ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 4/96 ಪು. 1
  • ಪರಿಸ್ಥಿತಿಗಳು ಬದಲಾಗಿವೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪರಿಸ್ಥಿತಿಗಳು ಬದಲಾಗಿವೆ
  • 1996 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ನಾವು ಸಾರಲೇಬೇಕಾದಂಥ ಸಂದೇಶ
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ರಾಜ್ಯವನ್ನು ಸಾರಿರಿ
    1996 ನಮ್ಮ ರಾಜ್ಯದ ಸೇವೆ
  • ‘ಹೆಚ್ಚು ಉತ್ತಮವಾದ ವಿಷಯದ ಶುಭವರ್ತಮಾನವನ್ನು ತರುವುದು’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
  • ವಿಶ್ವಾಸಾರ್ಹ ಮಾರ್ಗದರ್ಶನವನ್ನು ನೀವು ಎಲ್ಲಿ ಕಂಡುಕೊಳ್ಳಬಲ್ಲಿರಿ?
    ಕಾವಲಿನಬುರುಜು—1994
ಇನ್ನಷ್ಟು
1996 ನಮ್ಮ ರಾಜ್ಯದ ಸೇವೆ
km 4/96 ಪು. 1

ಪರಿಸ್ಥಿತಿಗಳು ಬದಲಾಗಿವೆ

1 “ಈ ಲೋಕದ ದೃಶ್ಯವು ಬದಲಾಗುತ್ತಿದೆ” ಎಂದು ಬೈಬಲ್‌ ನಮಗೆ ಹೇಳುತ್ತದೆ. (1 ಕೊರಿಂ. 7:31, NW) ಇಂದು ಅದು ಎಷ್ಟೊಂದು ಸತ್ಯವಾಗಿದೆ! ನಮ್ಮ ಜೀವಮಾನದಲ್ಲಿಯೂ, ಮಾನವ ಸಮಾಜದ ಪ್ರತಿಯೊಂದು ಮಟ್ಟದಲ್ಲಿ, ಜನರ ಆಲೋಚಿಸುವಿಕೆಯಲ್ಲಿಯೂ ವರ್ತನೆಯಲ್ಲಿಯೂ ಪ್ರಚಂಡವಾದ ಬದಲಾವಣೆಗಳನ್ನು ನಾವು ನೋಡಿದ್ದೇವೆ. ರಾಜ್ಯ ಸಂದೇಶದೊಂದಿಗೆ ನಾವು ಅವರನ್ನು ತಲಪುವುದರಲ್ಲಿ ಸಫಲರಾಗಿರಬೇಕಾದರೆ, ನಮ್ಮ ಪ್ರಸ್ತಾವನೆಯು ಬದಲಾಗುತ್ತಿರುವ ಪರಿಸ್ಥಿತಿಗಳೊಂದಿಗೆ ಹೊಂದಿಕೆಯಲ್ಲಿರಬೇಕು. ನಾವು ಸುವಾರ್ತೆಯನ್ನು ಎಂಥ ಒಂದು ವಿಧದಲ್ಲಿ ಪ್ರಸ್ತುತಪಡಿಸಲು ಇಚ್ಛಿಸಬೇಕೆಂದರೆ, ಅದು ಜನರಿಗೆ ಆಸಕ್ತಿಯುಳ್ಳದ್ದೂ ಅವರ ಹೃದಯಗಳನ್ನು ತಲಪುವಂಥದ್ದೂ ಆಗಿರಬೇಕು.

2 ವರ್ಷಗಳ ಹಿಂದೆ, ಅನೇಕ ದೇಶಗಳಲ್ಲಿ ಸಾಕ್ಷಿ ಕಾರ್ಯವು ಭಿನ್ನವಾಗಿತ್ತು, ಏಕೆಂದರೆ ಬಹುಮಟ್ಟಿಗೆ ಜನರು ಹೆಚ್ಚು ಪ್ರಶಾಂತವಾದ ಜೀವಿತಗಳನ್ನು ಜೀವಿಸಿದರು, ಮತ್ತು ಅವರಿಗೆ ಸುರಕ್ಷಿತವಾದ ಭಾವನೆಯಿತ್ತು. ಅವರ ಜೀವಿತಗಳಲ್ಲಿ ಧರ್ಮವು ಒಂದು ಪವಿತ್ರ ಸ್ಥಾನವನ್ನು ಪಡೆದಿತ್ತು. ಬೈಬಲ್‌, ಕ್ರೈಸ್ತರೆಂದು ಹೇಳಿಕೊಳ್ಳಲ್ಪಡದ ಜನರ ನಡುವೆಯೂ, ಬಹಳವಾಗಿ ಆದರಿಸಲ್ಪಟ್ಟಿತು. ಆ ದಿನಗಳಲ್ಲಿ ಸಾಕ್ಷಿ ಕಾರ್ಯವು, ಅನೇಕ ವೇಳೆ ಸೈದ್ಧಾಂತಿಕ ವಿವಾದಾಂಶಗಳ ಮೇಲಿನ ವಾದಗಳನ್ನು ತಪ್ಪೆಂದು ಸಿದ್ಧಮಾಡಿಕೊಡುವುದನ್ನು ಒಳಗೊಂಡಿತು. ಇಂದು, ಜನರ ಜೀವಿತಗಳು ಸಂಕ್ಷೋಭೆಯಲ್ಲಿವೆ. ಧರ್ಮವು ಅನೇಕ ವೇಳೆ ನಗೆಗೀಡಾಗಿದೆ. ಬೈಬಲಿನಲ್ಲಿ ಕೆಲವೇ ಮಂದಿಗೆ ನಂಬಿಕೆಯಿದೆ. ಅನೇಕರು ನಮ್ಮ ಸಂದೇಶವನ್ನು ವಿರೋಧಿಸುತ್ತಾರೆ. ಮತ್ತು ಕೆಲವರಿಗಾದರೋ, ವಿಕಾಸ ವಾದವು ದೇವರಲ್ಲಿನ ನಂಬಿಕೆಯನ್ನು ಸಂಪೂರ್ಣವಾಗಿ ನಾಶಗೊಳಿಸಿದೆ.

3 ಒಬ್ಬ ಸಂಚರಣಾ ಮೇಲ್ವಿಚಾರಕನು ಅವಲೋಕಿಸಿದ್ದು: “ಈಗ, ಜನರ ಜೀವಿತಗಳಲ್ಲಿ ಎಷ್ಟೊಂದು ಸಮಸ್ಯೆಗಳು ಮತ್ತು ಕಷ್ಟಗಳಿವೆಯೆಂದರೆ, ನಾವು ಅವರಿಗೆ ಜೀವಿಸುವ ವಿಧವನ್ನು ಕಲಿಸಲೇಬೇಕೆಂದು ತೋರುತ್ತದೆ.” ಸ್ವಾಭಾವಿಕವಾಗಿ, ಜನರ ಪ್ರಸ್ತುತ ಚಿಂತೆಗಳು ತಮ್ಮ, ತಮ್ಮ ಕುಟುಂಬಗಳ ಮತ್ತು ತಮ್ಮ ವ್ಯಾಕುಲತೆಗಳ ಸುತ್ತಲೂ ಸುತ್ತುತ್ತಿರುತ್ತವೆ. ಅವರು ಒಟ್ಟು ಸೇರಿದಾಗ ಹೆಚ್ಚಾಗಿ ಮಾತಾಡುವಂಥದ್ದು ಈ ವಿಷಯಗಳ ಕುರಿತಾಗಿಯೇ. ನಮ್ಮ ಸಾರುವ ಕಾರ್ಯದಲ್ಲಿ ನಾವು ಅದನ್ನು ಮನಸ್ಸಿನಲ್ಲಿಡಬೇಕಾಗಿದೆ.

4 ದೇವರ ರಾಜ್ಯವು ಭವಿಷ್ಯತ್ತಿಗಾಗಿರುವ ಏಕಮಾತ್ರ ದೃಢ ನಿರೀಕ್ಷೆಯಾಗಿದೆ: ಹೆಚ್ಚಿನ ಜನರಿಗೆ ಮಾನವ ಸರಕಾರದಲ್ಲಿ ಸ್ವಲ್ಪವೇ ಭರವಸೆಯಿದೆ. ತಮ್ಮ ಜೀವಮಾನದಲ್ಲಿ ಒಂದು ಉತ್ತಮ ಲೋಕವನ್ನು ನೋಡಲಿಕ್ಕಾಗಿ ಯಾವುದೇ ಪ್ರತೀಕ್ಷೆಯಿಲ್ಲವೆಂದು ಅವರು ಭಾವಿಸುತ್ತಾರೆ. ಸುಳ್ಳು ಧರ್ಮವು ನಿರೀಕ್ಷೆಗಾಗಿ ಯಾವುದೇ ಆಧಾರವನ್ನು ಅವರಿಗೆ ಕೊಡಲು ವಿಫಲಗೊಂಡಿದೆ. ಆದುದರಿಂದಲೇ, ಮಾನವಕುಲದ ಅತ್ಯಂತ ಮಹಾ ಅಗತ್ಯವು, ದೇವರ ರಾಜ್ಯದ ಕುರಿತಾದ ಸುವಾರ್ತೆಯನ್ನು ಕೇಳುವುದೇ ಆಗಿದೆ. ಮಾನವಕುಲವು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೆ ಅದು ಹೇಗೆ ಕಟ್ಟಕಡೆಗೆ ಪರಿಹಾರಗಳನ್ನು ಒದಗಿಸುವುದು ಎಂಬುದನ್ನು ತೋರಿಸಿರಿ.

5 ಮಾರ್ಗದರ್ಶನೆಯ ಏಕಮಾತ್ರ ಭರವಸಾರ್ಹ ಮೂಲವು ಬೈಬಲ್‌ ಆಗಿದೆ: ಇಂದಿನ ಜನರು, ಮಾನವ ವಿವೇಕ ಮತ್ತು ಲೌಕಿಕ ತತ್ತ್ವಜ್ಞಾನಗಳ ಮೇಲೆ ಆತುಕೊಳ್ಳುವ ಮುಖಂಡರಿಂದ ತಪ್ಪು ದಾರಿಗೆ ನಡೆಸಲ್ಪಟ್ಟಿದ್ದಾರೆ. “ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು” ಎಂಬುದನ್ನು ಜನರು ಇನ್ನೂ ಗ್ರಹಿಸಬೇಕಾಗಿದೆ. (ಯೆರೆ. 10:23) ಅವರು ಕಲಿಯಸಾಧ್ಯವಿರುವ ಅತ್ಯಮೂಲ್ಯ ಪಾಠವು, ಅವರು ‘ತಮ್ಮ ಸಂಪೂರ್ಣ ಹೃದಯದಿಂದ ಯೆಹೋವನಲ್ಲಿ ಭರವಸೆಯನ್ನಿಡಬೇಕು ಮತ್ತು ತಮ್ಮ ಸ್ವಂತ ತಿಳಿವಳಿಕೆಯನ್ನು ಆಧಾರಮಾಡಿಕೊಳ್ಳಬಾರದು’ ಎಂಬುದೇ ಆಗಿದೆ. (ಜ್ಞಾನೋ. 3:5) ಪರಿಸ್ಥಿತಿಗಳು ಬದಲಾಗಿರುವುದಾದರೂ, ಬೈಬಲ್‌ ಬದಲಾಗಿಲ್ಲ. ಆದಕಾರಣ, ನಮ್ಮ ಶುಶ್ರೂಷೆಯಲ್ಲಿ ನಾವು ಸಾಧ್ಯವಾದಾಗಲೆಲ್ಲಾ, ದೇವರ ವಾಕ್ಯದ ಪ್ರೇರಿತ ದೈವಿಕ ಮಾರ್ಗದರ್ಶನೆಯನ್ನು ಗಣ್ಯಮಾಡಲು ಇತರರಿಗೆ ಕಲಿಸುತ್ತಾ, ಅದನ್ನು ಪ್ರದರ್ಶಿಸಬೇಕು. (2 ತಿಮೊ. 3:16, 17) ಆ ಉದ್ದೇಶವನ್ನು ಪೂರೈಸಲಿಕ್ಕೆ ನಾವು ಜನರ ಮುಂದೆ ಬೈಬಲಿನ ಪ್ರಮುಖತೆಯನ್ನಿಡಬೇಕು—ಆದರೆ ಜಾಣ್ಮೆಯಿಂದ—ಅದನ್ನು ನಮ್ಮ ನಿರೂಪಣೆಗಳಲ್ಲಿ ಉಲ್ಲೇಖಿಸುತ್ತಾ, ಅವರ ಪ್ರಶ್ನೆಗಳನ್ನು ಉತ್ತರಿಸಲು ಅದನ್ನು ಉಪಯೋಗಿಸುತ್ತಾ, ಮತ್ತು ಅದನ್ನು ಅಭ್ಯಸಿಸುವ ಹಾಗೂ ಅದರ ಪ್ರಾಯೋಗಿಕ ವಿವೇಕವನ್ನು ಅನ್ವಯಿಸುವ ಅಗತ್ಯವನ್ನು ಸಮರ್ಥಿಸುವ ಮೂಲಕವೇ.

6 ಇಂದಿನ ಬದಲಾಗುತ್ತಿರುವ ಪರಿಸ್ಥಿತಿಗಳೊಂದಿಗೂ, ಶುಶ್ರೂಷೆಯಲ್ಲಿನ ನಮ್ಮ ಲಕ್ಷ್ಯಗಳು ಬದಲಾಗದೆ ಉಳಿಯುತ್ತವೆ. ನಾವು ರಾಜ್ಯದ ಸುವಾರ್ತೆಯನ್ನು ಸಾರಬೇಕು, ದೇವರ ವಾಕ್ಯದಲ್ಲಿ ಭರವಸೆಯನ್ನು ಕಟ್ಟಬೇಕು, ಮತ್ತು ನಮ್ಮೊಂದಿಗೆ ಬೈಬಲನ್ನು ಅಭ್ಯಸಿಸುವ ಅಗತ್ಯವನ್ನು ಅವಲೋಕಿಸಲು ಇತರರಿಗೆ ಸಹಾಯಮಾಡಬೇಕು. ನಾವು ಯಾರಿಗೆ ಸಾಕ್ಷಿ ನೀಡುತ್ತೇವೋ ಅವರ ಪ್ರಸ್ತುತ ಅಗತ್ಯಗಳಿಗೆ, ನಾವು ಹೇಳುವ ವಿಷಯವು ಸುಸಂಬದ್ಧವಾಗಿರತಕ್ಕದ್ದು. ಇದನ್ನು ಮಾಡುವ ಮೂಲಕ, ನಾವು ಇತರರೊಂದಿಗೆ ಸುವಾರ್ತೆಯನ್ನು ಹಂಚಿಕೊಳ್ಳುವವರಾಗಬಹುದು ಮತ್ತು ಹೀಗೆ ಹೆಚ್ಚಿನ ವ್ಯಕ್ತಿಗಳನ್ನು ಗಳಿಸಬಹುದು.—1 ಕೊರಿಂ. 9:19, 23.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ