ಸೇವಾ ಕೂಟದ ಶೆಡ್ಯೂಲ್
ಜನವರಿ 14ರಿಂದ ಆರಂಭವಾಗುವ ವಾರ
ಗೀತೆ 16 (143)
15 ನಿ: ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. “ಹೊಸ ವಿಶೇಷ ಸಮ್ಮೇಳನ ದಿನದ ಕಾರ್ಯಕ್ರಮ”ವನ್ನು ಚರ್ಚಿಸಿರಿ. ಮುಂದಿನ ವಿಶೇಷ ಸಮ್ಮೇಳನ ದಿನದ ತಾರೀಖನ್ನು ತಿಳಿಸಿರಿ, ಮತ್ತು ಎಲ್ಲರೂ ಇಡೀ ಕಾರ್ಯಕ್ರಮಕ್ಕೆ ಹಾಜರಾಗುವಂತೆ ಪ್ರೋತ್ಸಾಹಿಸಿ. ಹೊಸದಾಗಿ ಆಸಕ್ತರಾಗಿರುವ ವ್ಯಕ್ತಿಗಳನ್ನು ಮತ್ತು ಬೈಬಲ್ ವಿದ್ಯಾರ್ಥಿಗಳನ್ನು ಆಮಂತ್ರಿಸುವಂತೆ ಪ್ರಚಾರಕರನ್ನು ಪ್ರೋತ್ಸಾಹಿಸಿ.
20 ನಿ: ದಯಾಭರಿತ ಒದಗಿಸುವಿಕೆಗಳಿಂದ ಪ್ರಯೋಜನ ಪಡೆಯುವುದು. ಬ್ರಾಂಚ್ ಆಫೀಸ್‌ನಿಂದ ಒದಗಿಸಲ್ಪಟ್ಟ ಡಿಸೆಂಬರ್ 1, 2001 ಹೊರಮೇರೆಯ ಮೇಲೆ ಆಧಾರಿತವಾದ ಭಾಷಣವಾಗಿದ್ದು, ಒಬ್ಬ ಅರ್ಹ ಹಿರಿಯನಿಂದ ಕೊಡಲ್ಪಡುತ್ತದೆ. ಸಭೆಯಲ್ಲಿ ಸಾಕಷ್ಟು ಮೊತ್ತದ ಅಡ್ವಾನ್ಸ್ ಮೆಡಿಕಲ್ ಡೈರೆಕ್ಟಿವ್/ರಿಲೀಸ್ ಕಾರ್ಡ್ ಲಭ್ಯವಿರಬೇಕು. ಈ ಕೂಟಗಳು ಮುಗಿದ ನಂತರ ಈ ಡಾಕ್ಯುಮೆಂಟ್ ದೀಕ್ಷಾಸ್ನಾನ ಪಡೆದುಕೊಂಡಿರುವ ಪ್ರಚಾರಕರಿಗೆ ಲಭ್ಯಗೊಳಿಸಲ್ಪಡುವುದು. ಆದರೆ ಇದನ್ನು ಅದೇ ರಾತ್ರಿಯೇ ಭರ್ತಿ ಮಾಡಬಾರದು. ಸಹಿ ಹಾಕುವುದು, ಸಾಕ್ಷಿದಾರರ ಸಹಿ, ಮತ್ತು ದಿನಾಂಕವನ್ನು ಹಾಕುವುದನ್ನು ಮುಂದಿನ ಸಭಾ ಪುಸ್ತಕ ಅಧ್ಯಯನದ ನಂತರ ಮಾಡಲಾಗುವುದು. ಅಗತ್ಯವಿರುವಲ್ಲಿ ಪುಸ್ತಕ ಅಧ್ಯಯನ ಚಾಲಕನ ಸಹಾಯದೊಂದಿಗೆ ಇದು ಮಾಡಲ್ಪಡುವುದು. ಸಾಕ್ಷಿಗಳಾಗಿ ಸಹಿ ಹಾಕುವವರು, ಕಾರ್ಡನ್ನು ಪಡೆದುಕೊಂಡಿರುವ ವ್ಯಕ್ತಿಯು ಡಾಕ್ಯುಮೆಂಟ್‌ಗೆ ಸಹಿ ಹಾಕುವುದನ್ನು ನಿಜವಾಗಿ ನೋಡಬೇಕು. ಅಸ್ನಾತ ಪ್ರಚಾರಕರು, ತಮ್ಮ ಸ್ವಂತ ಸಂದರ್ಭಗಳು ಮತ್ತು ನಂಬಿಕೆಗಳಿಗೆ ಅನುಸಾರವಾಗಿ ಈ ಕಾರ್ಡಿನಲ್ಲಿ ಸೂಚಿಸಲ್ಪಟ್ಟಿರುವ ವಿಷಯಕ್ಕೆ ತಕ್ಕಂತೆ, ತಮಗಾಗಿ ಮತ್ತು ತಮ್ಮ ಮಕ್ಕಳಿಗಾಗಿ ಸ್ವಂತ ಡೈರೆಕ್ಟಿವ್ ಅನ್ನು ಬರೆದುಕೊಳ್ಳಬಹುದು. ತಮ್ಮ ಬೈಬಲ್ ಶಿಕ್ಷಿತ ಮನಸ್ಸಾಕ್ಷಿಯ ಆಧಾರದ ಮೇಲೆ ವೈದ್ಯಕೀಯ ತೀರ್ಮಾನಗಳನ್ನು ಮುಂಚಿತವಾಗಿಯೇ ಮಾಡುವುದರಲ್ಲಿನ ವಿವೇಚನೆಯನ್ನು ಒತ್ತಿಹೇಳಿ. (ಜ್ಞಾನೋ. 14:15; 27:12) ವೈದ್ಯಕೀಯ ವಿಧಾನಗಳ ಮತ್ತು ಔಷಧಗಳ ರೂಪದಲ್ಲಿ ಯಾವುದು ಅಂಗೀಕೃತವಾಗಿದೆ ಎಂಬುದನ್ನು ವೈದ್ಯಕೀಯ ವೃತ್ತಿಯವರೊಂದಿಗೆ ಮುಂಚಿತವಾಗಿಯೇ ಮಾತಾಡುವುದು ಪ್ರಾಮುಖ್ಯವಾದದ್ದಾಗಿದೆ. ಯೋಗ್ಯವಾದ ತೀರ್ಮಾನಗಳನ್ನು ಮಾಡುವಂತಾಗಲು, ಜಾಗರೂಕವಾದ ವೈಯಕ್ತಿಕ ಅಧ್ಯಯನವು ಜರೂರಿಯಾಗಿದೆ. ಜೂನ್ 15, 2000 ಮತ್ತು ಅಕ್ಟೋಬರ್ 15, 2000ದ ಕಾವಲಿನಬುರುಜುವಿನ “ವಾಚಕರಿಂದ ಪ್ರಶ್ನೆಗಳು” ಎಂಬ ಲೇಖನದಿಂದ ಸೂಕ್ತವಾದ ಪ್ಯಾರಗ್ರಾಫ್‌ಗಳನ್ನು ಓದಿರಿ. ಹಿರಿಯರು ಬೆಂಬಲಿಸಲು ಮನಸ್ಸುಳ್ಳವರಾಗಿದ್ದಾರೆ, ಆದರೆ ಅವರು ಇತರರಿಗೋಸ್ಕರ ತೀರ್ಮಾನಿಸಲಾರರು. ಇತರರು ಅವರ ತೀರ್ಮಾನಗಳ ಲಿಖಿತ ಡಾಕ್ಯುಮೆಂಟ್‌ಗಳನ್ನು ಹೇಗೆ ಒದಗಿಸುವುದು ಎಂಬುದನ್ನು ವಿವರಿಸಿರಿ.
10 ನಿ: “ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?” ಜನವರಿ-ಮಾರ್ಚ್ ಎಚ್ಚರ! ಪತ್ರಿಕೆಯನ್ನು ಮತ್ತು ಜನವರಿ 15ರ ಕಾವಲಿನಬುರುಜುವನ್ನು ಹೇಗೆ ನೀಡುವುದು ಎಂಬುದರ ಕುರಿತಾದ ಪ್ರತ್ಯಕ್ಷಾಭಿನಯಗಳು. ಪತ್ರಿಕಾ ದಿನವನ್ನು ಬೆಂಬಲಿಸುವಂತೆ ಎಲ್ಲ ಪ್ರಚಾರಕರನ್ನು ಪ್ರೋತ್ಸಾಹಿಸಿರಿ.
ಗೀತೆ 1 (13) ಮತ್ತು ಸಮಾಪ್ತಿಯ ಪ್ರಾರ್ಥನೆ.
ಜನವರಿ 21ರಿಂದ ಆರಂಭವಾಗುವ ವಾರ
ಗೀತೆ 8 (53)
10 ನಿ: ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್ ವರದಿ.
13 ನಿ: ನೀವು ಪ್ರತಿನಿತ್ಯ ಶಾಸ್ತ್ರಗಳನ್ನು ಪರೀಕ್ಷಿಸುತ್ತಿದ್ದೀರೋ? ಒಂದು ಕೌಟುಂಬಿಕ ಚರ್ಚೆ. ದಿನದ ವಚನದ ಚರ್ಚೆಯಿಂದ ಹೆಚ್ಚಿನ ಪ್ರಯೋಜನವನ್ನು ಪಡೆದುಕೊಳ್ಳಲಿಕ್ಕಾಗಿ ಅವರು, 1996, ಡಿಸೆಂಬರ್ 15ರ ಕಾವಲಿನಬುರುಜುವಿನ 18ನೆಯ ಪುಟದಲ್ಲಿರುವ 13-14ನೇ ಪ್ಯಾರಗ್ರಾಫ್‌ಗಳನ್ನು ಪರಿಶೀಲಿಸುತ್ತಾರೆ. ಇತ್ತೀಚೆಗೆ ಆವರಿಸಲ್ಪಟ್ಟ ಎರಡು ಅಥವಾ ಮೂರು ದಿನದ ವಚನಗಳನ್ನು ಅವರು ಕ್ಷಿಪ್ರವಾಗಿ ಪುನರ್ವಿಮರ್ಶಿಸುತ್ತಾರೆ ಮತ್ತು ಈ ಮಾಹಿತಿಯು ಹೇಗೆ ವಿಶೇಷವಾಗಿ ಉಪಯುಕ್ತವಾಗಿತ್ತು ಎಂಬುದನ್ನು ವಿವರಿಸುತ್ತಾರೆ. ಅವರನ್ನು ಆತ್ಮಿಕವಾಗಿ ಸಕ್ರಿಯರನ್ನಾಗಿ ಇಡಲಿಕ್ಕಾಗಿ ರೂಪಿಸಲ್ಪಟ್ಟಿರುವ ಈ ಒದಗಿಸುವಿಕೆಯು, ಕ್ರಮವಾದ ಕೌಟುಂಬಿಕ ಬೈಬಲ್ ಅಧ್ಯಯನ ಕಾರ್ಯಕ್ರಮದ ಒಂದು ಭಾಗವಾಗಿರಬೇಕು ಎಂಬುದನ್ನು ಒತ್ತಿಹೇಳಿ.
22 ನಿ: “ರಾಜ್ಯವನ್ನು ಪ್ರಥಮವಾಗಿ ಇಡುವುದನ್ನು ಮುಂದುವರಿಸಿರಿ.”a 1998, ಸೆಪ್ಟೆಂಬರ್ 1ರ ಕಾವಲಿನಬುರುಜುವಿನ 19-21ನೆಯ ಪುಟಗಳಲ್ಲಿರುವ ಮುಖ್ಯಾಂಶಗಳ ಮೇಲೆ ಕೆಲವು ಪ್ರಶ್ನೆಗಳನ್ನು ಸೇರಿಸಿಕೊಳ್ಳಿ.
ಗೀತೆ 4 (43) ಮತ್ತು ಸಮಾಪ್ತಿಯ ಪ್ರಾರ್ಥನೆ.
ಜನವರಿ 28ರಿಂದ ಆರಂಭವಾಗುವ ವಾರ
ಗೀತೆ 9 (37)
10 ನಿ: ಸ್ಥಳಿಕ ಪ್ರಕಟನೆಗಳು. ಜನವರಿ ತಿಂಗಳಿನ ಸೇವಾ ವರದಿಯನ್ನು ಹಾಕುವಂತೆ ಪ್ರಚಾರಕರಿಗೆ ಜ್ಞಾಪಿಸಿರಿ. ಈ ಪುಟದಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು ಉಪಯೋಗಿಸುತ್ತಾ, ಎರಡು ಸಂಕ್ಷಿಪ್ತವಾದ ಪತ್ರಿಕಾ ನಿರೂಪಣೆಗಳನ್ನು ಪ್ರತ್ಯಕ್ಷಾಭಿನಯಿಸಿರಿ; ಒಂದನ್ನು ಜನವರಿ-ಮಾರ್ಚ್ ಎಚ್ಚರ! ಪತ್ರಿಕೆಯನ್ನು ಉಪಯೋಗಿಸುತ್ತಾ ಮತ್ತು ಇನ್ನೊಂದನ್ನು ಫೆಬ್ರವರಿ 1ರ ಕಾವಲಿನಬುರುಜು ಪತ್ರಿಕೆಯನ್ನು ಉಪಯೋಗಿಸುತ್ತಾ ಮಾಡಿರಿ. ಸಭೆಯ ಸ್ಟಾಕ್‌ನಲ್ಲಿರುವ ಪುಸ್ತಕಗಳ ಕುರಿತು ವಿಶೇಷವಾಗಿ ತಿಳಿಸುತ್ತಾ, ಫೆಬ್ರವರಿ ತಿಂಗಳಿಗಾಗಿರುವ ಸಾಹಿತ್ಯ ನೀಡುವಿಕೆಯ ಕುರಿತು ತಿಳಿಸಿರಿ.
10 ನಿ: “ಹೊಸ ಸರ್ಕಿಟ್ ಸಮ್ಮೇಳನ ಕಾರ್ಯಕ್ರಮ.” ಒಂದು ಭಾಷಣ. ಮುಂದಿನ ಸರ್ಕಿಟ್ ಸಮ್ಮೇಳನದ ತಾರೀಖನ್ನು ತಿಳಿಸಿರಿ. ಬೈಬಲ್ ವಿದ್ಯಾರ್ಥಿಗಳನ್ನು ಆಮಂತ್ರಿಸಲಿಕ್ಕಾಗಿ ಎಲ್ಲರೂ ವಿಶೇಷ ಪ್ರಯತ್ನವನ್ನು ಮಾಡಬೇಕು. ಮುಂದಿನ ಸಮ್ಮೇಳನದಲ್ಲಿ ಅಸ್ನಾತ ಪ್ರಚಾರಕರು ಯೆಹೋವನಿಗೆ ತಾವು ಮಾಡಿಕೊಂಡ ಸಮರ್ಪಣೆಯನ್ನು ಸಂಕೇತಿಸುವುದರ ಕುರಿತು ಗಂಭೀರವಾಗಿ ಯೋಚಿಸುವಂತೆ ಅವರನ್ನು ಪ್ರೋತ್ಸಾಹಿಸಿರಿ. ಪ್ರತಿ ದಿನದ ಎರಡೂ ಸೆಷನ್‌ಗಳಿಗೆ ಹಾಜರಾಗುವಂತೆ ಎಲ್ಲರನ್ನೂ ಉತ್ತೇಜಿಸಿ.
25 ನಿ: “ಹೆತ್ತವರೇ—ಶೈಶವಾವಸ್ಥೆಯಿಂದಲೇ ನಿಮ್ಮ ಮಕ್ಕಳನ್ನು ತರಬೇತುಗೊಳಿಸಿ.”b 1998, ಏಪ್ರಿಲ್ 15ರ ಕಾವಲಿನಬುರುಜುವಿನ 32ನೆಯ ಪುಟದಲ್ಲಿರುವ ಹೇಳಿಕೆಗಳನ್ನು ಸೇರಿಸಿ. ತಮ್ಮ ಮಕ್ಕಳ ಆತ್ಮಿಕ ತರಬೇತಿಯನ್ನು ಶೈಶವಾವಸ್ಥೆಯಲ್ಲಿಯೇ ಆರಂಭಿಸಿದ್ದರಿಂದ ಗಳಿಸಲ್ಪಟ್ಟ ಒಳ್ಳೇ ಪರಿಣಾಮಗಳ ಕುರಿತಾಗಿ ಹೇಳುವಂತೆ ಹೆತ್ತವರನ್ನು ಆಮಂತ್ರಿಸಿ.
ಗೀತೆ 1 (13) ಮತ್ತು ಸಮಾಪ್ತಿಯ ಪ್ರಾರ್ಥನೆ.
ಫೆಬ್ರವರಿ 4ರಿಂದ ಆರಂಭವಾಗುವ ವಾರ
ಗೀತೆ 26 (212)
8 ನಿ: ಸ್ಥಳಿಕ ಪ್ರಕಟನೆಗಳು.
17 ನಿ: “ಅವರು ಕೇಳಿಸಿಕೊಳ್ಳುವುದು ಹೇಗೆ?”c ಶಾಸ್ತ್ರವಚನಗಳು ಹೇಗೆ ಅನ್ವಯಿಸುತ್ತವೆ ಎಂಬುದರ ಕುರಿತು ಹೇಳಿಕೆಗಳನ್ನು ನೀಡುವಂತೆ ಸಭಿಕರನ್ನು ಕೇಳಿಕೊಳ್ಳಿ. 1998, ಆಗಸ್ಟ್ 15ರ ಕಾವಲಿನಬುರುಜುವಿನ 20ನೇ ಪುಟದಲ್ಲಿರುವ 17-18ನೆಯ ಪ್ಯಾರಗ್ರಾಫ್‌ಗಳ ಪ್ರಶ್ನೆಗಳನ್ನು ಸೇರಿಸಿಕೊಳ್ಳಿ.
20 ನಿ: “ಕ್ಷೇತ್ರ ಸೇವೆಗಾಗಿ ಸೂಚಿಸಲ್ಪಟ್ಟ ನಿರೂಪಣೆಗಳು.” ಸೇವಾ ಮೇಲ್ವಿಚಾರಕನಿಂದ ನಿರ್ವಹಿಸಲ್ಪಡಬೇಕಾದ ಸಭಿಕರೊಂದಿಗಿನ ಚರ್ಚೆ. ಕೆಲವು ಹೊಸ ನಿರೂಪಣೆಗಳೊಂದಿಗೆ, ನಮ್ಮ ರಾಜ್ಯದ ಸೇವೆಯ ಹಿಂದಿನ ಸಂಚಿಕೆಗಳಲ್ಲಿ ಕಂಡುಬಂದ ಸೂಚಿಸಲ್ಪಟ್ಟ ನಿರೂಪಣೆಗಳು ಈ ಪುರವಣಿಯಲ್ಲಿ ಸೇರಿಸಲ್ಪಟ್ಟಿವೆ. ಬರಿದಾಗಿ ಬಿಡಲ್ಪಟ್ಟಿರುವ ಲೈನ್‌ಗಳನ್ನು, ಭವಿಷ್ಯತ್ತಿನಲ್ಲಿ ಕೊಡಲ್ಪಡುವ ಮತ್ತು ನಿಮ್ಮ ಟೆರಿಟೊರಿಯಲ್ಲಿ ಪರಿಣಾಮಕಾರಿ ಎಂದು ಕಂಡುಬರುವ ಸಲಹೆಗಳನ್ನು ಬರೆದುಕೊಳ್ಳಲಿಕ್ಕಾಗಿ ಉಪಯೋಗಿಸಬಹುದು. ಸಭಿಕರಿಗೆ ವಿಶೇಷವಾಗಿ ಯಾವ ನಿರೂಪಣೆಗಳು ಇಷ್ಟವಾದವು ಮತ್ತು ಏಕೆ ಎಂಬುದನ್ನು ಹೇಳುವಂತೆ ಅವರನ್ನು ಕೇಳಿಕೊಳ್ಳಿ. ಇವುಗಳಲ್ಲಿ, ಫೆಬ್ರವರಿ ತಿಂಗಳಿನ ನೀಡುವಿಕೆಯೊಂದಿಗೆ ಉಪಯೋಗಿಸಬಹುದಾದ ಒಂದು ಅಥವಾ ಎರಡು ನಿರೂಪಣೆಗಳನ್ನು ಪ್ರತ್ಯಕ್ಷಾಭಿನಯಿಸಿರಿ. ಈ ಪುರವಣಿಯನ್ನು ಸುರಕ್ಷಿತವಾಗಿಡುವಂತೆ ಮತ್ತು ಶುಶ್ರೂಷೆಗಾಗಿ ತಯಾರಿಸುವಾಗ ಉಪಯೋಗಿಸುವಂತೆ ಎಲ್ಲ ಪ್ರಚಾರಕರನ್ನು ಪ್ರೋತ್ಸಾಹಿಸಿರಿ.
ಗೀತೆ 28 (224) ಮತ್ತು ಸಮಾಪ್ತಿಯ ಪ್ರಾರ್ಥನೆ
[ಅಧ್ಯಯನ ಪ್ರಶ್ನೆಗಳು].
a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
c ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.