ನಮ್ಮ ರಾಜ್ಯ ಐಕ್ಯವನ್ನು ಕಾಪಾಡಿಕೊಳ್ಳುವುದು
1 ದೇವರ ರಾಜ್ಯವು ಶಕ್ತಿ ಮತ್ತು ಅಧಿಕಾರವನ್ನು ಹೊಂದಿರುವ ಒಂದು ನೈಜ ಸರಕಾರವಾಗಿದೆ. ಅದು ಯೇಸುವಿನ ಸಾರುವಿಕೆಯ ಮುಖ್ಯವಿಷಯವಾಗಿತ್ತು. (ಮತ್ತಾ. 4:17) ಇತರರಿಗೆ ಕಲಿಸುವುದು ಮತ್ತು ರಾಜ್ಯ ಸತ್ಯಕ್ಕೆ ಸಾಕ್ಷಿ ಕೊಡುವುದು, ಯೇಸುವಿನ ಶುಶ್ರೂಷೆಯ ಮುಖ್ಯ ಅಂಶವಾಗಿತ್ತು. ನಾವು ರಾಜ್ಯಕ್ಕಾಗಿ ಪ್ರಾರ್ಥಿಸುವಂತೆ ಮತ್ತು ಅದನ್ನು ಪ್ರಥಮವಾಗಿ ಹುಡುಕುವಂತೆ ಅವನು ಕಲಿಸಿದನು. (ಮತ್ತಾ. 6:9, 10, 33) ಯೆಹೋವನಿಗೆ ಮತ್ತು ಆತನ ಸಂಸ್ಥೆಗೆ ನಿಕಟವಾಗಿ ಉಳಿಯುವುದು, ನಮ್ಮ ಸಾರುವ ನೇಮಕವನ್ನು ಪೂರೈಸುವುದು, ಮತ್ತು ಲೋಕದಿಂದ ಪ್ರತ್ಯೇಕರಾಗಿರಿಸಿಕೊಳ್ಳುವುದು, ನಮ್ಮ ರಾಜ್ಯ ಐಕ್ಯವನ್ನು ಕಾಪಾಡುವಂತೆ ನಮ್ಮನ್ನು ಶಕ್ತರನ್ನಾಗಿ ಮಾಡುತ್ತದೆ. ನಮ್ಮ ಕ್ರಿಯೆಗಳು ಮತ್ತು ಮಾತುಗಳಿಂದ, ನಾವು ರಾಜ್ಯದ ಪಕ್ಷದಲ್ಲಿದ್ದೇವೆಂದು ನಾವು ತೋರಿಸುತ್ತೇವೆ.—ಯೋಹಾನ 18:37.
2 1914 ರಂದಿನಿಂದ, ರಾಜ್ಯವು ಲಕ್ಷಾಂತರ ಪ್ರಜೆಗಳಿಗೆ ಒಂದು ವಾಸ್ತವಿಕತೆಯಾಗಿದೆ. ರಾಜ್ಯದ ಈ ಪ್ರಜೆಗಳಿಂದ ಪ್ರದರ್ಶಿಸಲ್ಪಟ್ಟ ಐಕ್ಯವು ಒಂದು ವಿಭಾಗಿತ ಲೋಕಕ್ಕೆ ತೀರ ವೈದೃಶ್ಯವಾಗಿದೆ. ಅದು ಒಂದು ಐಕ್ಯಗೊಳಿಸುವ ಶಕ್ತಿಯಾಗಿರಬೇಕಾದಲ್ಲಿ ನಾವು ರಾಜ್ಯವನ್ನು ನಮ್ಮ ಜೀವಿತಗಳಲ್ಲಿ ನೈಜವಾದದ್ದಾಗಿ ಮಾಡಿಕೊಳ್ಳಬೇಕು. ಅದನ್ನು ನಮಗೆ ನೈಜವಾದದ್ದಾಗಿ ಮಾಡುವಂತಹದ್ದು ಯಾವುದು?
3 ಇತರ ಸರಕಾರಗಳಂತೆ, ರಾಜ್ಯಕ್ಕೆ ನಿಯಮಗಳ ಒಂದು ಕಟ್ಟಿದೆ. ಆದರೂ, ಅದು ಭಿನ್ನವಾಗಿದೆ ಹೇಗೆಂದರೆ ಅದರ ನಿಯಮಗಳು ಬೈಬಲಿನಲ್ಲಿವೆ. ದೇವರ ವಾಕ್ಯದ ಕ್ರಮವಾದ ವಾಚನವು, ರಾಜ್ಯದ ಪ್ರಜೆಗಳೋಪಾದಿ ನಮ್ಮಿಂದ ಏನು ಅಪೇಕ್ಷಿಸಲ್ಪಡುತ್ತದೆಂಬದರ ಆವಶ್ಯಕ ಜ್ಞಾಪನಗಳನ್ನು ಕೊಡುತ್ತದೆ. ನಮ್ಮ ಪ್ರಕಾಶನಗಳ ವೈಯಕ್ತಿಕ ಅಧ್ಯಯನ ಮತ್ತು ‘ನಂಬಿಗಸ್ತನೂ ವಿವೇಕಿಯೂ ಆದ ಆಳಿ’ ನಿಂದ ನಿರ್ದೇಶನವು ದೇವರ ನಿಯಮಗಳನ್ನು ನಮ್ಮ ದಿನನಿತ್ಯದ ಜೀವಿತಗಳಲ್ಲಿ ಅನ್ವಯಿಸಲು ಸಹಾಯ ಮಾಡುತ್ತದೆ. (ಮತ್ತಾ. 24:45) ನಾವು ಅಂತಹ ವೈಯಕ್ತಿಕ ಅನ್ವಯವನ್ನು ಮಾಡಿದಂತೆ, ಯೇಸುವಿನ ಆಳಿಕ್ವೆಯ ಕೆಳಗೆ ಆರಾಧಕರ ಒಂದು ಐಕ್ಯ ಕುಟುಂಬವನ್ನಾಗಿ ಮಾಡುತ್ತಾ, ಲೋಕವ್ಯಾಪಕ ಸಹೋದರತ್ವದಲ್ಲಿ ನಮ್ಮನ್ನು ಹೆಚ್ಚು ಸಮೀಪ ತರುತ್ತಾ, ರಾಜ್ಯವು ನಮಗೆ ಹೆಚ್ಚೆಚ್ಚು ನೈಜವಾಗುವುದು.
4 ರಾಜ್ಯ ಸಾರುವಿಕೆಯ ಮೂಲಕ ಐಕ್ಯ: “ಭೂಲೋಕದ ಕಟ್ಟಕಡೆಯ ವರೆಗೂ” ರಾಜ್ಯದ ಸುವಾರ್ತೆಯನ್ನು ಸಾರುವುದು ನಮ್ಮ ನಿಯೋಗವಾಗಿದೆ. (ಅ. ಕೃ. 1:8) ಯೆಹೋವನನ್ನು ನಾವು ‘ಕೊಂಡಾಡ’ಲು ಶ್ರಮಿಸಿದಂತೆ “ಏಕಮನಸ್ಸಿನಿಂದ” ಸಾರುವುದು ನಮ್ಮನ್ನು ಐಕ್ಯಗೊಳಿಸುತ್ತದೆ. (ರೋಮಾ. 15:5, 6) ನಮ್ಮ ಜೊತೆ ಕೆಲಸಗಾರರೊಂದಿಗೆ ಹುರುಪಿನಿಂದ ಭಾಗವಹಿಸುವುದು ನಮ್ಮ ನಂಬಿಕೆಯನ್ನು ಬಲಪಡಿಸಲು ಮತ್ತು ಆತನ ಚಿತ್ತವನ್ನು ನೆರವೇರಿಸಲು ಯೆಹೋವನ ಆತ್ಮವು ನಮ್ಮ ಮೂಲಕ ಕೆಲಸಮಾಡುವಂತೆ ಅನುಮತಿಸುತ್ತದೆ. ‘ಕರ್ತನ ಕೆಲಸದಲ್ಲಿ ಮಾಡಲು ಬೇಕಾದುಷ್ಟಿರುವುದು’ ನಮ್ಮನ್ನು “ಸ್ಥಿರಚಿತ್ತರಾಗಿಯೂ, ನಿಶ್ಚಲರಾಗಿಯೂ” ಮಾಡುತ್ತದೆ.—1 ಕೊರಿಂ. 15:58.
5 ಅನೇಕ ದೇಶಗಳಲ್ಲಿ ನಮ್ಮ ಸಾರುವ ಕಾರ್ಯದಲ್ಲಿ ಅಡಬ್ಡರುವ ಮೂಲಕ ಸೈತಾನನು ನಮ್ಮ ಐಕ್ಯವನ್ನು ಒಡೆಯಲು ಪ್ರಯತ್ನಿಸುತ್ತಾನೆ. ವೈಮನಸ್ಯವನ್ನು ಬಿತ್ತಲು ಮತ್ತು ಅಪಾರ್ಥಗಳನ್ನು ಸೃಷ್ಟಿಸಲು, ಕಲಹ ಮತ್ತು ವ್ಯಾಜ್ಯಗಳನ್ನು ಉತ್ಪಾದಿಸಲು ಆತನು ತನ್ನ ವಶದಲ್ಲಿರುವ ಪ್ರತಿಯೊಂದು ಸಾಧನವನ್ನು ಉಪಯೋಗಿಸುತ್ತಾನೆ. (ಜ್ಞಾನೋ. 6:19; ಗಲಾ. 5:19-21, 26) ಲೋಕದ ವಿವಾದಗಳಲ್ಲಿ ನಮ್ಮನ್ನು ಒಳಗೂಡಿಸುವಂತೆ ಮತ್ತು ರಾಜಕೀಯ ಹಾಗೂ ಸಾಮಾಜಿಕ ವಿವಾದಾಂಶಗಳಲ್ಲಿ ಪಕ್ಷಗಳನ್ನು ವಹಿಸುವಂತೆ ಸಹ ಆತನು ಇಷ್ಟಪಡುತ್ತಾನೆ. (ಯಾಕೊ. 3:14-16) ಆತನ ಪ್ರಭಾವವನ್ನು ಪ್ರತಿರೋಧಿಸುವಂತೆ ಶಾಸ್ತ್ರವಚನಗಳು ನಮಗೆ ಪ್ರಬೋಧಿಸುತ್ತವೆ; ಇಲ್ಲದಿದ್ದಲ್ಲ ಆತನು ನಮ್ಮನ್ನು ತನ್ನ ಬೇಟೆಯ ಆಹಾರದಂತೆ ನುಂಗಿಬಿಡುವನು. (1 ಪೇತ್ರ 5:8, 9) ರಾಜ್ಯ ನಿರೀಕ್ಷೆಯ ನೈಜತೆಯು ನಮ್ಮ ಹೃದಯಗಳಿಂದ ಮತ್ತು ಮನಸ್ಸುಗಳಿಂದ ಮಾಸಿಹೋಗುವಂತೆ ಬಿಡಬಾರದು.
6 ನಮ್ಮ ಐಕ್ಯವನ್ನು ಕಾಪಾಡಿಕೊಳ್ಳುವುದು ಸ್ವಸ್ಥ ಮನಸ್ಸು ಹಾಗೂ ಮೇಲಣ ವಿವೇಕವನ್ನು ಅವಶ್ಯಪಡಿಸುತ್ತದೆ. ಕಷ್ಟಗಳು ಏಳುವಾಗ, ವಿಶೇಷವಾಗಿ ಅವು ನಮ್ಮ ಸಹೋದರರನ್ನು ಒಳಗೊಂಡಿರುವುದಾದರೆ, ಶಾಂತಿಯನ್ನಿಡಲು ನಾವು ಆತ್ಮದ ಫಲವನ್ನು ಪ್ರದರ್ಶಿಸಬೇಕು. ಅಹಂಭಾವ, ಈರ್ಷ್ಯೆ, ಮತ್ತು ಸ್ವಾರ್ಥಸಾಧನೆಯಂತಹ ಲೌಕಿಕ ಗುಣಲಕ್ಷಣಗಳು ವಿಭಜಿಸುವಂತಹವುಗಳಾಗಿವೆ ಮತ್ತು ಜಯಿಸಲ್ಪಡಬೇಕು. (ಎಫೆ. 4:1-3; ಕೊಲೊ. 3:5-10, 12-14) ನಾವು ನಮ್ಮ ಮನಸ್ಸುಗಳನ್ನು ಸಕಾರಾತ್ಮಕವಾದ, ಭಕ್ತಿವೃದ್ಧಿಯ
ನ್ನುಂಟುಮಾಡುವ ಆಲೋಚನೆಗಳಿಂದ ತುಂಬಿಸಿಡುವ ಅಗತ್ಯವಿದೆ. ರಾಜ್ಯವು ನಮ್ಮ ಜೀವಿತಗಳಲ್ಲಿ ಒಂದು ವಾಸ್ತವಿಕತೆಯಾಗಿದೆ! ಆದರೆ ಅದನ್ನು ಹಾಗೇ ಇಡಲು ನಾವು ಎಚ್ಚತ್ತಿರಬೇಕು!—ಎಫೆ. 6:11, 13.
7 ನಮ್ಮ ಅದ್ಭುತಕರವಾದ ರಾಜ್ಯ ನಿರೀಕ್ಷೆಯ ವಾಸ್ತವಿಕತೆಯು, ಎಂದೂ ಅಂತ್ಯಗೊಳ್ಳದಿರುವ ಏಕತೆಯ ಆತ್ಮದಲ್ಲಿ ನಮ್ಮನ್ನು ಐಕ್ಯಗೊಳಿಸುತ್ತದೆ.—ಕೀರ್ತ. 133:1.