ಸೇವಾ ಕೂಟದ ಶೆಡ್ಯೂಲ್
ಮಾರ್ಚ್ 12ರಿಂದ ಆರಂಭವಾಗುವ ವಾರ
ಗೀತೆ 16 (143)
10 ನಿ: ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು.
15 ನಿ: ಸ್ಥಳಿಕ ಅಗತ್ಯಗಳು.
20 ನಿ: “ಏಪ್ರಿಲ್—‘ಕಷ್ಟಪಟ್ಟು ದುಡಿಯುವ ಹಾಗೂ ಹೆಣಗಾಡುವ ಸಮಯ.’” (ಪ್ಯಾರಗ್ರಾಫ್ 1-13) ಅಧ್ಯಕ್ಷ ಮೇಲ್ವಿಚಾರಕರಿಂದ ನಿರ್ವಹಿಸಲ್ಪಡಬೇಕು. ಏಪ್ರಿಲ್ ತಿಂಗಳಿನಲ್ಲಿ ನಾವು ಸಾಧಿಸಬಯಸುವ ವಿಷಯಗಳ ಕುರಿತಾದ ಉತ್ಸಾಹಭರಿತ ಚರ್ಚೆ. ಆ ತಿಂಗಳಿನಲ್ಲಿ ಕ್ಷೇತ್ರ ಸೇವೆಯಲ್ಲಿ 100 ಪ್ರತಿಶತ ಭಾಗವಹಿಸುವಿಕೆಯ ಗುರಿಯನ್ನು ತಲಪಲು ಸಭೆಯಲ್ಲಿರುವವರೆಲ್ಲರೂ ತಮ್ಮ ಪಾತ್ರವನ್ನು ನಿರ್ವಹಿಸುವಂತೆ ಉತ್ತೇಜಿಸಿರಿ.
ಗೀತೆ 26 (212) ಮತ್ತು ಸಮಾಪ್ತಿಯ ಪ್ರಾರ್ಥನೆ.
ಮಾರ್ಚ್ 19ರಿಂದ ಆರಂಭವಾಗುವ ವಾರ
ಗೀತೆ 15 (127)
8 ನಿ: ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್ ವರದಿ.
17 ನಿ: ಇಸವಿ 2001 ಯಿಯರ್‌ಬುಕ್ ಅನ್ನು ಸದುಪಯೋಗಿಸಿರಿ. ಭಾಷಣ ಮತ್ತು ಸಭಿಕರೊಂದಿಗೆ ಚರ್ಚೆ. ಪುಟ 31ರಲ್ಲಿರುವ, “2000ದ ಒಟ್ಟು ಮೊತ್ತ”ಗಳನ್ನು ಪುನರ್ವಿಮರ್ಶಿಸಿರಿ. ಪುಟ 3-5ರಲ್ಲಿರುವ, “ಆಡಳಿತ ಮಂಡಳಿಯಿಂದ ಒಂದು ಪತ್ರ”ವನ್ನು ಚರ್ಚಿಸಿರಿ. ಸಭಿಕರಲ್ಲಿ ಕೆಲವರು ಈ ಹೊಸ ಯಿಯರ್‌ಬುಕ್‌ನಿಂದ, ತಮಗೆ ವಿಶೇಷವಾದ ಉತ್ತೇಜನವನ್ನು ನೀಡಿರುವ ಮತ್ತು ನಂಬಿಕೆಯನ್ನು ಬಲಪಡಿಸಿರುವ ಒಂದು ವರದಿಯನ್ನೋ ಅಥವಾ ಅನುಭವವನ್ನೋ ತಿಳಿಸಲಿ. ಲೋಕವ್ಯಾಪಕ ಬೆತೆಲ್ ಕುಟುಂಬಗಳಲ್ಲಿ ಮಾಡಲ್ಪಡುವಂತೆ, ಕುಟುಂಬಗಳು ವರ್ಷದಾದ್ಯಂತ ಜೊತೆಯಾಗಿ ಇಡೀ ಯಿಯರ್‌ಬುಕ್ ಅನ್ನು ಓದುವಂತೆ ಉತ್ತೇಜಿಸಿರಿ. ಪುಟ 255ರಲ್ಲಿರುವ ಪ್ರಶ್ನೆಗಳನ್ನು ಎತ್ತಿಹೇಳಿರಿ. ಈ ಪ್ರಶ್ನೆಗಳು ಕಲಿತ ವಿಷಯಗಳನ್ನು ಪುನರ್ವಿಮರ್ಶಿಸಲಿಕ್ಕಾಗಿ ಉಪಯೋಗಿಸಲ್ಪಡಸಾಧ್ಯವಿದೆ. ಬೈಬಲ್ ವಿದ್ಯಾರ್ಥಿಗಳು ಯೆಹೋವನ ಸಂಸ್ಥೆಯನ್ನು ಮತ್ತು ಅದರ ಭಾಗವಾಗಿರುವ ಸುಯೋಗವನ್ನು ಹೆಚ್ಚು ಗಣ್ಯಮಾಡುವಂತೆ, ಹೇಗೆ ಯಿಯರ್‌ಬುಕ್ ಅನ್ನು ಉಪಯೋಗಿಸಿ ಸಹಾಯ ಮಾಡಬಹುದೆಂಬುದರ ಬಗ್ಗೆ ಸಲಹೆಗಳನ್ನು ಕೇಳಿರಿ.
20 ನಿ: “ಏಪ್ರಿಲ್—‘ಕಷ್ಟಪಟ್ಟು ದುಡಿಯುವ ಹಾಗೂ ಹೆಣಗಾಡುವ ಸಮಯ.’” (ಪ್ಯಾರಗ್ರಾಫ್ 14-30) ಸೇವಾ ಮೇಲ್ವಿಚಾರಕರಿಂದ ನಿರ್ವಹಿಸಲ್ಪಡಬೇಕು. ಆಯ್ದ ಪ್ರಶ್ನೋತ್ತರ ಭಾಗಗಳಿರುವ ಭಾಷಣ. ಏಪ್ರಿಲ್‌ನಲ್ಲಿ ಸಾಧ್ಯವಾದಷ್ಟು ಹೆಚ್ಚಾಗಿ ಶುಶ್ರೂಷೆಯಲ್ಲಿ ಭಾಗವಹಿಸಲು ಎಲ್ಲರೂ ಒಂದು ವ್ಯಾವಹಾರಿಕ ಶೆಡ್ಯೂಲನ್ನು ಮಾಡಬೇಕು. ಆ ತಿಂಗಳಿಗಾಗಿ ಯೋಜಿಸಲಾಗಿರುವ ಕ್ಷೇತ್ರ ಸೇವೆಗಾಗಿ ಕೂಟಗಳ ಶೆಡ್ಯೂಲಿನ ಪೂರ್ಣ ವಿವರವನ್ನು ಕೊಡಿರಿ. ಸಾಧ್ಯವಿರುವವರೆಲ್ಲರೂ ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡುವಂತೆ ಹಾಗೂ ಕೂಟದ ನಂತರ ಅರ್ಜಿಯನ್ನು ಪಡೆದುಕೊಳ್ಳುವಂತೆ ಉತ್ತೇಜಿಸಿರಿ.
ಗೀತೆ 6 (45) ಮತ್ತು ಸಮಾಪ್ತಿಯ ಪ್ರಾರ್ಥನೆ.
ಮಾರ್ಚ್ 26ರಿಂದ ಆರಂಭವಾಗುವ ವಾರ
ಗೀತೆ 25 (204)
10 ನಿ: ಸ್ಥಳಿಕ ಪ್ರಕಟನೆಗಳು. ಏಪ್ರಿಲ್‌ನಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡಲಿಕ್ಕಾಗಿ ಅರ್ಜಿಸಲ್ಲಿಸಲು ಇನ್ನು ತಡವಾಗಿಲ್ಲವೆಂಬುದನ್ನು ವಿವರಿಸಿರಿ. ಪ್ರತಿನಿತ್ಯ ಶಾಸ್ತ್ರಗಳನ್ನು ಪರೀಕ್ಷಿಸುವುದು—2001ರಲ್ಲಿ ಕೊಡಲ್ಪಟ್ಟಿರುವಂತೆ, ಏಪ್ರಿಲ್ 3-8ಕ್ಕೆ ಶೆಡ್ಯೂಲ್ ಮಾಡಲಾಗಿರುವ ಜ್ಞಾಪಕಾಚರಣೆಯ ಬೈಬಲ್ ಓದುವಿಕೆಯನ್ನು ಅನುಸರಿಸುವಂತೆ ಎಲ್ಲರನ್ನು ಉತ್ತೇಜಿಸಿರಿ. ಜ್ಞಾಪಕಾಚರಣೆಯ ವಾರದಂದು ಕಾವಲಿನಬುರುಜು ಅಭ್ಯಾಸ ಯಾವಾಗ ನಡೆಯಲಿದೆ ಎಂಬುದನ್ನು ತಿಳಿಸಿರಿ. ಈ ಭಾನುವಾರ ಏಪ್ರಿಲ್ 1ರಂದು “ಯಾರು ರಕ್ಷಿಸಲ್ಪಡುವರು?” ಎಂಬ ವಿಶೇಷ ಬಹಿರಂಗ ಭಾಷಣವನ್ನು ಮರೆಯಬೇಡಿರಿ. ಏಪ್ರಿಲ್‌ನಲ್ಲಿ ಒಳ್ಳೇ ಆರಂಭವನ್ನು ಮಾಡಲು ಎಲ್ಲರೂ ಅದೇ ದಿನದಂದು ಶುಶ್ರೂಷೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಿರಿ.
20 ನಿ: “ನಾವೆಲ್ಲರೂ ಯೆಹೋವನನ್ನು ಮತ್ತು ಆತನ ಮಗನನ್ನು ಸನ್ಮಾನಿಸೋಣ.” ಒಬ್ಬ ಹಿರಿಯನಿಂದ, ಪ್ರಚೋದಿಸುವಂಥ ಶಾಸ್ತ್ರೀಯ ಭಾಷಣ. ಏಪ್ರಿಲ್ ತಿಂಗಳಿಗಾಗಿ ಯೋಜಿಸಲಾಗಿರುವ ವಿಶೇಷ ಚಟುವಟಿಕೆಯಲ್ಲಿ ಸಾಧ್ಯವಾದಷ್ಟರ ಮಟ್ಟಿಗೆ ಪೂರ್ಣವಾಗಿ ಪಾಲ್ಗೊಳ್ಳಲು ಮತ್ತು ಜ್ಞಾಪಕಾಚರಣೆಗೆ ಜನರನ್ನು ಆಮಂತ್ರಿಸುವುದರಲ್ಲಿ ಅಧಿಕ ಪ್ರಯತ್ನವನ್ನು ಮಾಡಲು ಎಲ್ಲರನ್ನು ಉತ್ತೇಜಿಸಿರಿ.
15 ನಿ: ನಮ್ಮ ಪತ್ರಿಕಾ ನಿರೂಪಣೆಗಳನ್ನು ತಯಾರಿಸುವುದು. ಏಪ್ರಿಲ್‌ನಲ್ಲಿ ನಾವು ಕಾವಲಿನಬುರುಜು ಹಾಗೂ ಎಚ್ಚರ! ಪತ್ರಿಕೆಗಳನ್ನು ನೀಡುವೆವು. 1996ರ ಅಕ್ಟೋಬರ್ ತಿಂಗಳ ನಮ್ಮ ರಾಜ್ಯದ ಸೇವೆಯ ಪುಟ 8, ಪ್ಯಾರಗ್ರಾಫ್ 3 ಹಾಗೂ 10ನ್ನು ಪುನರ್ವಿಮರ್ಶಿಸಿರಿ. ಸದ್ಯದ ಪತ್ರಿಕೆಗಳಲ್ಲಿ ಪ್ರತಿಯೊಂದನ್ನು ನೀಡುವಾಗ, ಪರಿಣಾಮಕರ ರೀತಿಯಲ್ಲಿ ಉಪಯೋಗಿಸಬಹುದಾದ (1) ಒಂದು ಲೇಖನ, (2) ಒಂದು ಯೋಗ್ಯವಾದ ಮಾತನಾಡುವ ವಿಷಯ, (3) ಆಸಕ್ತಿಯನ್ನು ಕೆರಳಿಸುವ ಒಂದು ಪ್ರಶ್ನೆ, ಹಾಗೂ (4) ಒಂದು ಸಮಯೋಚಿತ ವಚನವನ್ನು ಎತ್ತಿತೋರಿಸಿರಿ. ಆಸಕ್ತ ವ್ಯಕ್ತಿಗಳೊಂದಿಗೆ ಬೈಬಲ್ ಅಭ್ಯಾಸವನ್ನು ಆರಂಭಿಸಲು ಅಪೇಕ್ಷಿಸು ಬ್ರೋಷರ್ ಅಥವಾ ಜ್ಞಾನ ಪುಸ್ತಕವನ್ನು ಉಪಯೋಗಿಸಲು ಪ್ರಯತ್ನಿಸಿರಿ. ಮೊದಲ ಭೇಟಿಯಲ್ಲೇ ಇದನ್ನು ಹೇಗೆ ಮಾಡಬಹುದೆಂಬುದನ್ನು ತೋರಿಸುವ, ಚೆನ್ನಾಗಿ ತಯಾರಿಸಲ್ಪಟ್ಟ ಒಂದು ಪ್ರತ್ಯಕ್ಷಾಭಿನಯದೊಂದಿಗೆ ಈ ಭಾಗವನ್ನು ಕೊನೆಗೊಳಿಸಿರಿ.
ಗೀತೆ 1 (13) ಮತ್ತು ಸಮಾಪ್ತಿಯ ಪ್ರಾರ್ಥನೆ.
ಏಪ್ರಿಲ್ 2ರಿಂದ ಆರಂಭವಾಗುವ ವಾ
ಗೀತೆ 29 (222)
9 ನಿ: ಸ್ಥಳಿಕ ಪ್ರಕಟನೆಗಳು. ಮಾರ್ಚ್ ತಿಂಗಳ ಕ್ಷೇತ್ರ ಸೇವಾ ವರದಿಯನ್ನು ಹಾಕುವಂತೆ ಪ್ರಚಾರಕರಿಗೆ ಜ್ಞಾಪಿಸಿರಿ. “ಜ್ಞಾಪಕಾಚರಣೆಯ ಮರುಜ್ಞಾಪನಗಳ”ನ್ನು ಪುನರ್ವಿಮರ್ಶಿಸಿರಿ.
18 ನಿ: “ಪ್ರೀತಿಯು ಸಾರುವಂತೆ ನಮ್ಮನ್ನು ಪ್ರಚೋದಿಸುತ್ತದೆ.”a ಲೇಖನದಲ್ಲಿರುವ ವಚನಗಳನ್ನು ಎತ್ತಿತೋರಿಸಿರಿ. ಒಳನೋಟ (ಇಂಗ್ಲಿಷ್), ಸಂಪುಟ 2, ಪುಟ 673, ಪ್ಯಾರಗ್ರಾಫ್ 1ರಲ್ಲಿ ಕೊಡಲ್ಪಟ್ಟಿರುವ ವಿಚಾರಗಳನ್ನು ಒಳಗೂಡಿಸಿರಿ. ಸಾರುವ ಕೆಲಸದಲ್ಲಿ ಎಡೆಬಿಡದೆ ಮುಂದುವರಿಯಲು, ದೇವರಿಗಾಗಿರುವ ಪ್ರೀತಿಯು ಅವರನ್ನು ಹೇಗೆ ಪ್ರಚೋದಿಸಿತೆಂಬುದನ್ನು ತಿಳಿಸುವಂತೆ ಅನೇಕ ವರ್ಷಗಳಿಂದ ಸಕ್ರಿಯರಾಗಿರುವ ಒಬ್ಬ ಪ್ರಚಾರಕರನ್ನು ಆಮಂತ್ರಿಸಿ. ಏಪ್ರಿಲ್‌ನಲ್ಲಿ ಮತ್ತು ನಂತರದ ಎಲ್ಲ ತಿಂಗಳುಗಳಲ್ಲಿ ಸಾಕ್ಷಿಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಎಲ್ಲ ಪ್ರಚಾರಕರನ್ನು ಪ್ರೇರೇಪಿಸಿರಿ.
18 ನಿ: “ಕೂಟಗಳಿಗೆ ಹಾಜರಾಗುವಂತೆ ಇತರರಿಗೆ ಸಹಾಯಮಾಡಿರಿ.”b ಬೈಬಲ್ ವಿದ್ಯಾರ್ಥಿಗಳನ್ನು ಸಂಸ್ಥೆಯ ಕಡೆಗೆ ಮಾರ್ಗದರ್ಶಿಸುವುದರ ಕುರಿತಾದ ಹೆಚ್ಚಿನ ಸಲಹೆಗಳನ್ನು, 1996ರ ಜೂನ್ ತಿಂಗಳ ನಮ್ಮ ರಾಜ್ಯದ ಸೇವೆಯ ಪುರವಣಿಯ 14-16ನೆಯ ಪ್ಯಾರಗ್ರಾಫ್‌ಗಳಲ್ಲಿ ನೀಡಲಾಗಿದೆ. ಕೂಟಕ್ಕೆ ಹಾಜರಾಗುವುದನ್ನು ಉತ್ತೇಜಿಸಲು ಅಪೇಕ್ಷಿಸು ಬ್ರೋಷರ್ (ಪಾಠ 5, ಪ್ಯಾರಗ್ರಾಫ್ 7) ಹಾಗೂ ಜ್ಞಾನ ಪುಸ್ತಕವನ್ನು (ಅಧ್ಯಾಯ 5 ಪ್ಯಾರಗ್ರಾಫ್ 22) ಆರಂಭದಿಂದಲೇ ಹೇಗೆ ಉಪಯೋಗಿಸಬಹುದು ಎಂಬುದನ್ನು ತೋರಿಸಿರಿ. ಇದನ್ನು ದೃಷ್ಟಾಂತಿಸಲು, ಒಬ್ಬ ವಿದ್ಯಾರ್ಥಿಯು ಕೂಟಕ್ಕೆ ಹಾಜರಾಗುವುದರ ಕುರಿತು ಗಂಭೀರವಾಗಿ ಯೋಚಿಸುವಂತೆ ಒಬ್ಬ ಸಮರ್ಥ ಪ್ರಚಾರಕನು ಆದರದ ಉತ್ತೇಜನವನ್ನು ಕೊಡುತ್ತಿರುವುದನ್ನು ಚೆನ್ನಾಗಿ ತಯಾರಿಸಿ ಪ್ರತ್ಯಕ್ಷಾಭಿನಯ ಮಾಡಿರಿ.
ಗೀತೆ 11 (85) ಮತ್ತು ಸಮಾಪ್ತಿಯ ಪ್ರಾರ್ಥನೆ.
[ಅಧ್ಯಯನ ಪ್ರಶ್ನೆಗಳು]
a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.