ದೇವಪ್ರಭುತ್ವ ಶುಶ್ರೂಷಾ ಶಾಲಾ ಪುನರ್ವಿಮರ್ಶೆ
ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿ ಜನವರಿ 2 ರಿಂದ ಎಪ್ರಿಲ್ 17, 1995ರ ವಾರಗಳ ತನಕದ ನೇಮಕಗಳಲ್ಲಿ ಆವರಿತವಾದ ವಿಷಯದ ಮೇಲೆ ಮುಚ್ಚು-ಪುಸ್ತಕ ಪುನರ್ವಿಮರ್ಶೆ ಇದಾಗಿರುತ್ತದೆ. ಕೊಡಲ್ಪಟ್ಟ ಸಮಯದಲ್ಲಿ ನಿಮ್ಮಿಂದಾದಷ್ಟು ಹೆಚ್ಚು ಪ್ರಶ್ನೆಗಳಿಗೆ ಉತ್ತರ ಬರೆಯಲು ಒಂದು ಪ್ರತ್ಯೇಕ ಕಾಗದದ ಹಾಳೆಯನ್ನು ಉಪಯೋಗಿಸಿರಿ.
[ಸೂಚನೆ: ಲಿಖಿತ ಪುನರ್ವಿಮರ್ಶೆಯ ಸಮಯದಲ್ಲಿ ಯಾವುದೇ ಪ್ರಶ್ನೆಯನ್ನು ಉತ್ತರಿಸಲು ಬೈಬಲನ್ನು ಮಾತ್ರವೇ ಉಪಯೋಗಿಸಬಹುದು. ಪ್ರಶ್ನೆಗಳನ್ನು ಹಿಂಬಾಲಿಸುವ ನಿರ್ದೇಶನಗಳು ನಿಮ್ಮ ವೈಯಕ್ತಿಕ ಸಂಶೋಧನೆಗಾಗಿ ಕೊಡಲ್ಪಟ್ಟಿವೆ. ವಾಚ್ಟವರ್ನ ಎಲ್ಲಾ ನಿರ್ದೇಶನೆಗಳಲ್ಲಿ ಪುಟ ಮತ್ತು ಪ್ಯಾರಾ ನಂಬ್ರಗಳು ಒಂದು ವೇಳೆ ಇರಲಿಕ್ಕಿಲ್ಲ.]
ಕೆಳಗಿನ ಪ್ರತಿಯೊಂದು ಹೇಳಿಕೆಗಳನ್ನು ಸರಿ ಅಥವಾ ತಪ್ಪು ಎಂದುತ್ತರಿಸಿರಿ:
1. ಬತ್ಷೆಬಳೊಂದಿಗೆ ಪಾಪಗೈದದಕ್ಕಾಗಿ ದಾವೀದನ ಪಶ್ಚಾತ್ತಾಪವನ್ನು ದೇವರು ಸ್ವೀಕರಿಸಿದಾಗ, ದಾವೀದನು ಮತ್ತು ಅವನ ಮನೆತನವು ಆತನ ತಪ್ಪು ನಡವಳಿಕೆಯ ಪರಿಣಾಮಗಳಿಂದ ಮುಕ್ತರಾದರು. [14, uw ಪು. 127 ಪ್ಯಾರ. 5]
2. ನಾವು ಯೆಹೋವನ ಮೆಚ್ಚಿಕೆಯನ್ನು ಬಯಸುವದಾದರೆ ನಾವು ನಮ್ಮ ಎಲ್ಲಾ ವ್ಯಾಪಾರ ಆಚರಣೆಗಳಲ್ಲಿ ನೀತಿಶಾಸ್ತ್ರಕ್ಕನುಸಾರ ನಡೆಯುವವರು ಮತ್ತು ಪ್ರಾಮಾಣಿಕರು ಆಗಿರಬೇಕೆಂಬದು ಜ್ಞಾನೋಕ್ತಿ 11:1ರ ಆಧಾರಭೂತ ಸೂತ್ರವಾಗಿದೆ. [12, ವಾರದ ಬೈಬಲ್ ವಾಚನ; w86 11/15 ಪು. 19 ನೋಡಿರಿ.]
3. ಸಲಹೆಯನ್ನು ಸ್ವೀಕರಿಸುವುದು ದುರ್ಬಲತೆಯ ಒಂದು ಸೂಚನೆಯಾಗಿದೆ. [13, uw ಪು. 127 ಪ್ಯಾರ. 4]
4. ಜ್ಞಾನೋಕ್ತಿ 14:17 ಪ್ರಥಮವಾಗಿ ಭಾವಗಳಿಗೆ ಗಮನವನ್ನು ಕೊಡುತ್ತದೆ ಯಾಕಂದರೆ ಸಾಮಾನ್ಯವಾಗಿ ಅವು ಕಾರ್ಯಗಳ ಮುಂಚೆ ಬರುತ್ತವೆ. [13, ವಾರದ ಬೈಬಲ್ ವಾಚನ; ಕಾ93 8/15 ಪುಟಗಳು 20-1 ನೋಡಿರಿ.]
5. ಯೇಸುವನ್ನು ಕರ್ತನೆಂದು ಕರೆಯುವವರೆಲ್ಲರೂ ರಕ್ಷಿಸಲ್ಪಡುವರು. [2, uw ಪು. 105 ಪ್ಯಾರ. 5]
6. ಸಾ.ಶ. 33 ರಲ್ಲಿ ಯೇಸು ಪುನರುತ್ಥಾನಗೊಳಿಸಲ್ಪಟ್ಟು ದೇವರ ಬಲಗಡೆಯಲ್ಲಿ ತನ್ನ ಸ್ಥಾನವನ್ನು ತೆಗೆದುಕೊಂಡಾಗ, ಅವನು ಆ ಸಮಯದಲ್ಲಿ ತನ್ನ ಅಭಿಷಿಕ್ತ ಶಿಷ್ಯರ ಮೇಲೆ ಆಳಲಾರಂಭಿಸಿದನು. (ಕೊಲೊ. 1:13) [10, gt ಅಧ್ಯಾ. 132]
7. ವಿಜ್ಞಾನಿಗಳು ತಳಿಶಾಸ್ತ್ರದ ನಿಯಮಾವಳಿಯನ್ನು ಕಂಡುಹಿಡಿಯುವ ಸುಮಾರು 3,000 ವರ್ಷಗಳ ಮುಂಚೆ, ಕೀರ್ತನೆ 139:13-16 ಅದರ ಕುರಿತಾದ ತಿಳಿವಳಿಕೆಯನ್ನು ಪ್ರತಿಬಿಂಬಿಸಿತು. [4, ವಾರದ ಬೈಬಲ್ ವಾಚನ; ಕಾ92 8/15 ಪು. 4.]
8. ಜ್ಞಾನೋಕ್ತಿ 8:22-31 ಕೇವಲ ವಿವೇಕದ ಒಂದು ವರ್ಣನೆಯಾಗಿದೆ. [10, ವಾರದ ಬೈಬಲ್ ವಾಚನ; w87 5/15 ಪು. 28.]
9. ಸತ್ಯ ಕ್ರೈಸ್ತನೊಬ್ಬನು ಏನನ್ನೂ ದ್ವೇಷಿಸಬಾರದು. [10, ವಾರದ ಬೈಬಲ್ ವಾಚನ; w92 1/1 ಪು. 21.]
10. ಜ್ಞಾನೋಕ್ತಿ 11:25, ಹೀಬ್ರು ಪದ್ಯರೂಪದ ಶೈಲಿಯಲ್ಲಿ ಸಮಾಂತರ ವಿಚಾರಗಳ ಅಥವಾ ಅಭಿಪ್ರಾಯಗಳ ಒಂದು ಉದಾಹರಣೆಯಾಗಿದೆ ಮತ್ತು ಜ್ಞಾನೋಕ್ತಿ 10:7 ವೈದೃಶ್ಯದ ಸಮಾಂತರತೆಯ ಒಂದು ಉದಾಹರಣೆಯಾಗಿದೆ. [8, si ಪು. 107 ಪ್ಯಾರ. 7]
ಕೆಳಗಿನ ಪ್ರಶ್ನೆಗಳನ್ನು ಉತ್ತರಿಸಿರಿ:
11. ಕೀರ್ತನೆಗಳು ಅಮೋಘ ಸಾಹಿತ್ಯಕ್ಕಿಂತ ಎಷ್ಟೋ ಹೆಚ್ಚಿನದ್ದಾಗಿವೆ ಏಕೆ? [5, si ಪು. 104 ಪ್ಯಾರ. 23]
12. ಕೀರ್ತನೆಗಳ ಕುರಿತಾಗಿ ಯೇಸುವಿಗಿದ್ದ ತಿಳಿವಳಿಕೆಯು ಅವನಿಗೆ ಯಾವ ಪ್ರಯೋಜನದ್ದಾಗಿತ್ತು? [6, si ಪು. 105 ಪ್ಯಾರ. 30]
13. ಸೊಲೊಮೋನನಿಗೆ ಅವನ ವಿವೇಕವನ್ನು ಕೊಟ್ಟಾತನು ಯಾರು, ಮತ್ತು ನಾವು ಜ್ಞಾನೋಕ್ತಿಯನ್ನು ಓದುವಾಗ ಏನನ್ನು ಗಣ್ಯಮಾಡುವಂತೆ ಅದು ಮಾಡಬೇಕು? [7, si ಪು. 106 ಪ್ಯಾರ. 1]
14. ಅವನು ಆಕೆಯೊಂದಿಗೆ ತೋಟದಲ್ಲಿ ಮಾತಾಡಿದಾಗ ಮಗಲದ್ದ ಮರಿಯಳು ಪುನರುತಿತ್ಥ ಯೇಸುವು ಯಾರಾಗಿದ್ದಾನೆಂದು ನಂಬಿದಳು, ಮತ್ತು ಅವನನ್ನು ಸರಿಯಾಗಿ ಗುರುತಿಸಲು ಅವಳಿಗೆ ಏನು ಸಹಾಯ ಮಾಡಿತು? [6. gt ಅಧ್ಯಾ. 128]
15. ಯೇಸುವಿನೊಂದಿಗೆ ಗುರುತಿಸಲ್ಪಡಲು ಹೆದರುತ್ತಿದ್ದ ಯಾವ ಇಬ್ಬರು ಸನ್ಹೇದ್ರಿನ್ ಸದಸ್ಯರು, ಆತನ ದೇಹವನ್ನು ಹೂಣಿಡಲಿಕ್ಕಾಗಿ ತಯಾರಿಸಲು ಸಹಾಯ ಮಾಡಿದರು? [5, gt ಅಧ್ಯಾ. 127]
16. ನಮ್ಮ ಸಹೋದರರಿಗಾಗಿ ನಮ್ಮಲ್ಲಿ ಸ್ವತ್ಯಾಗದ ಪ್ರೀತಿಯಿದೆ ಎಂದು ನಾವು ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಹೇಗೆ ತೋರಿಸಬಲ್ಲೆವು? [16, uw ಪುಟಗಳು 132-3 ಪ್ಯಾರ. 3, 4]
17. ಕೀರ್ತನೆ 136:10-15 ಯಾವ ಐತಿಹಾಸಿಕ ಘಟನೆಯನ್ನು ವರ್ಣಿಸುತ್ತದೆ, ಮತ್ತು ಫರೋಹನಿಗೆ ಏನು ಸಂಭವಿಸಿತು? [3, ವಾರದ ಬೈಬಲ್ ವಾಚನ; ಕಾ93 6/15 ಪು. 5.]
18. ಯೇಸುವಿನ ಸುರಿದ ರಕ್ತವು, ಯಾವ ದ್ವಿಗುಣ ಉದ್ದೇಶವನ್ನು ಪೂರೈಸುತ್ತದೆ? [9, uw ಪು. 115, ಪ್ಯಾರ. 13]
19. ನಂಬಿಗಸ್ತ ಅಪೊಸ್ತಲರಿಗೆ, ಯೇಸುವಿನ ಮಲತಮ್ಮನಾದ ಯಾಕೋಬನಿಗೆ ಮತ್ತು 500 ಕ್ಕಿಂತ ಹೆಚ್ಚಿನ ಶಿಷ್ಯರಿಗೆ ಯೇಸು ಪುನರುತ್ಥಾನಗೊಳಿಸಲ್ಪಟ್ಟಿದ್ದಾನೆಂದು ಏಕೆ ಮನವರಿಕೆಯಾಯಿತು? [9, gt ಅಧ್ಯಾ. 131]
20. ಯೇಸು ಕ್ರಿಸ್ತನನ್ನು ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷನನ್ನಾಗಿ ಮಾಡಿದ್ದು ಯಾವುದು? [12, gt ಪೀಠಿಕಾರೂಪದ ಹೇಳಿಕೆಗಳು]
ಕೆಳಗಿನ ಪ್ರತಿಯೊಂದು ಹೇಳಿಕೆಗಳನ್ನು ಪೂರ್ಣಮಾಡಲು ಬೇಕಾದ ಪದ ಯಾ ಪದಗುಚ್ಛವನ್ನು ಒದಗಿಸಿರಿ:
21. ಸಾ.ಶ. 33ರ ಪಂಚಾಶತ್ತಮದಲ್ಲಿ ತನ್ನ ಪ್ರಸಿದ್ಧ ಭಾಷಣದಲ್ಲಿ ಪೇತ್ರನು ಪದೇ ಪದೇ ___________________ ಪುಸ್ತಕದಿಂದ ಉಲ್ಲೇಖಿಸಿದನು; ಆ ಸಂದರ್ಭದಲ್ಲಿ ಸುಮಾರು ___________________ ಜನರು ದೀಕ್ಷಾಸ್ನಾನ ಹೊಂದಿ ಸಭೆಗೆ ಕೂಡಿಸಲ್ಪಟ್ಟರು. [5, si ಪು. 105 ಪ್ಯಾರ. 25, 26]
22. ಯೇಸುವಿಗೆ ಕುಡಿಯಲು ___________________ ಯನ್ನು ನೀಡಲಾಗುವದು, ಅವನ ಹೊರ ___________________ ಚೀಟುಹಾಕುವರು, ಮತ್ತು ಅವನು ___________________ ತೊರೆಯಲ್ಪಟ್ಟವನಂತೆ ತೋರುವನೆಂದು ಕೀರ್ತನೆಗಳು ಮುಂತಿಳಿಸಿದವು. [6, si ಪು. 105 ಪ್ಯಾರ. 30]
23. ಯೆಹೋವನ ಸಂಸ್ಥೆಯು ದೇವಪ್ರಭುತ್ವವಾಗಿದೆ, ಅದರ ಅರ್ಥ ಅದು ___________________; ಯೆಹೋವನು ಮಾರ್ಗದರ್ಶನವನ್ನು ಸಭೆಯ ತಲೆಯಾದ ___________________, ಆತನ ವಾಕ್ಯವಾದ ___________________ ಮೂಲಕ ಒದಗಿಸುತ್ತಾನೆ; ಮತ್ತು ಯೇಸು ___________________ ಇದಕ್ಕೆ ವಿಶೇಷ ಜವಾಬ್ದಾರಿಯನ್ನು ವಹಿಸಿದ್ದಾನೆ. (ಮತ್ತಾ. 24:45) [10, uw ಪುಟ. 118-19, ಪ್ಯಾರ. 4-6]
24. ಸ್ವರ್ಗಕ್ಕೆ ಕೊಂಡೊಯ್ಯಲಾಗುವ 144,000 ಮಂದಿಗೆ ವ್ಯತಿರಿಕತ್ತೆಯಲ್ಲಿ, ಯಾವ ಮನುಷ್ಯನೂ ಎಣಿಸಲಾಗದ, ಒಂದು ___________________ವು ___________________ ದಿಂದ ಪಾರಾಗಿ ಇದೇ ___________________ ಮೇಲೆ ಜೀವಿಸುವುದು. (ಪ್ರಕ. 7:9, 14) [1, uw ಪು. 104, ಪ್ಯಾರ. 3, 4]
25. ದೇವರಿಂದ ಒಪ್ಪಲ್ಪಟ್ಟ ಒಂದು ನಿರ್ಣಯವನ್ನು ತಲಪಲು, ಮೊದಲನೆಯ ಶತಮಾನದ ಆಡಳಿತ ಮಂಡಳಿಯು ಗಮನಕೊಡಬೇಕಾದ ಸಂಗತಿಯ ಕುರಿತಾಗಿ ಪ್ರೇರಿತ ___________________ ಏನು ಹೇಳಲಿಕ್ಕಿತ್ತು ಎಂಬದನ್ನು ಮತ್ತು ___________________ ಕಾರ್ಯಾಚರಣೆಯ ಸಾಕ್ಷ್ಯವನ್ನು ಜಾಗರೂಕತೆಯಿಂದ ಪರಿಗಣಿಸಿದರು. (ಅ. ಕೃತ್ಯಗಳು 15:6-29) [11, uw ಪು. 120 ಪ್ಯಾರ. 8]
ಕೆಳಗಿನ ಪ್ರತಿಯೊಂದು ಹೇಳಿಕೆಯಲ್ಲಿ ಸರಿಯಾದ ಉತ್ತರವನ್ನು ಆರಿಸಿರಿ:
26. ಅವನನ್ನು ವಧಾಸ್ತಂಭಕ್ಕೇರಿಸಿದಾಗ, ಯೇಸುವಿಗೆ ರಕ್ತಬೋಳದೊಂದಿಗೆ ದ್ರಾಕ್ಷಾಮದ್ಯವನ್ನು ನೀಡಲಾಯಿತು, ಆದರೆ ಅವನು ಅದನ್ನು ಕುಡಿಯಲು ನಿರಾಕರಿಸಿದನು ಯಾಕಂದರೆ (ನಿಯಮವು ಅದನ್ನು ನಿಷೇಧಿಸಿತ್ತು; ಅವನೊಬ್ಬ ನಾಜಿರನಾಗಿದ್ದನು; ಅವನು ತನ್ನ ಮನಶ್ಶಕ್ತಿಗಳನ್ನು ಪೂರ್ಣ ಹತೋಟಿಯಲಿಡಲ್ಲು ಬಯಸಿದನು). [3, gt ಅಧ್ಯಾ. 125]
27. ಕುರಿಮರಿಯ ರಕ್ತದಲ್ಲಿ ನಮ್ಮ ನಿಲುವಂಗಿಗಳನ್ನು ತೊಳೆದು ಬಿಳಿ ಮಾಡುವದರ ಅರ್ಥವೇನಂದರೆ ನಾವು (ಪಾಪಗಳನ್ನು ಮಾಡುವದನ್ನು ನಿಲಿಸುವುದು; ಯೇಸುವಿನ ಯಜ್ಞದ ಪಾಪ-ಪರಿಹಾರಕ ಬೆಲೆಯ ನಮ್ಮ ಅಗತ್ಯವನ್ನು ಅಂಗೀಕರಿಸುವುದು; ದೇವರಿಗೆ ನಮ್ಮ ಜೀವಿತವನ್ನು ಸಮರ್ಪಿಸಿ ದೀಕ್ಷಾಸ್ನಾನ ಪಡೆದುಕೊಳ್ಳುವದು). [3, uw ಪು. 106 ಪ್ಯಾರ. 7]
28. ಯೇಸು ಸುಮಾರು ಐದು ಸಲ (ಹೆರೋದ; ಪಿಲಾತ; ಫೇಲಿಕ್ಸ) ನಿಂದ ನಿದೋರ್ಷಿಯೆಂದು ಘೋಷಿಸಲ್ಪಟ್ಟನು; ಆದರೆ ಆತನು ಅನಂತರ ಯೆಹೂದ್ಯರ ಪಟುಸಡ್ಟಿಲಿಸದ ಬೇಡಿಕೆಗಳಿಗೆ ಮಣಿದನು ಮತ್ತು ಯೇಸುವನ್ನು ವಧಿಸಲು ಒಪ್ಪಿಸಿಕೊಟ್ಟನು. [2, gt ಅಧ್ಯಾ. 124]
29. ಸಾ.ಶ. (36; 35; 33)ರ ಪಂಚಾಶತ್ತಮದ ಮುಂಚೆ ಸತ್ತ ಮತ್ತು ಸತ್ತವರಾಗಿ ಉಳಿದ ದೇವರ ಎಲ್ಲಾ ನಂಬಿಗಸ್ತ ಸೇವಕರು ಸ್ವರ್ಗೀಯ ಜೀವಿತಕ್ಕೆ ಅಭಿಷೇಕಿಸಲ್ಪಡಲಿಲ್ಲ. [4, uw ಪು. 111 ಪ್ಯಾರ. 5)
30. ಎಲ್ಲಾ ಮಾನವರು (ಪ್ರೀತಿ; ದ್ವೇಷ; ವೈಯಕ್ತಿಕ ಲಾಭ)ದಿಂದ ಪ್ರೇರೇಪಿಸಲ್ಪಟ್ಟಿದ್ದಾರೆ ಮತ್ತು ಅವರ ಮುಖ್ಯ ಚಿಂತೆಯು (ದೇವರ ಹೆಸರು; ಇತರರು; ಸ್ವತಃ) ಕ್ಕಾಗಿ ಇರುತ್ತದೆಂದು ಸೈತಾನನು ಸಾಧಿಸುತ್ತಾನೆ. [12, uw ಪು. 124 ಪ್ಯಾರ. 14]
ಕೆಳಗಿನ ಶಾಸ್ತ್ರವಚನಗಳನ್ನು ಕೆಳಗೆ ಕೊಟ್ಟ ಹೇಳಿಕೆಗಳಿಗೆ ಸರಿಜೋಡಿಸಿರಿ:
ಜ್ಞಾನೋ. 3:27, 28; ಯೋಹಾನ 19:4-6; 19:25-27; ರೋಮಾ. 15:2, 3; ಪ್ರಕ. 7:16, 17
31. ಕ್ರೈಸ್ತರಿಗೆ ತಮ್ಮ ವಯಸ್ಸಾದ ಹೆತ್ತವರ ಆರೈಕೆಯನ್ನು ಮಾಡುವ ಜವಾಬ್ದಾರಿ ಇದೆ. [4, gt ಅಧ್ಯಾ. 126]
32. ನಮ್ಮ ತೋರಿಕೆಯು ಇತರರ ಮೇಲೆ ಯಾವ ಪ್ರಭಾವವನ್ನು ಬೀರಬಲ್ಲದು ಎಂಬದರ ಕುರಿತಾಗಿ ನಾವು ಯಥಾರ್ಥವಾಗಿ ಚಿಂತಿತರಾಗಿದ್ದೇವೆ, ಆದುದರಿಂದ ನಾವು ನಮ್ಮನ್ನೇ ಮೆಚ್ಚಿಸಿಕೊಳ್ಳುವದನ್ನು ಸಿದ್ಧಮನಸ್ಸಿನಿಂದ ತ್ಯಾಗ ಮಾಡುತ್ತೇವೆ. [15, uw ಪು. 130 ಪ್ಯಾರ. 10, 11]
33. ಒಂದು ಆತ್ಮಿಕ ಅಥವಾ ಪ್ರಾಪಂಚಿಕ ರೀತಿಯಲ್ಲಿ, ಇತರರಿಗೆ ಒಳ್ಳೆಯದನ್ನು ಮಾಡುವ ಅವಕಾಶ ನಮಗಿದ್ದಾಗಲೆಲ್ಲಾ, ನಾವು ನಮ್ಮ ಜೊತೆಮಾನವರಿಗೆ, ವಿಶೇಷವಾಗಿ ನಮ್ಮ ಆತ್ಮಿಕ ಸಹೋದರರಿಗೆ ಸಹಾಯ ಮಾಡಲು ಆ ಅವಕಾಶವನ್ನು ತೆಗೆದುಕೊಳ್ಳಬೇಕು. [8, ವಾರದ ಬೈಬಲ್ ವಾಚನ; ಕಾ93 12/15 ಪು. 20 ನೋಡಿರಿ.]
34. ಆಪತ್ತಿನ ಎದುರಿನಲ್ಲಿ ಸೌಮ್ಯ ಘನತೆ ಮತ್ತು ಶಾಂತತೆ ಯೆಹೋವನಿಗೆ ಸನ್ಮಾನವನ್ನು ತರಬಲ್ಲದು ಮತ್ತು ಮನುಷ್ಯರ ಗೌರವವನ್ನು ಗೆಲ್ಲಬಲ್ಲದು. [1, gt ಅಧ್ಯಾ. 123]
35. “ಒಂದು ಆತ್ಮಿಕ ಪ್ರಮೋದವನ” ವೆಂದು ತಕ್ಕದ್ದಾಗಿ ಹೆಸರಿಸಲ್ಪಟ್ಟ ವಾಗ್ದಾನಿತ ಪರಿಸ್ಥಿತಗಳನ್ನು ನಾವು ಈಗಾಗಲೇ ಆನಂದಿಸಲು ಆರಂಭಿಸುತ್ತಿದ್ದೇವೆ. [3, uw ಪುಟಗಳು 107-9 ಪ್ಯಾರ. 9-11]