ಜುಲೈಗಾಗಿ ಸೇವಾ ಕೂಟಗಳು
ಜುಲೈ 3ರ ವಾರ
ಸಂಗೀತ 194 (105)
10 ನಿ: ಸ್ಥಳಿಕ ತಿಳಿಸುವಿಕೆಗಳು ಮತ್ತು ನಮ್ಮ ರಾಜ್ಯದ ಸೇವೆ ಯಿಂದ ಆಯ್ದ ಪ್ರಕಟನೆಗಳು.
17 ನಿ: “ಎಚ್ಚರವಾಗಿರ್ರಿ.” ಪ್ರಶ್ನೋತ್ತರಗಳು.
18 ನಿ: “ನಿಮ್ಮ ಶುಶ್ರೂಷೆಯಲ್ಲಿ ವಿವಿಧ ಬ್ರೋಷರ್‌ಗಳನ್ನು ಉಪಯೋಗಿಸಿರಿ.” ಸೂಚಿಸಲ್ಪಟ್ಟ ನಿರೂಪಣೆಗಳನ್ನು ಸಭಿಕರೊಂದಿಗೆ ಚರ್ಚಿಸಿರಿ. ಬ್ರೋಷರುಗಳ ಮನೋಹರ ವೈಶಿಷ್ಟ್ಯಗಳ ಕುರಿತು ಸಂಕ್ಷಿಪ್ತ ಹೇಳಿಕೆಗಳನ್ನು ಮಾಡಿರಿ. ಅವುಗಳನ್ನು ಹೇಗೆ ನೀಡಸಾಧ್ಯವಿದೆ ಎಂಬುದನ್ನು ತೋರಿಸಲು ಎರಡು ಅಥವಾ ಮೂರು ಸಂಕ್ಷಿಪ್ತ ಪ್ರತ್ಯಕ್ಷಾಭಿನಯಗಳನ್ನು ಏರ್ಪಡಿಸಿರಿ.
ಸಂಗೀತ 213 (36) ಮತ್ತು ಸಮಾಪ್ತಿಯ ಪ್ರಾರ್ಥನೆ.
ಜುಲೈ 10ರ ವಾರ
ಸಂಗೀತ 110 (56)
10 ನಿ: ಸ್ಥಳಿಕ ತಿಳಿಸುವಿಕೆಗಳು. ಅಕೌಂಟ್ಸ್ ವರದಿ.
20 ನಿ: “ಯೆಹೋವನ ಮರುಜ್ಞಾಪನಗಳು ನಮ್ಮನ್ನು ಆತ್ಮಿಕವಾಗಿ ಹುರಿದುಂಬಿಸುತ್ತಿವೆಯೊ?” ಪ್ರಶ್ನೋತ್ತರಗಳು.
15 ನಿ: ಒಂದು ಮನೆ ಬೈಬಲ್ ಅಧ್ಯಯನವನ್ನು ನಡೆಸುವುದು. ಪ್ರಗತಿಪರ ಬೈಬಲ್ ಅಧ್ಯಯನಗಳನ್ನು ನಡೆಸುವ ಹಿರಿಯನಿಂದ ಭಾಷಣ. ಬೈಬಲ್ ಅಧ್ಯಯನಗಳನ್ನು ಆರಂಭಿಸಲು ಹೆಚ್ಚಿನ ಪ್ರಯತ್ನವನ್ನು ಉತ್ತೇಜಿಸಿರಿ. ನಮ್ಮ ಶುಶ್ರೂಷೆಯನ್ನು ನೆರವೇರಿಸಲು ವ್ಯವಸ್ಥಿತರು, ಪುಟಗಳು 89-91 ರಲ್ಲಿ ನೀಡಲ್ಪಟ್ಟಿರುವ ಸೂಚನೆಗಳ ಪುನರ್ವಿಮರ್ಶೆ ಮಾಡಿರಿ. ಸಂಕ್ಷಿಪ್ತ ಸ್ಥಳಿಕ ಅನುಭವಗಳನ್ನು ಸೇರಿಸಬಹುದು.
ಸಂಗೀತ 154 (72) ಮತ್ತು ಸಮಾಪ್ತಿಯ ಪ್ರಾರ್ಥನೆ.
ಜುಲೈ 17ರ ವಾರ
ಸಂಗೀತ 192 (103)
10 ನಿ: ಸ್ಥಳಿಕ ತಿಳಿಸುವಿಕೆಗಳು.
20 ನಿ: “ಬ್ರೋಷರ್‌ಗಳನ್ನು ನೀಡಿರುವಲ್ಲೆಲ್ಲಾ ಪುನರ್ಭೇಟಿಗಳನ್ನು ಮಾಡಿರಿ.” ಎಲ್ಲ ಆಸಕ್ತಿ ಮತ್ತು ಕೊಡಿಕೆಗಳನ್ನು ಅನುಸರಿಸುವುದು ಯಾಕೆ ಪ್ರಾಮುಖ್ಯವೆಂದು ಈ ಭಾಗಕ್ಕೆ ನೇಮಿಸಲ್ಪಟ್ಟ ಸಹೋದರನು ಬೇರೆ ಮೂರು ಪ್ರಚಾರಕರೊಂದಿಗೆ ಚರ್ಚಿಸುವನು. ಸೂಚಿಸಲ್ಪಟ್ಟ ನಿರೂಪಣೆಗಳನ್ನು ಅವರು ಪುನರ್ವಿಮರ್ಶಿಸುತ್ತಾರೆ ಮತ್ತು ಅವುಗಳನ್ನು ಹೇಗೆ ಉಪಯೋಗಿಸಸಾಧ್ಯವಿದೆ ಎಂದು ಒಬ್ಬರು ಇನ್ನೊಬ್ಬರಿಗೆ ಪ್ರತ್ಯಕ್ಷಾಭಿನಯಿಸುತ್ತಾರೆ.
15 ನಿ: “1995ರ ‘ಹರ್ಷಭರಿತ ಸುತ್ತಿಗಾರರು’ ಯೆಹೋವನ ಸಾಕ್ಷಿಗಳ ಜಿಲ್ಲಾ ಅಧಿವೇಶನ.” ಪುರವಣಿ. 1-9 ನೆಯ ಪ್ಯಾರಗ್ರಾಫ್‌ಗಳ ಮೇಲೆ ಭಾಷಣ. ಇದನ್ನು ಅಧ್ಯಕ್ಷ ಮೇಲ್ವಿಚಾರಕನು ನಿರ್ವಹಿಸಬೇಕು. ಸರಳೀಕರಿಸಿದ ಆಹಾರ ಸೇವೆಗೆ ಹೊಂದಿಕೊಳ್ಳುವುದರ ಸಕಾರಾತ್ಮಕ ಪ್ರಯೋಜನಗಳನ್ನು ಒತ್ತಿಹೇಳಿರಿ.
ಸಂಗೀತ 164 (73) ಮತ್ತು ಸಮಾಪ್ತಿಯ ಪ್ರಾರ್ಥನೆ.
ಜುಲೈ 24ರ ವಾರ
ಸಂಗೀತ 126 (10)
5 ನಿ: ಸ್ಥಳಿಕ ತಿಳಿಸುವಿಕೆಗಳು.
20 ನಿ: “1995ರ ‘ಹರ್ಷಭರಿತ ಸುತ್ತಿಗಾರರು’ ಯೆಹೋವನ ಸಾಕ್ಷಿಗಳ ಜಿಲ್ಲಾ ಅಧಿವೇಶನ.” ಪುರವಣಿ. 10-21 ಪ್ಯಾರಗ್ರಾಫ್‌ಗಳ ಪ್ರಶ್ನೋತ್ತರ ಆವರಿಸುವಿಕೆ. ಇದನ್ನು ಸಭೆಯ ಸೆಕ್ರಿಟರಿ ನಿರ್ವಹಿಸಬೇಕು. ಸಮಾಪ್ತಿಯಲ್ಲಿ ಮರುಜ್ಞಾಪನಗಳ ರೇಖಾಚೌಕದ ಕಡೆಗೆ ಗಮನವನ್ನು ಸೆಳೆಯಿರಿ. ಅಧಿವೇಶನಕ್ಕೆ ಅಗತ್ಯವಾದ ಆಹಾರ ಮತ್ತು ಸಂಬಂಧಿತ ವಸ್ತುಗಳನ್ನು ಮಾತ್ರ ಒಯ್ಯುವ ವಿಷಯದಲ್ಲಿ ಜಾಣತನವನ್ನು ಉಪಯೋಗಿಸುವುದಕ್ಕೆ ಒತ್ತನ್ನು ನೀಡಿರಿ.
20 ನಿ: ನೆರೆಯವರು ಏನು ನೆನಸುವರು? ಎಪ್ರಿಲ್ 1, 1974ರ ವಾಚ್‌ಟವರ್, ಪುಟಗಳು 201-3ರ ಮೇಲೆ ಆಧರಿತವಾದ ಭಾಷಣ ಮತ್ತು ಪ್ರತ್ಯಕ್ಷಾಭಿನಯ. ನಾವು ಯಾಕೆ ಅನೇಕ ವೇಳೆ ನಮ್ಮ ಲೌಕಿಕ ನೆರೆಯವರಿಂದ ಒತ್ತಾಯಿಸಲ್ಪಡುತ್ತೇವೆ ಎಂಬ ವಿಷಯದ ಮೇಲೆ ಒಂದು ಭಾಷಣವನ್ನು ನೀಡಿರಿ. (ಪುಟ 201 ಮತ್ತು ಪುಟ 202 ರಲ್ಲಿರುವ ಮೊದಲನೆಯ ಪ್ಯಾರಗ್ರಾಫನ್ನು ಆವರಿಸಿರಿ.) ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಾಸಿಸುವ ವಿಷಯವನ್ನು ವಿರೋಧಿಸುವ ಲೌಕಿಕ ನೆರೆಯವರಿಂದ ಹೆದರಿಸಲ್ಪಡುತ್ತಿರುವ ಹೊಸದಾಗಿ ಆಸಕ್ತಿಯನ್ನು ತೋರಿಸಿದ ಕುಟುಂಬದೊಂದಿಗೆ ಒಬ್ಬ ಅನುಭವಸ್ಥ ದಂಪತಿಗಳು ಬೈಬಲ್ ಅಧ್ಯಯನವನ್ನು ನಡೆಸುತ್ತಿರುವುದನ್ನು ತೋರಿಸುವ ಒಂದು ಪ್ರತ್ಯಕ್ಷಾಭಿನಯವನ್ನು ಏರ್ಪಡಿಸಿರಿ. (ಲೇಖನದ ಉಳಿದ ಭಾಗದಲ್ಲಿರುವ ಮುಖ್ಯ ಅಂಶಗಳನ್ನು ಪುನರ್ವಿಮರ್ಶಿಸಿರಿ.) ಹೊಸದಾಗಿ ಆಸಕ್ತಿಯನ್ನು ತೋರಿಸಿದ ಕುಟುಂಬವು ಯಾಕೆ ನಿರಾಶೆಗೊಳ್ಳಬಾರದು ಅಥವಾ ಬಿಟ್ಟುಬಿಡಬಾರದು ಎಂಬುದಕ್ಕೆ ಕಾರಣಗಳನ್ನು ಒತ್ತಿಹೇಳಿರಿ.
ಸಂಗೀತ 169 (81) ಮತ್ತು ಸಮಾಪ್ತಿಯ ಪ್ರಾರ್ಥನೆ.
ಜುಲೈ 31ರ ವಾರ
ಸಂಗೀತ 136 (28)
10 ನಿ: ಸ್ಥಳಿಕ ತಿಳಿಸುವಿಕೆಗಳು. ದೇವಪ್ರಭುತ್ವ ವಾರ್ತೆಗಳು.
15 ನಿ: “ಭಕ್ತಿವೃದ್ಧಿ ಮಾಡುವವರಾಗಿರ್ರಿ.” ಹಿರಿಯನಿಂದ ಚರ್ಚೆ ಮತ್ತು ಭಾಷಣ.
20 ನಿ: ಆಗಸ್‌ಗ್ಟಾಗಿ ಸಾಹಿತ್ಯ ನೀಡುವಿಕೆಯ ಪುನರ್ವಿಮರ್ಶೆ ಮಾಡಿರಿ. ಉಪಯೋಗಿಸಬಹುದಾದ 32 ಪುಟದ ಬ್ರೋಷರುಗಳ ಉಲ್ಲೇಖ ಮಾಡಿರಿ. ಜುಲೈ ತಿಂಗಳಿನಲ್ಲಿ ಬ್ರೋಷರುಗಳನ್ನು ನೀಡುವಾಗ ತಮಗಾದ ಯಾವುದೇ ಆಸಕ್ತಿಕರ ಅನುಭವಗಳನ್ನು ಹೇಳುವಂತೆ ಪ್ರಚಾರಕರನ್ನು ಆಮಂತ್ರಿಸಿರಿ. ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ? ಎಂಬ ಬ್ರೋಷರನ್ನು ಉಪಯೋಗಿಸುತ್ತಾ, ಒಂದು ಬೈಬಲ್ ಅಧ್ಯಯನವನ್ನು ಹೇಗೆ ಆರಂಭಿಸುವುದೆಂದು ಪ್ರತ್ಯಕ್ಷಾಭಿನಯಿಸಿರಿ. ಒಂದನೆಯ ಭಾಗದ ಪ್ಯಾರಗ್ರಾಫ್ 1 ರಲ್ಲಿ ಕೇಳಲ್ಪಟ್ಟ ಪ್ರಶ್ನೆಯನ್ನು ಎಬ್ಬಿಸಿರಿ. 2-4 ನೆಯ ಪ್ಯಾರಗ್ರಾಫ್‌ಗಳಲ್ಲಿ ವ್ಯಕ್ತಪಡಿಸಲಾದ ವಿಚಾರಗಳಿಗೆ ಮನೆಯವನ ಪ್ರತಿಕ್ರಿಯೆಯನ್ನು ಪಡೆಯಿರಿ. ದೇವರು ನಿಜವಾಗಿಯೂ ಚಿಂತಿಸುತ್ತಾನೆ ಮತ್ತು ಬರುವಂತಹ ಆತನ ಹೊಸ ಲೋಕದಲ್ಲಿ ಕಷ್ಟಾನುಭವದಿಂದ ಮುಕ್ತವಾದ ಜೀವಿತವನ್ನು ನಾವು ಅನುಭವಿಸಬಲ್ಲೆವೆಂದು ಈ ಬ್ರೋಷರ್ ತೋರಿಸುತ್ತದೆ ಎಂಬುದನ್ನು ವಿವರಿಸಿರಿ. ಹೆಚ್ಚಿನ ಚರ್ಚೆಗಾಗಿ ಹಿಂದಿರುಗಲು ಇಷ್ಟಪಡುತ್ತೀರೆಂದು ಹೇಳಿ.
ಸಂಗೀತ 179 (29) ಮತ್ತು ಸಮಾಪ್ತಿಯ ಪ್ರಾರ್ಥನೆ.