ಪ್ರಕಟನೆಗಳು
◼ ಒಂದು ಸಭೆಯೊಂದಿಗೆ ಕೂಡಿಬರುತ್ತಿರುವವರು, ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಿಗಾಗಿರುವ ಎಲ್ಲಾ ಹೊಸ ಮತ್ತು ನವೀಕರಣದ ಚಂದಾಗಳನ್ನು—ತಮ್ಮ ವೈಯಕ್ತಿಕ ಚಂದಾಗಳನ್ನೂ ಸೇರಿಸಿ—ಸಭೆಯ ಮೂಲಕ ಕಳುಹಿಸತಕ್ಕದ್ದು.
◼ ಸೊಸೈಟಿಯು ಅನೇಕ ಕಾಂಗ್ರಿಗೇಷನ್ ರಿಪೋರ್ಟ್ (S-1) ಕಾರ್ಡುಗಳನ್ನು ಪ್ರತಿ ತಿಂಗಳು ತಡವಾಗಿ ಪಡೆಯುತ್ತಿರುವುದರಿಂದ, ಇಲ್ಲಿ ಕೆಲವೊಂದು ಮರುಜ್ಞಾಪನಗಳಿವೆ: (1) ನಿಮ್ಮ ಸಭೆಯ S-1 ಕಾರ್ಡನ್ನು ದಯವಿಟ್ಟು ಅಂಚೆಯ ಮೂಲಕ ಅಥವಾ ಫ್ಯಾಕ್ಸ್ ಮೂಲಕ ಕಳುಹಿಸಿರಿ. ಇದನ್ನು ತಿಂಗಳಿನ ಆರಂಭದಲ್ಲಿ ಸಾಧ್ಯವಿರುವಷ್ಟು ಬೇಗನೆ ಕಳುಹಿಸಿರಿ, ಆದರೆ ತಿಂಗಳಿನ ಆರನೆಯ ದಿನದ ನಂತರ ಕಳುಹಿಸಬೇಡಿ. (2) ಪ್ರಚಾರಕರು ತಮ್ಮ ರಿಪೋರ್ಟುಗಳನ್ನು ತಡವಿಲ್ಲದೆ ಹಾಕುವಂತೆ ಪ್ರೋತ್ಸಾಹಿಸಿರಿ, ಆದರೆ ಪ್ರಚಾರಕರಿಂದ ರಿಪೋರ್ಟುಗಳನ್ನು ಪಡೆಯಲಿಕ್ಕಾಗಿ ತಿಂಗಳಿನ ಆರನೆಯ ತಾರೀಖಿನ ನಂತರ ಕಾಯಬೇಡಿರಿ; ತಡವಾಗಿ ಬರುವ ರಿಪೋರ್ಟುಗಳನ್ನು ಮುಂದಿನ ತಿಂಗಳಿಗೆ ಒಯ್ಯಸಾಧ್ಯವಿದೆ. ಇದನ್ನು, ತಡವಾಗಿ ವರದಿಸಲ್ಪಟ್ಟ ಚಟುವಟಿಕೆ ಮತ್ತು ಪ್ರಚಾರಕರ ಸಂಖ್ಯೆಯನ್ನು, ಮುಂದಿನ ತಿಂಗಳಲ್ಲಿ ವರದಿಸಲ್ಪಡುವ ಚಟುವಟಿಕೆ ಮತ್ತು ಪ್ರಚಾರಕರ ಸಂಖ್ಯೆಯೊಂದಿಗೆ ಕೂಡಿಸುವ ಮೂಲಕ ಮಾಡಸಾಧ್ಯವಿದೆ. (3) ರಿಪೋರ್ಟುಗಳು ತಡವಾಗಿ ಬರುವುದಾದರೆ ಅಥವಾ S-1 ಕಳುಹಿಸಲ್ಪಟ್ಟ ನಂತರ ತಪ್ಪುಗಳು ಬೆಳಕಿಗೆ ಬಂದರೆ, ಸೊಸೈಟಿಗೆ ಕೂಡಿಸುವಿಕೆಗಳನ್ನು ಅಥವಾ ತಿದ್ದುಪಡಿಗಳನ್ನು ಕಳುಹಿಸಬೇಡಿರಿ. ಮುಂದಿನ ತಿಂಗಳಿಗಾಗಿರುವ ನಿಮ್ಮ ಸಭಾ ರಿಪೋರ್ಟ್‌ನಲ್ಲಿ ಆ ಕೂಡಿಸುವಿಕೆಗಳು ಅಥವಾ ಅಳವಡಿಸುವಿಕೆಗಳನ್ನು ಸ್ಥಳಿಕವಾಗಿ ಮಾಡಿರಿ. (4) ಒಂದು ನಿರ್ದಿಷ್ಟ ತಿಂಗಳಿಗಾಗಿ ರಿಪೋರ್ಟಿನ ಒಂದು ನಕಲುಪ್ರತಿಯನ್ನು ನಮಗೆ ಕಳುಹಿಸುವಂತೆ ವಿನಂತಿಸುತ್ತಾ, ನಿಮ್ಮ ತಿಂಗಳ ಸ್ಟೇಟ್‌ಮೆಂಟ್‌ನೊಂದಿಗೆ ನೀವು ಒಂದು ನೆನಪಿನೋಲೆಯನ್ನು ಪಡೆಯುವಲ್ಲಿ, ಅದನ್ನು ದಯವಿಟ್ಟು ತತ್‌ಕ್ಷಣ ಕಳುಹಿಸಿರಿ. ನೀವು ನಿಮ್ಮ ಸಭಾ ರಿಪೋರ್ಟನ್ನು ಕಳುಹಿಸಿರುವುದರಿಂದ, ಅದು ಇಂದೊಮುಂದೊ ನಮಗೆ ತಲಪುವದೆಂದು ಊಹಿಸಬೇಡಿರಿ. ಅನೇಕ ರಿಪೋರ್ಟ್‌ಗಳು ಅಂಚೆಯಲ್ಲಿ ಕಳೆದುಹೋಗುತ್ತಿವೆ, ಆದರೆ ಸಭೆಗಳು ನಮಗೆ ಒಂದು ನಕಲು ಪ್ರತಿಯನ್ನು ಕಳುಹಿಸುವ ಮುಂಚೆ ನಾವು ಮೂರು ಅಥವಾ ನಾಲ್ಕು ವಿನಂತಿಗಳನ್ನು ಕಳುಹಿಸಬೇಕಾಗುತ್ತದೆ. ನಕಲು ಪ್ರತಿಯೊಂದಿಗೆ ಒಂದು ವಿವರಣೆಯನ್ನು ಕಳುಹಿಸುವ ಅಗತ್ಯವಿಲ್ಲ, ಕೇವಲ ನಕಲು ಪ್ರತಿಯನ್ನು ದಯವಿಟ್ಟು ತಡವಿಲ್ಲದೆ ಕಳುಹಿಸಿರಿ.
◼ ಲಭ್ಯವಿರುವ ಹೊಸ ಪ್ರಕಾಶನಗಳು:
ಈ ಲೋಕವು ಪಾರಾಗುವುದೋ? ಟ್ರ್ಯಾಕ್ಟ್ ನಂಬ್ರ 19—ಪಂಜಾಬಿ
ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ?—ಉರ್ದು, ಸಿಂಧಿ
ನಮ್ಮ ಶುಶ್ರೂಷೆಯನ್ನು ನೆರವೇರಿಸಲು ವ್ಯವಸ್ಥಿತರು (ಪರಿಷ್ಕೃತ
1997)—ತಮಿಳು
ವಾಚ್ ಟವರ್ ಪಬ್ಲಿಕೇಷನ್ಸ್ ಇಂಡೆಕ್ಸ್ 1986-1995—ಇಂಗ್ಲಿಷ್
ಈ ಹತ್ತು ವರ್ಷಗಳ ಇಂಡೆಕ್ಸ್, ಪಯನೀಯರರಿಗಾಗಿ ರೂ. 95.00 ಮತ್ತು ಪ್ರಚಾರಕರು ಹಾಗೂ ಸಾರ್ವಜನಿಕರಿಗೆ ರೂ. 130.00 ಆಗಿದೆ.
◼ ಪುನಃ ಲಭ್ಯವಿರುವ ಪ್ರಕಾಶನಗಳು:
“ಆಲ್ ಸ್ಕ್ರಿಪ್‌ಚರ್ ಈಸ್ ಇನ್‌ಸ್ಪಾಯರ್ಡ್ ಆಫ್ ಗಾಡ್ ಆ್ಯಂಡ್ ಬೆನಿಫಿಷಲ್”—ಇಂಗ್ಲಿಷ್
ಕನ್‌ಕಾರ್ಡೆನ್ಸ್‌ನೊಂದಿಗೆ ಆತರೈಸ್ಡ್ ವರ್ಷನ್ (bi10)—ಇಂಗ್ಲಿಷ್
ಕಾಂಪ್ರಿಹೆನ್ಸಿವ್ ಕನ್‌ಕಾರ್ಡೆನ್ಸ್ ಆಫ್ ದ ನ್ಯೂ ವರ್ಲ್ಡ್ ಟ್ರಾನ್ಸ್‌ಲೇಶನ್ ಆಫ್ ದ ಹೋಲಿ ಸ್ರಿಪ್ಚರ್ಸ್
—ಇಂಗ್ಲಿಷ್
ಎಲ್ಲಾ ರಾಷ್ಟ್ರಗಳಿಗೆ ಸುವಾರ್ತೆ—ಇಂಗ್ಲಿಷ್
ಎಂಫ್ಯಾಟಿಕ್ ಡೈಯಗ್ಲಾಟ್—ಇಂಗ್ಲಿಷ್
ಓದಲು ಮತ್ತು ಬರೆಯಲು ಕಲಿಯಿರಿ—ಇಂಗ್ಲಿಷ್
ಜೀವ—ಅದು ಇಲ್ಲಿಗೆ ಹೇಗೆ ಬಂತು? ವಿಕಾಸದಿಂದಲೋ ಸೃಷ್ಟಿಯಿಂದಲೊ? (ದೊಡ್ಡ ಮತ್ತು ಚಿಕ್ಕ ಸೈಸ್‌ಗಳು)—ಇಂಗ್ಲಿಷ್
ನಿಜ ಶಾಂತಿ ಮತ್ತು ಭದ್ರತೆ—ನೀವು ಅದನ್ನು ಹೇಗೆ ಕಂಡುಕೊಳ್ಳಬಲ್ಲಿರಿ?—ಇಂಗ್ಲಿಷ್
ನಿಮ್ಮ ಯೌವನ—ಅದರಿಂದ ಅತ್ಯುತ್ತಮವಾದುದನ್ನು ಪಡೆದುಕೊಳ್ಳುವುದು—ಇಂಗ್ಲಿಷ್
ನ್ಯೂ ವರ್ಲ್ಡ್ ಟ್ರಾನ್ಸ್‌ಲೇಶನ್ ಮಾರ್ಜಿನಲ್ ರೆಫೆರನ್ಸೆಸ್‌ನೊಂದಿಗೆ (Rbi8)—ಇಂಗ್ಲಿಷ್
ಯೆಹೋವನಿಗೆ ಸ್ತುತಿಗಳನ್ನು ಹಾಡಿರಿ (ದೊಡ್ಡ ಸೈಸ್ ಮತ್ತು ದೊಡ್ಡ ಮುದ್ರಣ ಸಂಗೀತಪುಸ್ತಕ)—ಇಂಗ್ಲಿಷ್
ಲಕ್ಷಿಸುವಾತನಾದ ಒಬ್ಬ ದೇವರಿದ್ದಾನೋ?—ಕನ್ನಡ, ಗುಜರಾಥಿ, ತಮಿಳು, ತೆಲುಗು, ಮರಾಠಿ, ಮಲೆಯಾಳಂ, ಹಿಂದಿ
ಶಾಸ್ತ್ರವಚನಗಳ ಒಳನೋಟ—ಇಂಗ್ಲಿಷ್
ಸಂತೋಷ—ಅದನ್ನು ಹೇಗೆ ಕಂಡುಕೊಳ್ಳುವುದು?—ಇಂಗ್ಲಿಷ್