‘ನಂಬಿಕೆಯಲ್ಲಿ ಸಂಬಂಧಿಸಿ’ದವರೆಡೆಗೆ ಪ್ರೀತಿ
ನಿಜ ಕ್ರೈಸ್ತರು ತಮ್ಮ ತಮ್ಮೊಳಗೆ ಕುಟುಂಬಸದೃಶ್ಯವಾಗಿರುವ ಬಂಧದಲ್ಲಿದ್ದಾರೆ. ನಿಜ, ಸಾ.ಶ. ಪ್ರಥಮ ಶತಮಾನದಂದಿನಿಂದ, ಇವರು ಒಬ್ಬರನ್ನೊಬ್ಬರು “ಸಹೋದರ” ಮತ್ತು “ಸಹೋದರಿ” (NW) ಎಂಬುದಾಗಿ ಕರೆಯುತ್ತಿದ್ದರು. (ಮಾರ್ಕ 3:31-35; ಫಿಲೆಮೋನ 1, 2) ಇವು ಬರೀ ಮಾತುಗಳಾಗಿರಲಿಲ್ಲ; ದೇವರ ಆರಾಧಕರು ಒಬ್ಬರನ್ನೊಬ್ಬರು ಹೇಗೆ ಭಾವಿಸಿಕೊಳ್ಳತಕ್ಕದ್ದು ಎಂಬುದರ ವರ್ಣನೆಯನ್ನು ಇದು ಕೊಡುತ್ತದೆ. (1 ಯೋಹಾನ 4:7, 8ನ್ನು ಹೋಲಿಸಿರಿ.) ಯೇಸು ಹೇಳಿದ್ದು: “ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.”—ಯೋಹಾನ 13:35.
ಜುಲೈ 1997ರಲ್ಲಿ, ಚಿಲಿಯಲ್ಲಿ ಬಡಿದ ಭೀಕರ ಮಳೆ ಮತ್ತು ನೆರೆ ಪ್ರವಾಹವನ್ನು ಹಿಂಬಾಲಿಸಿ ದೀರ್ಘ ಕ್ಷಾಮ ಉಂಟಾದಾಗ ಇಂತಹ ಪ್ರೀತಿಯು ವ್ಯಕ್ತವಾಗಿತ್ತು. ಇದ್ದಕ್ಕಿದ್ದಹಾಗೆ, ಅನೇಕರಿಗೆ ಆಹಾರ, ಬಟ್ಟೆ ಮತ್ತು ಇತರ ವಸ್ತುಗಳ ಅಗತ್ಯ ತೋರಿಬಂತು. ವಿಪತ್ತಿನ ಪರಿಸ್ಥಿತಿಗಳಲ್ಲಿ, ಯೆಹೋವನ ಸಾಕ್ಷಿಗಳು ಗಲಾತ್ಯದವರಿಗೆ ಪೌಲನು ನೀಡಿದ ಬುದ್ಧಿವಾದವನ್ನು ಅನುಸರಿಸಲು ಪರಿಶ್ರಮಪಡುತ್ತಾರೆ: “ಆದದರಿಂದ ಸಮಯವಿರಲಾಗಿ ಎಲ್ಲರಿಗೆ ಒಳ್ಳೇದನ್ನು ಮಾಡೋಣ; ಮುಖ್ಯವಾಗಿ ಒಂದೇ ಮನೆಯವರಂತಿರುವ ಕ್ರಿಸ್ತನಂಬಿಕೆಯುಳ್ಳವರಿಗೆ ಮಾಡೋಣ.”—ಗಲಾತ್ಯ 6:10.
ಹೀಗೆ, ಯೆಹೋವನ ಸಾಕ್ಷಿಗಳು ಪ್ರತಿಕ್ರಿಯಿಸಲು ತಮ್ಮನ್ನು ತಾವೇ ತ್ವರಿತವಾಗಿ ಸಂಘಟಿಸಿಕೊಂಡರು. ಆಹಾರ, ಬಟ್ಟೆ ಮತ್ತು ತದ್ರೀತಿಯ ವಸ್ತುಗಳು ಒಟ್ಟುಗೂಡಿಸಲ್ಪಟ್ಟು, ವರ್ಗೀಕರಿಸಲ್ಪಟ್ಟು, ತುಂಬಿಸಲ್ಪಟ್ಟವಲ್ಲದೆ, ವಿಪತ್ತುಗ್ರಸ್ತ ಕ್ಷೇತ್ರಗಳಿಗೆ ಸಾಗಿಸಲ್ಪಟ್ಟವು. ಮಕ್ಕಳು ಕೂಡ ಆಟಿಕೆಗಳನ್ನು ಉಚಿತವಾಗಿ ಕೊಟ್ಟರು! ರಾಜ್ಯ ಸಭಾಗೃಹವು ಪರಿಹಾರ ಸಾಮಗ್ರಿಗಳಿಂದ ತುಂಬಿರುವದನ್ನು ನೋಡಿ ಒಬ್ಬ ಸಹೋದರಿಯು ಬಹಳ ಆಶ್ಚರ್ಯಪಡುತ್ತಾಳೆ. “ನಗುವುದೋ ಅಳುವುದೋ ಗೊತ್ತಾಗದೆ ನಾನು ಮೂಕವಿಸ್ಮಿತಳಾಗಿ ನಿಂತುಬಿಟ್ಟೆ,” ಎಂದು ಅವಳು ಹೇಳುತ್ತಾಳೆ. “ನಮಗೆ ಅಗತ್ಯವಿರುವದೇ ಅಲ್ಲಿತ್ತು.”
ಅನಂತರ ಅನಿರೀಕ್ಷಿತವಾಗಿ, ನೆರೆಯಿಂದ ಆವೃತವಾದ ಅದೇ ಕ್ಷೇತ್ರದಲ್ಲಿ ಭೂಕಂಪವೊಂದು ಸಣ್ಣಭಾಗವೊಂದಕ್ಕೆ ಬಡಿಯಿತು. ಅನೇಕ ಮನೆಗಳು ನಿರ್ಮೂಲವಾದವು. ಈ ಅಗತ್ಯವನ್ನು ಪೂರೈಸಲು, ಇನ್ನೂ ಹೆಚ್ಚಿನ ಪರಿಹಾರ ಕಮಿಟಿಗಳು ರಚಿಸಲ್ಪಟ್ಟವು. ಯೆಹೋವನ ಸಾಕ್ಷಿಗಳ ಕೂಟ ಸೌಕರ್ಯಗಳ ನಿರ್ಮಾಣವನ್ನು ಸಾಮಾನ್ಯವಾಗಿ ನೋಡಿಕೊಳ್ಳುತ್ತಿದ್ದ ರೀಜನಲ್ ಬಿಲ್ಡಿಂಗ್ ಕಮಿಟಿಗಳು ಸಹಾಯನೀಡಲು ಧಾವಿಸಿಬಂದವು ಮತ್ತು ತಮ್ಮ ಬೆಂಬಲವನ್ನು ನೀಡಿದವು. ಪರಿಣಾಮವೇನಾಯಿತು? ತಮ್ಮ ಮನೆಗಳನ್ನು ಕಳೆದುಕೊಂಡವರಿಗೆ ಚಿಕ್ಕ ಮನೆಗಳು—ಸಹೋದರರಿಂದಲೇ ಯೋಜಿಸಲ್ಪಟ್ಟು ಕಟ್ಟಲ್ಪಟ್ಟವುಗಳು—ಉಚಿತವಾಗಿ ನೀಡಲ್ಪಟ್ಟವು. ಈ ಮನೆಗಳು ಬಹಳ ದೊಡ್ಡದಾಗಿರದಿದ್ದರೂ, ಐಹಿಕ ಪರಿಹಾರ ಕಾರ್ಯಕ್ರಮಗಳಿಂದ ಸಾಲದ ರೂಪದಲ್ಲಿ ಕಟ್ಟಲಾದವುಗಳಿಗಿಂತಲೂ, ನೆಲ ಮತ್ತು ಕಿಟಕಿಗಳಿಲ್ಲದ ಹಾಗೂ ಬಣ್ಣಬಳಿಯದೆ ಬಿಡಲ್ಪಟ್ಟವುಗಳು ತೀರಾ ವ್ಯತ್ಯಾಸವಾಗಿದ್ದವು.
ಕೆಲವು ಸಹೋದರರು ಸಹಾಯನೀಡಲು ದೀರ್ಘ ಪ್ರಯಾಣಗಳನ್ನು ಮಾಡಿದರು. ರೀಜನಲ್ ಬಿಲ್ಡಿಂಗ್ ಕಮಿಟಿಯೊಂದರ ಅಧ್ಯಕ್ಷರೊಬ್ಬರು ಹಾನಿಗೊಳಗಾದ ಕ್ಷೇತ್ರವನ್ನು ವೀಕ್ಷಿಸಲು ಎರಡು ಸಂತತ ದಿನಗಳ—ಗಾಲಿಕುರ್ಚಿಗೆ ತನ್ನನ್ನು ಸೀಮಿತಗೊಳಿಸಿದುದರ ಮಧ್ಯೆ—ವ್ಯಾಪಕ ಸಂಚಾರವನ್ನು ಮಾಡಿದರು. ಒಬ್ಬ ಕುರುಡ ಸಹೋದರನು ಶ್ರಮಪಟ್ಟು ಕೆಲಸಮಾಡುತ್ತಾ, ನಿರ್ದಿಷ್ಟ ಗಾತ್ರಕ್ಕೆ ಕಡಿಯಲಾಗುವಂತೆ ಕೆಲವು ಅಡ್ಡತೊಲೆಗಳನ್ನು ಹೊತ್ತುತಂದನು. ಒಬ್ಬ ಕಿವುಡ ಸಹೋದರನು ಅಡ್ಡತೊಲೆಗಳನ್ನು ಸಂಗ್ರಹಿಸಿದನು ಮತ್ತು ಅಗತ್ಯವಿದ್ದ ಕಡೆಗಳಲ್ಲಿ ಅವುಗಳನ್ನು ಸಾಗಿಸಿದನು.
ಸಹೋದರರಿಂದ ಒದಗಿಸಲಾಗುತ್ತಿರುವ ಸಹಾಯದಿಂದ ಅನೇಕ ವೀಕ್ಷಕರು ಪ್ರಭಾವಿಸಲ್ಪಟ್ಟರು. ಒಂದು ನಗರದಲ್ಲಿ ಸಹೋದರಿಯೊಬ್ಬಳ ಮನೆಯನ್ನು ರಿಪೇರಿಮಾಡುತ್ತಿರುವ ಸಂದರ್ಭದಲ್ಲಿ ಒಂದು ಪೊಲೀಸ್ ವಾಹನವು ಬಂದು ನಿಂತಿತು. ಪೊಲೀಸ್ ಅಧಿಕಾರಿಗಳು ಕುತೂಹಲಿಗಳಾದರು. ಅವರಲೊಬ್ಬನು ಸಹೋದರನಿಗೆ ಕೇಳಿದ್ದು: “ಇಷ್ಟು ಸಂತೋಷಿತರಾಗಿ ತೋರುವ ಈ ಕಾರ್ಮಿಕರು ಯಾರಾಗಿದ್ದಾರೆ ಮತ್ತು ಅವರಿಗೆಷ್ಟು ಹಣ ಕೊಡಲಾಗುತ್ತದೆ?” ಇವರೆಲ್ಲರು ಸ್ವಯಂಸೇವಕರು ಆಗಿದ್ದರೆಂದು ಸಹೋದರನು ವಿವರಿಸಿದನು. ಅವರಲೊಬ್ಬ ಅಧಿಕಾರಿಯು ತನ್ನ ಚರ್ಚಿಗೆ ಮಾಸಿಕ ದಶಮಾಂಶವನ್ನು ಕೊಡುತ್ತಿದ್ದರೂ, ಪಾದ್ರಿಯು ಭೂಕಂಪವಾದಂದಿನಿಂದ ತನ್ನನ್ನು ಭೇಟಿಯಾಗಲಿಲ್ಲವೆಂದು ವಿವರಿಸಿದನು. ಮುಂದಿನ ದಿನ ಒಬ್ಬ ಸಹೋದರಿಯು ಪೊಲೀಸ್ ಅಧಿಕಾರಿಯೊಬ್ಬನಿಂದ ದೂರವಾಣಿ ಕರೆಯೊಂದನ್ನು ಪಡೆದಳು. ಅವನು ಕೂಡ ಕಾರ್ಮಿಕರನ್ನು ಅವಲೋಕಿಸಿದ್ದನು. ಕಾರ್ಮಿಕರ ಹುರುಪಿನ ಆತ್ಮದಿಂದ ಅವನೆಷ್ಟು ಪ್ರಭಾವಿಸಲ್ಪಟ್ಟನೆಂದರೆ, ಪರಿಹಾರ ಕೆಲಸದಲ್ಲಿ ತಾನಾಗಿಯೇ ಬಂದು ಸಹಾಯಮಾಡಲು ಪ್ರೇರಿಸಲ್ಪಡುತ್ತಿದ್ದನು!
ನಿಜ, ಚಿಲಿಯ ಪರಿಹಾರ ಶ್ರಮದ ಕೆಲಸವು ಸ್ವಯಂಸೇವಕರಿಗೆ ಆನಂದಕರ ಅನುಭವವಾಗಿತ್ತು ಮಾತ್ರವಲ್ಲ, ವೀಕ್ಷಕರಿಗೆ ಅತ್ಯುತ್ತಮ ಸಾಕ್ಷಿಯನ್ನು ಒದಗಿಸುವುದರಲ್ಲಿ ಫಲಿಸಿತು.