ಸೇವಾ ಕೂಟದ ಶೆಡ್ಯೂಲ್
ಜನವರಿ 8ರಿಂದ ಆರಂಭವಾಗುವ ವಾರ
ಸಂಗೀತ 18 (162)
7 ನಿ: ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು.
18 ನಿ: “ನಿಮ್ಮ ಬೆಳಕು ಪ್ರಕಾಶಿಸಲಿ.”a ಜೂನ್ 1, 1997ರ ಕಾವಲಿನಬುರುಜು ಪತ್ರಿಕೆಯ ಪುಟ 15, ಪ್ಯಾರಗ್ರಾಫ್ 12-13ರಲ್ಲಿ ಕೊಡಲ್ಪಟ್ಟಿರುವ ಹೇಳಿಕೆಗಳನ್ನು ಸೇರಿಸಿಕೊಳ್ಳಿ. ಸಾಕ್ಷಿ ಕೊಡಲು ಸಿಗುವ ಪ್ರತಿಯೊಂದು ಸಂದರ್ಭವನ್ನು ಸದುಪಯೋಗಿಸಿಕೊಳ್ಳಲು ಎಲ್ಲರನ್ನೂ ಪ್ರೋತ್ಸಾಹಿಸಿ.
20 ನಿ: ನಮ್ಮ ಆರೋಗ್ಯಾರೈಕೆಗಿರುವ ಪ್ರೀತಿಯ ಒದಗಿಸುವಿಕೆ. ಸಮರ್ಥ ಹಿರಿಯನಿಂದ ಭಾಷಣ. ಅವಶ್ಯವಿಲ್ಲದ ರಕ್ತಪೂರಣಗಳ ವಿರುದ್ಧ ಗಳಿಸಬಹುದಾದ ಅತ್ಯುತ್ತಮವಾದ ಸಂರಕ್ಷಣೆ, ಅಡ್ವಾನ್ಸ್ ಮೆಡಿಕಲ್ ಡೈರೆಕ್ಟಿವ್/ರಿಲೀಸ್ ಕಾರ್ಡನ್ನು ಭರ್ತಿಮಾಡಿಡುವುದರ ಮೂಲಕವಾಗಿ ಸಿಗುತ್ತದೆಂಬುದನ್ನು ಒತ್ತಿಹೇಳಿ. ಇಂದಿನ ಕೂಟಗಳು ಮುಗಿದ ನಂತರ ಈ ಡಾಕ್ಯುಮೆಂಟ್ ಪ್ರಚಾರಕರಿಗೆ ಸಿಗುವುದು, ಆದರೆ ಇದನ್ನು ಈ ರಾತ್ರಿಯೇ ಭರ್ತಿ ಮಾಡಬಾರದು. ವಿತರಣೆಗೋಸ್ಕರ ಬೇಕಾದಷ್ಟು ಕಾರ್ಡುಗಳು ಸಭೆಯಲ್ಲಿ ಲಭ್ಯವಿರಬೇಕು. ಎಲ್ಲ ಕಾರ್ಡುಗಳ ಮೇಲೆ ಕಾರ್ಡನ್ನು ಪಡೆದಿರುವಾತನ ಸಹಿ, ಸಾಕ್ಷಿದಾರರ ಸಹಿ, ಮತ್ತು ದಿನಾಂಕವನ್ನು ಅದರ ಮುಂದಿನ ಸಭಾ ಪುಸ್ತಕ ಅಭ್ಯಾಸದ ನಂತರ, ಅಗತ್ಯವಿರುವಲ್ಲಿ ಪುಸ್ತಕ ಅಭ್ಯಾಸ ಚಾಲಕನ ಸಹಾಯದೊಂದಿಗೆ ಮಾಡಬಹುದು. ಸಾಕ್ಷಿಗಳಾಗಿ ಸಹಿ ಹಾಕುವವರು, ಕಾರ್ಡನ್ನು ಪಡೆದುಕೊಂಡಿರುವ ವ್ಯಕ್ತಿಯು ಡಾಕ್ಯುಮೆಂಟಿಗೆ ಸಹಿಹಾಕುವುದನ್ನು ವಾಸ್ತವವಾಗಿ ನೋಡಬೇಕು. ತನ್ನ ಗುಂಪಿಗೆ ನೇಮಿಸಲ್ಪಟ್ಟಿರುವವರೆಲ್ಲರಿಗೆ ಅಡ್ವಾನ್ಸ್ ಮೆಡಿಕಲ್ ಡೈರೆಕ್ಟಿವ್/ರಿಲೀಸ್ ಕಾರ್ಡನ್ನು ಭರ್ತಿಮಾಡಲು ಬೇಕಾದ ನೆರವು ನೀಡಲ್ಪಟ್ಟಿದೆಯೇ ಎಂಬುದನ್ನು ಪರಿಶೀಲಿಸುವನು. ಹೆತ್ತವರು ತಮ್ಮ ಮಕ್ಕಳಿಗೆ ಬೇಕಾದ ಐಡೆಂಟಿಟಿ ಕಾರ್ಡನ್ನು, ಕೂಟ ಮುಗಿದ ನಂತರ ಪಡೆದುಕೊಳ್ಳಬಹುದು. ಅಸ್ನಾತ ಪ್ರಚಾರಕರು, ತಮ್ಮ ಸ್ವಂತ ಸಂದರ್ಭಗಳು ಮತ್ತು ನಂಬಿಕೆಗಳಿಗೆ ಅನುಸಾರವಾಗಿ ಈ ಕಾರ್ಡಿನಲ್ಲಿ ಸೂಚಿಸಲ್ಪಟ್ಟಿರುವ ವಿಷಯಕ್ಕೆ ತಕ್ಕಂತೆ, ತಮಗಾಗಿ ಮತ್ತು ತಮ್ಮ ಮಕ್ಕಳಿಗಾಗಿ ಸ್ವಂತ ಡೈರೆಕ್ಟಿವ್ ಅನ್ನು ಬರೆದುಕೊಳ್ಳಬಹುದು.
ಸಂಗೀತ 20 (93) ಮತ್ತು ಸಮಾಪ್ತಿಯ ಪ್ರಾರ್ಥನೆ.
ಜನವರಿ 15ರಿಂದ ಆರಂಭವಾಗುವ ವಾರ
ಸಂಗೀತ 7 (51)
10 ನಿ: ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್ ವರದಿ.
20 ನಿ: “ನಮ್ಮ ಸಾಹಿತ್ಯವನ್ನು ವಿತರಿಸುವ ಸರಳೀಕೃತ ಏರ್ಪಾಡು.” ಒಬ್ಬ ಸಮರ್ಥ ಹಿರಿಯನು ಈ ಭಾಗದಲ್ಲಿ ಕೊಡಲ್ಪಟ್ಟಿರುವ ವಿಷಯವನ್ನು ಸಭಿಕರೊಂದಿಗೆ ಚರ್ಚಿಸುವನು. ಒಬ್ಬ ಅನುಭವಸ್ಥ ಪ್ರಚಾರಕನು ಸಂಕ್ಷಿಪ್ತವಾದ ಹಾಗೂ ಚೆನ್ನಾಗಿ ತಯಾರಿಸಲ್ಪಟ್ಟ ಸರಣಿಯಾದ ಮೂರು ಪ್ರತ್ಯಕ್ಷಾಭಿನಯಗಳನ್ನು ಕೊಡಬೇಕು. ಈ ತಿಂಗಳಿನ ನೀಡುವಿಕೆಯೊಂದಿಗೆ, 1999ರ ಡಿಸೆಂಬರ್ ನಮ್ಮ ರಾಜ್ಯದ ಸೇವೆಯ ಪುಟ 3 ಪ್ಯಾರಗ್ರಾಫ್ 4ರಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು ಉಪಯೋಗಿಸಿ ಮೊದಲನೆಯ ಪ್ರತ್ಯಕ್ಷಾಭಿನಯವಿರಬೇಕು. ಪ್ರಚಾರಕನು ಪುನರ್ಭೇಟಿಗೆ ಬೇಕಾದ ಏರ್ಪಾಡುಗಳನ್ನು ಮಾಡುತ್ತಾನೆ ಮತ್ತು ಒಂದು ಲಕೋಟೆಯನ್ನು ಉಪಯೋಗಿಸಿ ಮನೆಯವನು ಕೊಡುವ ಸ್ವ-ಇಚ್ಛೆಯ ಕಾಣಿಕೆಯನ್ನು ಸ್ವೀಕರಿಸುತ್ತಾನೆ. ಎರಡನೆಯ ಪ್ರತ್ಯಕ್ಷಾಭಿನಯದಲ್ಲಿ, ಒಬ್ಬ ಮನೆಯವನು ಮಾತಾಡಲು ಮನಸ್ಸುಳ್ಳವನಾಗಿದ್ದಾನೆ, ಆದರೆ ರಾಜ್ಯದ ಸಂದೇಶದೆಡೆಗೆ ಯಾವುದೇ ರೀತಿಯ ಆಸಕ್ತಿಯನ್ನು ತೋರಿಸದಂತಹ ಪರಿಸ್ಥಿತಿಯಲ್ಲಿ, ಪ್ರಚಾರಕನು ಹೇಗೆ ಒಂದು ಪ್ರಕಾಶನವನ್ನು ಕೊಡದೆ ಹಿಂದಿರುಗುತ್ತಾನೆಂಬುದನ್ನು ದೃಷ್ಟಾಂತಿಸಿ ತೋರಿಸಿ. ಮೂರನೆಯ ಪ್ರತ್ಯಕ್ಷಾಭಿನಯದಲ್ಲಿ, ನಿಜವಾದ ಆಸಕ್ತಿಯನ್ನು ವ್ಯಕ್ತಪಡಿಸುವ ಆದರೆ ಈಗ ಕಾರ್ಯಮಗ್ನನಾಗಿರುವ ವ್ಯಕ್ತಿಗೆ ಒಂದು ಟ್ರ್ಯಾಕ್ಟನ್ನು ಹೇಗೆ ಕೊಟ್ಟುಬರುವುದೆಂಬುದನ್ನು ತೋರಿಸಿ. ಪ್ರಚಾರಕನು ಪುನರ್ಭೇಟಿಗೆ ಬೇಕಾದ ಏರ್ಪಾಡುಗಳನ್ನು ಮಾಡುತ್ತಾನೆ.
15 ನಿ: ನೀವು ಪ್ರತಿದಿನ ಶಾಸ್ತ್ರಗಳನ್ನು ಪರೀಕ್ಷಿಸುತ್ತೀರೋ? ಭಾಷಣ ಹಾಗೂ ಸಂದರ್ಶನಗಳು. ಕುಟುಂಬವಾಗಿ ದಿನದ ವಚನವನ್ನು ಚರ್ಚಿಸುವುದರ ವಿವೇಚನೆಯನ್ನು ಎತ್ತಿತೋರಿಸುತ್ತಾ, 1996 ಡಿಸೆಂಬರ್ 15ರ ಕಾವಲಿನಬುರುಜು ಪತ್ರಿಕೆಯ ಪುಟ 17-18, ಪ್ಯಾರಗ್ರಾಫ್ 12-14ನ್ನು ಪರಿಶೀಲಿಸಿ. ಕುಟುಂಬದ ಸದಸ್ಯರನ್ನು ಸಂದರ್ಶಿಸಿ, ಇತ್ತೀಚೆಗೆ ಚರ್ಚಿಸಿದ ದಿನದ ವಚನದಿಂದ ವಿಶೇಷವಾದ ಯಾವ ಪ್ರಯೋಜನವಾಯಿತು ಮತ್ತು ಇದರ ಕಾರಣವೇನೆಂಬುದನ್ನು ಒಬ್ಬೊಬ್ಬರೂ ಹೇಳುವಂತೆ ಮಾಡಿ. ಕುಟುಂಬವನ್ನು ಬಲಗೊಳಿಸಲು ಹಾಗೂ ಸದಸ್ಯರೆಲ್ಲರೂ ಸೇವೆಯಲ್ಲಿ ಕಾರ್ಯಮಗ್ನರಾಗಿರಲು ಕುಟುಂಬದ ಅಭ್ಯಾಸದೊಂದಿಗೆ ಕ್ರಮವಾದ ದಿನದ ವಾಚನವು ಒಂದು ಭಾಗವಾಗಿರಬೇಕೆಂಬುದನ್ನು ಒತ್ತಿಹೇಳಿ.
ಸಂಗೀತ 26 (212) ಮತ್ತು ಸಮಾಪ್ತಿಯ ಪ್ರಾರ್ಥನೆ.
ಜನವರಿ 22ರಿಂದ ಆರಂಭವಾಗುವ ವಾರ
ಸಂಗೀತ 12 (113)
7 ನಿ: ಸ್ಥಳಿಕ ಪ್ರಕಟನೆಗಳು.
18 ನಿ: ಪೀಠಿಕೆಗಳನ್ನು ಹೇಗೆ ತಯಾರಿಸುವುದು. ಭಾಷಣ ಹಾಗೂ ಪ್ರತ್ಯಕ್ಷಾಭಿನಯಗಳು. ರೀಸನಿಂಗ್ ಪುಸ್ತಕ, ಪುಟ 9ರಲ್ಲಿ ಕೊಡಲ್ಪಟ್ಟಿರುವ ಮುಖ್ಯ ಅಂಶಗಳನ್ನು ಪುನರ್ವಿಮರ್ಶಿಸಿ. ನಾವು ಸಂದೇಶವನ್ನು ನೀಡುವ ರೀತಿ, ವ್ಯಕ್ತಿತ್ವ, ಹಾಗೂ ಪ್ರಾಂತ್ಯಕ್ಕೆ ಸರಿಹೊಂದುವ ಹಾಗೆ ಪೀಠಿಕೆಗಳನ್ನು ಹೇಗೆ ಆರಿಸಿಕೊಳ್ಳುವುದು ಎಂಬುದನ್ನು ತೋರಿಸಿ. ಅಪೇಕ್ಷಿಸು ಬ್ರೋಷರೊಂದಿಗೆ ಉಪಯೋಗಿಸಬಹುದಾದ ಮಾದರಿ ಪೀಠಿಕೆಗಳನ್ನು ಪುನರ್ವಿಮರ್ಶಿಸಿ, ಅದರಲ್ಲಿ ಒಂದು ಅಥವಾ ಎರಡರ ಪ್ರತ್ಯಕ್ಷಾಭಿನಯಗಳನ್ನು ದೃಷ್ಟಾಂತಿಸಿ ತೋರಿಸಿ. (ಏಪ್ರಿಲ್ 1997ರ ನಮ್ಮ ರಾಜ್ಯದ ಸೇವೆಯ, ಪುಟ 8ನ್ನು ನೋಡಿ.) ರೀಸನಿಂಗ್ ಪುಸ್ತಕ ಹಾಗೂ ನಮ್ಮ ರಾಜ್ಯದ ಸೇವೆಯಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು ಕ್ಷೇತ್ರ ಸೇವೆಯಲ್ಲಿ ಸದುಪಯೋಗಿಸುವಂತೆ ಪ್ರೋತ್ಸಾಹಿಸಿ.
20 ನಿ: “ಚೆನ್ನಾಗಿ ಕಿವಿಗೊಡುವವರಾಗಿರಿ.” ಭಾಷಣ ಹಾಗೂ ಸಭಿಕರೊಂದಿಗೆ ಚರ್ಚೆ. ಸ್ಕೂಲ್ ಗೈಡ್‌ಬುಕ್ ಪುಟ 27-8, ಪ್ಯಾರಗ್ರಾಫ್ 15-17ರಲ್ಲಿ ಕೊಡಲ್ಪಟ್ಟಿರುವ ಅಂಶಗಳನ್ನು ಪುನರ್ವಿಮರ್ಶಿಸಿ. ನಮ್ಮ ಕಿವಿಗೊಡುವ ಪ್ರವೃತ್ತಿಗಳ ದೊಡ್ಡ ಪರೀಕ್ಷೆಯು, ನಾವು ಎಷ್ಟು ಜ್ಞಾಪಕದಲ್ಲಿಟ್ಟುಕೊಳ್ಳಬಲ್ಲೆವು ಎಂಬುದರ ಮೇಲೆ ಆತುಕೊಂಡಿದೆ. ಈ ದಿನ ದೇವಪ್ರಭುತ್ವ ಶಾಲೆಯಲ್ಲಿ ಭಾಗವಹಿಸಿದವರು ಕೊಟ್ಟ ಕೆಲವು ಎದ್ದುಕಾಣುವ ಅಂಶಗಳಾವುವು ಎಂಬುದನ್ನು ಮರುಜ್ಞಾಪಿಸಲು ಸಭಿಕರಿಗೆ ಆಮಂತ್ರಣವನ್ನು ನೀಡಿ.
ಸಂಗೀತ 6 (45) ಮತ್ತು ಸಮಾಪ್ತಿಯ ಪ್ರಾರ್ಥನೆ.
ಜನವರಿ 29ರಿಂದ ಆರಂಭವಾಗುವ ವಾರ
ಸಂಗೀತ 16 (143)
10 ನಿ: ಸ್ಥಳಿಕ ಪ್ರಕಟನೆಗಳು. ಜನವರಿ ತಿಂಗಳಿನ ಕ್ಷೇತ್ರ ಸೇವಾ ವರದಿಯನ್ನು ಹಾಕುವಂತೆ ಪ್ರಚಾರಕರಿಗೆ ಜ್ಞಾಪಿಸಿರಿ. ಫೆಬ್ರವರಿ ತಿಂಗಳಿಗಾಗಿರುವ ಸಾಹಿತ್ಯಗಳ ನೀಡುವಿಕೆಯ ಕುರಿತು ತಿಳಿಸಿ, ಮುಖ್ಯವಾಗಿ ಸಭೆಯ ಸ್ಟಾಕ್‌ನಲ್ಲಿ ಯಾವ ಪುಸ್ತಕಗಳಿವೆ ಎಂಬುದನ್ನು ಹೇಳಿ.
15 ನಿ: ಸೃಷ್ಟಿಕರ್ತನನ್ನು ಚೆನ್ನಾಗಿ ಅರಿತುಕೊಳ್ಳಿ. ಜೂನ್ 15, 1999ರ ಕಾವಲಿನಬುರುಜು ಪತ್ರಿಕೆಯ ಪುಟ 24-6ರಲ್ಲಿ ಕಂಡುಬರುವ ವಿಷಯದ ಮೇಲಾಧಾರಿತವಾದ ಭಾಷಣ. ನಿಮ್ಮ ಕುರಿತು ಚಿಂತಿಸುವ ಒಬ್ಬ ನಿರ್ಮಾಣಿಕನು ಇದ್ದಾನೊ? (ಇಂಗ್ಲಿಷ್) ಎಂಬ ಪುಸ್ತಕದಿಂದ ಪ್ರಾರಂಭವಾಗುವ ಸಭಾ ಅಭ್ಯಾಸವನ್ನು ಎದುರುನೋಡುವಂತೆ ಹೇಳಿ. ಪುಸ್ತಕ ಅಭ್ಯಾಸದ ಸಾಪ್ತಾಹಿಕ ಚರ್ಚೆಗಳಲ್ಲಿ ಪಾಲ್ಗೊಳ್ಳುವಂತೆ ಯುವಕರನ್ನು ಪ್ರೋತ್ಸಾಹಿಸಿ. ನಮ್ಮ ಮಹಾನ್ ನಿರ್ಮಾಣಿಕನ ಕುರಿತು ತಮ್ಮಿಂದ ಸಾಧ್ಯವಾದಷ್ಟು ಮಟ್ಟಿಗೆ ತಿಳಿದುಕೊಳ್ಳಲು ಆಸಕ್ತಿಯಿರುವವರು, ಕ್ರಮವಾಗಿ ಹಾಜರಿರಲು ಬಯಸುವರು. ನಿರ್ಮಾಣಿಕ ಪುಸ್ತಕವನ್ನು ಅಭ್ಯಾಸಿಸದಿರುವ ಸಭೆಗಳು, ನೇಮಿಸಲ್ಪಟ್ಟಿರುವ ಐದು ಬ್ರೋಷರುಗಳಲ್ಲಿರುವ ವಿಷಯವನ್ನು ಪರಿಶೀಲಿಸುವರು.
20 ನಿ: “ಹೆತ್ತವರೇ—ನಿಮ್ಮ ಮಕ್ಕಳಲ್ಲಿ ಸದಾಚಾರವನ್ನು ತುಂಬಿಸಿರಿ.” ಭಾಷಣ ಹಾಗೂ ಆತ್ಮಿಕ ರೀತಿಯಲ್ಲಿ ಚೆನ್ನಾಗಿ ನಡೆಯುತ್ತಿರುವ ಮಕ್ಕಳನ್ನು ಹೊಂದಿರುವ ಹೆತ್ತವರೊಂದಿಗೆ ಸಂದರ್ಶನ. ತಮ್ಮ ಮಕ್ಕಳು ಕ್ಷೇತ್ರ ಸೇವೆಯಲ್ಲಿ ಭಾಗವಹಿಸುವಂತೆ ಹೆತ್ತವರಾಗಿ ತಾವು ಮಾಡಿದ ಕೆಲವು ಸಕಾರಾತ್ಮಕ ವಿಷಯಗಳ ಕುರಿತು ಅವರು ಹೇಳುತ್ತಾರೆ. ಸಮಯ ಅನುಮತಿಸುವಲ್ಲಿ, ಕುಟುಂಬ ಸಂತೋಷ ಪುಸ್ತಕದ ಪುಟ 55-9ರಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು ಸೇರಿಸಿರಿ.
ಸಂಗೀತ 9 (37) ಮತ್ತು ಸಮಾಪ್ತಿಯ ಪ್ರಾರ್ಥನೆ.
ಫೆಬ್ರವರಿ 5ರಿಂದ ಆರಂಭವಾಗುವ ವಾರ
ಸಂಗೀತ 8 (53)
10 ನಿ: ಸ್ಥಳಿಕ ಪ್ರಕಟನೆಗಳು.
15 ನಿ: “ಸಂತೋಷದಿಂದ ನಡೆಯುವವರಾಗಿರಿ.”b ಒಳನೋಟ ಪುಸ್ತಕ, ಸಂಪುಟ 2, ಪುಟ 120, ಪ್ಯಾರಗ್ರಾಫ್ 6-8ರಲ್ಲಿ ವಿವರಿಸಲ್ಪಟ್ಟಿರುವಂತೆ, ದೇವರ ಸೇವೆಯಲ್ಲಿ ನಮ್ಮ ಆನಂದವನ್ನು ಯಾವುದು ಹೆಚ್ಚಿಸುತ್ತದೆ ಎಂಬುದನ್ನು ತೋರಿಸಿ.
20 ನಿ: ನೀವು ಹಿತಕರವಾದ ಮನೋರಂಜನೆಯನ್ನು ಕಂಡು ಹಿಡಿಯಬಹುದು. 1997, ಮೇ 22ರ ಎಚ್ಚರ! (ಇಂಗ್ಲಿಷ್) ಪತ್ರಿಕೆಯಲ್ಲಿ ನೀಡಲ್ಪಟ್ಟಿರುವ ಸಲಹೆಯನ್ನು ಒಂದು ಕುಟುಂಬವು ಚರ್ಚಿಸುವುದು. ಕುಟುಂಬದ ಮನೋರಂಜನೆಯ ಹವ್ಯಾಸಗಳ ಕುರಿತು ತಂದೆ ಚಿಂತೆಯುಳ್ಳವನಾಗಿದ್ದಾನೆ. “ಮನೋರಂಜನೆಗೆ ಏನು ಸಂಭವಿಸಿದೆ?” (ಪುಟ 4-7) ಎಂಬುದನ್ನು ಸಂಕ್ಷಿಪ್ತವಾಗಿ ಪರಿಶೀಲಿಸಿದ ನಂತರ, ಯಾವ ರೀತಿಯ ಮನೋರಂಜನೆಗಳು ಹಿತಕರವೂ ಉಪಯುಕ್ತವೂ ಆಗಿರುವುದು ಎಂಬುದರ ಮೇಲೆ ಗಮನವನ್ನು ಕೇಂದ್ರೀಕರಿಸುತ್ತಾರೆ. ನಮ್ಮ ಶುಶ್ರೂಷೆ ಪುಸ್ತಕದ ಪುಟ 131-2ರಲ್ಲಿ ಕಂಡುಬರುವ “ವಿನೋದ ಕಾಲಹರಣ,” ಹಾಗೂ ಪುಟ 135-6ರಲ್ಲಿ ಕಂಡುಬರುವ “ಎಲ್ಲವನ್ನೂ ದೇವರ ಘನತೆಗಾಗಿ ಮಾಡಿರಿ” ಎಂಬ ಉಪಶೀರ್ಷಿಕೆಗಳ ಕೆಳಗಿರುವ ವಿಷಯಗಳನ್ನು ಪರಿಗಣಿಸಿ. ಮನೆಯವರೆಲ್ಲರ ಪ್ರಯೋಜನಕ್ಕಾಗಿ ಹೆತ್ತವರು ಹೇಗೆ ಮುಂದಾಳುತ್ವವನ್ನು ವಹಿಸಬೇಕೆಂಬುದನ್ನು ಒತ್ತಿಹೇಳಿ, ಮತ್ತು ಕುಟುಂಬದ ಸದಸ್ಯರು ಸಹಕರಿಸಬೇಕಾದ ಆವಶ್ಯಕತೆಯನ್ನು ತೋರಿಸಿ.
ಸಂಗೀತ 11 (85) ಮತ್ತು ಸಮಾಪ್ತಿಯ ಪ್ರಾರ್ಥನೆ.
[ಅಧ್ಯಯನ ಪ್ರಶ್ನೆಗಳು]
a ಪೀಠಿಕಾ ಹೇಳಿಕೆಗಳನ್ನು ಒಂದು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಕೊಡಿ, ಅದರ ನಂತರ ಪ್ರಶ್ನೋತ್ತರಗಳ ಚರ್ಚೆ.
b ಪೀಠಿಕಾ ಹೇಳಿಕೆಗಳನ್ನು ಒಂದು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಕೊಡಿ, ಅದರ ನಂತರ ಪ್ರಶ್ನೋತ್ತರಗಳ ಚರ್ಚೆ.