ಎಲ್ಲ ರೀತಿಯ ಜನರು ರಕ್ಷಿಸಲ್ಪಡುವರು
1 “ಎಲ್ಲ ರೀತಿಯ ಜನರು ರಕ್ಷಿಸಲ್ಪಡಬೇಕು ಹಾಗೂ ಸತ್ಯದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳಬೇಕು” ಎಂಬುದು ಯೆಹೋವನ ಚಿತ್ತವಾಗಿದೆ. (1 ತಿಮೊ. 2:4, NW) ಜನರು ಆನುವಂಶಿಕತೆ, ಹಿನ್ನೆಲೆ, ಮತ್ತು ಪರಿಸರದಿಂದ ಸ್ವಲ್ಪ ಮಟ್ಟಿಗೆ ಪ್ರಭಾವಿತರಾಗಿರುವುದಾದರೂ, ಅವರಿಗೆ ಸ್ವತಂತ್ರ ಇಚ್ಛೆಯಿದೆ ಹಾಗೂ ಅವರು ತಮ್ಮ ಜೀವಿತವನ್ನು ಹೇಗೆ ಉಪಯೋಗಿಸಿಕೊಳ್ಳುವುದೆಂಬುದನ್ನು ವ್ಯಕ್ತಿಪರವಾಗಿ ಆಯ್ದುಕೊಳ್ಳಸಾಧ್ಯವಿದೆ. ಅವರು ಒಳ್ಳೆಯದನ್ನು ಮಾಡಿ, ಬಾಳಬಲ್ಲರು ಇಲ್ಲವೇ ಕೆಟ್ಟದ್ದನ್ನು ಮಾಡಿ ನಾಶವಾಗಬಲ್ಲರು. (ಮತ್ತಾ. 7:13, 14) ಈ ತಿಳಿವಳಿಕೆಯು ನಾವು ರಾಜ್ಯದ ಸುವಾರ್ತೆಯೊಂದಿಗೆ ಸಮೀಪಿಸುವ ಜನರ ಬಗ್ಗೆ ನಮಗಿರುವ ನೋಟವನ್ನು ಹೇಗೆ ಪ್ರಭಾವಿಸುತ್ತದೆ?
2 ಒಬ್ಬ ವ್ಯಕ್ತಿಗೆ ಸತ್ಯದಲ್ಲಿರುವ ಆಸಕ್ತಿಯು, ರಾಷ್ಟ್ರೀಯ ಅಥವಾ ಸಾಂಸ್ಕೃತಿಕ ಹಿನ್ನೆಲೆಗಳಂಥ ಅಂಶಗಳಿಂದ ಇಲ್ಲವೇ ಸಾಮಾಜಿಕ ಅಂತಸ್ತಿನಿಂದ ಆದೇಶಿಸಲ್ಪಡುತ್ತದೆಂದು ನಾವೆಣಿಸಬಾರದು. ಸತ್ಯವು ಅಲ್ಪಸ್ವಲ್ಪ ಶಿಕ್ಷಣಪಡೆದಿರುವವರು ಇಲ್ಲವೇ ಚೆನ್ನಾಗಿ ಶಿಕ್ಷಣಪಡೆದಿರುವವರು, ರಾಜಕೀಯ ಬೆನ್ನಟ್ಟುವಿಕೆಗಳಲ್ಲಿ ಒಳಗೂಡಿರುವವರು, ಮತ್ತು ವೃತ್ತಿಪರರು, ನಾಸ್ತಿಕರು, ಅಜ್ಞೇಯತಾವಾದಿಗಳು, ಹಾಗೂ ಕುಖ್ಯಾತ ತಪ್ಪಿತಸ್ಥರಿಗೂ ರಂಜಿಸಸಾಧ್ಯವಿದೆ. ಎಲ್ಲ ಹಿನ್ನೆಲೆಗಳಿಂದ ಹಾಗೂ ಸಾಮಾಜಿಕ ಮಟ್ಟಗಳಿಂದ ಬಂದಿರುವ ಜನರು, ತಮ್ಮ ಹಿಂದಿನ ನಡತೆಯ ಮಾರ್ಗವನ್ನು ಬದಲಾಯಿಸಿಕೊಂಡು, ಈಗ ದೇವರ ನೂತನ ಲೋಕದಲ್ಲಿನ ಜೀವಿತವನ್ನು ಪಡೆದುಕೊಳ್ಳುವ ಸ್ಥಾನದಲ್ಲಿದ್ದಾರೆ. (ಜ್ಞಾನೋ. 11:19) ಆದುದರಿಂದ, ನಾವು ರಾಜ್ಯದ ಸಂದೇಶದೊಂದಿಗೆ ಜೀವಿತದ ಎಲ್ಲ ಸ್ಥಾನಮಾನಗಳ ಜನರನ್ನು ಸಮೀಪಿಸುವುದಕ್ಕೆ ಹಿಂಜರಿಯಬಾರದು.
3 ಈ ಉದಾಹರಣೆಗಳನ್ನು ಪರಿಗಣಿಸಿರಿ: ಒಬ್ಬ ಮನುಷ್ಯನು ತನ್ನ ಮಲತಂದೆಯನ್ನು ಕೊಲ್ಲಲು ಯೋಜಿಸಿದ್ದನಾದರೂ ಕೊಲ್ಲಲಿಲ್ಲ. ಅನಂತರ ಅವನು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದನಾದರೂ ವಿಫಲನಾದನು. ಕಳ್ಳತನ ಹಾಗೂ ಅಮಲೌಷಧದ ಕಾನೂನುಬಾಹಿರ ವ್ಯಾಪಾರಕ್ಕಾಗಿ ಅವನು ಸೆರೆಮನೆಗೆ ಹಾಕಲ್ಪಟ್ಟ ನಂತರ, ಅವನ ವಿವಾಹವು ವಿಫಲಗೊಂಡಿತು. ಇಂದು ಈ ವ್ಯಕ್ತಿಯು ಒಂದು ಪ್ರಾಮಾಣಿಕ ಜೀವನವನ್ನು ನಡೆಸುತ್ತಿದ್ದಾನೆ ಮತ್ತು ಒಂದು ಸಂತೋಷಭರಿತ ವಿವಾಹವನ್ನೂ ತನ್ನ ಮಲತಂದೆಯೊಂದಿಗೆ ಒಂದು ಉತ್ತಮ ಸಂಬಂಧವನ್ನೂ ಅನುಭವಿಸುತ್ತಿದ್ದಾನೆ. ಯಾವ ವಿಷಯವು ವ್ಯತ್ಯಾಸವನ್ನು ಉಂಟುಮಾಡಿತು? ಅವನು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಾಸಿಸಿ, ತಾನು ಕಲಿತ ವಿಷಯವನ್ನು ಅನ್ವಯಿಸಿಕೊಂಡನು. ಯೆಹೋವನು ಅವನನ್ನು ವಿಮೋಚನೆಗೆ ಮೀರಿದ ವ್ಯಕ್ತಿಯನ್ನಾಗಿ ನೋಡಲಿಲ್ಲ.
4 ಟಿವಿ ನಟಿಯಾಗಿದ್ದ ಒಬ್ಬ ಯುವ ಸ್ತ್ರೀಯ ಖ್ಯಾತಿಯು ಆಕೆಗೆ ಸಂತೋಷವನ್ನು ತರಲಿಲ್ಲ. ಆದರೆ ಸಾಕ್ಷಿಗಳ ಉತ್ತಮ ನೈತಿಕ ನಡತೆಯಿಂದ ಪ್ರಭಾವಿತಳಾಗಿ, ಆಕೆ ಬೈಬಲ್ ಅಭ್ಯಾಸವೊಂದಕ್ಕೆ ಒಪ್ಪಿಕೊಂಡಳು ಮತ್ತು ಶೀಘ್ರವೇ ರಾಜ್ಯದ ಸುವಾರ್ತೆಯ ಕುರಿತಾಗಿ ಕಲಿಯುವಂತೆ ಇತರರಿಗೆ ಸಹಾಯಮಾಡುತ್ತಿದ್ದಳು. ಆಕೆ ಮನೆಯಿಂದ ಮನೆಯ ಶುಶೂಷ್ರೆಗೆ ಹೋದಲ್ಲೆಲ್ಲಾ ಗುರುತಿಸಲ್ಪಟ್ಟಳಾದರೂ, ಒಬ್ಬ ನಟಿಯೋಪಾದಿ ಜ್ಞಾತಳಾಗುವುದಕ್ಕಿಂತಲೂ ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾಗಿ ಜ್ಞಾತಳಾಗಲು ತಾನು ಬಯಸುತ್ತೇನೆಂದು ಆಕೆ ಸಂತೋಷದಿಂದ ವಿವರಿಸಿದಳು.
5 ಸಾಕ್ಷಿಯೊಬ್ಬಳು ಕಾವಲಿನಬುರುಜು ಪತ್ರಿಕೆಯ ಚಂದಾದಾರರೊಬ್ಬರೊಂದಿಗೆ ಒಂದು ಬೈಬಲ್ ಅಭ್ಯಾಸವನ್ನು ನಡೆಸಲು ಏರ್ಪಾಡು ಮಾಡಿದಾಗ, ಇದರ ಕುರಿತು ನೆರೆಯವಳೊಬ್ಬಳು ಕೇಳಿಸಿಕೊಂಡು, ಅಭ್ಯಾಸಕ್ಕೆ ಹಾಜರಾದಳು. ಆ ನೆರೆಯವಳು ತಾನು ಅನ್ವೇಷಿಸುತ್ತಿದ್ದ ಸತ್ಯವು ಇದೇ ಆಗಿದೆ ಎಂಬುದನ್ನು ತತ್ಕ್ಷಣವೇ ಗ್ರಹಿಸಿದಳು! ಆಕೆಯೂ ಆಕೆಯ ಪತಿಯೂ ತಮಗೆ ಕೊಡಲ್ಪಟ್ಟಿದ್ದ ವಿವಾಹವಿಚ್ಛೇದ ಆಜ್ಞೆಯನ್ನು ರದ್ದುಮಾಡಿ, ರಾಜಿಮಾಡಿಕೊಂಡರು. ಆಕೆ ಜ್ಯೋತಿಷದಲ್ಲಿ ಬಹಳ ಗಹನವಾಗಿ ಒಳಗೂಡಿದ್ದು, ಪ್ರೇತಾತ್ಮಕ ಸಂಬಂಧಿತ ಪಂಥವೊಂದರಲ್ಲಿ ಜೊತೆಗೂಡಿದ್ದಳಾದರೂ, ಆಕೆ ಸಿದ್ಧಮನಸ್ಸಿನಿಂದ ದುಬಾರಿ ಬೆಲೆಯ ಪುಸ್ತಕಗಳನ್ನು ಮತ್ತು ಭೂತಪ್ರೇತ ನಂಬಿಕೆಯೊಂದಿಗೆ ಸಂಬಂಧಿಸಿದ ಇತರ ಎಲ್ಲ ವಸ್ತುಗಳನ್ನು ಎಸೆದುಬಿಟ್ಟಳು. ಆಕೆ ಶೀಘ್ರವೇ ಕೂಟಗಳಿಗೆ ಹಾಜರಾಗತೊಡಗಿ, ತನ್ನ ಹೊಸದಾಗಿ ಕಂಡುಕೊಂಡಿರುವ ನಂಬಿಕೆಯ ಕುರಿತು ಸಂಬಂಧಿಕರು ಹಾಗೂ ಸ್ನೇಹಿತರೊಂದಿಗೆ ಮಾತಾಡುತ್ತಿದ್ದಳು. ಈಗ ಆಕೆ ಇತರರಿಗೆ ಉತ್ಸಾಹಭರಿತವಾಗಿ ಸಾಕ್ಷಿಯನ್ನು ನೀಡುತ್ತಾಳೆ.
6 ನಾವು ಯಾರೊಬ್ಬರ ವಿಷಯದಲ್ಲೂ ಪೂರ್ವಾಭಿಪ್ರಾಯವುಳ್ಳವರು ಆಗಿರಬಾರದು. ಅದಕ್ಕೆ ಬದಲು, ನಾವು ಎಲ್ಲೆಡೆಯೂ ಇರುವ ಜನರೊಂದಿಗೆ ಸುವಾರ್ತೆಯನ್ನು ಹುರುಪಿನಿಂದ ಹಂಚೋಣ. “ಹೃದಯವನ್ನೇ ನೋಡುವವನಾಗಿ”ರುವ ಯೆಹೋವನು “ಎಲ್ಲ ರೀತಿಯ ಜನರ ರಕ್ಷಕ”ನಾಗುವನು ಎಂಬ ಭರವಸೆಯಿಂದಿರಲು ನಮಗೆ ಪ್ರತಿಯೊಂದು ಕಾರಣವಿದೆ.—1 ಸಮು. 16:7; 1 ತಿಮೊ. 4:10.