ಅವರು ಅದನ್ನು ಏಕೆ ಮಾಡುತ್ತಾರೆ?
1 ‘ದೇವರ ಆಲಯಾಭಿಮಾನವು ಅವನನ್ನು ದಹಿಸುವುದು’ ಎಂಬುದಾಗಿ ಕ್ರಿಸ್ತನ ಕುರಿತಾಗಿ ಮುಂತಿಳಿಸಲ್ಪಟ್ಟಿತ್ತು. (ಕೀರ್ತ. 69:9) ಯೆಹೋವನ ಸತ್ಯಾರಾಧನೆಗಾಗಿದ್ದ ಯೇಸುವಿನ ಹುರುಪು, ಶುಶ್ರೂಷೆಯನ್ನು ಪ್ರಥಮವಾಗಿಡುವಂತೆ ಅವನನ್ನು ಪ್ರೇರಿಸಿತು. (ಲೂಕ 4:43; ಯೋಹಾ. 18:37) ಸತ್ಯಕ್ಕಾಗಿ ಸಾಕ್ಷಿಯನ್ನು ನೀಡುವ ಅದೇ ರೀತಿಯ ಹುರುಪು, ಇಂದು ಯೆಹೋವನ ಸಾಕ್ಷಿಗಳ ಶುಶ್ರೂಷೆಯಲ್ಲಿ ಪ್ರತಿಬಿಂಬಿಸಲ್ಪಟ್ಟಿದೆ. ಕಳೆದ ಸೇವಾ ವರ್ಷದಲ್ಲಿ, ಲೋಕವ್ಯಾಪಕವಾಗಿ ಸರಾಸರಿ 6,45,509 ಮಂದಿ, ಪ್ರತಿ ತಿಂಗಳು ಯಾವುದಾದರೂ ಒಂದು ವಿಧದ ಪಯನೀಯರ್ ಸೇವೆಯಲ್ಲಿ ಪಾಲ್ಗೊಂಡರು. ದೇವರಿಗೆ ನಾವು ಮಾಡಿರುವ ಸಮರ್ಪಣೆಯ ನೋಟದಲ್ಲಿ, ನಾವು ಒಬ್ಬ ಆಕ್ಸಿಲಿಯರಿ ಅಥವಾ ಕ್ರಮದ ಪಯನೀಯರರಾಗಿ ಸೇವೆಸಲ್ಲಿಸಲು ನಮ್ಮ ಪರಿಸ್ಥಿತಿಗಳನ್ನು ಏರ್ಪಡಿಸಸಾಧ್ಯವೊ ಎಂಬುದನ್ನು ನಮ್ಮಲ್ಲಿ ಪ್ರತಿಯೊಬ್ಬರೂ ಪ್ರಾರ್ಥನಾಪೂರ್ವಕವಾಗಿ ಪರಿಗಣಿಸಬೇಕು.—ಕೀರ್ತ. 110:3; ಪ್ರಸಂ. 12:1; ರೋಮಾ. 12:1.
2 ಸ್ವಾರ್ಥಪರವಾಗಿ ಪ್ರಾಪಂಚಿಕವಾಗಿರುವ ವಿಷಯಗಳ ವ್ಯವಸ್ಥೆಯಲ್ಲಿ ಜೀವಿಸುತ್ತಿದ್ದು, ಯಾರಾದರೊಬ್ಬರು ಯಾವುದೇ ಹಣಕಾಸಿನ ಲಾಭಗಳನ್ನು ಮತ್ತು ಯಾವುದೇ ಮಹಿಮೆಯನ್ನು ತರದಂತಹ ಒಂದು ವಿಷಯಕ್ಕಾಗಿ ಏಕೆ ಇಷ್ಟು ಕಷ್ಟಪಟ್ಟು ದುಡಿಯುವರೆಂಬುದನ್ನು ಅರ್ಥಮಾಡಿಕೊಳ್ಳಲು ಲೋಕದಲ್ಲಿರುವ ಅನೇಕರಿಗೆ ಕಷ್ಟವಾಗುತ್ತದೆ. ಪಯನೀಯರರು ಅದನ್ನು ಏಕೆ ಮಾಡುತ್ತಾರೆ? ತಾವು ಒಂದು ಜೀವರಕ್ಷಕ ಕೆಲಸದಲ್ಲಿ ಒಳಗೂಡಿದ್ದೇವೆಂಬುದು ಅವರಿಗೆ ತಿಳಿದಿದೆ. ಯೆಹೋವನಿಗಾಗಿ ಮತ್ತು ತಮ್ಮ ಜೊತೆಮಾನವನಿಗಾಗಿ ಗಾಢವಾದ ಪ್ರೀತಿಯಿಂದ ಪ್ರಚೋದಿಸಲ್ಪಟ್ಟು, ಜೀವಗಳನ್ನು ರಕ್ಷಿಸುವುದರಲ್ಲಿ ಸಹಾಯಮಾಡಲು ತಮಗೆ ಒಂದು ಬಲವಾದ, ವೈಯಕ್ತಿಕ ಹಂಗಿದೆಯೆಂದು ಅವರು ಭಾವಿಸುತ್ತಾರೆ. (ರೋಮಾ. 1:14-16; 1 ತಿಮೊ. 2:4; 4:16) ಒಬ್ಬ ಪಯನೀಯರ್ ದಂಪತಿಗಳು ಹೀಗೆ ಹೇಳುವ ಮೂಲಕ ಅದನ್ನು ಚೆನ್ನಾಗಿ ಸಾರಾಂಶಿಸಿದರು: “ನಾವೇಕೆ ಪಯನೀಯರ್ ಸೇವೆಯನ್ನು ಮಾಡುತ್ತಿದ್ದೇವೊ? ನಾವು ಪಯನೀಯರ್ ಸೇವೆಯನ್ನು ಮಾಡದೇ ಇರುತ್ತಿದ್ದಲ್ಲಿ, ನಾವು ಏಕೆ ಮಾಡಲಿಲ್ಲವೆಂದು ಯೆಹೋವನ ಮುಂದೆ ಎಂದಾದರೂ ವಿವರಿಸಲು ಸಾಧ್ಯವಿರುವುದೊ?”
3 ಪಯನೀಯರ್ ಸೇವೆಯನ್ನು ಆರಂಭಿಸುವ ಕುರಿತಾದ ತನ್ನ ನಿರ್ಣಯದ ಕುರಿತಾಗಿ ಇನ್ನೊಬ್ಬ ಸಹೋದರಿಯು ಇದನ್ನು ಬರೆದಳು: “ನನ್ನ ಗಂಡ ಮತ್ತು ನಾನು ಕೇವಲ ಒಂದೇ ಸಂಬಳದಲ್ಲಿ ಜೀವನ ನಡಸಲು ಯೋಜನೆಗಳನ್ನು ಮಾಡಿದೆವು. ಇದು, ಎಲ್ಲಾ ಅನಾವಶ್ಯಕ ವಿಷಯಗಳನ್ನು ಬಿಟ್ಟುಕೊಡುವುದನ್ನು ಅರ್ಥೈಸಿತು. ಆದರೂ, ಯೆಹೋವನು ನಮ್ಮನ್ನು ಹೇರಳವಾಗಿ ಆಶೀರ್ವದಿಸಿದ್ದಾನೆ. ನಮ್ಮನ್ನು ಎಂದಿಗೂ ಬಡತನ ಅಥವಾ ನಿರ್ಗತಿಗೆ ಬಿಟ್ಟುಕೊಟ್ಟಿಲ್ಲ. . . . ಜೀವಿಸಲಿಕ್ಕಾಗಿ ನಾನೊಂದು ನಿಜವಾದ ಕಾರಣವನ್ನು ಕಂಡುಕೊಂಡಿದ್ದೇನೆ—ಸತ್ಯ ದೇವರಾದ ಯೆಹೋವನು, ತನ್ನನ್ನು ಹುಡುಕುವವರಿಂದ ದೂರವಾಗಿಲ್ಲವೆಂಬುದನ್ನು ಆತ್ಮಿಕವಾಗಿ ಅಗತ್ಯದಲ್ಲಿರುವವರು ತಿಳಿದುಕೊಳ್ಳುವಂತೆ ಸಹಾಯಮಾಡುವುದೇ.” ಸಮಯಗಳ ತುರ್ತನ್ನು ಕಾಣುತ್ತಾ, ಪಯನೀಯರರು ಸದಾಕಾಲ ಬಾಳುವ ಆತ್ಮಿಕ ನಿಧಿಗಳನ್ನು ಗಳಿಸಲು ಶ್ರದ್ಧೆಯಿಂದ ಪ್ರಯತ್ನಿಸುತ್ತಿರುವಾಗ, ಜೀವನದ ಆವಶ್ಯಕತೆಗಳೊಂದಿಗೆ ಸಂತೃಪ್ತರಾಗಿದ್ದಾರೆ.—1 ತಿಮೊ. 6:8, 18, 19.
4 ನಿಮ್ಮ ವೈಯಕ್ತಿಕ ಪರಿಸ್ಥಿತಿಗಳು ಅನುಮತಿಸುವಲ್ಲಿ, ಲೋಕವ್ಯಾಪಕವಾಗಿ ಪಯನೀಯರ್ ಸೇವೆಯನ್ನು ಮಾಡುತ್ತಿರುವ ನಿಮ್ಮ ಲಕ್ಷಾಂತರ ಸಹೋದರ ಸಹೋದರಿಯರೊಂದಿಗೆ ನೀವು ಏಕೆ ಜೊತೆಗೂಡಬಾರದು? ಆ ವಿಧದಲ್ಲಿ, ಅವರು ಅನುಭವಿಸುತ್ತಿರುವಂತಹದ್ದೇ ರೀತಿಯ ಆನಂದವನ್ನು ನೀವು ಅನುಭವಿಸಸಾಧ್ಯವಿದೆ.