ಒಬ್ಬ ಮುಖ್ಯಸ್ಥನು ತನ್ನ ಭವಿಷ್ಯವನ್ನು ಪರ್ಯಾಲೋಚಿಸುತ್ತಾನೆ
ಪಶ್ಚಿಮ ಆಫ್ರಿಕದ ಮುಖ್ಯಸ್ಥನು ತನ್ನ ಸಮುದಾಯದಲ್ಲಿ ಅತಿಯಾಗಿ ಪ್ರೀತಿಸಲ್ಪಟ್ಟಿದ್ದ ಮತ್ತು ಉಚ್ಚವಾಗಿ ಗೌರವಿಸಲ್ಪಟ್ಟಿದ್ದ ಒಬ್ಬ ಮುಖಂಡನಾಗಿದ್ದನು. ಆತನ 78 ನೆಯ ಜನ್ಮದಿನದಂದು, ಆತನ ಸ್ನೇಹಿತರು, ಕುಟುಂಬ ಮತ್ತು ಇತರ ಹಿತಚಿಂತಕರು ಆತನನ್ನು ಅಭಿನಂದಿಸಲು ಒಟ್ಟುಗೂಡಿದರು. ಅಂತಹ ಒಂದು ಸಂದರ್ಭಕ್ಕಾಗಿ ಮುಖ್ಯಸ್ಥನು ಭಾಷಣವೊಂದರಲ್ಲಿ ಅಸಾಮಾನ್ಯವಾದೊಂದು ವಿಷಯವನ್ನು ಆರಿಸಿದನು. ಮರಣದ ನಂತರದ ಜೀವಿತದ ಕುರಿತಾದ ತನ್ನ ಅಭಿಪ್ರಾಯಗಳ ವಿಷಯದಲ್ಲಿ ಅವನು ಮಾತಾಡಿದನು.
ಸಮಾಧಿಯ ಆಚೆ “ವಂಚನೆ, ಈರ್ಷ್ಯೆ ಮತ್ತು ಲೋಭರಹಿತವಾದೊಂದು ಹೊಸ ಲೋಕವಿದೆ” ಎಂದು ಅವನು ಹೇಳಿದನು. ದೇವರೊಂದಿಗೆ ಪರಸ್ಪರವಾಗಿ ಕಾರ್ಯವೆಸಗಲಿರುವ ನೀತಿವಂತರಿಂದಲೇ ವಾಸಿಸಲ್ಪಡುವ “ರಹಸ್ಯದಲ್ಲಿ ಮರೆಮಾಡಲ್ಪಟ್ಟ” ಒಂದು ಲೋಕವಾಗಿ ಅವನದನ್ನು ವರ್ಣಿಸಿದನು.
ಆಫ್ರಿಕದಾದ್ಯಂತ ಜನರ ಮಧ್ಯೆ ಇಂತಹ ನಂಬಿಕೆಗಳು ಸಾಮಾನ್ಯವಾಗಿವೆ. ಆಫ್ರಿಕದ ಸಾಂಪ್ರದಾಯಿಕ ಧರ್ಮಕ್ಕನುಸಾರ, ಮರಣವು ಜೀವಿತದ ಅಂತ್ಯವಲ್ಲ, ಬದಲಾಗಿ ಕೇವಲ ಒಂದು ಪರಿವರ್ತನೆ, ಆತ್ಮಗಳ ಕ್ಷೇತ್ರದೊಳಗಿನ ಜೀವಿತಕ್ಕೆ ಒಂದು ದಾಟಿಸುವಿಕೆಯಾಗಿದೆ. ಮರಣದಲ್ಲಿ ಒಬ್ಬ ವ್ಯಕ್ತಿಯು ದೃಶ್ಯ ಲೋಕದಿಂದ ಅದೃಶ್ಯ ಲೋಕಕ್ಕೆ ದಾಟುತ್ತಾನೆಂದು ಹೇಳಲಾಗುತ್ತದೆ. ಒಂದು ಆತ್ಮದೋಪಾದಿ, ಆ ವ್ಯಕ್ತಿಯು ಆಗ ಅವನ ಅಥವಾ ಅವಳ ಪೂರ್ವಜರಿಂದ ನಿವಾಸಿಸಲ್ಪಡುವ ಒಂದು ಸಾಮ್ರಾಜ್ಯವನ್ನು ಪ್ರವೇಶಿಸುತ್ತಾನೆ.
ಪೂರ್ವಜರು ಅಥವಾ ಪೂರ್ವಜರ ಆತ್ಮಗಳು, ಭೂಮಿಯ ಮೇಲಿರುವ ತಮ್ಮ ಕುಟುಂಬಗಳ ಹಿತವನ್ನು ಭದ್ರಪಡಿಸುತ್ತವೆಂದು ಅನೇಕ ಪಶ್ಚಿಮ ಆಫ್ರಿಕನರು ನಂಬುತ್ತಾರೆ. ವೆಸ್ಟ್ ಆಫ್ರಿಕನ್ ಟ್ರಡಿಷನಲ್ ರಿಲಿಜನ್ ಪುಸ್ತಕವು ತಿಳಿಸುವುದು: “ಇನ್ನೂ ಭೂಮಿಯ ಮೇಲಿರುವ ಸಮಾಜದ ಸದಸ್ಯರ ಮತ್ತು ಅತೀತ ಲೋಕದಲ್ಲಿರುವವರ ನಡುವೆ ಯಾವ ಬಿರುಸಾದ ವ್ಯತ್ಯಾಸವಿಲ್ಲ. ಇಲ್ಲಿ ಭೂಮಿಯ ಮೇಲಿರುವಾಗ, [ಪೂರ್ವಜರು] ತಮ್ಮ ಕುಟುಂಬಗಳ ಹಿರಿಯರಾಗಿದ್ದರು. ಈಗ ಅವರು ನಮಗೆ ಅದೃಶ್ಯರಾಗಿದ್ದರೂ, ಅವರು ಇನ್ನೂ ಆತ್ಮಗಳ ಲೋಕದಲ್ಲಿ ಹಿರಿಯರಾಗಿದ್ದಾರೆ. ತಮ್ಮ ಕುಟುಂಬಗಳ ಸಾಮಾನ್ಯ ಹಿತದ ಕುರಿತಾಗಿ ಸ್ವತಃ ಆಸಕ್ತಿ ವಹಿಸುವುದನ್ನು ಅವರು ನಿಲ್ಲಿಸುವುದಿಲ್ಲ.”
ಫಲಸ್ವರೂಪವಾಗಿ, ಆರಂಭದಲ್ಲಿ ತಿಳಿಸಲ್ಪಟ್ಟ ಪ್ರಾಯಸ್ಥ ಮುಖ್ಯಸ್ಥನು ತನ್ನ ಪೂರ್ವಜರನ್ನು ಸೇರಿ ಅವರೊಂದಿಗೆ ಆತ್ಮಗಳ ಕ್ಷೇತ್ರದಲ್ಲಿ ಕೆಲಸ ಮಾಡಲು ನಿರೀಕ್ಷಿಸಿದನು. ಅವನಂದದ್ದು: “ಮರಣದ ನಂತರದ ಜೀವಿತದಲ್ಲಿ ಮತ್ತು ಮರಣದ ನಂತರವೂ ಒಬ್ಬ ಹಿರಿಯನಾಗಿ ಸೇವಿಸುವ ಸಾಧ್ಯತೆಯಲ್ಲಿ ನನಗೆ ಬಲವಾದ ಮನವರಿಕೆಯಿದೆ.”
ಆದಾಗಲೂ, ಮುಖ್ಯಸ್ಥನು ಮುಂದೆ ಹೇಳಿದ ವಿಷಯದಿಂದಾಗಿ, ಅವನು ಸಮಾಧಿಯ ಆಚೆಗಿನ ಜೀವನದ ಕುರಿತು “ಸಂಪೂರ್ಣವಾಗಿ ಮನವರಿಕೆಯಾದವನಂತೆ ತೋರಲಿಲ್ಲ” ಎಂದು ಸಂಡೇ ಟೈಮ್ಸ್ ವಾರ್ತಾಪತ್ರವು ಸೂಚಿಸಿತು. ಮರಣದ ನಂತರದ ಜೀವಿತವನ್ನು ಚರ್ಚಿಸಿದಂತಹ ಒಂದು ಪುಸ್ತಕದ ಕುರಿತಾಗಿ ತಾನು ಕೇಳಿದ್ದೇನೆಂದು ಆತನು ಒಟ್ಟುಗೂಡಿದ ಜನರ ಗುಂಪಿಗೆ ಹೇಳಿದನು. ಮುಖ್ಯಸ್ಥನು ಆ ಪುಸ್ತಕಕ್ಕಾಗಿ ಐದು ವರ್ಷಗಳಿಂದ ಹುಡುಕುತ್ತಿದ್ದನು. ಅದನ್ನು ಓದಲು ಅವನು ಎಷ್ಟು ಆತುರನಾಗಿದ್ದನೆಂದರೆ, ಅವನಿಗಾಗಿ ಒಂದು ಪ್ರತಿಯನ್ನು ತರಬಹುದಾದ ಯಾರಿಗೂ ಅವನು 1,500 (ಅಮೆರಿಕನ್) ಡಾಲರುಗಳಿಗೆ ಸರಿಸಮಾನವಾದ ಮೊತ್ತವನ್ನು ಕೊಡಲು ತಯಾರಿದ್ದನು.
ಕಂಡುಕೊಳ್ಳಲು ಕಷ್ಟಕರವಾಗಿರದ ಒಂದು ಪುಸ್ತಕವನ್ನು ವಿಚಾರಿಸುವ ಮೂಲಕ ಮುಖ್ಯಸ್ಥನು ಹುಡುಕುವ ಅನನುಕೂಲತೆಯನ್ನು ತೊಲಗಿಸಬಹುದಿತ್ತು. ಮನುಷ್ಯರಿಂದಲ್ಲ ಬದಲಾಗಿ ಎಲ್ಲಾ ಮನುಷ್ಯರ ಸೃಷ್ಟಿಕರ್ತನಿಂದ ಉತ್ಪಾದಿಸಲ್ಪಟ್ಟ ಸಿದ್ಧವಾಗಿ ದೊರೆಯುವ ಒಂದು ಪುಸ್ತಕ ಅದಾಗಿದೆ. (1 ಥೆಸಲೋನಿಕ 2:13) ಆ ಪುಸ್ತಕವು ಬೈಬಲಾಗಿದೆ. ಮರಣದ ನಂತರದ ಜೀವಿತದ ಕುರಿತಾಗಿ ಅದು ಏನನ್ನು ಹೇಳುತ್ತದೆ?