ಬೋಧಿಸಸಾಧ್ಯರಿಗಾಗಿ ಹುಡುಕಿರಿ
1 “ನನ್ನನ್ನು ಕಳುಹಿಸಿಕೊಟ್ಟಂಥ ತಂದೆಯು ಎಳೆದ ಹೊರತು ಯಾವನೂ ನನ್ನ ಬಳಿಗೆ ಬರಲಾರನು.” (ಯೋಹಾನ 6:44) ಹೃದಯವನ್ನು ಪರೀಕ್ಷಿಸುವ ಯೆಹೋವನು, ಬೋಧಿಸಸಾಧ್ಯರಿಗೆ ಮತ್ತು ಅವರೇನನ್ನು ಕಲಿಯುತ್ತಾರೋ ಅದರ ಪ್ರಕಾರ ಕಾರ್ಯನಡಿಸುವವರಿಗೆ ಪ್ರತಿಫಲಕೊಡುವನು. (ಯೆರೆ. 17:10; ಯೋಹಾನ 6:45) ಒಂದು ಹೊಸ ಲೋಕಕ್ಕಾಗಿ ಹಾತೊರೆಯುವ ನಮ್ರ ಜನರನ್ನು ಹುಡುಕುವುದರಲ್ಲಿ ಆತನ ಸಹಕರ್ಮಿಗಳಾಗಿರುವ ಸುಯೋಗ ನಮಗಿದೆ.—ಕೀರ್ತ. 37:11; 1 ಕೊರಿಂ. 3:9.
2 ಯೇಸು ತನ್ನ ಶಿಷ್ಯರನ್ನು “ಮನುಷ್ಯರನ್ನು ಹಿಡಿಯುವ ಬೆಸ್ತ” ರೆಂದು ವರ್ಣಿಸಿದನು. (ಮತ್ತಾ. 4:19) ಆ ವಿಧದ ಕೆಲಸವು ಕೆಲವೊಮ್ಮೆ ಪ್ರಯಾಸಕರವಾಗಿರಬಹುದಾದರೂ, ಒಳ್ಳೆಯ ಫಲಿತಾಂಶಗಳನ್ನು ಪಡೆಯುವುದರಲ್ಲಿ ತುಂಬ ತೃಪ್ತಿಯಿದೆ. ನಮ್ಮ ಸ್ವಂತ ಲಾಭಕ್ಕಾಗಿ ಕೆಲಸ ಮಾಡುವ ಬದಲು, ನಾವು ವಾಸ್ತವವಾಗಿ “ಮೀನು” ಗಳನ್ನು ಖಂಡಿತವಾದ ನಾಶನದಿಂದ ಪಾರುಮಾಡುತ್ತಿದ್ದೇವೆ. ಒಬ್ಬ ಯಶಸ್ವಿ ಬೆಸ್ತನಿಗೆ ಮೀನುಗಳನ್ನು ಆಕರ್ಷಿಸಲು ಏನು ಮಾಡಬೇಕೆಂದು ತಿಳಿದಿರಬೇಕು. ತದ್ರೀತಿಯಲ್ಲಿ, ನಮ್ಮ ಕೇಳುಗರ ಆಸಕ್ತಿಯನ್ನು ಕೆರಳಿಸುವ ಆಕರ್ಷಕ ರೀತಿಯಲ್ಲಿ ನಾವು ರಾಜ್ಯ ಸಂದೇಶವನ್ನು ಪ್ರಸ್ತುತಪಡಿಸಬೇಕು. ನಾವು ಪುನರ್ಭೇಟಿಗಳನ್ನು ಮಾಡುವಾಗ ಇದು ವಿಶೇಷವಾಗಿ ಸತ್ಯವಾಗಿದೆ. ನಾವೇನನ್ನು ಹೇಳಬಲ್ಲೆವು?
3 ಧರ್ಮದ ವಿಷಯದೊಂದಿಗೆ ವ್ಯವಹರಿಸುವ “ಕಾವಲಿನಬುರುಜು” ಲೇಖನಗಳಲ್ಲಿ ಆಸಕ್ತಿಯು ತೋರಿಸಲ್ಪಟ್ಟಲ್ಲಿ, ನೀವು ಹೀಗನ್ನಬಹುದು:
▪ “ಅನೇಕ ಜನರು ಧರ್ಮವನ್ನು ಚರ್ಚಿಸಲು ಏಕೆ ಬಯಸುವುದಿಲ್ಲವೆಂಬದರ ಕುರಿತಾಗಿ ನಾವು ಈ ಹಿಂದೆ ಮಾತಾಡಿದ್ದೆವು. ನಮ್ಮ ನೆರೆಹೊರೆಯವರಲ್ಲಿ ಹೆಚ್ಚಿನವರು ತಾವು ಧಾರ್ಮಿಕರೆಂದು ಹೇಳಿಕೊಳ್ಳುವದರಿಂದ, ಇದು ಸ್ವಲ್ಪ ವಿಚಿತ್ರವೆಂದು ನಿಮಗನಿಸುವದಿಲ್ಲವೋ? ಧರ್ಮವು ಇಂತಹ ಒಂದು ವಿಭಜಿಸುವ ಮತ್ತು ವಾದಾಸ್ಪದ ವಿಷಯವಾಗಿರುವದೇಕೆಂದು ನೀವು ಕುತೂಹಲಪಡಬಹುದು.” ಪ್ರತಿಕ್ರಿಯೆಗಾಗಿ ಅನುಮತಿಸಿರಿ. ರೀಸನಿಂಗ್ ಪುಸ್ತಕದಲ್ಲಿ ಪುಟ 322ಕ್ಕೆ ತಿರುಗಿಸಿರಿ, ಮತ್ತು “ಇಷ್ಟೊಂದು ಧರ್ಮಗಳು ಯಾಕೆ ಇವೆ?” ಎಂಬ ಶಿರೋನಾಮದ ಕೆಳಗಿರುವ ಕೆಲವು ವಿಚಾರಗಳಲ್ಲಿ ಪಾಲಿಗರಾಗಿರಿ.
4 ಧರ್ಮದ ವಿಷಯದ ಮೇಲೆ ಒಂದು ಚರ್ಚೆಯನ್ನು ಆರಂಭಿಸಲು ಈ ರೀತಿಯ ಒಂದು ಪ್ರಸ್ತಾವನೆಯನ್ನು ನೀವು ಉಪಯೋಗಿಸಬಹುದು:
▪ “ನಮ್ಮ ಹತ್ತಿರ ಸತ್ಯ ಧರ್ಮವಿದೆಯೆಂದು ನಾವು ನಿಶ್ಚಿತರಾಗಿರಬಹುದಾದ ಯಾವುದಾದರೂ ಮಾರ್ಗವಿದೆಯೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಇಷ್ಟೊಂದು ಧರ್ಮಗಳಿರುವುದರಿಂದ, ಅನೇಕ ಜನರು ಗೊಂದಲಕ್ಕೀಡಾಗಿದ್ದಾರೆ ಮತ್ತು ಅನಿಶ್ಚಿತರಾಗಿದ್ದಾರೆ.” “ಯಾವ ಧರ್ಮವು ಸರಿಯಾಗಿದೆಯೆಂದು ವ್ಯಕ್ತಿಯೊಬ್ಬನು ಹೇಗೆ ತಿಳಿಯಬಲ್ಲನು?” ಎಂಬದನ್ನು ಚರ್ಚಿಸುವ ರೀಸನಿಂಗ್ ಪುಸ್ತಕದ ಪುಟ 328-9ಕ್ಕೆ ತಿರುಗಿಸಿರಿ. “ಅದರ ಸದಸ್ಯರು ನಿಜವಾಗಿಯೂ ಒಬ್ಬರನ್ನೊಬ್ಬರು ಪ್ರೀತಿಸುತ್ತಾರೋ?” ಎಂಬ ಪ್ರಶ್ನೆ ನಂಬ್ರ 5ರ ಮೇಲೆ ಸಂಕ್ಷಿಪ್ತವಾಗಿ ಹೇಳಿಕೆ ನೀಡಿರಿ. ಒಂದು ವೈಯಕ್ತಿಕ ಬೈಬಲ್ ಅಧ್ಯಯನದ ಮೂಲಕ ಹೆಚ್ಚನ್ನು ಕಲಿಯಬಹುದಾದ ವಿಧವನ್ನು ವಿವರಿಸಿರಿ.
5 ಲೋಕದ ಪರಿಸ್ಥಿತಿಗಳ ಕುರಿತಾಗಿ ಮನೆಯವನು ಚಿಂತಿತನಾಗಿ ತೋರಿದ್ದಲ್ಲಿ, ನೀವಿದನ್ನು ಪ್ರಯತ್ನಿಸಲು ಬಯಸಬಹುದು:
▪ “ಜೀವಿಸುವುದರಲ್ಲಿ ಮತ್ತು ನಮ್ಮ ಕುಟುಂಬಗಳನ್ನು ಪೋಷಿಸುವದರಲ್ಲಿ ನಾವು ನಿಭಾಯಿಸಬೇಕಾದ ಕೆಟ್ಟ ಪರಿಸ್ಥಿತಿಗಳ ಕುರಿತಾಗಿ ನೀವು ಚಿಂತಿತರೆಂಬದು ವ್ಯಕ್ತ. ಹತ್ತಿರದ ಭವಿಷ್ಯತ್ತಿನಲ್ಲಿ ದೇವರು ನೆರವೇರಿಸಲಿರುವ ಒಂದು ಅದ್ಭುತಕರ ವಾಗ್ದಾನವನ್ನು ಬೈಬಲು ಪ್ರಕಟಪಡಿಸುತ್ತದೆ.” ಜ್ಞಾನೋಕ್ತಿ 2:21, 22ನ್ನು ಓದಿರಿ, ಮತ್ತು ಬಾಳುವ ಶಾಂತಿಯಿರುವ ಒಂದು ಲೋಕವನ್ನು ಯೆಹೋವನು ಹೇಗೆ ವಾಗ್ದಾನಿಸಿದ್ದಾನೆಂಬದನ್ನು ವಿವರಿಸಿರಿ.
6 ವಿಶೇಷ ರಾಜ್ಯ ವಾರ್ತೆ ಕ್ಯಾಂಪೇನ್ ಆರಂಭಗೊಂಡ ನಂತರ ಪುನರ್ಭೇಟಿಗಳನ್ನು ಮಾಡುವಾಗ, ರಾಜ್ಯ ವಾರ್ತೆ ಯಿಲ್ಲದ ಮನೆಯವರೊಂದಿಗೆ ಒಂದು ಪ್ರತಿಯನ್ನು ಬಿಟ್ಟುಬರಲು ದಯವಿಟ್ಟು ಖಚಿತಪಡಿಸಿಕೊಳ್ಳಿರಿ. ರಾಜ್ಯ ವಾರ್ತೆ ಯನ್ನು ನೀಡಿದಲ್ಲೆಲ್ಲಾ ಪುನರ್ಭೇಟಿಗಳನ್ನು ಮಾಡುವಾಗ ನೀವು ಏನನ್ನು ಹೇಳಬಹುದೆಂಬದನ್ನು ನಮ್ಮ ರಾಜ್ಯದ ಸೇವೆಯ ಮೇ ಸಂಚಿಕೆಯಲ್ಲಿ ಚರ್ಚಿಸಲಾಗುವುದು.
7 ದೇವರ ವಾಕ್ಯವು “ಕಾರ್ಯಸಾಧಕವಾದ”ದ್ದಾಗಿರುವುದರಿಂದ, ನಾವದನ್ನು ನಮ್ಮ ನಿರೂಪಣೆಗಳಲ್ಲಿ ಉಪಯೋಗಿಸಲು ಪ್ರಯತ್ನಿಸಬೇಕು. (ಇಬ್ರಿ. 4:12) ಮನೆಯವನೇ ನೇರವಾಗಿ ಬೈಬಲನ್ನು ಓದುವಂತೆ ನೀವು ಪ್ರೋತ್ಸಾಹಿಸುವುದನ್ನು ಖಚಿತಪಡಿಸಿಕೊಳ್ಳಿರಿ. (ಅ. ಕೃತ್ಯಗಳು 17:11 ಹೋಲಿಸಿರಿ.) ನಾವು ನಮ್ಮ ಪಾಲನ್ನು ಶ್ರದ್ಧೆಯಿಂದ ಮಾಡುವುದಾದರೆ, ಯೆಹೋವನು ನಮ್ಮ ಪ್ರಯತ್ನಗಳನ್ನು ಆಶೀರ್ವದಿಸುವನು.