ಎಪ್ರಿಲ್ಗಾಗಿ ಸೇವಾ ಕೂಟಗಳು
ಎಪ್ರಿಲ್ 1ರ ವಾರ
ಸಂಗೀತ 132 (70)
10 ನಿ: ಸ್ಥಳಿಕ ತಿಳಿಸುವಿಕೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. ಕಳೆದ ತಿಂಗಳಿನಿಂದ ಕಾರ್ಯರೂಪಕ್ಕೆ ತರಲ್ಪಟ್ಟಿರುವ, ಪತ್ರಿಕೆಯ ಮತ್ತು ಚಂದಾ ದರಗಳಲ್ಲಿನ ಹೆಚ್ಚಳದ ಬದಲಾವಣೆಯ ಕುರಿತು ಪ್ರಚಾರಕರಿಗೆ ಜ್ಞಾಪಕಹುಟ್ಟಿಸಿರಿ. ನಿಮ್ಮ ಜ್ಞಾಪಕಾಚರಣೆಯ ಕುರಿತಾದ ಯಾವುದೇ ಎದ್ದುಕಾಣುವ ವರದಿಗಳನ್ನು ಉಲ್ಲೇಖಿಸಿರಿ.
20 ನಿ: “ಎಪ್ರಿಲ್ ತಿಂಗಳಿನಲ್ಲಿ ‘ಸತ್ಕ್ರಿಯೆಗಳಿಗಾಗಿ ಹುರುಪುಳ್ಳ’ವರಾಗಿರಿ!” ಸೇವಾ ಮೇಲ್ವಿಚಾರಕನಿಂದ 1-10ನೆಯ ಪ್ಯಾರಗ್ರಾಫ್ಗಳ ಪ್ರಶ್ನೋತ್ತರ ಆವರಿಸುವಿಕೆ. (1) ಎಪ್ರಿಲ್ ತಿಂಗಳಿನಲ್ಲಿ ವಿಸ್ತರಿತ ಕ್ಷೇತ್ರ ಸೇವಾ ಚಟುವಟಿಕೆಗಾಗಿ ಸ್ಥಳಿಕವಾಗಿ ಯಾವ ಯೋಜನೆಯು ಮಾಡಲ್ಪಟ್ಟಿದೆ, (2) ಭಾಗವಹಿಸಲು ಹೇಗೆ ಎಲ್ಲರಿಗೂ ನೆರವನ್ನು ನೀಡಸಾಧ್ಯವಿದೆ, ಮತ್ತು (3) ಹೊಸಬರು ಮತ್ತು ಎಳೆಯರನ್ನು ಹೇಗೆ ಒಳಗೂಡಿಸಸಾಧ್ಯವಿದೆ ಎಂಬುದನ್ನು ವಿವರಿಸಿರಿ.
15 ನಿ: “ಯುಕ್ತವಾದ ಮನಃಪ್ರವೃತ್ತಿ ಹೊಂದಿರುವವರ ಅನ್ವೇಷಣೆ ಮಾಡಿರಿ.” ಸೂಚಿಸಲ್ಪಟ್ಟ ನಿರೂಪಣೆಗಳನ್ನು ಪುನರ್ವಿಮರ್ಶಿಸಿರಿ, ಮತ್ತು ಅನಂತರ ಅವು ಹೇಗೆ ಉಪಯೋಗಿಸಲ್ಪಡಸಾಧ್ಯವಿದೆ ಎಂಬುದನ್ನು ತೋರಿಸುವ ಎರಡು ಪ್ರತ್ಯಕ್ಷಾಭಿನಯಗಳನ್ನು ಮಾಡಿರಿ. ಸಮಯವು ಅನುಮತಿಸಿದಂತೆ, ಪತ್ರಿಕೆಗಳನ್ನು ನೀಡುವುದಕ್ಕಾಗಿ, ನಮ್ಮ ರಾಜ್ಯದ ಸೇವೆ, ಜನವರಿ 1996, ಪುಟ 5ರಲ್ಲಿ ಕಂಡುಬರುವ ಕೆಲವು ಸೂಚನೆಗಳನ್ನು ಹೇಳಿರಿ.
ಸಂಗೀತ 20 (55) ಮತ್ತು ಸಮಾಪ್ತಿಯ ಪ್ರಾರ್ಥನೆ.
ಎಪ್ರಿಲ್ 8ರ ವಾರ
ಸಂಗೀತ 72 (58)
15 ನಿ: ಸ್ಥಳಿಕ ತಿಳಿಸುವಿಕೆಗಳು. ಅಕೌಂಟ್ಸ್ ವರದಿ; ಸೊಸೈಟಿಯಿಂದ ಬಂದ ದಾನದ ಅಂಗೀಕಾರಗಳ ಕುರಿತು ಉಲ್ಲೇಖಿಸಿರಿ. ಜ್ಞಾಪಕಕ್ಕೆ ಹಾಜರಾದ ಹೊಸಬರು ಹೆಚ್ಚಿನ ಆತ್ಮಿಕ ಪ್ರಗತಿಯನ್ನು ಮಾಡುವಂತೆ ನಾವು ಸಹಾಯವನ್ನು ಮಾಡಬಲ್ಲ ಪ್ರಾಯೋಗಿಕ ವಿಧಗಳನ್ನು ಚರ್ಚಿಸಿರಿ. ಎಪ್ರಿಲ್ 1, 1991ರ ವಾಚ್ಟವರ್, 9-12ನೆಯ ಪುಟಗಳನ್ನು ಪುನರ್ವಿಮರ್ಶಿಸಿರಿ.
15 ನಿ: “ಹಗಲಿರುಳು ಪವಿತ್ರ ಸೇವೆಯನ್ನು ಸಲ್ಲಿಸಿರಿ.” ಪ್ರಶ್ನೋತ್ತರಗಳು. 5 ಮತ್ತು 6ನೇ ಪ್ಯಾರಗ್ರಾಫ್ಗಳನ್ನು ಓದಿರಿ.
15 ನಿ: “ಎಪ್ರಿಲ್ ತಿಂಗಳಲ್ಲಿ ‘ಸತ್ಕ್ರಿಯೆಗಳಿಗಾಗಿ ಹುರುಪುಳ್ಳ’ವರಾಗಿರಿ!” 11-15ನೆಯ ಪ್ಯಾರಗ್ರಾಫ್ಗಳ ಪ್ರಶ್ನೋತ್ತರ ಆವರಿಸುವಿಕೆ. ತಮ್ಮ ವೈಯಕ್ತಿಕ ಪರಿಸ್ಥಿತಿಗಳನ್ನು ವಿಶ್ಲೇಷಿಸಲು ಮತ್ತು ಕ್ಷೇತ್ರ ಶುಶ್ರೂಷೆಗಾಗಿ ತಮ್ಮ ಬೆಂಬಲವನ್ನು ವೃದ್ಧಿಸಲು, ಮಾರ್ಗಗಳನ್ನು ಹುಡುಕಿ ತೆಗೆಯುವಂತೆ ಎಲ್ಲರನ್ನು ಪ್ರೋತ್ಸಾಹಿಸಿರಿ.
ಸಂಗೀತ 113 (62) ಮತ್ತು ಸಮಾಪ್ತಿಯ ಪ್ರಾರ್ಥನೆ.
ಎಪ್ರಿಲ್ 15ರ ವಾರ
ಸಂಗೀತ 133 (68)
10 ನಿ: ಸ್ಥಳಿಕ ತಿಳಿಸುವಿಕೆಗಳು. ಎಪ್ರಿಲ್ 21ರಂದು “ವಕ್ರ ಸಂತತಿಯ ನಡುವೆ ನಿರ್ದೋಷಿಗಳಾಗಿ ಉಳಿಯುವುದು” ಎಂಬ ಶೀರ್ಷಿಕೆಯುಳ್ಳ, ವಿಶೇಷ ಸಾರ್ವಜನಿಕ ಭಾಷಣದ ಕುರಿತು ಸಭಿಕರಿಗೆ ಜ್ಞಾಪಕಹುಟ್ಟಿಸಿರಿ. ಹಾಜರಾಗುವಂತೆ ಪ್ರತಿಯೊಬ್ಬರಿಗೂ ನೆರವನ್ನೀಯಲು ಹೆಚ್ಚಿನ ಪ್ರಯತ್ನವನ್ನು ಮಾಡುವಂತೆ ಪ್ರೋತ್ಸಾಹಿಸಿರಿ.
15 ನಿ: “ಪರಿಸ್ಥಿತಿಗಳು ಬದಲಾಗಿವೆ.” ಪ್ರಶ್ನೋತ್ತರಗಳು. ಜನರ ಅತ್ಯಂತ ಜರೂರಾದ ಅಗತ್ಯಗಳನ್ನು ಪೂರೈಸುವ ಒಂದು ವಿಧದಲ್ಲಿ ರಾಜ್ಯ ಸಂದೇಶವನ್ನು ನೀಡುವುದರ ಕುರಿತಾಗಿ ಒತ್ತಿಹೇಳಿರಿ. ಜನವರಿ 1, 1994ರ, ಕಾವಲಿನಬುರುಜು, 22-3ನೆಯ ಪುಟಗಳಲ್ಲಿ ಗಮನಿಸಲ್ಪಟ್ಟಿರುವಂತೆ, ಅನೇಕ ಜನರ ಮನಸ್ಸುಗಳಲ್ಲಿರುವ ಕೆಲವು ಕೌಟುಂಬಿಕ ಮತ್ತು ಸಾಮಾಜಿಕ ವಿವಾದಾಂಶಗಳನ್ನು ಸೂಚಿಸಿರಿ.
20 ನಿ: “ಕಿವಿಗೊಡಲ್ಪಟ್ಟ ವಿಷಯವನ್ನು ನಂಬಿಕೆಯು ಹಿಂಬಾಲಿಸುತ್ತದೆ.” ಜ್ಞಾನ ಪುಸ್ತಕದಲ್ಲಿ ಬೈಬಲ್ ಅಭ್ಯಾಸಗಳಿಗೆ ನಡೆಸಬಲ್ಲ ಆಸಕ್ತಿಯನ್ನು ಬೆಳೆಸಲು, ಪತ್ರಿಕಾ ಕೊಡಿಕೆಗಳು ಹೇಗೆ ಉಪಯೋಗಿಸಲ್ಪಡಸಾಧ್ಯವಿದೆ ಎಂಬುದನ್ನು ಚರ್ಚಿಸಿರಿ. ಎರಡು ಅಥವಾ ಮೂರು ನಿರೂಪಣೆಗಳು ಪ್ರತ್ಯಕ್ಷಾಭಿನಯಿಸಲ್ಪಡಲಿ.
ಸಂಗೀತ 204 (109) ಮತ್ತು ಸಮಾಪ್ತಿಯ ಪ್ರಾರ್ಥನೆ.
ಎಪ್ರಿಲ್ 22ರ ವಾರ
ಸಂಗೀತ 6 (4)
15 ನಿ: ಸ್ಥಳಿಕ ತಿಳಿಸುವಿಕೆಗಳು. ಈ ಕಳೆದ ವಾರಾಂತ್ಯದಲ್ಲಿ ಕೊಡಲ್ಪಟ್ಟ ವಿಶೇಷ ಭಾಷಣದ ಮುಖ್ಯವಿಷಯಗಳನ್ನು ಪುನರ್ವಿಮರ್ಶಿಸಿರಿ. ಈ ಬುದ್ಧಿವಾದವು ಸತ್ಯಾರಾಧನೆಗಾಗಿ ಒಂದು ದೃಢ ನಿಲುವನ್ನು ತೆಗೆದುಕೊಳ್ಳುವಂತೆ ಆಸಕ್ತ ಜನರನ್ನು ಹೇಗೆ ಪ್ರಚೋದಿಸಬೇಕು ಎಂಬುದನ್ನು ಚರ್ಚಿಸಿರಿ. ಹಾಗೂ “ನಿಷ್ಕೃಷ್ಟ ಜ್ಞಾನದಲ್ಲಿ ಏಳಿಗೆ ಹೊಂದುತ್ತಾ ಇರ್ರಿ” ಎಂಬ ವಿಷಯಕ್ಕೆ ಗಮನವನ್ನು ಸೆಳೆಯಿರಿ ಮತ್ತು ಸಭಾ ಪುಸ್ತಕ ಅಭ್ಯಾಸವನ್ನು ಕ್ರಮವಾಗಿ ಹಾಜರಾಗುವುದರ ಪ್ರಮುಖತೆಯನ್ನು ಒತ್ತಿಹೇಳಿರಿ.
12 ನಿ: ಪ್ರಶ್ನಾ ಪೆಟ್ಟಿಗೆ. ಹಿರಿಯನೊಬ್ಬನಿಂದ ಭಾಷಣ. ಕೂಟಗಳನ್ನು ನಡೆಸುವ ಸಹೋದರರು, ವ್ಯಕ್ತಿಗಳನ್ನು ಕೇವಲ ಪ್ರಥಮ ಹೆಸರುಗಳನ್ನು ಬಳಸುತ್ತಾ ಕರೆಯುವ ಮೂಲಕ ಅನೌಚಿತ್ಯದಿಂದ ದೂರವಿರಬೇಕಾದ ಕಾರಣವನ್ನು ವಿವರಿಸಿರಿ.
18 ನಿ: ಹಿರಿಯನ ಮತ್ತು ಶುಶ್ರೂಷಾ ಸೇವಕನ ನಡುವೆ, ಸೆಪ್ಟಂಬರ್ 15, 1995ರ ಕಾವಲಿನಬುರುಜುವಿನ ಸಂಚಿಕೆಯ, 20-3ನೆಯ ಪುಟಗಳಲ್ಲಿ ಕಂಡುಬರುವ “ಗತಕಾಲದ ದೈವಭಕ್ತಿಯ ಕುಟುಂಬಗಳು—ನಮ್ಮ ದಿನಕ್ಕಾಗಿ ಒಂದು ಮಾದರಿ” ಎಂಬ ಶೀರ್ಷಿಕೆಯುಳ್ಳ ಲೇಖನದ ಚರ್ಚೆ. ಸ್ಥಳಿಕವಾಗಿ ಕುಟುಂಬಗಳು ಪ್ರಯೋಜನ ಪಡೆಯುವಂತೆ ಪ್ರಾಯೋಗಿಕ ಅನ್ವಯವನ್ನು ಮಾಡಿರಿ.
ಸಂಗೀತ 143 (76) ಮತ್ತು ಸಮಾಪ್ತಿಯ ಪ್ರಾರ್ಥನೆ.
ಎಪ್ರಿಲ್ 29ರ ವಾರ
ಸಂಗೀತ 144 (78)
12 ನಿ: ಸ್ಥಳಿಕ ತಿಳಿಸುವಿಕೆಗಳು. ನಮ್ಮ ಚಟುವಟಿಕೆಗಳ ಮತ್ತು ಉದ್ದೇಶಗಳ ಕುರಿತು ಇತರರನ್ನು ತಪ್ಪಾದ ದಾರಿಗೆ ನಡೆಸುತ್ತಾ, ಕೆಲವರು ಯೆಹೋವನ ಸಾಕ್ಷಿಗಳನ್ನು ಒಂದು “ಪಂಥ” (ಸೆಕ್ಟ್) ಅಥವಾ “ಭಕ್ತವೃಂದ”ದೋಪಾದಿ (ಕಲ್ಟ್) ವರ್ಣಿಸುತ್ತಾರೆ. ರೀಸನಿಂಗ್ ಪುಸ್ತಕದ, 202ನೇ ಪುಟವನ್ನು ಉಪಯೋಗಿಸುತ್ತಾ, ಈ ಆಪಾದನೆಯನ್ನು ತಪ್ಪೆಂದು ಸಿದ್ಧಪಡಿಸುವ ವಿಧವನ್ನು ಸಂಕ್ಷಿಪ್ತವಾಗಿ ವಿವರಿಸಿರಿ.
15 ನಿ: ನಮ್ಮ ಟೆರಿಟೊರಿಗೆ ಸಮಾನವಾದ ಗಮನವನ್ನು ಕೊಡುವುದು. ಸೇವಾ ಮೇಲ್ವಿಚಾರಕನಿಂದ ಭಾಷಣ. ಚದುರಿಹೋಗಿರುವ ಅಥವಾ ಅತಿ ದೂರದ ಕ್ಷೇತ್ರಗಳು ವಿರಳವಾಗಿ ಕೆಲಸಮಾಡಲ್ಪಟ್ಟಿರಬಹುದು. ಕೆಲವರು ಉದ್ದೇಶಪೂರ್ವಕವಾಗಿ, ಜನರು ಶ್ರೀಮಂತರಾಗಿರುವ ಅಥವಾ ಧಾರ್ಮಿಕತೆಯಲ್ಲಿ ಅತಿ ಕಟ್ಟುನಿಟ್ಟಾಗಿರುವ ಜನರಿರುವ ಸ್ಥಳಗಳಲ್ಲಿ ಕೆಲಸಮಾಡುವುದನ್ನು ತೊರೆಯಬಹುದು. ವ್ಯಾಪಾರ ಟೆರಿಟೊರಿಗಳು ಅಲಕ್ಷಿಸಲ್ಪಡಬಹುದು. ಕೆಲವು ಪ್ರಚಾರಕರು, ಪ್ರಸ್ತುತವಾಗಿ ಆವರಿಸುವಿಕೆಯ ಅಗತ್ಯವಿರುವ ಕ್ಷೇತ್ರಗಳಿಗಿಂತ, ತಾವು ವೈಯಕ್ತಿಕವಾಗಿ ಇಷ್ಟಪಡುವ ಟೆರಿಟೊರಿಗಳನ್ನು ಕ್ರಮವಾಗಿ ವಿನಂತಿಸಿಕೊಳ್ಳಬಹುದು. ಕೆಲಸಮಾಡಲ್ಪಡದ ಟೆರಿಟೊರಿಗಳನ್ನು ಆವರಿಸಲು ಮಾಡುವ ಪ್ರಯತ್ನಗಳೊಂದಿಗೆ ಸಹಕರಿಸಲು ಎಲ್ಲರನ್ನು ಪ್ರೋತ್ಸಾಹಿಸಿರಿ. ಅತಿ ದೂರದಲ್ಲಿರುವ ಗ್ರಾಮೀಣ ಪ್ರದೇಶಗಳಲ್ಲಿ ಕೆಲಸಮಾಡಲು, ಬೇಸಗೆಯ ತಿಂಗಳುಗಳು ಸಾಮಾನ್ಯವಾಗಿ ಒಂದು ಒಳ್ಳೆಯ ಅವಕಾಶವನ್ನು ಒದಗಿಸುತ್ತವೆ; ಪ್ರಾಯಶಃ ಕಾರ್ ಗುಂಪುಗಳು ಸಂಘಟಿಸಲ್ಪಡಸಾಧ್ಯವಿದೆ. ನಕ್ಷೆಯು ಹಿಂದಿರುಗಿಸಲ್ಪಡುವ ಮೊದಲು, ಮನೆಯಲ್ಲಿಲ್ಲದವರನ್ನು ಒಳಗೊಂಡು, ಟೆರಿಟೊರಿಯು ಸಂಪೂರ್ಣವಾಗಿ ಆವರಿಸಲ್ಪಟ್ಟಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿರಿ. ನಿಮ್ಮ ಟೆರಿಟೊರಿಗೆ ಅತ್ಯುತ್ತಮ ಆವರಿಸುವಿಕೆಯನ್ನು ನೀಡುವುದರಲ್ಲಿ ಎಲ್ಲರೂ ಹೇಗೆ ನೆರವನ್ನೀಯಬಲ್ಲರು ಎಂಬುದನ್ನು ತೋರಿಸುತ್ತಾ, ಇತರ ಪ್ರಾಯೋಗಿಕ ಸೂಚನೆಗಳನ್ನು ನೀಡಿರಿ.
18 ನಿ: ಮೇ ತಿಂಗಳಿನಲ್ಲಿ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಿಗೆ ಚಂದಾಗಳನ್ನು ನೀಡಿರಿ. ಪ್ರಥಮ ಭೇಟಿಯಲ್ಲಿ ಒಂದು ಚಂದಾವಿನ ನೀಡುವಿಕೆಯು ನಿರಾಕರಿಸಲ್ಪಡುವಾಗ, ಪತ್ರಿಕೆಗಳ ಬಿಡಿ ಪ್ರತಿಗಳನ್ನು ನೀಡಿರಿ ಮತ್ತು ಸೂಕ್ತವಾಗಿರುವಲ್ಲಿ, ಪುನರ್ಭೇಟಿಯಲ್ಲಿ ಪುನಃ ಚಂದಾವನ್ನು ನೀಡಿರಿ. ಮನೆಯವನು ಪತ್ರಿಕೆಗಳಲ್ಲಿ ಆಸಕ್ತನಾಗಿದ್ದು, ಕಾರಣಾಂತರದಿಂದ ಒಂದು ಚಂದಾವನ್ನು ಸ್ವೀಕರಿಸದಿರುವುದಾದರೆ, ಒಂದು ಪತ್ರಿಕಾ ಮಾರ್ಗವನ್ನು ಸ್ಥಾಪಿಸುವ ಗುರಿಯೊಂದಿಗೆ ಕೊಡಿಕೆಯ ಒಂದು ದಾಖಲೆಯನ್ನಿಡಿರಿ. ಪತ್ರಿಕಾ ವಿತರಣೆಯ ಬಹಳ ವ್ಯಾಪನೆಯುಳ್ಳ ಪ್ರಯೋಜನಗಳು, ಸಾರ್ವಜನಿಕರಿಗೆ ರಾಜ್ಯ ಸಂದೇಶವನ್ನು ಮುಟ್ಟಿಸುವ ಅತ್ಯಂತ ಪರಿಣಾಮಕಾರಕ ಮಾಧ್ಯಮಗಳಲ್ಲಿ ಒಂದೆಂದು ಒತ್ತಿಹೇಳಿರಿ. ನೀವು ಕ್ಷೇತ್ರ ಸೇವೆಗಾಗಿ ಹೋಗುವಾಗ ಒಂದು ಸರಬರಾಯಿಯು ನಿಮ್ಮಲ್ಲಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿರಿ; ಅವುಗಳನ್ನು ಪ್ರತಿಯೊಂದು ಸಂದರ್ಭದಲ್ಲಿಯೂ ನೀಡಿರಿ. ಒಂದು ಸಾಪ್ತಾಹಿಕ ಪತ್ರಿಕಾ ದಿನಕ್ಕಾಗಿರುವ ವೈಯಕ್ತಿಕ ಏರ್ಪಾಡುಗಳು, ಕೊಡಿಕೆಗಳನ್ನು ಹೆಚ್ಚಿಸಲು ಒಂದು ಉತ್ಪನ್ನಕರ ವಿಧವಾಗಿವೆ. ಪತ್ರಿಕೆಗಳೊಂದಿಗೆ ಅಂಗಡಿಯಿಂದ ಅಂಗಡಿ ಕೆಲಸ ಮತ್ತು ರಸ್ತೆ ಸಾಕ್ಷಿ ಕಾರ್ಯವೂ ಉತ್ಪನ್ನಕರವಾಗಿದೆ. ಜ್ಞಾನ ಪುಸ್ತಕವನ್ನು ಬಳಸುತ್ತಾ, ಅಭ್ಯಾಸಗಳನ್ನು ಪ್ರಾರಂಭಿಸಲು ವಿನ್ಯಾಸಿಸಲ್ಪಟ್ಟಿರುವ ಪುನರ್ಭೇಟಿಗಳೊಂದಿಗೆ ಆಸಕ್ತಿಯನ್ನು ಅನುಸರಿಸಿಕೊಂಡು ಹೋಗಿರಿ. ಪ್ರಾಯಶಃ ನಮ್ಮ ರಾಜ್ಯದ ಸೇವೆ, ಜನವರಿ 1996, ಪುಟ 3, 3-5ನೆಯ ಪ್ಯಾರಗ್ರಾಫ್ಗಳಲ್ಲಿ ಕಂಡುಬರುವ ನಿರೂಪಣೆಗಳನ್ನು ಉಪಯೋಗಿಸುತ್ತಾ, ಪ್ರಸ್ತುತ ಸಂಚಿಕೆಗಳನ್ನು ನೀಡುವ ಒಂದು ಅಥವಾ ಎರಡು ಪ್ರತ್ಯಕ್ಷಾಭಿನಯಗಳನ್ನು ಮಾಡಿರಿ.
ಸಂಗೀತ 195 (105) ಮತ್ತು ಸಮಾಪ್ತಿಯ ಪ್ರಾರ್ಥನೆ.