ನಮ್ಮ ಶುಶ್ರೂಷೆಯಲ್ಲಿ ಇಂದು ಕಿರುಹೊತ್ತಗೆಗಳು ಇಷ್ಟು ಬೆಲೆಯುಳ್ಳದ್ದಾಗಿರುವ ಕಾರಣ
1 “ಅವನು ರೈಲು ಹಾದಿಯ ಮೇಲೊಂದು ಕಿರುಹೊತ್ತಗೆಯನ್ನು ಕಂಡನು” ಎಂಬ ಶೀರ್ಷಿಕೆವುಳ್ಳ ಒಂದು ಅನುಭವವು, ಜನವರಿ 1, 1991 ರ ದ ವಾಚ್ಟವರ್ ನ ಸಂಚಿಕೆಯ, ಪುಟ 30 ರಲ್ಲಿ ಇತ್ತು. ಒಂದು ಹಳಿಯ ಕೆಳಗೆ ಇದ್ದಂತಹ ನಮ್ಮ ಕಿರುಹೊತ್ತಗೆಗಳಲ್ಲಿ ಒಂದನ್ನು ಕಂಡ ರೈಲು ದಾರಿಯ ಸಂರಕ್ಷಣಾ ಅಧಿಕಾರಿಯ ಬಗ್ಗೆ ತಿಳಿಸಿತು. ಅವನು ಕಿರುಹೊತ್ತಗೆಯನ್ನು ತಕ್ಷಣ ಓದಿ, ಆಮೇಲೆ ತನ್ನ ಅಳಿಯನಿಗೆ ಹೇಳಿದ್ದು: “ಇಂದು ನಾನು ಸತ್ಯವನ್ನು ಕಂಡುಕೊಂಡಿದ್ದೇನೆ!” ಇಬ್ಬರೂ ಹೆಚ್ಚಿನ ಸಾಹಿತ್ಯಗಳನ್ನು ತರಿಸಿ ಅದನ್ನು ಅಭ್ಯಾಸಿಸಿದರು. ಈಗ, ಅವರ ಸಂತತಿಯ ನೂರಕ್ಕಿಂತಲೂ ಹೆಚ್ಚಿನವರು ಸತ್ಯದಲ್ಲಿ ಕ್ರಿಯಾಶೀಲರಾಗಿದ್ದಾರೆ. ಕೇವಲ ಒಂದು ಕಿರುಹೊತ್ತಗೆಯನ್ನು ಓದುವುದರಿಂದ ಏನು ಫಲಿಸಬಹುದೆಂದು ಇದು ತೋರಿಸುತ್ತದೆ.
2 ಅವಕಾಶಗಳ ಉಪಯೋಗವನ್ನು ಮಾಡುವುದು: ಎಲ್ಲೆಡೆಯೂ ಸಹೋದರರು ಕಿರುಹೊತ್ತಗೆಗಳನ್ನು ನೀಡುವ ಅವಕಾಶಗಳ ಉಪಯೋಗವನ್ನು ಮಾಡುತ್ತಿದ್ದಾರೆ. ತನ್ನ ಅತೆಯ್ತ ಮರಣದಿಂದಾಗಿ ದುಃಖವನ್ನು ಅನುಭವಿಸುತ್ತಿದ್ದ ಆಕೆಯ ಶಾಲಾಶಿಕ್ಷಕಿಯನ್ನು ಒಬ್ಬ ಯುವ ಸಾಕ್ಷಿಯು ಗಮನಿಸಿದಳು. ಯುವ ಸಹೋದರಿಯು ತನ್ನ ಶಿಕ್ಷಕಿಗೆ ಸಂತೈಸುವ ಪತ್ರವೊಂದನ್ನು ಬರೆದು, ಅದರಲ್ಲಿ ಸತ್ತ ಪ್ರಿಯರಿಗೆ ಯಾವ ನಿರೀಕ್ಷೆ ಇದೆ? ಎಂಬ ಕಿರುಹೊತ್ತಗೆಯನ್ನು ಸೇರಿಸಿದಳು. ಶಿಕ್ಷಕಿಯು ಉಪಕಾರ ಸಲ್ಲಿಸುವ ಚೀಟಿಯೊಂದನ್ನು ಬರೆದು ಆಮೇಲೆ ನಮ್ಮ ಯುವ ಸಹೋದರಿಯೊಂದಿಗೆ ಮಾತಾಡಿದಳು. ಈಗ ಈ ಶಿಕ್ಷಕಿಯು ಅವಳಿಂದ ಕ್ರಮವಾಗಿ ಪತ್ರಿಕೆಗಳನ್ನು ಸ್ವೀಕರಿಸುತ್ತಾಳೆ.
3 ಒಂದು ಶ್ಮಶಾನಕ್ಕೆ ನಡೆಸುವ ದಾರಿಯೊಂದರ ಮೇಲೆ ಸಾಕ್ಷಿಕೊಡುತ್ತಿದ್ದ ಕೆಲವು ಪ್ರಚಾರಕರು, ಸಮಾಧಿಗಳಿಗೆ ಬಣ್ಣ ಹಚ್ಚುತ್ತಿರುವ ಜನರನ್ನು ಕಂಡರು. ಪ್ರಚಾರಕರು ಅವಕಾಶವನ್ನು ಅವರಿಗೆ ಕಿರುಹೊತ್ತಗೆಗಳನ್ನು ನೀಡಲು ಉಪಯೋಗಿಸಿದರು. ಅನೇಕ ಜನರು ಶ್ಮಶಾನಕ್ಕೆ ಭೇಟಿಕೊಡುವ ಮಾರನೆಯ ದಿನವು ರಜಾದಿನವಾಗಿದರ್ದಿಂದ, ಪ್ರಚಾರಕರು ಶ್ಮಶಾನದ ದ್ವಾರದಲ್ಲಿ ನಿಂತು ಕಿರುಹೊತ್ತಗೆಗಳನ್ನು ನೀಡಲು ನಿರ್ಧರಿಸಿದರು. ಕೇವಲ ಮೂರು ವ್ಯಕ್ತಿಗಳು ಅವುಗಳನ್ನು ನಿರಾಕರಿಸುವುದರೊಂದಿಗೆ, ಐನೂರಕ್ಕಿಂತಲೂ ಅಧಿಕ ಕಿರುಹೊತ್ತಗೆಗಳು ನೀಡಲ್ಪಟ್ಟವು. ಮುಂದಿನ ವರ್ಷ, ಪ್ರಚಾರಕರು ಹಿಂದಿರುಗಿ ಕೇವಲ ಆರು ನಿರಾಕಾರಗಳೊಂದಿಗೆ ಒಂದು ಸಾವಿರಕ್ಕಿಂತಲೂ ಅಧಿಕ ಕಿರುಹೊತ್ತಗೆಗಳನ್ನು ಹಂಚಿದರು. ಅನೇಕ ವ್ಯಕ್ತಿಗಳು ಆಳವಾದ ಗಣ್ಯತೆಯನ್ನು ವ್ಯಕ್ತಪಡಿಸಿದರು. ಅವನು ಅಲ್ಲಿಂದ ಹೋಗುವಾಗ ಒಬ್ಬ ಮನುಷ್ಯನು ಕಿರುಹೊತ್ತಗೆಯನ್ನು ಓದಿದನು ಮತ್ತು ಅದನ್ನು ಅವನಿಗೆ ಕೊಟ್ಟ ಸಹೋದರಿಯೊಂದಿಗೆ ಮಾತಾಡಲು ಬೇಗನೆ ಹಿಂದಿರುಗಿದನು. ಅವನು ಹೇಳಿದ್ದು: “ಈ ಸಂದೇಶವನ್ನು ಓದಬೇಕೆಂದು ನಾನು ಬಯಸುವ ಇನ್ನೊಬ್ಬರು ಇದ್ದಾರೆ. ನಾನು ಇನ್ನೊಂದನ್ನು ಪಡೆಯಬಹುದೊ?”
4 ಕಿರುಹೊತ್ತಗೆಗಳು ಅನುಕೂಲವಾದ ಗಾತ್ರದ್ದಾಗಿವೆ ಮತ್ತು ನಾವು ಎಲ್ಲೇ ಹೋಗಲಿ ನಮ್ಮೊಂದಿಗೆ ತೆಗೆದುಕೊಂಡು ಹೋಗಲು ಸರಳವಾಗಿವೆ. ಇತರರೊಂದಿಗೆ ಅನೌಪಚಾರಿಕ ಸಂಭಾಷಣೆಗಳಲ್ಲಿ ತೊಡಗಿರುವಾಗ, ಅಪರಿಚಿತರಾಗಿರಲಿ ಯಾ ಪರಿಚಿತರಾಗಿರಲಿ, ನಮಗೆ ಈಗ ಲಭ್ಯವಿರುವ ಎಂಟು ಕಿರುಹೊತ್ತಗೆಗಳಲ್ಲಿ ಒಂದರ ಚರ್ಚೆಗೆ ನಡೆಸಬಹುದಾದ ಒಂದು ಸಂಕ್ಷಿಪ್ತ ಹೇಳಿಕೆಯನ್ನು ಮಾಡಲು ನಾವು ಶ್ರಮಿಸಬೇಕು. ಇದನ್ನು ನೆರೆಯವರ ಜೊತೆಯಲ್ಲಿ ಮಾತಾಡುವಾಗ, ಖರೀದಿ ಮಾಡುವಾಗ ಯಾ ಒಂದು ಕಾರ್ಯಕ್ಕಾಗಿ ಕಾಯುತ್ತಿರುವಾಗ, ಸಂಬಂಧಿಕರನ್ನು ಭೇಟಿಮಾಡುವಾಗ, ಯಾ ಇನ್ನೂ ಅನೇಕ ಪರಿಸ್ಥಿತಿಗಳಲ್ಲಿ ಮಾಡಬಹುದು.
5 ಯಾಕೆ ಪರಿಣಾಮಕಾರಿ: ಕಿರುಹೊತ್ತಗೆಗಳು ಇಷ್ಟವಾಗುವಂತೆ ವರ್ಣರಂಜಿತವಾಗಿವೆ. ಅವು ಸಂಕ್ಷಿಪ್ತವಾಗಿವೆ. ಮನೆಯವರು ಮತ್ತು ನಾವು ಅನೌಪಚಾರಿಕ ಸನ್ನಿವೇಶಗಳಲ್ಲಿ ಭೇಟಿಯಾಗುವವರು ವಿಸ್ತಾರವಾದ ಓದುವಿಕೆಯನ್ನು ಮಾಡುವ ಹಂಗಿನ ಅನಿಸಿಕೆಯಿಂದ ಪೂರ್ತಿ ಮುಳುಗಿಹೋಗುವದಿಲ್ಲ. ಕಿರುಹೊತ್ತಗೆಯಲ್ಲಿ ಉದ್ದೇಶಿಸಲಾದ ವಿಷಯದ ಬಲವಾದ ಶಾಸ್ತ್ರೀಯ ನೋಟವನ್ನು ಓದುಗನು ಪಡೆಯುತ್ತಾನೆ. ಶಾಂತಿಭರಿತ ಹೊಸ ಲೋಕದಲ್ಲಿ ಜೀವನ ಎಂಬ ಕಿರುಹೊತ್ತಗೆಯನ್ನು ಪಡೆದನಂತರ ಮತ್ತು ಅದನ್ನು ಅವನೊಂದಿಗೆ ವಿಮರ್ಶಿಸಲಾದ ಬಳಿಕ, ಒಬ್ಬ ಯೌವನಸ್ಥನು ಘೋಷಿಸಿದ್ದು: “ಲೋಕದ ಪರಿಸ್ಥಿತಿಯ ಬಗ್ಗೆ ಇಷ್ಟೊಂದು ಉತ್ತೇಜಕವಾಗಿರುವ ಮಾಹಿತಿಯನ್ನು ನಾನೆಂದೂ ಕೇಳಿಲ್ಲ!”
6 ಪ್ರತಿಯೊಂದು ಸೂಕ್ತವಾದ ಸಂದರ್ಭದಲ್ಲಿ ಈ ಕಿರುಹೊತ್ತಗೆಗಳನ್ನು ಉಪಯೋಗಿಸಲು ನಾವು ಬಯಸುತ್ತೇವೆ. ಮನೆಯಿಂದ ಮನೆಯ ಕಾರ್ಯದಲ್ಲಿ ಸಂಭಾಷಣೆಗಳನ್ನು ಆರಂಭಿಸಲು ಅವು ಸಹಾಯಕಾರಿ ಎಂದು ಅನೇಕ ಪ್ರಚಾರಕರು ಕಂಡಿದ್ದಾರೆ. ಈಗ ನಡೆಸಲ್ಪಡುವ ಅನೇಕ ಅಭ್ಯಾಸಗಳು ಒಂದು ಕಿರುಹೊತ್ತಗೆಯಿಂದ ಆರಂಭಿಸಲ್ಪಟ್ಟಿದ್ದವು. ನಮ್ಮ ರಾಜ್ಯದ ಸೇವೆ ಯ ಈ ಸಂಚಿಕೆಯಲ್ಲಿ ಪುಟ 4 ರಲ್ಲಿ, ಕಿರುಹೊತ್ತಗೆಗಳು ಹೇಗೆ ಪರಿಣಾಮಕಾರಿಯಾಗಿ ಉಪಯೋಗಿಸಲ್ಪಡಬೇಕು ಎಂಬುದರ ಕುರಿತು ಕೆಲವೊಂದು ಪ್ರಾಯೋಗಿಕ ಸಲಹೆಗಳು ಇವೆ. ಹೌದು, ಕಿರುಹೊತ್ತಗೆಗಳು ಚಿಕ್ಕದಾಗಿವೆ ಆದರೆ ನಮ್ಮ ಶುಶ್ರೂಷೆಗೆ ಬೆಲೆಯುಳ್ಳ ಸಾಧನಗಳಾಗಿವೆ.