ನೀವೊಂದು ಅಗತ್ಯವನ್ನು ಕಾಣುತ್ತೀರೋ?
1 ಯೆಹೋವನನ್ನು ಒಬ್ಬ ಸಹಾಯಕನು ಮತ್ತು ಒಬ್ಬ ಆಶ್ರಯದಾಯಕನಾಗಿ ವರ್ಣಿಸಲಾಗಿದೆ. ಅಗತ್ಯದ ಸಮಯದಲ್ಲಿ ನಾವಾತನ ಬಳಿ ಹೋಗಬಹುದು ಮತ್ತು ಆತನು ನಮಗೆ ಸಹಾಯ ಮಾಡುವನೆಂದು ನಾವು ಬಲ್ಲೆವು. (ಕೀರ್ತ. 18:2; 46:1) ನಾವೊಂದು ಅಗತ್ಯವನ್ನು ನೋಡಿದಾಗ ಇತರರಿಗೆ ಸಹಾಯ ಮಾಡಲು ನೀಡಿಕೊಳ್ಳುವುದರ ಮೂಲಕ ನಾವು ಈ ಅನುಭೂತಿಯ ಗುಣವನ್ನು ಅನುಕರಿಸಬಲ್ಲೆವು.
2 ಬೇರೆ ಯಾರಿಗಾದರೂ ಸಹಾಯಮಾಡಲು ಒಂದು ವಿಶೇಷ ಪ್ರಯತ್ನವನ್ನು ಮಾಡುವಂತೆ ಒಬ್ಬ ವ್ಯಕ್ತಿಯನ್ನು ಏನು ಪ್ರಚೋದಿಸುತ್ತದೆ? ಹೆಚ್ಚಿನ ಜನರು ಇದನ್ನು ಮಾಡಬೇಕಾದ ಪ್ರೀತಿಯ, ದಯಾಪರ ಸಂಗತಿಯಾಗಿ ಗುರುತಿಸುತ್ತಾರೆ. ದೇವರ ವಾಕ್ಯವು ಖಂಡಿತವಾಗಿಯೂ ಅದನ್ನು ಉತ್ತೇಜಿಸುತ್ತದೆ. (ರೋಮಾ. 15:1) ಪೌಲನು ನಮ್ಮನ್ನು ‘ಸ್ವಹಿತವನ್ನು ಮಾತ್ರ ನೋಡದೆ ಪರಹಿತವನ್ನು ಸಹ ನೋಡುವಂತೆ’ ಪ್ರಚೋದಿಸಿದನು.—ಫಿಲಿ. 2:4.
3 ಇದನ್ನು ಮಾಡುವುದರಲ್ಲಿ ನಾವೆಲ್ಲರೂ ಆನಂದ ಪಡೆಯಬಹುದಾದ ಒಂದು ಸಂಗತಿ ಇದಾಗಿದೆ. (ಅ. ಕೃ. 20:35) ತನ್ನ ಸಹೋದರರ “ಕುರಿತಾಗಿ ಯಥಾರ್ಥವಾಗಿ ಚಿಂತಿಸುವವ” ನಾಗಿದ್ದ ಒಬ್ಬ ಉದಾಹರಣೆಯಾಗಿ ಪೌಲನು ತಿಮೊಥೆಯನನ್ನು ಪ್ರತ್ಯೇಕಿಸಿದನು. (ಫಿಲಿ. 2:20) ಇಂದು ಸಭೆಗಳಲ್ಲಿ ತದ್ರೀತಿಯ ಒಂದು ಪ್ರವೃತ್ತಿಯಿರುವ ಹಲವಾರು ಯುವ ಜನರಿದ್ದಾರೆಂಬದು ಒಳ್ಳೆಯದು. ಆದರೆ ನಾವು ಯುವಕರಾಗಿರಲಿ ವೃದ್ಧರಾಗಿರಲಿ, ಒಂದು ಅಗತ್ಯವಿರುವದನ್ನು ನಾವು ನೋಡುವಲ್ಲಿ ಮಾಡಬೇಕಾದಂತಹ ಸಂಗತಿಗಳಿವೆ.
4 ಹೆಚ್ಚು ಉತ್ತಮವಾದ ಗಮನವನ್ನು ಕೊಡಬಹುದಾದ ಅಗತ್ಯಗಳು ಕೆಲವರಿಗಿವೆಯೆಂದು ನಿಮಗೆ ಎಂದಾದರೂ ಅನಿಸಿದೆಯೋ? ಪ್ರಾಯಶಃ ಒಬ್ಬ ಸಹೋದರ ಅಥವಾ ಸಹೋದರಿಯು ಆಸ್ಪತ್ರೆಯಲಿದ್ದರು ಮತ್ತು ಕೆಲವರೇ ಅವರನ್ನು ಭೇಟಿಯಾಗಲು ಬಂದರು; ಅಥವಾ ಯಾರೊಬ್ಬರು ಅಶಕ್ತರಾದರು, ಅದರೆ ಸಹಾಯಕಾರಿ ಕೆಲಸಗಳನ್ನು ಮಾಡಲು ಅಥವಾ ಮನೆಕೆಲಸಗಳಿಗೆ ನೆರವು ನೀಡಲು ಯಾರೂ ಇದ್ದಿರಲಿಲ್ಲ. ಯೆಹೋವನನ್ನು ಸೇವಿಸುವವರನ್ನು ಪರಸ್ಪರ ಪರಾಮರಿಸುವ ಒಂದು ಕುಟುಂಬದ ಸದಸ್ಯರೋಪಾದಿ ಯೇಸು ದೃಷ್ಟಿಸಿದನು. (ಮಾರ್ಕ 3:33-35) ಕುರಿ ಮತ್ತು ಆಡುಗಳ ಸಾಮ್ಯದಲ್ಲಿ, ರಾಜನ ಪ್ರಸನ್ನತೆಯ ಬಲಗಡೆಯಲ್ಲಿ ಆನಂದಿಸುವವರು, ರಾಜನ ಸಹೋದರರಿಗೆ ಅವರ ಸಹಾಯ ಮಾಡುವ ಮನೋಭಾವದ ಕಾರಣದಿಂದಾಗಿ ಎಂದು ಆತನು ತೋರಿಸಿದನು.—ಮತ್ತಾ. 25:40.
5 ನಾನು ಹೇಗೆ ಸಹಾಯ ಮಾಡಬಲ್ಲೆ? ಸ್ಫುಟವಾಗಿ ಗೋಚರಿಸುವ ಒಂದು ಅಗತ್ಯವಿರುವಾಗ ಸಹಾಯವನ್ನು ಒದಗಿಸಲು ಏನನ್ನು ಮಾಡಬಹುದಾಗಿದೆ? ಯಾವುದಾದರೊಂದು ವಿಧದಲ್ಲಿ ನೆರವು ನೀಡಲು ನಾವು ಪ್ರಥಮ ಹೆಜ್ಜೆಯನ್ನು ತೆಗೆದುಕೊಳ್ಳಬಹುದೋ? ಪ್ರಾಯಶಃ ಪ್ರೋತ್ಸಾಹನೆಯ ಅಗತ್ಯವಿರುವ ವೃದ್ಧರಿರಬಹುದು, ಆದರೆ ಸಹಾಯ ನೀಡುವ ಯಾವ ನಿಕಟ ಸಹವಾಸಿಗಳು ಅವರಿಗಿರಲಿಕ್ಕಿಲ್ಲ. ನೆರವಿನ ಅಗತ್ಯವಿರುವ ಯುವ ಜನರಿರಬಹುದು. ಅವರೊಂದಿಗೆ ಅಭ್ಯಸಿಸುವ ಪ್ರಚಾರಕನು ಉಪಸ್ಥಿತನಿಲದ್ಲಿದ್ದಾಗ ಹಲವಾರು ಮಕ್ಕಳಿರುವ ಹೊಸತಾಗಿ ಆಸಕ್ತವಾದ ಒಂದು ಕುಟುಂಬವು ರಾಜ್ಯ ಸಭಾಗೃಹದಲ್ಲಿ ಉಪಸ್ಥಿತವಿರಬಹುದು. ಮಕ್ಕಳೊಂದಿಗೆ ಸಹಾಯಮಾಡಲು ಯಾರಾದರೂ ತಾವಾಗಿಯೇ ಮುಂದೆ ಬರುವದನ್ನು ಅವರು ಗಣ್ಯಮಾಡುವರು.
6 ಸತ್ಯಕ್ಕಾಗಿ ಮತ್ತು ಯೆಹೋವನ ಸಂಸ್ಥೆಗಾಗಿ ಪ್ರೀತಿಯಲ್ಲಿ ನಾವು ಬೆಳೆದಂತೆ, ನಾವು ಸಭೆಯಲ್ಲಿರುವ ಇತರರಿಗಾಗಿ ಗಣ್ಯತೆ ಮತ್ತು ಚಿಂತೆಯಲ್ಲಿ ಬೆಳೆಯುತ್ತೇವೆ. ಈ ವಿಷಯದ ಸಂಬಂಧದಲ್ಲಿ ವೃದ್ಧಿಸುವಂತೆ ಪೌಲನು ನಮ್ಮನ್ನು ಉತ್ತೇಜಿಸುತ್ತಾನೆ. (2 ಕೊರಿಂ. 6:11-13) ನಾವು ಒಬ್ಬರಿಗೊಬ್ಬರು ಪ್ರೀತಿಯನ್ನು ತೋರಿಸುವದು, ನಾವು ನಿಜವಾಗಿಯೂ ಆತನ ಹಿಂಬಾಲಕರಾಗಿದ್ದೇವೆಂಬದನ್ನು ನಾವು ಪ್ರದರ್ಶಿಸುವ ಪ್ರಧಾನ ವಿಧವಾಗಿದೆಯೆಂದು ಯೇಸು ಒತ್ತಿ ಹೇಳಿದನು.—ಯೋಹಾನ 13:35.
7 ಆದುದರಿಂದ ನಾವೊಂದು ಅಗತ್ಯವನ್ನು ನೋಡುವಾಗ, ನಮ್ಮ ಸಹೋದರರಿಗಾಗಿ ಮತ್ತು ಸಭೆಗಾಗಿ ನಿಜವಾದ ಪ್ರೀತಿಯು, ನಾವು ಪ್ರಥಮ ಹೆಜ್ಜೆಯನ್ನು ತೆಗೆದುಕೊಳ್ಳುವಂತೆ ಮತ್ತು ನಮಗೆ ಸಾಧ್ಯವಿರುವ ಯಾವುದೇ ವಿಧದಲ್ಲಿ ನೆರವು ನೀಡುವಂತೆ ನಮ್ಮನ್ನು ಪ್ರಚೋದಿಸಬೇಕು. (ಗಲಾ. 6:9, 10) ಇತರರಿಗಾಗಿರುವ ಈ ಚಿಂತೆಯು ನಮ್ಮನ್ನು ಪ್ರೀತಿ ಮತ್ತು ಐಕ್ಯದ ನಿಕಟವಾದ ಬಂಧನಗಳೊಳಗೆ ಒಟ್ಟಿಗೆ ಸೆಳೆಯುತ್ತದೆ. (1 ಕೊರಿ. 10:24) ಈ ವಿಧದಲ್ಲಿ, ಸಭೆಯಲ್ಲಿ ಒಂದು ಅಗತ್ಯವನ್ನು ತುಂಬಿಸಲು ನಾವು ನಮ್ಮ ಪಾಲನ್ನು ಮಾಡುತ್ತೇವೆ.