‘ಅವರು ಕೇಳಿಸಿಕೊಳ್ಳುವುದು ಹೇಗೆ?’
1 ಯೇಸು ತುಂಬ ಒತ್ತು ನೀಡುತ್ತಾ ಹೇಳಿದ್ದು: “ಮೊದಲು ಎಲ್ಲಾ ಜನಾಂಗಗಳಿಗೆ ಸುವಾರ್ತೆಯು ಸಾರಲ್ಪಡಬೇಕು.” (ಮಾರ್ಕ 13:10) ಇಸವಿ 2000ದ ಮೇ 11ರಂದು, ಭಾರತ ದೇಶದ ಜನಸಂಖ್ಯೆಯು ನೂರು ಕೋಟಿಯನ್ನು ಮುಟ್ಟಿರುವುದಾಗಿ ಹೇಳಲಾಯಿತು. ಆದರೂ, ಅಸೋಸಿಯೇಟೆಡ್ ಪ್ರೆಸ್ ವಿವರಿಸಿದ್ದು: “ದಿನವೊಂದಕ್ಕೆ 42,000 ಮಕ್ಕಳು ಹುಟ್ಟುತ್ತಿರುವ ಒಂದು ದೇಶವಾದ ಭಾರತವು ಯಾವಾಗ ನೂರು ಕೋಟಿಯ ರೇಖೆಯನ್ನು ದಾಟಿತೆಂಬುದನ್ನು ನಿರ್ಧರಿಸುವುದು ಕಷ್ಟಕರವಾಗಿರುವುದು.” ಭಾರತದಲ್ಲಿರುವ ಹೆಚ್ಚುಕಡಿಮೆ 23,000 ಸಾಕ್ಷಿಗಳ ಶ್ರದ್ಧಾಪೂರ್ವಕ ಪ್ರಯತ್ನಗಳ ಹೊರತೂ, ಈ ಕೋಟ್ಯಂತರ ಜನರು ಒಂದು ವೈಯಕ್ತಿಕ ಸಾಕ್ಷಿಯನ್ನು ಪಡೆದಿರುವುದಿಲ್ಲ. ಬದಲಾದ ಆರ್ಥಿಕ ಪರಿಸ್ಥಿತಿಗಳಿಂದಾಗಿ, ಟೆರಿಟೊರಿಯ ಮೂಲೆಮೂಲೆಗಳನ್ನು ತಲಪುವುದರಲ್ಲಿ ಕಾರ್ಯಸಾಧಕರಾಗಿದ್ದ ನೂರಾರು ಮಂದಿ ವಿಶೇಷ ಪಯನೀಯರರ ಸಹಕಾರವು ನಮಗೆ ಈಗ ಲಭ್ಯವಿಲ್ಲ. ಆದುದರಿಂದ, ‘ಅವರು ಕೇಳಿಸಿಕೊಳ್ಳುವುದು ಹೇಗೆ?’—ರೋಮಾ. 10:14.
2 ಯೆಹೋವನಲ್ಲಿ ಭರವಸೆ ಇಡಿ: ಎಲ್ಲ ಜನರ ಹೃದಯದ ಸ್ಥಿತಿಯು ಯೆಹೋವನಿಗೆ ಗೊತ್ತಿದೆ ಎಂಬುದನ್ನು ನಾವು ಜ್ಞಾಪಕದಲ್ಲಿಟ್ಟುಕೊಳ್ಳಬೇಕು. ಒಬ್ಬ ವ್ಯಕ್ತಿಯ ಪರಿಸ್ಥಿತಿಯು ಎಂತಹದ್ದೇ ಆಗಿರಲಿ, ಅವನು ಪ್ರಾಮಾಣಿಕವಾಗಿ ದೇವರ ಕುರಿತಾದ ಸತ್ಯಕ್ಕಾಗಿ ಹುಡುಕುವುದಾದರೆ, ಅದನ್ನು ಖಂಡಿತ ಕಂಡುಕೊಳ್ಳುವನು.—1 ಪೂರ್ವ. 28:9.
3 ಅಬ್ರಹಾಮನು ಸೊದೋಮ್ ಗೊಮೋರದ ನಿವಾಸಿಗಳ ಕುರಿತು ಚಿಂತಿತನಾಗಿದ್ದನು. ಆದರೆ, ಕೇವಲ ಹತ್ತು ಮಂದಿ ನೀತಿವಂತರು ಸೊದೋಮ್ನಲ್ಲಿ ಕಂಡುಬರುವುದಾದರೂ ಅದು ನಾಶಗೊಳಿಸಲ್ಪಡದು ಎಂಬ ಆಶ್ವಾಸನೆಯನ್ನು ದೇವರು ಅಬ್ರಹಾಮನಿಗೆ ಕೊಟ್ಟನು. (ಆದಿ. 18:20, 23, 25, 32) ಲೋಟ ಮತ್ತು ಅವನ ಹೆಣ್ಣು ಮಕ್ಕಳ ಬಿಡುಗಡೆಯಲ್ಲಿ ವ್ಯಕ್ತವಾದಂತೆ, ಯೆಹೋವನು ಎಂದಿಗೂ ದುಷ್ಟರೊಂದಿಗೆ ನೀತಿವಂತರನ್ನು ನಾಶಗೊಳಿಸಿಲ್ಲ.—2 ಪೇತ್ರ 2:6-9.
4 ಸತ್ಯ ದೇವರ ಸೇವೆಯಲ್ಲಿ ತಾನೊಬ್ಬನೇ ಇದ್ದೇನೆಂದು ಎಲೀಯನಿಗೆ ಒಮ್ಮೆ ಅನಿಸಿತು. ಆದರೆ, ಅವನು ಒಬ್ಬೊಂಟಿಗನಾಗಿಲ್ಲ ಮತ್ತು ಅವನು ಆರಂಭಿಸಿರುವಂಥ ಕೆಲಸವು ಪೂರೈಸಲ್ಪಡುವುದು ಎಂಬ ಆಶ್ವಾಸನೆಯನ್ನು ಯೆಹೋವನು ಅವನಿಗೆ ಕೊಟ್ಟನು. (1 ಅರ. 19:14-18) ನಮ್ಮ ದಿನದ ಸನ್ನಿವೇಶದ ಕುರಿತಾಗಿ ಏನು?
5 ದೇವರ ಸೇವೆಯಲ್ಲಿ ಕಾರ್ಯಮಗ್ನರಾಗಿ ಉಳಿಯಿರಿ: ಇನ್ನೂ ಮುಂದಕ್ಕೆ ಎಷ್ಟು ವಿಸ್ತಾರವಾದ ರೀತಿಯಲ್ಲಿ ಸಾಕ್ಷಿಕಾರ್ಯವು ನಡೆಸಲ್ಪಡುವುದು ಎಂಬುದು ನಮಗೆ ಗೊತ್ತಿಲ್ಲ. ಯೆಹೋವನು ಈ ಕೆಲಸಕ್ಕೆ ಜವಾಬ್ದಾರನಾಗಿದ್ದಾನೆ, ಮತ್ತು ಇದರ ಮೇಲ್ವಿಚಾರಣೆ ಮಾಡಲು ತನ್ನ ದೇವದೂತರನ್ನು ಉಪಯೋಗಿಸುತ್ತಿದ್ದಾನೆ. (ಪ್ರಕ. 14:6, 7) ಎಲ್ಲ ಜನಾಂಗಗಳಿಗೆ ಎಷ್ಟರ ಮಟ್ಟಿಗೆ ಸಾಕ್ಷಿಯು ಕೊಡಲ್ಪಡಬೇಕು ಎಂಬುದನ್ನು ನಿರ್ಧರಿಸುವವನು ಆತನೇ ಆಗಿದ್ದಾನೆ. ಯೆಹೋವನು ಮನಸ್ಸುಮಾಡುವಲ್ಲಿ, ಇನ್ನೂ ಅನೇಕರು ‘ಸುವಾರ್ತೆಯ ವಾಕ್ಯವನ್ನು ಕೇಳಿ ನಂಬುವವರಾಗುವಂತೆ’ ನಾವಿನ್ನೂ ಯೋಚಿಸಿರದಂಥ ವಿಧಾನಗಳಲ್ಲಿ ರಾಜ್ಯದ ಸಂದೇಶವು ಸಾರಲ್ಪಡುವಂತೆ ಆತನು ಏರ್ಪಡಿಸಬಲ್ಲನು. (ಅ. ಕೃ. 15:7) ಯೆಹೋವನು ಏನು ಮಾಡುತ್ತಾನೋ ಅದು, ಆತನು ಯಾರಾಗಿದ್ದಾನೋ ಅದರೊಂದಿಗೆ ಅಂದರೆ ಆತನು ಪ್ರೀತಿ, ವಿವೇಚನೆ ಮತ್ತು ನ್ಯಾಯವುಳ್ಳ ದೇವರಾಗಿದ್ದಾನೆ ಎಂಬುದರೊಂದಿಗೆ ಸಹಮತದಲ್ಲಿರುವುದು.
6 ಯೆಹೋವನ ಚಿತ್ತಕ್ಕೆ ಹೊಂದಿಕೆಯಲ್ಲಿ, ಪ್ರತಿಯೊಬ್ಬನೂ ಸುವಾರ್ತೆಯನ್ನು ಕೇಳಿಸಿಕೊಳ್ಳುವಂತೆ ನಾವು ಕೈಲಾಗುವಷ್ಟನ್ನು ಮಾಡುವುದು ನಮಗಿರುವ ಸುಯೋಗವಾಗಿದೆ.—1 ಕೊರಿಂ. 9:16.