ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w99 6/15 ಪು. 3-4
  • ವಿಧ್ವಂಸಕತ–ಏಕೆ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಿಧ್ವಂಸಕತ–ಏಕೆ?
  • ಕಾವಲಿನಬುರುಜು—1999
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ವಿಧ್ವಂಸಕತೆಯನ್ನು ಯಾರು ತಡೆಯಬಲ್ಲರು?
  • ವಿಧ್ವಂಸಕತೆಯನ್ನು—ನಿರ್ಮೂಲಗೊಳಿಸಲು ಸಾಧ್ಯವಿದೆ
    ಕಾವಲಿನಬುರುಜು—1999
  • ದ್ವೇಷಕ್ಕೆ ಗುರಿಯಾಗುವವರು ಎಲ್ಲಾ ಕಡೆ ಇದ್ದಾರೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2022
  • ಇತರ ಯೌವನಸ್ಥರು ಏಕೆ ಎಲ್ಲಾ ವಿನೋದವನ್ನು ಅನುಭವಿಸುತ್ತಾರೆ?
    ಎಚ್ಚರ!—1996
  • ದ್ವೇಷವನ್ನು ಜಯಿಸಲು ನಮ್ಮಿಂದಾಗುತ್ತೆ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2022
ಕಾವಲಿನಬುರುಜು—1999
w99 6/15 ಪು. 3-4

ವಿಧ್ವಂಸಕತ–ಏಕೆ?

“ನಾನು ಏನನ್ನೂ ಹೇಳಬಯಸುವುದಿಲ್ಲ.” ಈ ಮಾತುಗಳು ಸಾವೊ ಪೌಲೊದ ಸೊಗಸಾದ ನೆರೆಹೊರೆಯಲ್ಲಿ, ಹೊಸದಾಗಿ ಬಣ್ಣಹಚ್ಚಿದ ಗೋಡೆಯೊಂದರ ಮೇಲೆ ದೊಡ್ಡಕ್ಷರಗಳಲ್ಲಿ ಬರೆಯಲ್ಪಟ್ಟಿದ್ದವು. ಇದು ವಿಧ್ವಂಸಕತೆಯ ಒಂದು ಕೃತ್ಯವೆಂದು ನೀವು ನೆನಸಬಹುದು. ಮತ್ತು ವಿಧ್ವಂಸಕತೆಯ ಪ್ರಕಾರಗಳಲ್ಲಿ ಗೀರು ಬರಹವು ಕೇವಲ ಒಂದಾಗಿದೆ.

ಬೇಜವಾಬ್ದಾರಿಯ ವಿಧ್ವಂಸಕರು ನಿಮ್ಮ ಹೊಸ ಕಾರನ್ನು ನಾಶಪಡಿಸಿದ್ದಾರೆಂದು ಕಲ್ಪಿಸಿಕೊಳ್ಳಿರಿ. ಅಥವಾ ಅನೇಕರಿಗೆ ಪ್ರಯೋಜನಕರವಾಗಿರುವ ಸಾರ್ವಜನಿಕ ಸ್ವತ್ತನ್ನು ವಿಧ್ವಂಸಕರು ಹಾನಿಗೊಳಿಸಿರುವುದನ್ನು ಇಲ್ಲವೆ ನಾಶಪಡಿಸಿರುವುದನ್ನು ನೀವು ಗಮನಿಸಿರಬಹುದು. ಏಕೆ? ಹೌದು, ಹೀಗೇಕೆ? ವಿಧ್ವಂಸಕತೆಯ ಕೃತ್ಯಗಳು ಏಕೆ ಎಲ್ಲೆಡೆಯೂ ವ್ಯಾಪಿಸಿವೆ ಎಂಬುದರ ಕುರಿತು ನೀವು ಎಂದಾದರೂ ಯೋಚಿಸಿದ್ದೀರೊ? ಅನೇಕ ಸ್ಥಳಗಳಲ್ಲಿ, ಟೆಲಿಫೋನ್‌ ಬೂತ್‌ಗಳನ್ನು ಹಾಳುಮಾಡುವುದರಲ್ಲಿ ವಿಧ್ವಂಸಕರು ಹರ್ಷಿಸುತ್ತಾರೆಂದು ತೋರಿಬರುತ್ತದೆ. ರೈಲುಗಾಡಿ ಇಲ್ಲವೆ ಬಸ್ಸುಗಳಂತಹ ಸಾರ್ವಜನಿಕ ಸಾರಿಗೆಯ ವಾಹನಗಳು ಅನೇಕ ಬಾರಿ ಇಂತಹ ಕೃತ್ಯಗಳ ಗುರಿಹಲಗೆಗಳಾಗುತ್ತವೆ. ಹೀಗೆ, ತಾವು ಯಾವುದರ ಬಗ್ಗೆಯೂ ಚಿಂತಿಸುವುದಿಲ್ಲವೆಂದು ವಿಧ್ವಂಸಕರು ತೋರಿಸಿಕೊಳ್ಳುವುದಾದರೂ, ನಾವು ನೋಡುವ ಇಲ್ಲವೆ ಕಷ್ಟಾನುಭವಿಸುವ ಹೆಚ್ಚಿನ ವಿಧ್ವಂಸಕತೆಯ ಹಿಂದೆ ಏನಿದೆ?

ರಿಯೊ ಡಿ ಜನೆರೊದ ಯುವಕನಾದ ಮಾರ್ಕೂ,a ತನ್ನ ತಂಡವು ಕಾಲ್ಚೆಂಡಾಟದಲ್ಲಿ ಸೋತಾಗ ಎಷ್ಟು ನಿರಾಶನಾದನೆಂದರೆ, ಜಯಗಳಿಸಿದ ತಂಡದ ಅಭಿಮಾನಿಗಳಿಂದ ತುಂಬಿದ್ದ ಬಸ್ಸಿನ ಮೇಲೆ ಕಲ್ಲುಗಳನ್ನು ಎಸೆಯಲಾರಂಭಿಸಿದನು. ಅಥವಾ ಕ್ಲೌಸನನ್ನು ಪರಿಗಣಿಸಿರಿ. ಅವನು ಶಾಲೆಯಲ್ಲಿ ಒಳ್ಳೆಯ ಅಂಕಗಳನ್ನು ಪಡೆಯದಿದ್ದಾಗ ಎಷ್ಟು ಕೋಪಗೊಂಡನೆಂದರೆ, ಕಲ್ಲೆಸೆದು ಕಿಟಕಿಗಳನ್ನು ಒಡೆದುಹಾಕಿದನು. ಆದರೆ, ನಷ್ಟಭರ್ತಿ ಮಾಡಬೇಕೆಂದು ಅವನ ತಂದೆಗೆ ಹೇಳಲಾದಾಗ, ಆ “ಹುಡುಗಾಟ”ವೆಲ್ಲವೂ ಕರಗಿಹೋಯಿತು. ಮತ್ತೊಬ್ಬ ಯುವಕನಾದ ಎರ್ವಿನ್‌, ವಿದ್ಯಾಭಾಸಮಾಡುವುದರ ಜೊತೆಗೆ ಕೆಲಸವನ್ನೂ ಮಾಡುತ್ತಿದ್ದನು. ಅವನು ಮತ್ತು ಅವನ ಗುಂಪಿನವರು ಒಳ್ಳೆಯ ಯುವಕರೆಂದು ಪರಿಗಣಿಸಲ್ಪಟ್ಟರು. ಆದರೆ ಅವರ ಕಾಲಕ್ಷೇಪವು ನೆರೆಹೊರೆಯನ್ನು ಧ್ವಂಸಮಾಡುವುದಾಗಿತ್ತು. ಎರ್ವಿನ್‌ನ ಹೆತ್ತವರಿಗೆ ಇದರ ಸುಳಿವೇ ಇರಲಿಲ್ಲ. ಅನಾಥನಾಗಿದ್ದ ವಾಲ್ಟರ್‌ಗೆ ಸಾವೊ ಪೌಲೊದ ಬೀದಿಗಳಲ್ಲಿ ಜೀವಿಸುವುದರ ಹೊರತು ಬೇರೆ ಮಾರ್ಗವಿರಲಿಲ್ಲ. ಅವನ ಆಪ್ತ ಮಿತ್ರರು ವಿಧ್ವಂಸಕರ ಗುಂಪಿನವರಾಗಿದ್ದ ಕಾರಣ, ಅವರು ಮಾಡುತ್ತಿದ್ದ ಕಾರ್ಯಗಳಲ್ಲಿ ಇವನು ಭಾಗವಹಿಸಿದನಲ್ಲದೆ, ಕರಾಟೆಯನ್ನೂ ಕಲಿತುಕೊಂಡನು. ವಿಧ್ವಂಸಕತೆಯ ಹಿಂದೆ ಅನೇಕ ಮುಖಗಳಿವೆ ಎಂಬುದನ್ನು, ಮತ್ತು ಅದಕ್ಕಿರುವ ಕಾರಣಗಳು ಇಲ್ಲವೆ ಭಾವೋದ್ವೇಗಗಳು ಹಲವಾರೆಂದು ಇಂತಹ ಉದಾಹರಣೆಗಳು ತೋರಿಸುತ್ತವೆ.

“ವಿಧ್ವಂಸಕತೆಯು, ಸೇಡು ತೀರಿಸಿಕೊಳ್ಳುವ ಒಂದು ಕೃತ್ಯ ಇಲ್ಲವೆ ರಾಜಕೀಯ ಅಭಿಪ್ರಾಯವನ್ನು ವ್ಯಕ್ತಪಡಿಸುವ ಒಂದು ವಿಧಾನವಾಗಿರಬಹುದು. ಯುವ ಜನರು ಮತ್ತು ವಯಸ್ಕರು ಕೂಡ ಕೆಲವೊಮ್ಮೆ ಈ ಪಾತಕವನ್ನು ಕೇವಲ ‘ಹುಡುಗಾಟ’ಕ್ಕಾಗಿ ಮಾಡುತ್ತಾರೆ” ಎಂಬುದಾಗಿ ದ ವರ್ಲ್ಡ್‌ ಬುಕ್‌ ಎನ್‌ಸೈಕ್ಲೊಪೀಡಿಯ ಹೇಳುತ್ತದೆ. ಹಾಗಿದ್ದರೂ, ವಿಧ್ವಂಸಕತೆಯು ಕೇವಲ ಹುಡುಗಾಟವಾಗಿರದೆ, ವಿಧ್ವಂಸಕವೂ ಕೆಲವೊಮ್ಮೆ ಮಾರಕವೂ ಆಗಿರಬಲ್ಲದು. “ಒಂದಿಷ್ಟು ಹುಡುಗಾಟವನ್ನು” ಮಾಡಬಯಸಿದ ಯುವಕರ ಒಂದು ಗುಂಪು, ನಿದ್ರಿಸುತ್ತಿದ್ದ ವ್ಯಕ್ತಿಯ ಮೇಲೆ ದಹನಶೀಲ ದ್ರವ್ಯವನ್ನು ಸುರಿದು, ಬೆಂಕಿ ಹೊತ್ತಿಸಿದರು. ಬ್ರೆಸಿಲ್‌ ದೇಶದ ಮೂಲ ನಿವಾಸಿಯಾದ ಆ ವ್ಯಕ್ತಿಯು, ತದನಂತರ ಆಸ್ಪತ್ರೆಯಲ್ಲಿ ಸತ್ತುಹೋದನು. ಇದಕ್ಕೆ ಸಂಬಂಧಿಸಿದ ಒಂದು ವರದಿಗನುಸಾರ, “ಬೀದಿಗಳಲ್ಲಿರುವ ಅನೇಕ ಭಿಕ್ಷುಕರನ್ನು ಬೆಂಕಿಯಿಂದ ಸುಡಲಾಗಿದ್ದರೂ, ಯಾವ ಕಾನೂನುಬದ್ಧ ಕ್ರಮವನ್ನು ಕೈಗೊಳ್ಳದಿದ್ದ ಕಾರಣ, ಈ ವಿಷಯದಲ್ಲೂ ಯಾರೂ ಏನೂ ಮಾಡಲಾರರೆಂದು ತಾವು ನೆನಸಿದರೆಂದು ಆ ಯುವಕರು ಹೇಳಿದರು.” ವಿಧ್ವಂಸಕತೆಯಲ್ಲಿ ಆಹುತಿಗಳಿರಲಿ ಇಲ್ಲದಿರಲಿ, ಅದು ಉಂಟುಮಾಡುವ ಆರ್ಥಿಕ ಹಾಗೂ ಭಾವನಾತ್ಮಕ ನಷ್ಟವು ಎಣಿಕೆಗೆ ಮೀರಿದಂತಹ ಸಂಗತಿಯಾಗಿದೆ. ಹಾಗಾದರೆ, ವಿಧ್ವಂಸಕತೆಯನ್ನು ಯಾವುದು ನಿಯಂತ್ರಿಸಬಲ್ಲದು ಇಲ್ಲವೆ ಕೊನೆಗೊಳಿಸಬಲ್ಲದು?

ವಿಧ್ವಂಸಕತೆಯನ್ನು ಯಾರು ತಡೆಯಬಲ್ಲರು?

ವಿಧ್ವಂಸಕತೆಯನ್ನು ಶಾಲೆಗಳು ಹಾಗೂ ಪೊಲೀಸರು ತಡೆಯಬಲ್ಲರೊ? ಒಂದು ಸಮಸ್ಯೆಯೇನೆಂದರೆ, ಅಧಿಕಾರಿಗಳು “ಆಹುತಿರಹಿತ” ಅಪರಾಧಗಳಿಗಿಂತಲೂ ಅಮಲೌಷಧ ವ್ಯಾಪಾರ ಇಲ್ಲವೆ ಕೊಲೆಯಂತಹ ಹೆಚ್ಚು ಗಂಭೀರವಾದ ಪಾತಕಗಳ ವಿಷಯದಲ್ಲಿ ಕಾರ್ಯಮಗ್ನರಾಗಿರಬಹುದು. ಒಬ್ಬ ಪೊಲೀಸ್‌ ಅಧಿಕಾರಿಗನುಸಾರ, ಯುವಕನೊಬ್ಬನು ತೊಂದರೆಯಲ್ಲಿ ಸಿಕ್ಕಿಕೊಂಡು ದಸ್ತಗಿರಿಮಾಡಲ್ಪಟ್ಟಾಗ, ಹೆತ್ತವರು ಅನೇಕವೇಳೆ “ಅವನ ಸಹವಾಸಿಗಳನ್ನು ಇಲ್ಲವೆ ಶಾಲೆಯನ್ನು ಅಥವಾ ಪೊಲೀಸರನ್ನು ದೂರುತ್ತಾರೆ.” ಶಿಕ್ಷಣ ಹಾಗೂ ಶಾಸನವು ವಿಧ್ವಂಸಕತೆಯನ್ನು ಕಡಿಮೆಗೊಳಿಸಬಹುದಾದರೂ, ಹೆತ್ತವರ ಮನೋಭಾವಗಳು ಬದಲಾಗದಿದ್ದರೆ ಆಗೇನು? ಬಾಲಾಪರಾಧ ಸಂಬಂಧಿತ ಅಧಿಕಾರಿಯೊಬ್ಬಳು ಹೇಳುವುದು: “ಬೇಸರ ಹಾಗೂ ಸಂದರ್ಭಗಳು ಇದಕ್ಕೆ ಕಾರಣವಾಗಿವೆ. [ಮಕ್ಕಳು] ರಾತ್ರಿಯ ವೇಳೆ ತುಂಬ ಹೊತ್ತು ಹೊರಗಿರುತ್ತಾರೆ, ಮತ್ತು ಅವರಿಗೆ ಮಾಡಲು ಯಾವ ಕೆಲಸವೂ ಇರುವುದಿಲ್ಲ. ಬಹುಶಃ ಅವರನ್ನು ಹದ್ದುಬಸ್ತಿನಲ್ಲಿ ಇಡಲು ಅಲ್ಲಿ ಯಾರೂ ಇಲ್ಲ, ಇಲ್ಲದಿದ್ದರೆ ಅವರು ಹೊರಗಿರುತ್ತಿರಲಿಲ್ಲ.”

ಅನೇಕ ಸ್ಥಳಗಳಲ್ಲಿ ವಿಧ್ವಂಸಕತೆಯು ಒಂದು ಗಂಭೀರವಾದ ಸಮಸ್ಯೆಯಾಗಿದ್ದರೂ, ವಿಷಯಗಳು ಹೇಗೆ ಬದಲಾಗಬಲ್ಲವು ಎಂಬುದನ್ನು ಪರಿಗಣಿಸಿರಿ. ಆರಂಭದಲ್ಲಿ ಉಲ್ಲೇಖಿಸಲ್ಪಟ್ಟ ಯುವ ವಿಧ್ವಂಸಕರು ಬದಲಾದ ಕಾರಣ, ಸಮಾಜ ವಿರೋಧಿ ಕಾರ್ಯಗಳನ್ನು ಈಗ ಅವರು ಸಂಪೂರ್ಣವಾಗಿ ತ್ಯಜಿಸುತ್ತಾರೆ. ಈ ಮಾಜಿ ಬಾಲಾಪರಾಧಿಗಳು ತಮ್ಮ ಜೀವನ ಶೈಲಿಯನ್ನು ಬದಲಾಯಿಸುವಂತೆ ಯಾವುದು ಪ್ರಚೋದಿಸಿತು? ವಿಧ್ವಂಸಕತೆಯನ್ನು ಕಡಿಮೆಮಾಡುವುದು ಮಾತ್ರವಲ್ಲ, ಅದನ್ನು ಸಂಪೂರ್ಣವಾಗಿ ನಿರ್ಮೂಲಗೊಳಿಸುವುದು ನಿಮಗೆ ಆಶ್ಚರ್ಯವನ್ನು ಉಂಟುಮಾಡುತ್ತದೊ? ಮುಂದಿನ ಲೇಖನವನ್ನು ಓದುವಂತೆ ನಾವು ನಿಮ್ಮನ್ನು ಆಮಂತ್ರಿಸುತ್ತೇವೆ.

[ಅಧ್ಯಯನ ಪ್ರಶ್ನೆಗಳು]

a ಹೆಸರುಗಳು ಬದಲಾಯಿಸಲ್ಪಟ್ಟಿವೆ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ