ಕಾವಲಿನಬುರುಜು ಮತ್ತು ಎಚ್ಚರ!—ನಮ್ಮ ತುರ್ತಿನ ಸಮಯಗಳಿಗಾಗಿರುವ ಪತ್ರಿಕೆಗಳು!
1 ಬೈಬಲ್ ಪ್ರವಾದನೆಯ ನೆರವೇರಿಕೆಯಲ್ಲಿ, ಲೋಕವನ್ನು ನಡುಗಿಸುವ ಘಟನೆಗಳು ನಡೆಯುತ್ತಿವೆ! ನಮ್ಮ ಸುತ್ತಲೂ ಲೋಕದಲ್ಲಿ ಮತ್ತು ದೇವಪ್ರಭುತ್ವ ಸಂಸ್ಥೆಯೊಳಗೂ ಏನು ನಡೆಯುತ್ತಿದೆಯೆಂಬದನ್ನು ನಾವು ಅವಲೋಕಿಸುತ್ತಿರುವಂತೆ, ರಾಜ್ಯದ “ಸುವಾರ್ತೆ” ಯನ್ನು ನಾವು ಸಾರುವುದು ಎಷ್ಟು ತುರ್ತಿನದ್ದಾಗಿದೆಯೆಂಬದನ್ನು ನಾವು ಗಣ್ಯಮಾಡಬಲ್ಲೆವು. (ಮಾರ್ಕ 13:10) ಎಪ್ರಿಲ್ ತಿಂಗಳಲ್ಲಿ ನಮ್ಮ ಶುಶ್ರೂಷೆಯನ್ನು ಹುರುಪಿನಿಂದ ನಡಿಸಿಕೊಂಡು ಹೋಗಲು ಇದು ನಮಗೆ ಕಾರಣವನ್ನು ಕೊಡುತ್ತದೆ.
2 ನಾವು ಈ ತಿಂಗಳಲ್ಲಿ ಕೈಕೊಳ್ಳಲಿರುವ ವಿಶೇಷ ಕೆಲಸದಿಂದ ನಮ್ಮ ಸಂದೇಶದ ಮಹತ್ವವು ಒತ್ತಿತೋರಿಸಲಾಗುತ್ತಿದೆ. ಎಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ನಾವು ಹಂಚಲಿರುವ ರಾಜ್ಯ ವಾರ್ತೆಯ ಬಿಡುಗಡೆಯನ್ನು ನಾವು ಆತುರದ ನಿರೀಕ್ಷಣೆಯೊಂದಿಗೆ ಎದುರುನೋಡುತ್ತೇವೆ. ಈ ಕೆಲಸಕ್ಕಾಗಿ ನಮ್ಮ ಉತ್ಸಾಹವನ್ನು ಹೆಚ್ಚಿಸಲು ಹಾಗೂ ನಮ್ಮ ಟೆರಿಟೊರಿಯಲ್ಲಿ ಆಸಕ್ತಿಯನ್ನು ಬೆಳೆಸಲು, ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು ಲೋಕದ ಶಾಂತಿಗೆಡಿಸುವ ಘಟನೆಗಳ ಪ್ರವಾದನಾತ್ಮಕ ಪ್ರಮುಖತೆಯನ್ನು ಒತ್ತಿಹೇಳುವ ಸಮಯೋಚಿತ ಲೇಖನಗಳನ್ನು ಒಯ್ಯುವವು. ಪತ್ರಿಕೆಗಳಲ್ಲಿ ಆಸಕ್ತಿಯನ್ನು ಪ್ರಚೋದಿಸುವ ಮತ್ತು ಜನರು ಅವುಗಳಿಗೆ ಚಂದಾ ಮಾಡುವಂತೆ ಪ್ರೋತ್ಸಾಹಿಸುವ ಒಂದು ನಿರೂಪಣೆಯನ್ನು ನಾವು ಹೇಗೆ ತಯಾರಿಸಬಲ್ಲೆವು?
3 ಪ್ರಾಯಶಃ ಈ ಮೂಲಭೂತ ಹೆಜ್ಜೆಗಳನ್ನು ಅನುಸರಿಸುವ ಮೂಲಕ ನೀವೊಂದು ಪರಿಣಾಮಕಾರಿ ನಿರೂಪಣೆಯನ್ನು ಬೆಳೆಸಲು ಶಕ್ತರಾಗುವಿರಿ: (1) ನಿಮ್ಮ ಸಮುದಾಯದಲ್ಲಿರುವ ಜನರನ್ನು ಆಕರ್ಷಿಸಬಹುದೆಂದು ನಿಮಗನಿಸುವ ಒಂದು ಲೇಖನವನ್ನು ಪತ್ರಿಕೆಗಳಿಂದ ಆರಿಸಿರಿ. (2) ಈ ಲೇಖನದಲ್ಲಿ ಮನೆಯವರ ಆಸಕ್ತಿಯನ್ನು ಪ್ರಚೋದಿಸುವುದೆಂದು ನೀವು ನಂಬುವ ಒಂದು ಹೇಳಿಕೆ ಅಥವಾ ಉಲ್ಲೀಖಿಸಲ್ಪಟ್ಟ ವಚನವನ್ನು ಆರಿಸಿರಿ. (3) ಒಂದು ಸ್ನೇಹಮಯ ವಂದನೆ, ಒಂದು ಆಸಕ್ತಿಕರ ಶಾಸ್ತ್ರೀಯ ವಿಚಾರವನ್ನು ಎತ್ತಿತೋರಿಸುವ ಒಂದು ಪ್ರಶ್ನೆ ಅಥವಾ ಹೇಳಿಕೆಯನ್ನು, ಹಾಗೂ ಪತ್ರಿಕೆಗಳ ಒಂದು ಚಂದಾವನ್ನು ಸ್ವೀಕರಿಸಲು ಆಮಂತ್ರಣವನ್ನು ಒಳಗೂಡಿರುವ ಒಂದು ಸಂಕ್ಷಿಪ್ತ ನಿರೂಪಣೆಯನ್ನು ತಯಾರಿಸಿರಿ. ನೀವು ನೋಡಶಕ್ತರಿರುವಂತೆ, ಇದು ತುಂಬಾ ಸರಳ ಮತ್ತು ಜಟಿಲವಲ್ಲದ್ದಾಗಿದೆ. ಶುಶ್ರೂಷೆಯಲ್ಲಿ ನೀವು ಕೆಲಸ ಮಾಡುವ ಇನ್ನೊಬ್ಬ ಪ್ರಚಾರಕನೊಂದಿಗೆ ಕೂಡಿ ಒಂದು ನಿರೂಪಣೆಯನ್ನು ನೀವು ಪ್ರಾಯಶಃ ತಯಾರಿಸಬಲ್ಲಿರಿ.
4 ಮೇ 8ರ “ಎಚ್ಚರ!” ಪತ್ರಿಕೆಯು “ಇವು ಕಡೆಯ ದಿವಸಗಳೊ?” ಎಂಬ ಪ್ರಶ್ನೆಯನ್ನು ಎಬ್ಬಿಸುವುದರಿಂದ, “ರೀಸನಿಂಗ್” ಪುಸ್ತಕದ ಪುಟ 13 ರಲ್ಲಿರುವ (ಕನ್ನಡದಲ್ಲಿ ಪುಟ 5 ರಲ್ಲಿ) “ಕಡೇ ದಿವಸಗಳು” ಎಂಬ ಶಿರೋನಾಮದ ಕೆಳಗಿರುವ ವಿಷಯವನ್ನು ನೀವು ಪುನರ್ವಿಮರ್ಶಿಸಬಹುದು. ಹೀಗೆ ಹೇಳುವ ಮೂಲಕ ನೀವು ಆರಂಭಿಸಬಹುದು:
▪ “ನಮ್ಮ ಸುತ್ತಲೂ ನಡೆಯುತ್ತಿರುವ ಗಲಭೆಯ ಘಟನೆಗಳ ಅರ್ಥವನ್ನು ಚರ್ಚಿಸಲು ನಾವು ಸಂದರ್ಶಿಸುತ್ತಿದ್ದೇವೆ. ಈ ಲೇಖನವು ಏನು ಹೇಳುತ್ತದೆಂಬದನ್ನು ಗಮನಿಸಿರಿ . . . .”
5 ಎಪ್ರಿಲ್ 1ರ “ಕಾವಲಿನಬುರುಜು” ಪತ್ರಿಕೆಯು “ಧರ್ಮ—ಒಂದು ನಿಷಿದ್ಧ ವಿಷಯವೋ?” ಎಂಬ ಪ್ರಶ್ನೆಯನ್ನು ಎಬ್ಬಿಸುತ್ತದೆ. ಈ ಪತ್ರಿಕೆಯನ್ನು ನೀಡುತ್ತಿರುವಾಗ, ನೀವು ಹೀಗೆ ಹೇಳಬಲ್ಲಿರಿ:
▪ “ಧರ್ಮವು ಚರ್ಚಿಸಬಾರದಂತಹ ಒಂದು ವಿಷಯವಾಗಿದೆ, ಯಾಕಂದರೆ ಅದು ವಾದಾಸ್ಪದವಾಗಿದೆಯೆಂದು ಅನೇಕ ಸಲ ಹೇಳಲಾಗುತ್ತದೆ. ಅದರ ಕುರಿತಾಗಿ ನೀವು ಏನು ನೆನಸುತ್ತೀರಿ?” ಅನಂತರ ಲೇಖನದಲ್ಲಿರುವ ಒಂದು ಹೇಳಿಕೆಗೆ ಸೂಚಿಸಿರಿ.
6 “ಧಾರ್ಮಿಕ ಸತ್ಯವು ಪ್ರಾಪ್ಯವೋ?” ಎಂಬ ಲೇಖನವಿರುವ ಎಪ್ರಿಲ್ 15ರ “ಕಾವಲಿನಬುರುಜು” ಪತ್ರಿಕೆಯನ್ನು ನೀವು ಉಪಯೋಗಿಸುತ್ತಿರಬಹುದು. ಈ ಪೀಠಿಕೆಯೊಂದಿಗೆ ನಿಮಗೊಂದು ಒಳ್ಳೇ ಪ್ರತಿಕ್ರಿಯೆ ದೊರಕಬಹುದು:
▪ “ಇಂದು ಅನೇಕ ಧರ್ಮಗಳಿರುವದರಿಂದ, ಧಾರ್ಮಿಕ ಸತ್ಯವು ಲಭ್ಯವೋ ಎಂದು ಅನೇಕ ಜನರು ಕುತೂಹಲಪಡುತ್ತಾರೆ. ಈ ಪ್ರಶ್ನೆಗೆ ನೀವು ಮತ್ತು ನಾನು ಒಂದು ತೃಪ್ತಿದಾಯಕ ಉತ್ತರವನ್ನು ಕಂಡುಹಿಡಿಯಬಹುದಾದ ವಿಧವನ್ನು ಈ ಲೇಖನವು ಪ್ರಕಟಿಸುತ್ತದೆ. . . .”
7 ಪ್ರಚಾರ ಕಾರ್ಯಕ್ಕೆ ಹೊರಡುವ ಮುಂಚೆ, ನಿಮ್ಮ ನಿರೂಪಣೆಯೊಂದಿಗೆ ಪರಿಚಿತರಾಗಲು, ಅದನ್ನು ಇನ್ನೊಬ್ಬ ಪ್ರಚಾರಕನೊಂದಿಗೆ ಯಾಕೆ ಅಭ್ಯಸಿಸಬಾರದು? ನಿಮ್ಮ ಪರಿಣಾಮಕಾರಿತ್ವವನ್ನು ಹೆಚ್ಚಿಸುವ ಮತ್ತು ನಿಮಗೆ ಹೆಚ್ಚಿನ ಭರವಸೆಯನ್ನು ಕೊಡುವ ಸಹಾಯಕಾರಿ ಸಲಹೆಗಳನ್ನು ನೀವು ಪ್ರಾಯಶಃ ಪರಸ್ಪರವಾಗಿ ಹಂಚಬಹುದು.
8 ಈ ವ್ಯವಸ್ಥೆಯ ಅಂತ್ಯವು ಹೆಚ್ಚು ಹತ್ತಿರವಾದಂತೆ, ಪ್ರಾಮಾಣಿಕ ಹೃದಯದ ಜನರು ಮಹಾ ಬಾಬೆಲಿನಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡುವುದರಲ್ಲಿ ನಾವು ನಮ್ಮ ಪ್ರಯತ್ನಗಳನ್ನು ಹೆಚ್ಚಿಸೋಣ. (ಪ್ರಕ. 18:4) ಎಂದಿಗೂ ಪುನರಾವೃತ್ತಿಸಲ್ಪಡದ ಈ ಕೆಲಸದಲ್ಲಿ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು ಒಂದು ಅತಿ ಪ್ರಾಮುಖ್ಯ ಪಾತ್ರವನ್ನಾಡುತ್ತವೆ. ನಮ್ಮ ಬಳಕೆಗಾಗಿ ಯೆಹೋವನು ಇಂತಹ ಉತ್ತಮ ಸಾಧನಗಳನ್ನು ಒದಗಿಸಿರುವದಕ್ಕಾಗಿ ನಾವು ಕೃತಜ್ಞರಾಗಿದ್ದೇವೆ!