ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 4/95 ಪು. 7
  • ಪ್ರಕಟನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟನೆಗಳು
  • 1995 ನಮ್ಮ ರಾಜ್ಯದ ಸೇವೆ
1995 ನಮ್ಮ ರಾಜ್ಯದ ಸೇವೆ
km 4/95 ಪು. 7

ಪ್ರಕಟನೆಗಳು

▪ ಸಾಹಿತ್ಯ ನೀಡುವಿಕೆಗಳು

ಎಪ್ರಿಲ್‌ ಮತ್ತು ಮೇ: ಕಾವಲಿನಬರುಜು ಅಥವಾ ಎಚ್ಚರ! ಪತ್ರಿಕೆಗಳಿಗೆ ಚಂದಾಗಳು. ಪಾಕ್ಷಿಕ ಮುದ್ರಣಗಳಿಗೆ ಒಂದು ವರ್ಷದ ಚಂದಾ ರೂ. 70. ಮಾಸಿಕ ಮುದ್ರಣಗಳ ಒಂದು ವರ್ಷದ ಚಂದಾ ಮತ್ತು ಪಾಕ್ಷಿಕ ಮುದ್ರಣಗಳ ಆರು ತಿಂಗಳ ಚಂದಾ ರೂ. 35ಕ್ಕೆ. ಮಾಸಿಕ ಮುದ್ರಣಗಳಿಗಾಗಿ ಆರು ತಿಂಗಳಿನ ಚಂದಾಗಳು ಇರುವುದಿಲ್ಲ.

ಚಂದಾಗಳನ್ನು ಪಡೆಯುವಾಗ, ಕಾವಲಿನಬುರುಜು ಈಗ ಎಲ್ಲಾ ಭಾರತೀಯ ಭಾಷೆಗಳಲ್ಲಿ ಮತ್ತು ನೇಪಾಲಿಯಲ್ಲಿ ಪಾಕ್ಷಿಕವಾಗಿ, ಆದರೆ ಉರ್ದುವಿನಲ್ಲಿ ಮಾಸಿಕವಾಗಿ ಇರುತ್ತದೆಂದು ದಯವಿಟ್ಟು ನೆನಪಿನಲ್ಲಿಡಿರಿ.

ಎಚ್ಚರ! ಪತ್ರಿಕೆಯು ತಮಿಳು ಮತ್ತು ಮಲೆಯಾಳಂನಲ್ಲಿ ಪಾಕ್ಷಿಕವಾಗಿದೆ ಆದರೆ ಕನ್ನಡ, ಗುಜರಾಥಿ ಮತ್ತು ತೆಲುಗು ಭಾಷೆಗಳಲ್ಲಿ ಮಾಸಿಕವಾಗಿರುತ್ತದೆ. ನೇಪಾಲಿ, ಬಂಗಾಳಿ, ಮರಾಠಿ ಅಥವಾ ಹಿಂದಿಯಲ್ಲಿ ಎಚ್ಚರ! ಪತ್ರಿಕೆಯ ವೈಯಕ್ತಿಕ ಚಂದಾಗಳು ದೊರೆಯುವುದಿಲ್ಲ, ಆದರೆ ಈ ನಾಲ್ಕು ಭಾಷೆಗಳಲ್ಲಿ ಸಭೆಗಳಿಗೆ ತ್ರೈಮಾಸಿಕ ವಿತರಕರ ಪ್ರತಿಗಳು ದೊರೆಯುತ್ತವೆ.

ಜೂನ್‌: ಜೀವ—ಅದು ಇಲ್ಲಿಗೆ ಹೇಗೆ ಬಂತು? ವಿಕಾಸದಿಂದಲೋ ಸೃಷ್ಟಿಯಿಂದಲೊ? (ಇಂಗ್ಲಿಷ್‌) ಪುಸ್ತಕ ರೂ. 45ರ ಕಾಣಿಕೆಗೆ. ದೇಶೀಯ ಭಾಷೆಗಳಲ್ಲಿ ಯಾವುದೇ ಹೊಸ 192 ಪುಟದ ಪುಸ್ತಕಗಳನ್ನು ರೂ. 15ರ ಕ್ರಮವಾದ ಬೆಲೆಗೆ ನೀಡಸಾಧ್ಯವಿದೆ.

ಜುಲೈ ಮತ್ತು ಆಗಸ್ಟ್‌: ಈ ಮುಂದಿರುವ 32 ಪುಟಗಳ ಯಾವುದೇ ಬ್ರೋಷರನ್ನು ರೂ. 5ರ ಕಾಣಿಕೆಗೆ ನೀಡಬಹುದು: ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?, ಭೂಮಿಯಲ್ಲಿ ಸದಾಜೀವನವನ್ನು ಆನಂದಿಸಿರಿ!, “ಇಗೋ! ಎಲ್ಲವನ್ನು ಹೊಸದು ಮಾಡುತ್ತೇನೆ”, ನಮ್ಮ ಸಮಸ್ಯೆಗಳು—ಅವನ್ನು ಬಗೆಹರಿಸಲು ಯಾರು ಸಹಾಯ ಮಾಡುವರು?, ನೀವು ತ್ರಯೈಕ್ಯದಲ್ಲಿ ನಂಬಬೇಕೋ?, ನಿತ್ಯಕ್ಕೂ ಬಾಳುವ ದೈವಿಕ ನಾಮ (ಇಂಗ್ಲಿಷ್‌), ಪ್ರಮೋದವನವನ್ನು ತರುವ ಸರಕಾರ (ಇಂಗ್ಲಿಷ್‌), ಜೀವಿತದ ಉದ್ದೇಶವೇನು—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?, ಮತ್ತು ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ.

ಸೂಚನೆ: ಮೇಲೆ ತಿಳಿಸಲ್ಪಟ್ಟ ಕ್ಯಾಂಪೇನ್‌ ಸಾಹಿತ್ಯಗಳನ್ನು ಇನ್ನೂ ವಿನಂತಿಸಿರದ ಸಭೆಗಳು ತಮ್ಮ ಮುಂದಿನ ಲಿಟರೇಚರ್‌ ರಿಕ್ವೆಸ್ಟ್‌ ಫಾರ್ಮ್‌ನಲ್ಲಿ(S-AB-14) ಹಾಗೆ ಮಾಡತಕ್ಕದ್ದು.

▪ ಈ ಮುಂಚೆ ಪ್ರಕಟಿಸಲಾದಂತೆ, ವಿಶೇಷ ರಾಜ್ಯ ವಾರ್ತೆಯು, ಆದಿತ್ಯವಾರ, ಎಪ್ರಿಲ್‌ 23 ರಂದು, ಸಭಾ ಕೂಟಗಳಲ್ಲಿ ಹಾಗೂ ಆ ತಾರೀಖಿನಂದು ನಿಗದಿಪಡಿಸಲಾದ ಸರ್ಕಿಟ್‌ ಸಮ್ಮೇಳನಗಳು ಮತ್ತು ವಿಶೇಷ ಸಮ್ಮೇಳನ ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು. ಬಿಡುಗಡೆಯಾದ ಕೂಡಲೇ ರಾಜ್ಯ ವಾರ್ತೆಯ ವಿತರಣೆಯು ಆರಂಭಿಸಬಹುದು. ಸಮ್ಮೇಳನಗಳು, ಸರ್ಕಿಟ್‌ ಮೇಲ್ವಿಚಾರಕನ ಸಂದರ್ಶನ ಅಥವಾ ಇತರ ಚಟುವಟಿಕೆಗಳಿಂದಾಗಿ ತಮ್ಮ ಕೂಟದ ಶೆಡ್ಯೂಲನ್ನು ಅಳವಡಿಸುವ ಆವಶ್ಯಕತೆಯಿದಿರ್ದಬಹುದಾದ ಸಭೆಗಳನ್ನೂ ಒಳಗೂಡಿಸಿ, ಇದು ಎಲ್ಲಾ ಸಭೆಗಳಿಗೆ ಅನ್ವಯಿಸುತ್ತದೆ. ಎಪ್ರಿಲ್‌ 23ರ ನಂತರ ವಿಶೇಷ ಭಾಷಣಗಳಿರುವ ಸಭೆಗಳು, ಎಪ್ರಿಲ್‌ 24 ರಂದು ರಾಜ್ಯ ವಾರ್ತೆಯ ಬಿಡುಗಡೆ ಮತ್ತು ಹಂಚುವಿಕೆಯನ್ನು ಆರಂಭಿಸಬಹುದು.

▪ ಒಂದು ಸಭೆಯೊಂದಿಗೆ ಸಹವಸಿಸುತ್ತಿರುವವರೆಲ್ಲರು, ವೈಯಕ್ತಿಕ ಚಂದಾಗಳನ್ನು ಒಳಗೂಡಿಸಿ, ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಿಗಾಗಿರುವ ಎಲ್ಲಾ ಹೊಸ ಮತ್ತು ನವೀಕರಿಸಲ್ಪಟ್ಟ ಚಂದಾಗಳನ್ನು ಸಭೆಯ ಮೂಲಕ ಕಳುಹಿಸಬೇಕು.

▪ ಇನ್ನು ಮುಂದೆ ಸಭೆಗಳು ಪ್ರತಿ ವರ್ಷ ಜ್ಞಾಪಕದ ಆಮಂತ್ರಣಗಳ ತಮ್ಮ ಆವಶ್ಯಕತೆಗಳನ್ನು ವಿನಂತಿಸಬೇಕು. ದಯವಿಟ್ಟು ಕೇವಲ 50ರ ಗುಣಾಕಾರಗಳಲ್ಲಿ ಪ್ರತಿ ಭಾಷೆಯಲ್ಲಿನ ಮೊತ್ತಗಳನ್ನು ವಿನಂತಿಸಿರಿ. 1995ರ ಅಧಿವೇಶನ ಬ್ಯಾಡ್ಜ್‌ ಕಾರ್ಡುಗಳಿಗಾಗಿ, ಪ್ರತಿನಿತ್ಯ ಶಾಸ್ತ್ರವಚನಗಳನ್ನು ಪರೀಕ್ಷಿಸುವುದು 1996, 1996 ವರ್ಷಪುಸ್ತಕಗಳು ಮತ್ತು ಕ್ಯಾಲೆಂಡರುಗಳು ಹಾಗೂ 1996ರ ಜ್ಞಾಪಕ ಆಮಂತ್ರಣಗಳಿಗಾಗಿ ವಿನಂತಿಗಳನ್ನು ನಾವೀಗ ಸ್ವೀಕರಿಸುತ್ತಿದ್ದೇವೆ. ಈ ಎಲ್ಲಾ ಐದು ವಿಷಯಗಳನ್ನು ಒಂದು ಲಿಟರೇಚರ್‌ ರಿಕ್ವೆಸ್ಟ್‌ ಫಾರ್ಮ್‌ನಲ್ಲಿ (S-AB-14) ವಿನಂತಿಸಿರಿ ಮತ್ತು ಅದೇ ಫಾರ್ಮ್‌ನಲ್ಲಿ ಬೇರೆ ಯಾವುದೇ ವಿಷಯಗಳನ್ನು ವಿನಂತಿಸಬೇಡಿರಿ. ಇಂಗ್ಲಿಷ್‌, ತಮಿಳು ಮತ್ತು ಮಲೆಯಾಳಂನಲ್ಲಿ ಬ್ಯಾಡ್ಜ್‌ ಕಾರ್ಡುಗಳು ದೊರಕುವವು, ಆದರೆ ಪರೀಕ್ಷಿಸುವುದು 1996 ಮತ್ತು 1996 ಜ್ಞಾಪಕ ಆಮಂತ್ರಣಗಳು ಇಂಗ್ಲಿಷ್‌, ಕನ್ನಡ, ಗುಜರಾಥಿ, ತಮಿಳು, ತೆಲುಗು, ನೇಪಾಲಿ, ಬಂಗಾಳಿ, ಮರಾಠಿ, ಮಲೆಯಾಳಂ, ಮತ್ತು ಹಿಂದಿಯಲ್ಲಿ ದೊರೆಯುವವು. ನಿಮ್ಮ ವಿನಂತಿಗಳನ್ನು 1995, ಮೇ 6ರ ಮುಂಚೆ ದಯವಿಟ್ಟು ಕಳುಹಿಸಿರಿ.

▪ ‘1994-1995 ಲಿಟರೇಚರ್‌ ರಿಕ್ವೆಸ್ಟ್‌ ಫಾರ್ಮ್‌’ (S-AB-14 3/93) ನಲ್ಲಿ ಲ್ಯಾಂಗೆಜ್ವ್‌ ಎಂಬ ಉಪಶೀರ್ಷಿಕೆಯ ಕೆಳಗಿರುವ ಸೂಚನೆಗೆ ಗಮನಕೊಡಿರಿ. ಭವಿಷ್ಯದಲ್ಲಿ ಫಾರ್ಮ್‌ನ ಮುಂಭಾಗದಲ್ಲಿ ವಿನಂತಿಸಲಾಗುವ ಎಲ್ಲಾ ವಿಷಯಗಳನ್ನು ನಿಮ್ಮ ಸಭೆಯ ಪ್ರಮುಖ ಭಾಷೆಯಲ್ಲಿ ನಿಮಗೆ ಕಳುಹಿಸಲಾಗುವುದು. ನಿಮ್ಮ ಮಾಸಿಕ ಸ್ಟೇಟ್‌ಮೆಂಟ್‌ನಲ್ಲಿ ಸಭೆಯ ಸಂಖ್ಯೆಯ ನಂತರವೇ ನಿಮ್ಮ ಸಭೆಯ ಪ್ರಮುಖ ಭಾಷೆಯು ತೋರಿಸಲ್ಪಟ್ಟಿದೆ. ಬೇರೆ ಯಾವುದೇ ಭಾಷೆಯಲ್ಲಿ ಸಾಹಿತ್ಯವು ಬೇಕಾಗಿದ್ದಲ್ಲಿ ಅದನ್ನು ಫಾರ್ಮ್‌ನ ಹಿಂಭಾಗದಲ್ಲಿ ವಿನಂತಿಸಬೇಕು ಮತ್ತು ಬೇಕಾಗಿರುವ ಭಾಷೆಯನ್ನು ಸ್ಪಷ್ಟೀಕರಿಸಬೇಕು.

▪ ನೀವು ವಿನಂತಿಸುವ ಸಾಹಿತ್ಯದ ಹೆಚ್ಚಿನ ಪ್ರಮಾಣವು, ಸದ್ಯಕ್ಕೆ ನಮ್ಮ ಕಂಪ್ಯೂಟರಿನಲ್ಲಿ ಸೇರಿಸಲ್ಪಟ್ಟಿರುವಂತಹದ್ದಕ್ಕಿಂತ ಬೇರೆಯಾದ ಭಾಷೆಯಲ್ಲಿರುವುದಾದರೆ, ನಮ್ಮ ಕಂಪ್ಯೂಟರಿನಲ್ಲಿ ನಿಮ್ಮ ಸಭೆಗಾಗಿರುವ ಪ್ರಮುಖ ಭಾಷೆಯನ್ನು ಬದಲಾಯಿಸಲು ವಿನಂತಿಸುತ್ತಾ ಸೊಸೈಟಿಗೆ ಒಂದು ಪತ್ರವನ್ನು ಬರೆಯಬಹುದು. ನಿಮ್ಮ ಹೆಚ್ಚಿನ ವಿನಂತಿಗಳು ಲಿಟರೇಚರ್‌ ರಿಕ್ವೆಸ್ಟ್‌ ಫಾರ್ಮ್‌ಗಳ ಮುಂಭಾಗದಲ್ಲಿ ನಮೂದಿಸುವದನ್ನು ಇದು ಖಚಿತಗೊಳಿಸುವಾಗ, ಇತರ ಭಾಷೆಗಳಲ್ಲಿ ಪ್ರಾಯಶಃ ಕೆಲವೇ ವಿಷಯಗಳು ಹಿಂಭಾಗದಲ್ಲಿ ವಿನಂತಿಸಲ್ಪಡುವದನ್ನು ಇದು ಅಗತ್ಯಪಡಿಸುವದು.

▪ ಪುನಃ ಲಭ್ಯವಿರುವ ಪ್ರಕಾಶನಗಳು:

ಇಂಗ್ಲಿಷ್‌: ಮಹಾ ಬೋಧಕನಿಗೆ ಕಿವಿಗೊಡುವುದು. ತಮಿಳು, ಮಲೆಯಾಳಂ ಮತ್ತು ಹಿಂದಿ: ಯೆಹೋವನ ಸಾಕ್ಷಿಗಳು—ಲೋಕವ್ಯಾಪಕವಾಗಿ ದೇವರ ಚಿತ್ತವನ್ನು ಐಕ್ಯದಿಂದ ಮಾಡುತ್ತಿರುವುದು. ಕನ್ನಡ ಮತ್ತು ಮಲೆಯಾಳಂ: ನಿಮ್ಮ ಕುಟುಂಬ ಜೀವನವನ್ನು ಸಂತೋಷಗೊಳಿಸುವುದು. ಉರ್ದು: ಪ್ರಮೋದವನಕ್ಕೆ ಮಾರ್ಗವನ್ನು ಕಂಡುಹಿಡಿಯುವ ವಿಧ (ಮುಸ್ಲಿಮರಿಗಾಗಿರುವ ಕಿರುಹೊತ್ತಿಗೆ); ಪ್ರಮೋದವನವನ್ನು ತರುವ ಸರಕಾರ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ