ಸೇವಾ ಕೂಟದ ಶೆಡ್ಯೂಲ್
ಜೂನ್ 12ರಿಂದ ಆರಂಭವಾಗುವ ವಾರ
ಸಂಗೀತ 26 (212)
8 ನಿ:ಸ್ಥಳಿಕ ತಿಳಿಸುವಿಕೆಗಳು ಮತ್ತು ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು.
15 ನಿ:‘ನೀವು ಪಡುವ ಪ್ರಯಾಸವು ನಿಷ್ಫಲವಾಗುವದಿಲ್ಲ.’ ಪೀಠಿಕಾ ಹೇಳಿಕೆಗಳಿಗೆ ಒಂದು ನಿಮಿಷಕ್ಕಿಂತಲೂ ಕಡಿಮೆ ಸಮಯವನ್ನು ತೆಗೆದುಕೊಂಡು, ಅನಂತರ ಪ್ರಶ್ನೋತ್ತರ ಚರ್ಚೆಯೊಂದಿಗೆ ಮುಂದುವರಿಸಿರಿ. ಜೂನ್ 15, 1996ರ ಕಾವಲಿನಬುರುಜು ಪತ್ರಿಕೆಯ, 32ನೆಯ ಪುಟದಲ್ಲಿರುವ ಅನುಭವದ ಕುರಿತು ಹೇಳಿರಿ.
22 ನಿ:ಅಪೇಕ್ಷಿಸು ಬ್ರೋಷರಿನಿಂದ ಅಭ್ಯಾಸಗಳನ್ನು ಆರಂಭಿಸುವುದು. ಅಕ್ಟೋಬರ್ 1999ರ ನಮ್ಮ ರಾಜ್ಯದ ಸೇವೆಯ 8ನೆಯ ಪುಟದಲ್ಲಿರುವ ಲೇಖನವನ್ನು ಪುನರ್ವಿಮರ್ಶಿಸುತ್ತಾ ಒಂದು ಭಾಷಣ. 6ನೆಯ ಪ್ಯಾರಗ್ರಾಫ್‌ನಲ್ಲಿ ಸೂಚಿಸಲ್ಪಟ್ಟಿರುವ ನಿರೂಪಣೆಯನ್ನು ಪ್ರತ್ಯಕ್ಷಾಭಿನಯಿಸಿರಿ. ಅಭ್ಯಾಸಗಳನ್ನು ಆರಂಭಿಸುವುದರಲ್ಲಿ ಸಫಲರಾಗಿರುವ ಒಬ್ಬ ಅಥವಾ ಇಬ್ಬರು ಪ್ರಚಾರಕರು ತಮ್ಮ ಅನುಭವವನ್ನು ತಿಳಿಸಲಿ. ಅವರು ಅಭ್ಯಾಸಕ್ಕೆ ಹೇಗೆ ಪೀಠಿಕೆ ಹಾಕಿದರು ಮತ್ತು ಪ್ರತಿ ವಾರ ಅದನ್ನು ಮುಂದುವರಿಸಿಕೊಂಡು ಹೋಗಲಿಕ್ಕಾಗಿ ಏನು ಮಾಡಿದರೆಂಬುದನ್ನು ಹೇಳಲಿ.
ಸಂಗೀತ 3 (32) ಮತ್ತು ಸಮಾಪ್ತಿಯ ಪ್ರಾರ್ಥನೆ.
ಜೂನ್ 19ರಿಂದ ಆರಂಭವಾಗುವ ವಾರ
ಸಂಗೀತ (8) 53
12 ನಿ:ಸ್ಥಳಿಕ ತಿಳಿಸುವಿಕೆಗಳು. ಅಕೌಂಟ್ಸ್ ವರದಿ ಮತ್ತು ಮೂರು ತಿಂಗಳಿಗೊಮ್ಮೆ ನಡೆಯುವ ಅಕೌಂಟ್ಸ್ ಆಡಿಟ್‌ನ ಪ್ರಕಟನೆ. ಸಭೆಯಲ್ಲಿ ಯುವ ಜನರ ಪ್ರಶ್ನೆಗಳು ಅಥವಾ ಯೂತ್ ಪುಸ್ತಕಗಳ ಸ್ಟಾಕ್ ಇರುವಲ್ಲಿ, ಮುಂದಿನ ತಿಂಗಳುಗಳಲ್ಲಿ ಅವುಗಳನ್ನು ಶುಶ್ರೂಷೆಯಲ್ಲಿ ಹೇಗೆ ಉಪಯೋಗಿಸಬಹುದೆಂಬುದನ್ನು ಪ್ರತ್ಯಕ್ಷಾಭಿನಯಿಸಿರಿ.
8 ನಿ:ಪ್ರಶ್ನಾ ರೇಖಾಚೌಕ. ಹಿರಿಯನಿಂದ ಭಾಷಣ.
25 ನಿ:‘ಯಾರಾದರೂ ನನಗೆ ಅರ್ಥ ತಿಳಿಸಿಕೊಟ್ಟ ಹೊರತು ಅದು ನನಗೆ ಹೇಗೆ ತಿಳಿದೀತು?’ ಸೇವಾ ಮೇಲ್ವಿಚಾರಕನಿಂದ ನಡೆಸಲ್ಪಡುವ ಪ್ರಶ್ನೋತ್ತರ ಚರ್ಚೆ. ಪ್ರತಿಯೊಂದು ಪ್ಯಾರಗ್ರಾಫನ್ನು ಗಟ್ಟಿಯಾಗಿ ಓದಿಸಿರಿ ಮತ್ತು 3, 4, ಹಾಗೂ 7ನೆಯ ಪ್ಯಾರಗ್ರಾಫ್‌ಗಳಲ್ಲಿ ಕೊಡಲ್ಪಟ್ಟಿರುವ ಶಾಸ್ತ್ರವಚನಗಳನ್ನು ಓದಿರಿ. 6ನೆಯ ಪ್ಯಾರಗ್ರಾಫನ್ನು ಚರ್ಚಿಸುತ್ತಿರುವಾಗ, ದೀಕ್ಷಾಸ್ನಾನವನ್ನು ಪಡೆದುಕೊಂಡಿರುವ ಜನರೊಂದಿಗೆ ವೈಯಕ್ತಿಕ ಬೈಬಲ್ ಅಭ್ಯಾಸಗಳನ್ನು ಪುನಃ ಆರಂಭಿಸಬೇಕೋ ಇಲ್ಲವೋ ಎಂಬುದನ್ನು ನಿರ್ಧರಿಸುವುದರಲ್ಲಿ ಸೇವಾ ಮೇಲ್ವಿಚಾರಕನ ಪಾತ್ರವನ್ನು ವಿವರಿಸಿರಿ.—ನವೆಂಬರ್ 1998ರ ನಮ್ಮ ರಾಜ್ಯದ ಸೇವೆಯಲ್ಲಿರುವ ಪ್ರಶ್ನಾ ರೇಖಾಚೌಕವನ್ನು ನೋಡಿರಿ.
ಸಂಗೀತ 21 (191) ಮತ್ತು ಸಮಾಪ್ತಿಯ ಪ್ರಾರ್ಥನೆ.
ಜೂನ್ 26ರಿಂದ ಆರಂಭವಾಗುವ ವಾರ
ಸಂಗೀತ 4 (43)
10 ನಿ:ಸ್ಥಳಿಕ ತಿಳಿಸುವಿಕೆಗಳು. ಜೂನ್ ತಿಂಗಳಿನ ಕ್ಷೇತ್ರ ಸೇವಾ ವರದಿಗಳನ್ನು ಹಾಕುವಂತೆ ಪ್ರಚಾರಕರಿಗೆ ಜ್ಞಾಪಕಹುಟ್ಟಿಸಿರಿ. ಜುಲೈ ತಿಂಗಳ ಸಾಹಿತ್ಯ ನೀಡುವಿಕೆಯನ್ನು ತಿಳಿಸಿರಿ. ಸ್ಥಳಿಕವಾಗಿ ಲಭ್ಯವಿರುವ ಹಳೆಯ ಬ್ರೋಷರುಗಳನ್ನು ತೋರಿಸಿ, ಅವುಗಳಲ್ಲಿ ಪ್ರತಿಯೊಂದು ಬ್ರೋಷರಿನ ಉದ್ದೇಶವೇನಾಗಿದೆಯೆಂಬುದನ್ನು ತಿಳಿಸಿರಿ. ಅವುಗಳಲ್ಲಿ ಯಾವುದೇ ಒಂದು ಬ್ರೋಷರನ್ನು ಶುಶ್ರೂಷೆಯಲ್ಲಿ ಹೇಗೆ ನೀಡುವುದೆಂಬುದನ್ನು ತೋರಿಸುವ, ಚೆನ್ನಾಗಿ ತಯಾರಿಸಲ್ಪಟ್ಟ ಒಂದು ಪ್ರತ್ಯಕ್ಷಾಭಿನಯವಿರಲಿ.
18 ನಿ:ಯಾವ ರೀತಿಯಲ್ಲಿ ಉತ್ತರ ಹೇಳಬೇಕೊ ಅದನ್ನು ತಿಳಿದುಕೊಳ್ಳಿರಿ. (ಕೊಲೊ. 4:6) ಭಾಷಣ ಮತ್ತು ಸಭಿಕರೊಂದಿಗೆ ಚರ್ಚೆ. ಅಶಾಸ್ತ್ರೀಯವಾಗಿರುವ ಒಂದು ವಿಷಯದ ಕುರಿತು ವಾದಮಾಡುವ ಒಬ್ಬ ವ್ಯಕ್ತಿಯನ್ನು ಭೇಟಿಯಾದಾಗ ನೀವೇನು ಮಾಡುತ್ತೀರಿ? ಜಾಣ್ಮೆಯುಳ್ಳ ಉತ್ತರವನ್ನು ಹೇಗೆ ಕೊಡಬೇಕೆಂಬುದರ ಬಗ್ಗೆ ವ್ಯಾವಹಾರಿಕವಾದ ಸಲಹೆಗಳನ್ನು ಒದಗಿಸುವ ಮೂಲಕ ರೀಸನಿಂಗ್ ಪುಸ್ತಕ ನಮಗೆ ಸಹಾಯಮಾಡುತ್ತದೆ. ಉದಾಹರಣೆಗೆ, ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞವು ಮರಣವೆಂಬ ಶತ್ರುವನ್ನು ಜಯಿಸಬಲ್ಲದೆಂದು ನಾವು ನಂಬುತ್ತೇವೆ. ಆದರೆ ಬೇರೆಯವರು, ಮರಣವನ್ನು ಯಾರೂ ಅಥವಾ ಯಾವುದೂ ತೆಗೆದುಹಾಕಸಾಧ್ಯವಿಲ್ಲವೆಂದು ನೆನಸುತ್ತಾರೆ. ರೀಸನಿಂಗ್ ಪುಸ್ತಕದ 103-4 ಮತ್ತು 321ನೆಯ ಪುಟಗಳಲ್ಲಿ “ಯಾರಾದರೂ ಹೀಗೆ ಹೇಳುವಲ್ಲಿ—” ಎಂಬ ಭಾಗದಲ್ಲಿ ಕೊಡಲ್ಪಟ್ಟಿರುವ ಉತ್ತರಗಳನ್ನು ಚರ್ಚಿಸಿರಿ. ಕ್ಷೇತ್ರ ಸೇವೆಗೆ ಹೋಗುವಾಗ ಎಲ್ಲರೂ ಈ ಪುಸ್ತಕವನ್ನು ತಮ್ಮೊಂದಿಗೆ ಇಟ್ಟುಕೊಳ್ಳುವಂತೆ ಉತ್ತೇಜಿಸಿರಿ.
17 ನಿ:“ನೀವು ಅಲ್ಲಿ ಹಾಜರಿರುವಿರೊ?” ಭಾಷಣ ಮತ್ತು ಅನುಭವಗಳು. ಒಬ್ಬ ಹಿರಿಯನು ಈ ಭಾಗವನ್ನು ನಿರ್ವಹಿಸುತ್ತಾನೆ. ಬೈಬಲ್ ಸಮಯಗಳಿಂದ ಹಿಡಿದು ನಮ್ಮ ದಿನಗಳ ವರೆಗೆ, ದೇವರ ಜನರನ್ನು ಬಲಪಡಿಸುವುದರಲ್ಲಿ ದೊಡ್ಡ ದೊಡ್ಡ ಕೂಟಗಳು ಒಂದು ಪ್ರಧಾನ ಪಾತ್ರವನ್ನು ವಹಿಸಿವೆ. (ಪ್ರೊಕ್ಲೈಮರ್ಸ್ ಪುಸ್ತಕ, ಪುಟ 254, 1-3ನೆಯ ಪ್ಯಾರಗ್ರಾಫ್‌ಗಳು, ಮತ್ತು ಇನ್‌ಸೈಟ್ ಸಂಪುಟ 1, ಪುಟ 821, 5ನೆಯ ಪ್ಯಾರಗ್ರಾಫನ್ನು ನೋಡಿರಿ.) ಈ ವರ್ಷದ ಜಿಲ್ಲಾ ಅಧಿವೇಶನದ ಎಲ್ಲ ಮೂರು ದಿನಗಳಿಗೆ ಹಾಜರಾಗಿರಲು ಈಗಲೇ ತಯಾರಿಗಳನ್ನು ಮಾಡಲಾರಂಭಿಸಲು ಎಲ್ಲರನ್ನೂ ಉತ್ತೇಜಿಸಿರಿ. ಹಿಂದಿನ ವರ್ಷಗಳಲ್ಲಿ ಅಧಿವೇಶನಗಳಿಗೆ ಹಾಜರಾಗಲು ಮಾಡಿದ ಶ್ರದ್ಧಾಪೂರ್ವಕ ಪ್ರಯತ್ನಗಳಿಗೆ ಸಿಕ್ಕಿದ ಆತ್ಮಿಕ ಪ್ರತಿಫಲಗಳ ಕುರಿತಾದ ಅನುಭವಗಳನ್ನು ತಿಳಿಸುವಂತೆ ಸಭಿಕರನ್ನು ಆಮಂತ್ರಿಸಿರಿ.
ಸಂಗೀತ 6 (45) ಮತ್ತು ಸಮಾಪ್ತಿಯ ಪ್ರಾರ್ಥನೆ.
ಜುಲೈ 3ರಿಂದ ಆರಂಭವಾಗುವ ವಾರ
ಸಂಗೀತ 23 (200)
10 ನಿ:ಸ್ಥಳಿಕ ತಿಳಿಸುವಿಕೆಗಳು. ಅಪೇಕ್ಷಿಸು ಬ್ರೋಷರಿನಲ್ಲಿ ಬೈಬಲ್ ಅಭ್ಯಾಸಗಳನ್ನು ಆರಂಭಿಸುವುದು ಹೇಗೆ ಸಾಧ್ಯವಾಯಿತು ಎಂದು, ಈಗಾಗಲೇ ಅಭ್ಯಾಸಗಳನ್ನು ಆರಂಭಿಸಿರುವ ಪ್ರಚಾರಕರು ಹೇಳುವಂತೆ ಕರೆಕೊಡಿರಿ.
15 ನಿ:ಸ್ಥಳಿಕ ಅಗತ್ಯಗಳು.
20 ನಿ:ಬೈಬಲ್ ಮೂಲತತ್ವಗಳನ್ನು ಅನ್ವಯಿಸುವುದು, ಕುಟುಂಬ ಜೀವನವನ್ನು ಬಲಪಡಿಸುತ್ತದೆ. ಇಬ್ಬರು ಸಹೋದರರು, ರೀಸನಿಂಗ್ ಪುಸ್ತಕದ 253-4ನೆಯ ಪುಟಗಳಲ್ಲಿರುವ ಎಂಟು ಪಾಯಿಂಟ್‌ಗಳ ಆಧಾರದಿಂದ ಚರ್ಚೆ ನಡೆಸುತ್ತಾರೆ. ದೇವರ ವಾಕ್ಯದಲ್ಲಿರುವ ಮೂಲತತ್ವಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಅನ್ವಯಿಸುವುದರಲ್ಲೇ, ಕುಟುಂಬ ಸಂತೋಷದ ರಹಸ್ಯವು ಅಡಗಿದೆಯೆಂಬುದನ್ನು ಬೈಬಲ್ ವಿದ್ಯಾರ್ಥಿಗಳಿಗೆ ಕಲಿಯಲಿಕ್ಕೆ ಸಹಾಯಮಾಡುವ ಮಹತ್ವವನ್ನು ವಿವರಿಸಿರಿ. ಅಪೇಕ್ಷಿಸು ಬ್ರೋಷರಿನಲ್ಲಿ 8ನೆಯ ಪಾಠವನ್ನು ಉಪಯೋಗಿಸಿ ಇದನ್ನು ಹೇಗೆ ಮಾಡಸಾಧ್ಯವಿದೆಯೆಂಬುದನ್ನು ಪ್ರತ್ಯಕ್ಷಾಭಿನಯಿಸಿರಿ. ಬೈಬಲಿನ ಸಲಹೆಗೆ ಪ್ರತಿಕ್ರಿಯೆಯನ್ನು ತೋರಿಸುವ ಕುಟುಂಬಗಳು ಒಟ್ಟುಗೂಡಿಸಲ್ಪಟ್ಟು, ಪ್ರೀತಿ ಮತ್ತು ಐಕ್ಯತೆಯ ನಿಕಟವಾದ ಬಂಧಗಳಲ್ಲಿ ಹೆಚ್ಚಿನ ಆನಂದವನ್ನು ಕಂಡುಕೊಳ್ಳುತ್ತವೆ. ಕುಟುಂಬ ಸಂತೋಷ ಪುಸ್ತಕದ, 13ನೆಯ ಅಧ್ಯಾಯದ 1, 21-2ನೆಯ ಪ್ಯಾರಗ್ರಾಫ್‌ಗಳಲ್ಲಿರುವ ಅನುಭವವನ್ನು ತಿಳಿಸಿರಿ.
ಸಂಗೀತ 7 (51) ಮತ್ತು ಸಮಾಪ್ತಿಯ ಪ್ರಾರ್ಥನೆ.