ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w96 1/15 ಪು. 31
  • ವಾಚಕರಿಂದ ಪ್ರಶ್ನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾಚಕರಿಂದ ಪ್ರಶ್ನೆಗಳು
  • ಕಾವಲಿನಬುರುಜು—1996
  • ಅನುರೂಪ ಮಾಹಿತಿ
  • ಕುಟುಂಬ ಸಂತೋಷದ ರಹಸ್ಯವೊಂದಿದೆಯೆ?
    ಕುಟುಂಬ ಸಂತೋಷದ ರಹಸ್ಯ
  • ಕುಟುಂಬ ಜೀವನವನ್ನು ಆನಂದಿಸಿರಿ
    ಕುಟುಂಬ ಜೀವನವನ್ನು ಆನಂದಿಸಿರಿ
  • ಕುಟುಂಬ—ಒಂದು ಮಾನವ ಆವಶ್ಯಕತೆ!
    ಕಾವಲಿನಬುರುಜು—1998
  • ಯೆಹೋವನ ಕುಟುಂಬದವರಾಗೋ ಅವಕಾಶವನ್ನು ಬಿಟ್ಟುಕೊಡಬೇಡಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
ಇನ್ನಷ್ಟು
ಕಾವಲಿನಬುರುಜು—1996
w96 1/15 ಪು. 31

ವಾಚಕರಿಂದ ಪ್ರಶ್ನೆಗಳು

“ಭೂಪರಲೋಕಗಳಲ್ಲಿರುವ ಪ್ರತಿ ಕುಟುಂಬವು ದೇವರಿಂದ ಹೆಸರು ತೆಗೆದುಕೊಳ್ಳುತ್ತದೆ” ಎಂದು ಎಫೆಸ 3:14, 15 (NW) ಹೇಳುತ್ತದೆ. ಪರಲೋಕದಲ್ಲಿ ಕುಟುಂಬಗಳಿವೆಯೋ, ಮತ್ತು ಪ್ರತಿಯೊಂದು ಮಾನವ ಕುಟುಂಬವು ಹೇಗೋ ತನ್ನ ಹೆಸರನ್ನು ಯೆಹೋವನಿಂದ ಪಡೆಯುತ್ತದೋ?

ಭೂಮಿಯಲ್ಲಿ—ಒಬ್ಬ ತಂದೆ, ತಾಯಿ, ಮತ್ತು ಮಕ್ಕಳು—ಮಾಂಸಿಕ ರೀತಿಯಲ್ಲಿ ಒಬ್ಬರಿಗೊಬ್ಬರು ಸಂಬಂಧಿತರಾಗಿರುವ ಕುಟುಂಬಗಳಿರುವಂತೆ ಪರಲೋಕದಲ್ಲಿ ಯಾವ ಕುಟುಂಬಗಳೂ ಇರುವುದಿಲ್ಲ. (ಲೂಕ 24:39; 1 ಕೊರಿಂಥ 15:50) ದೇವದೂತರು ಮದುವೆಯಾಗುವುದಿಲ್ಲ ಎಂದು ಯೇಸು ಸ್ಪಷ್ಟವಾಗಿ ಸೂಚಿಸಿದನು, ಮತ್ತು ಅವರು ಯಾವ ರೀತಿಯಲ್ಲಾದರೂ ಸಂತಾನ ಉತ್ಪತ್ತಿ ಮಾಡುತ್ತಾರೆಂದು ಯಾವುದೂ ತಿಳಿಸುವುದಿಲ್ಲ.—ಮತ್ತಾಯ 22:30.

ಆದರೂ, ಒಂದು ಸಾಂಕೇತಿಕ ರೂಪದಲ್ಲಿ ಯೆಹೋವ ದೇವರು ತನ್ನ ಸ್ವರ್ಗೀಯ ಸಂಸ್ಥೆಗೆ ವಿವಾಹಿತನೆಂದು ಬೈಬಲು ಹೇಳುತ್ತದೆ; ಅವನು ಮದುವೆಯಾಗಿರುವುದು ಒಂದು ಆತ್ಮಿಕ ಅರ್ಥದಲ್ಲಿ. (ಯೆಶಾಯ 54:5) ಆ ಸ್ವರ್ಗೀಯ ಸಂಸ್ಥೆಯು ದೇವದೂತರುಗಳಂಥ ಸಂತಾನವನ್ನು ಉತ್ಪಾದಿಸುತ್ತದೆ. (ಯೋಬ 1:6; 2:1; 38:4-7) ಹಾಗಾದರೆ ಈ ಅರ್ಥದಲ್ಲಿ, ಒಂದು ಆಶ್ಚರ್ಯಕರವಾದ ಆತ್ಮಿಕ ಕುಟುಂಬವು ಪರಲೋಕದಲ್ಲಿ ಅಸ್ತಿತ್ವದಲ್ಲಿದೆ.

ಅದಲ್ಲದೆ, ಯೇಸು ಕ್ರಿಸ್ತನೂ ಅವನ ಸಭಾ ಸಂಬಂಧಿತ ವಧುವಾದ 1,44,000 ಮಂದಿಯು ಕೂಡಿರುವ ಒಂದು ಹೊಸತಾದ ಸಾಂಕೇತಿಕ ಕುಟುಂಬವೂ ಪರಲೋಕದಲ್ಲಿ ವಿಕಸಿತಗೊಳ್ಳುತ್ತಿದೆ. (2 ಕೊರಿಂಥ 11:2) ಈ ಅಭಿಷಿಕ್ತರಲ್ಲಿ ಹೆಚ್ಚಿನವರು ಸ್ವರ್ಗೀಯ ಜೀವನದ ವೀಕ್ಷಣೆಯೊಂದಿಗೆ ಈಗಾಗಲೇ ಸತ್ತಿದ್ದಾರೆ. ಕೆಲವರು ಇನ್ನೂ ಭೂಮಿಯಲ್ಲಿ ಜೀವಿತರಾಗಿದ್ದಾರೆ. ಸ್ವರ್ಗೀಯ “ಕುರಿಮರಿಯ ವಿವಾಹಕ್ಕೆ” ಇವರೆಲ್ಲರು ಆತುರದಿಂದ ಎದುರು ನೋಡುತ್ತಾರೆ. ಆ ವಿವಾಹವನ್ನು ಬೈಬಲು ಬರುತ್ತಿರುವ ಮಹಾ ಸಂಕಟದ ಸಮಯಕ್ಕೆ—ಮಹಾ ಬಾಬೆಲಿನ ನಾಶನಕ್ಕೆ, ಮತ್ತು ಅನಂತರ ಸೈತಾನನ ವ್ಯವಸ್ಥೆಯ ಉಳಿದ ಭಾಗದ ಅಂತ್ಯಕ್ಕೆ—ಜೋಡಿಸುತ್ತದೆ.—ಪ್ರಕಟನೆ 18:2-5; 19:2, 7, 11-21; ಮತ್ತಾಯ 24:21.

ಐಹಿಕ ಕುಟುಂಬಗಳ ವಿಷಯದಲ್ಲಾದರೋ, ಎಫೆಸ 3:14, 15ರಲ್ಲಿ ಅಪೊಸ್ತಲ ಪೌಲನು, ಪ್ರತಿಯೊಂದು ವೈಯಕ್ತಿಕ ಕುಟುಂಬ ಗುಂಪು ತನ್ನ ಹೆಸರನ್ನು ನೇರವಾಗಿ ಯೆಹೋವನಿಂದ ಪಡೆಯುತ್ತದೆಂದು ಸೂಚಿಸುವುದಿಲ್ಲ. ಬದಲಿಗೆ, ಒಂದು ಹೆಸರನ್ನು ಉಳಿಸಿಕೊಳ್ಳುವ ವಿಸ್ತೃತ ಕುಟುಂಬ ವಂಶಾವಳಿಯನ್ನು ಪೌಲನು ಅಭಿಪ್ರಯಿಸಿದ್ದನೆಂಬುದು ವ್ಯಕ್ತ. ಯೆಹೋಶುವ 7:16-19 ಒಂದು ದೃಷ್ಟಾಂತವನ್ನು ಒದಗಿಸುತ್ತದೆ. ಅಲ್ಲಿ ಯೆಹೋವನು ಆಕಾನನ ಪಾಪವನ್ನು ಅನಾವರಣೆ ಮಾಡುತ್ತಿದ್ದನು. ಮೊದಲು ದೋಷವು ಯೆಹೂದ ಕುಲದ ಮೇಲೆ ಕೇಂದ್ರಿತವಾಗಿತ್ತು ಅಥವಾ ಸೀಮಿತವಾಗಿತ್ತು. ಅನಂತರ ಅದು ಸಂಕುಚಿತವಾಗಿ ಜೆರಹನ ಕುಟುಂಬಕ್ಕೆ ಬಂತು. ಕೊನೆಗೆ, ಆಕಾನನ ಕುಟುಂಬವು ಬಯಲಾಯಿತು. ಆಕಾನನು ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ಅವನ ಅಜ್ಜನಾದ ಜಬ್ದೀಯ ಗೋತ್ರ (ಕುಟುಂಬ)ದವರಾಗಿ ನೋಡಲ್ಪಟ್ಟರು ಅಥವಾ ಹೇಳಲ್ಪಟ್ಟರು. ಆ ಕುಟುಂಬವು ಸರದಿಯಲ್ಲಿ ಅವರ ಪೂರ್ವಜನಾದ ಜೆರಹನ ಹೆಸರನ್ನು ಉಳಿಸಿದ ವಿಸ್ತೃತ ಗುಂಪಾಗಿತ್ತು.

ಹೀಬ್ರು ಜನರೊಳಗೆ ಅಂತಹ ಕುಟುಂಬ ಮನೆತನಗಳು ಬಹು ಪ್ರಾಮುಖ್ಯವಾಗಿದ್ದವು, ಅವುಗಳಲ್ಲಿ ಅನೇಕ ಬೈಬಲಿನಲ್ಲಿ ಪಟ್ಟಿಮಾಡಲ್ಪಟ್ಟಿವೆ. ಎಲ್ಲಿ ಅಗತ್ಯವೋ ಅಲ್ಲಿ, ಬಾಧ್ಯಸ್ಥರು ಕುಟುಂಬದ ಹೆಸರನ್ನು ಮೈದುನಧರ್ಮ ಅಥವಾ ಮೈದುನ ವಿವಾಹದ ಮೂಲಕ ದಾಟಿಸುವ ಒದಗಿಸುವಿಕೆಯ ಮೂಲಕ, ದೇವರು ಅವುಗಳ ಕಾಪಾಡುವಿಕೆಯನ್ನು ಬೆಂಬಲಿಸಿದನು.—ಆದಿಕಾಂಡ 38:8, 9; ಧರ್ಮೋಪದೇಶಕಾಂಡ 25:5, 6.

ಅಂತಹ ದೊಡ್ಡದಾದ ಅಥವಾ ವಿಸ್ತೃತ ಕುಟುಂಬಗಳ ಇನ್ನೊಂದು ದೃಷ್ಟಾಂತಕ್ಕಾಗಿ ದಾವೀದನ ಪುತ್ರನೋಪಾದಿ ಯೇಸುವನ್ನು ಪರಿಗಣಿಸಿರಿ. ಆತನು ರಾಜ ದಾವೀದನ ನೇರವಾದ ಸಂತಾನವಲ್ಲವೆಂಬುದು ವ್ಯಕ್ತ; ದಾವೀದನ ಮರಣದ ಶತಮಾನಗಳ ಅನಂತರ ಅವನು ಜನಿಸಿದನು. ಆದರೂ, ಯೆಹೂದ್ಯರು ಸಾಮಾನ್ಯವಾಗಿ ತಿಳಿದಿದ್ದ ಪ್ರಕಾರ, ಮೆಸ್ಸೀಯನನ್ನು ಗುರುತಿಸುವ ಒಂದು ಚಿಹ್ನೆಯು, ಅವನು ದಾವೀದನ ಮನೆತನದವನಾಗಿರಲಿದ್ದನು ಎಂಬುದು. (ಮತ್ತಾಯ 22:42) ತನ್ನ ತಾಯಿ ಮತ್ತು ದತ್ತು ತಂದೆ ಈ ಇಬ್ಬರ ಮೂಲಕವಾಗಿಯೂ ಅವನು ದಾವೀದನ ವಂಶಜನಾಗಿದ್ದನು.—ಮತ್ತಾಯ 1:1; ಲೂಕ 2:4.

ಆದರೆ ಅಂತಹ ಕುಟುಂಬಗಳು ಯೆಹೋವನಿಂದ ತಮ್ಮ ಹೆಸರುಗಳನ್ನು ಪಡೆದುಕೊಳ್ಳುವುದು ಹೇಗೆ? ನಿಜ ಸಂಗತಿಯೇನಂದರೆ—ಅಬ್ರಹಾಮ ಮತ್ತು ಇಸಾಕರಂತಹ ಸಂದರ್ಭಗಳಲ್ಲಿ—ಯೆಹೋವನು ಕುಟುಂಬ ತಲೆಗೆ ಅಕ್ಷರಶಃ ಹೆಸರಿಟ್ಟ ಕೆಲವು ಸನ್ನಿವೇಶಗಳಿದ್ದವು. (ಆದಿಕಾಂಡ 17:5, 19) ಅವು ಅಪವಾದಗಳಾಗಿದ್ದವು. ಆದರೆ ಅತ್ಯಧಿಕವಾಗಿ ಪ್ರತಿಯೊಂದು ವೈಯಕ್ತಿಕ ಕುಟುಂಬಕ್ಕೆ ಅದು ತನ್ನ ಮಕ್ಕಳಿಗೆ ದಾಟಿಸುವ ಹೆಸರನ್ನು ಯೆಹೋವನು ಕೊಡುವುದಿಲ್ಲ.

ಆದರೂ, “ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ,” ಎಂದು ಯೆಹೋವನು ಆದಾಮ ಹವ್ವರಿಗೆ ಅಪ್ಪಣೆಕೊಟ್ಟಾಗ ಅವನು ಮೊದಲನೆಯ ಮಾನವ ಕುಟುಂಬ ಏಕಾಂಶವನ್ನು ಆರಂಭಿಸಿದನೆಂಬುದು ನಿಶ್ಚಯ. (ಆದಿಕಾಂಡ 1:28) ಮತ್ತು ಅಪರಿಪೂರ್ಣ ಆದಾಮ ಮತ್ತು ಹವ್ವರು ಸಂತಾನವನ್ನು ಹುಟ್ಟಿಸಲು, ಹೀಗೆ ಮಾನವ ಕುಟುಂಬಗಳಿಗೆಲ್ಲ ತಳಪಾಯವನ್ನು ಹಾಕಲು ಅವನು ಅನುಮತಿ ಕೊಟ್ಟನು. (ಆದಿಕಾಂಡ 5:3) ಹೀಗೆ ಒಂದಕ್ಕಿಂತ ಹೆಚ್ಚು ಅರ್ಥದಲ್ಲಿ ದೇವರನ್ನು ಕುಟುಂಬ ಹೆಸರುಗಳ ಆರಂಭ ಕರ್ತನಾಗಿ ಕರೆಯಸಾಧ್ಯವಿದೆ.

ಇಂದು ಅನೇಕ ಸಂಸ್ಕೃತಿಗಳು ಕುಟುಂಬ ಹೆಸರುಗಳನ್ನು ತಮ್ಮ ತಲೆಮಾರುಗಳಿಗಾಗಿ ಉಳಿಸುವ ಅಗತ್ಯವನ್ನು ಕಾಣುವುದಿಲ್ಲ. ಆದರೂ, ಸಕಲ ದೇಶಗಳಲ್ಲಿನ ಕ್ರೈಸ್ತರು ಕುಟುಂಬದ ಏರ್ಪಾಡಿಗಾಗಿ ಯೆಹೋವನಿಗೆ ಉಪಕಾರ ಹೇಳುತ್ತಾರೆ ಮತ್ತು ತಮ್ಮ ವ್ಯಕ್ತಿಪರ ಕುಟುಂಬ ಏಕಾಂಶವನ್ನು ಯಶಸ್ವಿಯಾಗಿ ಮಾಡಲು ಕಷ್ಟಪಟ್ಟು ಕೆಲಸಮಾಡುವ ಮೂಲಕ ಆತನನ್ನು ಗೌರವಿಸುತ್ತಾರೆ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ