸಿಕೊಳ್ಳಿರಿ. (3) ನಿಮಗೆ ಸಾರಿಗೆ ಸೌಕರ್ಯ ಬೇಕಾಗಿರುವುದಾದರೆ, ಸೂಕ್ತವಾದ ಪ್ರಯಾಣದ ಏರ್ಪಾಡುಗಳನ್ನು ಮಾಡಿಕೊಳ್ಳಿರಿ. (4) ನೀವು ಮಾಡಲು ಯೋಜಿಸುವಂಥ ಪುನರ್ಭೇಟಿಗಳ ಕುರಿತು ಮುಂದಾಗಿ ಯೋಚಿಸಿರಿ. (5) ನೀವು ಏನು ಹೇಳಲಿರುವಿರಿ ಎಂಬುದನ್ನು ತಯಾರಿಸಿರಿ. ನೀವು ಕ್ಷೇತ್ರ ಸೇವೆಗಾಗಿರುವ ಕೂಟವನ್ನು ನಡೆಸಲಿರುವುದಾದರೆ, ಸಾಕಷ್ಟು ಟೆರಿಟೊರಿಯನ್ನು ಪಡೆದುಕೊಳ್ಳಿ. ಸೆಪ್ಟೆಂಬರ್ ತಿಂಗಳಿನಲ್ಲಿ ಸೃಷ್ಟಿ (ಇಂಗ್ಲಿಷ್), ಅಥವಾ ಮಹಾನ್ ಪುರುಷ, ಅಥವಾ ಯುವ ಜನರ ಪ್ರಶ್ನೆಗಳು ಎಂಬ ಪುಸ್ತಕವನ್ನು ಶುಶ್ರೂಷೆಯಲ್ಲಿ ಹೇಗೆ ನೀಡಬಹುದು ಎಂಬುದರ ಕುರಿತಾದ ಎರಡು ಅಥವಾ ಮೂರು ವಿಧಾನಗಳನ್ನು ಸಭೆಯೊಂದಿಗೆ ಚರ್ಚಿಸಿರಿ. ಅವುಗಳಲ್ಲಿ ಒಂದು ನಿರೂಪಣೆಯನ್ನು ಪ್ರತ್ಯಕ್ಷಾಭಿನಯಿಸಿರಿ, ಮತ್ತು ಆ ಚರ್ಚೆಯಲ್ಲಿ ಒಂದು ಶಾಸ್ತ್ರವಚನವನ್ನು ಒಳಗೂಡಿಸಿರಿ.—ಸಲಹೆಗಳನ್ನು ನಮ್ಮ ರಾಜ್ಯದ ಸೇವೆಯ ಜೂನ್ 1995, ಪುಟ 4, ಜೂನ್ 1998, ಪುಟ 8 ಮತ್ತು ಮಾರ್ಚ್ 1994, ಪುಟ 8ರಲ್ಲಿ ನೋಡಿರಿ.
15 ನಿ: “ಸಮಯೋಚಿತ ಜಾಣ್ಮೆಯೊಂದಿಗೆ ಸುವಾರ್ತೆಯನ್ನು ಪ್ರಸ್ತುತಪಡಿಸುವುದು.”e ಶಾಲೆ ಮಾರ್ಗದರ್ಶಕ ಪುಸ್ತಕದ (ಇಂಗ್ಲಿಷ್) 70-2ನೆಯ ಪುಟಗಳ 4-8ನೇ ಪ್ಯಾರಗ್ರಾಫ್‌ಗಳಿಂದ ಸಮಂಜಸವಾದ ಅಂಶಗಳನ್ನು ಪರಿಶೀಲಿಸಿರಿ. ಕ್ಷೇತ್ರ ಶುಶ್ರೂಷೆಯಲ್ಲಿ ಏಳಬಹುದಾದ ಸನ್ನಿವೇಶಗಳೊಂದಿಗೆ ಹೇಗೆ ಸಮಯೋಚಿತ ಜಾಣ್ಮೆಯೊಂದಿಗೆ ವ್ಯವಹರಿಸಬೇಕು ಎಂಬುದರ ಕುರಿತು ಸಭಿಕರ ಹೇಳಿಕೆಗಳನ್ನು ಸೇರಿಸಿಕೊಳ್ಳಿ.
ಗೀತೆ 8 (53) ಮತ್ತು ಸಮಾಪ್ತಿಯ ಪ್ರಾರ್ಥನೆ.
[ಅಧ್ಯಯನ ಪ್ರಶ್ನೆಗಳು]
a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
c ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
d ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
e ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.