ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 6/93 ಪು. 2
  • ಜೂನ್‌ಗಾಗಿ ಸೇವಾ ಕೂಟಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜೂನ್‌ಗಾಗಿ ಸೇವಾ ಕೂಟಗಳು
  • 1993 ನಮ್ಮ ರಾಜ್ಯದ ಸೇವೆ
  • ಉಪಶೀರ್ಷಿಕೆಗಳು
  • ಜೂನ್‌ 7 ರ ವಾರ
  • ಜೂನ್‌ 14 ರ ವಾರ
  • ಜೂನ್‌ 21 ರ ವಾರ
  • ಜೂನ್‌ 28 ರ ವಾರ
1993 ನಮ್ಮ ರಾಜ್ಯದ ಸೇವೆ
km 6/93 ಪು. 2

ಜೂನ್‌ಗಾಗಿ ಸೇವಾ ಕೂಟಗಳು

ಜೂನ್‌ 7 ರ ವಾರ

ಸಂಗೀತ 162 (89)

10 ನಿ: ಸ್ಥಳೀಕ ತಿಳಿಸುವಿಕೆಗಳು. “ರಜಾಕಾಲದ ಮರುಜ್ಞಾಪನಗಳು” ಲೇಖನಕ್ಕೆ ಗಮನವನ್ನು ಸೆಳೆಯಿರಿ ಮತ್ತು ಸಂಕ್ಷಿಪ್ತವಾಗಿ ವಿಮರ್ಶಿಸಿರಿ. ಅನೌಪಚಾರಿಕ ಸಾಕ್ಷಿಕಾರ್ಯದಲ್ಲಿ ಉಪಯೋಗಿಸಲು ನಮ್ಮ ಬಳಿಯಲ್ಲಿ ಪತ್ರಿಕೆಗಳು ಇರುವುದರ ಮೌಲ್ಯವನ್ನು ಪ್ರತ್ಯಕ್ಷಾಭಿನಯಿಸಿರಿ.

15 ನಿ: “ಅತ್ಯಂತ ಮಹಾನ್‌ ಪುರುಷನ ಬಗ್ಗೆ ಕಲಿಯುವಂತೆ ಇತರರಿಗೆ ಸಹಾಯ ಮಾಡಿರಿ.” ಪ್ರಶ್ನೋತ್ತರ ಚರ್ಚೆ. ಸಮಯವು ಅನುಮತಿಸಿದಂತೆ, ಅವರು ಶುಶ್ರೂಷೆಯಲ್ಲಿ ಪುಸ್ತಕವನ್ನು ನೀಡುವುದರಲ್ಲಿ ಹೇಗೆ ಆನಂದಿಸಿದ್ದಾರೆಂದು ಸಭಿಕರಿಂದ ಹೇಳಿಕೆಗಳನ್ನು ಸ್ವಾಗತಿಸಿರಿ.

20 ನಿ: “ಅತ್ಯಂತ ಮಹಾನ್‌ ಪುರುಷ ಪುಸ್ತಕವನ್ನು ಪರಿಚಯ ಪಡಿಸಲು ಕಿರುಹೊತ್ತಗೆಗಳನ್ನು ಉಪಯೋಗಿಸಿರಿ.” ಸಭಿಕರೊಂದಿಗೆ ಚರ್ಚೆ. ಎರಡು ಪ್ರತ್ಯಕ್ಷಾಭಿನಯಗಳನ್ನು ಮಾಡಿಸಿ. ಮೊದಲನೆಯದು, ಪ್ಯಾರಗ್ರಾಫ್‌ 2 ರಲ್ಲಿ ಸೂಚಿಸಲಾದ ನಿರೂಪಣೆಯನ್ನು ಉಪಯೋಗಿಸಬೇಕು. ಕಿರುಹೊತ್ತಗೆಯನ್ನು ಪರಿಚಯ ಪಡಿಸಿದ ಮೇಲೆ, ಪ್ರಚಾರಕನು ಪುಸ್ತಕವನ್ನು ನೀಡುತ್ತಾನೆ ಆದರೆ ಮನೆಯವನು ನಿರಾಕರಿಸಿದ್ದರಿಂದ ಅವನು ಎರಡು ಪತ್ರಿಕೆಗಳನ್ನು ನೀಡುತ್ತಾನೆ. ಎರಡನೆಯ ಪ್ರತ್ಯಕ್ಷಾಭಿನಯವು ನಾಲ್ಕನೆಯ ಪ್ಯಾರಗ್ರಾಫ್‌ನಲ್ಲಿರುವ ನಿರೂಪಣೆಯನ್ನು ಉಪಯೋಗಿಸಬೇಕು ಮತ್ತು ಈ ಸಮಯ ಮನೆಯವನು ಪುಸ್ತಕವನ್ನು ಸ್ವೀಕರಿಸುತ್ತಾನೆ. ಬೈಬಲನ್ನು ಉಪಯೋಗಿಸುತ್ತಾ, ಪ್ರಚಾರಕನು ಕಿರುಹೊತ್ತಗೆಯಲ್ಲಿರುವ ಮಾಹಿತಿಯ ಸಂಕ್ಷಿಪ್ತ ಚರ್ಚೆಯ ಅನಂತರ ಅದನ್ನು ಸಾದರಪಡಿಸುತ್ತಾನೆ. ಮನೆಯವರು ಅತ್ಯಂತ ಮಹಾನ್‌ ಪುರುಷ ಪುಸ್ತಕವನ್ನು ಸ್ವೀಕರಿಸದಿದ್ದರೆ, ಅವರು ಪ್ರಚಲಿತ ಪತ್ರಿಕೆಗಳನ್ನು ನೀಡಬಹುದೆಂದು ಪ್ರಚಾರಕರಿಗೆ ಮರುಜ್ಞಾಪಿಸಿರಿ.

ಸಂಗೀತ 205 (118) ಮತ್ತು ಸಮಾಪ್ತಿಯ ಪ್ರಾರ್ಥನೆ.

ಜೂನ್‌ 14 ರ ವಾರ

ಸಂಗೀತ 196 (64)

10 ನಿ: ಸ್ಥಳೀಕ ತಿಳಿಸುವಿಕೆಗಳು ಮತ್ತು ನಮ್ಮ ರಾಜ್ಯದ ಸೇವೆ ಯಿಂದ ಆಯ್ದ ಪ್ರಕಟನೆಗಳು. ಈ ವಾರಾಂತ್ಯ ಕ್ಷೇತ್ರ ಸೇವೆಗಾಗಿ ಪ್ರಚಲಿತ ಪತ್ರಿಕೆಗಳಲ್ಲಿ ಸೂಕ್ತವಾದ ಮಾತಾಡುವ ಅಂಶಗಳನ್ನು ಸೂಚಿಸಿರಿ.

15 ನಿ: ಪ್ರಶ್ನಾ ಪೆಟ್ಟಿಗೆ. ಹಿರಿಯನಿಂದ ಭಾಷಣ. ದೀಕ್ಷಾಸ್ನಾನಗಳಿಗೆ ಹಾಜರಾಗುವಾಗ ನಮ್ಮನ್ನು ಸರಿಯಾಗಿ ನಡೆಸಿಕೊಳ್ಳುವ ನಮ್ಮ ಜವಾಬ್ದಾರಿಯನ್ನು ತಿಳಿಸಿರಿ. ಜನವರಿ 1992 ರ ನಮ್ಮ ರಾಜ್ಯದ ಸೇವೆ ಯ ಪ್ರಶ್ನಾ ಪೆಟ್ಟಿಗೆಯಲ್ಲಿದ್ದ ಸಂಬಂಧಪಟ್ಟ ಅಂಶಗಳನ್ನು ಸೇರಿಸಿರಿ.

20 ನಿ: “ನಮ್ಮ ಶುಶ್ರೂಷೆಯಲ್ಲಿ ಇಂದು ಕಿರುಹೊತ್ತಗೆಗಳು ಇಷ್ಟು ಬೆಲೆಯುಳ್ಳದ್ದಾಗಿರುವ ಕಾರಣ.” ಪ್ರಶ್ನೋತ್ತರ ಚರ್ಚೆ. ಕೊನೆಯ ಪ್ಯಾರಗ್ರಾಫ್‌ ಅನಂತರ, ಒಂದು ಕಿರುಹೊತ್ತಗೆಯನ್ನು ಅನೌಪಚಾರಿಕ ಸಾಕ್ಷಿಕಾರ್ಯದಲ್ಲಿ ಉಪಯೋಗಿಸುವುದು ಎಷ್ಟು ಸುಲಭವೆಂದು ತೋರಿಸಲು ಒಂದು ಸಂಕ್ಷಿಪ್ತ ಪ್ರತ್ಯಕ್ಷಾಭಿನಯವನ್ನು ಮಾಡಿರಿ.

ಸಂಗೀತ 126 (10) ಮತ್ತು ಸಮಾಪ್ತಿಯ ಪ್ರಾರ್ಥನೆ.

ಜೂನ್‌ 21 ರ ವಾರ

ಸಂಗೀತ 31 (51)

10 ನಿ: ಸ್ಥಳೀಕ ತಿಳಿಸುವಿಕೆಗಳು. ಮಾರ್ಚ್‌ ಸೇವಾ ವರದಿಯ ಮುಖ್ಯಾಂಶಗಳನ್ನು ತಿಳಿಸಿರಿ. ಆ ತಿಂಗಳಿಗಾಗಿ ಕ್ಷೇತ್ರ ಸೇವೆಯ ವರದಿಯಲ್ಲಿ ಸ್ಥಳೀಯ ಸಭೆಯ ಪಾತ್ರವನ್ನು ಕೂಡ ತಿಳಿಸಿರಿ. ಅಕೌಂಟ್ಸ್‌ ವರದಿಯನ್ನು ಒಳಗೂಡಿಸಿರಿ ಮತ್ತು ಕಾಣಿಕೆಗಳ ಅಂಗೀಕಾರವನ್ನು ಓದಿರಿ. ಸ್ಥಳೀಕ ಸಭೆಗೆ ಮತ್ತು ಸೊಸೈಟಿಯ ಲೋಕವ್ಯಾಪಕ ಕಾರ್ಯಕ್ಕೆ ಆರ್ಥಿಕ ಬೆಂಬಲ ಕೊಟ್ಟದ್ದಕ್ಕಾಗಿ ಸಭೆಯನ್ನು ಪ್ರಶಂಸಿಸಿರಿ.

15 ನಿ: “ಅತ್ಯಂತ ಮಹಾನ್‌ ಪುರುಷ ಪುಸ್ತಕದಲ್ಲಿ ಬೈಬಲ್‌ ಅಭ್ಯಾಸಗಳನ್ನು ಆರಂಭಿಸುವುದು.” ಪ್ರಶ್ನೋತ್ತರ ಚರ್ಚೆ. ಪ್ಯಾರಗ್ರಾಫ್‌ 2 ರ ಅನಂತರ, ಪುಸ್ತಕದಲ್ಲಿ ಒಂದು ಬೈಬಲ್‌ ಅಭ್ಯಾಸವನ್ನು ಹೇಗೆ ಆರಂಭಿಸುವುದೆಂದು ಪ್ರತ್ಯಕ್ಷಾಭಿನಯ ಮಾಡಿರಿ. ಪುಸ್ತಕದ 111 ನೆಯ ಅಧ್ಯಾಯದ ಮೊದಲ ಮೂರು ಪ್ಯಾರಗ್ರಾಫ್‌ಗಳನ್ನು ಓದುವ ಮೂಲಕ ಪ್ರಚಾರಕನು ಪ್ರಾರಂಭಿಸುತ್ತಾನೆ ಮತ್ತು ಲೇಖನದ 2 ನೆಯ ಪ್ಯಾರಗ್ರಾಫ್‌ನಲ್ಲಿ ಸೂಚಿಸಲಾದ ನಿರೂಪಣೆಯೊಂದಿಗೆ ಮುಂದುವರಿಯುತ್ತಾನೆ.

20 ನಿ: ಸೃಷ್ಟಿಯ ಮೇಲೆ ಭಾಷಣ, ರೀಸನಿಂಗ್‌ ಪುಸ್ತಕ ಪುಟಗಳು 84-8 ರ ಮೇಲೆ ಆಧಾರಿತ. ಸೂಚಿಸಲಾದ ಸಮಯದಲ್ಲಿ ಸರಿಯಾಗಿ ಆವರಿಸಲ್ಪಡುವ ಅಂಶಗಳನ್ನೇ ಉಪಯೋಗಿಸುವುದರಲ್ಲಿ ಭಾಷಣಕರ್ತನು ಆಯ್ಕೆಯುಳ್ಳವನಾಗಿರಬೇಕು.

ಸಂಗೀತ 79 (81) ಮತ್ತು ಸಮಾಪ್ತಿಯ ಪ್ರಾರ್ಥನೆ.

ಜೂನ್‌ 28 ರ ವಾರ

ಸಂಗೀತ 130 (58)

10 ನಿ: ಸ್ಥಳೀಕ ತಿಳಿಸುವಿಕೆಗಳು. ದೇವಪ್ರಭುತ್ವ ವಾರ್ತೆಗಳು. ಮನೆಯಿಂದ ಮನೆಯ ಶುಶ್ರೂಷೆಯಲ್ಲಿ ಯಾ ಅನೌಪಚಾರಿಕವಾಗಿ ಸಾಕ್ಷಿಕೊಡುವಾಗ ಉಪಯೋಗಿಸಬಹುದಾದ ಪ್ರಚಲಿತ ಪತ್ರಿಕೆಗಳಲ್ಲಿರುವ ಕೆಲವೊಂದು ಮಾತಾಡುವ ಅಂಶಗಳ ಕಡೆಗೆ ಗಮನವನ್ನು ಸೆಳೆಯಿರಿ.

20 ನಿ: “ಕ್ಷೇತ್ರ ಸೇವೆಯಲ್ಲಿ ಕ್ರಮವಾಗಿರಿ.” ಸೇವಾ ಮೇಲ್ವಿಚಾರಕನು ಯಾ ಬೇರೆ ಅರ್ಹ ಸಹೋದರನಿಂದ ಭಾಷಣ. ಸಮಯವು ಅನುಮತಿಸುವಂತೆ ನಮ್ಮ ಶುಶ್ರೂಷೆಯನ್ನು ನೆರವೇರಿಸಲು ವ್ಯವಸ್ಥಿತರು, ಪುಟಗಳು 106-10 ರಲ್ಲಿರುವ ಮಾಹಿತಿಯನ್ನು ವಿಮರ್ಶಿಸಿರಿ. ಎಲ್ಲರೂ ಕ್ರಮವಾಗಿ ಶುಶ್ರೂಷೆಯಲ್ಲಿ ಭಾಗವಹಿಸುವ ಮತ್ತು ತಿಂಗಳದ ಕೊನೆಗೆ ತಡವಿಲ್ಲದೆ ಕ್ಷೇತ್ರ ಸೇವೆಯ ವರದಿಗಳನ್ನು ಕೊಡುವ ಅಗತ್ಯವನ್ನು ಒತ್ತಿ ಹೇಳಿರಿ.

15 ನಿ: ಸ್ಥಳೀಕ ಆವಶ್ಯಕತೆಗಳು. ಹಿಂದಿನ ಸರ್ಕಿಟ್‌ ಮೇಲ್ವಿಚಾರಕರ ಸಂದರ್ಶನದಲ್ಲಿ ಸೂಚಿಸಲಾದ ಸಭೆಯ ಅಗತ್ಯಗಳ ಮೇಲೆ ಅಂಶಗಳನ್ನು ವಿಮರ್ಶಿಸಬಹುದು, ಯಾ ಅದರ ಕ್ಷೇತ್ರ ಸೇವಾ ವರದಿಯಿಂದ ಕಂಡುಬರುವಂತೆ ಸಭೆಯ ಬಲಿಷ್ಠ ಅಂಶಗಳ ಮತ್ತು ನ್ಯೂನತೆಗಳ ಮೇಲೆ ವಿಷಯವನ್ನು ಆಧಾರವಾಗಿಡಿ.

ಸಂಗೀತ 71 (96) ಮತ್ತು ಸಮಾಪ್ತಿಯ ಪ್ರಾರ್ಥನೆ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ