ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 6/00 ಪು. 1
  • ನೀವು ಅಲ್ಲಿ ಹಾಜರಿರುವಿರೊ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನೀವು ಅಲ್ಲಿ ಹಾಜರಿರುವಿರೊ?
  • 2000 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • 1993ರ “ದೈವಿಕ ಬೋಧನ” ಯೆಹೋವನ ಸಾಕ್ಷಿಗಳ ಜಿಲ್ಲಾ ಅಧಿವೇಶನ ಇಸವಿ 1993ರ “ದೈವಿಕ ಬೋಧನೆ” ಜಿಲ್ಲಾ ಅಧಿವೇಶನದಿಂದ ಪೂರ್ಣ ಪ್ರಯೋಜನ ಪಡೆಯಿರಿ
    1993 ನಮ್ಮ ರಾಜ್ಯದ ಸೇವೆ
  • “ಬಿಡುಗಡೆಯು ಸಮೀಪವಿದೆ” 2006ನೇ ಇಸವಿಯ ಯೆಹೋವನ ಸಾಕ್ಷಿಗಳ ಜಿಲ್ಲಾ ಅಧಿವೇಶನ
    2005 ನಮ್ಮ ರಾಜ್ಯದ ಸೇವೆ
  • 1998 “ದೇವರ ಜೀವನ ಮಾರ್ಗ” ಜಿಲ್ಲಾ ಅಧಿವೇಶನಗಳು
    1998 ನಮ್ಮ ರಾಜ್ಯದ ಸೇವೆ
  • 1990ರ “ಶುದ್ಧಭಾಷೆ” ಜಿಲ್ಲಾ ಅಧಿವೇಶನಕ್ಕೆ ಬನ್ನಿರಿ
    1990 ನಮ್ಮ ರಾಜ್ಯದ ಸೇವೆ
ಇನ್ನಷ್ಟು
2000 ನಮ್ಮ ರಾಜ್ಯದ ಸೇವೆ
km 6/00 ಪು. 1

ನೀವು ಅಲ್ಲಿ ಹಾಜರಿರುವಿರೊ?

1 ಬಹಳ ಸಮಯದಿಂದ ಸತ್ಯದಲ್ಲಿರುವ ಒಬ್ಬ ಯೆಹೋವನ ಸಾಕ್ಷಿಯು ಹೇಳಿದ್ದು: “ಅಧಿವೇಶನದ ಮೊದಲನೆಯ ದಿನಕ್ಕೇ ನೀವು ಹಾಜರಾಗದಿರುವಲ್ಲಿ, ಬಹಳಷ್ಟು ವಿಷಯಗಳನ್ನು ಕೇಳಿಸಿಕೊಳ್ಳುವುದರಲ್ಲಿ ನೀವು ತಪ್ಪಿಹೋಗುವಿರಿ!” ಅವನಿಗೆ ಏಕೆ ಹೀಗನಿಸಿತು? ಏಕೆಂದರೆ, ಅಧಿವೇಶನದ ಮೊದಲನೆಯ ದಿನವು, ಯೆಹೋವನ ಸಂಸ್ಥೆಯು ನಮಗೋಸ್ಕರ ಸಿದ್ಧಪಡಿಸಿರುವ ಸಮೃದ್ಧ ಆತ್ಮಿಕ ಔತಣದ ಆರಂಭವಾಗಿದೆ. (ಯೆಶಾ. 25:6) ಮೊದಲನೆಯ ದಿನದಿಂದಲೇ ನಾವು ಅಲ್ಲಿ ಹಾಜರಿರುವ ಮೂಲಕ, ಕೀರ್ತನೆಗಾರನಿಗಿದ್ದಂತಹ ಅನಿಸಿಕೆಯೇ ನಮಗಿದೆ ಎಂಬುದನ್ನು ನಾವು ತೋರಿಸಿಕೊಡುತ್ತೇವೆ. ಕೀರ್ತನೆಗಾರನು ಹೇಳಿದ್ದು: “ಯೆಹೋವನ ಮಂದಿರಕ್ಕೆ ಹೋಗೋಣ, ಬಾ ಎಂದು ಜನರು ನನ್ನನ್ನು ಕರೆದಾಗ ನನಗೆ ಸಂತೋಷವಾಯಿತು.”—ಕೀರ್ತ. 122:1.

2 ಆದರೂ, ಕಳೆದ ವರ್ಷ ನಡೆದ “ದೇವರ ಪ್ರವಾದನ ವಾಕ್ಯ” ಎಂಬ ಕೆಲವು ಜಿಲ್ಲಾ ಅಧಿವೇಶನಗಳಲ್ಲಿ, ಶುಕ್ರವಾರದಂದು ತುಂಬ ಕಡಿಮೆ ಹಾಜರಿಯಿತ್ತು. ಅಂದರೆ ಶನಿವಾರ ಮತ್ತು ಭಾನುವಾರಗಳಲ್ಲಿ ಹೆಚ್ಚು ಜನರು ಹಾಜರಿದ್ದರು. ಈ ಅಧಿವೇಶನದಲ್ಲಿ ಪ್ರವಾದನ ವಾಕ್ಯದ ಕುರಿತು ಅತ್ಯಾವಶ್ಯಕವಾದ ಮಾಹಿತಿಯನ್ನು ನೀಡಿದ ಭಾಷಣಗಳನ್ನು ನಮ್ಮ ಸಹೋದರರಲ್ಲಿ ಅನೇಕರು ಕೇಳಿಸಿಕೊಳ್ಳಲು ತಪ್ಪಿಹೋದರು ಎಂಬುದು ಇದರಿಂದ ತಿಳಿದುಬರುತ್ತದೆ. ಆ ದಿನದಂದು ಜೊತೆ ವಿಶ್ವಾಸಿಗಳೊಂದಿಗೆ ಸಹವಾಸಮಾಡುವ ಸುಯೋಗವು ಸಹ ಅವರ ಕೈತಪ್ಪಿಹೋಯಿತು.

3 ನಿಮ್ಮ ಐಹಿಕ ಕೆಲಸವು ಅಡ್ಡಬರುವಂತೆ ಬಿಡಬೇಡಿ: ತಮ್ಮ ಕೆಲಸವನ್ನು ಕಳೆದುಕೊಳ್ಳುವೆವು ಎಂಬ ಚಿಂತೆಯಿಂದಲೇ ಕೆಲವರು ಶುಕ್ರವಾರದಂದು ಅಧಿವೇಶನವನ್ನು ತಪ್ಪಿಸಿಕೊಂಡಿದ್ದಿರಬಹುದು. ಆದರೂ, ಸಾಕಷ್ಟು ಸಮಯಕ್ಕೆ ಮುಂಚೆಯೇ ರಜೆಯನ್ನು ಕೇಳಿಕೊಳ್ಳುವಲ್ಲಿ, ತಮ್ಮ ಧಣಿಗಳು ರಜೆಯನ್ನು ಕೊಡಲು ಸಿದ್ಧರಿರುತ್ತಾರೆ ಎಂಬುದು ಅನೇಕ ಸಾಕ್ಷಿಗಳ ಅನುಭವವಾಗಿದೆ. ಒಬ್ಬ ಪಯನೀಯರ್‌ ಸಹೋದರಿಯು ಎಲ್ಲ ಸಭಾ ಕೂಟಗಳಿಗೆ ಮತ್ತು ಸಮ್ಮೇಳನಗಳಿಗೆ ತಪ್ಪದೆ ಹಾಜರಾಗುತ್ತಿದ್ದಳು. ಇದನ್ನು ನೋಡಿ ಅವಳ ಧಣಿಯು ಎಷ್ಟು ಪ್ರಭಾವಿತನಾದನೆಂದರೆ, ಅವನು ಸಹ ಅವಳೊಂದಿಗೆ ಅಧಿವೇಶನಕ್ಕೆ ಹಾಜರಾಗಿ, ಇಡೀ ದಿನ ಅಲ್ಲಿದ್ದನು!

4 ನಾನು ರಜೆಯನ್ನು ಕೇಳಿದರೆ ನನ್ನ ಧಣಿಯು ರಜೆಯನ್ನು ಕೊಡದಿರಬಹುದು ಎಂದು ಸ್ವತಃ ನೀವೇ ಭಾವಿಸಿಕೊಳ್ಳಬಾರದು. ಅಥವಾ, ಒಂದು ದಿನ ಅಧಿವೇಶನಕ್ಕೆ ಹೋಗದಿದ್ದರೆ ಏನೂ ಆಗುವುದಿಲ್ಲ ಎಂದು ಭಾವಿಸಬಾರದು. ಅದಕ್ಕೆ ಬದಲು, ಅಧಿವೇಶನಕ್ಕೆ ಹಾಜರಾಗುವುದು ಏಕೆ ನಿಮ್ಮ ಆರಾಧನೆಯ ಪ್ರಮುಖ ಭಾಗವಾಗಿದೆ ಎಂಬುದನ್ನು ಮನಃಪೂರ್ವಕವಾದ ನಿಶ್ಚಿತಾಭಿಪ್ರಾಯದೊಂದಿಗೆ, ಶಾಸ್ತ್ರವಚನದಿಂದ ಜಾಣ್ಮೆಯಿಂದ ನಿಮ್ಮ ಧಣಿಗೆ ತೋರಿಸಲು ಸಿದ್ಧರಾಗಿರಿ. (ಇಬ್ರಿ. 10:24, 25) ತದನಂತರ ಯೆಹೋವನ ವಾಗ್ದಾನಗಳ ಮೇಲೆ ಪೂರ್ಣವಾಗಿ ಭರವಸೆಯಿಡಿರಿ. ಮತ್ತು ನೀವು ನಿಮ್ಮ ಜೀವಿತದಲ್ಲಿ ಆತ್ಮಿಕತೆಗೆ ಪ್ರಥಮ ಸ್ಥಾನವನ್ನು ಕೊಡುವಲ್ಲಿ, ಭೌತಿಕವಾಗಿ ನಿಮಗೆ ಏನೇ ಅಗತ್ಯವಿದ್ದರೂ ದೇವರು ಅದನ್ನು ಒದಗಿಸುವನು ಎಂಬುದನ್ನು ತಿಳಿದುಕೊಂಡಿರಿ.—ಮತ್ತಾ. 6:33; ಇಬ್ರಿ. 13:5, 6.

5 “ಹೆಚ್ಚು ಪ್ರಾಮುಖ್ಯವಾದ ವಿಷಯ”ಗಳಿಗಾಗಿ ಗಣ್ಯತೆಯನ್ನು ತೋರಿಸುವುದೇ ಮುಖ್ಯ ಅಂಶವಾಗಿದೆ. (ಫಿಲಿ. 1:10, 11, NW; ಕೀರ್ತ. 27:4) ಯೆಹೋವನ ಈ ಪ್ರಾಮುಖ್ಯ ಒದಗಿಸುವಿಕೆಯಿಂದ ಪೂರ್ಣವಾಗಿ ಪ್ರಯೋಜನವನ್ನು ಪಡೆದುಕೊಳ್ಳಲಿಕ್ಕಾಗಿ ಯೋಜನೆಗಳನ್ನು ಮಾಡುವಂತೆ ಇದು ನಮ್ಮನ್ನು ಪ್ರಚೋದಿಸುತ್ತದೆ. ಈಗಲೇ ನಿಶ್ಚಿತ ಯೋಜನೆಗಳನ್ನು ಮಾಡಿ, ಅಧಿವೇಶನದಲ್ಲಿ ಎಲ್ಲ ಮೂರು ದಿನ ನೀವು ಖಂಡಿತವಾಗಿಯೂ ಹಾಜರಿರಬೇಕು ಎಂಬ ದೃಢನಿಶ್ಚಯವನ್ನು ಮಾಡಿರಿ!

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ