ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w99 4/15 ಪು. 30
  • ನಿಮಗೆ ನೆನಪಿದೆಯೇ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಮಗೆ ನೆನಪಿದೆಯೇ?
  • ಕಾವಲಿನಬುರುಜು—1999
  • ಅನುರೂಪ ಮಾಹಿತಿ
  • ನಿಮ್ಮಲ್ಲಿ ಒಂದು ಅಮರ ಆತ್ಮವಿದೆಯೋ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
  • ಆ ರಕ್ಷಣೆಯ ದಿನವು ಇದೇ!
    ಕಾವಲಿನಬುರುಜು—1998
  • ಯೇಸು ರಕ್ಷಿಸುತ್ತಾನೆ—ಹೇಗೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
  • ಯೇಸುವಿನ ಮಾದರಿಯನ್ನು ಅನುಸರಿಸಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
ಇನ್ನಷ್ಟು
ಕಾವಲಿನಬುರುಜು—1999
w99 4/15 ಪು. 30

ನಿಮಗೆ ನೆನಪಿದೆಯೇ?

ಕಾವಲಿನಬುರುಜು ಪತ್ರಿಕೆಯ ಇತ್ತೀಚಿನ ಸಂಚಿಕೆಗಳನ್ನು ನೀವು ಗಣ್ಯಮಾಡಿದ್ದೀರೊ? ಹಾಗಿರುವಲ್ಲಿ, ಈ ಮುಂದಿನ ಪ್ರಶ್ನೆಗಳನ್ನು ನೀವು ಉತ್ತರಿಸಬಲ್ಲಿರೊ ಎಂದು ನೋಡಿರಿ:

◻ ‘ಕ್ರಿಸ್ತನ ಬದಲಿಗಳಾಗಿರುವ ರಾಯಭಾರಿಗಳು’ ಎಂಬ ಪೌಲನ ಅಭಿವ್ಯಕ್ತಿಯು, ಅಭಿಷಿಕ್ತ ಕ್ರೈಸ್ತರಿಗೆ ಏಕೆ ಅಷ್ಟೊಂದು ಸೂಕ್ತವಾದದ್ದಾಗಿದೆ? (2 ಕೊರಿಂಥ 5:20)

ಪುರಾತನ ಸಮಯಗಳಲ್ಲಿ, ಯುದ್ಧದ ಸಮಯದಲ್ಲಿ, ಮುಖ್ಯವಾಗಿ ಯುದ್ಧವನ್ನು ತಡೆಗಟ್ಟಲು ಸಾಧ್ಯವಿದೆಯೊ ಎಂದು ನೋಡಲಿಕ್ಕಾಗಿ ರಾಯಭಾರಿಗಳನ್ನು ಕಳುಹಿಸಲಾಗುತ್ತಿತ್ತು. (ಲೂಕ 14:31, 32) ಪಾಪಪೂರ್ಣ ಮಾನವಕುಲದ ಜಗತ್ತು ದೇವರಿಂದ ದೂರಸರಿದಿರುವುದರಿಂದ, ಸಮಾಧಾನಮಾಡುವುದಕ್ಕಾಗಿರುವ ತನ್ನ ಷರತ್ತುಗಳನ್ನು ಜನರಿಗೆ ತಿಳಿಸಲಿಕ್ಕಾಗಿ ದೇವರು ತನ್ನ ಅಭಿಷಿಕ್ತ ರಾಯಭಾರಿಗಳನ್ನು ಕಳುಹಿಸುತ್ತಿದ್ದಾನೆ.—12/15, ಪುಟ 18.

◻ ಅಬ್ರಹಾಮನ ನಂಬಿಕೆಯನ್ನು ಬಲಪಡಿಸಿದ ನಾಲ್ಕು ವಿಷಯಗಳಾವುವು?

ಪ್ರಥಮವಾಗಿ, ಯೆಹೋವನು ಮಾತಾಡಿದಾಗ, ಆತನಿಗೆ ಕಿವಿಗೊಡುವುದರ ಮೂಲಕ ಅವನು ತನ್ನ ನಂಬಿಕೆಯನ್ನು ವ್ಯಕ್ತಪಡಿಸಿದನು (ಇಬ್ರಿಯ 11:8); ಎರಡನೆಯದಾಗಿ, ಅವನ ನಂಬಿಕೆಯು ಅವನ ನಿರೀಕ್ಷೆಯೊಂದಿಗೆ ನಿಕಟವಾಗಿ ಸಂಬಂಧಿಸಲ್ಪಟ್ಟಿತ್ತು (ರೋಮಾಪುರ 4:18); ಮೂರನೆಯದಾಗಿ, ಅಬ್ರಹಾಮನು ದೇವರೊಂದಿಗೆ ಅನೇಕ ಬಾರಿ ಮಾತಾಡಿದನು; ಮತ್ತು ನಾಲ್ಕನೆಯದಾಗಿ, ಅಬ್ರಹಾಮನು ದೈವಿಕ ನಿರ್ದೇಶನಕ್ಕನುಸಾರ ನಡೆದಾಗ ಯೆಹೋವನು ಅವನನ್ನು ಬೆಂಬಲಿಸಿದನು. ಇವೇ ವಿಷಯಗಳು ಇಂದು ನಮ್ಮ ನಂಬಿಕೆಯನ್ನೂ ಬಲಪಡಿಸಬಲ್ಲವು.—1/1, ಪುಟಗಳು 17, 18.

◻ “ನಮ್ಮನ್ನು ಶೋಧನೆಯೊಳಗೆ ಸೇರಿಸಬೇಡ” ಎಂಬ ಅಭಿವ್ಯಕ್ತಿಯ ಅರ್ಥವೇನು? (ಮತ್ತಾಯ 6:13)

ನಾವು ಪ್ರಲೋಭಿಸಲ್ಪಟ್ಟಾಗ ತಪ್ಪಿಬೀಳಲು ಅನುಮತಿಸದಂತೆ ನಾವು ಆತನನ್ನು ಕೇಳಿಕೊಳ್ಳುತ್ತಿದ್ದೇವೆ. ನಾವು ಶೋಧನೆಗೆ ಬಲಿಯಾಗಿ, “ಕೆಡುಕನ” ಅಂದರೆ, ಸೈತಾನನ ಕೈಗೆ ಸಿಕ್ಕಿಬೀಳದಂತೆ ಯೆಹೋವನು ನಮ್ಮನ್ನು ಮಾರ್ಗದರ್ಶಿಸಬಲ್ಲನು. (1 ಕೊರಿಂಥ 10:13)—1/15, ಪುಟ 14.

◻ ತಪ್ಪಿಗಾಗಿ ದೇವರ ಕ್ಷಮಾಪಣೆಯನ್ನು ಪಡೆದುಕೊಳ್ಳಲು ಒಬ್ಬನು ಏನು ಮಾಡಬೇಕು?

ದೇವರಿಗೆ ಮಾಡುವ ತಪ್ಪೊಪ್ಪಿಗೆಯು, ಪಾಪಕ್ಕಾಗಿ ಪರಿತಾಪ ಮತ್ತು “ಪಶ್ಚಾತ್ತಾಪಕ್ಕೆ ತಕ್ಕ ಫಲ”ಗಳಿಂದ ಕೂಡಿದ್ದಾಗಿರಬೇಕು. (ಲೂಕ 3:8, NW) ಒಂದು ಪಶ್ಚಾತ್ತಾಪಿ ಮನೋಭಾವ ಮತ್ತು ಮಾಡಲ್ಪಟ್ಟ ತಪ್ಪನ್ನು ಸರಿಪಡಿಸಲಿಕ್ಕಾಗಿರುವ ಬಯಕೆಯು, ನಾವು ಕ್ರೈಸ್ತ ಹಿರಿಯರ ಆತ್ಮಿಕ ಸಹಾಯವನ್ನು ಪಡೆದುಕೊಳ್ಳುವಂತೆಯೂ ಪ್ರಚೋದಿಸುವುದು. (ಯಾಕೋಬ 5:13-15)—1/15, ಪುಟ 19.

◻ ನಾವು ದೀನಭಾವವುಳ್ಳವರಾಗಿರಲು ಏಕೆ ಪ್ರಯಾಸಪಡಬೇಕು?

ಒಬ್ಬ ದೀನಭಾವವುಳ್ಳ ವ್ಯಕ್ತಿಯು, ತಾಳ್ಮೆಯುಳ್ಳವನೂ ದೀರ್ಘಶಾಂತನೂ ಆಗಿರುತ್ತಾನೆ ಮತ್ತು ತನ್ನ ಬಗ್ಗೆ ತುಂಬ ಹೆಮ್ಮೆಪಟ್ಟುಕೊಳ್ಳುವುದಿಲ್ಲ. ನಿಮ್ಮನ್ನು ಪ್ರೀತಿಸುವ ನಿಜ ಸ್ನೇಹಿತರನ್ನು ದೀನಭಾವವು ಸಂಪಾದಿಸುತ್ತದೆ. ಎಲ್ಲಕ್ಕಿಂತಲೂ ಮಿಗಿಲಾಗಿ ಅದು ಯೆಹೋವನಿಂದ ಆಶೀರ್ವಾದಗಳನ್ನು ತರುತ್ತದೆ. (ಜ್ಞಾನೋಕ್ತಿ 22:4)—2/1, ಪುಟ 7.

◻ ಯೇಸುವಿನ ಮರಣಕ್ಕೂ ಆದಾಮನ ಮರಣಕ್ಕೂ ಇರುವ ನಿರ್ಣಾಯಕ ವ್ಯತ್ಯಾಸವೇನು?

ಆದಾಮನು ಉದ್ದೇಶಪೂರ್ವಕವಾಗಿಯೇ ತನ್ನ ಸೃಷ್ಟಿಕರ್ತನಿಗೆ ಅವಿಧೇಯನಾದ ಕಾರಣ, ಮರಣವನ್ನು ಅನುಭವಿಸಲು ಅವನು ಅರ್ಹನಾಗಿದ್ದನು. (ಆದಿಕಾಂಡ 2:16, 17) ಇದಕ್ಕೆ ತದ್ವಿರುದ್ಧವಾಗಿ, ಯೇಸುವು “ಯಾವ ಪಾಪವನ್ನೂ ಮಾಡ”ದಿದ್ದ ಕಾರಣ, ಅವನು ಮರಣವನ್ನು ಅನುಭವಿಸಲು ಅನರ್ಹನಾಗಿದ್ದನು. (1 ಪೇತ್ರ 2:22) ಆದಕಾರಣ, ಪಾಪಿಯಾದ ಆದಾಮನು ಮೃತಪಟ್ಟಾಗ ಅವನಲ್ಲಿರದ ಯಾವುದೊ ಮಹತ್ತರವಾದ ಬೆಲೆಯುಳ್ಳ ವಿಷಯವನ್ನು, ಅಂದರೆ ಪರಿಪೂರ್ಣ ಮಾನವ ಜೀವಿತದ ಹಕ್ಕನ್ನು ಯೇಸು ತನ್ನ ಮೃತ್ಯುವಿನಲ್ಲಿ ಕಂಡುಕೊಂಡನು. ಹೀಗೆ, ಯೇಸುವಿನ ಮರಣಕ್ಕೆ ಮಾನವಕುಲವನ್ನು ಬಿಡಿಸುವ ಯಜ್ಞಾರ್ಥಕ ಮೌಲ್ಯವಿತ್ತು.—2/15, ಪುಟಗಳು 15, 16.

◻ ಯೆಹೆಜ್ಕೇಲನ ಪ್ರವಾದನಾ ದರ್ಶನದಲ್ಲಿ, ನಗರವು ಏನನ್ನು ಚಿತ್ರಿಸಿತು?

ನಗರವು (ಅಪವಿತ್ರ) ದೇಶದ ನಡುವೆ ನೆಲೆಸಿರುವ ಕಾರಣ, ಅದು ಐಹಿಕವಾದ ಒಂದು ವಿಷಯವಾಗಿರಲೇಬೇಕು. ಅದು ನೀತಿಯುತ ಐಹಿಕ ಸಮಾಜದಲ್ಲಿ ಕೂಡಿರುವ ಎಲ್ಲರಿಗೆ ಪ್ರಯೋಜನವನ್ನು ತರುವ ಐಹಿಕ ಆಡಳಿತವನ್ನು ಚಿತ್ರಿಸುತ್ತದೆಂದು ತೋರುತ್ತದೆ.—3/1, ಪುಟ 18.

◻ ಸಾ.ಶ. 33ರಲ್ಲಿ ಪಸ್ಕವನ್ನು ಆಚರಿಸುತ್ತಿರುವಾಗ, ಯೇಸು ತನ್ನ ಶಿಷ್ಯರ ಕಾಲುಗಳನ್ನು ಏಕೆ ತೊಳೆದನು?

ಯೇಸು ಕಾಲುಗಳನ್ನು ತೊಳೆದುಕೊಳ್ಳುವ ಒಂದು ಸಂಸ್ಕಾರವನ್ನು ಆರಂಭಿಸುತ್ತಿರಲಿಲ್ಲ. ಬದಲಿಗೆ ತನ್ನ ಅಪೊಸ್ತಲರು ಹೊಸ ಮನೋಭಾವವನ್ನು, ಅಂದರೆ ದೀನತೆಯನ್ನು ಹಾಗೂ ತಮ್ಮ ಸಹೋದರರಿಗಾಗಿ ಅತ್ಯಂತ ದೀನವಾದ ಕೆಲಸವನ್ನು ಮಾಡುವ ಇಚ್ಛೆಯನ್ನು ಬೆಳೆಸಿಕೊಳ್ಳುವಂತೆ ಅವನು ಸಹಾಯ ಮಾಡುತ್ತಿದ್ದನು.—3/1, ಪುಟ 30.

◻ ಇತರರಿಗೆ ಕಲಿಸುವಾಗ, ಸ್ವಾಭಾವಿಕ ಸಾಮರ್ಥ್ಯಗಳಿಗಿಂತಲೂ ಯಾವುವು ಹೆಚ್ಚು ಪ್ರಾಮುಖ್ಯವಾಗಿವೆ?

ವಿದ್ಯಾರ್ಥಿಗಳು ಅನುಕರಿಸಬಹುದಾದ ಯಾವ ಗುಣಗಳು ಮತ್ತು ಯಾವ ಆತ್ಮಿಕ ರೂಢಿಗಳನ್ನು ನಾವು ಬೆಳೆಸಿಕೊಂಡಿದ್ದೇವೊ ಅವು ವಿಶೇಷವಾಗಿ ಪ್ರಾಮುಖ್ಯವಾಗಿವೆ. (ಲೂಕ 6:40; 2 ಪೇತ್ರ 3:11)—3/15, ಪುಟಗಳು 11, 12.

◻ ಸಾರ್ವಜನಿಕ ಭಾಷಣಕರ್ತರು ಶಾಸ್ತ್ರವಚನಗಳ ಓದುವಿಕೆಯಲ್ಲಿ ಹೇಗೆ ಉತ್ತಮಗೊಳ್ಳಬಲ್ಲರು?

ಪ್ರ್ಯಾಕ್ಟೀಸ್‌ ಮಾಡುವ ಮೂಲಕವೇ. ಹೌದು, ಅವರು ಸರಾಗವಾಗಿ ಓದಲು ಶಕ್ತರಾಗುವ ತನಕ ಗಟ್ಟಿಯಾಗಿ ಪುನಃ ಪುನಃ ಓದುವ ಮೂಲಕವೇ. ಬೈಬಲಿನ ಆಡಿಯೊಕ್ಯಾಸೆಟ್ಟುಗಳು ಲಭ್ಯವಿರುವಲ್ಲಿ, ಓದುಗನು ಓದುತ್ತಿರುವಾಗ ಕೊಡುವ ಅರ್ಥ ಒತ್ತು ಮತ್ತು ಸ್ವರ ಬದಲಾವಣೆಗೆ ಕಿವಿಗೊಡುವುದು, ಮತ್ತು ಹೆಸರುಗಳು ಹಾಗೂ ಅಸಾಮಾನ್ಯವಾದ ಪದಗಳನ್ನು ಉಚ್ಚರಿಸುವ ರೀತಿಗೆ ಗಮನಕೊಡುವುದು ವಿವೇಕಯುತವಾಗಿದೆ.—3/15, ಪುಟ 20.

◻ ವ್ಯಕ್ತಿಯೊಬ್ಬನು ಸಾಯುವಾಗ, “ಆತ್ಮವು . . . ದೇವರ ಬಳಿಗೆ ಸೇರುವದು” ಹೇಗೆ? (ಪ್ರಸಂಗಿ 12:7)

ಆತ್ಮವು ಜೀವಶ್ವಾಸವಾಗಿರುವುದರಿಂದ, ಅದು “ದೇವರ ಬಳಿಗೆ ಸೇರು”ತ್ತದೆ ಎನ್ನುವುದು, ಆ ವ್ಯಕ್ತಿಯ ಭಾವೀ ಜೀವಿತದ ಯಾವುದೇ ನಿರೀಕ್ಷೆಯು ಈಗ ಸಂಪೂರ್ಣವಾಗಿ ದೇವರ ಕೈಗಳಲ್ಲಿದೆ ಎಂಬುದನ್ನು ಅರ್ಥೈಸುತ್ತದೆ. ದೇವರು ಮಾತ್ರ ಆ ಆತ್ಮ ಇಲ್ಲವೆ ಜೀವಶ್ವಾಸವನ್ನು ಪುನಃ ನೀಡಿ, ಆ ವ್ಯಕ್ತಿಯು ಪುನಃ ಜೀವಿಸುವಂತೆ ಮಾಡಶಕ್ತನಾಗಿದ್ದಾನೆ. (ಕೀರ್ತನೆ 104:30)—4/1, ಪುಟ 17.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ