ಎಪ್ರಿಲ್ಗಾಗಿ ಸೇವಾ ಕೂಟಗಳು
ಎಪ್ರಿಲ್ 3ರ ವಾರ
ಸಂಗೀತ 203 (43)
10 ನಿ: ಸ್ಥಳಿಕ ತಿಳಿಸುವಿಕೆಗಳು ಮತ್ತು ನಮ್ಮ ರಾಜ್ಯದ ಸೇವೆ ಯಿಂದ ಆಯ್ದ ಪ್ರಕಟನೆಗಳು. “ಜ್ಞಾಪಕಕ್ಕಾಗಿ ವಿಷಯಗಳನ್ನು ಸಿದ್ಧಪಡಿಸಿರಿ” ಇದನ್ನು ಪುನರ್ವಿಮರ್ಶಿಸಿರಿ.
15 ನಿ: “ನಾವು ಹೊಂದಿರುವಂತಹ ವಿಷಯಗಳಿಗಾಗಿ ಕೃತಜ್ಞರು.” ಪ್ರಶ್ನೋತ್ತರಗಳು. ಸಮಯ ಅನುಮತಿಸಿದಂತೆ ಅಕ್ಟೋಬರ 1, 1991ರ ಕಾವಲಿನಬುರುಜು ವಿನ ಪುಟಗಳು 14-15, ಪ್ಯಾರಗ್ರಾಫ್ಗಳು 15-20ರ ಮೇಲೆ ಆಧರಿತವಾದ ಹೆಚ್ಚಿನ ಹೇಳಿಕೆಗಳನ್ನು ಮಾಡಿರಿ.
20 ನಿ: “ಕಾವಲಿನಬುರುಜು ಮತ್ತು ಎಚ್ಚರ!—ನಮ್ಮ ತುರ್ತಿನ ಸಮಯಗಳಿಗಾಗಿರುವ ಪತ್ರಿಕೆಗಳು!” ಸಭಿಕರೊಂದಿಗೆ ಚರ್ಚಿಸಿರಿ. ಪತ್ರಿಕೆಗಳಿಗಾಗಿ ಗಣ್ಯತೆಯನ್ನು ವ್ಯಕ್ತಪಡಿಸುವ ಅನುಭವವನ್ನು ತಿಳಿಸಿರಿ. (g91 7⁄22 ಪುಟ 9) ಇಬ್ಬರು ಪ್ರಚಾರಕರು ಕೊಡಲ್ಪಟ್ಟ ಸಲಹೆಗಳನ್ನು ಉಪಯೋಗಿಸುತ್ತಾ ಒಂದು ನಿರೂಪಣೆಯನ್ನು ಹೇಗೆ ತಯಾರಿಸಬೇಕೆಂಬದರ ಕುರಿತಾಗಿ ಮತ್ತು ಅವರು ಪರಸ್ಪರ ತಮ್ಮ ನಿರೂಪಣೆಗಳನ್ನು ಕೊಡುವುದನ್ನು ಪ್ರತ್ಯಕ್ಷಾಭಿನಯಿಸುವಂತೆ ಮಾಡಿರಿ.
ಸಂಗೀತ 219 (50) ಮತ್ತು ಸಮಾಪ್ತಿಯ ಪ್ರಾರ್ಥನೆ.
ಎಪ್ರಿಲ್ 10ರ ವಾರ
ಸಂಗೀತ 212 (110)
10 ನಿ: ಸ್ಥಳಿಕ ತಿಳಿಸುವಿಕೆಗಳು. ಅಕೌಂಟ್ಸ್ ವರದಿ ಮತ್ತು ದಾನಗಳ ಅಂಗೀಕಾರಗಳು. “ಯೆಹೋವಾ ಕೇ ಸಾಕ್ಷಿ” ರೇಖಾಚೌಕದ ಕಡೆಗೆ ಗಮನವನ್ನು ಸೆಳೆಯಿರಿ. ಆಸಕ್ತ ಜನರು ಜ್ಞಾಪಕಕ್ಕೆ ಹಾಜರಾಗುವಂತೆ ನೆರವಾಗುವ ಅಗತ್ಯವನ್ನು ಎಲ್ಲರಿಗೆ ನೆನಪಿಸಿರಿ. ಎಲ್ಲರೂ ಈ ವಾರಾಂತ್ಯದಲ್ಲಿ ಕ್ಷೇತ್ರ ಸೇವೆಯಲ್ಲಿ ಭಾಗವಹಿಸಲಿಕ್ಕಾಗಿ ಒಂದು ವಿಶೇಷ ಪ್ರಯತ್ನವನ್ನು ಮಾಡುವಂತೆ ಉತ್ತೇಜಿಸಿರಿ.
15 ನಿ: “ನಮ್ಮ ರಾಜ್ಯ ಐಕ್ಯವನ್ನು ಕಾಪಾಡಿಕೊಳ್ಳುವುದು.” ಸಭಿಕರೊಂದಿಗೆ ಚರ್ಚಿಸಿರಿ.
20 ನಿ: “ಕರ್ತನ ಕೆಲಸದಲ್ಲಿ ಮಾಡಲು ಬೇಕಾದಷ್ಟಿದೆ.” ಸೇವಾ ಮೇಲ್ವಿಚಾರಕನಿಂದ ಪ್ರಶ್ನೋತ್ತರಗಳ ಅವರಿಸುವಿಕೆ. ವಿಶೇಷವಾದ ರಾಜ್ಯ ವಾರ್ತೆಯ ಮನೆಮನೆಯ ಹಂಚುವಿಕೆಗಾಗಿ ವಿಸ್ತರಿತ ಏರ್ಪಾಡುಗಳನ್ನು ಪುನರ್ವಿಮರ್ಶಿಸಿರಿ. ಸ್ಥಳಿಕ ಸಭೆಯ ನೇಮಿತ ಟೆರಿಟೊರಿಯ ಎಲ್ಲವನ್ನು ಸಾಧ್ಯವಾಗದಿದ್ದಲ್ಲಿ, ಸಾಧ್ಯವಿದ್ದಷ್ಟನ್ನು ಆವರಿಸಲು ಯೋಜನೆಗಳನ್ನು ಚರ್ಚಿಸಿರಿ. ಸೇವೆಯಲ್ಲಿ ಪ್ರಥಮ ಸಲ ಭಾಗವಹಿಸುವ ಹೊಸಬರಿಗೆ ಸಹಾಯ ಮಾಡಲು ಏನು ಮಾಡಲ್ಪಡಬಹುದೆಂಬದನ್ನು ವಿವರಿಸಿರಿ. (ಮಾರ್ಚ್ 1995ರ ನಮ್ಮ ರಾಜ್ಯದ ಸೇವೆಯ ಪುಟ 1ನ್ನು ನೋಡಿರಿ.)
ಸಂಗೀತ 150 (83) ಮತ್ತು ಸಮಾಪ್ತಿಯ ಪ್ರಾರ್ಥನೆ.
ಎಪ್ರಿಲ್ 17ರ ವಾರ
ಸಂಗೀತ 214 (82)
13 ನಿ: ಸ್ಥಳಿಕ ತಿಳಿಸುವಿಕೆಗಳು. ಜ್ಞಾಪಕಾಚರಣೆಯ ಉತ್ತೇಜನದಾಯಕ ಮುಖ್ಯಾಂಶಗಳನ್ನು ತಿಳಿಸಿರಿ, ಮತ್ತು ಹಾಜರಾದಂತಹ ಹೊಸಬರಿಗೆ ಕೊಡಲ್ಪಡಬಹುದಾದ ಹೆಚ್ಚಿನ ನೆರವಿನ ಮಾರ್ಗಗಳನ್ನು ಪುನರ್ವಿಮರ್ಶಿಸಿರಿ. ಎಪ್ರಿಲ್ 23 ರಂದು ವಿಶೇಷ ಭಾಷಣಕ್ಕೆ ಎಲ್ಲರೂ ಹಾಜರಾಗುವಂತೆ ಮತ್ತು ಹೊಸತಾಗಿ ಆಸಕ್ತರಾದವರು ಸಹ ಹಿಂದಿರುಗುವಂತೆ ಸಹಾಯ ನೀಡುವಂತೆ ಉತ್ತೇಜಿಸಿರಿ. ರಾಜ್ಯ ವಾರ್ತೆಯ ಹಂಚುವಿಕೆಗಾಗಿ ಕ್ಷೇತ್ರ ಸೇವಾ ಏರ್ಪಾಡುಗಳನ್ನು ಪುನರ್ವಿಮರ್ಶಿಸಿರಿ.
15 ನಿ: “ನೀವೊಂದು ಅಗತ್ಯವನ್ನು ಕಾಣುತ್ತೀರೋ?” ಪ್ರಶ್ನೋತ್ತರಗಳು. ತಮ್ಮ ಕುರಿಪಾಲನಾ ಕೆಲಸದಲ್ಲಿ ಹಿರಿಯರು ಸಾಧಿಸಲು ಪ್ರಯತ್ನಿಸುತ್ತಿರುವ ಪ್ರಸ್ತುತ ಗುರಿಗಳನ್ನು ಸಂಕ್ಷಿಪ್ತವಾಗಿ ತಿಳಿಸಿರಿ. ಸಹಾಯ ಮಾಡಲು ವ್ಯಕ್ತಿಗಳು ಏನು ಮಾಡಬಹುದೆಂಬದನ್ನು ವಿವರಿಸಿರಿ.
17 ನಿ: “ಬೋಧಿಸಸಾಧ್ಯರಿಗಾಗಿ ಹುಡುಕಿರಿ.” ಪುನರ್ಭೇಟಿಗಳನ್ನು ಮಾಡುವ ಪ್ರಾಮುಖ್ಯವನ್ನು ಚರ್ಚಿಸಿರಿ. ಬೈಬಲಿನ ಉಪಯೋಗವನ್ನು ಉತ್ತೇಜಿಸಿರಿ. ಒಂದೆರಡು ನಿರೂಪಣೆಗಳನ್ನು ಸಂಕ್ಷಿಪ್ತವಾಗಿ ಪ್ರತ್ಯಕ್ಷಾಭಿನಯಿಸಿರಿ.
ಸಂಗೀತ 197 (57) ಮತ್ತು ಸಮಾಪ್ತಿಯ ಪ್ರಾರ್ಥನೆ.
ಎಪ್ರಿಲ್ 24ರ ವಾರ
ಸಂಗೀತ 167 (42)
15 ನಿ: ಸ್ಥಳಿಕ ತಿಳಿಸುವಿಕೆಗಳು. ದೇವಪ್ರಭುತ್ವ ವಾರ್ತೆಗಳು. ಟೆರಿಟೊರಿಯಲ್ಲಿ ರಾಜ್ಯ ವಾರ್ತೆಯ ವಿತರಣೆಯ ಪ್ರಗತಿಯನ್ನು ಪುನರ್ವಿಮರ್ಶಿಸಿರಿ. ರಾಜ್ಯ ವಾರ್ತೆ ಯನ್ನು ನೀಡುತ್ತಿದ್ದಾಗ ಆನಂದಿಸಿದ ಅನುಭವಗಳನ್ನು ತಿಳಿಸುವಂತೆ ಪ್ರಚಾರಕರನ್ನು ಆಮಂತ್ರಿಸಿರಿ. ಸ್ಥಳಿಕ ಟೆರಿಟೊರಿಯಲ್ಲಿ ತಕ್ಕದ್ದಾಗಿರಬಹುದಾದ ಪತ್ರಿಕಾ ನಿರೂಪಣೆಗಳನ್ನು ಸೂಚಿಸಿರಿ. ಹಗಲಿನ ತಾಸುಗಳು ಹೆಚ್ಚಾದಂತೆ ಸಂಜೆಯ ಸಾಕ್ಷಿಕಾರ್ಯದಲ್ಲಿ ಸಭೆಯು ಭಾಗವಹಿಸುವಂತೆ ಯಾವುದೇ ಏರ್ಪಾಡುಗಳನ್ನು ಪ್ರಕಟಿಸಿರಿ.
12 ನಿ: ಸ್ಥಳಿಕ ಅಗತ್ಯಗಳು. ಅಥವಾ ಜನವರಿ 15, 1995ರ ಕಾವಲಿನಬುರುಜು, ಪುಟಗಳು 21-3 ರ ಮೇಲೆ ಆಧರಿತವಾದ, ಇತರರಿಗೆ ಉತ್ತೇಜಿಸುವವರಾಗಿರ್ರಿ ಎಂಬ ಭಾಷಣವನ್ನು ಕೊಡಿರಿ.
18 ನಿ: ನಿಮ್ಮ ಕುಟುಂಬ ಅಭ್ಯಾಸವನ್ನು ಕ್ರಮವಾಗಿ ನಡಿಸಿರಿ. ತಮ್ಮ ಮಕ್ಕಳ ವತಿಯಿಂದ ಆತ್ಮಿಕ ಪ್ರಗತಿಯ ಕೊರತೆಯ ವಿಷಯದಲ್ಲಿ ಗಂಡ ಮತ್ತು ಹೆಂಡತಿ ಚಿಂತೆಯನ್ನು ವ್ಯಕ್ತಪಡಿಸುತ್ತಾರೆ. ಕುಟುಂಬ ಅಭ್ಯಾಸವನ್ನು ನಡಿಸುವ ಸಂಬಂಧದಲ್ಲಿ ತಾನು ನಿರ್ಲಕ್ಷನಾದ್ದೇನೆಂದು ಗಂಡನು ಒಪ್ಪಿಕೊಳ್ಳುತ್ತಾನೆ; ಕೆಲವೊಮ್ಮೆ ಯಾವುದೇ ಕೌಟುಂಬಿಕ ಉಪದೇಶವಿಲ್ಲದೆ ವಾರಗಳು ಗತಿಸಿಹೋಗುತ್ತವೆ. ಸ್ಕೂಲ್ ಗೈಡ್ಬುಕ್ ಪುಟಗಳು 37-8, ಪ್ಯಾರಗ್ರಾಫ್ 12-14 ರಲ್ಲಿ ನೀಡಲ್ಪಟ್ಟಿರುವ ಬುದ್ಧಿವಾದ ಮತ್ತು ನಿರ್ದೇಶನವನ್ನು ಅವರು ಪುನರ್ವಿಮರ್ಶಿಸುತ್ತಾರೆ. ಬೇರೆ ಯಾವುದೇ ಚಟುವಟಿಕೆಗಳು ಮಧ್ಯಬರಲು ಅನುಮತಿಸದೆ, ಪ್ರತಿ ವಾರ ಕುಟುಂಬ ಅಭ್ಯಾಸಕ್ಕೆ ಅಗ್ರ ಸ್ಥಾನವನ್ನು ಕೊಡಲು ಇಬ್ಬರೂ ಒಪ್ಪುತ್ತಾರೆ.
ಸಂಗೀತ 142 (93) ಮತ್ತು ಸಮಾಪ್ತಿಯ ಪ್ರಾರ್ಥನೆ.