ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 7/95 ಪು. 7
  • ಪ್ರಕಟನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟನೆಗಳು
  • 1995 ನಮ್ಮ ರಾಜ್ಯದ ಸೇವೆ
1995 ನಮ್ಮ ರಾಜ್ಯದ ಸೇವೆ
km 7/95 ಪು. 7

ಪ್ರಕಟನೆಗಳು

◼ ಸಾಹಿತ್ಯ ನೀಡುವಿಕೆಗಳು

ಜುಲೈ ಮತ್ತು ಆಗಸ್ಟ್‌: ಈ ಮುಂದಿರುವ ಯಾವುದಾದರೂ 32 ಪುಟದ ಬ್ರೋಷರ್‌ಗಳನ್ನು ರೂ. 5ರ ಕಾಣಿಕೆಗೆ ನೀಡಬಹುದು: ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?, ಭೂಮಿಯಲ್ಲಿ ಸದಾಜೀವನವನ್ನು ಆನಂದಿಸಿರಿ!, “ಇಗೋ! ಎಲ್ಲವನ್ನು ಹೊಸದು ಮಾಡುತ್ತೇನೆ,” ನಮ್ಮ ಸಮಸ್ಯೆಗಳು—ಅವನ್ನು ಬಗೆಹರಿಸಲು ನಮಗೆ ಯಾರು ಸಹಾಯ ಮಾಡುವರು?, ನೀವು ತ್ರಯೈಕ್ಯವನ್ನು ನಂಬ ಬೇಕೋ?, ನಿತ್ಯಕ್ಕೂ ಬಾಳುವ ದೈವಿಕ ನಾಮ (ಇಂಗ್ಲಿಷ್‌), ಪ್ರಮೋದವನವನ್ನು ತರುವ ಸರಕಾರ (ಇಂಗ್ಲಿಷ್‌), ಜೀವಿತದ ಉದ್ದೇಶವೇನು—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?, ಮತ್ತು ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ.

ಸೆಪ್ಟಂಬರ್‌: ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕ ರೂ. 25ರ ಕಾಣಿಕೆಗೆ (ದೊಡ್ಡ ಸೈಸ್‌ ರೂ 45ಕ್ಕೆ). ಮನೆ ಬೈಬಲ್‌ ಅಧ್ಯಯನಗಳನ್ನು ಪ್ರಾರಂಭಿಸಲು ಪ್ರಯತ್ನಗಳು ಮಾಡಲ್ಪಡಬೇಕು.

ಅಕ್ಟೋಬರ್‌: ಎಚ್ಚರ! ಅಥವಾ ಕಾವಲಿನಬುರುಜು ಪತ್ರಿಕೆಗೆ ಚಂದಾಗಳು. ಪಾಕ್ಷಿಕ ಮುದ್ರಣಗಳಿಗೆ ಒಂದು ವರ್ಷದ ಚಂದಾ ರೂ. 70.00. ಮಾಸಿಕ ಮುದ್ರಣಗಳಿಗೆ ಒಂದು ವರ್ಷದ ಚಂದಾಗಳು ಮತ್ತು ಪಾಕ್ಷಿಕ ಮುದ್ರಣಗಳಿಗೆ ಆರು ತಿಂಗಳುಗಳ ಚಂದಾಗಳು ರೂ. 35.00. ಮಾಸಿಕ ಮುದ್ರಣಗಳಿಗೆ ಆರು ತಿಂಗಳಿನ ಚಂದಾ ಇರುವುದಿಲ್ಲ.

ಸೂಚನೆ: ಮೇಲೆ ತಿಳಿಸಲ್ಪಟ್ಟ ಕ್ಯಾಂಪೇನ್‌ ಸಾಹಿತ್ಯಗಳನ್ನು ಇನ್ನೂ ವಿನಂತಿಸಿರದ ಸಭೆಗಳು ತಮ್ಮ ಮುಂದಿನ ಲಿಟರೇಚರ್‌ ರಿಕ್ವೆಸ್ಟ್‌ ಫಾರ್ಮ್‌ನಲ್ಲಿ (S-AB-14) ಹಾಗೆ ಮಾಡತಕ್ಕದ್ದು.

◼ ಸಾಹಿತ್ಯದ ವಾರ್ಷಿಕ ಸರಕು ಜಡತಿಯ ಕಾರಣ, ಆಗಸ್ಟ್‌ ಒಂದರ ನಂತರ ಸಿಗುವಂತಹ ವಿನಂತಿಗಳನ್ನು ಸೆಪ್ಟಂಬರ್‌ ಎರಡನೆಯ ವಾರದ ತನಕ ನಿರ್ವಹಿಸಲಾಗುವುದಿಲ್ಲ. ಆದುದರಿಂದ ಸಭೆಗಳು ಮುಂಚಿತವಾಗಿಯೆ ತಮ್ಮ ಆವಶ್ಯಕತೆಗಳ ಅಂದಾಜು ಮಾಡಿ ಅದಕ್ಕನುಸಾರ ವಿನಂತಿ ಮಾಡಬೇಕು.

◼ ಸರ್ಕಿಟ್‌ ಮೇಲ್ವಿಚಾರಕರು, ಬೇಗನೆ “ದೈವಿಕ ಬೋಧನೆ ಲೋಕವ್ಯಾಪಕವಾಗಿ ವಿಜಯಿಯಾಗುತ್ತದೆ” ಎಂಬ ಶೀರ್ಷಿಕೆಯ ಸಾರ್ವಜನಿಕ ಭಾಷಣವನ್ನು ಕೊಡಲಿದ್ದಾರೆ. ಇದು ಇತ್ತೀಚೆಗೆ ನಡೆಸಲ್ಪಟ್ಟ ವಿಶೇಷ “ದೈವಿಕ ಬೋಧನೆ” ಅಂತಾರಾಷ್ಟ್ರೀಯ ಅಧಿವೇಶನಗಳನ್ನು ಎತ್ತಿತೋರಿಸುವ ಜಾರು ಚಿತ್ರ (ಸ್ಲೈಡ್‌) ಪ್ರದರ್ಶನವಾಗಿದೆ. ಸರ್ಕಿಟ್‌ನಲ್ಲಿರುವ ಎಲ್ಲ ಸಭೆಗಳಲ್ಲಿ ಅದನ್ನು ಸಾದರಪಡಿಸುವ ತನಕ ಸರ್ಕಿಟ್‌ ಮೇಲ್ವಿಚಾರಕರು ಈ ಭಾಷಣವನ್ನು ಕೊಡಲು ಮುಂದುವರಿಯುವರು. ಜುಲೈ 1, 1995 ರಿಂದ ಅವರು “ಸಕಲವಿಧವಾಗಿ ಸಂತೈಸುವ ದೇವರಲ್ಲಿ ಭರವಸವಿಡಿರಿ” ಎಂಬ ಭಾಷಣವನ್ನು, ಜಾರು ಚಿತ್ರಗಳನ್ನು ಪಡೆಯುವ ತನಕ ನೀಡುವರು. ಮತ್ತು ಜೂನ್‌ 1996ರ ಅಂತ್ಯದೊಳಗೆ ಸರ್ಕಿಟ್‌ನಲ್ಲಿನ ಎಲ್ಲ ಸಭೆಗಳಲ್ಲಿ ಜಾರು ಚಿತ್ರಗಳನ್ನು ತೋರಿಸಿಯಾದ ನಂತರ ಭಾಷಣವನ್ನು ಪುನಃ ನೀಡುವರು. ಮುಂದಿನ ನವೀನ ಭಾಷಣವು ಜುಲೈ 1996ರ ಮೊದಲನೆಯ ವಾರದಿಂದ ಆರಂಭವಾಗಲಿದೆ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ