ದೇವಪ್ರಭುತ್ವ ಶುಶ್ರೂಷಾ ಶಾಲಾ ಪುನರ್ವಿಮರ್ಶೆ
ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿ ಜನವರಿ 6ರಿಂದ ಎಪ್ರಿಲ್ 21, 1997ರ ವರೆಗಿನ ವಾರಗಳ ನೇಮಕಗಳಲ್ಲಿ ಆವರಿತವಾದ ವಿಷಯದ ಮೇಲೆ ಮುಚ್ಚು-ಪುಸ್ತಕ ಪುನರ್ವಿಮರ್ಶೆ. ಕೊಡಲ್ಪಟ್ಟ ಸಮಯದಲ್ಲಿ ನಿಮ್ಮಿಂದಾದಷ್ಟು ಹೆಚ್ಚು ಪ್ರಶ್ನೆಗಳಿಗೆ ಉತ್ತರ ಬರೆಯಲು ಒಂದು ಪ್ರತ್ಯೇಕ ಕಾಗದದ ಹಾಳೆಯನ್ನು ಉಪಯೋಗಿಸಿರಿ.
[ಸೂಚನೆ: ಲಿಖಿತ ಪುನರ್ವಿಮರ್ಶೆಯ ಸಮಯದಲ್ಲಿ ಯಾವುದೇ ಪ್ರಶ್ನೆಯನ್ನು ಉತ್ತರಿಸಲು ಬೈಬಲನ್ನು ಮಾತ್ರವೇ ಉಪಯೋಗಿಸಬಹುದು. ಪ್ರಶ್ನೆಗಳನ್ನು ಹಿಂಬಾಲಿಸುವ ನಿರ್ದೇಶನಗಳು ನಿಮ್ಮ ವೈಯಕ್ತಿಕ ಸಂಶೋಧನೆಗಾಗಿ ಕೊಡಲ್ಪಟ್ಟಿವೆ. ದ ವಾಚ್ಟವರ್ನ ಎಲ್ಲ ನಿರ್ದೇಶನೆಗಳಲ್ಲಿ ಪುಟ ಮತ್ತು ಪ್ಯಾರಗ್ರಾಫ್ ನಂಬ್ರಗಳು ಇಲ್ಲದಿರಬಹುದು.]
ಕೆಳಗಿನ ಹೇಳಿಕೆಗಳಲ್ಲಿ ಪ್ರತಿಯೊಂದನ್ನು ಸರಿ ಅಥವಾ ತಪ್ಪು ಎಂದುತ್ತರಿಸಿರಿ:
1. ನಾವು ವೈಯಕ್ತಿಕ ತಪ್ಪುಗಳನ್ನು ಒಪ್ಪಿಕೊಳ್ಳಲು ಹಾಗೂ ಸಲಹೆಯನ್ನು ಅಂಗೀಕರಿಸಲು, ಅಹಂಕಾರವು ತಡೆಗಟ್ಟಾಗಿ ಪರಿಣಮಿಸಸಾಧ್ಯವಿದೆ. [2, rs ಪು. 391 ಪ್ಯಾರ. 1]
2. ಯೇಸು ಮೃತಪಟ್ಟು, ಪ್ರಾಯಶ್ಚಿತ್ತವನ್ನು ಒದಗಿಸಿದ ವರೆಗೆ, ಭೂಮಿಯಲ್ಲಿರುವ ಯಾವುದೇ ಅಧಿಕಾರಕ್ಕೆ ಪಾಪಗಳನ್ನು ಕ್ಷಮಿಸಸಾಧ್ಯವಿರಲಿಲ್ಲ. [8, ವಾರದ ಬೈಬಲ್ ವಾಚನ; ಕಾ96 4/15 ಪು. 29ನ್ನು ನೋಡಿರಿ.]
3. ಜೆಕರ್ಯ 9:2-4ರ ನೆರವೇರಿಕೆಯಲ್ಲಿ, ತೂರ್ ಪಟ್ಟಣವು ನೆಬೂಕದ್ನೆಚ್ಚರನಿಂದ ಸಂಪೂರ್ಣವಾಗಿ ನಾಶಮಾಡಲ್ಪಟ್ಟಿತು. [1, si ಪು. 169 ಪ್ಯಾರ. 4]
4. ದೀಕ್ಷಾಸ್ನಾನವು ರಕ್ಷಣೆಯ ಒಂದು ಖಾತ್ರಿಯಾಗಿದೆ. [15, uw ಪು. 100 ಪ್ಯಾರ. 12]
5. ತಾವು ಮುನ್ನುಡಿದ ಹವಾಮಾನಕ್ಕಾಗಿ ವಾಯುಲಕ್ಷಣ ಶಾಸ್ತ್ರಜ್ಞರು ಹೇಗೆ ದೂಷಣಾರ್ಹರಾಗಿಲ್ಲವೋ, ಹಾಗೆಯೇ ನಮ್ಮ ದಿನಕ್ಕಾಗಿ ಮುಂತಿಳಿಸಲ್ಪಟ್ಟಿರುವ “ನೈಸರ್ಗಿಕ ವಿಪತ್ತುಗಳಿ”ಗಾಗಿ ದೇವರು ದೂಷಣಾರ್ಹನಲ್ಲ. [12, rs ಪು. 398 ಪ್ಯಾರಾಗಳು. 1-3]
6. ಅಪರಿಪೂರ್ಣ ಮಾನವರ ಎಲ್ಲಾ ಪಾಪಗಳು ಪ್ರಾಯಶ್ಚಿತ್ತದಿಂದ ಆವರಿಸಲ್ಪಡುತ್ತವೆ. [10, ವಾರದ ಬೈಬಲ್ ವಾಚನ; ಕಾ95 12/15 ಪು. 29ನ್ನು ನೋಡಿರಿ.]
7. ಮತ್ತಾಯ 25:31-46ರಲ್ಲಿ ಉಲ್ಲೇಖಿಸಲ್ಪಟ್ಟಿರುವ “ಆಡುಗಳ”ಲ್ಲಿ, ನಿತ್ಯನಾಶನವನ್ನು ಅನುಭವಿಸುವವರು, ಮಹಾ ಬಾಬೆಲಿನ ಕ್ರಿಯಾಶೀಲ ಸದಸ್ಯರೂ ಅವರ ಧಾರ್ಮಿಕ ಮುಖಂಡರೂ ಆಗಿರುವರು. [16, ವಾರದ ಬೈಬಲ್ ವಾಚನ; ಕಾ95 10/15 ಪು. 26 ಪ್ಯಾರಾಗಳು. 13-15 ನ್ನು ನೋಡಿರಿ.]
8. ಮತ್ತಾಯ 23:33ರಲ್ಲಿ ದಾಖಲಿಸಲ್ಪಟ್ಟಿರುವ ಯೇಸುವಿನ ಮಾತುಗಳು, ಒಂದು ಗುಂಪಿನೋಪಾದಿ ಶಾಸ್ತ್ರಿಗಳು ಹಾಗೂ ಫರಿಸಾಯರು ಸರ್ಪನ ಸಂತತಿಯ ಭಾಗವಾಗಿದ್ದರು ಎಂಬುದನ್ನು ಸೂಚಿಸುತ್ತವೆ. [15, ವಾರದ ಬೈಬಲ್ ವಾಚನ; ಕಾ96 6/1 ಪು. 11, ಪ್ಯಾರ. 11 ನ್ನು ನೋಡಿರಿ.]
9. ಇತರರನ್ನು ಕ್ಷಮಿಸುವುದು, ದೇವರು ನಮ್ಮ ಪಾಪಗಳನ್ನು ಕ್ಷಮಿಸುವಂತೆ ಸಾಧ್ಯಮಾಡುತ್ತದೆ. [7, ವಾರದ ಬೈಬಲ್ ವಾಚನ; ಕಾ94 9/15 ಪು. 7 ನ್ನು ನೋಡಿರಿ.]
10. ಮರಣಕ್ಕಾಗಿ ಯೇಸುವಿನ ದೀಕ್ಷಾಸ್ನಾನವು ಸಾ.ಶ. 29ರಲ್ಲಿ ಆರಂಭವಾಗಿ, ಅವನು ವಾಸ್ತವವಾಗಿ ಮೃತಪಟ್ಟು, ಪುನರುತ್ಥಾನಗೊಳಿಸಲ್ಪಟ್ಟ ವರೆಗೆ ಪೂರ್ಣಗೊಳ್ಳಲಿಲ್ಲ. [13, uw ಪು. 97 ಪ್ಯಾರ. 6]
ಕೆಳಗಿನ ಪ್ರಶ್ನೆಗಳನ್ನು ಉತ್ತರಿಸಿರಿ:
11. ಈ ಸಮಯದಲ್ಲಿ ಮಾನವರು ಯಾವ ವಿಧಗಳಲ್ಲಿ ಯೇಸುವಿನ ಯಜ್ಞದಿಂದ ಪ್ರಯೋಜನವನ್ನು ಪಡೆದುಕೊಳ್ಳುತ್ತಾರೆ? [10, kl ಪು. 68-9 ಪ್ಯಾರಾಗಳು. 17-19]
12. ಯೇಸು ಕ್ರಿಸ್ತನಿಂದ ಪೂರೈಸಲ್ಪಟ್ಟ ಯಾವ ಎರಡು ಪಾತ್ರಗಳು, ಜೆಕರ್ಯ 6:12, 13ರಲ್ಲಿ ವಿವರಿಸಲ್ಪಟ್ಟಿದ್ದವು? [3, si ಪು. 172 ಪ್ಯಾರ. 25]
13. ರಾಜ್ಯ ಸೇವೆಯಲ್ಲಿ ಹೆಚ್ಚನ್ನು ಮಾಡಬಲ್ಲರು ಎಂದು ನಾವೆಣಿಸುವವರನ್ನು ಟೀಕಿಸುವ ಬದಲಾಗಿ, ನಾವು ವೈಯಕ್ತಿಕವಾಗಿ ಏನು ಮಾಡಬೇಕು? (ಗಲಾ. 6:4) [11, uw ಪು. 93 ಪ್ಯಾರ. 13]
14. ಜೆಕರ್ಯನು ಕನಿಕರವೆಂಬ ಕೋಲನ್ನು ಮುರಿದುಬಿಟ್ಟದ್ದು, ಏನನ್ನು ಅರ್ಥೈಸಿತು? (ಜೆಕ. 11:7-11) [3, ವಾರದ ಬೈಬಲ್ ವಾಚನ; w89 6/15 ಪು. 31 ನ್ನು ನೋಡಿರಿ.]
15. ಪಾಪವು ಸಕಲ ಮಾನವರಿಗೆ ಹೇಗೆ ಹಬ್ಬಿತು? [4, kl ಪು. 58 ಪ್ಯಾರ. 13]
16. ಮಲಾಕಿಯ 4:5ರ ನೆರವೇರಿಕೆಯಲ್ಲಿ, ಪ್ರಥಮ ಶತಮಾನದಲ್ಲಿ “ಪ್ರವಾದಿಯಾದ ಎಲೀಯ”ನು ಯಾವ ಅರ್ಥದಲ್ಲಿ ತೋರ್ಪಡಿಸಿಕೊಂಡನು? [4, si ಪು. 174 ಪ್ಯಾರ. 15]
17. ಒಬ್ಬ ವ್ಯಕ್ತಿಯು ದೇವರಿಂದ ಹೇಗೆ ಕದಿಯಸಾಧ್ಯವಿದೆ? (ಮಲಾ. 3:8) [4, ವಾರದ ಬೈಬಲ್ ವಾಚನ; ಕಾ95 4/15 ಪು. 18 ಪ್ಯಾರ. 15 ನ್ನು ನೋಡಿರಿ.]
18. ಗಂಭೀರವಾದ ಸಮಸ್ಯೆಗಳನ್ನು ಬಗೆಹರಿಸುವ ವಿಷಯದಲ್ಲಿ ಯೇಸು ಕೊಟ್ಟ ಸ್ವಸ್ಥ ಸಲಹೆಯನ್ನು, ನಾವು ಮತ್ತಾಯನ ಪುಸ್ತಕದಲ್ಲಿ ಎಲ್ಲಿ ಕಂಡುಕೊಳ್ಳುತ್ತೇವೆ? [13, ವಾರದ ಬೈಬಲ್ ವಾಚನ; ಕಾ95 7/15 ಪು. 22 ನ್ನು ನೋಡಿರಿ.]
19. ಮತ್ತಾಯ 20:1-16ರಲ್ಲಿ ದಾಖಲಿಸಲ್ಪಟ್ಟಿರುವ ಯೇಸುವಿನ ಸಾಮ್ಯದಲ್ಲಿ ಉಲ್ಲೇಖಿಸಲ್ಪಟ್ಟಿರುವ “ಪಾವಲಿ” ಏನಾಗಿದೆ? [14, ವಾರದ ಬೈಬಲ್ ವಾಚನ; gt 97 ಪ್ಯಾರ. 6ನ್ನು ನೋಡಿರಿ.]
20. ದೇವರು ದುಷ್ಟತ್ವಕ್ಕೆ ಅನುಮತಿಕೊಟ್ಟಿರುವುದರಿಂದ ರುಜುಪಡಿಸಲ್ಪಟ್ಟ ಎರಡು ವಿಷಯಗಳ ಪಟ್ಟಿಮಾಡಿರಿ. [14, 15, kl ಪು. 77-8 ಪ್ಯಾರಾಗಳು. 18-20]
ಕೆಳಗಿನ ಹೇಳಿಕೆಗಳಲ್ಲಿ ಪ್ರತಿಯೊಂದನ್ನು ಪೂರ್ಣಮಾಡಲು ಬೇಕಾದ ಪದ(ಗಳು) ಅಥವಾ ಪದಗುಚ್ಛವನ್ನು ಒದಗಿಸಿರಿ:
21. ಮೊದಲ ಮೂರು ಸುವಾರ್ತೆಗಳನ್ನು, ಅನೇಕವೇಳೆ ಸಮಾನ ದೃಷ್ಟಿಯ ಸುವಾರ್ತೆಗಳು ಎಂದು ಕರೆಯಲಾಗುತ್ತದೆ. ಇದರ ಅರ್ಥ _____________________. [si ಪು. 175 ಪ್ಯಾರ. 3]
22. ದೇವರ ಆತ್ಮವಿದೆಯೆಂದು ಪ್ರತಿಪಾದಿಸುವ ವ್ಯಕ್ತಿಯೊಬ್ಬನು, ತನ್ನ ಜೀವಿತದಲ್ಲಿ ಆ ಆತ್ಮದ _____________________ವನ್ನು ಉತ್ಪಾದಿಸದೆ, _____________________ದಿಂದ ಮತ್ತು ಅದರ ರೂಢಿಗಳಿಂದ ತನ್ನನ್ನು ಪ್ರತ್ಯೇಕವಾಗಿರಿಸಿಕೊಳ್ಳದೆ ಇರುವುದಾದರೆ, ಅವನ ಪ್ರತಿಪಾದನೆಗೆ ಆಧಾರವಿಲ್ಲ. [rs ಪು. 402 ಪ್ಯಾರಾಗಳು. 3-6]
23. ಪ್ರಕಟನೆ 20:12ರಲ್ಲಿ ಸೂಚಿಸಲ್ಪಟ್ಟಿರುವ ಮೃತರು, ತಮ್ಮ ಪುನರುತ್ಥಾನದ _____________________ ಅವರು ನಡೆಸುವ ಕೃತ್ಯಗಳಿಗನುಸಾರ ತೀರ್ಪುಮಾಡಲ್ಪಡುವರು. ಅವರದ್ದು ಅನಿವಾರ್ಯವಾಗಿ _____________________ ಪುನರುತ್ಥಾನವಾಗಿರದು ಎಂಬುದನ್ನು ಗಣ್ಯಮಾಡಲು ಇದು ನಮಗೆ ಸಹಾಯ ಮಾಡುತ್ತದೆ. (ಯೋಹಾ. 5:28, 29) [uw ಪು. 75 ಪ್ಯಾರ. 12]
24. ಯೇಸುವಿಗೆ _____________________ ಎಂಬ ವೈಯಕ್ತಿಕ ಹೆಸರು ವಾಸ್ತವವಾಗಿ ಕೊಡಲ್ಪಡದಿದ್ದರೂ, ಒಬ್ಬ ಮಾನವನೋಪಾದಿ ಅವನ ಪಾತ್ರವು, ಆ ಹೆಸರಿನ _____________________ವನ್ನು ಪೂರೈಸಿತು. (ಯೆಶಾ. 7:14; ಮತ್ತಾ. 1:22, 23) [ವಾರದ ಬೈಬಲ್ ವಾಚನ; w92 1/15 ಪು. 22 ನ್ನು ನೋಡಿರಿ.]
25. ಮರಣದಲ್ಲಿ ಮಾನವರನ್ನು ಬಿಟ್ಟುಹೋಗುವ “ಆತ್ಮ,” ದೇವರಿಂದ ಉದ್ಭವಿಸುವ _____________________ ಆಗಿದೆ. (ಕೀರ್ತ. 146:4) [kl ಪು. 81 ಪ್ಯಾರ. 5-6]
ಕೆಳಗಿನ ಹೇಳಿಕೆಗಳಲ್ಲಿ ಪ್ರತಿಯೊಂದರ ಸರಿಯಾದ ಉತ್ತರವನ್ನು ಆರಿಸಿರಿ:
26. ಮತ್ತಾಯನು ತನ್ನ ಸುವಾರ್ತೆಯನ್ನು (ಹೀಬ್ರು; ಆ್ಯರಮೇಯಿಕ್; ಗ್ರೀಕ್) ಭಾಷೆಯಲ್ಲಿ ಬರೆದನು, ಮತ್ತು ತದನಂತರ (ಹೀಬ್ರು; ಆ್ಯರಮೇಯಿಕ್; ಗ್ರೀಕ್) ಭಾಷೆಗೆ ಭಾಷಾಂತರಿಸಿದನೆಂಬುದಕ್ಕೆ ಪುರಾವೆಯಿದೆ. [si ಪು. 176 ಪ್ಯಾರ. 6]
27. (ಉಳಿಕೆಯವರು; 1,44,000) ಮಂದಿಯಲ್ಲಿ ಅಧಿಕಾಂಶ ಜನರು ಸ್ವರ್ಗದಲ್ಲಿದ್ದಾರೆ, ಮತ್ತು ಇನ್ನೂ ಭೂಮಿಯಲ್ಲಿರುವ (ಉಳಿಕೆಯವರು; 1,44,000), (ಆಡಳಿತ ಮಂಡಳಿ; ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ವರ್ಗ)ವನ್ನು ರೂಪಿಸುತ್ತಾರೆ. [uw ಪು. 80 ಪ್ಯಾರ. 7]
28. ಯೇಸು ಮೆಸ್ಸೀಯನಾದದ್ದು ಅವನ (ಜನನ; ದೀಕ್ಷಾಸ್ನಾನ; ಪುನರುತ್ಥಾನ)ದ ಸಮಯದಲ್ಲಿ, ಮತ್ತು ಅದು (ಸಾ.ಶ.ಪೂ. 2; ಸಾ.ಶ. 29; ಸಾ.ಶ. 33)ನೆಯ ವರ್ಷದಲ್ಲಿ ಸಂಭವಿಸಿತು. [kl ಪು. 65 ಪ್ಯಾರ. 12]
29. “ತಂದೆಯ, ಮಗನ, ಪವಿತ್ರಾತ್ಮದ ಹೆಸರಿನಲ್ಲಿ” ಮಾಡಿಸುವ ದೀಕ್ಷಾಸ್ನಾನವು (ಸಾ.ಶ. 29; ಸಾ.ಶ. 33; ಸಾ.ಶ. 36)ರಲ್ಲಿ ಆರಂಭಗೊಂಡಿತು. (ಮತ್ತಾ. 28:19, NW) [uw ಪು. 98 ಪ್ಯಾರ. 9]
30. ಮತ್ತಾಯ 10:41ರಲ್ಲಿ ದಾಖಲಿಸಲ್ಪಟ್ಟಿರುವಂತೆ, ತನ್ನ ಶಿಷ್ಯರನ್ನು ಪ್ರವಾದಿಗಳೋಪಾದಿ ಸ್ವೀಕರಿಸುವವರಿಗಾಗಿ ಯೇಸು ವಾಗ್ದಾನಿಸಿದ ಪ್ರತಿಫಲವು (ನಿತ್ಯಜೀವ; ದೈವಿಕ ಸಂರಕ್ಷಣೆ; ರಾಜ್ಯ ಸಂದೇಶವನ್ನು ಆಲಿಸುವುದು) ಆಗಿದೆ. [9, ವಾರದ ಬೈಬಲ್ ವಾಚನ; w88 1/1 ಪು. 24 ನ್ನು ನೋಡಿರಿ.]
ಮುಂದಿನ ಶಾಸ್ತ್ರವಚನಗಳನ್ನು ಕೆಳಗೆ ಪಟ್ಟಿಮಾಡಲ್ಪಟ್ಟಿರುವ ಹೇಳಿಕೆಗಳಿಗೆ ಸರಿಜೋಡಿಸಿರಿ:
ಜೆಕ. 4:6; ಮತ್ತಾ. 4:8-10; ಮತ್ತಾ. 16:19; ಇಬ್ರಿ. 13:5, 6; ಯಾಕೋ. 1:13; 1 ಯೋಹಾ. 5:19
31. ಮಾನವಕುಲವನ್ನು ಪೀಡಿಸುತ್ತಿರುವ ಅನೇಕಾನೇಕ ಕಷ್ಟತೊಂದರೆಗಳಿಗೆ ದೇವರು ಕಾರಣನಲ್ಲ. [kl ಪು. 71 ಪ್ಯಾರ. 3]
32. ಯೇಸುವಿನ ನಿಜ ಹಿಂಬಾಲಕರು, ಈ ಲೋಕದ ರಾಜಕೀಯ ವ್ಯವಹಾರಗಳಲ್ಲಿ ಒಳಗೂಡುವುದನ್ನು ನಿರಾಕರಿಸುತ್ತಾರೆ. [ವಾರದ ಬೈಬಲ್ ವಾಚನ; ಕಾ96 5/1 ಪು. 12 ಪ್ಯಾರ. 9 ನ್ನು ನೋಡಿರಿ.]
33. ದೇವರ ರಾಜ್ಯದ ಕುರಿತಾದ ಜ್ಞಾನವು, ಯೆಹೂದ್ಯರಿಗೆ, ಸಮಾರ್ಯದವರಿಗೆ, ಹಾಗೂ ಅನ್ಯರಿಗೆ ಸ್ವರ್ಗಕ್ಕೆ ಹೋಗುವ ಮಾರ್ಗವನ್ನು ತೆರೆಯಸಾಧ್ಯವಿದೆ. [ವಾರದ ಬೈಬಲ್ ವಾಚನ; w91 3/15 ಪು. 5 ನ್ನು ನೋಡಿರಿ.]
34. ನಮ್ಮ ಸಾರುವ ಕಾರ್ಯಕ್ಕಿರುವ ಲೋಕವ್ಯಾಪಕವಾದ ವಿರೋಧವು ಜಯಿಸಲ್ಪಟ್ಟಿರುವುದು, ಮಾನವ ಪ್ರಯತ್ನದಿಂದಲ್ಲ, ಬದಲಾಗಿ ಯೆಹೋವನ ಮಾರ್ಗದರ್ಶನ ಹಾಗೂ ಸಂರಕ್ಷಣೆಯಿಂದಲೇ. [ವಾರದ ಬೈಬಲ್ ವಾಚನ; ಕಾ94 8/15 ಪು. 17 ಪ್ಯಾರ. 4 ನ್ನು ನೋಡಿರಿ.]
35. ಲೋಕಕ್ಕೆ ತಮ್ಮ ಬೆನ್ನುಹಾಕಲು ಕ್ರೈಸ್ತರಿಗೆ ಸಕಾರಣವಿದೆ. [kl ಪು. 60 ಪ್ಯಾರ. 18]